Monday, July 15, 2024
Homeರಾಜ್ಯಕಾವೇರಿ ವೆಬ್‍ಸೈಟ್‍ನಿಂದ ದಾಖಲೆ ಕದ್ದು ಬ್ಯಾಂಕ್ ಖಾತೆಗಳಿಂದ ಹಣ ಲೂಟಿ

ಕಾವೇರಿ ವೆಬ್‍ಸೈಟ್‍ನಿಂದ ದಾಖಲೆ ಕದ್ದು ಬ್ಯಾಂಕ್ ಖಾತೆಗಳಿಂದ ಹಣ ಲೂಟಿ

ಬೆಂಗಳೂರು,ಅ.31-ಕರ್ನಾಟಕ ಸರ್ಕಾರದ ನೊಂದಣಿ ಮತ್ತು ಮುಂದ್ರಾಂಕ ಇಲಾಖೆಯ ಅಧಿಕೃತ ಕಾವೇರಿ ವೆಬ್‍ಸೈಟ್ ಮುಖಾಂತರ ದಾಖಲೆ ಕದ್ದು ಎ.ಇ.ಪಿ.ಎಸ್ ಸಾಧನವನ್ನು ಬಳಸಿ ಸಾರ್ವಜನಿಕರ ಗಮನಕ್ಕೆ ಬಾರದಂತೆ ಅವರ ಬ್ಯಾಂಕ್ ಖಾತೆಗಳಿಂದ ಹಣ ಲಪಟಾಯಿಸುತ್ತಿದ್ದ ಇಬ್ಬರನ್ನು ಯಲಹಂಕ ಸೆನ್ ಠಾಣೆ ಪೊಲೀಸರು ಬಂಧಿಸಿ 1.5ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ ಎರಡು ಲ್ಯಾಪ್‍ಟ್ಯಾಪ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಿಹಾರ ಮೂಲದ ದೀಪಕ್ ಕುಮಾರ್ (33) ಮತ್ತು ನಿವೇದಿತ್ ಕುಮಾರ್ (26) ಬಂಧಿತ ಆರೋಪಿಗಳು
ಪಿರ್ಯಾದುದಾರರ ಬ್ಯಾಂಕ್ ಖಾತೆಗಳಿಂದ ಅವರ ಗಮನಕ್ಕೆ ಬಾರದೇ, ಹಂತ ಹಂತವಾಗಿ ಒಟ್ಟು 38ಸಾವಿರ ಮತ್ತು 10 ಸಾವಿರ ಕಡಿತವಾಗಿದ್ದರ ಬಗ್ಗೆ ಅವರಿಗೆ ಯಾವುದೇ ಬ್ಯಾಂಕ್ ಮಾಹಿತಿಯಾಗಲಿ, ಓಟಿಪಿಯಾಗಲಿ, ಯಾರೊಂದಿಗೂ ಶೇರ್ ಮಾಡಿಕೊಂಡಿರುವುದಿಲ್ಲ.

ಯಾವುದೇ ಅಪರಿಚಿತ ಲಿಂಕ್ ಕ್ಲಿಕ್ ಮಾಡದೇ ಇದ್ದರೂ ಕೂಡ ಖಾತೆಗಳಿಂದ ಹಣ ವರ್ಗಾವಣೆಯಾಗಿರುವುದರ ಬಗ್ಗೆ ಯಲಹಂಕ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಎರಡು ವಂಚನೆ ಪ್ರಕರಣಗಳು ದಾಖಲಾಗಿತ್ತು.

ಎಮರ್ಜೆನ್ಸಿ ವಾರ್ಡ್‍ನಲ್ಲಿ ಬೆಡ್ ಸಿಗದೆ ಬಿಜೆಪಿ ಮಾಜಿ ಸಂಸದನ ಪುತ್ರ ಸಾವು
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಸರ್ಕಾರಿ ವೆಬ್ ಸೈಟ್‍ಗಳಿಂದ ಸಾರ್ವಜನಿಕರ ನೊಂದಣಿ ಪತ್ರಗಳನ್ನು ಡೌನ್‍ಲೋಡ್ ಮಾಡಿಕೊಂಡು ಆಧಾರ್ ಕಾರ್ಡ್ ಮಾಹಿತಿ ಮತ್ತು ಬೆರಳಚ್ಚು ಗಳನ್ನು ನಕಲು ಮಾಡಿಕೊಂಡು ಪಿರ್ಯಾದುದಾರರ ಗಮನಕ್ಕೆ ಬಾರದಂತೆ ಆಧಾರ್ ಕಾರ್ಡ್‍ಗೆ ಲಿಂಕ್ ಆದಂತಹ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಮಾಡಿಕೊಂಡು ವಂಚಿಸುತ್ತಿದ್ದ ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಬಂಸಿದ್ದಾರೆ.

ಆರೋಪಿಗಳನ್ನು ವಿಚಾರಣೆಗೊಳಪಡಿಸಿ 1.5 ಲಕ್ಷ ರೂ. ನಗದು ಕೃತ್ಯಕ್ಕೆ ಬಳಸಿದ್ದ ಎರಡು ಲ್ಯಾಪ್ ಟಾಪ್, ಎರಡು ಮೊಬೈಲ್ ಫೆÇೀನ್ ಮತ್ತು ಮೂರು ಬೆರಳಚ್ಚು ಸಾಧನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಮತ್ತೊಬ್ಬ ಅರೋಪಿಯು ತಲೆ ಮರೆಸಿಕೊಂಡಿದ್ದು ಈತನ ಶೋಧ ಕಾರ್ಯ ಮುಂದುವರಿದಿದೆ.
ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಲಕ್ಷ್ಮೀ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಈಶಾನ್ಯ ವಿಭಾಗದ ಯಲಹಂಕ ಸೆನ್ ಪೊಲೀಸ್ ಠಾಣೆ ಇನ್ಸಪೆಕ್ಟರ್ ಮಲ್ಲಿಕಾರ್ಜುನ ಹಾಗೂ ಪಿ.ಎಸ್.ಐ ರಮಣ್‍ಗೌಡ ಅವರ ತಂಡ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News