Thursday, November 6, 2025
Home Blog Page 1871

ಪಾಕ್‍ಗೆ ಕ್ಷಿಪಣಿ ತಯಾರಿಕಾ ವಸ್ತು ಪೂರೈಸಿದ ಚೀನಾ ಮೂಲದ ಸಂಸ್ಥೆಗಳ ವಿರುದ್ಧ ನಿರ್ಬಂಧ

ವಾಷಿಂಗ್ಟನ್,ಅ.21- ಪಾಕಿಸ್ತಾನದ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಕ್ಕೆ ಕ್ಷಿಪಣಿ ಅನ್ವಯವಾಗುವ ವಸ್ತುಗಳು ಮತ್ತು ತಂತ್ರಜ್ಞಾನವನ್ನು ಪೂರೈಸಿದ್ದಕ್ಕಾಗಿ ಚೀನಾ ಮೂಲದ ಮೂರು ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧಗಳನ್ನು ವಿಧಿಸಿದೆ. ಜಾಗತಿಕ ಪ್ರಸರಣ ರಹಿತ ಆಡಳಿತದ ಭಾಗವಾಗಿ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ ಎಂದು ಯುಎಸ್ ಸ್ಟೇಟ್ ಡಿಪಾಟ್ರ್ಮೆಂಟ್ ಹೇಳಿದೆ.

ಇಂದು, ನಾವು ಕಾರ್ಯನಿರ್ವಾಹಕ ಆದೇಶ 13382 ರ ಪ್ರಕಾರ ಮೂರು ಘಟಕಗಳನ್ನು ಗೊತ್ತುಪಡಿಸುತ್ತಿದ್ದೇವೆ, ಇದು ಸಾಮೂಹಿಕ ವಿನಾಶದ ಶಸಾಸಗಳ ಪ್ರಸರಣಕಾರರನ್ನು ಮತ್ತು ಅವುಗಳ ವಿತರಣಾ ವಿಧಾನಗಳನ್ನು ಗುರಿಯಾಗಿಸುತ್ತದೆ. ಪೀಪಲ್ಸ ರಿಪಬ್ಲಿಕ್ ಆಫ್ ಚೀನಾ ಮೂಲದ ಈ ಮೂರು ಘಟಕಗಳು ಕ್ಷಿಪಣಿಯನ್ನು ಪೂರೈಸಲು ಕೆಲಸ ಮಾಡಿದೆ ಎಂದು ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಯಶಸ್ವಿಯಾಗಿ ಗಗನಯಾನ ಪರೀಕ್ಷಾ ಹಾರಾಟ ನಡೆಸಿದ ಇಸ್ರೋ

ಪಾಕಿಸ್ತಾನದ ಎಲ್ಲಾ ಹವಾಮಾನದ ಮಿತ್ರರಾಷ್ಟ್ರವಾದ ಚೀನಾ, ಇಸ್ಲಾಮಾಬಾದ್‍ನ ಮಿಲಿಟರಿ ಆಧುನೀಕರಣ ಕಾರ್ಯಕ್ರಮಕ್ಕೆ ಶಸಾಸ ಮತ್ತು ರಕ್ಷಣಾ ಸಾಧನಗಳ ಮುಖ್ಯ ಪೂರೈಕೆದಾರ ರಾಷ್ಟ್ರವಾಗಿದೆ. ಮೂರು ಕಂಪನಿಗಳೆಂದರೆ ಜನರಲ್ ಟೆಕ್ನಾಲಜಿ ಲಿಮಿಟೆಡ್, ಬೀಜಿಂಗ್ ಲುವೊ ಲುವೊ ಟೆಕ್ನಾಲಜಿ ಡೆವಲಪ್‍ಮೆಂಟ್ ಕಂ ಲಿಮಿಟೆಡ್ ಮತ್ತು ಚಾಂಗ್‍ಝೌ ಉಟೆಕ್ ಕಾಂಪೋಸಿಟ್ ಕಂಪನಿ ಲಿಮಿಟೆಡ್ ಸಂಸ್ಥೆಗಳಾಗಿವೆ.

ಸಾಮೂಹಿಕ ವಿನಾಶದ ಶಸಾಸಗಳ ಪ್ರಸರಣ ಅಥವಾ ಅವುಗಳ ವಿತರಣಾ ವಿಧಾನಗಳಿಗೆ (ಅಂತಹ ಶಸಾಸಗಳನ್ನು ತಲುಪಿಸುವ ಸಾಮಥ್ರ್ಯವಿರುವ ಕ್ಷಿಪಣಿಗಳನ್ನು ಒಳಗೊಂಡಂತೆ) ಭೌತಿಕವಾಗಿ ಕೊಡುಗೆ ನೀಡಿದ ಚಟುವಟಿಕೆಗಳು ಅಥವಾ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಅಥವಾ ತೊಡಗಿಸಿಕೊಳ್ಳಲು ಪ್ರಯತ್ನಿಸಿದ್ದಕ್ಕಾಗಿ ಅವುಗಳನ್ನು ಮಂಜೂರು ಮಾಡಲಾಗಿದೆ. ), ಪಾಕಿಸ್ತಾನದಿಂದ ಅಂತಹ ವಸ್ತುಗಳನ್ನು ತಯಾರಿಸಲು, ಸ್ವಾೀಧಿನಪಡಿಸಿಕೊಳ್ಳಲು, ಸ್ವಾೀಧಿನಪಡಿಸಿಕೊಳ್ಳಲು, ಅಭಿವೃದ್ಧಿಪಡಿಸಲು, ಸಾಗಿಸಲು, ವರ್ಗಾಯಿಸಲು ಅಥವಾ ಬಳಸಲು ಯಾವುದೇ ಪ್ರಯತ್ನಗಳು ಸೇರಿವೆ.

ಇಸ್ರೇಲ್ ಪೊಲೀಸರಿಗೆ ಸಮವಸ್ತ್ರ ಸರಬರಾಜು ಸ್ಥಗಿತಗೊಳಿಸಿದ ಕೇರಳ

ಜನರಲ್ ಟೆಕ್ನಾಲಜಿ ಲಿಮಿಟೆಡ್ ಬ್ರೇಜಿಂಗ್ ವಸ್ತುಗಳನ್ನು ಪೂರೈಸಲು ಕೆಲಸ ಮಾಡಿದೆ, ಇದನ್ನು ಬ್ಯಾಲಿಸ್ಟಿಕ್ ಕ್ಷಿಪಣಿ ರಾಕೆಟ್ ಎಂಜಿನ್‍ಗಳಲ್ಲಿ ಘಟಕಗಳನ್ನು ಸೇರಲು ಮತ್ತು ದಹನ ಕೊಠಡಿಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.

ಸಿದ್ದರಾಮಯ್ಯನವರು ಪಾಕಿಸ್ತಾನ ಟೀಮ್ ಬೆಂಬಲಿಸಲು ಹೋಗಿದ್ರಾ..? : ಎಚ್‍ಡಿಕೆ ವ್ಯಂಗ್ಯ

ಬೆಂಗಳೂರು,ಅ.21- ರಾಜ್ಯದಲ್ಲಿ ಬರ ಪರಿಸ್ಥಿತಿ, ವಿದ್ಯುತ್ ಅಭಾವ ಸೇರಿದಂತೆ ಸಾಕಷ್ಟು ಸಮಸ್ಯೆಗಳಿದ್ದರೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಕಾರ್ಯದರ್ಶಿಗಳು ನಿನ್ನೆ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು. ಭಾರತ- ಪಾಕಿಸ್ತಾನ ನೋಡಲಿ ಎನ್ನಬಹುದಿತ್ತು. ಆದರೆ ಪಂದ್ಯವಿದ್ದದು ಪಾಕಿಸ್ತಾನ, ಆಸ್ಟ್ರೇಲಿಯ ನಡುವೆ. ಯಾರಿಗೆ ಬೆಂಬಲ ವ್ಯಕ್ತಪಡಿಸಿ ಹೋಗಿದ್ದರು ಎಂದು ಪ್ರಶ್ನಿಸಿದರು. ತಾವು ಕ್ರೀಡೆಗಳ ವಿರೋಯಲ್ಲ. ನಮ್ಮ ಬೆಂಬಲವೂ ಇದೆ. ಆದರೆ ಬರಗಾಲ, ವಿದ್ಯುತ್ ಅಭಾವದ ಸಂದರ್ಭದಲ್ಲಿ ಸಮಯ ಅವಕಾಶ ಮಾಡಿಕೊಂಡು 8 ಗಂಟೆ ಪಂದ್ಯ ವೀಕ್ಷಿಸಿದ್ದಾರೆ ಎಂದರು.

ಟೀಕೆ ಮಾಡುವುದಿಲ್ಲ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ದೊಡ್ಡ ಹಡಗಿಗೆ ಯಾರು ಯಾರನ್ನು ತುಂಬಿಸಿಕೊಳ್ಳುತ್ತಾರೋ ತುಂಬಿಸಿಕೊಳ್ಳಲಿ ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ತಿಳಿಸಿದರು. ನಾವು ರಾಜ್ಯದ ಜನತೆಯ ಸಮಸ್ಯೆಗಳ ಪರಿಹಾರದ ಬಗ್ಗೆ ಗಮನಹರಿಸುತ್ತೇವೆ. ಮುಂದೆ ಏನಾಗುತ್ತೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ಯಶಸ್ವಿಯಾಗಿ ಗಗನಯಾನ ಪರೀಕ್ಷಾ ಹಾರಾಟ ನಡೆಸಿದ ಇಸ್ರೋ

ಬೇಗ ಬಿಚ್ಚಡಲಿ:
ಉಪಮುಖ್ಯಮಂತ್ರಿಗಳು ಯಾರ್ಯಾರದೋ ಏನೇನೋ ಬಿಚ್ಚಿಡುವುದಾಗಿ ಹೇಳಿದ್ದಾರೆ . ಆದಷ್ಟು ಬೇಗ ಬಿಚ್ಚಿಡಲಿ. ನಮಗೆ ಭಯವಿಲ್ಲ. ಬಿಚ್ಚಿಡುವ ಮುನ್ನ ಇನ್ನೇನಾದರೂ ಆದರೆ ಏನು ಮಾಡುವುದು? ಬೇಗ ಬಿಚ್ಚಿಡಲಿ ಎಂದು ಮಾರ್ಮಿಕವಾಗಿ ಹೇಳಿದರು. ನಾನು ನಕಲಿ ಸ್ವಾಮಿ ಅಲ್ಲ. ಮಾಹಿತಿ ಇಲ್ಲದೆ ಇಂಧನ ಇಲಾಖೆ ವಿಚಾರ ಪ್ರಸ್ತಾಪಿಸಿಲ್ಲ. ಅಂಕಿ ಅಂಶಗಳ ಆಧಾರದ ಮೇಲೆ ಪ್ರಸ್ತಾಪಿಸಿದ್ದೇನೆ.

ಬಟ್ಟೆ ಹರಿದುಕೊಂಡು ಓಡಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಮುಂದೆ ಯಾರು ಆ ರೀತಿ ಓಡಾಡುತ್ತಾರೆ ಎಂಬುದನ್ನು ಕಾದು ನೋಡೋಣ ಎಂದರು. ಮಾಜಿ ಸಚಿವ ಬಂಡೆಪ್ಪ ಕಾಶಂಪುರ್, ಮಾಜಿ ಶಾಸಕರಾದ ಸುರೇಶ್ ಗೌಡ, ಕೋನರೆಡ್ಡಿ ತೂಪಲ್ಲಿ, ರಮೇಶ್ ಗೌಡ ಹಾಗೂ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಜೆಡಿಎಸ್ ಕಚೇರಿ ಜೆಪಿಭವನದಲ್ಲಿ ಹಮ್ಮಿಕೊಂಡಿದ್ದ ಆಯ್ದ ಪೂಜೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಭಾಗಿಯಾಗಿದ್ದರು.

ಕಲ್ಯಾಣ ಕರ್ನಾಟಕ ಭಾಗದ ಖಾಲಿ ಹುದ್ದೆಗಳ ಭರ್ತಿಗೆ ಸಿಎಂಗೆ ಖರ್ಗೆ ಪತ್ರ

ಬೆಂಗಳೂರು,ಅ.21- ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನೇರ ನೇಮಕಾತಿ ಹಾಗೂ ಬಡ್ತಿ ಮೂಲಕ ತುಂಬ ಬೇಕಾಗಿರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಕೋರಿ ಎಲ್ಲಾ ಸಚಿವರಿಗೆ ಹಾಗೂ ಮುಖ್ಯಮಂತ್ರಿಯವರು ಹೊಂದಿರುವ ಖಾತೆಗಳಿಗೆ ಸಂಬಂಧಿಸಿದಂತೆ ಸಚಿವಾಲಯ ಮುಖ್ಯಸ್ಥರಿಗೆ ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷರೂ ಆದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ.

ಭಾರತ ಸಂವಿಧಾನ ಅನುಚ್ಚೇದ 371(ಜೆ) ಅಡಿ ಹೊರಡಿಸಲಾಗಿರುವ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪರಾಮರ್ಶಿಸುವ ಕುರಿತು ರಚಿಸಲಾಗಿರುವ ಉಪ ಸಮಿತಿ ವತಿಯಿಂದ ಸಚಿವರ ಗಮನ ಸೆಳೆಯಲಾಗಿದೆ. 2023ರ ಆಗಸ್ಟ್ 17ರಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾದ ತೀರ್ಮಾನದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಸ್ಥಳೀಯ ವೃಂದದಲ್ಲಿ ಮೀಸಲಿರಿಸಿರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಛತ್ತೀಸ್‍ಗಢದಲ್ಲಿ ಇಬ್ಬರು ನಕ್ಸಲೀಯರ ಹತ್ಯೆ

ಭಾರತ ಸಂವಿಧಾನ ಅನುಚ್ಛೇದ 371 (ಜೆ) ಅಡಿಯಲ್ಲಿ ಇಲಾಖಾವಾರು ಭರ್ತಿ ಮಾಡಲು ಬಾಕಿ ಇರುವ ನೇರ ನೇಮಕಾತಿ ಹಾಗೂ ಮುಂಬಡ್ತಿಯಲ್ಲಿ ಹುದ್ದೆಗಳ ವಿವರಗಳನ್ನು ಪತ್ರದ ಜೊತೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ನೇರ ನೇಮಕಾತಿ ಮೂಲಕ 28,023 ಹುದ್ದೆಗಳನ್ನು ಭರ್ತಿ ಮಾಡಬೇಕಿದ್ದು, ಇವಗಳಲ್ಲಿ 12,945 ಹುದ್ದೆಗಳನ್ನು ಭರ್ತಿ ಮಾಡುವ ಕ್ರಮ ಲೋಕಸೇವಾ ಆಯೋಗ ಹಾಗೂ ಇನ್ನಿತರ ಸಂಸ್ಥೆಗಳ ಮೂಲಕ ನಡೆಯುತ್ತಿದೆ. ಉಳಿದಂತೆ 15,078 ಹುದ್ದೆಗಳು ಖಾಲಿ ಇದ್ದು ಭರ್ತಿ ಪ್ರಕ್ರಿಯೆ ಆರಂಭಗೊಳ್ಳಬೇಕಿದೆ. ಇವುಗಳಲ್ಲಿ ಎ,ಬಿ,ಸಿ ಹಾಗೂ ಡಿ ವೃಂದದ ಹುದ್ದೆಗಳು ಸೇರಿವೆ ಎಂದು ವಿವರಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ 9,905 ವಿವಿಧ ಹುದ್ದೆಗಳನ್ನು ಬಡ್ತಿ ಮೂಲಕ ತುಂಬ ಬೇಕಿದ್ದು, ಈ ಹುದ್ದೆಗಳನ್ನು ಬಡ್ತಿ ಮೂಲಕ ತುಂಬಲು ಕ್ರಮ ಕೈಗೊಳ್ಳುವಂತೆಯೂ ಸಚಿವ ಪ್ರಿಯಾಂಕ್ ಖರ್ಗೆ
ಸಂಪುಟದ ಎಲ್ಲಾ ಸಚಿವರಿಗೂ ಬರೆದಿರುವ ಪತ್ರದಲ್ಲಿ ಕೋರಿದ್ದಾರಲ್ಲದೆ, ಇಲಾಖೆಯ ಅಧಿಕಾರಿಗಳ ಸಭೆ ಕರೆದು ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸಲು ಸಹಕಾರ ನೀಡಬೇಕೆಂದೂ ತಿಳಿಸಿದ್ದಾರೆ.

ವಿಧಾನಸೌಧ-ವಿಕಾಸಸೌಧದಲ್ಲಿ ಆಯುಧ ಪೂಜೆಯ ಸಂಭ್ರಮ

ಬೆಂಗಳೂರು,ಅ.21- ಆಡಳಿತದ ಶಕ್ತಿ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡ ಸೇರಿದಂತೆ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಇಂದೇ ಆಯುಧ ಪೂಜೆಯನ್ನು ನೆರವೇರಿಸಲಾಯಿತು.

ಸರ್ಕಾರಿ ಕಚೇರಿಗಳಲ್ಲಿ ಇಂದು ಬೆಳಗ್ಗೆಯಿಂದಲೇ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿತ್ತು. ಸಿಬ್ಬಂದಿಗಳು ಪೂಜಾ ಕೈಂಕರ್ಯದಲ್ಲಿ ತೊಡಗಿದ್ದರು. ತಮ್ಮ ತಮ್ಮ ಕಚೇರಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಪೂಜೆ ನೆರವೇರಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ಯಶಸ್ವಿಯಾಗಿ ಗಗನಯಾನ ಪರೀಕ್ಷಾ ಹಾರಾಟ ನಡೆಸಿದ ಇಸ್ರೋ

ನಿನ್ನೆಯಿಂದಲೇ ಕಚೇರಿಗಳನ್ನು ಶುಚಿಗೊಳಿಸಿ ಸಿಂಗರಿಸುವ ಕಾರ್ಯದಲ್ಲಿ ಸಿಬ್ಬಂದಿಗಳು ತೊಡಗಿದ್ದರು. ಸಚಿವರ ಕಚೇರಿಗಳು, ವಾಹನಗಳು ಸೇರಿದಂತೆ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿನ ಕೆಲವು ಕಚೇರಿಗಳಲ್ಲಿ ನಿನ್ನೆಯೇ ಆಯುಧ ಪೂಜೆ ನೆರವೇರಿಸಲಾಗಿತ್ತು.

ಸೋಮವಾರ ಆಯುಧ ಪೂಜೆ ಮಾಡಬೇಕಿದೆ. ಆದರೆ ನಾಳೆ ಭಾನುವಾರ ಹಾಗೂ ಸೋಮವಾರ ಆಯುಧ ಪೂಜೆ ರಜೆ ಇರುವುದರಿಂದ ಇಂದೇ ಆಡಳಿತದ ಶಕ್ತಿ ಕೇಂದ್ರಗಳಲ್ಲಿ ಪೂಜೆಗಳನ್ನು ನೆರವೇರಿಸಿದ್ದು ಕಂಡುಬಂದಿತು.

ಡಿವಿಎಸ್‍ಗೆ ಹೈಕಮಾಂಡ್ ಬುಲಾವ್

ಬೆಂಗಳೂರು,ಅ.21- ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಸೋಲಿನ ರುಚಿ ತೋರಿಸಲು ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಕಮಲ-ದಳ ನಾಯಕರ ಮೈತ್ರಿಗೆ ವಿರೋಧಿಸಿ ಸಂಸದ ಡಿ.ವಿ.ಸದಾನಂದಗೌಡ ಹೇಳಿಕೆ ನೀಡಿದ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ.

ಇದೇ ತಿಂಗಳ 25ರಂದು ದೆಹಲಿಗೆ ಬಂದು ಭೇಟಿ ಮಾಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚಿಸಿದ್ದಾರೆಂದು ತಿಳಿದು ಬಂದಿದೆ. ಹೀಗಾಗಿ ದೆಹಲಿಗೆ ತೆರಳುವ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಬಿಜೆಪಿ ಸೋಲು ಕಂಡಿದೆ. ಈ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಠಕ್ಕರ್ ನೀಡಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದ ಡಿ.ವಿ.ಸದಾನಂದ ಗೌಡರು, ಹೈಕಮಾಂಡ್ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದರು.

ಛತ್ತೀಸ್‍ಗಢದಲ್ಲಿ ಇಬ್ಬರು ನಕ್ಸಲೀಯರ ಹತ್ಯೆ

2024ರ ಲೋಕಸಭಾ ಚುನಾವಣೆ ಹಿನ್ನೆಲೆ ಜೆಡಿಎಸ್ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಮ್ಮ ಕರ್ನಾಟಕದ ಯಾವುದೇ ಬಿಜೆಪಿ ನಾಯಕರ ಜೊತೆಗೂ ವರಿಷ್ಠರು ಚರ್ಚೆ ಮಾಡಿಲ್ಲ. ನಮ್ಮನ್ನು ಹೊರಗಿಟ್ಟೇ ಅವರೇ ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ತೀರ್ಮಾನ ಮಾಡಿದ್ದಾರೆ ಎಂದು ಅಸಮಾಧಾನಗೊಂಡಿದ್ದರು.

ಈಗಾಗಲೇ ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಸದಾನಂದಗೌಡ ಅವರು ಕಾಂಗ್ರೆಸ್ ಪಕ್ಷವನ್ನು ಸೇರುತ್ತಾರಾ ಎಂಬ ಪ್ರಶ್ನೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಈ ಚರ್ಚೆಯ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಡಿ ವಿ.ಸದಾನಂದಗೌಡ ಅವರ ಅಸಮಾಧಾನವನ್ನು ಶಮನಗೊಳಿಸಲು ದೆಹಲಿಗೆ ಬುಲಾವ್ ನೀಡಿದೆ.

ಇನ್ನು ಬಿಜೆಪಿಯಲ್ಲಿ 12 ಮಂದಿ ಸಂಸದರಿಗೆ ಈ ಬಾರಿ ಟಿಕೆಟ್ ಕೈತಪ್ಪಲಿದೆ ಎಂಬ ವರದಿಯಾಗಿದ್ದು, ಈ 12 ಸಂಸದರ ಪೈಕಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ ಡಿ.ವಿ. ಸದಾನಂದಗೌಡ ಅವರಿಗೆ ಈ ಬಾರೀ ಟಿಕೆಟ್ ಕೈ ತಪ್ಪಲಿದೆ ಎನ್ನಲಾಗಿದೆ.

ಆದಾಗ್ಯೂ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿರುವ ಸದಾನಂದ ಗೌಡರು ಬಿಜೆಪಿಯ ಪ್ರತಿಭಟನೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ನಡೆಯುತ್ತಿರುವ ಸಾಲು ಸಾಲು ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಾರೆ.

ವಿದ್ಯುತ್ ಕೃತಕ ಅಭಾವ ಸೃಷ್ಟಿಸಿ ಕಮಿಷನ್‍ ಹೊಡೆಯಲು ಮುಂದಾದ ಸರ್ಕಾರ : ಹೆಚ್ಡಿಕೆ

ಬೆಂಗಳೂರು,ಅ.21- ವಿದ್ಯುತ್ ಉತ್ಪಾದನೆ ಮಾಡುವ ಸಾಮಥ್ರ್ಯ ಇದ್ದರೂ ರಾಜ್ಯ ಸರ್ಕಾರ ಕೃತಕ ವಿದ್ಯುತ್ ಅಭಾವ ಸೃಷ್ಟಿಸುವ ಮೂಲಕ ದುಬಾರಿ ದರದಲ್ಲಿ ವಿದ್ಯುತ್ ಖರೀದಿ ಮಾಡಿ ಕಮಿಷನ್ ಪಡೆಯಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮರ್ಪಕವಾಗಿ ವಿದ್ಯುತ್ ಉತ್ಪಾದನೆ ಮಾಡಿದರೆ ಉಳಿತಾಯವಾಗುವಷ್ಟು ವಿದ್ಯುತ್ ಉತ್ಪಾದಿಸಬಹುದು. ಆದರೆ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡದೆ ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಲಹರಣ ಮಾಡಿದೆ. ಮಳೆ ಅಭಾವದಿಂದ ವಿದ್ಯುತ್ ಸಮಸ್ಯೆ ಉಂಟಾಗಿದೆ ಎಂದು ಹೇಳಿ ವಿದ್ಯುತ್ ಖರೀದಿ ಮಾಡಲು ಮುಂದಾಗುತ್ತಿದೆ ಎಂದು ಆರೋಪಿಸಿದರು.

1500 ಮೆಗಾವ್ಯಾಟ್ ವಿದ್ಯುತ್ ಖರೀದಿಸುವ ಬಗ್ಗೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಸರ್ಕಾರವೇ ಹೇಳಿರುವ ಮಾಹಿತಿ ಪ್ರಕಾರ ಪ್ರತಿದಿನ 40 ಕೋಟಿ ವಿದ್ಯುತ್ ಖರೀದಿಗೆ ಬೇಕಾಗುತ್ತದೆ ಎಂದರು.

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಆಖಿಲೇಶ್ ಯಾದವ್

ರಾಜ್ಯದಲ್ಲಿ 32,912.52 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಜಲವಿದ್ಯುತ್‍ನಲ್ಲಿ ಶೇ.50ರಷ್ಟು ಅಂದರೂ 1953.3 ಮೆ.ವ್ಯಾ ವಿದ್ಯುತ್ ಉತ್ಪಾದಿಸಬಹುದು. ಶಾಖೋತ್ಪನ್ನ ವಿದ್ಯುತ್ ಘಟಕಗಳಿಂದ 9947.56 ಮೆ.ವ್ಯಾ ಉತ್ಪಾದಿಸಬಹುದು. ಕೂಡ್ಲಗಿಯಲ್ಲಿ ಇನ್ನೆರು ಶಾಖೋತ್ಪನ್ನ ಘಟಕ ಆರಂಭಿಸಿದರೆ 4000 ಮೆ.ವ್ಯಾ ವಿದ್ಯುತ್ ಉತ್ಪಾದಿಸಬಹುದು. ಹೀಗೆ ರಾಜ್ಯದಲ್ಲಿ ಸರಾಸರಿ 16 ಸಾವಿರದಿಂದ 18 ಸಾವಿರ ಮೆ.ವ್ಯಾಟ್‍ವರೆಗೂ ವಿದ್ಯುತ್ ಉತ್ಪಾದಿಸಬಹುದು ಎಂದು ಹೇಳಿದರು.

ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ದುಡ್ಡಿನ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ಆದರೂ ಸರ್ಕಾರ ವಿದ್ಯುತ್ ಖರೀದಿ ಮಾಡಿ ಕಮಿಷನ್ ಪಡೆಯಲು ಹೊರಟಿದೆ. ಸರ್ಕಾರದ ಲೋಪದೋಷಗಳನ್ನು ಹೇಳಿದ್ದು, ಯಾವ ರೀತಿ ಪರೀಕ್ಷಿಸಿಕೊಳ್ಳಬಹುದು ಎಂಬುದನ್ನು ಹೇಳಿದ್ದೇನೆ. ಸತ್ಯ ಹರಿಶ್ಚಂದ್ರ ಸರ್ಕಾರ ಐದು ತಿಂಗಳಲ್ಲಿ ಮಾಡಿದ್ದು ಸಾಕು, ಕಮಿಷನ್ ನಿಲ್ಲಿಸಿ ಜನರ ಸಮಸ್ಯೆ ಪರಿಹರಿಸಿ ಎಂದರು.

ಯಶಸ್ವಿಯಾಗಿ ಗಗನಯಾನ ಪರೀಕ್ಷಾ ಹಾರಾಟ ನಡೆಸಿದ ಇಸ್ರೋ

ಬರಗಾಲದಿಂದಾಗಿ ಆಹಾರಧಾನ್ಯ ಉತ್ಪಾದನೆ ಸಾಕಷ್ಟು ಕಡಿಮೆಯಾಗಲಿದ್ದು, ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಬಹುದು. ಅದಕ್ಕೆ ಯಾವ ಸಿದ್ದತೆ ಮಾಡಿಕೊಂಡಿದ್ದೀರಿ? ಎಂದು ಪ್ರಶ್ನಿಸಿದರು. ಮಾಹಿತಿ ಇಲ್ಲದೆ ಆರೋಪ ಮಾಡುತ್ತಿಲ್ಲ. 25-35 ವರ್ಷಗಳಿಂದ ಮಾಡಿಕೊಂಡು ಬಂದಿರುವುದು ಸಾಕು. ಇನ್ನಾದರೂ ಜನರ ಸಮಸ್ಯೆ ಬಗೆಹರಿಸಲು ಗಮನ ನೀಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರು ಹೇಳದೆ ಪ್ರಸ್ತಾಪಿಸಿದರು.

ಹುತಾತ್ಮ ಪೊಲೀಸ್ ವಿಮಾ ಮೊತ್ತ 50 ಲಕ್ಷಕ್ಕೆ ಹೆಚ್ಚಳ

ಬೆಂಗಳೂರು ಅ.21- ಕರ್ತವ್ಯದ ಮೇಲಿದ್ದಾಗ ಹುತಾತ್ಮರಾಗುವ ಪೊಲೀಸ್ ಸಿಬ್ಬಂದಿಯ ಗುಂಪು ವಿಮಾ ಮೊತ್ತವನ್ನು 20 ಲಕ್ಷದಿಂದ 50 ಲಕ್ಷಕ್ಕೆ ಏರಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.

ಇಂದು ಪೊಲೀಸ್ ಸಂಸ್ಮರಣ ದಿನದ ಅಂಗವಾಗಿ ಮೈಸೂರು ರಸ್ತೆಯ ಹುತಾತ್ಮರ ಉದ್ಯಾನವನದಲ್ಲಿ ಹುತಾತ್ಮರಿಗೆ ಪುಷ್ಪಚಕ್ರ ಅರ್ಪಿಸಿ ನಮನ ಸಲ್ಲಿಸಿ ಮಾತನಾಡಿದರು. ಪೊಲೀಸ್ ವ್ಯವಸ್ಥೆ ರಾಜ್ಯದ , ಸರ್ಕಾರದ ಘನತೆಯನ್ನು ಹೆಚ್ಚಿಸುವಂತೆ ಕೆಲಸ ಮಾಡುತ್ತದೆ. ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆಗೆ ನೇರ ಸಂಬಂಧವಿದೆ. ಯಾವ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿರುತ್ತದೋ ಅಲ್ಲಿಗೆ ಬಂಡವಾಳ ಹೆಚ್ಚಾಗಿ ಬರುತ್ತದೆ.

ಇದರಿಂದ ಉದ್ಯೋಗ ಸೃಷ್ಟಿ ಹೆಚ್ಚಾಗಿ, ಅಭಿವೃದ್ಧಿ ವೇಗ ಪಡೆದುಕೊಳ್ಳುತ್ತದೆ. ಇದರ ಪರಿಣಾಮ ನಾಡಿನ ಜನರ ತಲಾ ಆದಾಯದ ಪ್ರಮಾಣವೂ ಹೆಚ್ಚಾಗುತ್ತದೆ. ಆದ್ದರಿಂದ ನಾಡಿನ ಕಾನೂನು ಸುವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಕಟ್ಟು ನಿಟ್ಟಾಗಿ ನಿರ್ವಹಿಸಬೇಕು ಎಂದು ಕರೆ ನೀಡಿದರು.

ಛತ್ತೀಸ್‍ಗಢದಲ್ಲಿ ಇಬ್ಬರು ನಕ್ಸಲೀಯರ ಹತ್ಯೆ

ತಂತ್ರಜ್ಞಾನ ಬೆಳೆದಂತೆ ಪೊಲೀಸ್ ವ್ಯವಸ್ಥೆ ಹೊಸ ಹೊಸ ಸವಾಲುಗಳಿಗೆ ಮುಖಾಮುಖಿ ಆಗುತ್ತದೆ. ಸೈಬರ್ ತಂತ್ರಜ್ಞಾನದ ಜತೆಗೇ ಸೈಬರ್ ಅಪರಾಧಗಳೂ ಹೆಚ್ಚಾಗುತ್ತಿವೆ. ಇದನ್ನು ಪರಿಣಾಮಕಾರಿಯಾಗಿ ತಡೆ ಹಿಡಿಯಬೇಕು ಎನ್ನುವ ಸೂಚನೆ ನೀಡಿದರು.

ಸುಳ್ಳು ಸುದ್ದಿಗಳು, ಅಶಾಂತಿ ಸೃಷ್ಟಿಸುವ ಸುಳ್ಳುಗಳನ್ನು, ದ್ವೇಷ ಹರಡುವ ಸುಳ್ಳುಗಳನ್ನು ವ್ಯಾಪಕವಾಗಿ ಹರಡಲಾಗುತ್ತಿದೆ. ಸರ್ವರನ್ನೂ ಸಮಾನವಾಗಿ ಕಾಣುವ ಮತ್ತು ಸಮಾನವಾಗಿ ನಡೆಸಿಕೊಳ್ಳುವ ಜವಾಬ್ದಾರಿ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ಮೇಲಿದೆ ಎಂದರು.

ಆದ್ದರಿಂದ ಸುಳ್ಳು ಸುದ್ದಿ ಹರಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಸುಳ್ಳು ಮತ್ತು ದ್ವೇಷದ ಸುದ್ದಿಗಳು ನಾಡಿನ ಜಿಡಿಪಿಗೆ ಮಾರಕ. ಅಶಾಂತಿಯ ಪರಿಣಾಮವಾಗಿ ಜನರ ತಲಾ ಆದಾಯಕ್ಕೂ ಧಕ್ಕೆಯಾಗುತ್ತದೆ. ಆದ್ದರಿಂದ ಸುಳ್ಳು ಸುದ್ದಿ ಹರಡುವ ಜಾಲ ತಾಣಗಳು ಮತ್ತು ಅವನ್ನು ನಿರ್ವಹಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ಮಹಿಳೆ, ಮಕ್ಕಳು ಮತ್ತು ಹಿರಿಯ ನಾಗರಿಕರ ಸುರಕ್ಷತೆ ಮತ್ತು ಭದ್ರತೆಗೆ ಹೆಚ್ಚಿನ ರಕ್ಷಣೆ ಕೊಡುವ ಅಗತ್ಯವಿದೆ. ಸುಗಮ ಸಂಚಾರ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಬೇಕು. ಹೀಗಾಗಿ ಹೆಚ್ಚುವರಿ ಪೊಲೀಸ್ ಹುದ್ದೆ ಸೃಷ್ಟಿಸಿದ್ದೇವೆ. ಹೆಚ್ಚುವರಿ ಮಹಿಳಾ ಮತ್ತು ಸಂಚಾರ ಠಾಣೆಗಳನ್ನು ಆರಂಭಿಸಿದ್ದೇವೆ. ಹೊಸ ವಾಹನ ಖರೀದಿಗೆ 100 ಕೋಟಿ ರೂಪಾಯಿಗಳನ್ನು ನೀಡಲಾಗುವುದು ಎಂದರು.

2125 ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲು 450 ಕೋಟಿ ನೀಡಲಾಗುವುದು. ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ಆರೋಗ್ಯ ಭಾಗ್ಯಕ್ಕಾಗಿ 100 ಕೋಟಿ ರೂ ಒದಗಿಸಲಾಗಿದೆ. ನಿವೃತ್ತ ಸಿಬ್ಬಂದಿಯ ಆರೋಗ್ಯ, ಚಿಕಿತ್ಸೆಗಾಗಿ ನಿಶ್ಚಿತ ಠೇವಣಿ ಇಡಲಾಗಿದೆ. ಪೊಲೀಸ್ ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕಾಗಿ 7 ಜಿಲ್ಲೆಗಳಲ್ಲಿ 7 ಪೊಲೀಸ್ ಪಬ್ಲಿಕ್ ಶಾಲೆ ಆರಂಭಿಸಲಾಗುತ್ತಿದೆ. ಇವುಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಸರ್ಕಾರ ಬದ್ದವಾಗಿದೆ. ಪೊಲೀಸ್ ಕ್ಯಾಂಟೀನ್ ಗಳನ್ನು ಆರಂಭಿಸಲಾಗುತ್ತಿದೆ ಎಂದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಅನೇಕ ಬಾರಿ ಅಪಾಯ ಎದುರಿಸುತ್ತಾರೆ ಮತ್ತು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಅವರಿಗೆ ಸಹಾಯ ಮತ್ತು ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ ಎಂದರು.

ಕರ್ನಾಟಕದಲ್ಲಿ ಕಳೆದ ವರ್ಷದ ಸೆಪ್ಟೆಂಬರ್ ನಿಂದ ಈ ವರ್ಷದ ಆಗಸ್ಟ್ ವರೆಗೆ 16 ಜನ ಹಾಗೂ ದೇಶದಲ್ಲಿ 180 ಜನ ರಕ್ಷಣಾ ಸಿಬ್ಬಂದಿ ಹುತ್ಮಾತರಾಗಿದ್ದು, ಅವರೆಲ್ಲರನ್ನು ಸ್ಮರಿಸಿ ನಮನ ಸಲ್ಲಿಸಲಾಗಿದೆ. ಹುತಾತ್ಮರಾದ ಪೊಲೀಸ್ ಸಿಬ್ಬಂದಿಗಳ ಕುಟುಂಬದವರಿಗೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದು ತಿಳಿಸಿದರು.

ಇಸ್ರೇಲ್ ಪೊಲೀಸರಿಗೆ ಸಮವಸ್ತ್ರ ಸರಬರಾಜು ಸ್ಥಗಿತಗೊಳಿಸಿದ ಕೇರಳ

ಗೃಹ ಮಂತ್ರಿ ಜಿ.ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಅಲೋಕ್ ಮೋಹನ್ ಮತ್ತು ಪೊಲೀಸ್ ಇಲಾಖೆಯ ನಾನಾ ವಿಭಾಗಗಳ ಮುಖ್ಯಸ್ಥರು ಪುಷ್ಪ ನಮನ ಸಲ್ಲಿಸಿದರು. ಕಳೆದ ಒಂದು ವರ್ಷದಲ್ಲಿ ದೇಶದಾದ್ಯಂತ ಹುತಾತ್ಮರಾದ ಎಲ್ಲಾ ರಕ್ಷಣಾ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಸ್ಮರಿಸಿ ನಮನ ಸಲ್ಲಿಸಲಾಯಿತು.

ಕೈಕಾಲು ಕಟ್ಟಿ ಮಹಿಳೆ ಹತ್ಯೆ ಮಾಡಿದ್ದ ಹಂತಕನ ಬಂಧನ

ನವದೆಹಲಿ, ಅ 21 (ಪಿಟಿಐ) ಪಶ್ಚಿಮ ದೆಹಲಿಯ ತಿಲಕ್ ನಗರ ಪ್ರದೇಶದಲ್ಲಿ ದೆಹಲಿಯ ಮುನ್ಸಿಪಲ್ ಕಾಪೆರ್ರೇಷನ್ ಶಾಲೆಯ ಬಳಿ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಮಹಿಳೆಯ ಹತ್ಯೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರ್‍ಪ್ರೀತ್‍ನನ್ನು ಬಂಧಿಸಲಾಗಿದ್ದು, ಮಹಿಳೆಯ ಗುರುತು ಮತ್ತು ಅಪರಾಧಕ್ಕೆ ಸಂಬಂಧಿಸಿದ ವಿವರಗಳನ್ನು ಖಚಿತಪಡಿಸಿಕೊಳ್ಳಲು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 30ರ ಆಸುಪಾಸಿನಲ್ಲಿರುವ ಮಹಿಳೆಯ ಕಾಲು ಮತ್ತು ಕೈಗಳನ್ನು ಲೋಹದ ಸರಪಳಿಗಳಿಂದ ಕಟ್ಟಲಾಗಿತ್ತು ಎಂದು ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಬೆಳಗ್ಗೆ ಶಾಲೆಯ ಬಳಿ ಆಕೆಯ ಶವ ಪತ್ತೆಯಾಗಿದ್ದು, ಅದರ ಮೇಲಿನ ಭಾಗವನ್ನು ಕಪ್ಪು ಕಸ ವಿಲೇವಾರಿ ಮಾಡುವ ಪ್ಲಾಸ್ಟಿಕ್ ಚೀಲದಿಂದ ಮುಚ್ಚಲಾಗಿತ್ತು ಎಂದು ಅವರು ತಿಳಿಸಿದ್ದಾರೆ.ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳ ಸಹಾಯದಿಂದ ಶವವನ್ನು ಕಾರಿನಲ್ಲಿ ಅಲ್ಲಿಗೆ ತರಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಯಶಸ್ವಿಯಾಗಿ ಗಗನಯಾನ ಪರೀಕ್ಷಾ ಹಾರಾಟ ನಡೆಸಿದ ಇಸ್ರೋ

ನೋಂದಣಿ ಸಂಖ್ಯೆಯನ್ನು ಪ್ರವೇಶಿಸಲಾಗಿದೆ, ಮತ್ತು ತಂಡವು ವಾಹನದ ಮಾಲೀಕರನ್ನು ಪತ್ತೆಹಚ್ಚಿದೆ. ಅವರು ಎರಡು ತಿಂಗಳ ಹಿಂದೆ ಕಾರನ್ನು ಮಾರಾಟ ಮಾಡಿದ್ದಾರೆ ಎಂದು ಮಾಲೀಕರು ಹೇಳಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು, ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

ತೆಲಂಗಾಣದೊಂದಿಗೆ ಗಾಂಧಿ ಕುಟುಂಬ ಹೊಂದಿರುವುದು ದ್ರೋಹ ಸಂಬಂಧ : ಕವಿತಾ

ಹೈದರಾಬಾದ್,ಅ.21-ತೆಲಂಗಾಣದೊಂದಿಗೆ ರಾಹುಲ್‍ಗಾಂಧಿ ಕುಟುಂಬ ಹೊಂದಿರುವ ಸಂಬಂಧ ದ್ರೋಹದ ಸಂಬಂಧವಾಗಿದೆ ಎಂದು ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಆರೋಪಿಸಿದ್ದಾರೆ. ತೆಲಂಗಾಣದೊಂದಿಗೆ ನಮ್ಮ ಕುಟುಂಬ ಸಂಬಂಧ ಹೊಂದಿದೆ ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಹೇಳಿಕೆಗೆ ತಿರುಗೇಟು ನೀಡಿರುವ ಅವರು ರಾಜ್ಯದೊಂದಿಗೆ ಗಾಂಧಿ ಕುಟುಂಬ ಹೊಂದಿರುವ ಸಂಬಂಧ ದ್ರೋಹವಾಗಿದೆ ಎಂದು ಹೇಳಿದ್ದಾರೆ.

ನಿಜಾಮಾಬಾದ್‍ನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಕವಿತಾ, ಇಂದು ರಾಹುಲ್ ಗಾಂಧಿ ಜಗಿತಾಲ್‍ಗೆ ಬಂದು ಎತ್ತರದ ಹೇಳಿಕೆಗಳನ್ನು ನೀಡಿದ್ದಾರೆ. ಅವರು ತಮ್ಮ ಅಜ್ಜಿ ಮತ್ತು ತಂದೆಯ ಕಾಲದಿಂದಲೂ ತೆಲಂಗಾಣದೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹೇಳಿದರು. ನಾನು ಅವರನ್ನು ಸಂಪೂರ್ಣವಾಗಿ ಒಪ್ಪುತ್ತೇನೆ (ರಾಹುಲ್ ಗಾಂಧಿ ) ಅವರು ತೆಲಂಗಾಣದೊಂದಿಗೆ ಕುಟುಂಬ ಸಂಬಂಧಗಳನ್ನು ಹೊಂದಿದ್ದಾರೆ.

ಇಸ್ರೇಲ್ ಪೊಲೀಸರಿಗೆ ಸಮವಸ್ತ್ರ ಸರಬರಾಜು ಸ್ಥಗಿತಗೊಳಿಸಿದ ಕೇರಳ

ಜವಾಹರಲಾಲ್ ನೆಹರೂ ಅವರು ನಮ್ಮನ್ನು ಬಲವಂತವಾಗಿ ಆಂಧ್ರಪ್ರದೇಶದಲ್ಲಿ ವಿಲೀನಗೊಳಿಸಿ ನಮ್ಮ ಆಕಾಂಕ್ಷೆಗಳನ್ನು ಕೊಂದರು. 1969 ರಲ್ಲಿ ನಾವು ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿದಾಗ 369 ವಿದ್ಯಾರ್ಥಿಗಳಿಗೆ ಇಂದಿರಾ ಗಾಂಧಿ ಗುಂಡು ಹಾರಿಸಿದರು, ನಂತರ ರಾಜೀವ್ ಗಾಂಧಿ ತೆಲಂಗಾಣದ ಸ್ವಾಭಿಮಾನಕ್ಕೆ ಧಕ್ಕೆ ತಂದರು.

ಸೋನಿಯಾ ಗಾಂಧಿ 2009 ರಲ್ಲಿ ತೆಲಂಗಾಣ ನೀಡುವುದಾಗಿ ಭರವಸೆ ನೀಡಿದ್ದರು ಆದರೆ ಅದನ್ನು ಹಿಂದಕ್ಕೆ ತೆಗೆದುಕೊಂಡರು ಮತ್ತು ಅನೇಕ ತೆಲಂಗಾಣ ಮಕ್ಕಳು ಸತ್ತರು, ಅದರಲ್ಲಿ ನಿಮ್ಮ ಕೈವಾಡವಿದೆ. ಕಳೆದ 10 ವರ್ಷಗಳಲ್ಲಿ ರಾಜ್ಯವನ್ನು ಬೆಂಬಲಿಸುವ ಮಾತನಾಡಿಲ್ಲ ಎಂದು ಅವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ಒಬಿಸಿ ಸಮುದಾಯದ ನಮ್ಮ ಮುಖ್ಯಮಂತ್ರಿಯನ್ನು ಅವಮಾನಿಸಿದವರು ರಾಜೀವ್ ಗಾಂಧಿ. ಕಳೆದ 10 ವರ್ಷಗಳಲ್ಲಿ ರಾಹುಲ್ ಗಾಂಧಿ ಅವರು ತೆಲಂಗಾಣವನ್ನು ಬೆಂಬಲಿಸಿ ಮಾತನಾಡಿಲ್ಲ. ಅವರು ನಮ್ಮೊಂದಿಗೆ ನಿಂತಿಲ್ಲ. ಹೌದು, ನಿಮಗೆ ತೆಲಂಗಾಣದೊಂದಿಗೆ ನಿರಂತರವಾಗಿ ದ್ರೋಹ ಮಾಡುವ ಸಂಬಂಧವಿದೆ. ತೆಲಂಗಾಣ, ತೆಲಂಗಾಣ ಜನತೆ ಇದನ್ನು ಚುನಾವಣೆಯಲ್ಲಿ ನಿಮಗೆ ಖಂಡಿತ ತೋರಿಸುತ್ತಾರೆ ಎಂದು ಅವರು ಹೇಳಿದರು.

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಆಖಿಲೇಶ್ ಯಾದವ್

ಹರ್ದೋಯ್,ಅ.21- ಕಾಂಗ್ರೆಸ್ ಪಕ್ಷದ ಮೇಲಿನ ಅಖಿಲೇಶ್ ಯಾದವ್ ಅವರ ಕೋಪ ಇನ್ನೂ ಕಡಿಮೆಯಾಗಿಲ್ಲ. ಜಾತಿ ಆಧಾರಿತ ಜನಗಣತಿಗೆ ಕಾಂಗ್ರೆಸ್ ನೀಡಿದ ಇತ್ತೀಚಿನ ಬೆಂಬಲದ ಬಗ್ಗೆ ಅವರು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ಕಾಂಗ್ರೆಸ್ ಪಕ್ಷವು ಈ ಹಿಂದೆ ಜಾತಿ ಗಣತಿಯ ಅಂಕಿಅಂಶಗಳನ್ನು ನೀಡಲಿಲ್ಲ. ಈಗ ಎಲ್ಲರಿಗೂ ತಿಳಿದಿದೆ ಮತ್ತು ನಿಮಗೆ ಹಿಂದುಳಿದ ಜಾತಿಗಳು ಮತ್ತು ಬುಡಕಟ್ಟುಗಳ ಬೆಂಬಲವಿಲ್ಲದಿದ್ದರೆ ನೀವು ಯಶಸ್ವಿಯಾಗುವುದಿಲ್ಲ ಎಂದು ಅಖಿಲೇಶ್ ಯಾದವ್ ಹರಿಹಾಯ್ದಿದ್ದಾರೆ.

ಇಸ್ರೇಲ್ ಪೊಲೀಸರಿಗೆ ಸಮವಸ್ತ್ರ ಸರಬರಾಜು ಸ್ಥಗಿತಗೊಳಿಸಿದ ಕೇರಳ

ಕಾಂಗ್ರೆಸ್ ಪಕ್ಷವು ಈಗ ಜಾತಿ ಗಣತಿಯನ್ನು ಬಯಸುತ್ತಿರುವುದು ಒಂದು ಪವಾಡ, ಕಾಂಗ್ರೆಸ್ ಪಕ್ಷವು ಈಗ ತಾವು ಹುಡುಕುತ್ತಿದ್ದ ಮತವು ತಮ್ಮ ಬಳಿ ಇಲ್ಲ ಎಂಬುದು ಈಗ ಅರಿವಾಗಿದೆ ಎಂದು ಅವರು ಹೇಳಿದರು. ಅಖಿಲೇಶ್ ಯಾದವ್ ಅವರು ಕಾಂಗ್ರೆಸ್ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದರು, ಇದು ದ್ರೋಹ ಎಂದು ಆರೋಪಿಸಿದರು, ಈ ಗೊಂದಲವು ಚಾಲ್ತಿಯಲ್ಲಿದ್ದರೆ, ಇಂಡಿಯಾ ಮೈತ್ರಿಕೂಟವು ಬಿಜೆಪಿಯನ್ನು ಸೋಲಿಸಲು ಎಂದಿಗೂ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್‍ಗೆ ಸಂಸತ್ ಸ್ಥಾನಗಳನ್ನು ನೀಡಲು ಇಷ್ಟವಿಲ್ಲದಿದ್ದರೆ ಅವರು ಅದನ್ನು ಮೊದಲೇ ಹೇಳಬೇಕಿತ್ತು. ಇಂದು ಎಸ್‍ಪಿ ತನ್ನದೇ ಆದ ಸಂಸ್ಥೆ ಹೊಂದಿರುವ ಸ್ಥಾನಗಳಲ್ಲಿ ಮಾತ್ರ ಹೋರಾಡುತ್ತಿದೆ. ಈಗ ಮಧ್ಯಪ್ರದೇಶದ ನಂತರ ಇಂಡಿಯಾ ಮೈತ್ರಿ ಎಂಬುದು ನನಗೆ ತಿಳಿದಿದೆ. ರಾಷ್ಟ್ರಮಟ್ಟದ (ಸಂಸದೀಯ) ಚುನಾವಣೆಗೆ, ಕಾಂಗ್ರೆಸ್ ಇದೇ ರೀತಿ ವರ್ತಿಸಿದರೆ, ಅವರೊಂದಿಗೆ ನಿಲ್ಲುವವರು ಯಾರು? ನಾವು ನಮ್ಮ ಮನಸ್ಸಿನಲ್ಲಿ ಗೊಂದಲದಿಂದ ಬಿಜೆಪಿ ವಿರುದ್ಧ ಹೋರಾಡಿದರೆ, ನಾವು ಯಶಸ್ವಿಯಾಗುವುದಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿದರು.