Home Blog Page 1871

ಎಲ್‍ಎಸಿಯಲ್ಲಿ ಮೂಲಸೌಕರ್ಯ ನಿರ್ಮಾಣ ಹೆಚ್ಚಿಸಿದೆ ಚೀನಾ

ನವದೆಹಲಿ,ಅ.22- ಭಾರತದೊಂದಿಗಿನ ಗಡಿ ಉದ್ವಿಗ್ನತೆಯ ನಡುವೆಯೇ 2022 ರಲ್ಲಿ ಚೀನಾ ತನ್ನ ಮಿಲಿಟರಿ ಉಪಸ್ಥಿತಿ ಮತ್ತು ಮೂಲಸೌಕರ್ಯ ನಿರ್ಮಾಣವನ್ನು ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‍ಎಸಿ) ನಲ್ಲಿ ಹೆಚ್ಚಿಸಿದೆ ಎಂದು ಪೆಂಟಗನ್ ವರದಿ ತಿಳಿಸಿದೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ವರದಿ 2023 ರ ಪ್ರಕಾರ, ಭೂಗತ ಶೇಖರಣಾ ಸೌಲಭ್ಯಗಳು, ಹೊಸ ರಸ್ತೆಗಳು, ಡ್ಯುಯಲ್ -ಉದ್ದೇಶದ ವಿಮಾನ ನಿಲ್ದಾಣ ಮತ್ತು ಬಹು ಹೆಲಿಪ್ಯಾಡ್‍ಗಳು ಎಲ್‍ಎಸಿ ಉದ್ದಕ್ಕೂ ನಿರ್ಮಾಣ ಮಾಡಲಾಗುತ್ತಿದೆ.

ಮೇ 2020 ರ ಆರಂಭದಿಂದಲೂ, ಭಾರತ-ಚೀನಾ ಗಡಿಯಲ್ಲಿನ ನಿರಂತರ ಉದ್ವಿಗ್ನತೆಗಳು ವೆಸ್ಟರ್ನ್ ಥಿಯೇಟರ್ ಕಮಾಂಡ್‍ನ ಗಮನವನ್ನು ಪ್ರಾಬಲ್ಯಗೊಳಿಸಿವೆ. ಎಲ್‍ಎಸಿ ಉದ್ದಕ್ಕೂ ಗಡಿ ಗುರುತಿಸುವಿಕೆಗೆ ಸಂಬಂ„ಸಿದಂತೆ ಭಾರತ ಮತ್ತು ಪಿಆರ್‍ಸಿ ನಡುವಿನ ವಿಭಿನ್ನ ಗ್ರಹಿಕೆಗಳು, ಎರಡೂ ಕಡೆಗಳಲ್ಲಿ ಇತ್ತೀಚಿನ ಮೂಲಸೌಕರ್ಯ ನಿರ್ಮಾಣದೊಂದಿಗೆ ಸೇರಿ, ಬಹು ಘರ್ಷಣೆಗಳಿಗೆ ಕಾರಣವಾಗಿದೆ.

ಚೀನಾದ ವೆಸ್ಟರ್ನ್ ಥಿಯೇಟರ್ ಕಮಾಂಡ್ 20 ಭಾರತೀಯ ಸೈನಿಕರ ಪ್ರಾಣವನ್ನು ಬಲಿತೆಗೆದುಕೊಂಡ ಗಾಲ್ವಾನ್ ವ್ಯಾಲಿ ಘರ್ಷಣೆಗೆ ಪ್ರತಿಕ್ರಿಯೆಯಾಗಿ ಎಲ್‍ಎಸಿ ಉದ್ದಕ್ಕೂ ದೊಡ್ಡ ಪ್ರಮಾಣದ ಸೈನ್ಯ ಸಜ್ಜುಗೊಳಿಸುವಿಕೆ ಮತ್ತು ನಿಯೋಜನೆಯನ್ನು ಜಾರಿಗೆ ತರಲಾಗಿದೆ.
ಭಾರತ ಮತ್ತು ಚೀನಾ ನಡುವಿನ ಮಾತುಕತೆಗಳು ಗಡಿಯಲ್ಲಿ ಗ್ರಹಿಸಿದ ಅನುಕೂಲಗಳನ್ನು ಕಳೆದುಕೊಳ್ಳುವುದನ್ನು ಎರಡೂ ಕಡೆಯವರು ವಿರೋ„ಸಿದ್ದರಿಂದ ಕನಿಷ್ಠ ಪ್ರಗತಿಯನ್ನು ಸಾ„ಸಿದೆ ಎಂದು ವರದಿ ಒತ್ತಿಹೇಳುತ್ತದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-10-2023)

ಎಲ್‍ಎಸಿ ಉದ್ದಕ್ಕೂ ಬೀಜಿಂಗ್‍ನ ಮೂಲಸೌಕರ್ಯ ನಿರ್ಮಾಣವನ್ನು ಪಟ್ಟಿ ಮಾಡುತ್ತಾ, ವರದಿಯು ಹೇಳುತ್ತದೆ, 2022 ರಲ್ಲಿ, ಚೀನಾ ಗಡಿ ಉದ್ದಕ್ಕೂ ಮಿಲಿಟರಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರೆಸಿದೆ. ಈ ಸುಧಾರಣೆಗಳಲ್ಲಿ ಡೋಕ್ಲಾಮ್ ಬಳಿ ಭೂಗತ ಶೇಖರಣಾ ಸೌಲಭ್ಯಗಳು, ಎಲ್‍ಎಸಿ ಯ ಎಲ್ಲಾ ಮೂರು ವಲಯಗಳಲ್ಲಿ ಹೊಸ ರಸ್ತೆಗಳು, ವಿವಾದಿತ ಗ್ರಾಮಗಳು ಸೇರಿವೆ. ನೆರೆಯ ಭೂತಾನ್‍ನ ಪ್ರದೇಶಗಳು, ಪ್ಯಾಂಗೊಂಗ್ ಸರೋವರದ ಮೇಲಿನ ಎರಡನೇ ಸೇತುವೆ, ಕೇಂದ್ರ ವಲಯದ ಬಳಿ ದ್ವಿ-ಉದ್ದೇಶದ ವಿಮಾನ ನಿಲ್ದಾಣ ಮತ್ತು ಬಹು ಹೆಲಿಪ್ಯಾಡ್‍ಗಳು ಸೇರಿವೆ.

ಈ ವರ್ಷದ ಜೂನ್‍ನಲ್ಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಮಸ್ಯೆಗಳನ್ನು ಪರಿಹರಿಸಲು ಭಾರತವು ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಚೀನಾದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದ್ದರು. ಭಾರತದ ಗಡಿಗಳ ಪಾವಿತ್ರ್ಯತೆಯನ್ನು ಉಲ್ಲಂಸಲು ಸರ್ಕಾರ ಎಂದಿಗೂ ಬಿಡುವುದಿಲ್ಲ ಎಂದು ಅವರು ಹೇಳಿದ್ದರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-10-2023)

ನಿತ್ಯ ನೀತಿ : ಬದುಕುವ ಆಸೆ ಇದ್ದರೆ ನಿನ್ನ ಶತ್ರುಗಳ ಕಣ್ಣೆದುರಲ್ಲೇ ಬದುಕು. ಅವರು ನಿನ್ನ ಎದುರು ಸುಳಿದಾಗಲೆಲ್ಲ ನಿನ್ನಲ್ಲಿ ಬದುಕುವ ಛಲ ಎಚ್ಚೆತ್ತುಕೊಳ್ಳುತ್ತದೆ.

ಪಂಚಾಂಗ ಭಾನುವಾರ 22-10-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಉತ್ತರಾಷಾಢ / ಯೋಗ: ಧೃತಿ / ಕರಣ: ವಿಷ್ಟಿ

ಸೂರ್ಯೋದಯ : ಬೆ.06.11
ಸೂರ್ಯಾಸ್ತ : 05.57
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ರಾಶಿ ಭವಿಷ್ಯ
ಮೇಷ
: ಮಾನಸಿಕ ಯಾತನೆಗೆ ಒಳಗಾಗುವ ಸಾಧ್ಯತೆ ಗಳು ಹೆಚ್ಚಾಗಿವೆ. ಸದಾ ದೇವರ ಧ್ಯಾನ ಮಾಡಿ.
ವೃಷಭ: ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಪ್ರಯತ್ನಿಸುತ್ತಾ ವಿದೇಶಕ್ಕೆ ತೆರಳಬೇಕು ಎಂದಿದ್ದಲ್ಲಿ ಮಧ್ಯವರ್ತಿಗಳಿಂದ ಹುಷಾರಾಗಿರಬೇಕು.
ಮಿಥುನ: ವೃತ್ತಿ ಜೀವನದಲ್ಲಿ ಶತ್ರುಗಳಿಂದ ದೂರವಿರಬೇಕಾಗುತ್ತದೆ. ಎಚ್ಚರಿಕೆಯಿಂದಿರಿ.

ಕಟಕ: ಯಾರದ್ದೋ ಮಾತು ಕೇಳಿ ನಿಮ್ಮ ಅಮೂಲ್ಯ ಸಮಯ, ಹಣ ವ್ಯರ್ಥ ಮಾಡಿಕೊಳ್ಳದಿರಿ.
ಸಿಂಹ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿವೆ.
ಕನ್ಯಾ: ದೂರ ಪ್ರಯಾಣ ಮಾಡುವುದರಿಂದ ನಷ್ಟವಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ತುಲಾ: ಷೇರು ಮಾರುಕಟ್ಟೆ ಯಲ್ಲಿ ಹಣ ಹೂಡಿಕೆ ಮಾಡುವವರು ಎಚ್ಚರಿಕೆಯಿಂದಿರಿ.
ವೃಶ್ಚಿಕ: ನೀವು ಮಾತನಾಡುವ ರೀತಿಯಿಂದಾಗಿ ಬೇರೆಯವರಿಗೆ ನೋವಾಗಬಹುದು.
ಧನುಸ್ಸು: ಯಾವುದೇ ಕೆಲಸ ಮಾಡುವಾಗ ಹಿರಿಯರ ಸಲಹೆ-ಸೂಚನೆಗಳನ್ನು ಪಡೆಯುವುದು ಒಳಿತು.

ಮಕರ: ಸಂಗಾತಿ ಮೇಲೆ ಒತ್ತಡ ಹಾಕುವುದರಿಂದ ಅಸಮಾಧಾನವಾಗುವ ಸಾಧ್ಯತೆ ಇದೆ.
ಕುಂಭ: ದೂರದ ಬಂಧುಗಳ ಆಗಮನವಾಗಲಿದೆ. ನೆರೆಹೊರೆಯವರು ನಿಮ್ಮ ನೆರವಿಗೆ ಬರುವರು.
ಮೀನ: ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

ಪರಶುರಾಮ ಪ್ರತಿಮೆ ಹುಡುಕಿಕೊಟ್ಟವರಿಗೆ ಬಹುಮಾನ : ಕಾಂಗ್ರೆಸ್

ಬೆಂಗಳೂರು,ಅ.21-ಬಿಜೆಪಿ ಸರ್ಕಾರ ಕಾರ್ಕಳದಲ್ಲಿ ನಿರ್ಮಿಸಿದ್ದ ಪರಶುರಾಮನ ಕಂಚಿನ ಪ್ರತಿಮೆಯನ್ನು ಹುಡುಕಿಕೊಟ್ಟವರಿಗೆ ಬಹುಮಾನ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದೆ. ಕಾಂಗ್ರೆಸ್ ವಿರುದ್ಧ ನಿರಂತರವಾಗಿ ಕೇಳಿಬರುತ್ತಿದ್ದ ಆರೋಪಗಳಿಗೆ ತಿರುಗೇಟು ನೀಡಲಾಗುತ್ತಿದ್ದು, ಬಿಜೆಪಿಯ ಭ್ರಷ್ಟಾಚಾರ ಪರಶುರಾಮನನ್ನೂ ಬಿಡಲಿಲ್ಲ, ಧರ್ಮ ದ್ರೋಹಿ ಬಿಜೆಪಿ ಸರ್ಕಾರ 14 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಪರಶುರಾಮನ ಮೂರ್ತಿ ಕಾಣೆಯಾಗಿದೆ! ಕಂಚಿನ ಪ್ರತಿಮೆ ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು. ಪೈಬರ್ ಪ್ರತಿಮೆ ತೋರಿಸಿ ಕಂಚಿನ ಪ್ರತಿಮೆ ಎಂದು ಒಪ್ಪಲಾಗದು ಎಂದು ತಿರುಗೇಟು ನೀಡಿದೆ.

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಆಖಿಲೇಶ್ ಯಾದವ್

ಭ್ರಷ್ಟ ಜನತಾ ಪಾರ್ಟಿಯ ಹಿಂದುತ್ವ ಜಪದ ಹಿಂದಿರುವುದು ಭ್ರಷ್ಟಾಚಾರದ ಉದ್ದೇಶವೇ ಹೊರತು ಅಸಲಿ ದೈವಭಕ್ತಿಯಲ್ಲ. ಪರಶುರಾಮನ ಮೂರ್ತಿ ಕಂಚಿನದ್ದು ಎಂದು ಸರ್ಕಾರದ 14 ಕೋಟಿ ಹಣಕ್ಕೆ ಬಿಜೆಪಿ ಉಂಡೆ ನಾಮ ತಿಕ್ಕಿದೆ. ಬಿಜೆಪಿಯ ನಕಲಿ ಹಿಂದುತ್ವದ ಅಸಲಿತನ ಬಯಲಾಗಿದೆ, ದೇವರು, ಪುರಾಣ ಪುರುಷರನ್ನೂ ಬಿಡದೆ ಲೂಟಿ ಹೊಡೆಯುವಷ್ಟು ಬಿಜೆಪಿ ಬರಗೆಟ್ಟ ಪರಿಸ್ಥಿತಿ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿಯ ಈ ಮಹಾಮೋಸದ ಹಗರಣವನ್ನು ತನಿಖೆಗೆ ವಹಿಸಿ, ತಿಂದು ತೆಗಿದ ಜನರ ಹಣವನ್ನು ಹೊರಗೆ ಕಕ್ಕಿಸುವುದು ನಿಶ್ಚಿತ. ಸತ್ಯ ಹರಿಶ್ಚಂದ್ರದ ವಂಶಸ್ಥನಂತೆ ಮಾತನಾಡುವ ಶಾಸಕ ಸುನೀಲ್‍ಕುಮಾರ್ ಅವರೇ ಫೈಬರ್‍ಗೆ ಬಂಗಾರದ ಬಣ್ಣ ಬಳಿದು ಕಂಚು ಎಂದು ಇಡೀ ರಾಜ್ಯಕ್ಕೆ ಮಂಕುಬೂದಿ ಎರಚಿದ್ದೀರಿ, ಈಗ ನಿಮ್ಮ ಹಾಗೂ ನಿಮ್ಮ ಪ್ರತಿಮೆಯ ಬಣ್ಣ ಬಯಲಾಗಿದೆ. ಲೂಟಿ ಮಾಡಿ ತಿಂದಿದ್ದನ್ನು ಹೊರಗೆ ಕಕ್ಕಲು ಸಿದ್ದರಾಗಿರಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ.

ಕಾರ್ಯಕರ್ತರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ : ಡಿಕೆಶಿ

ಬೆಂಗಳೂರು,ಅ.21- ಪಕ್ಷವನ್ನು ನಾನೊಬ್ಬನೇ ಅಧಿಕಾರಕ್ಕೆ ತಂದಿರುವುದಾಗಿ ಯಾವತ್ತೂ ಹೇಳಿಲ್ಲ, ಹೇಳುವುದೂ ಇಲ್ಲ. ಕಾರ್ಯಕರ್ತರು ಹಾಗೂ ಜನ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‍ ತಿಳಿಸಿದರು. ಶಿವಕುಮಾರ್ ಒಬ್ಬರೇ ಪಕ್ಷವನ್ನು ಅಧಿಕಾರಕ್ಕೆ ತಂದಿಲ್ಲ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಮಾಧ್ಯಮಗಳು ನಗರದ ಗಾಂಧಿಭವನದ ಬಳಿ ಕೇಳಿದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು.

ಪಕ್ಷದ ಕಾರ್ಯಕರ್ತರು, ನಾವು, ನೀವು ಸೇರಿ, ರಾಜ್ಯದ ಜನರು, ಪ್ರತಿ ಹಳ್ಳಿಯಲ್ಲಿರುವವರು ಬಡಿದಾಡಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಡಿ.ಕೆ.ಶಿವಕುಮಾರ್ ಒಬ್ಬನೇ ಅಧಿಕಾರಕ್ಕೆ ತಂದಿದ್ದಾನೆ ಎಂದು ಇಂದು, ನಾಳೆ, ಎಂದಿಗೂ, ಯಾವತ್ತಿಗೂ ಹೇಳುವುದಿಲ್ಲ ಎಂದರು.

ಯಶಸ್ವಿಯಾಗಿ ಗಗನಯಾನ ಪರೀಕ್ಷಾ ಹಾರಾಟ ನಡೆಸಿದ ಇಸ್ರೋ

ಎರಡೂವರೆ ವರ್ಷಗಳ ನಂತರ ಸಚಿವ ಸಂಪುಟ ಪುನಾರಚನೆ ಆಗುತ್ತದೆ ಎಂದು ಚೀಫ್ ವಿಪ್ ಅಶೋಕ್ ಪಟ್ಟಣ ಹೇಳಿದ್ದಾರೆ ಎಂದು ಕೇಳಿದಾಗ, ಪಕ್ಷದಲ್ಲಿ ಆಂತರಿಕವಾಗಿ ಒಂದಷ್ಟು ವಿಚಾರಗಳು ಚರ್ಚೆಯಾಗಿರುತ್ತವೆ. ಅದನ್ನು ನಾನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಅದನ್ನು ಚರ್ಚೆ ಮಾಡಲು ನಾನು ಹೋಗುವುದಿಲ್ಲ, ನನಗೆ ಇರುವ ಮಾಹಿತಿ ಪ್ರಕಾರ ಆ ರೀತಿ ಚರ್ಚೆ ನಡೆದಿಲ್ಲ ಎಂದು ಹೇಳಿದರು.

ಬಿಟ್ ಕಾಯಿನ್ ನೆಪದಲ್ಲಿ ಕೋಟ್ಯಾಂತರ ರೂ. ದೋಖಾ : ಅಪ್ಪ-ಮಗ ಸೇರಿ ಮೂವರ ಬಂಧನ

ಬೆಂಗಳೂರು, ಅ.21- ಬಿಟ್ ಕಾಯಿನ್ ನೆಪದಲ್ಲಿ ಹಣ ದ್ವಿಗುಣ ಮಾಡಿಕೊಡುತ್ತೇವೆಂದು ಜನರಿಂದ ಕೋಟ್ಯಾಂತರ ಹಣ ಪಡೆದು ಮೋಸ ಮಾಡುತ್ತಿದ್ದ ಅಪ್ಪ- ಮಗ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸತೀಶ್ ಹಾಗೂ ಮಗ ಶ್ರೀಕಾಂತ್ ಮತ್ತು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ದೀಪಕ್ ಬಂಧಿತ ವಂಚಕರು.

ಆರೋಪಿಗಳಿಂದ ಆರು ಕಂಪ್ಯೂಟರ್‍ಗಳು, ನಾಲ್ಕು ಮೊಬೈಲ್, ಎರಡು ಲ್ಯಾಪ್‍ಟಾಪ್ ಹಾಗೂ ಇನ್ನಿತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಗಾಂ ಬಜಾರ್, ಅವೆನ್ಯೂ ರಸ್ತೆ, ಬಳೇಪೇಟೆ ಹಾಗೂ ಬಸವನಗುಡಿಯಲ್ಲಿರುವ ಸೊಸೈಟಿಯಲ್ಲಿ ಸತೀಶ್‍ದಾರರಾಗಿದ್ದಾರೆ.

ಬಿಟ್ ಕಾಯಿನ್ ನೆಪದಲ್ಲಿ ಸಾರ್ವಜನಿಕರಿಗೆ ಆಮಿಷವೊಡ್ಡಿ ನಿಮ್ಮ ಹಣ ಡಬಲ್ ಮಾಡುತ್ತೇವೆಂದು ಆಸೆ ತೋರಿಸಿ 5.50 ಕೋಟಿ ಹಣ ಪಡೆದು ವಂಚಿಸಿದ್ದಾರೆಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. 2020-22ರಲ್ಲಿ ಜಿಜಿಗೇಮಿಂಗ್ ಆ್ಯಪ್ ತರುತ್ತೇವೆಂದು ನಂಬಿಸಿದ್ದ ವಂಚಕರು, ಈ ಆ್ಯಪ್ ಮೂಲಕ ಜನರಿಗೆ ಬಿಟ್ ಕಾಯಿನ್ ಆಸೆ ತೋರಿಸಿ ಜನರಿಗೆ ದಿನಕ್ಕೆ 10 ಸಾವಿರ ರೂ. ಹೂಡಿಕೆ ಮಾಡಿದರೆ ತಿಂಗಳಲ್ಲಿ 45 ಸಾವಿರ ಲಾಭ ಬರುತ್ತದೆ ಎಂದು ಹೇಳಿ ನಂಬಿಸುತ್ತಿದ್ದರು.

ಛತ್ತೀಸ್‍ಗಢದಲ್ಲಿ ಇಬ್ಬರು ನಕ್ಸಲೀಯರ ಹತ್ಯೆ

ಸಾರ್ವಜನಿಕರ ನಂಬಿಕೆ ಗಳಿಸಲು ಪ್ರತಿಷ್ಠಿತ ಹೊಟೇಲ್‍ಗೆ ಶ್ರೀಕಾಂತ್ ಹೂಡಿಕೆದಾರರನ್ನು ಕರೆಸಿ ಮೋಸ ಮಾಡುತ್ತಿದ್ದ ಆರೋಪ ಸಹ ಕೇಳಿ ಬಂದಿದೆ. ಇವರಿಂದ ಮೋಸಕ್ಕೊಳಗಾಗಿ ದ್ದವರು ಹಾಗೂ ಬ್ಯಾಂಕ್ ವಂಚನೆ ಸಂಬಂಧ ವಂಚನೆಗೊಳಗಾದವರು ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ತನಿಖೆ ಕೈಗೊಂಡು ಅಪ್ಪ- ಮಗ ಸೇರಿದಂತೆ ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪಾಕ್‍ಗೆ ಕ್ಷಿಪಣಿ ತಯಾರಿಕಾ ವಸ್ತು ಪೂರೈಸಿದ ಚೀನಾ ಮೂಲದ ಸಂಸ್ಥೆಗಳ ವಿರುದ್ಧ ನಿರ್ಬಂಧ

ವಾಷಿಂಗ್ಟನ್,ಅ.21- ಪಾಕಿಸ್ತಾನದ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಕ್ಕೆ ಕ್ಷಿಪಣಿ ಅನ್ವಯವಾಗುವ ವಸ್ತುಗಳು ಮತ್ತು ತಂತ್ರಜ್ಞಾನವನ್ನು ಪೂರೈಸಿದ್ದಕ್ಕಾಗಿ ಚೀನಾ ಮೂಲದ ಮೂರು ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧಗಳನ್ನು ವಿಧಿಸಿದೆ. ಜಾಗತಿಕ ಪ್ರಸರಣ ರಹಿತ ಆಡಳಿತದ ಭಾಗವಾಗಿ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ ಎಂದು ಯುಎಸ್ ಸ್ಟೇಟ್ ಡಿಪಾಟ್ರ್ಮೆಂಟ್ ಹೇಳಿದೆ.

ಇಂದು, ನಾವು ಕಾರ್ಯನಿರ್ವಾಹಕ ಆದೇಶ 13382 ರ ಪ್ರಕಾರ ಮೂರು ಘಟಕಗಳನ್ನು ಗೊತ್ತುಪಡಿಸುತ್ತಿದ್ದೇವೆ, ಇದು ಸಾಮೂಹಿಕ ವಿನಾಶದ ಶಸಾಸಗಳ ಪ್ರಸರಣಕಾರರನ್ನು ಮತ್ತು ಅವುಗಳ ವಿತರಣಾ ವಿಧಾನಗಳನ್ನು ಗುರಿಯಾಗಿಸುತ್ತದೆ. ಪೀಪಲ್ಸ ರಿಪಬ್ಲಿಕ್ ಆಫ್ ಚೀನಾ ಮೂಲದ ಈ ಮೂರು ಘಟಕಗಳು ಕ್ಷಿಪಣಿಯನ್ನು ಪೂರೈಸಲು ಕೆಲಸ ಮಾಡಿದೆ ಎಂದು ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಯಶಸ್ವಿಯಾಗಿ ಗಗನಯಾನ ಪರೀಕ್ಷಾ ಹಾರಾಟ ನಡೆಸಿದ ಇಸ್ರೋ

ಪಾಕಿಸ್ತಾನದ ಎಲ್ಲಾ ಹವಾಮಾನದ ಮಿತ್ರರಾಷ್ಟ್ರವಾದ ಚೀನಾ, ಇಸ್ಲಾಮಾಬಾದ್‍ನ ಮಿಲಿಟರಿ ಆಧುನೀಕರಣ ಕಾರ್ಯಕ್ರಮಕ್ಕೆ ಶಸಾಸ ಮತ್ತು ರಕ್ಷಣಾ ಸಾಧನಗಳ ಮುಖ್ಯ ಪೂರೈಕೆದಾರ ರಾಷ್ಟ್ರವಾಗಿದೆ. ಮೂರು ಕಂಪನಿಗಳೆಂದರೆ ಜನರಲ್ ಟೆಕ್ನಾಲಜಿ ಲಿಮಿಟೆಡ್, ಬೀಜಿಂಗ್ ಲುವೊ ಲುವೊ ಟೆಕ್ನಾಲಜಿ ಡೆವಲಪ್‍ಮೆಂಟ್ ಕಂ ಲಿಮಿಟೆಡ್ ಮತ್ತು ಚಾಂಗ್‍ಝೌ ಉಟೆಕ್ ಕಾಂಪೋಸಿಟ್ ಕಂಪನಿ ಲಿಮಿಟೆಡ್ ಸಂಸ್ಥೆಗಳಾಗಿವೆ.

ಸಾಮೂಹಿಕ ವಿನಾಶದ ಶಸಾಸಗಳ ಪ್ರಸರಣ ಅಥವಾ ಅವುಗಳ ವಿತರಣಾ ವಿಧಾನಗಳಿಗೆ (ಅಂತಹ ಶಸಾಸಗಳನ್ನು ತಲುಪಿಸುವ ಸಾಮಥ್ರ್ಯವಿರುವ ಕ್ಷಿಪಣಿಗಳನ್ನು ಒಳಗೊಂಡಂತೆ) ಭೌತಿಕವಾಗಿ ಕೊಡುಗೆ ನೀಡಿದ ಚಟುವಟಿಕೆಗಳು ಅಥವಾ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಅಥವಾ ತೊಡಗಿಸಿಕೊಳ್ಳಲು ಪ್ರಯತ್ನಿಸಿದ್ದಕ್ಕಾಗಿ ಅವುಗಳನ್ನು ಮಂಜೂರು ಮಾಡಲಾಗಿದೆ. ), ಪಾಕಿಸ್ತಾನದಿಂದ ಅಂತಹ ವಸ್ತುಗಳನ್ನು ತಯಾರಿಸಲು, ಸ್ವಾೀಧಿನಪಡಿಸಿಕೊಳ್ಳಲು, ಸ್ವಾೀಧಿನಪಡಿಸಿಕೊಳ್ಳಲು, ಅಭಿವೃದ್ಧಿಪಡಿಸಲು, ಸಾಗಿಸಲು, ವರ್ಗಾಯಿಸಲು ಅಥವಾ ಬಳಸಲು ಯಾವುದೇ ಪ್ರಯತ್ನಗಳು ಸೇರಿವೆ.

ಇಸ್ರೇಲ್ ಪೊಲೀಸರಿಗೆ ಸಮವಸ್ತ್ರ ಸರಬರಾಜು ಸ್ಥಗಿತಗೊಳಿಸಿದ ಕೇರಳ

ಜನರಲ್ ಟೆಕ್ನಾಲಜಿ ಲಿಮಿಟೆಡ್ ಬ್ರೇಜಿಂಗ್ ವಸ್ತುಗಳನ್ನು ಪೂರೈಸಲು ಕೆಲಸ ಮಾಡಿದೆ, ಇದನ್ನು ಬ್ಯಾಲಿಸ್ಟಿಕ್ ಕ್ಷಿಪಣಿ ರಾಕೆಟ್ ಎಂಜಿನ್‍ಗಳಲ್ಲಿ ಘಟಕಗಳನ್ನು ಸೇರಲು ಮತ್ತು ದಹನ ಕೊಠಡಿಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.

ಸಿದ್ದರಾಮಯ್ಯನವರು ಪಾಕಿಸ್ತಾನ ಟೀಮ್ ಬೆಂಬಲಿಸಲು ಹೋಗಿದ್ರಾ..? : ಎಚ್‍ಡಿಕೆ ವ್ಯಂಗ್ಯ

ಬೆಂಗಳೂರು,ಅ.21- ರಾಜ್ಯದಲ್ಲಿ ಬರ ಪರಿಸ್ಥಿತಿ, ವಿದ್ಯುತ್ ಅಭಾವ ಸೇರಿದಂತೆ ಸಾಕಷ್ಟು ಸಮಸ್ಯೆಗಳಿದ್ದರೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಕಾರ್ಯದರ್ಶಿಗಳು ನಿನ್ನೆ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು. ಭಾರತ- ಪಾಕಿಸ್ತಾನ ನೋಡಲಿ ಎನ್ನಬಹುದಿತ್ತು. ಆದರೆ ಪಂದ್ಯವಿದ್ದದು ಪಾಕಿಸ್ತಾನ, ಆಸ್ಟ್ರೇಲಿಯ ನಡುವೆ. ಯಾರಿಗೆ ಬೆಂಬಲ ವ್ಯಕ್ತಪಡಿಸಿ ಹೋಗಿದ್ದರು ಎಂದು ಪ್ರಶ್ನಿಸಿದರು. ತಾವು ಕ್ರೀಡೆಗಳ ವಿರೋಯಲ್ಲ. ನಮ್ಮ ಬೆಂಬಲವೂ ಇದೆ. ಆದರೆ ಬರಗಾಲ, ವಿದ್ಯುತ್ ಅಭಾವದ ಸಂದರ್ಭದಲ್ಲಿ ಸಮಯ ಅವಕಾಶ ಮಾಡಿಕೊಂಡು 8 ಗಂಟೆ ಪಂದ್ಯ ವೀಕ್ಷಿಸಿದ್ದಾರೆ ಎಂದರು.

ಟೀಕೆ ಮಾಡುವುದಿಲ್ಲ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ದೊಡ್ಡ ಹಡಗಿಗೆ ಯಾರು ಯಾರನ್ನು ತುಂಬಿಸಿಕೊಳ್ಳುತ್ತಾರೋ ತುಂಬಿಸಿಕೊಳ್ಳಲಿ ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ತಿಳಿಸಿದರು. ನಾವು ರಾಜ್ಯದ ಜನತೆಯ ಸಮಸ್ಯೆಗಳ ಪರಿಹಾರದ ಬಗ್ಗೆ ಗಮನಹರಿಸುತ್ತೇವೆ. ಮುಂದೆ ಏನಾಗುತ್ತೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ಯಶಸ್ವಿಯಾಗಿ ಗಗನಯಾನ ಪರೀಕ್ಷಾ ಹಾರಾಟ ನಡೆಸಿದ ಇಸ್ರೋ

ಬೇಗ ಬಿಚ್ಚಡಲಿ:
ಉಪಮುಖ್ಯಮಂತ್ರಿಗಳು ಯಾರ್ಯಾರದೋ ಏನೇನೋ ಬಿಚ್ಚಿಡುವುದಾಗಿ ಹೇಳಿದ್ದಾರೆ . ಆದಷ್ಟು ಬೇಗ ಬಿಚ್ಚಿಡಲಿ. ನಮಗೆ ಭಯವಿಲ್ಲ. ಬಿಚ್ಚಿಡುವ ಮುನ್ನ ಇನ್ನೇನಾದರೂ ಆದರೆ ಏನು ಮಾಡುವುದು? ಬೇಗ ಬಿಚ್ಚಿಡಲಿ ಎಂದು ಮಾರ್ಮಿಕವಾಗಿ ಹೇಳಿದರು. ನಾನು ನಕಲಿ ಸ್ವಾಮಿ ಅಲ್ಲ. ಮಾಹಿತಿ ಇಲ್ಲದೆ ಇಂಧನ ಇಲಾಖೆ ವಿಚಾರ ಪ್ರಸ್ತಾಪಿಸಿಲ್ಲ. ಅಂಕಿ ಅಂಶಗಳ ಆಧಾರದ ಮೇಲೆ ಪ್ರಸ್ತಾಪಿಸಿದ್ದೇನೆ.

ಬಟ್ಟೆ ಹರಿದುಕೊಂಡು ಓಡಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಮುಂದೆ ಯಾರು ಆ ರೀತಿ ಓಡಾಡುತ್ತಾರೆ ಎಂಬುದನ್ನು ಕಾದು ನೋಡೋಣ ಎಂದರು. ಮಾಜಿ ಸಚಿವ ಬಂಡೆಪ್ಪ ಕಾಶಂಪುರ್, ಮಾಜಿ ಶಾಸಕರಾದ ಸುರೇಶ್ ಗೌಡ, ಕೋನರೆಡ್ಡಿ ತೂಪಲ್ಲಿ, ರಮೇಶ್ ಗೌಡ ಹಾಗೂ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಜೆಡಿಎಸ್ ಕಚೇರಿ ಜೆಪಿಭವನದಲ್ಲಿ ಹಮ್ಮಿಕೊಂಡಿದ್ದ ಆಯ್ದ ಪೂಜೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಭಾಗಿಯಾಗಿದ್ದರು.

ಕಲ್ಯಾಣ ಕರ್ನಾಟಕ ಭಾಗದ ಖಾಲಿ ಹುದ್ದೆಗಳ ಭರ್ತಿಗೆ ಸಿಎಂಗೆ ಖರ್ಗೆ ಪತ್ರ

ಬೆಂಗಳೂರು,ಅ.21- ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನೇರ ನೇಮಕಾತಿ ಹಾಗೂ ಬಡ್ತಿ ಮೂಲಕ ತುಂಬ ಬೇಕಾಗಿರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಕೋರಿ ಎಲ್ಲಾ ಸಚಿವರಿಗೆ ಹಾಗೂ ಮುಖ್ಯಮಂತ್ರಿಯವರು ಹೊಂದಿರುವ ಖಾತೆಗಳಿಗೆ ಸಂಬಂಧಿಸಿದಂತೆ ಸಚಿವಾಲಯ ಮುಖ್ಯಸ್ಥರಿಗೆ ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷರೂ ಆದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ.

ಭಾರತ ಸಂವಿಧಾನ ಅನುಚ್ಚೇದ 371(ಜೆ) ಅಡಿ ಹೊರಡಿಸಲಾಗಿರುವ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪರಾಮರ್ಶಿಸುವ ಕುರಿತು ರಚಿಸಲಾಗಿರುವ ಉಪ ಸಮಿತಿ ವತಿಯಿಂದ ಸಚಿವರ ಗಮನ ಸೆಳೆಯಲಾಗಿದೆ. 2023ರ ಆಗಸ್ಟ್ 17ರಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾದ ತೀರ್ಮಾನದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಸ್ಥಳೀಯ ವೃಂದದಲ್ಲಿ ಮೀಸಲಿರಿಸಿರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಛತ್ತೀಸ್‍ಗಢದಲ್ಲಿ ಇಬ್ಬರು ನಕ್ಸಲೀಯರ ಹತ್ಯೆ

ಭಾರತ ಸಂವಿಧಾನ ಅನುಚ್ಛೇದ 371 (ಜೆ) ಅಡಿಯಲ್ಲಿ ಇಲಾಖಾವಾರು ಭರ್ತಿ ಮಾಡಲು ಬಾಕಿ ಇರುವ ನೇರ ನೇಮಕಾತಿ ಹಾಗೂ ಮುಂಬಡ್ತಿಯಲ್ಲಿ ಹುದ್ದೆಗಳ ವಿವರಗಳನ್ನು ಪತ್ರದ ಜೊತೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ನೇರ ನೇಮಕಾತಿ ಮೂಲಕ 28,023 ಹುದ್ದೆಗಳನ್ನು ಭರ್ತಿ ಮಾಡಬೇಕಿದ್ದು, ಇವಗಳಲ್ಲಿ 12,945 ಹುದ್ದೆಗಳನ್ನು ಭರ್ತಿ ಮಾಡುವ ಕ್ರಮ ಲೋಕಸೇವಾ ಆಯೋಗ ಹಾಗೂ ಇನ್ನಿತರ ಸಂಸ್ಥೆಗಳ ಮೂಲಕ ನಡೆಯುತ್ತಿದೆ. ಉಳಿದಂತೆ 15,078 ಹುದ್ದೆಗಳು ಖಾಲಿ ಇದ್ದು ಭರ್ತಿ ಪ್ರಕ್ರಿಯೆ ಆರಂಭಗೊಳ್ಳಬೇಕಿದೆ. ಇವುಗಳಲ್ಲಿ ಎ,ಬಿ,ಸಿ ಹಾಗೂ ಡಿ ವೃಂದದ ಹುದ್ದೆಗಳು ಸೇರಿವೆ ಎಂದು ವಿವರಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ 9,905 ವಿವಿಧ ಹುದ್ದೆಗಳನ್ನು ಬಡ್ತಿ ಮೂಲಕ ತುಂಬ ಬೇಕಿದ್ದು, ಈ ಹುದ್ದೆಗಳನ್ನು ಬಡ್ತಿ ಮೂಲಕ ತುಂಬಲು ಕ್ರಮ ಕೈಗೊಳ್ಳುವಂತೆಯೂ ಸಚಿವ ಪ್ರಿಯಾಂಕ್ ಖರ್ಗೆ
ಸಂಪುಟದ ಎಲ್ಲಾ ಸಚಿವರಿಗೂ ಬರೆದಿರುವ ಪತ್ರದಲ್ಲಿ ಕೋರಿದ್ದಾರಲ್ಲದೆ, ಇಲಾಖೆಯ ಅಧಿಕಾರಿಗಳ ಸಭೆ ಕರೆದು ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸಲು ಸಹಕಾರ ನೀಡಬೇಕೆಂದೂ ತಿಳಿಸಿದ್ದಾರೆ.

ವಿಧಾನಸೌಧ-ವಿಕಾಸಸೌಧದಲ್ಲಿ ಆಯುಧ ಪೂಜೆಯ ಸಂಭ್ರಮ

ಬೆಂಗಳೂರು,ಅ.21- ಆಡಳಿತದ ಶಕ್ತಿ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡ ಸೇರಿದಂತೆ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಇಂದೇ ಆಯುಧ ಪೂಜೆಯನ್ನು ನೆರವೇರಿಸಲಾಯಿತು.

ಸರ್ಕಾರಿ ಕಚೇರಿಗಳಲ್ಲಿ ಇಂದು ಬೆಳಗ್ಗೆಯಿಂದಲೇ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿತ್ತು. ಸಿಬ್ಬಂದಿಗಳು ಪೂಜಾ ಕೈಂಕರ್ಯದಲ್ಲಿ ತೊಡಗಿದ್ದರು. ತಮ್ಮ ತಮ್ಮ ಕಚೇರಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಪೂಜೆ ನೆರವೇರಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ಯಶಸ್ವಿಯಾಗಿ ಗಗನಯಾನ ಪರೀಕ್ಷಾ ಹಾರಾಟ ನಡೆಸಿದ ಇಸ್ರೋ

ನಿನ್ನೆಯಿಂದಲೇ ಕಚೇರಿಗಳನ್ನು ಶುಚಿಗೊಳಿಸಿ ಸಿಂಗರಿಸುವ ಕಾರ್ಯದಲ್ಲಿ ಸಿಬ್ಬಂದಿಗಳು ತೊಡಗಿದ್ದರು. ಸಚಿವರ ಕಚೇರಿಗಳು, ವಾಹನಗಳು ಸೇರಿದಂತೆ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿನ ಕೆಲವು ಕಚೇರಿಗಳಲ್ಲಿ ನಿನ್ನೆಯೇ ಆಯುಧ ಪೂಜೆ ನೆರವೇರಿಸಲಾಗಿತ್ತು.

ಸೋಮವಾರ ಆಯುಧ ಪೂಜೆ ಮಾಡಬೇಕಿದೆ. ಆದರೆ ನಾಳೆ ಭಾನುವಾರ ಹಾಗೂ ಸೋಮವಾರ ಆಯುಧ ಪೂಜೆ ರಜೆ ಇರುವುದರಿಂದ ಇಂದೇ ಆಡಳಿತದ ಶಕ್ತಿ ಕೇಂದ್ರಗಳಲ್ಲಿ ಪೂಜೆಗಳನ್ನು ನೆರವೇರಿಸಿದ್ದು ಕಂಡುಬಂದಿತು.

ಡಿವಿಎಸ್‍ಗೆ ಹೈಕಮಾಂಡ್ ಬುಲಾವ್

ಬೆಂಗಳೂರು,ಅ.21- ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಸೋಲಿನ ರುಚಿ ತೋರಿಸಲು ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಕಮಲ-ದಳ ನಾಯಕರ ಮೈತ್ರಿಗೆ ವಿರೋಧಿಸಿ ಸಂಸದ ಡಿ.ವಿ.ಸದಾನಂದಗೌಡ ಹೇಳಿಕೆ ನೀಡಿದ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ.

ಇದೇ ತಿಂಗಳ 25ರಂದು ದೆಹಲಿಗೆ ಬಂದು ಭೇಟಿ ಮಾಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚಿಸಿದ್ದಾರೆಂದು ತಿಳಿದು ಬಂದಿದೆ. ಹೀಗಾಗಿ ದೆಹಲಿಗೆ ತೆರಳುವ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಬಿಜೆಪಿ ಸೋಲು ಕಂಡಿದೆ. ಈ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಠಕ್ಕರ್ ನೀಡಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದ ಡಿ.ವಿ.ಸದಾನಂದ ಗೌಡರು, ಹೈಕಮಾಂಡ್ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದರು.

ಛತ್ತೀಸ್‍ಗಢದಲ್ಲಿ ಇಬ್ಬರು ನಕ್ಸಲೀಯರ ಹತ್ಯೆ

2024ರ ಲೋಕಸಭಾ ಚುನಾವಣೆ ಹಿನ್ನೆಲೆ ಜೆಡಿಎಸ್ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಮ್ಮ ಕರ್ನಾಟಕದ ಯಾವುದೇ ಬಿಜೆಪಿ ನಾಯಕರ ಜೊತೆಗೂ ವರಿಷ್ಠರು ಚರ್ಚೆ ಮಾಡಿಲ್ಲ. ನಮ್ಮನ್ನು ಹೊರಗಿಟ್ಟೇ ಅವರೇ ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ತೀರ್ಮಾನ ಮಾಡಿದ್ದಾರೆ ಎಂದು ಅಸಮಾಧಾನಗೊಂಡಿದ್ದರು.

ಈಗಾಗಲೇ ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಸದಾನಂದಗೌಡ ಅವರು ಕಾಂಗ್ರೆಸ್ ಪಕ್ಷವನ್ನು ಸೇರುತ್ತಾರಾ ಎಂಬ ಪ್ರಶ್ನೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಈ ಚರ್ಚೆಯ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಡಿ ವಿ.ಸದಾನಂದಗೌಡ ಅವರ ಅಸಮಾಧಾನವನ್ನು ಶಮನಗೊಳಿಸಲು ದೆಹಲಿಗೆ ಬುಲಾವ್ ನೀಡಿದೆ.

ಇನ್ನು ಬಿಜೆಪಿಯಲ್ಲಿ 12 ಮಂದಿ ಸಂಸದರಿಗೆ ಈ ಬಾರಿ ಟಿಕೆಟ್ ಕೈತಪ್ಪಲಿದೆ ಎಂಬ ವರದಿಯಾಗಿದ್ದು, ಈ 12 ಸಂಸದರ ಪೈಕಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ ಡಿ.ವಿ. ಸದಾನಂದಗೌಡ ಅವರಿಗೆ ಈ ಬಾರೀ ಟಿಕೆಟ್ ಕೈ ತಪ್ಪಲಿದೆ ಎನ್ನಲಾಗಿದೆ.

ಆದಾಗ್ಯೂ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿರುವ ಸದಾನಂದ ಗೌಡರು ಬಿಜೆಪಿಯ ಪ್ರತಿಭಟನೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ನಡೆಯುತ್ತಿರುವ ಸಾಲು ಸಾಲು ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಾರೆ.