Friday, May 3, 2024
Homeರಾಜ್ಯಬಿಟ್ ಕಾಯಿನ್ ನೆಪದಲ್ಲಿ ಕೋಟ್ಯಾಂತರ ರೂ. ದೋಖಾ : ಅಪ್ಪ-ಮಗ ಸೇರಿ ಮೂವರ ಬಂಧನ

ಬಿಟ್ ಕಾಯಿನ್ ನೆಪದಲ್ಲಿ ಕೋಟ್ಯಾಂತರ ರೂ. ದೋಖಾ : ಅಪ್ಪ-ಮಗ ಸೇರಿ ಮೂವರ ಬಂಧನ

ಬೆಂಗಳೂರು, ಅ.21- ಬಿಟ್ ಕಾಯಿನ್ ನೆಪದಲ್ಲಿ ಹಣ ದ್ವಿಗುಣ ಮಾಡಿಕೊಡುತ್ತೇವೆಂದು ಜನರಿಂದ ಕೋಟ್ಯಾಂತರ ಹಣ ಪಡೆದು ಮೋಸ ಮಾಡುತ್ತಿದ್ದ ಅಪ್ಪ- ಮಗ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸತೀಶ್ ಹಾಗೂ ಮಗ ಶ್ರೀಕಾಂತ್ ಮತ್ತು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ದೀಪಕ್ ಬಂಧಿತ ವಂಚಕರು.

ಆರೋಪಿಗಳಿಂದ ಆರು ಕಂಪ್ಯೂಟರ್‍ಗಳು, ನಾಲ್ಕು ಮೊಬೈಲ್, ಎರಡು ಲ್ಯಾಪ್‍ಟಾಪ್ ಹಾಗೂ ಇನ್ನಿತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಗಾಂ ಬಜಾರ್, ಅವೆನ್ಯೂ ರಸ್ತೆ, ಬಳೇಪೇಟೆ ಹಾಗೂ ಬಸವನಗುಡಿಯಲ್ಲಿರುವ ಸೊಸೈಟಿಯಲ್ಲಿ ಸತೀಶ್‍ದಾರರಾಗಿದ್ದಾರೆ.

ಬಿಟ್ ಕಾಯಿನ್ ನೆಪದಲ್ಲಿ ಸಾರ್ವಜನಿಕರಿಗೆ ಆಮಿಷವೊಡ್ಡಿ ನಿಮ್ಮ ಹಣ ಡಬಲ್ ಮಾಡುತ್ತೇವೆಂದು ಆಸೆ ತೋರಿಸಿ 5.50 ಕೋಟಿ ಹಣ ಪಡೆದು ವಂಚಿಸಿದ್ದಾರೆಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. 2020-22ರಲ್ಲಿ ಜಿಜಿಗೇಮಿಂಗ್ ಆ್ಯಪ್ ತರುತ್ತೇವೆಂದು ನಂಬಿಸಿದ್ದ ವಂಚಕರು, ಈ ಆ್ಯಪ್ ಮೂಲಕ ಜನರಿಗೆ ಬಿಟ್ ಕಾಯಿನ್ ಆಸೆ ತೋರಿಸಿ ಜನರಿಗೆ ದಿನಕ್ಕೆ 10 ಸಾವಿರ ರೂ. ಹೂಡಿಕೆ ಮಾಡಿದರೆ ತಿಂಗಳಲ್ಲಿ 45 ಸಾವಿರ ಲಾಭ ಬರುತ್ತದೆ ಎಂದು ಹೇಳಿ ನಂಬಿಸುತ್ತಿದ್ದರು.

ಛತ್ತೀಸ್‍ಗಢದಲ್ಲಿ ಇಬ್ಬರು ನಕ್ಸಲೀಯರ ಹತ್ಯೆ

ಸಾರ್ವಜನಿಕರ ನಂಬಿಕೆ ಗಳಿಸಲು ಪ್ರತಿಷ್ಠಿತ ಹೊಟೇಲ್‍ಗೆ ಶ್ರೀಕಾಂತ್ ಹೂಡಿಕೆದಾರರನ್ನು ಕರೆಸಿ ಮೋಸ ಮಾಡುತ್ತಿದ್ದ ಆರೋಪ ಸಹ ಕೇಳಿ ಬಂದಿದೆ. ಇವರಿಂದ ಮೋಸಕ್ಕೊಳಗಾಗಿ ದ್ದವರು ಹಾಗೂ ಬ್ಯಾಂಕ್ ವಂಚನೆ ಸಂಬಂಧ ವಂಚನೆಗೊಳಗಾದವರು ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ತನಿಖೆ ಕೈಗೊಂಡು ಅಪ್ಪ- ಮಗ ಸೇರಿದಂತೆ ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News