Home Blog Page 1890

ಸೋಶಿಯಲ್ ಮೀಡಿಯಾದಲ್ಲಿ ಗ್ಯಾರಂಟಿ ಸರ್ಕಾರದ ಕುರಿತು ಹಿಗ್ಗಾಮುಗ್ಗಾ ಟ್ರೊಲ್

ಬೆಂಗಳೂರು,ಅ.14- ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆರಂಭದಲ್ಲಿ ಒಂದಷ್ಟು ದಿನ ಸಹನೆಯಿಂದಿದ್ದ ಕೇಸರಿ ಬೆಂಬಲಿತ ಸಾಮಾಜಿಕ ಜಾಲತಾಣದ ಕಾರ್ಯಕರ್ತರು ಇತ್ತೀಚೆಗೆ ರೊಚ್ಚಿಗೆದ್ದಿದ್ದು, ರಾಜ್ಯಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧ ಆಕ್ರಮಣಕಾರಿಯಾಗಿ ಮುಗಿಬಿದ್ದಿದ್ದಾರೆ. ಈ ಹಿಂದಿಗಿಂತಲೂ ಹೆಚ್ಚು ತೀವ್ರವಾಗಿ ಮತ್ತು ನಿಂದನಾತ್ಮಕ ಭಾಷೆಗಳ ಮೂಲಕವೇ ಪ್ರತಿದಾಳಿ ನಡೆಸುತ್ತಿರುವುದು ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆ.

ರಾಜ್ಯಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡುವುದಾಗಿ ಘೋಷಿಸಿತ್ತು. ಇದರ ಭಾಗವಾಗಿ ಸತ್ಯ ಶೋಧನಾ ತಂಡವನ್ನೂ ಕೂಡ ರಚಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುವ ಮತ್ತು ಶಾಂತಿಗೆ ಭಂಗ ಉಂಟುಮಾಡುವಂತ ಮಾಹಿತಿಗಳನ್ನು ಹರಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

ಉದ್ದೇಶಪೂರಕವಾಗಿ ಬಿಜೆಪಿ ಕಾರ್ಯಕರ್ತರ ವಿರುದ್ಧ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಕೋಮು ಪ್ರಚೋದಿತ ಪ್ರಕರಣಗಳಲ್ಲಿ ಕಾನೂನು ಕ್ರಮ ಎದುರಿಸುವ ಕಾರ್ಯಕರ್ತರ ರಕ್ಷಣೆಗೆ ವಕೀಲರ ತಂಡಗಳನ್ನು ರಚಿಸಿದೆ. ಇದರ ಜೊತೆಯಲ್ಲೇ ರಾಜ್ಯಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುತ್ತಿದೆ ಎಂಬ ದೊಡ್ಡ ಮಟ್ಟದ ಕೂಗು ಕೂಡ ಕೇಳಿಬಂದಿತ್ತು.

ಕ್ರಿಸ್ಟಿಯಾನೊ ರೊನಾಲ್ಡೊಗೆ ಕಾದಿದೆ 99 ಛಡಿ ಏಟಿನ ಶಿಕ್ಷೆ..!

ಹಂತಹಂತವಾಗಿ ಚೇತರಿಸಿಕೊಂಡಿರುವ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಇತ್ತೀಚೆಗೆ ತೀವ್ರ ಸ್ವರೂಪದ ಪ್ರತಿಕ್ರಿಯೆಗಳಿಗೆ ಮುಂದಾಗಿದ್ದಾರೆ. ರಾಜ್ಯಸರ್ಕಾರ ಪಂಚಖಾತ್ರಿ ಯೋಜನೆಗಳ ಜಾರಿಯ ಯಶಸ್ಸಿನಲ್ಲೇ ತೇಲುತ್ತಿದ್ದು, ಇದರ ಗುಂಗಿನಲ್ಲೇ ಲೋಕಸಭೆ ಚುನಾವಣೆಯನ್ನು ಗೆದ್ದು ಬೀಗುವ ಕನಸು ಕಾಣುತ್ತಿದೆ. ಆದರೆ ತೆರೆಮರೆಯಲ್ಲಿ ಪಂಚಖಾತ್ರಿ ಯೋಜನೆಗಳು ಒಂದು ವರ್ಗಕ್ಕೆ ಮಾತ್ರ ಲಾಭವಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ತೆರಿಗೆಯ ದುಡ್ಡನ್ನು ತನ್ನ ಓಟ್‍ಬ್ಯಾಂಕ್ ರಾಜಕಾರಣಕ್ಕೆ ಬಳಸುತ್ತಿದೆ.

ಓಲೈಕೆಯ ರಾಜಕಾಣರಕ್ಕಾಗಿಯೇ ಸೀಮಿತವಾಗಿದೆ ಎಂಬ ವ್ಯಾಪಕ ಪ್ರಚಾರಗಳು ನಡೆದಿವೆ. ಗೃಹಜ್ಯೋತಿ, ಶಕ್ತಿಯಂತಹ ಯೋಜನೆಗಳ ಸೌಲಭ್ಯ ಪಡೆಯುವವರೂ ಕೂಡ ಅವುಗಳ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡುವ ಬದಲಿಗೆ, ರಾಜ್ಯಸರ್ಕಾರ ಒಂದು ವರ್ಗಕ್ಕೆ ಮಾತ್ರ ಸೌಲಭ್ಯಗಳನ್ನು ನೀಡುತ್ತಿದೆ ಎಂದು ಸಿಡಿಮಿಡಿಗೊಳ್ಳುವುದು ಕಂಡುಬರುತ್ತಿದೆ.

ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ನಡೆದಿರುವ ನಿರಂತರವಾದ ಪ್ರಚಾರ ಕಾರಣವಾಗಿದೆ. ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಮೊದಲಿನಿಂದಲೂ ಅತ್ಯಂತ ಬಲಿಷ್ಠವಾಗಿದೆ. ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಒಂದಿಷ್ಟು ಚುರುಕಾಗಿದ್ದುದನ್ನು ಹೊರತುಪಡಿಸಿದರೆ ಅಧಿಕಾರಕ್ಕೆ ಬರುತ್ತಿದ್ದಂತೆ ಮೈಮರೆತು ಮಲಗಿದೆ. ಜೊತೆಗೆ ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂಬ ಉದ್ಧಟತನದ ಮಾತುಗಳ ಮೂಲಕ ಸರ್ವಾಧಿಕಾರಿ ಧೋರಣೆಗಳನ್ನು ಅನುಸರಿಸುತ್ತಿದೆ.

ಬಿಜೆಪಿ ವಿಧಾನಸಭೆ ಚುನಾವಣೆ ಸೋಲಿನಿಂದ ಎಚ್ಚೆತ್ತುಕೊಂಡು ಮತ್ತೊಮ್ಮೆ ಸಾಮಾಜಿಕ ಜಾಲತಾಣವನ್ನೇ ಪ್ರಬಲ ಅಸ್ತ್ರವನ್ನಾಗಿ ಬಳಕೆ ಮಾಡಿಕೊಂಡಿದೆ. ಈ ಹಿಂದೆ ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ನಾಯಕರ ವಿರುದ್ಧ ಕೇಳಿಬಂದ ಭ್ರಷ್ಟಾಚಾರಗಳಿಗೆ ಉತ್ತರ ಹೇಳಲಾಗದೆ ಮುಜುಗರಕ್ಕೊಳಗಾಗಿದ್ದ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ರಾಜ್ಯಸರ್ಕಾರದ ಪಂಚಖಾತ್ರಿ ಯೋಜನೆಗಳು ಹಾಗೂ ಅಭಿವೃದ್ಧಿಯ ಕುರಿತಂತೆ ಮೈಕೊಡವಿ ನಿಂತಿದ್ದಾರೆ.

ಕಾಂಗ್ರೆಸ್‍ನ ಪ್ರತಿಯೊಂದು ನಡೆಯಲ್ಲೂ ಉಗ್ರ ಸ್ವರೂಪದಲ್ಲಿ ಟೀಕಿಸಲಾಗುತ್ತಿದೆ. ಜನಸಾಮಾನ್ಯರ ಮನಮುಟ್ಟುವಂತ ಪ್ರಚಾರ ಮಾಡಲಾಗುತ್ತಿದೆ. ಕೆಲವೊಮ್ಮೆ ಇದಕ್ಕೆ ಪ್ರತಿಯಾಗಿ ಸತ್ಯ ಹೇಳುವವರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸುವ ಮೂಲಕ 2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಈ ರೀತಿಯ ಪ್ರವೃತ್ತಿಗಳು ಕಂಡುಬಂದಿದ್ದವು. ಈಗ ಮತ್ತೊಮ್ಮೆ 2024 ರ ಚುನಾವಣೆ ವೇಳೆಯಲ್ಲೂ ಇದು ಪುನರಾವರ್ತನೆಯಾಗಿದೆ.

ಅವಾಚ್ಯ ಶಬ್ದಗಳನ್ನು ಬಳಸಿದವರ ವಿರುದ್ಧ ದೂರು ನೀಡಿದರೆ ಅಥವಾ ಕ್ರಮ ಕೈಗೊಂಡರೆ ಅದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಬೊಬ್ಬೆ ಹಾಕಲಾಗುತ್ತಿದೆ. ಈ ಮೊದಲು ಹಿಂದೂ ಭಾವನೆಗಳನ್ನು ಆಧರಿಸಿ ಹೆಚ್ಚು ಆಕ್ರಮಣಕಾರಿಯಾಗಿದ್ದ ಬಿಜೆಪಿ ಬೆಂಬಲಿತ ಕಾರ್ಯಕರ್ತರು ಪ್ರಸ್ತುತ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ.

ಸೈನಿಕರ ಬಲಿದಾನಕ್ಕಿಂತ ಹೆಚ್ಚಾಯ್ತಾ ಕ್ರಿಕೆಟ್ : ಬಿಸಿಸಿಐ ವಿರುದ್ಧ ರೊಚ್ಚಿಗೆದ್ದ ದೇಶಪ್ರೇಮಿಗಳು

ಧಾರ್ಮಿಕ ಭಾವನೆಗಳು ಒಂದು ಕಡೆಯಾದರೆ, ಮತ್ತೊಂದೆಡೆ ಸರ್ಕಾರದ ಪ್ರತಿಯೊಂದು ನಡೆಯನ್ನು ವೈಫಲ್ಯವೆಂದೇ ಬಿಂಬಿಸಲಾಗುತ್ತಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಪಕ್ಷ ಬಿಜೆಪಿಯ ಆಕ್ರಮಣದ ಮುಂದೆ ಸಪ್ಪೆಯಾಗಿದ್ದು, ಮೌನಕ್ಕೆ ಶರಣಾಗುವ ಅನಿವಾರ್ಯತೆಗೆ ಸಿಲುಕಿದೆ.

ನಾಳೆ ನಾಡಹಬ್ಬ ದಸರಾಗೆ ಚಾಲನೆ ನೀಡಲಿದ್ದಾರೆ ನಾದಬ್ರಹ್ಮ ಹಂಸಲೇಖ

ಮೈಸೂರು, ಅ. 14- ಜಗದ್ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ನಾಳೆ ಬೆಳಿಗ್ಗೆ 10-15ರಿಂದ 10.30 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನಾದಬ್ರಹ್ಮ ಡಾ. ಹಂಸಲೇಖ ಅವರು ಚಾಲನೆ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ ಜೋಶಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿರುವರು.

ಕ್ರಿಸ್ಟಿಯಾನೊ ರೊನಾಲ್ಡೊಗೆ ಕಾದಿದೆ 99 ಛಡಿ ಏಟಿನ ಶಿಕ್ಷೆ..!

ಈ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಜಿ.ಟಿ. ದೇವೇಗೌಡ ಅವರು ವಹಿಸಲಿದ್ದಾರೆ. ನಾಳೆ ಸಂಜೆ ಅರಮನೆ ಆವರಣದಲ್ಲಿ 7 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ಬೆಳಿಗ್ಗೆ ದಸರಾ ಚಲನಚಿತ್ರೋತ್ಸವ, ವಸ್ತು ಪ್ರದರ್ಶನ, ಕುಸ್ತಿ ಪಂದ್ಯಾವಳಿ, ಫಲಪುಷ್ಪ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮಗಳು ನೆರವೇರಲಿವೆ. ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಬಾಕಿ ಬಿಲ್ ಕುರಿತು ಸಿಎಂ ಜೊತೆ ಗುತ್ತಿಗೆದಾರರ ಸಮಾಲೋಚನೆ

ಬೆಂಗಳೂರು,ಅ.14- ವಿವಿಧ ಕಾಮಗಾರಿಗಳ ಬಾಕಿ ಬಿಲ್ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುತ್ತಿಗೆದಾರರ ಸಂಘದ ಪ್ರತಿನಿಗಳ ಜೊತೆ ಸಮಾಲೋಚನೆ ನಡೆಸಿದರು. ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಅವರ ನಿಯೋಗ ಇಂದು ಮುಖ್ಯಮಂತ್ರಿಯವರನ್ನು ಗೃಹಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದೆ.

ಬಾಕಿ ಬಿಲ್‍ಗಳ ಸಂಬಂಧಪಟ್ಟಂತೆ ನವೆಂಬರ್‍ವರೆಗೂ ಗಡುವು ನೀಡಿರುವ ಗುತ್ತಿಗೆದಾರರು ರಾಜ್ಯಸರ್ಕಾರ ಸ್ಪಂದಿಸದೇ ಇದ್ದರೆ ಉಗ್ರಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಲೋಕೋಪಯೋಗಿ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಬಿಬಿಎಂಪಿ, ಸಮಾಜ ಕಲ್ಯಾಣ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಾವಿರಾರು ಕೋಟಿ ರೂ.ಗಳ ಕಾಮಗಾರಿಗಳು ನಡೆದಿವೆ.

ಲಾಹೋಸ್ ಕಾರ್ಖಾನೆಯಲ್ಲಿ ಬಂಧಿಯಾಗಿದ್ದಾರೆ ಒಡಿಶಾದ 35 ಕಾರ್ಮಿಕರು

ಒಂದು ಅಂದಾಜಿನ ಪ್ರಕಾರ ಸುಮಾರು 20 ಸಾವಿರ ಕೋಟಿ ರೂ.ಗಳ ಬಿಲ್‍ಗಳು ಬಾಕಿ ಉಳಿದಿವೆ ಎಂದು ಹೇಳಲಾಗಿದೆ. ಈ ಕುರಿತು ಗುತ್ತಿಗೆದಾರರ ಸಂಘ ಪದೇಪದೇ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದೆ. ಈ ಹಿಂದಿನ ಸರ್ಕಾರದಲ್ಲಿ ಗುತ್ತಿಗೆ ನೀಡುವಾಗ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ, ಸಾಕಷ್ಟು ಅಕ್ರಮಗಳಾಗಿವೆ ಎಂಬ ಆರೋಪಗಳು ಕೇಳಿಬಂದಿದ್ದವು. ಅವುಗಳ ತನಿಖೆಗೆ ರಾಜ್ಯಸರ್ಕಾರ ಆದೇಶಿಸಿದೆ.

ಇದರ ಹೊರತಾಗಿಯೂ ಶೇ. 70 ರಷ್ಟು ಬಿಲ್‍ಗಳನ್ನು ಪಾವತಿಸಲಾಗುತ್ತಿದೆ ಎಂಬ ಮಾಹಿತಿ ಇದೆ. ಆದರೆ ರಾಜ್ಯಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಬಾಕಿ ಬಿಡುಗಡೆಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ. ಇದರಿಂದ ಗುತ್ತಿಗೆದಾರರು ಸಂಕಷ್ಟಕ್ಕೀಡಾಗಿದ್ದಾರೆ ಎಂಬುದು ಸಂಘದ ಪ್ರಮುಖ ಆರೋಪಿ.

ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಶೇ.40 ರಷ್ಟು ಕಮಿಷನ್‍ನ ಆರೋಪವನ್ನು ಗುತ್ತಿಗೆದಾರರ ಸಂಘ ಮಾಡಿತ್ತು. ಕಾಂಗ್ರೆಸ್ ಅದನ್ನೇ ಚುನಾವಣೆ ಅಸ್ತ್ರವನ್ನಾಗಿ ಬಳಸಿಕೊಂಡು ಗೆಲುವು ಕಂಡಿತ್ತು. ಅಕಾರಕ್ಕೆ ಬಂದ ಕಾಂಗ್ರೆಸ್ ಕೂಡ ಗುತ್ತಿಗೆದಾರರಿಗೆ ನೆರವಾಗುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಗುತ್ತಿಗೆದಾರರನ್ನು ಸಮಾಧಾನಪಡಿಸಲು ಮುಖ್ಯಮಂತ್ರಿ ಮುಂದಾಗಿದ್ದಾರೆ.

ಕ್ರಿಸ್ಟಿಯಾನೊ ರೊನಾಲ್ಡೊಗೆ ಕಾದಿದೆ 99 ಛಡಿ ಏಟಿನ ಶಿಕ್ಷೆ..!

ಇಂದು ಕೆಂಪಣ್ಣ ಅವರ ನಿಯೋಗ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಿದ್ದು, ಹಲವಾರು ಸಮಸ್ಯೆಗಳನ್ನು ವಿವರಿಸಿದೆ. ಗುತ್ತಿಗೆದಾರರ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸುವುದಾಗಿ ಮತ್ತು ಹಣಕಾಸು ಲಭ್ಯತೆ ಆಧರಿಸಿ ಬಾಕಿ ಬಿಲ್‍ಗಳನ್ನು ಪಾವತಿ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಪದಾಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಭೀಕರ ಅಪಘಾತ, ಮೂವರು ದುರ್ಮರಣ

ರಾಮನಗರ,ಅ.14- ಬೆಂಗಳೂರು- ಮೈಸೂರು ಎಕ್ಸ್‍ಪ್ರೆಸ್ ವೇನಲ್ಲಿ ಇಂದು ಬೆಳ್ಳಂಬೆಳಿಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದು, ಲಾರಿ ಹಾಗೂ ಓಮ್ನಿ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಂಗಳೂರು ನಗರದ ದಂಪತಿ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ತಾಲೂಕಿನ ಕೆಂಪೇಗೌಡನದೊಡ್ಡಿ ಬಳಿ ನಡೆದಿದೆ.

ಪೀಣ್ಯ 2ನೇ ಹಂತದ ನಿವಾಸಿ ಆಟೋ ಚಾಲಕರಾದ ರಾಜೇಶ್(45), ಇವರ ಪತ್ನಿ ಉಮಾ ಸ್ಥಳದಲ್ಲೇ ಮೃತಪಟ್ಟರೆ, ಸಂಬಂಧಿ ಲಕ್ಕಮ್ಮ(65) ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ಕು ಮಕ್ಕಳು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಿಂದ ಏಳು ಮಂದಿ ಓಮ್ನಿ ಕಾರಿನಲ್ಲಿ ಶ್ರೀರಂಗಪಟ್ಟಣಕ್ಕೆ ಹೋಗುತ್ತಿದ್ದಾಗ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ವೇ ಬಳಿ ಲಾರಿಯನ್ನು ಓವರ್‍ಟೇಕ್ ಮಾಡಲು ಹೋಗಿ ಇವರಿದ್ದ ಕಾರು ಹಿಂದಿನಿಂದ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸುದ್ದಿ ತಿಳಿಯುತ್ತಿದ್ದಂತೆ ರಾಮನಗರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹಗಳನ್ನು ಹೊರತೆಗೆಯಲು ಹರಸಾಹಸ ಪಟ್ಟರು.

ಪಂಚರಾಜ್ಯಗಳ ಚುನಾವಣೆಯಲ್ಲಿ 42 ಕೋಟಿ ರೂ. ಪ್ರತಿಧ್ವನಿ

ಸಂಚಾರ ದಟ್ಟಣೆ: ಅಪಘಾತದ ಹಿನ್ನೆಲೆಯಲ್ಲಿ ಎಕ್ಸ್‍ಪ್ರೆಸ್ ವೇ ನಲ್ಲಿ ಕೆಲವು ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಇಂದು ಮಹಾಲಯ ಅಮಾವಾಸ್ಯೆಯಾಗಿದ್ದು, ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೈಸೂರಿನತ್ತ ತೆರಳುತ್ತಿದ್ದು, ವಾಹನಗಳು ಕಿಲೊಮೀಟರ್‍ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ನಂತರ ಪೊಲೀಸರು ಅಪಘಾತಕ್ಕೀಡಾದ ಕಾರನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ 235 ಭಾರತೀಯರು

ನವದೆಹಲಿ, ಅ.14- ಯುದ್ಧಪೀಡಿತ ಇಸ್ರೇಲ್‍ನಲ್ಲಿ ಸಿಲುಕಿಕೊಂಡಿದ್ದ 235 ಮಂದಿ ಭಾರತೀಯರು ಇಂದು ತಾಯ್ನಾಡಿಗೆ ಮರಳಿದ್ದಾರೆ. ಇಸ್ರೇಲ್ ಮತ್ತು ಪ್ಯಾಲೆಸ್ತೇನ್‍ನಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಆಪರೇಷನ್ ಅಜಯ್ ಕಾರ್ಯಾಚರಣೆಯನ್ನು ಆರಂಭಿಸಿದೆ.

ನಿನ್ನೆಯಷ್ಟೇ ಇಸ್ರೇಲ್‍ನಿಂದ 230 ಮಂದಿ ಭಾರತೀಯರು ಆಗಮಿಸಿದ್ದರು. ಇಂದು ಬೆಳಿಗ್ಗೆ ವಿಶೇಷ ವಿಮಾನದಲ್ಲಿ 235 ಮಂದಿ ಪ್ರಯಾಣಿಕರನ್ನು ಹೊತ್ತೊಯ್ದ ವಿಮಾನವು ಮುಂಜಾನೆ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಗಮಿಸಿತು.

ಭಾರತಕ್ಕೆ ಬಂದವರಲ್ಲಿ ಒಂಬತ್ತು ಮಂದಿ ಕನ್ನಡಿಗರು ಸೇರಿದ್ದಾರೆ. ಇದರಲ್ಲಿ ಮೈಸೂರಿನ ಐವರು ಹಾಗೂ ಬೆಂಗಳೂರಿನ ಬಸವನಗುಡಿಯ ನಾಲ್ಕು ಮಂದಿ ಸೇರಿದ್ದಾರೆ. ತಾಯ್ನಾಡಿಗೆ ಬಂದ ಭಾರತೀಯರನ್ನು ಕೇಂದ್ರ ಸಚಿವ ರಾಜಕುಮಾರ್ ರಾಜನ್‍ಸಿಂಗ್ ಅವರು ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

ಸ್ವದೇಶಕ್ಕೆ ಬಂದ ಭಾರತೀಯರು ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ವೇಳೆ ಕೆಲವರು ಭಾವುಕರಾಗಿ ತಮ್ಮ ಪೋಷಕರು ಮತ್ತು ಸಂಬಂಕರನ್ನು ನೋಡುತ್ತಿದ್ದಂತೆ ಕಂಬನಿ ಮಿಡಿದರು. ನಾವು ಪುನಃ ನಮ್ಮ ದೇಶಕ್ಕೆ ಬರುತ್ತೇವೆಂಬ ನಂಬಿಕೆಯನ್ನೇ ಇಟ್ಟುಕೊಂಡಿರಲಿಲ್ಲ. ಅಲ್ಲಿನ ಪರಿಸ್ಥಿತಿ ನಿಜಕ್ಕೂ ಕ್ಷಣಕ್ಷಣಕ್ಕೂ ಭೀಕರವಾಗಿದೆ. ಬದುಕುತ್ತೇವೆ ಎಂಬ ಭರವಸೆಯನ್ನೇ ಕಳೆದುಕೊಂಡಿದ್ದೆವು. ಕೇಂದ್ರ ಸರ್ಕಾರ ಆಪರೇಷನ್ ಅಜಯ್ ದ ಮೂಲಕ ಭಾರತೀಯರನ್ನು ಸ್ವದೇಶಕ್ಕೆ ಕರೆಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಪ್ರಿಯಾಂಕಾ ವಾದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಕೇಂದ್ರ ಸರ್ಕಾರಕ್ಕೆ ನಾವು ಎಷ್ಟು ಅಭಿನಂದನೆ ಸಲ್ಲಿಸಿದರೂ ಸಾಲದು. ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ನಾವು ಸುರಕ್ಷಿತವಾಗಿ ಬಂದಿದ್ದೇವೆ ಎಂದರೆ ಅಚ್ಚರಿಯೇ ಸರಿ. ನಮಗೆ ಕುಡಿಯಲು ಒಂದಿಷ್ಟು ನೀರು, ಹಣ್ಣು ಬಿಟ್ಟರೆ ಏನೂ ಸಿಗುತ್ತಿರಲಿಲ್ಲ. ಸರಿಯಾದ ಸಮಯಕ್ಕೆ ಕೇಂದ್ರ ಸರ್ಕಾರ ನಮ್ಮನ್ನು ಕರೆಸಿಕೊಂಡಿದೆ. ಇದಕ್ಕಾಗಿ ನಾವು ಸದಾ ಕೃತಜ್ಞತರಾಗಿರುತ್ತೇವೆ ಎಂದು ಅನೇಕರು ಭಾವುಕರಾಗಿ ಹೇಳಿದರು.

ಸೈನಿಕರ ಬಲಿದಾನಕ್ಕಿಂತ ಹೆಚ್ಚಾಯ್ತಾ ಕ್ರಿಕೆಟ್ : ಬಿಸಿಸಿಐ ವಿರುದ್ಧ ರೊಚ್ಚಿಗೆದ್ದ ದೇಶಪ್ರೇಮಿಗಳು

ಬೆಂಗಳೂರು,ಅ.14- ಗಡಿಯಲ್ಲಿ ಪಾಕ್ ಪ್ರೇರಿತ ಭಯೋತ್ಪಾದಕರು ಭಾರತೀಯ ಸೈನಿಕರನ್ನು ಕಗ್ಗೊಲೆ ಮಾಡುತ್ತಿದ್ದು, ದೇಶದ ಭದ್ರತೆಗೆ ಆತಂಕ ಸೃಷ್ಟಿಸುತ್ತಿರುವ ಇಂತಹ ಕ್ಲಿಷ್ಟ ಸಮಯದಲ್ಲಿ ವಿಶ್ವಕಪ್ ಪಂದ್ಯಾವಳಿಗಾಗಿ ಆಗಮಿಸಿರುವ ಪಾಕಿಸ್ತಾನದ ಕ್ರಿಕೆಟಿಗರಿಗೆ ಬಿಸಿಸಿಐ ಅದ್ಧೂರಿ ಸ್ವಾಗತ ನೀಡಿ, ಐಷಾರಾಮಿ ಆತಿಥ್ಯ ನೀಡಿರುವುದು ದೇಶಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಒಂದೆಡೆ ದೇಶಪ್ರೇಮ, ಭಾರತದ ಭದ್ರತೆ, ಭಯೋತ್ಪಾದನೆ ವಿರುದ್ಧ ಹೋರಾಟ ಎಂಬೆಲ್ಲಾ ಘೋಷಣೆಗಳ ಮೂಲಕ ಜನಸಾಮಾನ್ಯರ ಮನಸ್ಸನ್ನು ಉದ್ದಿಪ್ಪನಗೊಳಿಸುವುದು ಮತ್ತೊಂದೆಡೆ ಬಿಸಿಸಿಐ ನಂತಹ ಶ್ರೀಮಂತ ಕ್ರಿಕೆಟ್ ಸಂಸ್ಥೆ ಕ್ರೀಡೆಯಲ್ಲೂ ವ್ಯಾಪಾರ ದೃಷ್ಟಿಯನ್ನು ಅನುಸರಿಸಿ ಸಾಂಪ್ರದಾಯಿಕ ಎದುರಾಳಿಗಳನ್ನು ಗಣ್ಯ ಅತಿಥಿಗಳಂತೆ ಪರಿಗಣಿಸುವುದು ವಿಪರ್ಯಾಸಗಳಿಗೆ ಕಾರಣವಾಗಿದೆ.

ಇಂದು ಗುಜರಾತ್‍ನ ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ-ಪಾಕಿಸ್ತಾನದ ನಡುವೆ ಏಕದಿನ ವಿಶ್ವಕಪ್ ಸರಣಿ ಆಯೋಜನೆಗೊಂಡಿದೆ. ಅದಕ್ಕಾಗಿ ಭಾರತಕ್ಕೆ ಆಗಮಿಸಿದ ಭಾರತೀಯ ಕ್ರಿಕೆಟಿಗರನ್ನು ಬಿಸಿಸಿಐ ಅದ್ಧೂರಿ ಸ್ವಾಗತ ಕೋರಿದೆ.ಪ್ರತಿಯೊಬ್ಬ ಕ್ರಿಕೆಟ್ ಆಟಗಾರನಿಗೂ ದೇಶದ ವಿವಿಧೆಡೆಯ ಐಷಾರಾಮಿ ಹೋಟೆಲ್‍ಗಳಲ್ಲಿ ಗಣ್ಯ ಆತಿಥ್ಯ ಒದಗಿಸಲಾಗಿದೆ. ಪ್ರತಿಯೊಂದು ಕೊಠಡಿಗೂ 70 ಸಾವಿರದಿಂದ 4.50 ಲಕ್ಷದವರೆಗೂ ಬಾಡಿಗೆ ಪಾವತಿಸಿ ವಸತಿ ಕಲ್ಪಿಸಲಾಗಿದೆ.

ಇದಿಷ್ಟೇ ಅಲ್ಲದೆ, ಬೇರೆ ಯಾವ ದೇಶದ ತಂಡಕ್ಕೂ ಇಲ್ಲದಂತಹ ಗೌರವಾಧಾರಗಳನ್ನು ಪಾಕ್ ತಂಡಕ್ಕೆ ನೀಡಲಾಗಿದೆ ಎಂಬ ಆರೋಪಗಳಿವೆ. ಪಾಕ್ ಆಟಗಾರರಿಗೆ ಭಾರತೀಯ ಸಾಂಪ್ರದಾಯಿಕ ಶಾಲು ಹೊದಿಸಿ, ಹಾರ ತುರಾಯಿ ಹಾಕಿ, ನೃತ್ಯಗಾರರ ಮೂಲಕ ಅವರನ್ನು ಬರಮಾಡಿಕೊಳ್ಳಲಾಗಿದೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಕ್ರಿಸ್ಟಿಯಾನೊ ರೊನಾಲ್ಡೊಗೆ ಕಾದಿದೆ 99 ಛಡಿ ಏಟಿನ ಶಿಕ್ಷೆ..!

ಭಾರತದ ಖ್ಯಾತ ಗಾಯಕರಾದ ಹರಿಜಿತ್ ಸಿಂಗ್, ಸುಖುವಿಂದರ್ ಸಿಂಗ್, ಸುನಿದಿ ಚೌವ್ಹಾಣ್, ನೇಹಾ ಕಾಕ್ಕರ್, ಶಂಕರ್ ಮಹದೇವನ್ ಸೇರಿದಂತೆ ಹಲವರು ಪಾಕ್ ಕ್ರೀಡಾಳುಗಳ ಎದುರು ಸಂಗೀತ ರಸಸಂಜೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.ಪಾಕ್ ಕ್ರಿಕೆಟಿಗರಿಗೆ ವಿಶೇಷ ಆತಿಥ್ಯ ವ್ಯವಸ್ಥೆ ಮಾಡಿದ್ದಕ್ಕಾಗಿ ಬಿಸಿಸಿಐ ಜೊತೆಗೆ ಅದರ ಕಾರ್ಯದರ್ಶಿ ಜಯ್ ಶಾ ವಿರುದ್ಧವೂ ಆಕ್ರೋಶ ಭುಗಿಲೆದ್ದಿದೆ.

ಪಾಕ್ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಇಸ್ರೇಲ್ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರನ್ನು ಬೆಂಬಲಿಸಿದ್ದ. ಆತನ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಏಕೆ ಕ್ರಮ ಕೈಗೊಳ್ಳಲಿಲ್ಲ. ಆತನನ್ನು ಭಾರತಕ್ಕೆ ಬಂದು ಆಟವಾಡಲು ಏಕೆ ಅವಕಾಶ ನೀಡಲಾಗಿದೆ ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

ಈ ಹಿಂದೆ ಎಂ.ಎಸ್.ದೋನಿ ಅವರು ಭಾರತೀಯ ಸೇನೆಯ ಚಿನ್ಹೆಯನ್ನು ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್ ಮೇಲೆ ಹಾಕಿಕೊಂಡಿದ್ದರು ಅದನ್ನು ತೆರವುಗೊಳಿಸುವಂತೆ ಐಸಿಸಿ ಸೂಚನೆ ನೀಡಿತ್ತು. ಐಸಿಸಿ ಯ ಆದಾಯಕ್ಕೆ ಬಿಸಿಸಿಐ ಶೇ. 40 ರಷ್ಟು ಪಾಲು ನೀಡುತ್ತಿದೆ. ಇಂತಹ ಶ್ರೀಮಂತ ಸಂಸ್ಥೆ ಐಸಿಸಿ ನಿರ್ಣಯಗಳ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗಲಿಲ್ಲವೆ, ಪಾಕ್‍ನೊಂದಿಗಿನ ಭಾರತದ ಮನೋಧೋರಣೆಯನ್ನು ಅರ್ಥ ಮಾಡಿಸಲು ವೈಫಲ್ಯವಾಗಿದ್ದೇಕೆ ಎಂದು ಕಿಡಿ ಕಾರಲಾಗುತ್ತಿದೆ.

ಐಸಿಸಿ ಹೇಳಿದಾಕ್ಷಣ ಪಾಕ್ ಕ್ರಿಕೆಟಿಗರಿಗೆ ಪುಷ್ಪವೃಷ್ಟಿ ಮಾಡಿ ಸ್ವಾಗತಿಸುವ ಅಗತ್ಯವಿತ್ತೇ, ಗಡಿಯಲ್ಲಿ ಪದೇಪದೇ ಭಾರತೀಯ ಸೈನಿಕರ ಬಲಿದಾನವನ್ನು ಕ್ರಿಕೆಟ್ ಸಂಸ್ಥೆ ಮರೆತಿದ್ದೇಕೆ, ಅವರ ಕುಟುಂಬದ ಸದಸ್ಯರ ನೋವಿಗೆ ಸ್ಪಂದಿಸದೇ ಇರುವುದು ಯಾವ ದೇಶಪ್ರೇಮ ಎಂದು ಪ್ರಶ್ನಿಸಲಾಗಿದೆ.

ಪಾಕ್ ಕ್ರಿಕೆಟಿಗರಿಗೆ ರೊಟ್ಟಿ ತಿನ್ನಲು ಗತಿಯಿಲ್ಲ. ಅಂತವರನ್ನು ಭಾರತಕ್ಕೆ ಕರೆತಂದು ಲಕ್ಷಾಂತರ ರೂ.ಗಳ ಖರ್ಚು ಮಾಡಿ ಐಷಾರಾಮಿ ಹೋಟೆಲ್‍ನಲ್ಲಿರಿಸಿ ಬಿರಿಯಾನಿ ತಿನಿಸುವ ಅಗತ್ಯವೇನಿದೆ. ಭಾರತ ಕ್ರಿಕೆಟ್ ಪಂದ್ಯಾವಳಿಯನ್ನು ನಿಷೇಸಬೇಕು ಎಂಬ ಕೂಗುಗಳಿವೆ.ಒಂದೆಡೆ ಗಡಿಯಾಚೆಗಿನ ಭಯೋತ್ಪಾದನೆ ಕಾರಣಕ್ಕಾಗಿ ಪಾಕ್‍ನೊಂದಿಗಿನ ರಾಜತಾಂತ್ರಿಕ, ವಾಣಿಜ್ಯೋದ್ಯಮ ಸಂಬಂಧಗಳಿಗೆ ಭಾರತ ಕಡಿವಾಣ ಹಾಕಿದೆ.

ದೇಶದ ಜನರಲ್ಲಿ ಪಾಕ್ ವಿರುದ್ಧವಾಗಿರುವ ಅಸಹನೆಯನ್ನು ಗೌರವಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕ್ರೀಡೆಯ ನೆಪದಲ್ಲಿ ಸಾಂಪ್ರದಾಯಿಕ ಎದುರಾಳಿಗಳಿಗೆ ರಾಜಮರ್ಯಾದೆ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆ ಕಾಡುತ್ತಿದೆ.

ಕ್ರಿಸ್ಟಿಯಾನೊ ರೊನಾಲ್ಡೊಗೆ ಕಾದಿದೆ 99 ಛಡಿ ಏಟಿನ ಶಿಕ್ಷೆ..!

ಟೆಹ್ರನ್,ಅ.14-ಬ್ರಿಜಿಲ್‍ನ ಖ್ಯಾತ ಪುಟ್‍ಬಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಇರಾನ್‍ಗೆ ಭೇಟಿ ನೀಡಿ ವೇಳೆ ವಿಕಲಚೇತನ ಅಭಿಮಾನಿಯೊಬ್ಬಳಿಗೆ ಸಹಿ ಮಾಡಿದ ಶರ್ಟ್ ನೀಡಿ ತಬ್ಬಿಕೊಂಡು ಕೆನ್ನೆಗೆ ಮುತ್ತು ನೀಡಿದ್ದಕ್ಕೆ ಇಲ್ಲಿನ ನ್ಯಾಯಾಲಯ 99 ಛಡಿ ಏಟಿನ ಶಿಕ್ಷೆ ವಿಸಿದೆ.
ಅಭಿಮಾನದ ಪ್ರೀತಿ ಮತ್ತು ಕೃತಜ್ಞತೆಯ ಅಭಿವ್ಯಕ್ತಿಯಾಗಿ ಮಹಿಳೆಯನ್ನು ತಬ್ಬಿಕೊಂಡಿದ್ದಕ್ಕಾಗಿ ಉದ್ಧಟತನ , ವ್ಯಭಿಚಾರದಂತೆ ವರ್ತಿಸಲಾಗಿದೆ ಎಂದು ದೂಷಿಸಿ ಇರಾನಿನ ನ್ಯಾಯಾಂಗ ವ್ಯವಸ್ಥೆಯು ಶಿಕ್ಷೆ ವಿಸುತ್ತದೆ.

ಇರಾನಿನ ಮಾಧ್ಯಮಗಗಳ ಪ್ರಕಾರ ಕಳೆದ ಸೆಪ್ಟೆಂಬರ್‍ನಲ್ಲಿ ಏಷ್ಯನ್ ಚಾಂಪಿಯನ್ಸ್ ಲೀಗ್‍ನಲ್ಲಿ ಆಡಲು ತನ್ನ ತಂಡದೊಂದಿಗೆ ಟೆಹ್ರಾನ್‍ಗೆ ಪ್ರಯಾಣಿಸಿದಾಗ ಈ ಘಟನೆ ನಡೆದಿದೆ ನಂತರ ಇದನ್ನು ಗಂಭೀರವಾಗಿ ಪರಿಗಣಿಸಿ ಇರಾನಿನ ನ್ಯಾಯಾಂಗ ವ್ಯವಸ್ಥೆಯು ಅವನಿಗೆ ಶಿಕ್ಷೆಯನ್ನು ವಿಸಿತು ಈಗ ಕ್ರಿಸ್ಟಿಯಾನೋ ರೊನಾಲ್ಡೊ ಇರಾನ್‍ನಲ್ಲಿ ವ್ಯಭಿಚಾರದ ಆರೋಪ ಹೇರಲಾಗಿದೆ.

ದಸರಾ ರಜೆಗಳ ಪ್ರಯುಕ್ತ ಕೆಎಸ್ಆರ್‌ಟಿಸಿಯಿಂದ 2000ಕ್ಕೂ ಹೆಚ್ಚು ವಿಶೇಷ ಬಸ್

ಹಲವಾರು ಮಂದಿ ಇರಾನಿನ ವಕೀಲರು ಕ್ರಿಸ್ಟಿಯಾನೋ ರೊನಾಲ್ಡೊ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಇರಾನಿನ ಮಾಧ್ಯಮ ಹೇಳಿಕೊಂಡಿದೆ ಈ ಕ್ರಮ ಇರಾನಿನ ಕಾನೂನಿಗೆ ಅನುಸಾರವಾಗಿದೆ. ಅವಿವಾಹಿತ ಮಹಿಳೆಯನ್ನು ಮುಟ್ಟುವುದು ವ್ಯಭಿಚಾರದಂತೆ ಎಂದು ಪ್ರಸಾರ ಮಾಡಿದೆ.

ಭೇಟಿಯ ಸಮಯದಲ್ಲಿ ಪಾಶ್ರ್ವವಾಯುವಿಗೆ ಒಳಗಾಗಿರುವ ಪುಟ್‍ಬಾಲ್ ಅಭಿಮಾನಿ ಫತೇಮೆ ಹಮಾಮಿಗೆ ಸಹಿ ಮಾಡಿದ ಶರ್ಟ್ ಮತ್ತು ಅಪ್ಪುಗೆ ಮತ್ತು ಕೆನ್ನೆಗೆ ಮುತ್ತು ನೀಡಿದ್ದರು. ಮಾನವೀಯತೆಗೆ ಬಲೆ ಇಲ್ಲದೆ ಈ ಶಿಕ್ಷೆ ವಿಸಿರುವುದು ದುರಾದೃಷ್ಠಕರ ಎಂದು ವಿಶ್ವಾದ್ಯಂತ ಅಭಿಮಾನಿಗಳು ಕಿಡಿಕಾರಿದ್ದಾರೆ.

ಪಂಚರಾಜ್ಯಗಳ ಚುನಾವಣೆಯಲ್ಲಿ 42 ಕೋಟಿ ರೂ. ಪ್ರತಿಧ್ವನಿ

ಬೆಂಗಳೂರು,ಅ.14- ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ನಿವಾಸದಲ್ಲಿ ಐಟಿ ಅಧಿಕಾರಿಗಳು ಜಪ್ತಿ ಮಾಡಿರುವ 42 ಕೋಟಿ ನಗದು ಪ್ರಕರಣ ಪಂಚರಾಜ್ಯಗಳ ವಿಧಾನಸಭೆ ಚುನಾವಣಾ ಪ್ರಚಾರದಲ್ಲೂ ಪ್ರತಿಧ್ವನಿಸಲಿದೆ. ಈ ಹಿಂದೆ ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ 40% ಕಮೀಷನ್ ಆರೋಪ ಭಾರೀ ಸದ್ದು ಮಾಡಿತ್ತು. ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕ ವಾದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕರು ಇದನ್ನೇ ಪ್ರಸ್ತಾಪಿಸಿ ಬಿಜೆಪಿಗೆ ಮುಜುಗರ ಸೃಷ್ಟಿಸಿದ್ದರು.

ಕರ್ನಾಟಕ ಮಾತ್ರವಲ್ಲದೆ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ವಿರುದ್ದವೂ ಪೇ ಕಮಿಷನ್ ಆರೋಪ ಮಾಡಲು ಸಜ್ಜಾಗಿತ್ತು. ಇದು ಒಂದು ರೀತಿ ಬಿಜೆಪಿಗೆ ಉಗಳಲು ಆಗದ, ನುಂಗಲೂ ಆಗದ ಬಿಸಿತುಪ್ಪವಾಗಿ ಪರಿಣಮಿಸಿತ್ತು.

ಇದೀಗ ಕಾಂಗ್ರೆಸ್ ಮಾಡಿದ ಆರೋಪವೇ ತಿರುಗು ಬಾಣವಾಗುವ ಸಾಧ್ಯತೆ ನಿಚ್ಚಳವಾಗಿದೆ. ಪಂಚರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಘಡ, ತೆಲಂಗಾಣ ಮತ್ತು ಮಿಜೋರಾಂಗಳಲ್ಲಿ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುವ 42 ಕೋಟಿ ಬೃಹತ್ ಹಗರಣ ಬಿಜೆಪಿಯ ಪ್ರಮುಖ ಪ್ರಚಾರದ ಅಸ್ತ್ರವಾಗಲಿದೆ.

ಮೊಬೈಲ್ ಚಟ ಪ್ರಶ್ನಿಸಿದ ತಾಯಿಯನ್ನೇ ಕೊಂದ ಮಗ

ಐದೂ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ , ಕೇಂದ್ರ ಗೃಹ ಸಚಿವ ಅಮಿತ್ ಷಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಮತ್ತಿತರ ತಾರಾ ಪ್ರಚಾರಕರು 42 ಕೋಟಿ ವಿಷಯವನ್ನೇ ಕಾಂಗ್ರೆಸ್‍ಗೆ ತಿರುಗಿಸಲು ಮುಂದಾಗಿದೆ.

ಅಧಿಕಾರಕ್ಕೆ ಬಂದು ಕೇವಲ 4 ತಿಂಗಳ ಅವಧಿಯಲ್ಲಿ ಗುತ್ತಿಗೆದಾರನ ಬಳಿ ಇಷ್ಟು ದೊಡ್ಡ ಮೊತ್ತದ ಹಣ ಸಿಕ್ಕಿರುವುದರಿಂದ ಹಿಂದೆ ಕೆಲವು ಪ್ರಭಾವಿ ನಾಯಕರ ಕೃಪಾಕಟಾಕ್ಷವಿದೆ. ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಕೂಡ ಹೊರತಾಗಿಲ್ಲ ಎಂಬುದನ್ನು ಬಿಂಬಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಸಣ್ಣದೊಂದು ವಿಷಯವನ್ನು ಸಹ ಬಿಡದೆ ಕಾಂಗ್ರೆಸ್ ಜನ್ಮ ಜಾಲಾಡುವ ಮೋದಿ ಅವರು ಇದೀಗ ಅಂಬಿಕಾಪತಿ ಪ್ರಕರಣವನ್ನು ಪದೇ ಪದೇ ಪ್ರಸ್ತಾಪಿಸಿ ಕಾಂಗ್ರೆಸ್‍ಗೆ ಮುಜುಗರ ತರಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.

40% ಪ್ರಕರಣಕ್ಕೆ ತಿರುವು ಸಾಧ್ಯತೆ:
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಹೊರಿಸಿದ್ದರು. ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕಿದ್ದರೆ 40% ಕಮಿಷನ್ ಕೊಡಬೇಕಾದ ಪರಿಸ್ಥಿತಿ ಇದೆ ಎಂಬ ಆರೋಪ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಆಗಿನ ವಿರೋಧ ಪಕ್ಷ ಕಾಂಗ್ರೆಸ್ ಈ ಪ್ರಕರಣವನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿತ್ತು.

ಪೇಟಿಎಂ ಮಾದರಿಯಲ್ಲಿ ಪೇಸಿಎಂ ಎಂಬ ಪೋಸ್ಟರ್ ತಯಾರಿಸಿ ರಾಜಧಾನಿಯ ಗೋಡೆಗಳ ಮೇಲೆ ರಾತ್ರೋರಾತ್ರಿ ಅಂಟಿಸುವ ಮೂಲಕ ಈ ಆರೋಪ ಇನ್ನಷ್ಟು ಜೀವ ಪಡೆಯುವಂತೆ ಮಾಡಲಾಗಿತ್ತು. ಆದರೆ ಇದೀಗ ಆ 40% ಕಮಿಷನ್ ಆರೋಪ ಪ್ರಕರಣ ತಿರುವು ಪಡೆದರೂ ಅಚ್ಚರಿ ಏನಲ್ಲ.

40 ವರ್ಷಗಳ ನಂತರ ಮತದಾನದ ಭಾಗ್ಯ ಪಡೆದ ನಿವಾಸಿಗಳು

ಅಂದಿನ 40% ಕಮಿಷನ್ ಆರೋಪ ಪ್ರಕರಣ ತಿರುವು ಪಡೆಯುವ ಸಾಧ್ಯತೆ ಒಂದೆಡೆಯಾದರೆ, ಇನ್ನೊಂದೆಡೆ ಈ ಪ್ರಕರಣ ತಿರುಗುಬಾಣ ಆಗುವ ಲಕ್ಷಣಗಳೂ ಕಾಣಿಸುತ್ತಿವೆ. ಏಕೆಂದರೆ ಅಂದು ಈ ಪ್ರಕರಣ ಅಸ್ತ್ರವಾಗಿ ಬಳಸಿಕೊಂಡು ಬಿಜೆಪಿ ಮೇಲೆ ಮುಗಿಬಿದ್ದ ಕಾಂಗ್ರೆಸ್ ಇಂದು ಅಧಿಕಾರದಲ್ಲಿದೆ. ಅಲ್ಲದೆ ಅಂದು ಈ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮನೆಯಲ್ಲೇ ಈ ಕಂತೆಗಟ್ಟಲೆ ಹಣ ಸಿಕ್ಕಿದೆ. ಹೀಗಾಗಿ ಅಂಬಿಕಾಪತಿಗೆ ಆ ಕಮಿಷನ್ ಪ್ರಕರಣವೇ ತಿರುಗುಬಾಣವಾಗಬಹುದು.

ಅಲ್ಲದೆ ಮಂಚದಡಿ ಕಂತೆಗಟ್ಟಲೆ ಹಣ ಸಿಕ್ಕ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಈಗಾಗಲೇ ಕಾಂಗ್ರೆಸ್ ಮೇಲೆ ಮುಗಿಬಿದ್ದಿದೆ. ಒಟ್ಟಿನಲ್ಲಿ ಇದೊಂದೇ ದಾಳಿಯಿಂದ ದೊಡ್ಡದೊಂದು ಭ್ರಷ್ಟಾಚಾರ ಆರೋಪ ಪ್ರಕರಣವೂ ಮುನ್ನೆಲೆಗೆ ಬಂದಿದ್ದಲ್ಲದೆ, ಆ ಕುರಿತು ಕುತೂಹಲವೂ ಕೆರಳುವಂತೆ ಮಾಡಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿ ನಡೆಸಿದ ದಾಳಿಯಲ್ಲಿ ಕೋಟಿಗಟ್ಟಲೆ ಮೊತ್ತದ ನೋಟುಗಳ ಕಂತೆಗಳು ಸಿಕ್ಕಿವೆ. ನಗರದ ಐದು ಕಡೆ ದಾಳಿ ಮಾಡಿದ್ದು, ಆ ಪೈಕಿ ಆರ್.ಟಿ.ನಗರದ ಆತ್ಮಾನಂದ ಕಾಲನಿಧಿಯಲ್ಲಿ 42 ಕೋಟಿ ಹಣ ಪತ್ತೆಯಾಗಿದೆ. ಅಶ್ವತ್ಥಮ್ಮ ಹಾಗೂ ಅಂಬಿಕಾಪತಿ ದಂಪತಿಯ ಮನೆಯಲ್ಲಿ ಈ ಹಣ ಪತ್ತೆಯಾಗಿದೆ. ಅಂಬಿಕಾಪತಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನಾಗಿದ್ದು, ಪತ್ನಿ ಅಶ್ವತ್ಥಮ್ಮ ಬಿಬಿಎಂಪಿಯ ಮಾಜಿ ಕಾಪೆರ್ಪೋರೇಟರ್ ಆಗಿದ್ದಾರೆ.

ಅನಧಿಕೃತ ಜಾಹೀರಾತಿಗೆ ಬ್ರೆಕ್ ಹಾಕಲು ಬರುತ್ತಿದೆ ಹೊಸ ರೂಲ್ಸ್

ಬೆಂಗಳೂರು,ಅ.14-ಅನಧಿಕೃತ ಜಾಹೀರಾತುಗಳಿಗೆ ಬ್ರೇಕ್ ಹಾಕಲು ನಗರದಲ್ಲಿ ಹೊಸ ನಿಯಮ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ಬೇರು ಬಿಟ್ಟಿರುವ ಜಾಹೀರಾತು ಮಾಫಿಯಾಗೆ ಈಗಾಗಲೇ ಕಡಿವಾಣ ಹಾಕಲಾಗಿದ್ದು, ನಗರ ವ್ಯಾಪ್ತಿಗೆ ಸಂಬಂಧಿಸಿದಂತೆ ಜಾಹೀರಾತು ಕಾಯ್ದೆಗೆ ಕೆಲ ಮಾರ್ಪಾಡು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಬಿಬಿಎಂಪಿ ಜಾಹೀರಾತು ವಿಭಾಗದ ಉಪ ಆಯುಕ್ತ ಲೋಕನಾಥ್ ಮಾಹಿತಿ ನೀಡಿದ್ದಾರೆ.

ಈ ಹೊಸ ಜಾಹೀರಾತು ನೀತಿಯಿಂದ ಸರ್ಕಾರಕ್ಕೆ ಹೆಚ್ಚು ಆದಾಯ ಬರುವ ಸಾಧ್ಯತೆಗಳಿವೆ ಎಂದು ಅವರು ವಿವರಣೆ ನೀಡಿದ್ದಾರೆ. ನಗರದಲ್ಲಿ ಅಕ್ರಮ ಜಾಹೀರಾತುಗಳಿಗೆ ಕಡಿವಾಣ ಹಾಕಿದ್ದರೂ ಕೂಡ ಅನಧಿಕೃತ ಜಾಹೀರಾತುಗಳ ಹಾವಳಿ ಹೆಚ್ಚಗಿರುವುದನ್ನು ಮನಗಂಡು ಸರ್ಕಾರ ಇಂತಹ ತೀರ್ಮಾನ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಿಯಾಂಕಾ ವಾದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಸಾರ್ವಜನಿಕರಿಂದ ಹಾಗೂ ರಾಜಕೀಯ ಪಕ್ಷಗಳಿಂದ ಅನಧಿಕೃತ ಪ್ಲೆಕ್ಸ್, ಬ್ಯಾನರ್ ಗಳ ಪ್ರದರ್ಶನ ಹೆಚ್ಚಾಗಿದೆ. ಇದರಿಂದ ಸರ್ಕಾರದ ಖಜಾನೆಗೆ ಕೋಟ್ಯಾಂತರ ಹಣ ಲಾಸ್ ಆಗುತಿತ್ತು. ಈ ರೀತಿ ಅಳವಡಿಸುವ ಅನಧಿಕೃತ ಪ್ಲೆಕ್ಸ್ , ಬ್ಯಾನರ್ ಕಡಿವಾಣಕ್ಕೆ ರಾಜ್ಯ ಸರ್ಕಾರ ಹೊಸ ಪ್ಲಾನ್ ಕಂಡುಕೊಂಡು ನಗರಕ್ಕೆ ಸೀಮಿತವಾಗಿ ಹೊಸ ಜಾಹೀರಾತು ನಿಯಮ ಅಳವಡಿಸಿಕೊಂಡಿದೆ.

ಹಾಗಾದ್ರೆ, ಸಿಲಿಕಾನ್ ಸಿಟಿಗೆ ಸೀಮಿತವಾದ ಹೊಸ ಜಾಹೀರಾತು ನಿಯಮದಲ್ಲಿ ಎನ್ನಿದೆ ಅಂತ ನೋಡೋದಾದೆ ಇನ್ನು ಮುಂದೆ – ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಿ ಬೇಕದ್ರು ಪ್ಲೆಕ್ಸ್ ಬ್ಯಾನರ್ ಹಾಕಬಹುದು ಆದರೆ ಅದಕ್ಕೆ ಬಿಬಿಎಂಪಿ ಅನುಮತಿ ಕಡ್ಡಾಯವಾಗಿರಲಿದೆ. ಯಾರಾದ್ರೂ ಪ್ಲೆಕ್ಸ್, ಬ್ಯಾನರ್ ಹಾಕಬೇಕು ಅಂದ್ರೆ ಅವರಿಗೆ ಮೂರು ದಿನ ಅನುಮತಿ ನೀಡಲಾಗುವುದು ಒಂದು ಬ್ಯಾನರ್ ಅಥವಾ ಪ್ಲೆಕ್ಸ್‍ಗೆ ಇಂತ್ತಿಷ್ಟು ಹಣ ನಿಗದಿ ಮಾಡಲಾಗಿದೆ.

ಮೂರು ದಿನಕ್ಕೆ ನೀವು ಹಾಕೋ ಪ್ಲೆಕ್ಸ್ , ಬ್ಯಾನರ್ ಮೇಲೆ ಹಣ ನಿಗದಿ ಮಾಡಲಾಗುವುದು. ಹಣ ಪಾವತಿ ಮಾಡಿದ್ರೆ ಮೂರು ದಿನ ಬ್ಯಾನರ್ ಹಾಕಲು ಅನುಮತಿ ನೀಡಲಾಗುವುದು. ಮೂರು ದಿನ ನಂತರ ಬಿಬಿಎಂಪಿ ಸಿಬ್ಬಂದಿಗಳೆ ನೀವು ಅಳವಡಿಸುವ ಬ್ಯಾನರ್ ತೆರವು ಮಾಡ್ತಾರೆ, ಹೀಗೆ ಅನಧಿಕೃತ ಪ್ಲೆಕ್ಸ್ , ಬ್ಯಾನರ್ ಕಡಿವಾಣಕ್ಕೆ ರಾಜ್ಯ ಸರ್ಕಾರ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.

ಲಾಹೋಸ್ ಕಾರ್ಖಾನೆಯಲ್ಲಿ ಬಂಧಿಯಾಗಿದ್ದಾರೆ ಒಡಿಶಾದ 35 ಕಾರ್ಮಿಕರು

ಭುವನೇಶ್ವರ,ಅ.14- ಒಡಿಶಾದ 35 ಕಾರ್ಮಿಕರ ಗುಂಪು ಅವರು ಕೆಲಸ ಮಾಡುತ್ತಿದ್ದ ಲಾವೋಸ್‍ನ ಕಂಪನಿಯೊಂದರಲ್ಲಿ ಬಂಲಾಹೋಸ್ ಕಾರ್ಖಾನೆಯಲ್ಲಿ ಬಂಧಿಯಾಗಿದ್ದಾರೆ ಒಡಿಶಾದ 35 ಕಾರ್ಮಿಕರುತರಾಗಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಇಲ್ಲಿನ ಪ್ಲೈವುಡ್ ಕಂಪನಿಯು ಸುಮಾರು ಒಂದೂವರೆ ತಿಂಗಳ ಹಿಂದೆ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದೆ, ಆದರೆ ಅವರಿಗೆ ತಾಯ್ನಾಡಿಗೆ ಮರಳಲು ಅಥವಾ ವೇತನವನ್ನು ಪಾವತಿಸಲು ಅವಕಾಶ ನೀಡುತ್ತಿಲ್ಲ ಹೀಗಾಗಿ ನಮ್ಮನ್ನು ಕರೆಸಿಕೊಳ್ಳುವಂತೆ ನೌಕರರು ಒಡಿಶಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಿಯಾಂಕಾ ವಾದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ತಮ್ಮ ಪಾಸ್‍ಪೋರ್ಟ್‍ಗಳನ್ನು ಕಂಪನಿಯು ಬಲವಂತವಾಗಿ ಕಿತ್ತುಕೊಂಡಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಇದನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದ ನಂತರ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಕಾರ್ಮಿಕರನ್ನು ಮನೆಗೆ ಕರೆತರಲು ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಇದರ ನಂತರ, ರಾಜ್ಯ ಕಾರ್ಮಿಕ ಆಯುಕ್ತರು ಲಾವೋಸ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಮಸ್ಯೆನಿವಾರಣೆ ಕುರಿತಂತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಮಿಕರು ಸುರಕ್ಷಿತವಾಗಿ ಭಾರತಕ್ಕೆ ಮರಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ರಾಯಭಾರ ಕಚೇರಿ ಒಡಿಶಾ ಸರ್ಕಾರಕ್ಕೆ ತಿಳಿಸಿದೆ.

40 ವರ್ಷಗಳ ನಂತರ ಮತದಾನದ ಭಾಗ್ಯ ಪಡೆದ ನಿವಾಸಿಗಳು

ನಮ್ಮಲ್ಲಿ ತಿನ್ನಲು ಹಣ ಅಥವಾ ಆಹಾರವಿಲ್ಲ. ನಮಗೆ ಹಿಂತಿರುಗಲು ಸಹ ಅನುಮತಿಸಲಾಗುವುದಿಲ್ಲ ಎಂದು ಆಗ್ನೇಯ ಏಷ್ಯಾದ ದೇಶದಲ್ಲಿ ಬಂ„ತರಾಗಿರುವ ಕಾರ್ಮಿಕರಲ್ಲಿ ಒಬ್ಬರಾದ ಸರೋಜ್ ಪಲೈ ಅಲವತ್ತುಕೊಂಡಿದ್ದಾರೆ.