Home Blog Page 1904

ರಾಜ್ಯ ಸರ್ಕಾರ ತನ್ನ ವೈಫಲ್ಯತೆಯನ್ನು ಪ್ರಧಾನಿ ಮೇಲೆ ಹೇರುತ್ತಿದೆ : ಸುಮಲತಾ

ಬೆಂಗಳೂರು,ಅ.9- ಕಾವೇರಿ ನದಿ ನೀರಿನ ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ವಾಸ್ತವ ಪರಿಸ್ಥಿತಿಯನ್ನು ತಾವು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲಶಕ್ತಿ ಸಚಿವರಿಗೆ ವಿವರಿಸಿರುವುದಾಗಿ ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯಪ್ರವೇಶ ಮಾಡಬೇಕು ಎಂಬುದು ರಾಜ್ಯಸರ್ಕಾರದ ಅಸಹಾಯಕತೆಯ ವಾದ. ಇವರ ವೈಫಲ್ಯವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನೀರು ನಿರ್ವಹಣಾ ಪ್ರಾಧಿಕಾರ ಆದೇಶಗಳೇ ಅಂತಿಮ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಹೀಗಿರುವಾಗ ಪ್ರಧಾನಮಂತ್ರಿಯವರು ಮಧ್ಯಪ್ರವೇಶ ಮಾಡಲು ಹೇಗೆ ಸಾಧ್ಯ. ದೇಶದ ಪ್ರಧಾನಿಯವರು ಯಾವುದೋ ಒಂದು ರಾಜ್ಯದ ಪರವಾಗಿ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಹಿಂದೆ ತಾವು ಪ್ರಧಾನಮಂತ್ರಿ ಮತ್ತು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ವಾಸ್ತವ ಪರಿಸ್ಥಿತಿಯನ್ನು ವಿವರಿಸಿದ್ದೆ. ಆ ವೇಳೆ ಅವರು ತಮಿಳುನಾಡು ಮತ್ತು ಕರ್ನಾಟಕ ರಾಜ್ಯದಲ್ಲಿ ಅಧಿಕಾರದಲ್ಲಿರುವ ಎರಡೂ ಪಕ್ಷಗಳ ನಡುವೆ ಉತ್ತಮ ರಾಜಕೀಯ ಹೊಂದಾಣಿಕೆ ಇದೆ. ಹೀಗಾಗಿ ಅವರು ಕುಳಿತು ಮಾತುಕತೆ ನಡೆಸಿ ಸೌಹಾರ್ದಯುತ ಪರಿಹಾರ ತೆಗೆದುಕೊಳ್ಳುವುದಾದರೆ ನಮ್ಮ ಅಭ್ಯಂತರ ಇಲ್ಲ. ಆದರೆ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯಸರ್ಕಾರ ತಮಿಳುನಾಡಿನ ಜೊತೆ ಮಾತುಕತೆಗೆ ಮುಂದಾಗಬೇಕು ಎಂದರು.

BIG NEWS : ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆ

ಕಾವೇರಿ ನೀರು ನಿಯಂತ್ರಣಾ ಸಮಿತಿ ಸಭೆ ನಾಳೆ ನಡೆಯಲಿದೆ. ಅಲ್ಲಿ ನೀರು ಬಿಡಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಸಹಜವಾಗಿಯೇ ನೀರು ಬಿಡಿ ಎಂದೇ ಆದೇಶ ಬರುತ್ತದೆ. ರಾಜ್ಯಸರ್ಕಾರ ವಾಸ್ತವಾಂಶಗಳನ್ನು ಪ್ರಬಲವಾಗಿ ಮನವರಿಕೆ ಮಾಡಿಕೊಡುವ ವಾದ ಮಂಡಿಸುವಲ್ಲಿ ವೈಫಲ್ಯ ಅನುಭವಿಸಿವೆ. ಮೊದಲು ಎಲ್ಲಿ ಲೋಪಗಳಾಗಿವೆ ಎಂಬುದನ್ನು ಗುರುತಿಸಿ ಸರಿಪಡಿಸಬೇಕಿದೆ ಎಂದರು.

ಕಾವೇರಿ ವಿಷಯದಲ್ಲಿ ವಿಧಾನಸಭೆ ಅಧಿವೇಶನ ಕರೆದು ನಿರ್ಣಯ ಕೈಗೊಳ್ಳಬೇಕೆಂಬ ದೊಡ್ಡ ದೊಡ್ಡ ವಿಚಾರಗಳ ಬಗ್ಗೆ ತಾವು ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದರು.

ಬಿಜೆಪಿ, ಜೆಡಿಎಸ್ ಮೈತ್ರಿಯ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಬಿಜೆಪಿ ಪಕ್ಷದಿಂದ ಮೈತ್ರಿಯ ಬಗ್ಗೆ ಈವರೆಗೂ ಅಧಿಕೃತವಾಗಿ ನನಗೆ ಯಾವುದೇ ಮಾಹಿತಿ ಬಂದಿಲ್ಲ. ಯಾವ ಕಾರಣಕ್ಕೆ ಮೈತ್ರಿಯಾಗಿದೆ ಎಂಬುದು ತಮಗೆ ಗೊತ್ತಿಲ್ಲ. ಮೈತ್ರಿ ಬಳಿಕ ಸ್ಪರ್ಧೆಯ ಕುರಿತು ನಂತರ ತೀರ್ಮಾನ ತೆಗೆದುಕೊಳ್ಳುತ್ತೇನೆ. ಸದ್ಯಕ್ಕೆ ಯಾವುದೇ ಆತುರವಿಲ್ಲ ಎಂದರು.

ಇಸ್ರೇಲ್‍ನಲ್ಲಿ 18,000 ಭಾರತೀಯರು ಸುರಕ್ಷಿತ

ಬೆಂಗಳೂರು, ಮೈಸೂರು ಎಕ್ಸ್‍ಪ್ರೆಸ್ ಹೆದ್ದಾರಿಯ ಮಾರ್ಗಗಳ ಮಧ್ಯೆ ವಿವಿಧ ನಗರಗಳನ್ನು ಸಂಪರ್ಕಿಸುವ ತಾತ್ಕಾಲಿಕ ದ್ವಾರಗಳನ್ನು ಬಂದ್ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು ಈ ಮೊದಲೇ ಹೇಳಿದಂತೆ ಹೆದ್ದಾರಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಅವುಗಳನ್ನು ತಾತ್ಕಾಲಿಕವಾಗಿ ಮಾತ್ರ ನಿರ್ಮಿಸಲಾಗಿತ್ತು. ಈಗ ಅವನ್ನು ಬಂದ್ ಮಾಡುವುದರಿಂದ ಹೆಚ್ಚಿನ ಪರಿಣಾಮ ಏನೂ ಆಗುವುದಿಲ್ಲ. ಹೆದ್ದಾರಿ ಸಮಸ್ಯೆ ಕುರಿತಂತೆ ತಾವು ಅಧಿಕಾರಿಗಳ ಜೊತೆ ಚರ್ಚಿಸಿ ಸರಿಪಡಿಸುವುದಾಗಿ ಹೇಳಿದರು.

ಮತ್ತೊಂದು ಪಟಾಕಿ ಘಟಕದಲ್ಲಿ ಬೆಂಕಿ ಅವಘಡ, 9 ಮಂದಿ ಬಲಿ

ಅರಿಯಲೂರು ಅ.9-ಪಟಾಕಿ ತಯಾರಿಕ ಘಟಕದಲ್ಲಿ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿರುವ ಘಟನೆ ವೀರಗಳೂರು ಗ್ರಾಮದಲ್ಲಿ ನಡೆದಿದೆ.ಗಾಯಗೊಂಡಿರುವ 14ರಲ್ಲಿ ಐವರನ್ನು ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು ಪಟಾಕಿ ತಯಾರಿಕ ಘಟಕ,ಹಾಗು ಗೋದಾನಿನಲ್ಲಿ ಶೇಕರಿಸಿದ್ದ ಅಪಾರ ಪ್ರಮಾಣದ ರಾಸಾಯಿನಿಕ ವಸ್ತು ಹಾಗು ಪಟಾಕಿಗಳು ಬೆಂಕಿಗಾಹುತಿಯಾಗಿದೆ.

ದಟ್ಟ ಹೊಗೆ ಆವರಿಸಿ ಸ್ತಳೀತರನ್ನು ಬೆಚ್ಚಿಬೀಳಿಸಿದೆ.ಪಟಾಕಿಗಳನ್ನು ಸರಿಯಾಗಿ ಶೇಕರಿಸದೆ ಇದ್ದದ್ದರಿಂದ ಬಿಸಿ ಹವೆಗೆ ರಾಸಾಯನಿಕ ಪ್ರಕ್ರಿಯೆ ಉಂಟಾಗಿ ಬೆಂಕಿ ಹೊತ್ತಿಕೊಳ್ಳಲು ಕಾರಣ ಎನ್ನಲಾಗಿದೆ.ಮೃತರ ದೇಹಗಳು ಗುರುತು ಸಿಗದಷ್ಟು ಸುಟ್ಟುಹೋಗಿದೆ.ಹಲವು ವಾಹನಗಳು ಕೂಡ ಹಾನಿಯಾಗಿವೆ .

ಟಾಸ್ ಗೆದ್ದು ಬ್ಯಾಟ್ ಮಾಡಿದ್ದೇ ಆಸ್ಟ್ರೇಲಿಯಾ ಸೋಲಿಗೆ ಕಾರಣ

ಜಿಲ್ಲಾಕಾರಿ ಮೇರಿ ವರ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. 7 ಅಗ್ನಿಶಾಮಕ ವಾಹನಗಳು ಆಗಮಿಸಿ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮೃತರಿಗೆ ಸಂತಾಪ ಸೂಚಿಸಿ ,ಮೃತರ ಕುಟುಂಬಗಳಿಗೆ ತಲಾ 3 ಲಕ್ಷ ರೂ,ಗಂಭೀರವಾಗಿ ಗಾಯಗೊಂಡವರಿಗೆ ಒಂದು ಲಕ್ಷ ರೂ. ಹಾಗೂ ಸರಳವಾಗಿ ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದರು.

ರಕ್ಷಣಾ ಮತ್ತು ಪರಿಹಾರ ಚಟುವಟಿಕೆಗಳನ್ನು ತ್ವರಿತಗೊಳಿಸಲು ತನ್ನ ಸಂಪುಟದ ಸಹೋದ್ಯೋಗಿಗಳಾದ ಎಸ್ ಎಸ್ ಶಿವಶಂಕರ್ ಮತ್ತು ಸಿವಿ ಗಣೇಶನ್ ಅವರನ್ನು ನಿಯೋಜಿಸಿರುವುದಾಗಿ ಸ್ಟಾಲಿನ್ ಹೇಳಿದ್ದಾರೆ.

ಇನ್ನೊಂದು ವಾರದಲ್ಲಿ ಬರ ಅಧ್ಯಯನ ವರದಿ ಕೇಂದ್ರಕ್ಕೆ ಸಲ್ಲಿಕೆ

ಬೆಂಗಳೂರು, ಅ.9- ರಾಜ್ಯದ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಕೇಂದ್ರ ಅಧ್ಯಯನ ತಂಡವು ಕೇಂದ್ರ ಸರ್ಕಾರಕ್ಕೆ ಇನ್ನೊಂದು ವಾರದಲ್ಲಿ ಬರ ಅಧ್ಯಯನ ಕುರಿತ ವರದಿ ಸಲ್ಲಿಸುವುದಾಗಿ ಹೇಳಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು. ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಬರ ಅಧ್ಯಯನ ತಂಡಗಳೊಂದಿಗೆ ಸಂಪುಟ ಉಪ ಸಮಿತಿ ಸಭೆ ನಡೆಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಷ್ಟು ಪರಿಹಾರ ಕೊಡುತ್ತಾರೆ ಎಂಬುದನ್ನು ನೋಡಬೇಕು ಎಂದರು.

ಕೇಂದ್ರದ ಮೂರು ತಂಡಗಳು ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಕುಡಿಯುವ ನೀರು, ಮೇವು, ಬೆಳೆ ಪರಿಸ್ಥಿತಿ ಅವಲೋಕನ ಮಾಡಿವೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ 4800 ಕೋಟಿ ರೂ. ನೀಡುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದರು.ಕೇಂದ್ರ ಕೃಷಿ ಇಲಾಖೆ ಕಾರ್ಯದರ್ಶಿಗೆ ಅಧ್ಯಯನ ತಂಡ ವರದಿ ಸಲ್ಲಿಸಿದರೆ, ನಂತರ ಕೇಂದ್ರ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬಹುದು. ಕೇಂದ್ರ ಗೃಹ ಮತ್ತು ಕೃಷಿ ಸಚಿವರ ಭೇಟಿಗೆ ಸಮಯ ಕೇಳಿ ಪತ್ರ ಬರೆಯುತ್ತೇವೆ. ಸಮಯ ನೀಡಿದರೆ ಸಂಪುಟ ಉಪ ಸಮಿತಿಯ ಸದಸ್ಯರು ಭೇಟಿ ರಾಜ್ಯದ ಎದುರಿಸುತ್ತಿರುವ ಬರದ ಸಮಸ್ಯೆ ಮನವರಿಕೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

BIG NEWS : ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆ

ರಾಜ್ಯದಲ್ಲಿನ ಬರ ಪರಿಸ್ಥಿತಿಯ ಮನವಿಯನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾವು.ಬಳಿಕ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಲು ಸಮಯ ಕೇಳಿದ್ದೆವು, ಸಿಕ್ಕಿಲ್ಲ ಎಂದರು. ಮನವಿ ಸಲ್ಲಿಕೆ ನಂತರ ಕೇಂದ್ರ ತಂಡ ರಾಜ್ಯಕ್ಕೆ ಆಗಮಿಸಿ ಪರಿಶೀಲಿಸಿದೆ. ಮನವಿ ವಸ್ತು ಸ್ಥಿತಿಯಿಂದ ಕೂಡಿದ್ದು, ಸಾಕಷ್ಟು ರೈತರಿಗೆ ಬೆಳೆ ಹಾನಿಯಿಂದ ತೊಂದರೆ ಆಗಿದೆ.

ಹಿಂಗಾರು ಮಳೆ ತೊಂದರೆ ಆಗಬಹುದು, ಕುಡಿಯುವ ನೀರಿಗೂ ತೊಂದರೆ ಆಗಬಹುದು ಎಂದು ಹೇಳಿದ್ದಾರೆ. ಸಣ್ಣ ಮತ್ತು ಅತಿ ಸಣ್ಣ ರೈತರ ಅಂಕಿ- ಅಂಶ ಕೇಳಿದ್ದು, ಅದನ್ನು ಒದಗಿಸಿಕೊಡುತ್ತೇವೆ. ವಾರದ ಒಳಗಡೆ ಕೇಂದ್ರಕ್ಕೆ ವರದಿ ಸಲ್ಲಿಕೆ ಮಾಡುವುದಾಗಿ ಹೇಳಿದ್ದಾರೆ ಎಂದರು.

ಈಗ ವಿಚಿತ್ರ ಹವಾಮಾನ ಪರಿಸ್ಥಿತಿ ಇದೆ. ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮಳೆ ಸ್ಥಿತಿಗತಿಗಳ ಬಗ್ಗೆ ಸ್ಪಷ್ಟತೆ ಇಲ್ಲದ ವಾತಾವರಣ ಇದೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇದಕ್ಕೆ ಅನುಗುಣವಾಗಿ ಕಾರ್ಯಕ್ರಮ ರೂಪಿಸಲು ಕ್ರಮ ಕೈಗೊಳ್ಳಬೇಕು. ಉದ್ಯೋಗ ಖಾತ್ರಿಯಲ್ಲಿ ಕೂಲಿ ಪಾವತಿ ಆಗಿಲ್ಲ 475 ಕೋಟಿ ರೂ. ತಕ್ಷಣ ಬಿಡುಗಡೆ ಮಾಡಬೇಕು.ಕೂಲಿ ಹಣ ಬಾಕಿಯಿಂದ ಬಡವರು ಮತ್ತಷ್ಟು ಸಂಕಷ್ಟದಲ್ಲಿದ್ದಾರೆ ಎಂದರು.

ಇಸ್ರೇಲ್‍ನಲ್ಲಿ 18,000 ಭಾರತೀಯರು ಸುರಕ್ಷಿತ

ಫಸಲು ಭೀಮಾ ಯೋಜನೆ ರೈತರಿಗೆ ಪರಿಣಾಮಕಾರಿ ಅನುಕೂಲ ಆಗುತ್ತಿಲ್ಲ. ಇದನ್ನು ಕೇಂದ್ರದ ಅಧಿಕಾರಿಗಳ ಗಮನಕ್ಕೆ ತರುವಂತೆ ಹೇಳಿದ್ದೇವೆ. ಪರಿಹಾರದ ಬಗ್ಗೆ ನಾವು ಒತ್ತಡ ಹಾಕಬಹುದು, ಆದರೆ ಅಂತಿಮ ನಿರ್ಧಾರ ಅವರದ್ದೇ ಎಂದು ಸಚಿವರು ತಿಳಿಸಿದರು.

ಆಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಶುಭಮನ್‍ ಗಿಲ್ ಅಲಭ್ಯ

ಬೆಂಗಳೂರು, ಅ.9- ಆಸ್ಟ್ರೇಲಿಯಾ ವಿರುದ್ಧ ನಡೆದ 2023ರ ವಿಶ್ವಕಪ್ ಕ್ರಿಕೆಟ್‍ನ ಆರಂಭಿಕ ಪಂದ್ಯದಿಂದ ಹೊರಗುಳಿದಿದ್ದ ಟೀಮ್ ಇಂಡಿಯಾದ ಯುವ ಸ್ಟಾರ್ ಆಟಗಾರ ಶುಭಮನ್ ಗಿಲ್ ಅವರು ಆಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಪಂದ್ಯದಿಂದಲೂ ಬಹುತೇಕ ಹೊರಗುಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೂರ್ನಿಯ ತಮ್ಮ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಯ್ಕೆ ಮಂಡಳಿಯು ಡೆಂಗ್ಯು ಜ್ವರದಿಂದ ಬಳಲುತ್ತಿರುವ ಶುಭಮನ್ ಗಿಲ್ ಬದಲಿಗೆ ಇಶಾನ್ ಕಿಶನ್‍ಗೆ ಸ್ಥಾನ ಕಲ್ಪಿಸಿದ್ದರು. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಿದ ವ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ರನ್ ಖಾತೆ ತೆರೆಯದೆ ಆಸೀಸ್ ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್‍ಗೆ ವಿಕೆಟ್ ಒಪ್ಪಿಸಿ ಇತಿಹಾಸ ಪುಟ ಸೇರಿಕೊಂಡರು.

BIG NEWS : ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆ

ಆಫಾಘಾನಿಸ್ತಾನ ವಿರುದ್ಧ ಅಕ್ಟೋಬರ್ 11ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಶಾನ್ ಕಿಶನ್ ಬದಲಿಗೆ ಸಿಡಿಲಮರಿ ಶುಭಮನ್ ಗಿಲ್ ಸ್ಥಾನ ಪಡೆಯುತ್ತಾರೆ ಎಂದು ಅಂದಾಜಿಸಲಾಗಿತ್ತಾದರೂ, ಗಿಲ್ ಟೀಮ್ ಇಂಡಿಯಾದ ಜೊತೆ ನವದೆಹಲಿಗೆ ಪ್ರಯಾಣ ಬೆಳೆಸುತ್ತಾರೆ ಆದರೆ ಪ್ಲೇಯಿಂಗ್ 11ನಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

`ಶುಭಮನ್ ಗಿಲ್ ಅವರು ಜ್ವರದಿಂದ ಚೇತರಿಕೆಯ ಹಾದಿಯಲ್ಲಿದ್ದು ಟೀಮ್ ಇಂಡಿಯಾ ಜೊತೆಗೆ ದೆಹಲಿ ಪ್ರಯಾಣ ಮಾಡುತ್ತಾರೆ. ಅವರು ಚಂಡೀಘಡದ ತಮ್ಮ ನಿವಾಸಕ್ಕೆ ಹೋಗಿ ವಿಶ್ರಾಂತಿ ಪಡೆಯಲು ಬಯಸದೆ ಭಾರತ ತಂಡದ ಜೊತೆಗೆ ಇರುತ್ತಾರೆ, ಆದರೆ ಆಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಬಹುತೇಕ ಅಲಭ್ಯರಾಗಿದ್ದರೂ, ಅಕ್ಟೋಬರ್ 14ರಂದು ಸಂಪ್ರದಾಯಿಕ ವೈರಿ ಪಾಕಿಸ್ತಾನ ವಿರುದ್ಧ ನಡೆಯಲಿರುವ ಪಂದ್ಯದಿಂದ ತಂಡಕ್ಕೆ ಲಭ್ಯವಾಗಲಿದ್ದಾರೆ’ ಎಂದು ತಿಳಿದುಬಂದಿದೆ.

ಶ್ರೇಯಸ್ ಅಯ್ಯರ್‌ಗೆ ಯುವರಾಜ್‍ಸಿಂಗ್ ತರಾಟೆ

ಚೆನ್ನೈ, ಅ.9- ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಸೊನ್ನೆ ಸುತ್ತಿ ಔಟಾದ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್‌ರನ್ನು ವಿಶ್ವಕಪ್ ವಿಜೇತ ಆಲ್‍ರೌಂಡರ್ ಯುವರಾಜ್ ಸಿಂಗ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ವಿರುದ್ಧ ಹಿಡಿದ ಸಾಧಿಸಿದ ಟೀಮ್ ಇಂಡಿಯಾದ ಸ್ಪಿನ್ನರ್ 10 ಓವರ್‍ಗಳಲ್ಲಿ 28 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದು ಆಸೀಸ್ ತಂಡವನ್ನು 199 ರನ್‍ಗಳಿಗೆ ನಿಯಂತ್ರಿಸಲು ಬಲ ತುಂಬಿದ್ದರು.

BIG NEWS : ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆ

ಆಸ್ಟ್ರೇಲಿಯಾ ನೀಡಿದ 200 ರನ್ ಗುರಿ ಹಿಂಬಾಲಿಸಿದ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ  ರೋಹಿತ್ ಶರ್ಮಾ, ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರು ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹೇಝಲ್‍ವುಡ್ ಅವರ ವೇಗದ ದಾಳಿಯಿಂದ 2 ರನ್‍ಗಳಿಗೆ ವಿಕೆಟ್‍ಗಳನ್ನು ಕೈಚೆಲ್ಲಿ ತಂಡವನ್ನು ಸಂಕಷ್ಟಕ್ಕೆ ದೂಡಿದ್ದರು. ಈ ನಡುವೆ ಯುವಿ, ಯುವ ಆಟಗಾರ ಶ್ರೇಯಸ್ ಅಯ್ಯರ್ ಔಟಾದ ಕ್ರಮವನ್ನು ಖಂಡಿಸಿದ್ದಾರೆ.

ಇಸ್ರೇಲ್‍ನಲ್ಲಿ 18,000 ಭಾರತೀಯರು ಸುರಕ್ಷಿತ

ಅಯ್ಯರ್‌ರಿಂದ ಹೋರಾಟ ಕಂಡು ಬರಲಿಲ್ಲ:
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಯುವರಾಜ್ ಸಿಂಗ್, ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ಕಟುವಾಗಿ ಟೀಕಿಸಿದ್ದು,ತಂಡದಲ್ಲಿ 4ನೇ ಕ್ರಮಾಂಕದ ಬ್ಯಾಟರ್ ಒತ್ತಡವನ್ನು ನಿಭಾಯಿಸುವ ಸಾಮಥ್ರ್ಯ ಹೊಂದಿರಬೇಕು. ಕುಸಿಯುತ್ತಿರುವ ತಂಡಕ್ಕೆ ತಮ್ಮ ಸೋಟಕ ಇನಿಂಗ್ಸ್‍ನಿಂದ ತಂಡವನ್ನು ಮೇಲೆತ್ತುವ ಹೊಣೆಯನ್ನು ಹೊರಬೇಕು. ಕೆ.ಎಲ್.ರಾಹುಲ್ ಅವರು 4ನೇ ಕ್ರಮಾಂಕಕ್ಕೆ ಉತ್ತಮ ಆಯ್ಕೆ ಆಗಿದ್ದಾರೆ, ಅಲ್ಲದೆ ಪಾಕಿಸ್ತಾನ ವಿರುದ್ಧ ಈ ಕ್ರಮಾಂಕದಲ್ಲಿ ಆಡಿ ಶತಕ ಸಿಡಿಸಿದ್ದಾರೆ.ಆದರೂ ಶ್ರೇಯಸ್ ಅಯ್ಯರ್ ಅನ್ನು ಈ ಕ್ರಮಾಂಕದಲ್ಲಿ ಆಡಿಸಲಾಗಿದ್ದು ಅವರಿಂದ ಯಾವುದೇ ಕಾಣಿಕೆ ತಂಡಕ್ಕೆ ಸಿಗಲಿಲ್ಲ' ಎಂದು ಯುವರಾಜ್ ಹೇಳಿದ್ದಾರೆ. ವಿರಾಟ್ ಕೊಹ್ಲಿ ಅವರು ಅತ್ಯುತ್ತಮ ಆಟಗಾರ ನಾಗಿದ್ದು ತಂಡವನ್ನು ಮುನ್ನಡೆಸುವ ಸಾಮಥ್ರ್ಯ ಹೊಂದಿದ್ದಾರೆ. ಆದರಿಂದ ಅವರನ್ನು ತಂಡದಿಂದ ಕೈಬಿಡಬೇಡಿ’ ಎಂದು ಬಿಸಿಸಿಐ ಸೆಲೆಕ್ಟರ್ಸ್‍ಗಳನ್ನು ಯುವರಾಜ್‍ಸಿಂಗ್ ಆಗ್ರಹಿಸಿದ್ದಾರೆ.

ಟಾಸ್ ಗೆದ್ದು ಬ್ಯಾಟ್ ಮಾಡಿದ್ದೇ ಆಸ್ಟ್ರೇಲಿಯಾ ಸೋಲಿಗೆ ಕಾರಣ

ಚೆನ್ನೈ, ಅ.9-ಐಸಿಸಿ ಆವೃತ್ತಿಯ 13ನೆ ಒಡಿಐ ವಿಶ್ವಕಪ್‍ನ ಆರಂಭಿಕ ಪಂದ್ಯದಲ್ಲೇ 5 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ , ಅತಿಥೇಯ ಟೀಮ್ ಇಂಡಿಯಾ ವಿರುದ್ಧ ಸೋಲು ಕಂಡಿದ್ದು, ಪ್ಯಾಟ್ ಕಮಿನ್ಸ್ ಪಡೆ ಸೋಲಿಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕಾರಣ ತಿಳಿಸಿದ್ದಾರೆ.

ಅಕ್ಟೋಬರ್ 8(ಭಾನುವಾರ) ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸೀಸ್, ಭಾರತದ ಬೌಲರ್‍ಗಳ ಸಾಂಘಿಕ ಹೋರಾಟದಿಂದ 199 ಅಲ್ಪ ಮೊತ್ತ ಗಳಿಸಿತು. ನಂತರ ಈ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭದಲ್ಲೇ 3 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರೂ ವಿರಾಟ್ ಕೊಹ್ಲಿ (85 ರನ್) ಹಾಗೂ ಕೆ.ಎಲ್.ರಾಹುಲ್ (97*ರನ್) ಆಕರ್ಷಕ ಅರ್ಧಶತಕಗಳ ಬಲದಿಂದ 6 ವಿಕೆಟ್ ಗೆಲುವು ಸಾಧಿಸಿತು.

BIG NEWS : ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆ

ಟಾಸ್ ಗೆದ್ದು ಬ್ಯಾಟ್ ಮಾಡಿದ್ದು ಆಶ್ಚರ್ಯ ತಂದಿದೆ: ಸಚಿನ್
ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದು ನನಗೆ ನಿಜಕ್ಕೂ ಆಶ್ಚರ್ಯ ಮೂಡಿಸಿದೆ. ಟೀಮ್ ಇಂಡಿಯಾದ ಬೌಲರ್‍ಗಳು ಅತ್ಯುತ್ತಮ ಬೌಲಿಂಗ್ ಸಂಘಟಿಸಿ ಎದುರಾಳಿ ತಂಡವನ್ನು 199 ರನ್‍ಗಳಿಗೆ ನಿಯಂತ್ರಿಸಿದ್ದು ಅತ್ಯಮೋಘ ಪ್ರದರ್ಶನವಾಗಿದೆ. ಆಸ್ಟ್ರೇಲಿಯಾ ಈ ಪಿಚ್‍ನಲ್ಲಿ ಎಡಗೈ ಸ್ಪಿನ್ನರ್ (ಆಸ್ಟನ್ ಅಗರ್) ಸೇವೆ ಕಳೆದುಕೊಂಡಿತ್ತು' ಎಂದು ಸಚಿನ್ಎಕ್ಸ್’ ನಲ್ಲಿ ಹೇಳಿದ್ದಾರೆ.

ಕೊಹ್ಲಿ- ರಾಹುಲ್ ಗೆಲುವು ತಂದರು:
ವಿರಾಟ್ ಕೊಹ್ಲಿ ಹಾಗೂ ಕೆ.ಎಲ್. ರಾಹುಲ್ ಅವರು ತಂಡಕ್ಕೆ ಗೆಲುವಿನ ಇನಿಂಗ್ಸ್ ಕಟ್ಟಿದ್ದರು. ಅವರು ತುಂಬಾ ಚಾಕಚಕ್ಯತೆ ಬ್ಯಾಟಿಂಗ್ ನಡೆಸಿದ್ದರು. ಸಮಯ ಸಿಕ್ಕಾಗಲೆಲ್ಲಾ ಸ್ಪೋಟಕ ಆಟ ಆಡಿದ್ದರು. ದ್ವಿತೀಯ ಇನಿಂಗ್ಸ್ ನಲ್ಲಿ ಚೆಂಡು ಬ್ಯಾಟಿಂಗ್ ಮಾಡಲು ಉತ್ತಮವಾಗಿ ಸಹಕರಿಸುತ್ತಿತ್ತು. ಗೆಲುವಿನೊಂದಿಗೆ ಶುಭಾರಂಭ ಮಾಡಿರುವ ಟೀಮ್ ಇಂಡಿಯಾಗೆ ಧನ್ಯವಾದಗಳು’ ಎಂದು ತೆಂಡೂಲ್ಕರ್ ತಿಳಿಸಿದ್ದಾರೆ.

ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಿರಿಕ್, ಕೊರಿಯರ್ ಬಾಯ್ ಕೊಲೆ

ಬೆಂಗಳೂರು,ಅ.9- ಗಣೇಶ ಮೂರ್ತಿ ವಿಸರ್ಜನೆ ಗಾಗಿ ಮೆರವಣಿಗೆ ಹೋಗುತ್ತಿದ್ದಾಗ, ಡ್ಯಾನ್ಸ್ ಮಾಡುವ ವಿಚಾರಕ್ಕೆ ಗಲಾಟೆ ನಡೆದು, ಗಣೇಶ ಬಲಿ ಕೇಳುತ್ತಿದೆ ಎಂದು ಕೊರಿಯರ್ ಬಾಯ್‍ಗೆ ಡ್ರ್ಯಾಗರ್‌ನಿಂದ ಹೊಟ್ಟೆಗೆ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಆಡುಗೋಡಿಯ ಎಕೆ ಕಾಲೋನಿ ನಿವಾಸಿ ಶ್ರೀನಿವಾಸ (24) ಕೊಲೆಯಾದ ಯುವಕ. ಈತ ಕೊರಿಯರ್ ಬಾಯ್ ವೃತ್ತಿ ಮಾಡುತ್ತಿದ್ದನು.

ಶ್ರೀನಿವಾಸ ಹಾಗೂ ಸ್ನೇಹಿತರೆಲ್ಲ ಸೇರಿ ಗಣೇಶ ಹಬ್ಬದಂದು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದು ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ಹೋಗುವಾಗ ಡ್ಯಾನ್ಸ್ ಮಾಡುವ ವಿಚಾರಕ್ಕೆ ವಿನಯ್ ಹಾಗೂ ಶ್ರೀನಿವಾಸ ನಡುವೆ ಜಗಳ ನಡೆದಿತ್ತು. ವಿನಯ್ ಹಾಗೂ ಆತನ ಗುಂಪು ತಮ್ಮ ಏರಿಯಾದಲ್ಲಿ ಗಣೇಶ ಪ್ರತಿಷ್ಠಾಪಿಸಿದ್ದು, ರಾತ್ರಿ ಮೂರ್ತಿ ವಿಸರ್ಜನೆಗಾಗಿ ಶ್ರೀನಿವಾಸ ಮನೆಯ ಮುಂದೆ ಮೆರವಣಿಗೆ ಹೋಗುತ್ತಿದ್ದಾಗ ಶ್ರೀನಿವಾಸ ನಮ್ಮ ಮನೆ ಮುಂದೆ ಡ್ಯಾನ್ಸ್ ಮಾಡಬೇಡಿ ಎಂದು ಹೇಳಿದಾಗ ಇಬ್ಬರ ನಡುವೆ ಜಗಳವಾಗಿದೆ.

BIG NEWS : ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆ

ಗಲಾಟೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದರು. ಕೆಲ ಸಮಯದ ನಂತರ ವಿನಯ್, ರಂಜಿತ್ ಇನ್ನಿತರರು ಶ್ರೀನಿವಾಸ ಮನೆ ಬಳಿ ಹೋಗಿ ಮತ್ತೆ ಗಲಾಟೆ ಮಾಡಿ ನಮಗೇ ಡ್ಯಾನ್ಸ್ ಮಾಡಬೇಡ ಎನ್ನುತ್ತೀಯಾ, ಗಣೇಶ ಬಲಿ ಕೇಳುತ್ತಿದೆ ಎಂದು ಕೂಗಾಡುತ್ತಾ, ಮನೆಯಿಂದ ಹೊರಗೆ ಬಂದ ಶ್ರೀನಿವಾಸ ಜೊತೆಗೆ ಜಗಳವಾಡಿ ಡ್ರ್ಯಾಗರ್‌ನಿಂದ ಕರುಳು ಹೊರಬರುವಂತೆ ಹೊಟ್ಟೆಗೆ ಇರಿದಿದ್ದಾರೆ.

ಆ ವೇಳೆ ಶ್ರೀನಿವಾಸ ತಾಯಿ ಇಂದ್ರಮ್ಮ ಜಗಳ ಬಿಡಿಸಲು ಮಧ್ಯ ಬಂದಾಗ ಅವರಿಗೂ ಇರಿತದಿಂದ ಗಾಯವಾಗಿದೆ. ತಕ್ಷಣ ಶ್ರೀನಿವಾಸನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ, ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಗಲಾಟೆಯಿಂದಾಗಿ ಶ್ರೀನಿವಾಸ ತಾಯಿ ಇಂದ್ರಮ್ಮ ಹಾಗೂ ರಂಜಿತ್‍ಗೂ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಸುದ್ದಿ ತಿಳಿದು ಆಡುಗೋಡಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ. ಶ್ರೀನಿವಾಸ ಮೃತದೇಹವನ್ನು ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ಬ್ರಾಂಡ್ ಬೆಂಗಳೂರಿಗೆ ಸಾರ್ವಜನಿಕ ಸಹಭಾಗಿತ್ವಕ್ಕಾಗಿ ಮಹತ್ವದ ಸುಧಾರಣೆಗಳ ಜಾರಿ : ಡಿಸಿಎಂ

ಬೆಂಗಳೂರು,ಅ.9- ಮಹಾನಗರದಲ್ಲಿನ ಆಸ್ತಿ ದಾಖಲೆಗಳನ್ನು ಸಮರ್ಪಕಗೊಳಿಸಿ ಮನೆ ಬಾಗಿಲಿಗೆ ತಲುಪಿಸಲು ನಮ್ಮ ಸ್ವತ್ತು, ರಸ್ತೆಗಳ ಕಾಮಗಾರಿಗಳಲ್ಲಿನ ಅವ್ಯವಹಾರ ತಡೆಯಲು ಪಾರದರ್ಶಕವಾದ ಕ್ಯೂ ಆರ್ ಕೋಡ್ ವ್ಯವಸ್ಥೆ, ಪಾರ್ಕ್, ಆಟದ ಮೈದಾನ ಸೇರಿದಂತೆ ಇತರ ಸ್ವತ್ತುಗಳ ನಿರ್ವಹಣೆಯಲ್ಲಿ ಸಾರ್ವಜನಿಕ ಸಹಭಾಗಿತ್ವಕ್ಕೆ ಚಿಂತನೆ ನಡೆಸಲಾಗಿದ್ದು, ಬ್ರಾಂಡ್ ಬೆಂಗಳೂರು ಮೂಲಕ ಮಹತ್ವದ ಸುಧಾರಣೆಗಳನ್ನು ಜಾರಿಗೊಳಿಸುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಜ್ಞಾನಜ್ಯೊತಿ ಸಭಾಂಗಣದಲ್ಲಿ ಬ್ರಾಂಡ್ ಬೆಂಗಳೂರಿಗಾಗಿ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಏಳೆಂಟು ಪ್ರಮುಖ ನಿರ್ಣಯಗಳನ್ನು ಪ್ರಕಟಿಸಿದರು. ಬ್ರಾಂಡ್ ಬೆಂಗಳೂರಿಗಾಗಿ ಸಾರ್ವಜನಿಕರಿಂದ ಸುಮಾರು 70 ಸಾವಿರ ಸಲಹೆಗಳು ಬಂದಿವೆ.

ಇದು ಜನರ ನಗರ. ಇದನ್ನು ಅಂತರಾಷ್ಟ್ರೀಯ ಗುಣಮಟ್ಟಕ್ಕನುಗುಣವಾಗಿ ಅಭಿವೃದ್ಧಿಪಡಿಸಲು ಬ್ರಾಂಡ್ ಬೆಂಗಳೂರು ನಿರ್ಮಾಣ ಮಾಡಬೇಕಿದೆ. ಹಣಕಾಸಿನ ಲಭ್ಯತೆ ಆಧರಿಸಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು. ಇದಕ್ಕಾಗಿ ತಮ್ಮ ನೇತೃತ್ವದಲ್ಲಿ ಸಮನ್ವಯ ಸಮಿತಿ, ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕಾರ್ಯಾನುಷ್ಠಾನ ಸಮಿತಿ ರಚಿಸಲಾಗುವುದು ಎಂದರು.

ಎಸ್.ಎಂ.ಕೃಷ್ಣ ಕಾಲದಲ್ಲಿ ಆಸ್ತಿಗಳ ದಾಖಲಾತಿಗಳ ಡಿಜಿಟಲೀಕರಣಕ್ಕಾಗಿ ಭೂಮಿ ಸಾಫ್ಟ್‍ವೇರ್ ಅನ್ನು ಜಾರಿಗೊಳಿಸಲಾಗಿದೆ. ಆದರೆ ಬೆಂಗಳೂರಿನಲ್ಲಿ ಇನ್ನೂ ಪುಸ್ತಕ ಇಟ್ಟುಕೊಂಡು ಕುಳಿತಿದ್ದೇವೆ. ಒಂದು ಸಣ್ಣ ಪ್ರದೇಶದಲ್ಲಿ ಮಾತ್ರ ಪ್ರಾಯೋಗಿಕ ಪ್ರಯತ್ನ ನಡೆದಿದೆ. ನಗರದಲ್ಲಿ ಯಾರ ಆಸ್ತಿಗೂ ಸರಿಯಾದ ದಾಖಲೆಗಳಿಲ್ಲ. ಕೆಲವರ ದಾಖಲೆಗಳು ಸರಿ ಇದ್ದರೂ, ಯಾರ ಖಾತೆಗೆ ಯಾರದೋ ಹೆಸರು, ಇನ್ನ್ಯಾರೊ ಪರಭಾರೆ ಮಾಡುವುದು ಕಂಡುಬರುತ್ತಿದೆ. ಇದನ್ನು ಸರಿಪಡಿಸಬೇಕಿದೆ.

ಪ್ರತಿಯೊಂದು ಮನೆ, ನಿವೇಶನ, ಅಪಾರ್ಟ್‍ಮೆಂಟ್‍ಗಳನ್ನು ಅಳತೆ ಮಾಡಿಸಿ ನಕ್ಷೆ ಸಹಿತವಾಗಿ ಮಾಲಿಕತ್ವದ ದಾಖಲಾತಿಗಳನ್ನು ಡಿಜಿಟಲೀಕರಣ ಮಾಡಿ, ದಾಖಲೆಗಳನ್ನು ಮನೆಬಾಗಿಲಿಗೆ ತಲುಪಿಸಲಾಗುವುದು, ಮೊಬೈಲ್‍ನಲ್ಲೇ ದಾಖಲೆಗಳನ್ನು ಪರಿಶೀಲಿಸಬಹುದಾದ ವ್ಯವಸ್ಥೆಗೆ ನಮ್ಮ ಸ್ವತ್ತು ಎಂದು ನಾಮಕರಣ ಮಾಡಲಾಗುತ್ತದೆ. ಇದರಿಂದ ಅನಗತ್ಯವಾದ ತೊಂದರೆ ತಪ್ಪಲಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂದು ಹೇಳಿದರು.

ಟ್ರೇಡ್‍ಲೈಸೆನ್ಸ್ ವ್ಯವಸ್ಥೆಯಲ್ಲೂ ಸುಧಾರಣೆ ಮಾಡುವ ಅಗತ್ಯವಿದೆ. ಅರ್ಜಿ ಹಾಕಿದ ತಕ್ಷಣ ನೇರವಾಗಿ ಅನುಮತಿ ನೀಡಬೇಕು ಎಂದು ಕೆಎಂಸಿ ಕಾಯ್ದೆಯಲ್ಲಿದೆ. ಅದರಂತೆ ಈಗ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

BIG NEWS : ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆ

ಆನ್‍ಲೈನ್ ವ್ಯವಸ್ಥೆ ಜಾರಿ ಮಾಡುವಂತೆ ಪ್ರೇಕ್ಷಕರು ಸಲಹೆ ನೀಡಿದಾಗ, ಆನ್‍ಲೈನ್ ಮಾಡಿದ್ದಕ್ಕೆ ಪಟಾಕಿ ದುರಂತದಲ್ಲಿ 14 ಜನ ಪ್ರಾಣ ಕಳೆದುಕೊಂಡರು. ಸಾಧಕ-ಬಾಧಕಗಳನ್ನು ಪರಿಶೀಲಿಸಬೇಕು. ಖುದ್ದು ಸ್ಥಳ ತಪಾಸಣೆ, ಉತ್ತರಾದಾಯಿತ್ವದ ಅಗತ್ಯವಿದೆ. ಇದರ ಜೊತೆಗೆ ವರ್ತಕರಿಗೆ ತೊಂದರೆಯಾಗದಂತಹ ಸರಳ ವ್ಯವಸ್ಥೆ ರೂಪಿಸಬೇಕಿದೆ ಎಂದರು.

ಮನೆ ನಿರ್ಮಾಣಕ್ಕೆ ಪ್ಲಾನ್ ಮಂಜೂರಾತಿಗಾಗಿ ಪಾಲಿಕೆ ಕಚೇರಿಗೆ ಅಲೆದಾಡುವ ವ್ಯವಸ್ಥೆಯನ್ನು ತಪ್ಪಿಸಬೇಕಿದೆ. 50-80 ಅಡಿವರೆಗಿನ ಮನೆ ನಿರ್ಮಾಣಗಳಿಗೆ ಸ್ವಯಂಚಾಲಿತ ನಕ್ಷೆ ಮಂಜೂರಾತಿ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಅರ್ಹ ವಾಸ್ತುಶಿಲ್ಪಿಗಳು ಧೃಡೀಕರಿಸಿದ ಪ್ಲಾನ್‍ಗಳನ್ನು ಅಂಗೀಕರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ರಸ್ತೆ ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾರೀ ಹಗರಣಗಳು ನಡೆಯುತ್ತಿವೆ. ಒಂದೇ ರಸ್ತೆಗೆ ಎರಡೂ ದಿಕ್ಕಿನಿಂದಲೂ ಬೇರೆ ಬೇರೆ ಗುತ್ತಿಗೆದಾರರು ಕಾಮಗಾರಿಗಳ ಬಿಲ್ ಪಡೆದಿರುವ ಉದಾಹರಣೆಗಳಿವೆ. ಇದಕ್ಕೆ ಕಡಿವಾಣ ಹಾಕಬೇಕು. ರಸ್ತೆ ಅಭಿವೃದ್ಧಿಗೆ ಯಾವ ಮೂಲದಿಂದ ಹಣ ಖರ್ಚು ಮಾಡಲಾಗಿದೆ. ಪಾಲಿಕೆ, ಸಂಸದರು, ಶಾಸಕರು ಯಾವ ನಿಯನ್ನು ಬಳಸಲಾಗಿದೆ ಎಂಬ ಲೆಕ್ಕಾಚಾರ ಕರಾರುವಕ್ಕಾಗಿ ಇರಬೇಕು. ಕಾಮಗಾರಿಗೆ ಎಷ್ಟು ಹಣ ಖರ್ಚು ಮಾಡಲಾಗಿದೆ. ಗುತ್ತಿಗೆದಾರರು ಯಾರು ಎಂಬೆಲ್ಲಾ ವಿವರಗಳನ್ನು ಒಳಗೊಂಡ ಕ್ಯೂ ಆರ್ ಕೋಡ್ ಅನ್ನು ಪ್ರತಿಯೊಂದು ರಸ್ತೆಗೂ ಸೃಷ್ಟಿಸಲಾಗುವುದು. ಪಾರದರ್ಶಕತೆಯ ಮೂಲಕ ರಸ್ತೆ ಕಾಮಗಾರಿ ಹಗರಣಗಳನ್ನು ತಡೆಯಲಾಗುವುದು.

ಸಾರ್ವಜನಿಕರು ಬಳಸುವ ರಸ್ತೆಗಳು, ಆಟದ ಮೈದಾನಗಳ ನಿರ್ವಹಣೆಗೆ ಸ್ಥಳೀಯರನ್ನೊಳಗೊಂಡ ರಾಜಕೀಯೇತರ ಸಮಿತಿಗಳನ್ನು ರಚಿಸಲಾಗುತ್ತದೆ. ನಾಗರಿಕರು ಅವರೇ ಬಳಸುವ ಸ್ವತ್ತನ್ನು ರಕ್ಷಿಸಿ ಅಭಿವೃದ್ಧಿಪಡಿಸಿಕೊಳ್ಳಲು ಇದು ಸಹಕಾರಿಯಾಗಲಿದೆ. ಶಾಸಕರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ವಾರ್ಡ್ ಸಮಿತಿ, ರಸ್ತೆ ಸಂಚಾರ ಸುಧಾರಣೆ, ಕೆರೆಯ ಅಭಿವೃದ್ಧಿ, ಇಂದಿರಾ ಕ್ಯಾಂಟಿನ್ ನಿರ್ವಹಣೆ, ಹಸಿರು ಬೆಂಗಳೂರು ಸೇರಿದಂತೆ ವಿವಿಧ ವಿಚಾರಗಳ ಮೇಲ್ವಿಚಾರಣೆಗೆ ಪ್ರತ್ಯೇಕ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ.

ಟೆಂಡರ್‍ಶ್ಯೂರ್ ರಸ್ತೆಗಳಲ್ಲಿ ನಿರ್ಮಿಸಲಾಗಿರುವ ಸುರಂಗಮಾರ್ಗದಲ್ಲೇ ವಿದ್ಯುತ್ ಕೇಬಲ್ ಸೇರಿದಂತೆ ವಿವಿಧ ತಂತಿಗಳು ಹಾದು ಹೋಗಲು ಹಂತಹಂತವಾಗಿ ಕ್ರಮ ಜರುಗಿಸಲಾಗುವುದು. ಬೆಂಗಳೂರಿನ ಯೋಜನೆಗಳಿಗೆ ಸಂಬಂಧಪಟ್ಟಂತೆ ಬಿಬಿಎಂಪಿ, ಬಿಡಿಎ, ಮೆಟ್ರೊ, ಪೊಲೀಸ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳ ನಡುವೆ ಸಮನ್ವಯತೆ ಗುರುತಿಸಲಾಗುವುದು.

ಸಂಚಾರ ನಿರ್ವಹಣೆಗೆ ಮೇಲ್ಸೇತುವೆ, ಸುರಂಗ ಮಾರ್ಗಗಳ ನಿರ್ಮಾಣಕ್ಕೆ ಪರಿಶೀಲನೆ ನಡೆಯುತ್ತಿದೆ. ರಸ್ತೆಗಳಲ್ಲಿ ಸಂಚಾರದಟ್ಟಣೆಯಿಂದ ಎರಡು ಮೂರು ಗಂಟೆ ಸಮಯ ವ್ಯರ್ಥವಾಗುವುದನ್ನು ತಡೆಗಟ್ಟಲು ಆದ್ಯತೆ ನೀಡಲಾಗುವುದು. ತ್ಯಾಜ್ಯ ನಿರ್ವಹಣೆ ವೈಜ್ಞಾನಿಕ ಕ್ರಮಗಳನ್ನು ಆಚರಿಸಲಾಗುವುದು. ಈಗಾಗಲೇ ತಾವು ಹಲವು ನಗರಗಳಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ್ದು, ಹೈದ್ರಾಬಾದ್‍ನಲ್ಲಿ ಪ್ರತಿ ಮನೆಯಿಂದ 100 ರೂ. ಕಸ ಸಂಗ್ರಹಣೆಗೆ ಶುಲ್ಕ ವಿಸಲಾಗುತ್ತಿದೆ.

ಇಸ್ರೇಲ್‍ನಲ್ಲಿ 18,000 ಭಾರತೀಯರು ಸುರಕ್ಷಿತ

ದೆಹಲಿ, ಚೆನ್ನೈ ಹಲವು ಕಡೆ ಇರುವ ಉತ್ತಮ ಅಭ್ಯಾಸಗಳನ್ನು ಪರಿಶೀಲಿಸಿದ್ದೇವೆ. ಬೆಂಗಳೂರಿನಲ್ಲಿ ಏಳೆಂಟು ಕಡೆ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳಿವೆ. ಆದರೆ ಅವು ಯಶಸ್ವಿಯಾಗಿಲ್ಲ. ಕಸವನ್ನು ಒಂದು ಕಡೆ ಹಾಕಿದರೆ ಪ್ರಯೋಜನವಿಲ್ಲ. ವಿದ್ಯುತ್ ಅಥವಾ ಸಾವಯವ ಗೊಬ್ಬರ ತಯಾರು ಮಾಡಬೇಕಿದೆ. ಈ ಕುರಿತು ಕಾರ್ಯಕ್ರಮಗಳು ಜಾರಿಯಾಗಲಿದೆ ಎಂದರು.

ಬೆಂಗಳೂರಿನಲ್ಲಿ ಕೇವಲ 3 ಸಾವಿರ ಕೋಟಿ ರೂ. ಮಾತ್ರ ತೆರಿಗೆ ಸಂಗ್ರಹವಾಗುತ್ತಿದೆ. ಇದು ನಾಚಿಕೆಗೇಡು. ಈ ಹಿಂದೆ ಜನರನ್ನು ನಂಬಿ ಜಾರಿಗೊಳಿಸಲಾದ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ನಾಗರಿಕರು ಪ್ರಮಾಣಿಕವಾಗಿ ಪಾಲಿಸುತ್ತಿಲ್ಲ. ಯಾವುದೇ ತೆರಿಗೆಯನ್ನು ಹೆಚ್ಚಿಸದೆ ಈಗಾಗಲೇ ನಿರ್ಮಾಣವಾಗಿರುವ ಆಸ್ತಿಗಳಿಗೆ ಕರಾರುವಕ್ಕಾದ ತೆರಿಗೆ ಸಂಗ್ರಹಿಸುವ ಹೊಸ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ಹೇಳಿದರು.

225 ವಾರ್ಡ್‍ಗಳಿಗೆ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದ್ದು, ಯಾವುದೇ ಕ್ಷಣದಲ್ಲಿ ಚುನಾವಣೆ ಘೋಷಣೆಯಾಗಬಹುದು. ಜನರ ಸೇವೆ ಮಾಡಲು ವಿಧಾನಸಭೆ ಚುನಾವಣೆಯಲ್ಲಿ ಮತದಾರರು ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಲ ನೀಡಬೇಕು ಎಂದರು.

ಬ್ರಾಂಡ್ ಬೆಂಗಳೂರಿಗಾಗಿ ಮಹತ್ವದ ಕಾರ್ಯಾಗಾರ

ಬೆಂಗಳೂರು,ಅ.9- ಉತ್ತಮ ಬೆಂಗಳೂರು, ಅಂತರಾಷ್ಟ್ರೀಯ ಮಟ್ಟದ ಬ್ರಾಂಡ್ ಬೆಂಗಳೂರಿಗಾಗಿ ಮಹಾನಗರಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಅಂತಿಮ ಸುತ್ತಿನ ಸಮಾಲೋಚನಾ ಸಭೆ ನಡೆಸಿದರು. ವಿವಿಧ ಶೈಕ್ಷಣಿಕ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ತಜ್ಞರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗನ್ನೊಳಗೊಂಡ ಮಹತ್ವದ ಕಾರ್ಯಾಗಾರ ಬೆಂಗಳೂರಿನ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ನಡೆಯಿತು.

ಇಸ್ರೇಲ್‍ನಲ್ಲಿ 18,000 ಭಾರತೀಯರು ಸುರಕ್ಷಿತ

ಬ್ರಾಂಡ್ ಬೆಂಗಳೂರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕನಸಿನ ಯೋಜನೆಯಾಗಿದ್ದು, ಅದಕ್ಕಾಗಿ ಈ ಮೊದಲು ವೆಬ್ ಪೋರ್ಟಲ್ ಮೂಲಕ ಸಾರ್ವಜನಿಕರಿಂದ ಸಲಹೆ ಹಾಗೂ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿತ್ತು. ಸುಮಾರು 70 ಸಾವಿರಕ್ಕೂ ಹೆಚ್ಚು ಅಭಿಪ್ರಾಯಗಳು ಸಂಗ್ರಹವಾಗಿದ್ದವು. ಅವುಗಳನ್ನು ಕ್ರೂಢಿಕರಿಸಿ 8 ವಿಭಾಗಗಳಿಗೆ ವಿಂಗಡಿಸಲಾಗಿದ್ದು, ಪ್ರತಿಯೊಂದು ಕ್ಷೇತ್ರದಲ್ಲೂ ಅಧ್ಯಯನ ನಡೆಸಿ ವರದಿ ನೀಡಲು ವಿವಿಧ ವಿಶ್ವವಿದ್ಯಾಲಯಗಳಿಗೆ ಜವಾಬ್ದಾರಿ ನೀಡಲಾಗಿತ್ತು.

ಖಾಸಗಿ ವಿಶ್ವವಿದ್ಯಾಲಯಗಳು ಹಾಗೂ ಇತರ ತಜ್ಞ ಸಂಸ್ಥೆಗಳು ವರದಿ ಸಲ್ಲಿಸಿವೆ. ಅದನ್ನು ಕ್ರೂಢೀಕರಿಸಿ ಅಂತಿಮ ವರದಿ ಸಲ್ಲಿಸಲು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ ಜವಾಬ್ದಾರಿ ವಹಿಸಲಾಗಿದೆ. ಅದರಂತೆ ಹಲವು ಸುತ್ತಿನ ಕಾರ್ಯಾಗಾರಗಳ, ಸಮಾವೇಶಗಳ ಅಭಿಪ್ರಾಯ ಕ್ರೂಢೀಕರಣ ಪ್ರಯತ್ನಗಳು ನಡೆದಿವೆ. ಅಂತಿಮ ಹಂತವಾಗಿ ಇಂದು ಎಲ್ಲರನ್ನೂ ಒಳಗೊಂಡ ಕಾರ್ಯಾಗಾರ ನಡೆದಿದೆ.

ಅದರಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಲಿಂಗರಾಜು ಗಾಂಧಿ ಬ್ರಾಂಡ್ ಬೆಂಗಳೂರಿಗೆ ಬೆಂಗಳೂರು ವಿಶ್ವವಿದ್ಯಾಲಯವನ್ನುಜ್ಞಾನದ ಪಾಲುದಾರರನ್ನಾಗಿ ನೇಮಿಸಲಾಗಿದೆ.

ಡಿಸಿಎಂ ಡಿಕೆಶಿ ವಿರುದ್ಧ ಜೆಡಿಎಸ್ ವಾಗ್ದಾಳಿ

ಇದೇ ಮೊದಲ ಬಾರಿಗೆ 70 ಸಾವಿರಕ್ಕೂ ಹೆಚ್ಚು ಅಭಿಪ್ರಾಯಗಳು ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಸಾರ್ವಜನಿಕರ, ತಜ್ಞರ ಅಭಿಪ್ರಾಯಗಳನ್ನು ಆಧರಿಸಿ ಕ್ರಿಯಾ ಯೋಜನೆ ತಯಾರಿಸುವ ಸಂಬಂಧಪಟ್ಟಂತೆ ಈಗಾಗಲೇ ವರದಿ ಸಿದ್ಧಪಡಿಸಲಾಗುತ್ತಿದೆ. ಮೂರ್ನಾಲ್ಕು ದಿನಗಳಲ್ಲಿ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ಚಂದ್ರನ ಮೇಲೆ ಮನೆ ನಿರ್ಮಿಸಲು ಮುಂದಾದ ನಾಸಾ

ವಾಷಿಂಗ್‍ಟನ್,ಅ.9- ಮುಂದಿನ ಕೆಲವು ವರ್ಷಗಳಲ್ಲಿ ಚಂದ್ರನ ಮೇಲೆ ದೀರ್ಘಾವಧಿಯ ಮನೆಗಳನ್ನು ನಿರ್ಮಿಸುವ ಯೋಜನೆಗೆ ಅಮೆರಿಕದ ಬಾಹ್ಯಾಕಾಶ ಕೇಂದ್ರ ನಾಸಾ ಮುಂದಾಗಿದೆ. ಇನ್ನು ಮುಂದೆ ಭೂಮಿಯಿಂದ ಮೇಲಾರಿ ಚಂದ್ರನ ಅಂಗಳದಲ್ಲಿ ನೈಸರ್ಗಿಕ ಉಪಗ್ರಹದಲ್ಲಿ ಸ್ವಲ್ಪ ಸಮಯವನ್ನು ಕಳೆಯುವ ಬದಲಿಗೆ ಗಗನಯಾತ್ರಿಗಳನ್ನು ಸಕ್ರಿಯಗೊಳಿಸಲು ಮತ್ತು ಅಲ್ಲಿ ಕೆಲ ಕಾಲ ಉಳಿಯಲು ಬೇಸ್‍ಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ.

ಚಂದ್ರನ ಮಣ್ಣನ್ನು ಕಚ್ಚಾ ವಸ್ತುವಾಗಿ ಬಳಸುವುದು ಸಾಧ್ಯವಿಲ್ಲ ಹಾಗಾಗಿ ಕಚ್ಚಾ ವಸ್ತುಗಳನ್ನು ಭೂಮಿಯಿಂದ ಸಾಗಿಸುವುದೇ ಸವಾಲಾಗಿದೆ. ಪ್ರತಿ ಕಿಲೋಗ್ರಾಂ ಚಂದ್ರನ ಅಂಗಳಕ್ಕೆ ಸಾಗಿಸುವ ವೆಚ್ಚ ಹೆಚ್ಚಾಗುತ್ತದೆ. ಆದ್ದರಿಂದ ನಾವು ಇತರ ಪರಿಹಾರಗಳನ್ನು ಹುಡುಕಬೇಕಾಗಿದೆ ಎಂದು ನಾಸಾದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಐಕಾನ್ ಕಂಪನಿ ಹೇಳಿದೆ.

ಫೈಟರ್ ಮನಮೋಹಕ, ಗೆದ್ದ ನಿರ್ಮಾಪಕ

ಕಂಪನಿಯು 2022 ರಲ್ಲಿ ನಾಸಾ ದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ ಮತ್ತು ಚಂದ್ರನ ಮಣ್ಣಿನಿಂದ ಚಂದ್ರನ ಆಶ್ರಯವನ್ನು ನಿರ್ಮಿಸಲು ಯೋಜಿಸಿದೆ. ವಾಸ್ತವವಾಗಿ, ಐಕಾನ್ ಈಗಾಗಲೇ ಟೆಕ್ಸಾಸ್‍ನಲ್ಲಿ ತನ್ನ 3ಡಿ ಮುದ್ರಣ ತಂತ್ರಜ್ಞಾನವನ್ನು ಬಳಸಿಕೊಂಡು ಮನೆಗಳನ್ನು ನಿರ್ಮಿಸುತ್ತಿದೆ, ಇದು 48 ಗಂಟೆಗಳಲ್ಲಿ ಮನೆಗಳನ್ನು ನಿರ್ಮಿಸಲು ಶಕ್ತಗೊಳಿಸುತ್ತದೆ ಮತ್ತು ಚಂದ್ರನ ಮೇಲೆ ಸುಮಾರು 240 ಮನೆ ಹೊಂದಿಕೊಳ್ಳಲು ಯೋಜಿಸಿದೆ. ಈ ಬಾರಿ ಚಂದ್ರನ ರೆಗೊಲಿತ್ ಅನ್ನು ಕಚ್ಚಾ ವಸ್ತುವಾಗಿ ಬಳಸುತ್ತದೆ. ಈ ಪರಿಕಲ್ಪನೆಯನ್ನು ಭವಿಷ್ಯದಲ್ಲಿ ಮಂಗಳದಲ್ಲಿಯೂ ಬಳಸಬಹುದು.

ನಿಜ್ಜರ್ ಹತ್ಯೆಯಲ್ಲಿ ಚೀನಿ ಕೈವಾಡ : ಜೆನ್ನಿಫರ್ ಝೆಂಗ್

ಸದ್ಯಕ್ಕೆ, ಈ ಯೋಜನೆಯು ಕೇವಲ ಮೂಲ ಮಾದರಿಯ ಹಂತದಲ್ಲಿದೆ, ಆದರೆ 2040 ರ ವೇಳೆಗೆ ಈ ಚಂದ್ರನ ಮನೆಗಳನ್ನು ನೋಡಲು ನಾಸಾ ಆಶಿಸುತ್ತಿದೆ. ಆಶ್ಚರ್ಯಕರವಾಗಿ, ಅವರು ಕೇವಲ ಗಗನಯಾತ್ರಿಗಳಿಗೆ ಮಾತ್ರವಲ್ಲ, ಆದರೆ ಸಂಭಾವ್ಯ ಭವಿಷ್ಯದ (ಶ್ರೀಮಂತ) ಗ್ರಾಹಕರಿಗೆ ಸಹ ಸಾಧ್ಯವಾಗುತ್ತದೆ. ಬಾಹ್ಯಾಕಾಶ ಪ್ರಯಾಣದ ಅನೇಕ ಅಪಾಯಗಳಿಂದ ಸುರಕ್ಷಿತವಾಗಿ ಉಳಿಯುವಾಗ ಚಂದ್ರನತ್ತ ಪ್ರಯಾಣಿಸಲು ಮಾನವರು ಒಂದು ದಿನ ಚಂದ್ರನ ಮೇಲೆ ಉಳಿಯುತ್ತಾರೆ ಎಂಬ ಕಲ್ಪನೆಯ ಬಗ್ಗೆ ಉತ್ಸಾಹವಿದೆ ಎಂದು ನಾಸಾದ ರೇಮಂಡ್ ಕ್ಲಿಂಟನ್ ತಿಳಿಸಿದ್ದಾರೆ.