Friday, November 7, 2025
Home Blog Page 1905

ನಟ ಶಾರುಖ್​ ಖಾನ್​ಗೆ ವೈ ಪ್ಲಸ್ ಭದ್ರತೆ

ಮುಂಬೈ,ಅ.9-ಮುಂಬೈ- ಪಠಾಣ್ ಹಾಗೂ ಜವಾನ್ ಸಿನಿಮಾದ ಅಭೂತಪೂರ್ವ ಯಶಸ್ಸಿನ ಅಲೆಯಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಮಹಾರಾಷ್ಟ್ರ ಸರ್ಕಾರವು ದಿಢೀರನೆ ವೈ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಿದೆ. ಬಾಲಿವುಡ್ ನಟನಿಗೆ ಹಲವು ರೀತಿಯಲ್ಲಿ ಜೀವ ಬೆದರಿಕೆ ಇರುವ ಕಾರಣ ವೈ ಪ್ಲಸ್ ಕೆಟಗರಿ ಭದ್ರತೆ ಒದಗಿಸಲಾಗಿದೆ ಎಂಬುದನ್ನು ಮುಂಬೈ ಪೊಲೀಸ್ ಮೂಲಗಳು ದೃಢಪಡಿಸಿವೆ.

ಮಹಾರಾಷ್ಟ್ರದ ಉನ್ನತ ಪ್ರಭಾವಿ ಸಮಿತಿಯು ಶಾರುಖ್ ಖಾನ್ ಅವರಿಗೆ ವೈ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಬೇಕು ಎಂದು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಭದ್ರತೆ ಒದಗಿಸಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಬಿಡುಗಡೆ ವೇಳೆ ಉಂಟಾದ ವಿವಾದದ ಬಳಿಕ ನಟನಿಗೆ ಜೀವ ಬೆದರಿಕೆ ಹಾಕಲಾಗಿದ್ದು, ಇದೇ ಕಾರಣಕ್ಕಾಗಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ ಅವರ ಭದ್ರತೆಗೆ ಇಬ್ಬರು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿತ್ತು. ಜೊತೆಗೆ ಭದ್ರತೆಗಾಗಿ ಅವರದೇ ಆದ ವೈಯಕ್ತಿಕ ಅಂಗರಕ್ಷಕರಿದ್ದರು. ಆದರೀಗ ಹೈ-ಪರ್ವ ಕಮಿಟಿಯ ಶಿಫಾರಸುಗಳನ್ನು ಅನುಸರಿಸಿ ಶಾರುಖ್ ಖಾನ್ ಅವರ ಭದ್ರತೆಯನ್ನು ವೈ ಪ್ಲಸ್ ಭದ್ರತೆಗೆ ಮೇಲ್ದರ್ಜೆಗೇರಿಸಲಾಗಿದೆ ಎಂದು ಮೂಲಗಳು ವಿವರಿಸಿವೆ.

ಕಂದಕಕ್ಕೆ ಬಸ್ ಉರುಳಿ ಬಿದ್ದು 6 ಪ್ರಯಾಣಿಕರ ಸಾವು

ಜವಾನ್ ನಟ ಶಾರುಖ್ ಖಾನ್ ಜೊತೆಗೆ ಸದ್ಯ ರಾಜ್ಯದ ವಿಐಪಿ ಭದ್ರತಾ ಘಟಕದ 6 ಟ್ರೆಂಡ್ ಕಮಾಂಡೋಗಳ ತಂಡ ಯಾವಾಗಲೂ ಇರುತ್ತದೆ. ಭದ್ರತಾ ತಂಡ ಯಾವಾಗಲು ಎಂಪಿ -5 ಮೆಷಿನ್ ಗನ್‍ಗಳನ್ನು ಮತ್ತು ಎಕೆ -47 ಅಸಾಲ್ಟ ರೈಫಲ್‍ಗಳನ್ನು ಮತ್ತು ಗ್ಲಾಕ್ ಪಿಸ್ತೂಲ್‍ಗಳನ್ನು ಹೊಂದಿರುತ್ತದೆ.

ಶಾರುಖ್ ಖಾನ್ ಅವರಿಗೆ ನೀಡಿದ ಹೆಚ್ಚುವರಿ ಭದ್ರತೆಯ ಹೊರತಾಗಿ ಅವರ ನಿವಾಸವಾದ ಮನ್ನತ್ ಸುತ್ತಲೂ 24/7 ಪೊಲೀಸರು ಉಪಸ್ಥಿತರಿರುತ್ತಾರೆ. ಅವರ ಬಂಗಲೆಯ ಸುತ್ತಮುತ್ತಲಿನ ಜನರ ಮೇಲೆ ನಿಗಾ ಇಡಲಾಗಿದೆ.ಹೆಚ್ಚುವರಿ ಭದ್ರತೆ ವರದಿಯ ಪ್ರಕಾರ ವೈ ಪ್ಲಸ್ ವಿಭಾಗದಲ್ಲಿ ನಟ ಆರು ಕಮಾಂಡೋಗಳು, ನಾಲ್ಕು ಪೊಲೀಸ್ ಸಿಬ್ಬಂದಿ ಮತ್ತು ಟ್ರಾಫಿಕ್ ಕ್ಲಿಯರೆನ್ಸ್ ವಾಹನ ಸೇರಿದಂತೆ 11 ಭದ್ರತಾ ಸಿಬ್ಬಂದಿಯನ್ನು ಪಡೆಯುತ್ತಾರೆ.

ಗೇಮಿಂಗ್ ಮತ್ತು ಬೇಷರಮ್ ಸಾಂಗ್ ವಿವಾದ ಈ ವರ್ಷದ ಆಗಸ್ಟ್‍ನಲ್ಲಿ ಆನ್‍ಲೈನ್ ಗೇಮಿಂಗ್ ಅಪ್ಲಿಕೇಶನ್‍ಗಳನ್ನು ಅನುಮೋದಿಸುವ ಸೆಲೆಬ್ರಿಟಿಗಳ ವಿರುದ್ಧ ಪ್ರತಿಭಟನೆಯಿಂದಾಗಿ ನಟನ ನಿವಾಸದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಯಿತು.ಇಂತಹ ಅನುಮೋದನೆಗಳು ಯುವ ಪೀಳಿಗೆಯನ್ನು ದಾರಿ ತಪ್ಪಿಸಬಹುದು ಮತ್ತು ಭ್ರಷ್ಟಗೊಳಿಸಬಹುದು ಎಂಬ ಕಳವಳವನ್ನು ಈ ಪ್ರತಿಭಟನೆಗಳು ಎತ್ತಿ ತೋರಿಸಿದವು.

ಇದಲ್ಲದೆ ಶಾರುಖ್ ಖಾನ್ ಅವರ ಪಠಾಣ ಚಿತ್ರದ ಬೇಷರಂ ರಂಗ್ ಹಾಡಿನ ಸುತ್ತ ವಿವಾದವೆದ್ದಿತ್ತು. ಈ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ನೆಲೆಸಿರುವ ಪರಮಹಂಸ ಆಚಾರ್ಯ ಅವರು ನಟನ ವಿರುದ್ಧ ಕೊಲೆ ಬೆದರಿಕೆ ಹಾಕಿದ್ದರು. ಇದು ಶಾರುಖ್ ಖಾನ್ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಕಾರಣವಾಯಿತು.

ಲಡಾಕ್ ಕೌನ್ಸಿಲ್ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು

ಈ ವಿವಾದದ ಮಧ್ಯೆಯೂ ಶಾರುಖ್ ಖಾನ್ ಅವರ ಪಠಾಣ್ ಸಿನಿಮಾ ಜಾಗತಿಕವಾಗಿ ಒಂದು ಸಾವಿರ ಕೋಟಿ ರೂ. ಗಳಿಸಿದೆ ಎಂದು ತಿಳಿದುಬಂದಿದೆ. ಇದರ ನಂತರ ಬಂದ ಜವಾನ್ ಸಿನಿಮಾ ಕೂಡ 1,100 ಕೋಟಿ ರೂ. ಗಳಿಸಿದೆ. ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಡಂಕಿ ಸಿನಿಮಾ ಡಿಸೆಂಬರ್ 22ರಂದು ಬಿಡುಗಡೆಯಾಗಲಿದೆ.

ಮೂರು ಸ್ನೇಹಿತರ ಪ್ರೇಮಕಥೆ ಅಭಿರಾಮಚಂದ್ರ

ಈ ವಾರ ತೆರೆ ಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿರುವ ಅಭಿರಾಮಚಂದ್ರ ಚಿತ್ರ ಯುವಕರನ್ನ ಬಾಲ್ಯದ ನೆನಪುಗಳ ಅಂಗಳಕ್ಕೆ ಕೊಂಡೊಯ್ದು ಎರಡು ಗಂಟೆಗಳ ಕಾಲ ನಾವೆಲ್ಲಿದ್ದೇವೆ ಅನ್ನುವುದನ್ನ ಮರೆಸಿ ಹೃದಯವನ್ನ ಭಾರಮಾಡುತ್ತದೆ. ವಸ್ತು, ಪ್ರೀತಿ ಇರಲಿ, ಎಮೋಷನ್ ಅಥವಾ ಆಕ್ಷನ್ ಇರಲಿ ಆ ವಸ್ತುವನ್ನು ಗಟ್ಟಿಯಾಗಿ ಹಿಡಿದು ಅದರ ಸುತ್ತ ಮುತ್ತ ಒಂದಿಷ್ಟು ಕಲರ್ಫುಲ್ ಅಂಶಗಳನ್ನು ಹದವಾಗಿ ಬೆರೆಸಿ ಪ್ರೇಕ್ಷಕರ ಬಳಿ ತೆಗೆದುಕೊಂಡು ಹೋಗಿ ಯಶಸ್ವಿಯಾಗುವುದು ಸುಲಭವಲ್ಲ. ಈ ಪ್ರಯತ್ನದಲ್ಲಿ ನಿರ್ದೇಶಕ ನಾಗೇಂದ್ರ ಗಾಣಿಗ ಯಶಸ್ವಿಯಾಗಿದ್ದಾರೆ.

ಅಭಿ,ರಾಮ,ಚಂದ್ರ ಬೆಂಗಳೂರಲ್ಲಿ ಉದ್ಯೋಗ ನಿಮಿತ್ತ ಬಂದಿರುತ್ತಾರೆ ಒಂದೇ ಮನೆಯಲ್ಲಿ ವಾಸಿಸುತ್ತಿರುತ್ತಾರೆ. ಒಬ್ಬ ರಂಗಭೂಮಿ ಕಲಾವಿದ, ಮತ್ತೊಬ್ಬ ಕ್ಯಾಬ್ ಡ್ರೈವರ್ ಇನ್ನೊಬ್ಬ ಹೋಟಲ್ ಕ್ಯಾಶಿಯರ್. ಉದ್ಯೋಗಿಗಳಾಗಿದ್ದರೂ ಮನೆಗೆ ಬಾಡಿಗೆ ಕಟ್ಟಲಾದಷ್ಟು ಬಡತನ. ಕಾರಿಗೆ ಇಎಂಐ ಕಟ್ಟಲು ತಿಣುಕಾಟ. ಪ್ರತಿಯೊಬ್ಬರ ಬಳಿಯೂ ಸಾಲದ ಭಿಕ್ಷೆ. ಬೆಂಗಳೂರಿನಲ್ಲಿ ಜೀವನ ಕಟ್ಟಿಕೊಳ್ಳುತ್ತಿರುವ ಅದೆಷ್ಟೋ ಮಂದಿಗೆ ಇದು ಅನುಭವವಾಗಿರುತ್ತದೆ. ಮೂರು ಹುಡುಗರ ತರಲೆ ತುಂಟಾಟಗಳು ನೋಡುಗರಿಗೆ ಮನರಂಜನೆಯನ್ನು ನೀಡುತ್ತವೆ.

ನಿಜ್ಜರ್ ಹತ್ಯೆಯಲ್ಲಿ ಚೀನಿ ಕೈವಾಡ : ಜೆನ್ನಿಫರ್ ಝೆಂಗ್

ಇದೇ ಸಂದರ್ಭದಲ್ಲಿ ನಾಯಕ ಅಭಿ ಪ್ರೇಮ ಕಥೆಯ ಫ್ಲಾಶ್ ಬ್ಯಾಕ್ ತೆರೆದುಕೊಳ್ಳುತ್ತದೆ. ಇದು ಮೊದಲರ್ಧಕ್ಕೆ ಮತ್ತಷ್ಟು ರಂಗನ್ನ ತಂದುಕೊಡುವಲ್ಲಿ ಯಶಸ್ವಿಯಾಗಿದೆ. ಕುಂದಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಯಕ ನಾಯಕಿಯ ಬಾಲ್ಯದ ಪ್ರೀತಿ ಅಭಿರಾಮಚಂದ್ರ ಚಿತ್ರದ ಹೈಲೆಟ್. ಕುಂದಾಪುರದ ಭಾಷೆ ಮತ್ತು ಅಲ್ಲಿಯ ಹಳ್ಳಿ ಸೊಗಡು ಕಥೆಗೆ ತುಂಬ ಪೂರಕವಾಗಿದೆ.

ಬಾಲ್ಯದಲ್ಲಿ ಹುಟ್ಟಿದ ಪ್ರೀತಿಯನ್ನು ಸದಾ ನೆನೆಯುತ್ತಾ ಆಕೆಯ ನೆನಪಲ್ಲೇ ಕಾಲ ಕಳೆಯುತ್ತಿರುವ ನಾಯಕನಿಗೆ ನಾಯಕಿ ಸಿಗುತ್ತಾಳ ಎಂಬ ಪ್ರಶ್ನೆಗೆ ದ್ವಿತೀಯಾರ್ಧದಲ್ಲಿ ಉತ್ತರ ಕೊಡುವ ಪ್ರಯತ್ನವಾಗಿದೆ.ಇಲ್ಲಿ ಕಥೆ ಪ್ರೇಕ್ಷರನ್ನ ತುಂಬಾ ಕುತೂಹಲಕ್ಕೆ ದೂಡುತ್ತದೆ ಅದೇನೆಂಬ ಪ್ರಶ್ನೆಗೆ ಚಿತ್ರ ನಮ್ಮ ಗೊತ್ತಾಗುತ್ತದೆ.

ನಾಯಕನಾಗಿ ರಥಕಿರಣ ಸ್ನೇಹಿತರ ಪಾತ್ರಗಳಲ್ಲಿ ಸಿದ್ದು ಮೂಲಿಮನಿ ವತ್ತು ನಾಟ್ಯರಂಗ ಅಭಿನಯಿಸಿದ್ದು ಇಡೀ ಕತೆಯನ್ನು ಈ ನಾಲ್ವರು ಹೆಗಲ ಮೇಲೆ ಎತ್ತಿಕೊಂಡು ಹೋಗಿದ್ದಾರೆ. ನಿರ್ದೇಶಕ ಇವರ ಬಳಿ ಅಭಿನಯ ತೆಗೆಸುವಲ್ಲಿ ಯಶಸ್ವಿಯಾಗಿದ್ದಾರೆ.

ರವಿ ಬಸ್ರೂರು ಮ್ಯೂಸಿಕ್‌ ಕುಂದಾಪುರದ ವಾತಾವರಣಕ್ಕೆ ರಂಗು ತುಂಬಿದ್ದು ಎ. ಜಿ. ಸುರೇಶ್‌ ಹಾಗೂ ಮಲ್ಲೇಶ್‌ ಈ ಚಿತ್ರ ಸೊಗಸಾಗಿ ಮೂಡಿ ಬರುವಂತೆ ನಿರ್ಮಾಣ ಮಾಡಿದ್ದಾರೆ.

ಅಪ್ರಾಪ್ತ ಸಹೋದರಿಯರನ್ನು ಕತ್ತು ಸೀಳಿ ಕೊಂದ ಹಂತಕರು

ಮೊದಲಾರ್ದದಲ್ಲಿ ನಾಯಕಿ ಶಿವಾನಿ ರೈ ಕಾಶಿಕೊಳ್ಳದಿದ್ದರು ಎರಡನೇ ಭಾಗದಲ್ಲಿ ನಿರ್ದೇಶಕರು ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ವೀಣಾ ಸುಂದರ್‌, ಸುಂದರ್‌, ಎಸ್‌. ನಾರಾಯಣ್‌, ಪ್ರಕಾಶ್‌ ತುಮ್ಮಿನಾಡು ಕೂಡ ಅಭಿರಾಮಚಂದ್ರನಿಗೆ ನೆರವಾಗಿದ್ದಾರೆ. ಯಾವುದೇ ವಯೋಮಿತಿ ಇಲ್ಲದೆ ಅಭಿರಾಮಚಂದ್ರನನ್ನ ಕಣ್ತುಂಬಿಕೊಳ್ಳಲು ಅಡ್ಡಿ ಇಲ್ಲ

ಫೈಟರ್ ಮನಮೋಹಕ, ಗೆದ್ದ ನಿರ್ಮಾಪಕ

ಕನ್ನಡ ಚಿತ್ರಗಳನ್ನು ನೋಡಲು ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ. ಪರಭಾಷೆ ಚಿತ್ರಗಳಿಗೆ ಕನ್ನಡಿಗರು ಮಣೆ ಹಾಕುತ್ತಾರೆ ಎಂಬೆಲ್ಲ ಆಪಾದನೆಗಳು ಆಗಾಗ ಕೇಳಿ ಬರುತ್ತವೆ. ಹೀಗೆ ಹೇಳುವವರಿಗೆ ಈ ವಾರ ಕರೆಕೊಂಡು ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ ಫೈಟರ್ ಚಿತ್ರವನ್ನು ಚಿತ್ರಮಂದಿರಗಳತ್ತಿರ ಹೋಗಿ ನೋಡಿದಾಗ ಗೊತ್ತಾಗುತ್ತದೆ, ಸಿನಿಮಾ ಚೆನ್ನಾಗಿದ್ದರೆ ಹುಡುಕಿಕೊಂಡು ಬಂದು ನೋಡುತ್ತಾರೆ ಎಂದು .

ಫೈಟರ್ ಒಬ್ಬ ರೈಟರ್. ದುಷ್ಟರಿಂದ ಹುಡುಗಿಯ ರಕ್ಷಣೆ.ರೈಟರ್ ನ ಫೈಟಿಂಗ್ ನೋಡಿ ನಾಯಕಿ ಮೋಹಕ ವಿಸ್ಮಯ.ಕಥೆಯಲ್ಲಿ ನಾಯಕನ ಹೆಸರು ಮೋಹಕ್ ನಾಯಕಿ ವಿಸ್ಮಯ.ಫೈಟ್ ಅಂಡ್ ಲವ್ ಇಂದ ಶುರುವಾಗುವ ಕಥೆ ಹೇಳುವ ವಿಷಯಗಳನ್ನು ವೀಕ್ಷಕರಿಗೆ ಎಲ್ಲಿಯೂ ಬೋರ್ ಆಗದಂತೆ ಹೇಳುತ್ತಾ ವೇಗವಾಗಿ ಸಾಗುತ್ತದೆ.

ಅಪ್ರಾಪ್ತ ಸಹೋದರಿಯರನ್ನು ಕತ್ತು ಸೀಳಿ ಕೊಂದ ಹಂತಕರು

ಮೊದಲಾರ್ಧದಲ್ಲಿ ಪ್ರೀತಿ ಮತ್ತು ತಾಯಿ ಸೆಂಟಿಮೆಂಟ್ ಆವರಿಸಿಕೊಂಡಿದೆ. ಬ್ಲಡ್, ಕರೋನ ಔಷಧಿಗಳ ಮಾಫಿಯಾ ಗಳ ವಿರುದ್ಧ ನಾಯಕನ ತಾಯಿ ಜಿಲ್ಲಾಧಿಕಾರಿ ರಾಧ ಪ್ರಾಮಾಣಿಕವಾಗಿ ಹೋರಾಟ ನಡೆಸಿದಾಗ ಮಾಫಿಯಾದಿಂದಲೇ ಅಪಹರಣ. ತಾಯಿ ಎಂದರೆ ತುಂಬಾ ಇಷ್ಟ ಪಡುವ ನಾಯಕ ಹೆತ್ತವಳನ್ನು ಉಳಿಸಿಕೊಳ್ಳಲು ತಾನು ಪ್ರೀತಿಸುವ ಪ್ರೀತಿಯನ್ನು ಗುಂಡಿಕ್ಕಿ ಕೊಲ್ಲುತ್ತಾನೆ. ತಾಯಿಯ ಅಪಹರಣ ಮತ್ತು ಪ್ರೇಯಸಿ ಕೊಲೆಗೆ ಕಾರಣಗಳೇನು ಎಂಬ ಪ್ರಶ್ನೆಗೆ ದ್ವಿತೀಯಾರ್ಧದಲ್ಲಿ ಉತ್ತರ ಸಿಗುತ್ತದೆ.ಅದನ್ನು ನೀವು ಸಿನಿಮಾದಲ್ಲೇ ನೋಡಬೇಕು.

ನಿರ್ದೇಶಕ ನೂತನ್ ಉಮೇಶ್, ರೈತರ ಸಮಸ್ಯೆಗಳಿಂದ ಹಿಡಿದು ಕರೋನ ಮಾಫಿಯಾ ತನಕ ಒಂದಷ್ಟು ಅಂಶಗಳ ಮೇಲೆ ಬೆಳಕು ಚೆಲ್ಲುತ್ತಾ, ಪ್ರೇಕ್ಷಕನಿಗೆ ಲವ್, ಆಕ್ಷನ್, ಕಾಮಿಡಿ, ಸೆಂಟಿಮೆಂಟ್ ಎಲ್ಲವನ್ನು ಏಕಕಾಲದಲ್ಲಿ ಕಟ್ಟಿಕೊಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.ಚಿತ್ರದಲ್ಲಿ ಆಕ್ಷನ್ ಎಪಿಸೊಡ್ ಗಳು ಮೈನವಿರೇಳಿಸುವಂತಿವೆ.ಸಿನಿಮಾದುದ್ದಕ್ಕೂ ಸಂಭಾಷಣೆ ಗಟ್ಟಿಯಾಗಿದ್ದು ಯುವಕರಿಗೆ ಇಷ್ಟವಾಗುತ್ತದೆ. ಅದರಲ್ಲೂ ನಾಯಕಿಯ ಡೈಲಾಗ್ಗಳಿಗೆ ಥಿಯೇಟರ್ ನಲ್ಲಿ ಶಿಳ್ಳೆಗಳ ಮಳೆಯ ಸರಿಯುತ್ತದೆ‌‌. ಇನ್ನು ಗುರುಕಿರಣ್ ಸಂಗೀತ, ಶೇಖರ್ ಚಂದ್ರ ಕ್ಯಾಮೆರಾ ವರ್ಕ್ ಫೈಟರ್ ಮೆರಗನ್ನ ಹೆಚ್ಚಿಸಿದೆ.

ನಾಯಕ ವಿನೋದ್ ಪ್ರಭಾಕರ್ ಈ ಹಿಂದಿನ ಚಿತ್ರಗಳಿಗಿಂತ ಫೈಟರ್ ಕಥೆಯಲ್ಲಿ ವಿಭಿನ್ನವಾಗಿ ಕಾಣುತ್ತಾರೆ. ಡೈಲಾಗ್ ಡೆಲವರಿ, ಆಕ್ಷನ್ ಮ್ಯಾನರಿಸಂ ಇವೆಲ್ಲವೂ ಇವರಿಗೆ ಕಥೆಯಲ್ಲಿ ಪ್ಲಸ್ ಪಾಯಿಂಟ್ ಆಗಿವೆ.ನಾಯಕಿ ಲೇಖ ಚಂದ್ರ ಕೂಡ ಇಂಟರ್ವಲ್ ಬರುವವರೆಗೂ ಕಥೆಯಲ್ಲಿ ಆವರಿಸಿಕೊಂಡಿದ್ದಾರೆ‌. ಅವರು ಮಾತನಾಡುವ ಪ್ರತಿಯೊಂದು ಮಾತು ಆಕರ್ಷಕ. ಇವರಿಬ್ಬರ ಜೋಡಿ ಮೋಡಿ ಮಾಡುವಲ್ಲಿ ಯಶಸ್ವಿಯಾಗಿದೆ.

ದೆಹಲಿಯಲ್ಲಿ ಬೈಕ್‍ನಲ್ಲಿ ಬಂದ ವ್ಯಕ್ತಿಗಳಿಂದ ಹಂಗೇರಿ ಪ್ರಜೆಯ ದರೋಡೆ

ಹಾಸ್ಯಕ್ಕಿ ಕಥೆಯಲ್ಲಿ ಒತ್ತುಕೊಡಲಾಗಿದೆ. ಕುರಿ ಪ್ರತಾಪ್ ಮತ್ತು ಗಿರಿಜಾ ಲೋಕೇಶ್ ನಡುವೆ ನಡೆಯುವ ಪ್ರಸಂಗಗಳಿಗೆ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಉಳಿದಂತೆ ನಟಿ ಪಾವನ, ಶರತ್ ಲೋಹಿತಾಶ್ವ, ರಾಜೇಶ್ ನಟರಂಗ ಸೇರಿದಂತೆ ಎಲ್ಲಾ ನಟರಿಗೂ ಒಳ್ಳೆ ಪಾತ್ರಗಳು ಸಿಕ್ಕಿವೆ. ಪ್ರತಿಯೊಂದು ದೃಶ್ಯವು ಶ್ರೀಮಂತಿಕೆಯಿಂದ ಕೂಡೊ ಅದ್ದೂರಿಯಾಗಿ ಮೂಡಿಬರಲು ಕಾರಣವಾಗಿರುವುದು ನಿರ್ಮಾಪಕ ಕಟ್ಟಿಗೆನಹಳ್ಳಿ ಸೋಮಶೇಖರ್. ಸದ್ಯ ರಾಜ್ಯದ್ಯಂತ ಅದ್ದೂರಿಯಾಗಿ ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿರುವ ಫೈಟರ್ ಈಗಾಗಲೇ ಇವರಿಗೆ ಗೆಲುವನ್ನು ತಂದುಕೊಟ್ಟು ಜೇಬು ತುಂಬಿಸಿದೆ. ಮತ್ತೊಂದು ಪ್ರಮುಖ ವಿಷಯ ಎಂದರೆ ಚಿತ್ರದ ಕೊನೆಯಲ್ಲಿ ಎರಡನೇ ಭಾಗದ ಸುಡಿ ವನ್ನು ಕೊಟ್ಟಿದ್ದಾರೆ. ಫೈಟರನ್ನು ಕಣ್ತುಂಬಿಕೊಂಡ ಪ್ರೇಕ್ಷಕ ಈ ಗೆಲುವು ಬೇರೆ ಚಿತ್ರಗಳಿಗೂ ನೆರವಾಗಲಿದೆ ಎನ್ನುತ್ತಾನೆ

ಲಡಾಕ್ ಕೌನ್ಸಿಲ್ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು

ಶ್ರೀನಗರ,ಅ.9-ಲಡಾಕ್-ಕಾರ್ಗಿಲ್ ಕೌನ್ಸಿಲ್ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದೆ. 26 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನ್ಯಾಷನಲ್ ಕಾನಿರೆನ್ಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟವು 22 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದು, ಬಿಜೆಪಿ ಕೇವಲ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನಡೆದ ಮೊದಲ ಚುನಾವಣೆ ಇದಾಗಿದೆ. ನ್ಯಾಷನಲ್ ಕಾನರೆನ್ಸ್ 11 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಎಂಟು ಸ್ಥಾನಗಳನ್ನು ಗೆದ್ದಿದೆ. ಮೂರು ಸ್ಥಾನಗಳಲ್ಲಿ ಪಕ್ಷೇತರರು ಮತ್ತು ಬಿಜೆಪಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ. ಇನ್ನೂ ಎರಡು ಸ್ಥಾನಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಪಿಡಿಪಿ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.

ಎನ್‌ಸಿಯಿಂದ 17 ಮತ್ತು ಕಾಂಗ್ರೆಸ್‍ನ 22 ಸೇರಿದಂತೆ ಒಟ್ಟು 85 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ 17 ಸ್ಥಾನಗಳಲ್ಲಿ ಸ್ರ್ಪಧಿಸಿತ್ತು. ಎನ್‌ಸಿಪಿ-ಕಾಂಗ್ರೆಸ್ ಎರಡು ಪ್ರಬಲ ಧಾರ್ಮಿಕ ಸಂಸ್ಥೆಗಳ ಬೆಂಬಲವನ್ನು ಹೊಂದಿತ್ತು ಎಂದು ಹೇಳಲಾಗುತ್ತಿದೆ. ಜಮಿಯತ್ ಉಲೇಮಾ ಕಾರ್ಗಿಲ್ ಮತ್ತು ಇಮಾಮ್ ಖುಮೈನಿ ಸ್ಮಾರಕ ಟ್ರಸ್ಟ್‌ಗಳು ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸಿದ್ದವು. ಎರಡು ಧಾರ್ಮಿಕ ಸಂಸ್ಥೆಗಳ ಧರ್ಮ ಗುರುಗಳು ಬಿಜೆಪಿ ವಿರುದ್ಧ ಮತ ಹಾಕುವಂತೆ ಜನರಲ್ಲಿ ಮನವಿ ಮಾಡಿದ್ದರು ಎನ್ನಲಾಗಿದೆ.

ಬಹುಜನರನ್ನು ಗುಲಾಮಗಿರಿಯಿಂದ ಹೊರತರುವಲ್ಲಿ ಕಾನ್ಶಿರಾಮ್ ಪಾತ್ರ ಮಹತ್ವದ್ದು : ಮಾಯಾವತಿ

ಜನರ ತೀರ್ಪಿಗೆ ಪ್ರತಿಕ್ರಿಯಿಸಿದ ನ್ಯಾಷನಲ್ ಕಾನಿರೆನ್ಸ್ ನಾಯಕ ಒರ್ಮ ಅಬ್ದುಲ್ಲಾ, ನ್ಯಾಷನಲ್ ಕಾನಿರೆನ್ಸ್ -ಕಾಂಗ್ರೆಸ್ ಮೈತ್ರಿಯಿಂದ ಬಿಜೆಪಿ ಹೀನಾಯ ಸೋಲನ್ನು ಕಂಡಿದೆ ಎಂದು ಹೇಳಿದ್ದಾರೆ. ಈ ಫಲಿತಾಂಶವು ಪ್ರಜಾಸತ್ತಾತ್ಮಕವಾಗಿದೆ. ಅಸಾಂವಿಧಾನಿಕವಾಗಿ ಜನರ ಒಪ್ಪಿಗೆಯಿಲ್ಲದೆ ರಾಜ್ಯವನ್ನು ವಿಭಜಿಸಿದ ಎಲ್ಲಾ ಶಕ್ತಿಗಳು ಮತ್ತು ಪಕ್ಷಗಳಿಗೆ ಇದು ಸಂದೇಶವನ್ನು ಕಳುಹಿಸಿದೆ. ಚುನಾವಣಾ ಫಲಿತಾಂಶ ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಜಯವು ನ್ಯಾಷನಲ್ ಕಾನರನ್ಸ್-ಕಾಂಗ್ರೆಸ್ ಮೈತ್ರಿಯನ್ನು ಬೆಂಬಲಿಸಿದೆ ಝನ್ಸ್ಕಾರ್, ಕಾರ್ಗಿಲ್ ಮತ್ತು ಡ್ರಾಸ್ ಜನರಿಗೆ ಸೇರಿದೆ. ಚುನಾಯಿತ ಎಲ್ಲಾ ಕೌನ್ಸಿಲರ್‍ಗಳಿಗೆ ನಾವು ನಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಜನರ ಸೇವೆಗಾಗಿ ಅವರ ಸಮರ್ಪಣೆಯನ್ನು ಗೌರವಿಸುತ್ತೇವೆ. ಅವಿರತ ಬೆಂಬಲಕ್ಕಾಗಿ ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ನಿಜ್ಜರ್ ಹತ್ಯೆಯಲ್ಲಿ ಚೀನಿ ಕೈವಾಡ : ಜೆನ್ನಿಫರ್ ಝೆಂಗ್

ನ್ಯೂಯಾರ್ಕ್,ಅ.9- ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಚೀನಾದ ಕಮ್ಯುನಿಸ್ಟ ಪಕ್ಷದ (ಸಿಸಿಪಿ) ಏಜೆಂಟರು ಭಾಗಿಯಾಗಿದ್ದಾರೆ ಎಂದು ಸ್ವತಂತ್ರ ಬ್ಲಾಗರ್ ಜೆನ್ನಿಫರ್ ಝೆಂಗ್ ಆರೋಪಿಸಿದ್ದಾರೆ. ಭಾರತ ಮತ್ತು ಪಶ್ಚಿಮದ ನಡುವೆ ಅಪಶ್ರುತಿ ಮೂಡಿಸುವುದು, ತೈವಾನ್‍ಗೆ ಸಂಬಂಧಿಸಿದಂತೆ ಕ್ಸಿ ಜಿನ್‍ಪಿಂಗ್‍ರ ಮಿಲಿಟರಿ ಕಾರ್ಯತಂತ್ರಕ್ಕೆ ಅನುಗುಣವಾಗಿ ಜಗತ್ತನ್ನು ಅಡ್ಡಿಪಡಿಸುವ ಉದ್ದೇಶದಿಂದ ಚೀನಾ ಇಂತಹ ಕೃತ್ಯಕ್ಕೆ ಕೈ ಹಾಕಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಜೆನ್ನಿಫರ್ ಝೆಂಗ್ ಚೀನೀ ಮೂಲದ ಹಕ್ಕುಗಳ ಕಾರ್ಯಕರ್ತೆ ಹಾಗೂ ಪತ್ರಕರ್ತೆಯಾಗಿದ್ದು ಪ್ರಸ್ತುತ ಅವರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್ ಪಾರ್ಮ್ Xನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಝೆಂಗ್ ನಿಜ್ಜರ ಸಾವನ್ನು ಹತ್ಯೆ ಎಂದು ಕರೆದಿದ್ದಾರೆ, ಇಂದು ಕೆನಡಾದಲ್ಲಿ ಸಿಖ್ ಧಾರ್ಮಿಕ ಮುಖಂಡ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯೂ ಸಿಸಿಪಿ ಏಜೆಂಟರಿಂದ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ದೆಹಲಿಯಲ್ಲಿ ಬೈಕ್‍ನಲ್ಲಿ ಬಂದ ವ್ಯಕ್ತಿಗಳಿಂದ ಹಂಗೇರಿ ಪ್ರಜೆಯ ದರೋಡೆ

18 ಜೂನ್ 2023 ರಂದು, ಭಾರತದಲ್ಲಿ ಗೊತ್ತುಪಡಿಸಿದ ಭಯೋತ್ಪಾದಕ ಹರ್ದೀಪ್ ನಿಜ್ಜರ್ ಅವರನ್ನು ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಗುರುನಾನಕ್ ಸಿಖ್ ಗುರುದ್ವಾರದ ಪಾರ್ಕಿಂಗ್ ಸ್ಥಳದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು.

ಸ್ವತಂತ್ರ ಬ್ಲಾಗರ್ ತನ್ನ ಆರೋಪಗಳನ್ನು ಚೀನೀ ಬರಹಗಾರ ಮತ್ತು ಯೂಟ್ಯೂಬರ್ ಲಾವೊ ಡೆಂಗ್‍ಗೆ ಕಾರಣವೆಂದು ಹೇಳಿದ್ದಾರೆ, ಅವರ ಪ್ರಕಾರ, ಅವರು ಈಗ ಕೆನಡಾದಲ್ಲಿ ವಾಸಿಸುತ್ತಿದ್ದಾರೆ. ಕೆನಡಾದಲ್ಲಿ ಸಿಖ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಹತ್ಯೆ ಮಾಡುವ ಕೆಲಸವನ್ನು ಏಜೆಂಟರಿಗೆ ವಹಿಸಲಾಯಿತು. ಸಭೆಯ ನಂತರ ಏಜೆಂಟ್ಗಳು ಹತ್ಯೆಯ ಯೋಜನೆಯನ್ನು ನಿಖರವಾಗಿ ಕಾರ್ಯಗತಗೊಳಿಸಿದರು ಎಂದು ಅವರು ಹೇಳಿಕೊಂಡಿದ್ದಾರೆ.

ಕಂದಕಕ್ಕೆ ಬಸ್ ಉರುಳಿ ಬಿದ್ದು 6 ಪ್ರಯಾಣಿಕರ ಸಾವು

ಡೆಹ್ರಾಡೂನ್,ಅ.9- ನೈನಿತಾಲ್ ಜಿಲ್ಲೆಯ ಕಲಾಧುಂಗಿ ಪ್ರದೇಶದಲ್ಲಿ ಬಸ್ ಕಂದಕಕ್ಕೆ ಬಿದ್ದ ಪರಿಣಾಮ ಆರು ಪ್ರಯಾಣಿಕರು ಸಾವನ್ನಪ್ಪಿದ್ದು, 27 ಮಂದಿ ಗಾಯಗೊಂಡಿದ್ದಾರೆ. ಬಸ್ ಹರ್ಯಾಣದ ಹಿಸಾರ್ ಜಿಲ್ಲೆಯ ಪ್ರವಾಸಿಗರನ್ನು ಹೊತ್ತೊಯ್ಯುತ್ತಿತ್ತು. ನೈನಿತಾಲ್ ಜಿಲ್ಲಾ ನಿಯಂತ್ರಣ ಕೊಠಡಿಯಿಂದ ಬಂದ ಮಾಹಿತಿಯ ಪ್ರಕಾರ, ಪ್ರವಾಸಿಗರು ನೈನಿತಾಲ್‍ಗೆ ಭೇಟಿ ನೀಡಿ ಹಿಂದಿರುಗುತ್ತಿದ್ದಾಗ ಅವರ ಬಸ್ ಕಲಾಧುಂಗಿಯ ನಲ್ನಿ ಪ್ರದೇಶದಲ್ಲಿ 100 ಮೀಟರ್ ಆಳದ ಕಮರಿಗೆ ಬಿದ್ದಿದೆ.

ಮಾಹಿತಿ ಪ್ರಕಾರ ರಾತ್ರಿ 8 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಆರು ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು 27 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ದೆಹಲಿಯಲ್ಲಿ ಬೈಕ್‍ನಲ್ಲಿ ಬಂದ ವ್ಯಕ್ತಿಗಳಿಂದ ಹಂಗೇರಿ ಪ್ರಜೆಯ ದರೋಡೆ

ಅಪಘಾತದ ವೇಳೆ ಬಸ್‍ನಲ್ಲಿ 33 ಮಂದಿ ಪ್ರಯಾಣಿಕರಿದ್ದರು. ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಅಪಘಾತಕ್ಕೆ ಕಾರಣಗಳು ಇನ್ನೂ ತಿಳಿದುಬಂದಿಲ್ಲ.

ಅಪ್ರಾಪ್ತ ಸಹೋದರಿಯರನ್ನು ಕತ್ತು ಸೀಳಿ ಕೊಂದ ಹಂತಕರು

ಇಟಾವಾ,ಅ.9- ನಾಲ್ಕು ಮತ್ತು ಏಳು ವರ್ಷ ವಯಸ್ಸಿನ ಇಬ್ಬರು ಅಪ್ರಾಪ್ತ ಸಹೋದರಿಯರನ್ನು ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಲಾಗಿದೆ. ಬಲರಾಯ್ ಪೊಲೀಸ್ ಠಾಣಾ ವ್ಯಾಪ್ತಿಯ ಬಹದ್ದೂರ್‍ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕುಟುಂಬದ ನಿಕಟವರ್ತಿ ಯಾರೋ ಅವರನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಜೈವೀರ್ ಸಿಂಗ್ ಎಂಬುವವರ ಪುತ್ರಿಯರಾದ ಸುರಭಿ (7) ಮತ್ತು ರೋಶ್ನಿ (4) ಅವರ ಮೃತದೇಹಗಳು ಸಂಜೆ ಅವರ ಮನೆಯ ಪ್ರತ್ಯೇಕ ಕೊಠಡಿಗಳಲ್ಲಿ ಪತ್ತೆಯಾಗಿವೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ತಿಳಿಸಿದ್ದಾರೆ. ಘಟನೆ ನಡೆದಾಗ ಜೈವೀರ್ ಅವರ ಪತ್ನಿ ಮತ್ತು ಅವರ ಹಿರಿಯ ಮಕ್ಕಳು ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯಲ್ಲಿ ಬೈಕ್‍ನಲ್ಲಿ ಬಂದ ವ್ಯಕ್ತಿಗಳಿಂದ ಹಂಗೇರಿ ಪ್ರಜೆಯ ದರೋಡೆ

ಕುಟುಂಬದಿಂದ ಯಾವುದೇ ಆರೋಪಿಯನ್ನು ಇನ್ನೂ ಗುರುತಿಸಲಾಗಿಲ್ಲ. ಪ್ರಾಥಮಿಕ ದೃಷ್ಟಿಯಲ್ಲಿ, ಕುಟುಂಬಕ್ಕೆ ಹತ್ತಿರವಿರುವ ಯಾರೋ ಸಹೋದರಿಯರನ್ನು ಒಬ್ಬಂಟಿಯಾಗಿ ಕಂಡು ನಂತರ ಕೊಂದು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತೋರುತ್ತದೆ ಎಂದು ಶಂಕಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ.

ಕಮಲವೇ ನಮ್ಮ ಮುಖ ; ಪಿಯೂಷ್ ಗೋಯಲ್

ಭೋಪಾಲ್,ಅ.9 (ಪಿಟಿಐ) ಮಧ್ಯಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಆರಂಭವಾಗಿರುವ ಬೆನ್ನಲ್ಲೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಪ್ರತಿ ಚುನಾವಣೆಯಲ್ಲೂ ತಮ್ಮ ಪಕ್ಷದ ಮುಖ ಕಮಲ ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ರಾಜಕೀಯ ವಲಯಗಳಲ್ಲಿ ಆಡಳಿತಾರೂಢ ಬಿಜೆಪಿಯ ಕೇಂದ್ರ ನಾಯಕತ್ವದ ಯೋಜನೆಗಳ ಬಗ್ಗೆ ಊಹಾಪೋಹಗಳು ಗರಿಗೆದರಿವೆ, ಅದು ಕೇಂದ್ರ ಸಚಿವರು ಸೇರಿದಂತೆ ಹಲವಾರು ದಿಗ್ಗಜರನ್ನು ಎಂಪಿ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳಾಗಿ ನಿಲ್ಲಿಸಿದೆ.

ಬಿಜೆಪಿ ನಾಯಕರ ವಿವಿಧ ಹೇಳಿಕೆಗಳು ಪಕ್ಷದ ಮುಖ್ಯಮಂತ್ರಿ ಮುಖದ ಬಗ್ಗೆ ಚರ್ಚೆಯನ್ನು ಹೆಚ್ಚಿಸಿವೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಗೋಯಲ್, ಮಧ್ಯಪ್ರದೇಶದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಮುಖದ ಬಗ್ಗೆ ಕೇಳಿದ ಪ್ರಶ್ನೆಗೆ, ಪ್ರತಿ ಚುನಾವಣೆಯಲ್ಲೂ ಕಮಲ ನಮ್ಮ ಮುಖವಾಗಿದೆ. ಕಮಲ ನಮ್ಮೆಲ್ಲರಿಗೂ ಪೂಜ್ಯನೀಯ. ಕಮಲದೊಂದಿಗೆ ನಾವು ಜನರ ನಡುವೆ ಹೋಗುತ್ತೇವೆ ಎಂದಿದ್ದಾರೆ.

ಇಸ್ರೇಲ್‍ ಸೈನಿಕರ ನೆರವಿಗೆ ಯುದ್ಧ ನೌಕೆ ಕಳಿಸಿದ ಅಮೆರಿಕ

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಇತ್ತೀಚಿನ ಹೇಳಿಕೆಯು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಅನ್ನು ಬದಿಗಿಟ್ಟ ನಂತರ ಅವರು ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಕಳೆದ ವಾರ ದಿಂಡೋರಿಯಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಚೌಹಾಣ್ ಅವರು ಈ ಸರ್ಕಾರವು ಮುಂದುವರಿಯಬೇಕೇ ಅಥವಾ ಬೇಡವೇ? ಮಾಮಾ ಮುಖ್ಯಮಂತ್ರಿಯಾಗಬೇಕೇ ಅಥವಾ ಬೇಡವೇ? ಎಂದು ಮತದಾರರನ್ನು ಪ್ರಶ್ನಿಸಿದ್ದರು.

ಬಹುಜನರನ್ನು ಗುಲಾಮಗಿರಿಯಿಂದ ಹೊರತರುವಲ್ಲಿ ಕಾನ್ಶಿರಾಮ್ ಪಾತ್ರ ಮಹತ್ವದ್ದು : ಮಾಯಾವತಿ

ಲಕ್ನೋ,ಅ. 9 (ಪಿಟಿಐ)-ಬಹು ಸಮಾಜವನ್ನು ಗುಲಾಮಗಿರಿಯಿಂದ ಹೊರತರಲು ಹಾಗೂ ಆ ಜನರು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಲೂ ಬಿಎಸ್‍ಪಿ ಪಕ್ಷದ ಸಂಸ್ಥಾಪಕ ಕಾನ್ಶಿರಾಮ್ ಪ್ರಮುಖ ಪಾತ್ರ ನಿರ್ವಹಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಮಾಯಾವತಿ ಹೇಳಿದ್ಧಾರೆ.

ಬಿಎಸ್‍ಪಿ ಪಕ್ಷದ ಸಂಸ್ಥಾಪಕ ಕಾನ್ಶಿ ರಾಮ್ ಅವರ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಹಿಂದಿಯಲ್ಲಿ ಎಕ್ಸ್‍ನಲ್ಲಿ ಸರಣಿ ಪೋಸ್ಟ್‌ಗಳನ್ನು  ಮಾಡುವ ಮೂಲಕ ಕಾನ್ಶಿರಾಮ್ ಅವರ ಗುಣಗಾನ ಮಾಡಿದ್ದಾರೆ.

ಮಾಯಾವತಿ ಉತ್ತರ ಪ್ರದೇಶದಲ್ಲಿ ನಾಲ್ಕು ಬಾರಿ ಬಿಎಸ್‍ಪಿ ಅಧಿಕಾರಕ್ಕೆ ಬರಲು ಕಾನ್ಶಿರಾಮ್ ಅವರ ಹೋರಾಟದ ಕಾರಣ ಎಂದು ಹೇಳಿಕೊಂಡಿದ್ದಾರೆ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಆತ್ಮಗೌರವ ಚಳವಳಿಯನ್ನು ಜೀವಂತವಾಗಿರಿಸಿದ ಗೌರವಾನ್ವಿತ ಕಾನ್ಶಿ ರಾಮ್ ಜಿ ಅವರಿಗೆ ಇಂದು ಅವರ ಪುಣ್ಯತಿಥಿಯಂದು ನಮನಗಳು ಎಂದು ಬಿಎಸ್‌ಪಿ ಮುಖ್ಯಸ್ಥರು ಹೇಳಿದ್ದಾರೆ.

ಇಸ್ರೇಲ್‍ ಸೈನಿಕರ ನೆರವಿಗೆ ಯುದ್ಧ ನೌಕೆ ಕಳಿಸಿದ ಅಮೆರಿಕ

ದೇಶಾದ್ಯಂತ ಬಿಎಸ್‌ಪಿ  ಜನರು ಬಹುಜನ ಹೀರೋ ಅನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಪಕ್ಷವು ಕಾನ್ಶಿರಾಮ್ ಅವರ ಧ್ಯೇಯವನ್ನು ಪೂರೈಸುತ್ತದೆ, ಅದಕ್ಕಾಗಿ ಹೋರಾಟ ಮುಂದುವರಿಯುತ್ತದೆ ಎಂದು ಅವರು ಹೇಳಿದರು. ಮಾರ್ಚ್ 15, 1934 ರಂದು ಪಂಜಾಬ್‍ನ ರೂಪನಗರದಲ್ಲಿ ಜನಿಸಿದ ಕಾನ್ಶಿ ರಾಮ್ ಹಿಂದುಳಿದ ವರ್ಗಗಳ ಉನ್ನತಿ ಮತ್ತು ರಾಜಕೀಯ ಸಜ್ಜುಗೊಳಿಸುವಿಕೆಗಾಗಿ ಕೆಲಸ ಮಾಡಿದರು.

ಅವರು 1971 ರಲ್ಲಿ ದಲಿತ ಶೋಷಿತ್ ಸಮಾಜ ಸಂಘರ್ಷ ಸಮಿತಿ, ಅಖಿಲ ಭಾರತ ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಸಮುದಾಯಗಳ ನೌಕರರ ಒಕ್ಕೂಟ ಮತ್ತು 1984 ರಲ್ಲಿ ಬಿಎಸ್‍ಪಿ ಪಕ್ಷವನ್ನು ಸ್ಥಾಪಿಸಿದರು. ಅವರು ಅಕ್ಟೋಬರ್ 9, 2006 ರಂದು ದೆಹಲಿಯಲ್ಲಿ ನಿಧನರಾದರು.

ದೆಹಲಿಯಲ್ಲಿ ಬೈಕ್‍ನಲ್ಲಿ ಬಂದ ವ್ಯಕ್ತಿಗಳಿಂದ ಹಂಗೇರಿ ಪ್ರಜೆಯ ದರೋಡೆ

ನವದೆಹಲಿ, ಅ.9 (ಪಿಟಿಐ) ದಕ್ಷಿಣ ದೆಹಲಿಯ ಲೋಧಿ ಕಾಲೋನಿಯಲ್ಲಿ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ 57 ವರ್ಷದ ಹಂಗೇರಿಯನ್ ಪ್ರಜೆಯೊಬ್ಬನನ್ನು ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ದರೋಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಹಿಳೆ ಹುಮಾಯೂನ್ ಸಮಾಧಿಯಿಂದ ಹಂಗೇರಿ ರಾಯಭಾರ ಕಚೇರಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ದಯಾಳ್ ಸಿಂಗ್ ಕಾಲೇಜು ಬಳಿ ಆಟೋರಿಕ್ಷಾ ತಲುಪುತ್ತಿದ್ದಂತೆಯೇ ಹಿಂದಿನಿಂದ ಮೋಟಾರ್‍ಸೈಕಲ್‍ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಮಹಿಳೆಯ ಮೊಬೈಲ್ ಫೋನ್, 12,000 ರೂಪಾಯಿ ನಗದು ಮತ್ತು ಬ್ಯಾಂಕ್ ಕಾರ್ಡ್‍ಗಳನ್ನು ದೋಚಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಮಾಸ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡ 10 ನೇಪಾಳಿಗರು

ಮೋಟಾರು ಸೈಕಲ್ ನ ನೋಂದಣಿ ಸಂಖ್ಯೆಯನ್ನು ಮಹಿಳೆ ನೋಟ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಘಟನೆಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಿದ ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 356 (ಕಳ್ಳತನ ಮಾಡುವ ಪ್ರಯತ್ನದಲ್ಲಿ ಹಲ್ಲೇ ಅಥವಾ ಕ್ರಿಮಿನಲ್ ಬಲ) ಮತ್ತು 379 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಅಪರಾಧಿಗಳನ್ನು ಬಂಧಿಸಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.