Thursday, November 6, 2025
Home Blog Page 1920

BGI NEWS : ದೆಹಲಿ ಸೇರಿ ಉತ್ತರ ಭಾರತದಲ್ಲಿ ಭೂಕಂಪನ

ನವದೆಹಲಿ,ಅ.3- ನೇಪಾಳದಲ್ಲಿ ಇಂದು ಮಧ್ಯಾಹ್ನ 2:51 ಕ್ಕೆ ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಇದರಿಂದ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಪ್ರಬಲವಾದ ಕಂಪನಗಳು ಅನುಭವವಾಗಿದೆ. ದೆಹಲಿ,ಹರಿಯಾಣ,ಉತ್ತರ ಪ್ರದೇಶ,ಛತೀಸ್‍ಘಡ ,ಡೆಹ್ರಾಡೂನ್‍ನಲ್ಲಿ ಜನರು ಭಯಬೀತರಾಗಿ ಕಟ್ಟ ಡಗಳಿಂದ ಹೊರಗೆ ಓಡಿ ಬಂದಿದ್ದಾರೆ.

ರಾಜ್ಯದಲ್ಲಿ ಎಲ್ಲಿಯೂ ಕೋಮುಗಲಭೆಗಳಾಗಿಲ್ಲ : ಸಿಎಂ ಸಿದ್ದರಾಮಯ್ಯ

25 ನಿಮಿಷಗಳ ಅಂತರದಲ್ಲಿ ದೆಹಲಿಯಲ್ಲಿ ಮೊದಲ ಕಂಪನ ರಿಕ್ಟರ್ ಮಾಪಕದಲ್ಲಿ 4.6 ಮತ್ತು 2ನೇ ಸಲ್ಪ ಮಟ್ಟಿಗೆ ಕಡಿಮೆ ದಾಖಲಾಗಿದೆ. ನೀವೆಲ್ಲರೂ ಸುರಕ್ಷಿತವಾಗಿರುತ್ತೀರಿ ಎಂದು ನಾವು ಭಾವಿಸುತ್ತೇವೆ. ದಯವಿಟ್ಟು ನಿಮ್ಮ ಕಟ್ಟಡಗಳಿಂದ ಸುರಕ್ಷಿತ ಸ್ಥಳಕ್ಕೆ ಬನ್ನಿ, ಆದರೆ ಭಯಪಡಬೇಡಿ. ಎಲಿವೇಟರ್‍ಗಳನ್ನು ಬಳಸಬೇಡಿ! ಯಾವುದೇ ತುರ್ತು ಸಹಾಯಕ್ಕಾಗಿ 112 ಅನ್ನು ಡಯಲ್ ಮಾಡಿ ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಐಷಾರಾಮಿ ಜೀವನಕ್ಕಾಗಿ ಕಳ್ಳತನ, ಮೂವರು ವಿದ್ಯಾರ್ಥಿಗಳ ಬಂಧನ

ಬೆಂಗಳೂರು,ಅ.3- ಐಷರಾಮಿ ಜೀವನ ನಡೆಸಲು ಕಳ್ಳತನಕ್ಕಿಳಿದಿದ್ದ ಮೂವರು ವಿದ್ಯಾರ್ಥಿಗಳನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿ 50 ಲಕ್ಷ ರೂ. ಬೆಲೆ ಬಾಳುವ ವಿವಿಧ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಎಚ್‍ಎಸ್‍ಆರ್ ಲೇಔಟ್‍ನಲ್ಲಿ ವಾಸವಾಗಿರುವ ಪ್ರಭು, ಮೌನೇಶ್ ಹಾಗೂ ಅಜಯ್ ಬಂಧಿತ ವಿದ್ಯಾರ್ಥಿಗಳು. ಈ ಮೂವರು 19ರಿಂದ 21 ವಯೋಮಾನದವರು.

ಈ ಮೂವರ ಪೈಕಿ ಇಬ್ಬರು ಬಿಕಾಂ ವ್ಯಾಸಂಗ ಮಾಡುತ್ತಿದ್ದರೆ ಒಬ್ಬ ಬಿಸಿಎ ವಿದ್ಯಾರ್ಥಿಯಾಗಿದ್ದಾನೆ. ಐಷರಾಮಿ ಜೀವನ ಹಾಗೂ ಸಾಲ ತೀರಿಸುವ ಸಲುವಾಗಿ ಈ ಮೂವರು ಕಳ್ಳತನಕ್ಕೆ ಇಳಿದ್ದು ಪೊಲೀಸರ ವಿಚಾರಣೆಯಿಂದ ಗೊತ್ತಾಗಿದೆ.

ನ್ಯೂ ಬಿಇಎಲ್ ರಸ್ತೆಯಲ್ಲಿನ ಗ್ಯಾಜೆಟ್ ಕ್ಲಬ್ ಮೊಬೈಲ್ ಅಂಗಡಿಯ ಬೀಗ ಮುರಿದು ಒಳನುಗ್ಗಿ ಕಳ್ಳರು ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಇನ್‍ಸ್ಪೆಕ್ಟರ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

8 ಅಡಿ ಎತ್ತರದ ಪುನೀತ್ ಕಂಚಿನ ಪುತ್ಥಳಿ ಲೋಕಾರ್ಪಣೆ

ಈ ತಂಡವು ತನಿಖೆ ಕೈಗೊಂಡು ಹಲವು ಮಾಹಿತಿಗಳನ್ನು ಕಲೆ ಹಾಕಿ ಪ್ರಕರಣ ದಾಖಲಾದ 36 ಗಂಟೆಯೊಳಗೆ ಮೂವರು ಆರೋಪಿಗಳನ್ನು ಬಂಧಿಸಿ ಸುಮಾರು 50 ಲಕ್ಷ ರೂ. ಬೆಲೆ ಬಾಳುವ 29 ಐ-ಫೋನ್‍ಗಳು, 3 ಒನ್ ಪ್ಲಸ್ ಮೊಬೈಲ್‍ಗಳು, 11 ಸ್ಯಾಮ್‍ಸಾಂಗ್, 3 ಗೂಗಲ್ ಫೋನ್, 4 ಒಪೊ ಮತ್ತು 2 ಐಕ್ಯೂಒಒ ಕಂಪನಿಯ ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಾಂದೇಡ್ : ಔಷಧಿ ಕೊರತೆಯಿಂದ ಮೃತಪಟ್ಟ ಮಕ್ಕಳ ಸಂಖ್ಯೆ 31ಕ್ಕೆ ಏರಿಕೆ

ಅಲ್ಲದೆ ವಿವಿಧ ಕಂಪನಿಯ ಲ್ಯಾಪ್‍ಟಾಪ್‍ಗಳು, ಸೋನಿ ಕಂಪನಿಯ ಹ್ಯಾಂಡಿಕ್ಯಾಮೆರಾಗಳು, 202 ವಿವಿಧ ಸ್ಮಾರ್ಟ್ ವಾಚ್‍ಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರಲ್ಲದೆ, ಕೃತ್ಯಕ್ಕೆ ಬಳಸಿದ್ದ ಒಂದು ಮಾರುತಿ ಸುಜುಕಿ ಇಕೋ ಗೂಡ್ಸ್ ವಾಹನ ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಉತ್ತರ ವಿಭಾಗದ ಉಪಪೊಲೀಸ್ ಆಯುಕ್ತರಾದ ಸೈದುಲು ಅಡಾವತ್ ಮಾರ್ಗದರ್ಶನದಲ್ಲಿ ಜೆ.ಸಿ.ನಗರ ಉಪವಿಭಾಗದ ಎಸಿಪಿ ಮನೋಜ್‍ಕುಮಾರ್ ಅವರ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಭಾಗವತಿ.ಜೆ ಬಂಟಿ ಮತ್ತು ಸಿಬ್ಬಂದಿ ಈ ಕಾರ್ಯಚರಣೆ ಕೈಗೊಂಡು ಮೂವರನ್ನು ಬಂಧಿಸಿ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಶೈಕ್ಷಣಿಕ-ಸಾಮಾಜಿಕ ವರದಿ ಬಹಿರಂಗಕ್ಕೆ ಹರಿಪ್ರಸಾದ್ ಒತ್ತಾಯ

ನವದೆಹಲಿ, ಅ.3- ರಾಜ್ಯದಲ್ಲಿ ಈ ಹಿಂದೆ ನಡೆದಿರುವ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿಯನ್ನು ರಾಜ್ಯಸರ್ಕಾರ ಮೊದಲು ಬಹಿರಂಗಪಡಿಸಬೇಕು. ಅದರ ಬಗ್ಗೆ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಹಿರಿಯ ಕಾಂಗ್ರೆಸಿಗ ಬಿ.ಕೆ.ಹರಿಪ್ರಸಾದ್ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷೆ ನಡೆಸಿರುವುದು ಸರ್ಕಾರದಿಂದ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದು ಕಾಂಗ್ರೆಸ್ ಪಕ್ಷದಿಂದ. ಹೀಗಾಗಿ ತಾವು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೇಳಿಕೆ ನೀಡುವುದಿಲ್ಲ. ನೇರವಾಗಿ ವರದಿ ಜಾರಿಯಾಗಬೇಕು ಎಂದು ಒತ್ತಾಯಿಸುತ್ತೇನೆ ಎಂದರು.

ಕಾಂಗ್ರೆಸ್‍ನ ವರಿಷ್ಠ ನಾಯಕ ರಾಹುಲ್‍ಗಾಂಧಿ ದೇಶ ಮತ್ತು ರಾಜ್ಯಗಳಲ್ಲಿ ಜಾತಿ ಜನಗಣತಿ ಆಗಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. ಕರ್ನಾಟಕ ಸರ್ಕಾರ ಬಹಳ ಹಿಂದೆಯೇ ಕಾಂತರಾಜು ನೇತೃತ್ವದಲ್ಲಿ ಸಮೀಕ್ಷೆ ನಡೆಸಿದೆ. ಅದನ್ನು ಅನುಷ್ಠಾನಕ್ಕೆ ತರಲು ಸಾಧ್ಯವೋ, ಇಲ್ಲವೋ ಅದು ಬೇರೆ ವಿಚಾರ. ಆದರೆ ಮೊದಲು ಅದು ಬಹಿರಂಗಗೊಳಿಸಬೇಕಿದೆ ಎಂದು ಹೇಳಿದರು.

ಹಾವು-ಮುಂಗುಸಿಗಳ ಒಗ್ಗೂಡುವಿಕೆಯೇ ಇಂಡಿಯಾ ಮೈತ್ರಿಕೂಟ ; ತೇಜಸ್ವಿ ಸೂರ್ಯ

ಜಾತಿ ಜನಗಣತಿ ವರದಿ ಬಿಡುಗಡೆಯಾಗದೇ ಇರುವುದಕ್ಕೆ ಹಲವು ಕಾರಣಗಳಿರಬಹುದು. ಬಿಡುಗಡೆಯಾದ ತಕ್ಷಣವೇ ಅನುಷ್ಠಾನಕ್ಕೆ ಬರುತ್ತದೆ ಎಂದೇನಿಲ್ಲ. ಮೊದಲು ವರದಿ ಸಾರ್ವಜನಿಕವಾಗಿ ಚರ್ಚೆಯಾಗಲಿ. ಅಲ್ಲಿರುವ ಲೋಪದೋಷಗಳನ್ನು ಪರಿಶೀಲಿಸಿ ಮತ್ತೊಮ್ಮೆ ಸಮೀಕ್ಷೆ ನಡೆಸಬಹುದು ಎಂದು ಹೇಳಿದರು.

ರಾಜ್ಯದಲ್ಲಿ ಮೊದಲಿನಿಂದಲೂ ಆವನೂರು ಆಯೋಗ, ಚಿನ್ನಪ್ಪರೆಡ್ಡಿ ಆಯೋಗ ಸೇರಿದಂತೆ ಹಲವು ವರದಿಗಳಿವೆ. ಬಿಜೆಪಿ ಸರ್ಕಾರದಲ್ಲೂ ಒಂದು ವರದಿಯಿದೆ. ಎಲ್ಲವನ್ನೂ ಸೇರಿಸಿ ವರದಿಯನ್ನು ಬಹಿರಂಗ ಪಡಿಸಲಿ. ಕೆಲವು ಸಮುದಾಯಗಳು ಹೆಚ್ಚಿವೆ, ಕೆಲವು ಕಡಿಮೆ ಇವೆ ಎಂಬ ಚರ್ಚೆಗಳಿವೆ. ಅದನ್ನು ನಂತರ ಸರಿಪಡಿಸಬಹುದು. ವಿಧಾನಸಭೆ, ವಿಧಾನಪರಿಷತ್‍ನಲ್ಲಿ ಚರ್ಚೆಯಾದ ಬಳಿಕವೇ ಇದು ಅನುಷ್ಠಾನಕ್ಕೆ ಬರಲು ಸಾಧ್ಯ ಎಂದು ಹೇಳಿದರು.

ಈ ಹಿಂದೆ ಸಮೀಕ್ಷೆ ನಡೆಸಿರುವುದು ರಾಜ್ಯಸರ್ಕಾರ. ಅದರ ಕುರಿತು ಏನೆಲ್ಲಾ ಚರ್ಚೆ ನಡೆದಿದೆ. ಸಂಪುಟದಲ್ಲಿ ಏನೆಲ್ಲಾ ವಿಶ್ಲೇಷಣೆಗಳಾಗಿವೆ ಎಂಬ ಮಾಹಿತಿ ತಮಗಿಲ್ಲ. ಈ ಬಗ್ಗೆ ಸರ್ಕಾರವೇ ಸ್ಪಷ್ಟನೆ ನೀಡಬೇಕು. ಆದರೆ ಪಕ್ಷದ ಸದಸ್ಯನಾಗಿ ಈ ಬಗ್ಗೆ ಪ್ರಸ್ತಾಪಿಸುವ ಅಧಿಕಾರ ತಮಗಿದೆ ಎಂದು ತಿಳಿಸಿದರು.

ಇಂಡಿಯಾ ಮೈತ್ರಿಕೂಟದಿಂದ ಹೊರಬರುವುದೇ ಎಎಪಿ..?

ಲಿಂಗಾಯತ ಸಮುದಾಯಕ್ಕೆ ಸರಿಯಾದ ಆದ್ಯತೆ ಸಿಗುತ್ತಿಲ್ಲ ಎಂದು ಹಿರಿಯ ನಾಯಕರಾದ ಶ್ಯಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದಾರೆ. ಅದೇ ರೀತಿ ಹಲವು ನಾಯಕರುಗಳು ಚರ್ಚೆ ಮಾಡಿದ್ದಾರೆ. ಆದರೆ ಈ ಬಗ್ಗೆ ತಾವು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಟೀಕೆ ಮಾಡಿದವರೇ ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.

ಜಾತಿ ಪ್ರಾತಿನಿಧ್ಯಗಳ ಬಗ್ಗೆ ಈಗಾಗಲೇ ತಾವು ತಮ್ಮ ಅನಿಸಿಕೆಯನ್ನು ಹೇಳಿಯಾಗಿದೆ. ತಮ್ಮ ಹೇಳಿಕೆಗೆ ಕಾಂಗ್ರೆಸ್ ನೋಟಿಸ್ ನೀಡಿದೆ. ಶ್ಯಾಮನೂರು ಶಿವಶಂಕರಪ್ಪ ಅವರಿಗೆ ನೋಟಿಸ್ ನೀಡಿಲ್ಲ ಎಂಬ ಚರ್ಚೆಯನ್ನು ಮಾಡಲು ನಾವು ಬಯಸುವುದಿಲ್ಲ. ನನ್ನ ಮೇಲೆ ಕೆಲವರಿಗೆ ಪ್ರೀತಿ ಜಾಸ್ತಿ. ಹೀಗಾಗಿ ನೋಟಿಸ್ ನೀಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ದೆಹಲಿ ಭೇಟಿಗೆ ವಿಶೇಷ ಅರ್ಥ ಇಲ್ಲ. 30 ವರ್ಷ ಇಲ್ಲಿ ವಾಸ ಮಾಡಿದ್ದೆ. ಬಹಳಷ್ಟು ಸ್ನೇಹಿತರು ನನಗೆ ದೆಹಲಿಯಲ್ಲಿದ್ದಾರೆ. ಅವರನ್ನು ಭೇಟಿ ಮಾಡಲು ಆಗಮಿಸಿದ್ದೇನೆ. ಹೈಕಮಾಂಡ್ ನಾಯಕರು ಈಗ ರಾಜ್ಯದವರೇ ಆಗಿದ್ದಾರೆ. ಹೀಗಾಗಿ ವರಿಷ್ಠರನ್ನು ಭೇಟಿ ಮಾಡುವ ಬಗ್ಗೆ ವಿಶೇಷ ಏನಿಲ್ಲ ಎಂದರು.

ರಾಜ್ಯದಲ್ಲಿ ಜಾತಿ ಜನಗಣತಿ ವರದಿ ಬಿಡುಗಡೆಗೆ ತೀವ್ರಗೊಂಡ ಒತ್ತಡ

ರಾಜ್ಯ ರಾಜಕಾರಣದಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಲಿದೆ ಎಂದೇ ಹೇಳಲಾಗುತ್ತಿರುವ ಜಾತಿ ಜನಗಣತಿ ವರದಿ ಬಿಡುಗಡೆಗೆ ಒತ್ತಡ ಕೇಳಿಬರುತ್ತಿದೆ. ಜಾತಿ ಜನಗಣತಿ ವರದಿಗೆ ಆದಷ್ಟು ಬೇಗ ಸಮ್ಮತಿ ಸೂಚಿಸಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರೂ ಕೂಡಾ ಈ ಪ್ರಕ್ರಿಯೆ ಕೊಂಚ ತಡವಾಗುವ ಸಾಧ್ಯತೆಗಳಿವೆ. ಕಾಂತರಾಜ್ ಆಯೋಗ ಸಿದ್ದಪಡಿಸಿದ್ದ ಸಾಮಾಜಿಕ ಹಾಗೂ ಆರ್ಥಿಕ ಜಾತಿ ಸರ್ವೆ ವರದಿ ಸಿದ್ದಗೊಂಡು ಈಗಾಗಲೇ 5 ವರ್ಷದ ಮೇಲಾಗಿದೆ. ಸದ್ಯ ಈ ವರದಿ ಇನ್ನೂ ಬಹಿರಂಗವಾಗದೆ ಕಡತಗಳು ಧೂಳು ತಿನ್ನುತ್ತಿವೆ.

ಪ್ರಬಲ ಸಮುದಾಯಗಳು ಈ ವರದಿ ಬಿಡುಗಡೆಗೆ ತೀವ್ರವಾಗಿ ವಿರೋಧವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿರುವುದರಿಂದ ಜೇನುಗೂಡಿನಂತಿರುವ ಜಾತಿ ಜನಗಣತಿ ವರದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೈ ಹಾಕಲಿದ್ದಾರೆಯೇ ಎಂಬ ಯಕ್ಷಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಅತ್ತ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜಾತಿ ಜನಗಣತಿ ವರದಿಯನ್ನು ಬಿಡುಗಡೆ ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಿದ್ಧಪಡಿಸಿದ್ದ ವರದಿ ಬಿಡುಗಡೆಗೆ ಸಿದ್ಧವಾಗಿ ಹಲವಾರು ವರ್ಷಗಳೇ ಆಗಿದ್ದರೂ ರಾಜಕೀಯ ಕಾರಣಗಳಿಗಾಗಿ ನೆನೆಗುದಿಗೆ ಬಿದ್ದಿದೆ.

ವಾಸ್ತವವಾಗಿ ಈ ವರದಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ 2013 ರಲ್ಲಿ ವಿಶೇಷ ಆಸಕ್ತಿ ವಹಿಸಿ ಅಂದಾಜು 162 ಕೋಟಿ ರೂ.ಗಳ ವೆಚ್ಚದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕಾಂತರಾಜು ನೇತೃತ್ವದಲ್ಲಿ ಸಮೀಕ್ಷೆಯನ್ನು ನಡೆಸಿದ್ದರು.

2016 ರ ವೇಳೆಗೆ ಬಹುತೇಕ ವರದಿ ಪೂರ್ಣಗೊಂಡು ಅಂದು ಸರ್ಕಾರ ಜನರ ನಾಡಿಮಿಡಿತವನ್ನು ಅರಿಯಲು ವರದಿಯನ್ನು ಸೋರಿಕೆ ಮಾಡಿತ್ತು. ಅದೇ ಸಂದರ್ಭದಲ್ಲಿ ವೀರಶೈವ ಲಿಂಗಾಯಿತ ಪ್ರತ್ಯೇಕ ಧರ್ಮ ಮುನ್ನಲೆಗೆ ಬಂದಿತ್ತು.ಇಂತಹ ಸಂದರ್ಭದಲ್ಲಿ ವರದಿಯನ್ನು ಬಿಡುಗಡೆ ಮಾಡಿದರೆ ಸರ್ಕಾರಕ್ಕೆ ತಿರುಗುಬಾಣವಾಗಬಹುದು ಎಂಬ ಆತಂಕದಿಂದ ಸಿದ್ದರಾಮಯ್ಯನವರು ದುಸ್ಸಾಹಸಕ್ಕೆ ಕೈ ಹಾಕಿರಲಿಲ್ಲ. ತದನಂತರ ಬಂದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಕೂಡ ವರದಿಯನ್ನು ಕಣ್ಣೆತ್ತಿಯೂ ನೋಡದೆ ಅಕಾರ ಮುಗಿಸಿದ್ದು ಇತಿಹಾಸ.

ಹಾವು-ಮುಂಗುಸಿಗಳ ಒಗ್ಗೂಡುವಿಕೆಯೇ ಇಂಡಿಯಾ ಮೈತ್ರಿಕೂಟ ; ತೇಜಸ್ವಿ ಸೂರ್ಯ

ವಿಧಾನಸಭೆ ಚುನಾವಣೆ ವೇಳೆ ಸಿದ್ದರಾಮಯ್ಯನವರು, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜಾತಿ ಜನಗಣತಿಯನ್ನು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಇದೀಗ ಕಾಂಗ್ರೆಸ್ ಅಭೂತಪೂರ್ವ ಬಹುಮತವನ್ನು ಪಡೆದು ಅಧಿಕಾರಕ್ಕೆ ಬಂದಿದ್ದೂ ಆಗಿದೆ, ಸಿದ್ದರಾಮಯ್ಯನವರು ಸಿಎಂ ಆಗಿದ್ದೂ ಆಗಿದೆ. ಹಿಂದುಳಿದ ವರ್ಗಗಳ ಆಯೋಗ ಸಿದ್ದಪಡಿಸಿರುವ ಈ ವರದಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿ ತದನಂತರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಅಂಗೀಕರಿಸುವುದಷ್ಟೇ ಬಾಕಿ ಉಳಿದಿದೆ.

ತಲೆಕೆಳಗಾದ ಲೆಕ್ಕಾಚಾರ : ಇದುವರೆಗೂ ರಾಜ್ಯದಲ್ಲಿ ಲಿಂಗಾಯಿತರು, ತದನಂತರ ಒಕ್ಕಲಿಗರು, ಕುರುಬರು, ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರು, ಪರಿಶಿಷ್ಟ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂದು ಭಾವಿಸಲಾಗಿತ್ತು.

ಆದರೆ ಸರ್ಕಾರ ನಡೆಸಿರುವ ಅಧಿಕೃತ ವರದಿ ಪ್ರಕಾರ, ರಾಜ್ಯದಲ್ಲಿ ದಲಿತರೇ ಹೆಚ್ಚಾಗಿದ್ದು, ಕುರುಬ ಜನಾಂಗವೇ ಅತಿ ಹಿಂದುಳಿದ ಸಮುದಾಯವಾಗಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಗಣತಿ ಮತ್ತು ಜಾತಿ ಮರುವಿಂಗಡಣೆ ವರದಿ ಸಿದ್ಧವಾಗಿದ್ದು. ಇನ್ನೇನು ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.

ಈ ವರದಿಗೆ ಸರ್ಕಾರ ಸಮ್ಮತಿ ಸೂಚಿಸದೆ ಇರಲು ಹಲವಾರು ಕಾರಣಗಳಿವೆ. ವಿಳಂಬ ಧೋರಣೆ ಅನುಸರಿಸಲು ಕಾನೂನಾತ್ಮಕ ಹಾಗೂ ರಾಜಕೀಯ ಕಾರಣಗಳೂ ಇವೆ. 2024ರ ಲೋಕಸಭಾ ಚುನಾವಣೆವರೆಗೂ ಈ ವರದಿಗೆ ಸಮ್ಮತಿ ಸೂಚಿಸುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ತಡೆ ಹಿಡಿಯುವ ಸಾಧ್ಯತೆಗಳಿವೆ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಲಿದೆ. ಮುಂದಿನ ವರ್ಷ ಏಪ್ರಿಲ್ – ಮೇ ವೇಳೆಗೆ ಚುನಾಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ವರದಿ ಬಗ್ಗೆ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ನಿಜ್ಜರ್ ಹತ್ಯೆ ತನಿಖೆಗೆ ಸಹಕರಿಸುವಂತೆ ಭಾರತಕ್ಕೆ ಅಮೆರಿಕ ಮನವಿ

ಕಾಂತರಾಜ್ ಸಮಿತಿಯು ಜಾತ್ಯಾಧಾರಿತ ಜನ ಗಣತಿ ರೂಪಿಸುವಾಗ ತಪ್ಪು ಲೆಕ್ಕ ಹಾಕಿದೆ ಎನ್ನುವ ಕೆಲವು ಸಮುದಾಯಗಳ ವಾದವಾಗಿತ್ತು. ಈ ಜಾತಿ ಗಣತಿ ವರದಿ ಮಾಧ್ಯಮಗಳಿಗೆ ಸೋರಿಕೆ ಕೂಡಾ ಆಗಿತ್ತು. ಈ ವರದಿಗಳ ಪ್ರಕಾರ ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಲಿಂಗಾಯತ ಸಮುದಾಯ ಕೇವಲ ಶೇ. 14 ಹಾಗೂ ಒಕ್ಕಲಿಗ ಸಮುದಾಯ ಕೇವಲ ಶೇ. 11ರಷ್ಟು ಪ್ರತಿನಿಸುತ್ತದೆ ಎಂಬ ಮಾಹಿತಿ ಇದೆ ಎನ್ನಲಾಗಿದೆ.

ಇದೇ ವಿಚಾರವಾಗಿ ಕೆಲವು ಸಮುದಾಯಗಳ ನಾಯಕರು ಹೈಕೋರ್ಟ್ ಮೊರೆ ಹೋಗಿದ್ದರು. ಜಾತಿ ಗಣತಿ ನಡೆಸೋದು ಕೇಂದ್ರ ಸರ್ಕಾರದ ವಿಶೇಷಾಕಾರ. ಈ ಅಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದವು. ಇನ್ನೊಂದೆಡೆ ಒಬಿಸಿ ಸಮುದಾಯಗಳ ಕಾರ್ಯಕರ್ತರೂ ನ್ಯಾಯಾಲಯದ ಮೊರೆ ಹೋಗಿದ್ದರು. ಸರ್ಕಾರವು ವರದಿಯನ್ನು ಒಪ್ಪಿ ಅದರ ಶಿಫಾರಸ್ಸುಗಳನ್ನು ಜಾರಿ ಮಾಡಬೇಕೆಂದು ಆಗ್ರಹಿಸಿದ್ದರು. ಸದ್ಯ ಎರಡೂ ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇದೆ.

ಜಾತಿವಾರು ಜನಸಂಖ್ಯೆ

  • ಪರಿಶಿಷ್ಟ ಜಾತಿ(ಎಸ್ಸಿ)ಯವರ ಸಂಖ್ಯೆ 1.08 ಕೋಟಿ
  • ಪರಿಶಿಷ್ಟ ಪಂಗಡ(ಎಸ್ಟಿ)ದವರ ಪ್ರಮಾಣ 40.45 ಲಕ್ಷ
  • ಮುಸ್ಲಿಮರು- 70 ಲಕ್ಷ
  • ಲಿಂಗಾಯತ- 65 ಲಕ್ಷ
  • ಒಕ್ಕಲಿಗ- 60 ಲಕ್ಷ
  • ಕುರುಬರು- 45 ಲಕ್ಷ
  • ಈಡಿಗ- 15 ಲಕ್ಷ
  • ವಿಶ್ವಕರ್ಮ- 15
  • ಬೆಸ್ತ- 15 ಲಕ್ಷ
  • ಬ್ರಾಹ್ಮಣ- 14 ಲಕ್ಷ
  • ಗೊಲ್ಲ(ಯಾದವ) -10 ಲಕ್ಷ
  • ಮಡಿವಾಳ ಸಮಾಜ- 6
  • ಅರೆ ಅಲೆಮಾರಿ -6 ಲಕ್ಷ
  • ಕುಂಬಾರ -5 ಲಕ್ಷ
  • ಸವಿತಾ ಸಮಾಜ-5 ಲಕ್ಷ

ಗುಜರಿ ಅಂಗಡಿ ಮಾಲೀಕನ ಮನೆಯಲ್ಲಿ ಚಿನ್ನ-ಹಣ ದೋಚಿದ್ದ ಆರೋಪಿ ಸೆರೆ

ಬೆಂಗಳೂರು, ಅ.3- ನಕಲಿ ಕೀಗಳನ್ನು ಬಳಸಿ ಮನೆಗಳ್ಳತನ ಮಾಡುವುದನ್ನು ಇಂಟರ್‍ನೆಟ್ ಮೂಲಕ ನೋಡಿಕೊಂಡು ಗುಜರಿ ಅಂಗಡಿ ಮಾಲೀಕನ ಮನೆಯ ಬೀಗ ತೆಗೆದು ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಲಕ್ಷಾಂತರ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ತಿಲಕ್‍ನಗರ ಠಾಣೆ ಪೊಲೀಸರು ಬಂಧಿಸಿ 1.10 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ 74 ಸಾವಿರ ಹಣ ವಶಪಡಿಸಿಕೊಂಡಿದ್ದಾರೆ.

ಫರೂಕ್ ಬಂಧಿತ ಆರೋಪಿ. ಈತ ಗುಜರಿ ಅಂಗಡಿ ಮಾಲೀಕ ಶಹಾ ನವಾಜ್ ಅವರಿಗೆ ಪರಿಚಯಸ್ಥ. ಆರೋಪಿ ಕಳ್ಳತನ ಮಾಡಿದ್ದ ಹಣದಲ್ಲಿ ಬಹುಪಾಲು ಹಣವನ್ನು ತಾನು ಮಾಡಿದ್ದ ಸಾಲ ತೀರಿಸಲು ಬಳಸಿಕೊಂಡಿರುವುದು ವಿಚಾರಣೆಯಿಂದ ಗೊತ್ತಾಗಿದೆ.

ಆರೋಪಿಯು ಪಿಯುಸಿ ವ್ಯಾಸಂಗ ಮಾಡಿದ್ದು, ಮೂರು ತಿಂಗಳಿನಿಂದ ನಕಲಿ ಕೀ ಬಳಸಿ ಕಳ್ಳತನ ಮಾಡುವ ಬಗ್ಗೆ ಇಂಟರ್‍ನೆಟ್‍ನಲ್ಲಿ ನೋಡಿ ತಿಳಿದುಕೊಂಡಿದ್ದನು. ಲೋನ್ ಆ್ಯಪ್‍ನಲ್ಲಿ ಸಾಲ ಮಾಡಿಕೊಂಡಿದ್ದರಿಂದ ಸಾಲ ತೀರಿಸಲು ಕಳ್ಳತನ ಮಾಡಲು ಪ್ಲಾನ್ ಮಾಡಿಕೊಂಡು ಗುಜರಿ ಅಂಗಡಿ ಮಾಲೀಕನ ಮನೆಗೆ ಕನ್ನ ಹಾಕಲು ಸಂಚು ರೂಪಿಸಿ ಕುಟುಂಬ ಸಮೇತ ಅವರು ಊರಿಗೆ ಹೋಗಿದ್ದಾಗ ನಕಲಿ ಕೀಗಳನ್ನು ಬಳಸಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ಹಾಗೂ ಲಕ್ಷಾಂತರ ಹಣ ಕಳ್ಳತನ ಮಾಡಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ವಿವರ: ಎಸ್‍ಆರ್‍ಕೆ ಗಾರ್ಡನ್, 2ನೇ ಕ್ರಾಸ್, 2ನೇ ಮುಖ್ಯರಸ್ತೆಯಲ್ಲಿ ಗುಜರಿ ಅಂಗಡಿ ಮಾಲೀಕರಾದ ಶಹಾ ನವಾಜ್ ಎಂಬುವವರು ವಾಸವಾಗಿದ್ದು, ತಮ್ಮ ಮಗಳ ಮದುವೆಗಾಗಿ ಹಣ ಹಾಗೂ ಚಿನ್ನಾಭರಣಗಳನ್ನು ಹೊಂದಿಸಿ ಮನೆಯಲ್ಲಿಟ್ಟಿದ್ದರು. ಶಹಾ ನವಾಜ್ ಅವರು ಸಂಬಂಧಿಕರ ಮದುವೆ ನಿಮಿತ್ತ ಕುಟುಂಬ ಸಮೇತ ರಾಮನಗರ ಹಾಗೂ ಮಂಡ್ಯಕ್ಕೆ ಸೆ.23ರಂದು ಹೋಗಿದ್ದರು.

ಈ ಸಂದರ್ಭದಲ್ಲಿ ಕಳ್ಳ ನಕಲಿ ಕೀಗಳನ್ನು ಬಳಸಿ ಮನೆಯ ಮೊದಲ ಮಹಡಿಯ ಬಾಗಿಲ ಬೀಗ ತೆಗೆದು ಒಳಗೆ ನುಗ್ಗಿ ಬೀರುವಿನಲ್ಲಿದ್ದ ಸುಮಾರು 2.5 ಕೆಜಿ ಚಿನ್ನದ ಆಭರಣಗಳು ಮತ್ತು 8 ರಿಂದ 10 ಲಕ್ಷ ರೂ. ಹಣ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದನು.

ಹಾವು-ಮುಂಗುಸಿಗಳ ಒಗ್ಗೂಡುವಿಕೆಯೇ ಇಂಡಿಯಾ ಮೈತ್ರಿಕೂಟ ; ತೇಜಸ್ವಿ ಸೂರ್ಯ

ಸೆ.25ರಂದು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಶಹಾ ನವಾಜ್ ಅವರು ಮನೆಗೆ ವಾಪಸ್ ಬಂದಿದ್ದು, ಬೀರುವಿನಲ್ಲಿ ಹಣವಿಡಲು ಹೋದಾಗ ಬೀರು ತೆರೆದಿರುವುದು ಗಮನಿಸಿ ಗಾಬರಿಗೊಂಡು ನೋಡಿದಾಗ ಅದರಲ್ಲಿಟ್ಟಿದ್ದ ಲಕ್ಷಾಂತರ ಹಣ ಹಾಗೂ ಕೋಟ್ಯಂತರ ರೂ. ಮೌಲ್ಯದ ಆಭರಣ ಕಳ್ಳತನವಾಗಿರುವುದು ಕಂಡುಬಂದಿದೆ.

ತಕ್ಷಣ ಅವರು ಸ್ನೇಹಿತ ಅನೀಸ್ ಎಂಬುವರಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿ ಮನೆ ಹತ್ತಿರ ಬರುವಂತೆ ಹೇಳಿದ್ದಾರೆ. ಅನೀಸ್ ಅವರು ಇವರ ಮನೆ ಬಳಿ ಬಂದು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ತಿಲಕ್ ನಗರ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಒಬ್ಬ ಕಳ್ಳ ಬಂದು ಹೋಗಿರುವುದು ಕಂಡು ಬಂದಿದೆ. ಈ ಬಗ್ಗೆ ತಿಲಕ್‍ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇಂಡಿಯಾ ಮೈತ್ರಿಕೂಟದಿಂದ ಹೊರಬರುವುದೇ ಎಎಪಿ..?

ಕಳ್ಳನ ಪತ್ತೆಗಾಗಿ ಕಾರ್ಯಪ್ರವೃತ್ತರಾದ ಪೊಲೀಸರು ಒಂದು ವಿಶೇಷ ತಂಡ ರಚಿಸಲಾಗಿತ್ತು.ಈ ತಂಡ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ವ್ಯಕ್ತಿಯ ಚಹರೆ ಆಧರಿಸಿ ತನಿಖೆ ಕೈಗೊಂಡಿತ್ತು. ಕಾರ್ಯಾಚರಣೆ ವೇಳೆ ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಬದಲಾಯಿಸಿಕೊಂಡು ನಕಲಿ ಕೀಗಳನ್ನು ಬಳಸಿ ಮನೆಗಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಆತನಿಂದ 1,10,60,000ರೂ.

ಮೌಲ್ಯದ 1 ಕೆಜಿ 800 ಗ್ರಾಂ ಚಿನ್ನಾಭರಣ, 74 ಸಾವಿರ ಹಣ, ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ ಹಾಗೂ ಮೊಬೈಲ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಉತ್ತಮ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು ಹಾಗೂ ಪೂರ್ವ ವಿಭಾಗದ ಅಪರ ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.

ಜಾತಿಜನಗಣತಿ ಬಿಡುಗಡೆಗೆ ಸಚಿವ ಸತೀಶ್ ಜಾರಕಿಹೊಳಿ ಒತ್ತಾಯ

ಬೆಳಗಾವಿ, ಅ.3- ಜಾತಿಜನಗಣತಿ ವರದಿ ನಮ್ಮಲ್ಲಿ ಸಿದ್ಧವಾಗಿದ್ದು, ಅದು ಶೀಘ್ರವಾಗಿ ಬಿಡುಗಡೆಯಾಗಿ ಜಾರಿಗೆ ಬರಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಲಹೆ ನೀಡಿದ್ದಾರೆ. ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಆಡಳಿತದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 162 ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ಖರ್ಚು ಮಾಡಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿತ್ತು. ಅದು ಸಿದ್ಧವಾಗಿದೆ. ಅದನ್ನು ಅನುಷ್ಠಾನಕ್ಕೆ ತರಬೇಕು ಎಂದು ನಮ್ಮಲ್ಲೂ ವ್ಯಾಪಕ ಒತ್ತಾಯಗಳಿವೆ ಎಂದರು.

ಹಾವು-ಮುಂಗುಸಿಗಳ ಒಗ್ಗೂಡುವಿಕೆಯೇ ಇಂಡಿಯಾ ಮೈತ್ರಿಕೂಟ ; ತೇಜಸ್ವಿ ಸೂರ್ಯ

ರಾಜ್ಯಸರ್ಕಾರ ಕೂಡ ಈ ನಿಟ್ಟಿನಲ್ಲಿ ಚರ್ಚೆ ನಡೆಸುತ್ತಿದೆ. ವರದಿ ಜಾರಿಯ ನಂತರ ಜನಸಂಖ್ಯೆಗನುಗುಣವಾಗಿ ಸಮುದಾಯಗಳಿಗೆ ಆದ್ಯತೆ ನೀಡುವುದು, ಬಜೆಟ್‍ನಲ್ಲಿ ಅನುದಾನ ಮೀಸಲಿಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲು ಸಹಾಯವಾಗುತ್ತದೆ. ಹೀಗಾಗಿ ವರದಿ ಅನುಷ್ಠಾನದಿಂದ ಲಾಭವಾಗಲಿದೆ ಎಂದು ಹೇಳಿದರು.

ಬಿಹಾರದಲ್ಲಿ ನಿತೀಶ್ ಕುಮಾರ್ ಸರ್ಕಾರ ಜಾತಿ ಆಧಾರಿತ ಸಮೀಕ್ಷಾ ವರದಿಯನ್ನು ಅನುಷ್ಠಾನಕ್ಕೆ ತಂದಿರುವುದು ಉತ್ತಮ ಬೆಳವಣಿಗೆ ಎಂದರು.

ಕರ್ನಾಟಕ ಜಿಹಾದಿ ರಕ್ಕಸರಿಗೆ ಸ್ವರ್ಗವಾಗಿ ಮಾರ್ಪಟ್ಟಿದೆ : ಬಿಜೆಪಿ

ಬೆಂಗಳೂರು, ಅ.3- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ, ಬಂದಿದ್ದು, ಭಯೋತ್ಪಾದಕರಿಗೆ ಹಾಗೂ ಜಿಹಾದಿ ರಕ್ಕಸರಿಗೆ ಕರ್ನಾಟಕ ಸ್ವರ್ಗವಾಗಿ ಮಾರ್ಪಟ್ಟಿದೆ ಎಂದು ಪ್ರತಿಪಕ್ಷ ಬಿಜೆಪಿ ದೂರಿದೆ. ಈ ಕುರಿತು ತನ್ನ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ತಾವೆಂತಹ ದೇಶದ್ರೋಹದ ಕೆಲಸವನ್ನು ಮಾಡಿದರೂ, ಕಾಂಗ್ರೆಸ್ ಪಕ್ಷ ನಮ್ಮ ಬೆಂಬಲಕ್ಕಿರಲಿದೆ ಎಂಬ ಕಾರಣಕ್ಕೆ ಜಿಹಾದಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಕರ್ನಾಟಕವನ್ನು ಮತ್ತೊಂದು ತಾಲಿಬಾನ್ ಮಾಡಲು ಕಾಂಗ್ರೆಸ್ ಸಿದ್ದವಾಗಿ ನಿಂತಂತೆ ಕಾಣುತ್ತಿದೆ!! ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರು ಉಲ್ಲೇಖ ಮಾಡದೆ ಸಿದ್ಧ ಎಂದು ಟ್ವೀಟ್ ಮಾಡಿದೆ.

ಮತ್ತೊಂದು ಎಕ್ಸ್‍ನಲ್ಲಿ ಬಿಜೆಪಿ, ಶಿವಮೊಗ್ಗದಲ್ಲಿ ಈ ಹಿಂದೆ ವಿಧ್ವಂಸಕ ಕೃತ್ಯ ಎಸಗಿದ ಗೂಂಡಾಗಳನ್ನೆಲ್ಲೆ ಬಿಡುಗಡೆಗೊಳಿಸಿದ್ದು ಕಾಂಗ್ರೆಸ್ ಸರ್ಕಾರ!. ಪೊಲೀಸ್ ಅಧಿಕಾರಗಳ ಮೇಲೆಯೇ ಮತಾಂಧರು ಕಲ್ಲುತೂರಾಟ ನಡೆಸಿದ್ದು, ಅನೇಕ ಪೊಲೀಸರೇ ಗಾಯಗೊಂಡಿದ್ದರೂ ಅದರ ಬಗ್ಗೆ ಚಕಾರವೆತ್ತದ ನಿಮ್ಮ ಸರ್ಕಾರಕ್ಕೆ ಕನಿಷ್ಠ ಮಾನ ಮರ್ಯಾದೆ ಉಳಿದಿದೆಯೇ?.

ನಮ್ಮ ದಕ್ಷ, ಸಮರ್ಥ, ಶಕ್ತಿಯುತ ಪೊಲೀಸ್ ಅಧಿಕಾರಿಗಳ ಕೈ ಕಟ್ಟಿ ಹಾಕಿ ಮೂಲಭೂತವಾದಿಗಳ ತಾಳಕ್ಕೆ ಕುಣಿಯುವ ಹಾಗೆ ಮಾಡಿರುವ ನಿಮ್ಮ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಯಾವ ನೈತಿಕತೆಯೂ ಉಳಿದಿಲ್ಲ! ಇನ್ನು ನಾಲ್ಕು ಪೈಸೆಯ ಗೌರವವನ್ನೂ ಉಳಿಸಿಕೊಳ್ಳದ ನಿಮ್ಮ ಸರ್ಕಾರದ ವಿರುದ್ಧ ಯಾವ ಸಂಚಿನ ಅಗತ್ಯವೂ ಇಲ್ಲ. ಗೆದ್ದಲು ಹಿಡಿದ ಮರದ ಅವಸಾನ ಕಟ್ಟಿಟ್ಟ ಬುತ್ತಿ ಎಂದು ಹೇಳಿದೆ.

ಹಾವು-ಮುಂಗುಸಿಗಳ ಒಗ್ಗೂಡುವಿಕೆಯೇ ಇಂಡಿಯಾ ಮೈತ್ರಿಕೂಟ ; ತೇಜಸ್ವಿ ಸೂರ್ಯ

ಮೂಲಭೂತವಾದಿಗಳನ್ನು ಬಿಡುಗಡೆಗೊಳಿಸುವ ಮುಖ್ಯಮಂತ್ರಿ!. ಅಮಾಯಕರೆಂದು ಕ್ಲೀನ್‍ಚಿಟ್ ಕೊಡುವ ಗೃಹ ಸಚಿವರು!. ಮಾನಸಿಕರಂತೆ ಹೇಳಿಕೆ ಕೊಡುವ ಜಿಲ್ಲಾ ಉಸ್ತುವಾರಿ ಸಚಿವರು ಇz್ದದ್ದಾಗ ಶಿವಮೊಗ್ಗದಲ್ಲಿ ಗಲಭೆ ನಡೆಯದೆ ಮತ್ತೇನು ತಾನೆ ನಡೆದೀತು? ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು.

ಉಡುಪಿಯಲ್ಲಿ ಹಿಂದೂ ಯುವತಿಯರ ಖಾಸಗಿ ವಿಡಿಯೋಗಳ ರಹಸ್ಯ ಚಿತ್ರೀಕರಣ.ರಾಮನಗರದಲ್ಲಿ ಹಾಡುಹಗಲೇ ಗೋವುಗಳ ಕಳ್ಳತನ ಹಾಗೂ ವಧೆ. ರಾಮನಗರದ ಟಿಪ್ಪು ನಗರಕ್ಕೆ ಕರೆಂಟ್ ಬಿಲ್ ಕೊಡಲು ಹೋದ ಬೆಸ್ಕಾಂ ಸಿಬ್ಬಂದಿಗಳ ಮೇಲೆ ಗುಂಪು ಹಲ್ಲೆ.

ನ್ಯೂಸ್ ಕ್ಲಿಕ್ ಸಂಸ್ಥೆ ಮೇಲೆ ದೆಹಲಿ ಪೊಲೀಸರಿಂದ ದಾಳಿ

ನವದೆಹಲಿ,ಅ.3-ಚೀನಾದಿಂದ ಹಣ ಹೂಡಿಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಸ್ ಕ್ಲಿಕ್ ಡಿಜಿಟಲ್ ಮಾಧ್ಯಮ ಸಂಸ್ಥೆ ಪತ್ರಕರ್ತರ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿದ್ದಾರೆ. ಚೀನಾದಿಂದ ನ್ಯೂಸ್ ಪೋರ್ಟಲ್ ದೇಣಿಗೆ ಪಡೆದುಕೊಂಡಿದೆ ಎಂಬ ಆರೋಪದ ನಡುವೆ ಈ ದಾಳಿ ನಡೆದಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳಲ್ಲಿ ಒಬ್ಬರಾದ ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಕಚೇರಿಯಲ್ಲಿ ಅಧಿಕೃತ ನಿವಾಸದ ಆವರಣದಲ್ಲಿ ವಾಸಿಸುತ್ತಿದ್ದಾರೆಂದು ವರದಿಯಾದ ನಂತರ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ನ್ಯೂಸ್ ಕ್ಲಿಕ್ ವೆಬ್‍ಸೈಟ್‍ಗೆ ಸಂಬಂಧಿಸಿದ ಘಟಕಗಳ ಮೇಲೆ ನಡೆಯುತ್ತಿರುವ ಕ್ರಮದ ಭಾಗವಾಗಿ ಮಂಗಳವಾರ ಬೆಳಗ್ಗೆ ಸಿಪಿಐ-ಎಂ ನಾಯಕ ಸೀತಾರಾಮ್ ಯೆಚೂರಿ ಅವರ ಅಧಿಕೃತ ನಿವಾಸದ ಮೇಲೆ ದೆಹಲಿ ಪೊಲೀಸ್ ವಿಶೇಷ ದಳ ದಾಳಿ ನಡೆಸಿದೆ.

ನವದೆಹಲಿ ನೋಯ್ಡಾ ಹಾಗೂ ಗಾಜಿಯಾಬಾದ್‍ನ 30ಕ್ಕೂ ಹೆಚ್ಚು ಕಡೆಗಳಲ್ಲಿ ದೆಹಲಿ ಪೊಲೀಸರು ಬೃಹತ್ ಪ್ರಮಾಣದ ದಾಳಿ ನಡೆಸಿದ್ದಾರೆ. ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ವಿಶೇಷ ಘಟಕವು ಪ್ರಕರಣ ದಾಖಲಿಸಿಕೊಂಡಿದೆ. ಚೀನಾದಿಂದ ಹಣ ಹೂಡಿಕೆಗೆ ಸಂಬಂಧಿಸಿದಂತೆ ಈಗಾಗಲೇ ಜಾರಿ ನಿರ್ದೇಶನಾಲಯವು ನ್ಯೂಸ್‍ಕ್ಲಿಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದೆ.

ಹಾವು-ಮುಂಗುಸಿಗಳ ಒಗ್ಗೂಡುವಿಕೆಯೇ ಇಂಡಿಯಾ ಮೈತ್ರಿಕೂಟ ; ತೇಜಸ್ವಿ ಸೂರ್ಯ

ಇದರ ಬೆನ್ನಲ್ಲೇ, ನ್ಯೂಸ್‍ಕ್ಲಿಕ್‍ನ ಹಲವು ಪತ್ರಕರ್ತರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಖಲೆ ಪರಿಶೀಲನೆಯಷ್ಟೇ ಮಾಡಲಾಗಿದ್ದು, ಯಾರನ್ನೂ ಬಂಧಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ, ವಿಚಾರಣೆಗಾಗಿ ಕೆಲವು ಪತ್ರಕರ್ತರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಕೂಡ ತಿಳಿದುಬಂದಿದೆ.

ಇದಕ್ಕೂ ಮುನ್ನ ನ್ಯೂಸ್ ಪೋರ್ಟಲ್‍ನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ (ಇ.ಡಿ), ಅದರ ಫಂಡಿಂಗ್ ಕುರಿತು ತನಿಖೆ ಆರಂಭಿಸಿತ್ತು. ನ್ಯೂಸ್ ಪೋರ್ಟಲ್‍ಗೆ ಸಂಬಂಧಿಸಿದ ಕೆಲವು ಆಸ್ತಿಗಳನ್ನು ಕೂಡ ಕೇಂದ್ರ ಸಂಸ್ಥೆ ಮುಟ್ಟುಗೋಲು ಹಾಕಿಕೊಂಡಿತ್ತು. ದಾಳಿ ವೇಳೆ ಪೊಲೀಸರು ಲ್ಯಾಪ್‍ಟಾಪ್, ಮೊಬೈಲ್ ಪೊನ್‍ಗಳು ಸೇರಿದಂತೆ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಜಪ್ತಿ ಮಾಡಿದ್ದು, ಹಾರ್ಡ್‍ಡಿಸ್ಕ್‍ಗಳಲ್ಲಿನ ಡೇಟಾಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ನ್ಯೂಸ್‍ಕ್ಲಿಕ್‍ನಲ್ಲಿ ಚೀನಾ ಹೂಡಿಕೆ ಕುರಿತು ಕಳೆದ ಆಗಸ್ಟ್‍ನಲ್ಲಿ ಅಮೆರಿಕದ ನ್ಯೂಯಾರ್ಕ್ ಟೈಮ್ಸ ವರದಿ ಮಾಡಿತ್ತು. ಚೀನಾದ ಪರವಾಗಿ ನಿಲುವು ಹೊಂದಿರುವ, ಚೀನಾ ನಿರ್ಧಾರಗಳನ್ನು ಬೆಂಬಲಿಸುವ ಅಮೆರಿಕದ ಉದ್ಯಮಿ ನೆವಿಲ್ಲೆ ರಾಯ್ ಸಿಂಘಂ ಎಂಬುವರು ಹಲವು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದು, ಇವುಗಳಲ್ಲಿ ನ್ಯೂಸ್‍ಕ್ಲಿಕ್ ಕೂಡ ಇದೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಿತ್ತು.

ಶಂಕಿತರಿಂದ ಅಕ್ರಮ ಚಟುವಟಿಕೆಗಳು ನಡೆದಿವೆ ಎಂಬ ಜಾರಿ ನಿರ್ದೇಶನಾಲಯ ಹಂಚಿಕೊಂಡ ಮಾಹಿತಿಗಳ ಆಧಾರದಲ್ಲಿ ದಿಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ದಾಳಿ ಕುರಿತು ಹೆಚ್ಚಿನ ವಿವರಗಳನ್ನು ಆನಂತರ ಹಂಚಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

38.05 ಕೋಟಿ ರೂ ದೇಣಿಗೆ :
ಕೇವಲ ಮೂರು ವರ್ಷಗಳ ಕಿರು ಅವಧಿಯಲ್ಲಿಯೇ 38.05 ಕೋಟಿ ರೂಪಾಯಿಯಷ್ಟು ವಿದೇಶಿ ದೇಣಿಗೆಯನ್ನು ಅಕ್ರಮವಾಗಿ ಪಡೆದುಕೊಂಡಿರುವುದು ಇಡಿ ನಡೆಸಿದ್ದ ತನಿಖೆಯಿಂದ ಬೆಳಕಿಗೆ ಬಂದಿತ್ತು. ವಿದೇಶಿ ನೇರ ಹೂಡಿಗೆ (ಎಫ್‍ಡಿಐ) ಮೂಲಕ 9.59 ಕೋಟಿ ರೂ. ಮತ್ತು ಸೇವೆಗಳ ರಫ್ತು ಹೆಸರಿನಲ್ಲಿ 28.46 ಕೋಟಿ ರೂಪಾಯಿ ಹಣವನ್ನು ವಿದೇಶದಿಂದ ರವಾನೆ ಮಾಡಿರುವ ಅಕ್ರಮ ಚಟುವಟಿಕೆಯ ಕುರಿತಾದ ಪುರಾವೆಗಳನ್ನು ಇಡಿ ಪಡೆದುಕೊಂಡಿತ್ತು.

ಗೌತಮ್ ನವ್ಲಖಾ ಮತ್ತು ತೀಸ್ತಾ ಸೆಟಲ್ವಾಡ್ ಅವರ ಸಹವರ್ತಿಗಳಂತಹ ಅನೇಕ ವಿವಾದಾತ್ಮಕ ಪತ್ರಕರ್ತರಿಗೆ, ಹೀಗೆ ಸ್ವೀಕರಿಸಿದ ಹಣವನ್ನು ಹಂಚಿಕೆ ಮಾಡಲಾಗಿತ್ತು. ಚೀನಾ ನಂಟಿಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರಿಗೆ ಇಡಿ ವಿವರಗಳನ್ನು ನೀಡಿತ್ತು. ವಿದೇಶಿ ಕಾಣಿಕೆ ನಿಯಂತ್ರಣ ಕಾಯ್ದೆ (ಎಫ್‍ಸಿಆರ್‍ಎ) ಉಲ್ಲಂಘನೆ ಆರೋಪದಡಿ ನ್ಯೂಸ್‍ಕ್ಲಿಕ್ ವಿರುದ್ಧ ಇ.ಡಿ ಪ್ರಕರಣ ದಾಖಲಿಸಿತ್ತು. ಚೀನಾದಿಂದ ಸ್ವೀಕರಿಸಿದ ಹಣವನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು ಎಂದು ಸಂಸ್ಥೆ ಆರೋಪಿಸಿದೆ.

ಇಂಡಿಯಾ ಮೈತ್ರಿಕೂಟದಿಂದ ಹೊರಬರುವುದೇ ಎಎಪಿ..?

ನ್ಯೂಸ್‍ಕ್ಲಿಕ್ ಪೋರ್ಟಲ್ ಒಂದು ಜಾಗತಿಕ ಜಾಲವಾಗಿದ್ದು, ಚೀನಾ ಪರ ಪ್ರಚಾರಗಳನ್ನು ಹರಡಿಸಲು ಆಸ್ಟ್ರೇಲಿಯಾದ ಕೋಟ್ಯಪತಿ ನೆವಿಲ್ಲೆ ರಾಯ್ ಸಿಂಘಂನಿಂದ ದೇಣಿಗೆ ಪಡೆಯುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ ವರದಿ ತಿಳಿಸಿದೆ. ನ್ಯೂಸ್‍ಕ್ಲಿಕ್ ನಿರ್ದೇಶಕ ಪ್ರಬೀರ್ ಪುರ್ಕಾಯಸ್ಥ ಹಾಗೂ ಮಿಲಿಯನೇರ್ ನೆವಿಲ್ಲೆ ರಾಯ್ ಸಿಂಘಂ, ಸಿಪಿಎಂ ನಾಯಕರಾದ ಪ್ರಕಾಶ್ ಕಾರಟ್ ಮತ್ತು ವಿವಿಧ ಪತ್ರಕರ್ತರ ನಡುವೆ ನಡೆದ ಸರಣಿ ಇಮೇಲ್ ವ್ಯವಹಾರಗಳನ್ನು ಇ.ಡಿ ಪತ್ತೆ ಮಾಡಿದೆ. ಚೀನಾದಲ್ಲಿ ನೆಲೆಸಿರುವ ನೆವಿಲ್ಲೆ ರಾಯ್ ಸಿಂಘಂ, ಭಾರತದಲ್ಲಿ ಚೀನಾ ಪರ ಪ್ರಚಾರ ಹರಡಲು ನ್ಯೂಸ್‍ಕ್ಲಿಕ್‍ಗೆ ಅಕ್ರಮವಾಗಿ 38 ಕೋಟಿ ರೂ ರವಾನಿಸಿದ್ದ ಎಂದು ಇಡಿ ಹೇಳಿದೆ.

ಖಂಡನೆ :
ನ್ಯೂಸ್‍ಕ್ಲಿಕ್‍ಗೆ ಸಂಬಂಧಿಸಿದ ಪತ್ರಕರ್ತರು ಮತ್ತು ಬರಹಗಾರರ ಮನೆಗಳ ಮೇಲೆ ನಡೆಸಿದ ಬಹು ದಾಳಿಗಳ ಬಗ್ಗೆ ಪ್ರೆಸ್ ಕ್ಲಬ್ ಆಫ್ ಇಂಡಿಯಾ ತೀವ್ರ ಕಳವಳ ವ್ಯಕ್ತಪಡಿಸಿದೆ. ದೆಹಲಿ ಪೊಲೀಸರ ಕ್ರಮಗಳ ಕುರಿತು ಶೀಘ್ರದಲ್ಲೇ ವಿವರವಾದ ಹೇಳಿಕೆಯನ್ನು ಬಿಡುಗಡೆ ಮಾಡುವುದಾಗಿ ಮತ್ತು ಹೆಚ್ಚಿನ ಮಾಹಿತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸುವಾಗ ಪತ್ರಕರ್ತರೊಂದಿಗೆ ತನ್ನ ಒಗ್ಗಟ್ಟನ್ನು ಒತ್ತಿ ಹೇಳುತ್ತದೆ ಎಂದು ಅದು ಗಮನಿಸಿದೆ. ನಾವು ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ ಮತ್ತು ವಿವರವಾದ ಹೇಳಿಕೆಯನ್ನು ಬಿಡುಗಡೆ ಮಾಡುತ್ತೇವೆ. ಪಿಸಿಐ ಪತ್ರಕರ್ತರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಮತ್ತು ವಿವರಗಳೊಂದಿಗೆ ಹೊರಬರಲು ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಪ್ರೆಸ್ ಕ್ಲಬ್ ಟ್ವೀಟ್ ಮಾಡಿದೆ.

ಕೆನಡಾದ 40 ಮಂದಿ ರಾಜತಾಂತ್ರಿಕರನ್ನು ಹಿಂಪಡೆಯುವಂತೆ ಭಾರತ ತಾಕೀತು

ನವದೆಹಲಿ,ಅ.3-ಭಾರತದಲ್ಲಿರುವ ಕೆನಡಾದ ರಾಜತಾಂತ್ರಿಕ ಸಿಬ್ಬಂದಿಗಳನ್ನು ತಕ್ಷಣವೇ ಸ್ವದೇಶಕ್ಕೆ ಕರೆಸಿಕೊಳ್ಳಬೇಕೆಂದು ಅಲ್ಲಿನ ಸರ್ಕಾರಕ್ಕೆ ನವದೆಹಲಿ ಸೂಚನೆ ಕೊಟ್ಟಿದೆ. ಕಳೆದ ಎರಡು ವಾರಗಳಿಂದ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹಾವು-ಮುಂಗುಸಿಯಂತೆ ಎಂಬಂತಾಗಿರುವ ಸಂದರ್ಭದಲ್ಲಿ ದೆಹಲಿಯಲ್ಲಿರುವ ರಾಜತಾಂತ್ರಿಕ ಸಿಬ್ಬಂದಿಗಳನ್ನು ಹಿಂಪಡೆಯುವಂತೆ ತಾಕೀತು ಮಾಡಿದೆ.

ಮೂಲಗಳ ಪ್ರಕಾರ ನವದೆಹಲಿಯಲ್ಲಿ ಕೆನಡಾದ ರಾಜತಾಂತ್ರಿಕ ಸಿಬ್ಬಂದಿಯು ಒಟ್ಟು 40 ಮಂದಿ ಇದ್ದಾರೆ ಎನ್ನಲಾಗಿದೆ. ಭಾರತದ ರಾಯಭಾರಿಯನ್ನು ಅಮಾನತು ಮಾಡಿದ ನಂತರ ಇಲ್ಲಿನ ರಾಯಭಾರಿ ಹಾಗೂ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುವಂತೆ ಭಾರತ ಸೂಚನೆ ಕೊಟ್ಟಿತ್ತು.

ಕೆಲ ದಿನಗಳ ಹಿಂದೆ 62 ರಾಜತಾಂತ್ರಿಕ ಸಿಬ್ಬಂದಿಗಳಿದ್ದರು. ಅದನ್ನು ಗಣನೀಯ ಪ್ರಮಾಣದಲ್ಲಿ ಕಡಿತ ಮಾಡಬೇಕೆಂದು ಭಾರತ ಒತ್ತಡ ಹಾಕಿತ್ತು. ಮೊದಲ ಹಂತದಲ್ಲಿ 20 ಸಿಬ್ಬಂದಿಗಳನ್ನು ಕರೆಸಿಕೊಳ್ಳಲಾಗಿತ್ತು. ಪ್ರಸ್ತುತ 40 ಸಿಬ್ಬಂದಿಗಳಿರುವುದರಿಂದ ಇಷ್ಟು ದೊಡ್ಡ ಮೊತ್ತದ ರಾಜತಾಂತ್ರಿಕರು ಇರುವ ಅಗತ್ಯವಿಲ್ಲ ಎಂದು ಭಾರತ ಪ್ರತಿಪಾದಿಸಿದೆ.

ಹಾವು-ಮುಂಗುಸಿಗಳ ಒಗ್ಗೂಡುವಿಕೆಯೇ ಇಂಡಿಯಾ ಮೈತ್ರಿಕೂಟ ; ತೇಜಸ್ವಿ ಸೂರ್ಯ

ಖಲಿಸ್ತಾನ ಪರ ಉಗ್ರ ನಿಜ್ಜರ್‍ಸಿಂಗ್ ಹತ್ಯೆ ನಂತರ ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕರ ಬಿಕ್ಕಟ್ಟು ಮುಂದುವರೆದಿದೆ. ಭಾರತ ಏಜೆನ್ಸಿಯವರೇ ಕೆನಡಾದ ಪ್ರಜೆಯಾಗಿದ್ದ ನಿಜ್ಜರ್ ಸಿಂಗ್‍ನನ್ನು ಹತ್ಯೆ ಮಾಡಿವೆ ಎಂದು ಅವರ ಆರೋಪವಾಗಿತ್ತು. ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ರಾಜತಾಂತ್ರಿಕ ಮಾರ್ಗದ ಮೂಲಕ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪರಾ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರ ನಡೆಸಿದ್ದರು.

ಇದಕ್ಕೆ ತಿರುಗೇಟು ಕೊಟ್ಟಿದ್ದ ಭಾರತ, ದೆಹಲಿಯಲ್ಲಿರುವ ಕೆನಡಾದ ಎಲ್ಲಾ ರಾಜತಾಂತ್ರಿಕ ರಾಯಭಾರಿ ಹಾಗೂ ಸಿಬ್ಬಂದಿಗಳು 5 ದಿನದಲ್ಲೇ ಖಾಲಿ ಮಾಡುವಂತೆ ತಾಕೀತು ಮಾಡಿತ್ತು. ಅಲ್ಲದೇ ಕೆನಡಾ ಪ್ರಜೆಗಳಿಗೆ ಭಾರತದಲ್ಲಿ ವೀಸಾ ನೀಡುವುದನ್ನು ಕೆಲದಿನಗಳ ಮಟ್ಟಿಗೆ ತಡೆಹಿಡಿದಿತ್ತು.

ರಾಜ್ಯದಲ್ಲಿ ಎಲ್ಲಿಯೂ ಕೋಮುಗಲಭೆಗಳಾಗಿಲ್ಲ : ಸಿಎಂ ಸಿದ್ದರಾಮಯ್ಯ

ಬೆಳಗಾವಿ, ಅ.3- ಪ್ರತಿಪಕ್ಷ ಬಿಜೆಪಿಯವರು ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲಿಯೂ ಕೋಮುಗಲಭೆಗಳಾಗಿಲ್ಲ. ಶಿವಮೊಗ್ಗದಲ್ಲಿ ಕಲ್ಲು ತೂರಾಟವಾಗಿರುವ ಪ್ರಕರಣ ವರದಿಯಾಗಿದ್ದು, ತಕ್ಷಣವೇ ಕ್ರಮ ಕೈಗೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ್ಮ ಸರ್ಕಾರದಲ್ಲಿ ಕೋಮುಗಲಭೆಗಳು ನಡೆಯಲು ಅವಕಾಶವಿಲ್ಲ. ಯಾವುದೇ ಗೊಂದಲವಾದರೂ ತಕ್ಷಣ ಹತ್ತಿಕ್ಕುತ್ತೇವೆ ಎಂದು ಹೇಳಿದರು. ಬಿಜೆಪಿಯವರಿಗೆ ಆರೋಪ ಮಾಡುವುದನ್ನು ಬಿಟ್ಟರೆ ಬೇರೆ ಕೆಲಸ ಇಲ್ಲ. ಆದರೆ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ರಾಜ್ಯದಲ್ಲಿ ಎಲ್ಲಿಯೂ ಕೋಮುಗಲಭೆಯಾಗಿಲ್ಲ. ಶಿವಮೊಗ್ಗ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.

ಹಾವು-ಮುಂಗುಸಿಗಳ ಒಗ್ಗೂಡುವಿಕೆಯೇ ಇಂಡಿಯಾ ಮೈತ್ರಿಕೂಟ ; ತೇಜಸ್ವಿ ಸೂರ್ಯ

ಕೋಲಾರ ಸೇರಿದಂತೆ ವಿವಿಧೆಡೆ ಬಿಜೆಪಿಯ ಪ್ರತಿಭಟನೆಗಳು ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶಗಳಿವೆ. ಆದರೆ ಅದಕ್ಕೆ ಸಕಾರಣಗಳಿರಬೇಕು ಎಂದು ಹೇಳಿದರು. ತಮ್ಮ ಸರ್ಕಾರದಲ್ಲಿ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗಿಲ್ಲ, ಅನ್ಯಾಯ ಆಗಲು ಬಿಡುವುದೂ ಇಲ್ಲ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ. ಹಿರಿಯ ನಾಯಕರಾದ ಶ್ಯಾಮನೂರು ಶಿವಶಂಕರಪ್ಪನವರ ಜೊತೆ ತಾವು ಚರ್ಚೆ ಮಾಡುತ್ತೇವೆ ಎಂದರು.

ರಾಜ್ಯದಲ್ಲಿ ಬೇರೆ ಬೇರೆ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ. ಒಕ್ಕಲಿಗರ ಹೋರಾಟ ಸಮಿತಿಯವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು. ಅದನ್ನು ಆಧರಿಸಿ ಡಿ.ಕೆ.ಶಿವಕುಮಾರ್ ತಮಗೆ ಪತ್ರ ಬರೆದಿದ್ದಾರೆ. ಇಂದಷ್ಟೇ ತಾವು ಅದನ್ನು ನೋಡಿದ್ದಾಗಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಕುರುಬ ಸಮುದಾಯದಿಂದ ನಾಯಕರಾದ ರೇವಣ್ಣ, ವಿಶ್ವನಾಥ್ ಸೇರಿದಂತೆ ಅನೇಕರು ಇಂದು ಬೆಳಗಾವಿಯಲ್ಲಿ ಸಮಾವೇಶ ಆಯೋಜಿಸಿದ್ದಾರೆ. ತಮ್ಮನ್ನೂ ಹಾಗೂ ಹರಿಯಾಣದ ರಾಜ್ಯಪಾಲರನ್ನೂ ಸಮಾವೇಶಕ್ಕೆ ಆಹ್ವಾನಿಸಿದ್ದಾರೆ. ಈ ಸಮಾವೇಶಕ್ಕೆ ಪ್ರತಿಯಾಗಿ ಶ್ಯಾಮನೂರು ಶಿವಶಂಕರಪ್ಪ ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬ ಹೇಳಿಕೆ ನೀಡಿದ್ದಾರೆ ಎಂಬ ವಾದ ಸರಿಯಲ್ಲ ಎಂದರು. ಬೆಳಗಾವಿ ಜಿಲ್ಲೆ ವಿಭಜನೆಗೆ ಸಂಬಂಧಪಟ್ಟಂತೆ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸುವುದಾಗಿ ಅವರು ಸ್ಪಷ್ಟಪಡಿಸಿದರು.

ನಿಜ್ಜರ್ ಹತ್ಯೆ ತನಿಖೆಗೆ ಸಹಕರಿಸುವಂತೆ ಭಾರತಕ್ಕೆ ಅಮೆರಿಕ ಮನವಿ