Home Blog Page 1923

ಇರುವುದೊಂದೇ ಧರ್ಮ, ಅದುವೇ ಸನಾತನ ಧರ್ಮ : ಯೋಗಿ ಆದಿತ್ಯನಾಥ್

ಲಕ್ನೊ,ಅ.3- ಇರುವುದೊಂದೇ ಧರ್ಮ, ಅದುವೇ ಸನಾತನ ಧರ್ಮ, ಉಳಿದೆಲ್ಲವೂ ಪಂಥಗಳು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮ ಕುರಿತಂತೆ ನೀಡಿದ ಹೇಳಿಕೆ ದೇಶಾದ್ಯಂತ ವಿವಾದದ ಕಿಡಿ ಸೃಷ್ಟಿಸಿತ್ತು. ಇದೀಗ ಹಿಂದೂ ಫೈರ್‍ಬ್ರಾಂಡ್ ಎಂದೇ ಗುರುತಿಸಿಕೊಂಡಿರುವ ಬುಲ್ಡೋಜರ್ ಖ್ಯಾತಿಯ ಯೋಗಿ ಆದಿತ್ಯನಾಥ್ ಅವರು ಇರುವುದೊಂದೇ ಸನಾತನ ಧರ್ಮ, ಉಳಿದೆಲ್ಲವೂ ಪಂಥಗಳು ಎನ್ನುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.

ಸನಾತನ ಧರ್ಮವು ಮಾನವೀಯತೆಯನ್ನು ಬೋಧಿಸುತ್ತದೆ. ಯಾರನ್ನೂ ಮೇಲು, ಕೀಳು ಎಂದು ನೋಡುವುದಿಲ್ಲ. ಎಲ್ಲರೂ ಸಮಾನರು ಎಂಬುದೇ ಅದರ ತಿರುಳು. ಸನಾತನ ಧರ್ಮದ ಮೇಲೆ ದಾಳಿ ನಡೆಸಿದರೆ ವಿಶ್ವದ ಮಾನವೀಯತೆ ಮೇಲೆ ನಡೆದ ದಾಳಿ ಎಂದು ಅಭಿಪ್ರಾಯಪಟ್ಟರು.

ಧಾರ್ಮಿಕ ಆಚರಣೆಗಳು ಬೇರೆ ಬೇರೆ ಇರಬಹುದು. ನಂಬಿಕೆಯು ವಿಭಿನ್ನವಾಗಿರಬಹುದು. ಸನಾತನ ಧರ್ಮ ಮಾತ್ರ ಎಲ್ಲರೂ ಒಂದೇ ಎಂದು ಬೋಧಿಸುವ ಏಕೈಕ ಧರ್ಮ. ಅದರ ಬಗ್ಗೆ ಲಘುವಾಗಿ ಮಾತನಾಡಬಾರದು ಎಂದು ಮನವಿ ಮಾಡಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಡಿಕೆಶಿ ಗುಡುಗು

ತಮ್ಮ ಸ್ವಕ್ಷೇತ್ರ ಗೋರಖ್ಪುರದಲ್ಲಿ ನಡೆದ ಶ್ರೀಮದ್ ಭಾಗವತಾ ಕಥಾಜ್ಞಾನಯಾಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸನಾತನ ಧರ್ಮದ ಬಗ್ಗೆ ಕೆಲವರು ತಪ್ಪು ವ್ಯಾಖ್ಯಾನಗಳನ್ನು ಕಲ್ಪಿಸಿಕೊಂಡಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸವಿರುವ ಈ ಧರ್ಮದ ಸ್ಥಾಪಕರು ಆಚರಣೆ, ವಿಚಾರಣೆಗಳ ಬಗ್ಗೆ ಅನಾದಿ ಕಾಲದಿಂದಲೂ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಆದರೂ ಈ ಧರ್ಮವನ್ನು ಯಾರೂ ಕೂಡ ಮುಟ್ಟಲು ಸಾಧ್ಯವಾಗಿಲ್ಲ ಎಂದು ಎಚ್ಚಿಸಿದರು.

ಸಂಕುಚಿತ ಮನೋಭಾವದಿಂದ ನೋಡಿದಾಗ ಎಲ್ಲಾ ಧರ್ಮಗಳೂ ನಮಗೆ ಕ್ಷುಲ್ಲಕವಾಗಿಯೇ ಕಾಣಿಸುತ್ತವೆ. ನಾವು ವಿಶಾಲ ಮನೋಭಾವದಿಂದ ನೋಡಿದಾಗ ಮಾತ್ರ ಧರ್ಮದ ಸಾರ ಏನೆಂಬುದು ಅರ್ಥವಾಗುತ್ತದೆ. ಸನಾತನ ಧರ್ಮದ ಬಗ್ಗೆ ಹಲವಾರು ವರ್ಷಗಳಿಂದ ಟೀಕೆ ಟಿಪ್ಪಣಿಗಳು ಬರುತ್ತಲೇ ಇವೆ. ಆದರೂ ಯಾವುದಕ್ಕೂ ಜಗ್ಗದೇ ಈ ಧರ್ಮ ದಿನದಿಂದ ದಿನಕ್ಕೆ ಪ್ರಬಲವಾಗಿ ಬೆಳೆದಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

BIG NEWS : ಹಳಿ ತಪ್ಪಿದ ರೀರೈಲ್, ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು,ಅ.03- ತಾಂತ್ರಿಕ ದೋಷದಿಂದಾಗಿ ನಗರದ ಹಸಿರು ಮಾರ್ಗದ ನಮ್ಮ ಮೆಟ್ರೋ ಸಂಚಾರದಲ್ಲಿ ಇಂದು ಬೆಳಿಗ್ಗೆ ಭಾರೀ ವ್ಯತ್ಯಯವಾಗಿದೆ. ಸುಮಾರು 8 ಗಂಟೆ ಸಂದರ್ಭದಲ್ಲಿ ನಾಗಸಂದ್ರ -ಬಯ್ಯಪ್ಪನಹಳ್ಳಿ ಮಧ್ಯ ಸಂಚರಿಸುತ್ತಿದ್ದ ಮೆಟ್ರೋ ರೈಲು ರಾಜಾಜಿನಗರ ಮೆಟ್ರೋ ನಿಲ್ದಾಣ ಸಮೀಪದ ತಾಂತ್ರಿಕ ದೋಷ ಕಂಡುಬಂದಿದೆ, ಅದನ್ನು ಸರಿಪಡಿಸಲು ಬಂದ ರೀ ರೈಲ್ ವಾಹನವೂ ಹಳಿ ತಪ್ಪಿದೆ.ಹೀಗಾಗಿ ಈ ಮಾರ್ಗದ ರೈಲು ಸೇವೆ ವ್ಯತ್ತಯವಾಗಿ ಪ್ರಯಾಣಿಕರಿಗೆ ಸಮಸ್ಯೆ ಉಂಟು ಮಾಡಿದೆ.

2 ತಿಂಗಳಲ್ಲಿ 4 ಸಾವಿರ ಎಕರೆ ಅರಣ್ಯ ಹೆಚ್ಚಳ : ಸಚಿವ ಈಶ್ವರ್‌ ಖಂಡ್ರೆ

ರೀ ರೈಲ್ ಟ್ರ್ಯಾಕ್ ತಪ್ಪಿದ್ದರಿಂದ ಶ್ರೀರಾಮಂಪುರ, ಕುವೆಂಪ ರಸ್ತೆ ,ರಾಜಾಜಿನಗರ, ಮಹಾಲಕ್ಷ್ಮೀಬಡಾವಣೆ , ಮೈಸೂರ್‍ಸ್ಯಾಂಡಲ್ ಸೋಪ್ ಫ್ಯಾಕ್ಟರಿ ನಿಲ್ದಾಣದ ನಡುವೆ ಮೆಟ್ರೋ ಸೇವೆ ಸಂಚಾರ ನಿಲ್ಲಿಸಲಾಗಿತ್ತು ನಂತರ ನಾಗಸಂದ್ರದಿಂದ ಯಶವಂತಪುರ ಮತ್ತು ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆಯಿಂದ ರೇಷ್ಮೆ ಸಂಸ್ಥೆ ಮೆಟ್ರೊ ನಿಲ್ದಾಣದ ನಡುವೆ ಮಾತ್ರ ರೈಲು ಸೇವೆಗಳಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ.

ರೀ ರೈಲ್ ವಾಹನವನ್ನು ಹಳಿಗೆ ತರಲು ಸಿಬ್ಬಂದಿ ಹರಸಾಹಸ ಪಟ್ಟಿದ್ದು ಇಂದು ಮಧ್ಯಾಹ್ನದವರೆಗೂ ಭಾಗದ ಸೇವೆ ವ್ಯತ್ಯಯವಾಗಿತು. ಹೀಗಾಗಿ ಮೆಟ್ರೋ ಪ್ರಯಾಣಿಕರು ಸಹಕರಿಸುವಂತೆ ಬಿಎಂಆರ್‍ಸಿಎಲ್ ಮನವಿ ಮಾಡಿತ್ತು.ಮೆಟ್ರೋ ನಿಲ್ದಾಣಗಳಲ್ಲಿ ಕೂಡ ಈ ಮಾರ್ಗದ ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತಿತ್ತು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-10-2023)

ನಿತ್ಯ ನೀತಿ : ಅಧಿಕಾರದ ಲಾಲಸೆ ಬಂದಾಗ ಆತ್ಮೀಯರಾಗಲಿ, ಬಂಧು-ಬಳಗದವರಾಗಲಿ ತನಗಿಂತ ಕೀಳೆಂಬ ಭಾವ ಬೇರೂರಲು ತೊಡಗಿಸುತ್ತದೆ.

ಪಂಚಾಂಗ ಮಂಗಳವಾರ 03-10-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಕೃತ್ತಿಕಾ / ಯೋಗ: ವಜ್ರ / ಕರಣ: ಕೌಲವ

ಸೂರ್ಯೋದಯ : ಬೆ.06.09
ಸೂರ್ಯಾಸ್ತ : 06.09
ರಾಹುಕಾಲ : 3.00-4.30
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30

ರಾಶಿ ಭವಿಷ್ಯ
ಮೇಷ
: ವಿರೋಧಿಗಳಿಂದ ತೊಂದರೆಯಾಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.
ವೃಷಭ: ಪೋಷಕರಿಂದ ಆಶೀರ್ವಾದ ಪಡೆದ ನಂತರ ಮನೆಯಿಂದ ಹೊರಬರುವುದು ಒಳಿತು.
ಮಿಥುನ: ಮಹಿಳೆಯರಿಗೆ ಅನುಕೂಲಕರ ದಿನ. ಕುಲದೇವರ ದರ್ಶನ ಮಾಡುವಿರಿ.

ಕಟಕ: ಹಂತ ಹಂತವಾಗಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ.
ಸಿಂಹ: ಹೊಸ ಜನರನ್ನು ಭೇಟಿ ಮಾಡುವುದರಿಂದ ಹಲವಾರು ಪ್ರಯೋಜನವಾಗಲಿವೆ.
ಕನ್ಯಾ: ಗಣ್ಯ ವ್ಯಕ್ತಿಗಳ ಭೇಟಿಯಿಂದ ವ್ಯಾಪಾರ- ವ್ಯವಹಾರಗಳಿಗೆ ಅನುಕೂಲವಾಗಲಿದೆ.

ತುಲಾ: ಮನಸ್ಸಿನಲ್ಲಿ ಗೊಂದಲ ಉಂಟಾಗಲಿದೆ. ದುಶ್ಚಟಗಳಿಂದ ದೂರವಿರಿ.
ವೃಶ್ಚಿಕ: ಯಾವುದೇ ಕಾರ್ಯ ಕೈಗೊಂಡರೂ ಹೆಜ್ಜೆ ಹೆಜ್ಜೆಗೂ ಅಡೆತಡೆ ಎದುರಾಗಲಿದೆ.
ಧನುಸ್ಸು: ಅಣ್ಣ-ತಮ್ಮಂದಿರು ನಿಮ್ಮ ವ್ಯವಹಾರಗಳಿಗೆ ಸಾಕಷ್ಟು ಸಹಾಯ ಮಾಡುವರು.

ಮಕರ: ಹೊಸ ಜವಾಬ್ದಾರಿ ಹೊರುವ ಸಂದರ್ಭಗಳು ಎದುರಾಗಬಹುದು.
ಕುಂಭ: ಮಾತಿನಲ್ಲಿ ಹಿಡಿತವಿರಲಿ. ಅನಗತ್ಯ ವಿಷಯಗಳಿಗೆ ತಲೆ ಹಾಕದಿರಿ.
ಮೀನ: ವ್ಯಾಪಾರದಲ್ಲಿ ಲಾಭವಿದೆ. ಅಪರಿಚಿತ ರೊಂದಿಗೆ ಹೆಚ್ಚು ಸಮಯ ಕಳೆಯದಿರಿ.

2 ತಿಂಗಳಲ್ಲಿ 4 ಸಾವಿರ ಎಕರೆ ಅರಣ್ಯ ಹೆಚ್ಚಳ : ಸಚಿವ ಈಶ್ವರ್‌ ಖಂಡ್ರೆ

ಬೆಂಗಳೂರು,ಅ.2- ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯಾದ್ಯಂತ ನಾಲ್ಕು ಸಾವಿರ ಎಕರೆ ಅರಣ್ಯ ಪ್ರದೇಶವನ್ನು ಹೆಚ್ಚಿಸಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ. 69ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ನಡೆದ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಜಾಗತಿಕವಾಗಿ ಪರಿಸರ ಜೀವವೈವಿಧ್ಯದಲ್ಲಿ ಸಂಕಷ್ಟದ ಪರಿಸ್ಥಿತಿ ಇದೆ. ಜಗತ್ತು ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ ಏರಿಕೆಯಿಂದ ನಾನಾ ವಿಧದ ಸಮಸ್ಯೆಯನ್ನು ಎದುರಿಸುತ್ತಿದೆ. ಇದಕ್ಕೆ ಇರುವ ಏಕೈಕ ಪರಿಹಾರವೆಂದರೆ ಹಸಿರು ಹೊದಿಕೆಯನ್ನು ಹೆಚ್ಚಿಸುವುದಾಗಿದೆ ಎಂದರು.

ತಾವು ಅರಣ್ಯ ಸಚಿವರಾದ ಬಳಿಕ 5 ಕೋಟಿ ಸಸಿ ನೆಟ್ಟು ಪೋಷಿಸುವ ಸಂಕಲ್ಪ ಮಾಡಿದ್ದು, ಈವರೆಗೆ 4.75 ಲಕ್ಷ ಸಸಿ ನೆಡಲಾಗಿದೆ. ಇದರಲ್ಲಿ ಎಷ್ಟು ಬದುಕಿ ಉಳಿಯುತ್ತದೆ ಎಂದು ತಿಳಿಯಲು ಜಿಯೋ ಟ್ಯಾಗ್ ಮಾಡಲಾಗಿದೆ ಮತ್ತು ಮೂರನೇ ವ್ಯಕ್ತಿ (ಥರ್ಡ್ ಪಾರ್ಟಿ) ಆಡಿಟ್ ಮಾಡಿಸಲಾಗುತ್ತಿದೆ ಎಂದು ಹೇಳಿದರು.

ಇದರ ಜೊತೆಗೆ ರಾಜ್ಯದ 5 ನಗರಗಳನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಮಾಡಲು ಸಂಕಲ್ಪ ಮಾಡಿದ್ದು, ಮೈಸೂರು, ಬೀದರ್, ಗುಲ್ಬರ್ಗಾ, ಧರ್ಮಸ್ಥಳ ಮತ್ತು ತುಮಕೂರು ನಗರವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಎಂದು ಘೋಷಿಸಲಾಗಿದೆ. ಪ್ರಜ್ಞಾವಂತರಾದ ನೀವೆಲ್ಲರೂ ಪ್ಲಾಸ್ಟಿಕ್ ಅದರಲ್ಲೂ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.

ರಾಜ್ಯಾದ್ಯಂತ ಒತ್ತುವಾರಿಯಾಗಿದ್ದ 2 ಸಾವಿರ ಎಕರೆ ಅರಣ್ಯ ಭೂಮಿಯ ಒತ್ತುವರಿಯನ್ನು ತೆರವು ಮಾಡಲಾಗಿದೆ. ಜೊತೆಗೆ 4 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು ಅರಣ್ಯ ಎಂದು ಘೋಷಿಸಲಾಗಿದೆ ಎಂದು ಹೇಳಿದರು.

ಭೂಮಿ ಸಾಫ್ಟ್ ವೇರ್ ಮಾದರಿಯಲ್ಲಿ ಗ್ರಾ.ಪಂಗಳ ಅಸ್ತಿ ಸಂರಕ್ಷಣೆಗೆ ಕ್ರಮ : ಡಿಸಿಎಂ

ಇಷ್ಟು ದಿನ ರಾಸಾಯನಿಕ ಬಣ್ಣ ಲೇಪಿತ ಪಿಓಪಿ ಗಣಪತಿ ಮೂರ್ತಿಗಳನ್ನು ವಿಸರ್ಜಿಸಿ ಜಲ ಮೂಲ ನಾಶ ಮಾಡದಂತೆ ಸುತ್ತೋಲೆ ಹೊರಡಿಸಿ ಮನವಿ ಮಾಡಲಾಗುತ್ತಿತ್ತು. ಈಗ ಈ ಸಂಬಂಧ ಸರ್ಕಾರಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

ಅರಣ್ಯ ವ್ಯಾಪ್ತಿ ಕ್ಷೀಣಿಸಿದರೆ, ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಇತ್ತೀಚೆಗೆ ಹಲವಾರು ಆನೆಗಳ ದಾಳಿಯಿಂದ ಮೃತಪಟ್ಟಿದ್ದಾರೆ. ಹೀಗಾಗಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗುತ್ತಿದೆ. ರಾಜ್ಯದಲ್ಲಿ 312 ಕಿ.ಮೀಟರ್ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದ್ದು, ಇನ್ನೂ 300 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸಿದರೆ ಆನೆ ನಾಡಿಗೆ ಬಾರದಂತೆ ತಡೆಯಬಹುದು ಎಂದರು.

ವನ್ಯಜೀವಿಯಾಗಿರಲಿ, ಕೀಟವೇ ಆಗಿರಲಿ, ಪಕ್ಷಿಯೇ ಆಗಿರಲಿ ಅಥವಾ ಸಸ್ಯ ಸಂಕುಲವೇ ಆಗಿರಲಿ ಎಲ್ಲ ಜೀವಿ, ಸಸ್ಯಗಳಿಗೂ ಬದುಕುವ ಹಕ್ಕಿದೆ. ಆದರೆ ಇಂದು ಹಲವು ವನ್ಯ ಜೀವಿಗಳು ಅಳಿವಿನ ಅಂಚಿನಲ್ಲಿವೆ. ಕೆಲವು ನಶಿಸಿಹೋಗಿವೆ. ಹೀಗಾಗಿ ಜನರಲ್ಲಿ ಅರಣ್ಯದ ಬಗ್ಗೆ ವನ್ಯ ಜೀವಿಗಳ ಬಗ್ಗೆ ಜಾಗೃತಿ ಮೂಡಿಸಲು ವನ್ಯಜೀವಿ ಸಪ್ತಾಹ ವನ್ನು ಆಚರಿಸಲಾಗುತ್ತದೆ ಎಂದರು.

ಗೃಹ ಸಚಿವ ಪರಮೇಶ್ವರ್ ವಿರುದ್ಧ ಈಶ್ವರಪ್ಪ ಹಿಗ್ಗಾಮುಗ್ಗಾ ವಾಗ್ದಾಳಿ

ವನ್ಯಜೀವಿ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಅರಣ್ಯ ಇಲಾಖೆ ಉತ್ತಮ ಕಾರ್ಯ ಮಾಡುತ್ತಿದೆ. ಶಾಲಾ ಮಕ್ಕಳಿಗೆ ಬಾಲ್ಯದಿಂದಲೇ ಅರಣ್ಯದ ಬಗ್ಗೆ ಅರಿವು ಮೂಡಿಸಿದರೆ ಅವರು ದೊಡ್ಡವರಾದ ಬಳಿಕವೂ ಪ್ರಕೃತಿ, ಪರಿಸರ ಕಾಪಾಡುತ್ತಾರೆ. ಅದಕ್ಕೆ ಕೇವಲ ಪಠ್ಯದಲ್ಲಿ ವಿಷಯ ಇದ್ದರೆ ಸಾಲದು, ಅವರಿಗೆ ಸಾಕ್ಷಾತ್ ಅರಣ್ಯ ದರ್ಶನ ಮಾಡಿಸಿದಾಗ ಹೆಚ್ಚಿನ ಅರಿವು ಮೂಡುತ್ತದೆ. ಅದಕ್ಕಾಗಿಯೇ ನಮ್ಮ ಇಲಾಖೆ ಚಿಣ್ಣರ ವನ ದರ್ಶನ ಎಂಬ ಕಾರ್ಯಕ್ರಮವನ್ನೇ ಹಮ್ಮಿಕೊಂಡಿದೆ ಎಂದರು.

ಈ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳಿಗೆ ಉಪಯುಕ್ತವಾದ ಪರಿಸರ, ಅರಣ್ಯ, ವನ್ಯಜೀವಿಗಳ ಪುಸ್ತಕ ನೀಡಲಾಗುತ್ತದೆ. ಅರಣ್ಯಪ್ರದೇಶಕ್ಕೆ ಕರೆದುಕೊಂಡು ಹೋಗಿ ತೋರಿಸಲಾಗುತ್ತದೆ. ಈ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಡಿಕೆಶಿ ಗುಡುಗು

ಬೆಂಗಳೂರು, ಅ.2- ನಾಯಕ ರಾಗಲು ತಮ್ಮ ವೈಯಕ್ತಿಕ ಲಾಭಗಳಿಗೆ ಎಲ್ಲಿ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳುವುದಾದರೆ ಅವರನ್ನು ನಂಬಿದ್ದ ಕಾರ್ಯಕರ್ತರು, ಮುಖಂಡರ ಗತಿ ಏನು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ಪಕ್ಷದ ಕಚೇರಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಚನ್ನಪಟ್ಟಣದ ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ ಹಾಗೂ ಮತ್ತಿತರರು ಕಾಂಗ್ರೆಸ್ ಸೇರ್ಪಡೆ ವೇಳೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

5 ವರ್ಷದಲ್ಲಿ ರಾಜ್ಯದ ಸಮಸ್ಯೆಯನ್ನು ಬಗೆಹರಿಸದಿದ್ದರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ, ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ದಂಡನಾಯಕರು ಈ ರೀತಿ ಹೇಳಿದರೆ ಪಕ್ಷ, ಅದರ ಮುಖಂಡರು, ಕಾರ್ಯಕರ್ತರ ಗತಿ ಏನಾಗಬೇಕು, ಯಾರನ್ನು ನಂಬಿಕೊಂಡು ರಾಜಕಾರಣ ಮಾಡಬೇಕು ಎಂದು ಪ್ರಶ್ನಿಸಿದರು.

ತಮ್ಮ ಅನುಕೂಲಕ್ಕಾಗಿ ಒಂದೇ ದಿನದಲ್ಲಿ ಯಾರ ಜೊತೆ ಬೇಕಾದರೂ ಮೈತ್ರಿ ಮಾಡಿಕೊಳ್ಳಬಹುದು. ಸಿದ್ಧಾಂತ ನಂಬಿಕೊಂಡು ರಾಜಕಾರಣ ಮಾಡುವವರು ಏನಾಗಬೇಕು, ಕಾಂಗ್ರೆಸ್ ಪಕ್ಷದಲ್ಲಿ ವಿಧಾನಪರಿಷತ್ ಸದಸ್ಯರಾಗಿದ್ದ ಸಿ.ಎಂ.ಇಬ್ರಾಹಿಂ ರಾಜಿನಾಮೆ ಕೊಟ್ಟು ಜೆಡಿಎಸ್ ಸೇರಿದ್ದರು. ನೀವು ಈ ಮೊದಲು ಅವರಿಗೆ ಕೊಟ್ಟ ಮಾತು ಏನಾಯಿತು. ಮೈತ್ರಿ ವಿಷಯ ಇಬ್ರಾಹಿಂಗೆ ಮಾಹಿತಿ ಇಲ್ಲವಂತೆ ಎಂದು ಲೇವಡಿ ಮಾಡಿದರು.

ಇಬ್ರಾಹಿಂ ಸೇರ್ಪಡೆಯಾಗುವಾಗ ಮಿಸ್ಟರ್ ಶಿವಕುಮಾರ್ ಎಂದು ನನ್ನನ್ನು ಹಂಗಿಸಿದರು. ನಾನು ಪಕ್ಷದ ಅಧ್ಯಕ್ಷನಾಗಿದ್ದಾಗ ನಮ್ಮ ಪಕ್ಷದ ನಾಯಕನನ್ನು ಸೇರ್ಪಡೆ ಮಾಡಿಸಿಕೊಂಡಿದ್ದು ರಾಜಕೀಯ ಚದುರಂಗದಾಟವಲ್ಲವೆ, ಹಾವು- ಏಣಿ ಆಟ ಅಲ್ಲವೇ, ಫುಟ್ಬಾಲ್ ಆಟ ಅಲ್ಲವೇ, ಈಗ ಜೆಡಿಎಸ್ ನಲ್ಲಿರುವವರು ಸಾಗರೋಪಾದಿ ಯಲ್ಲಿ ಕಾಂಗ್ರೆಸ್‍ನತ್ತ ಬರುತ್ತಿದ್ದಾರೆ. ನಾವು ಯಾರನ್ನೂ ಕರೆಯಬೇಕಿಲ್ಲ. ಬರುವವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಬೀದರ್‍ನಿಂದ ಚಾಮರಾಜನಗರದವರೆಗೂ ಎಲ್ಲಾ ಜಿಲ್ಲೆಗಳಲ್ಲಿ ಸಾವಿರಾರು ಮಂದಿ ಕಾಂಗ್ರೆಸ್ ಸೇರುತ್ತಿದ್ದಾರೆ. ನಮ್ಮ ಪಕ್ಷ ಸಿದ್ಧಾಂತದ ಮೇಲೆ ನಿಂತಿದೆಯೇ ಹೊರತು ವ್ಯಕ್ತಿಯ ಮೇಲೆ ನಿಂತಿಲ್ಲ. ನಾನಿಲ್ಲದೇ ಹೋದರೂ ಪಕ್ಷ ನಿಮ್ಮನ್ನು ರಕ್ಷಣೆ ಮಾಡಲಿದೆ ಎಂದು ತಿಳಿಸಿದರು.

ಶಿವಮೊಗ್ಗ ಗಲಾಟೆಗೆ ಸಂಬಂಧಿಸಿದಂತೆ 43 ಮಂದಿ ಬಂಧನ : ಸಿಎಂ

ಮುಂದಿನ ದಿನಗಳಲ್ಲಿ ಚನ್ನಪಟ್ಟಣದಲ್ಲಿ ಬೃಹತ್ ಕಾರ್ಯಕ್ರಮ ಮಾಡಿ ಇನ್ನಷ್ಟು ಕಾರ್ಯಕರ್ತರು ಹಾಗೂ ಮುಖಂಡರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳಲಾಗುವುದು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಿಸ್ಟರ್ ಶಿವಕುಮಾರ್ ನಿಮ್ಮ ಆಟ ನಡೆಯುವುದಿಲ್ಲ ಎಂದು ನನಗೆ ಎಚ್ಚರಿಕೆ ನೀಡಿದ್ದಾರೆ. ಹಿರಿಯರ ಮಾತುಗಳನ್ನು ಆಶೀರ್ವಾದ ಎಂದು ಭಾವಿಸುತ್ತೇನೆ. ಆದರೆ ದೇವೇಗೌಡರ ಪುತ್ರರು ಜನತಾದಳವನ್ನು ವಿಸರ್ಜನೆ ಮಾಡುತ್ತೇನೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಹಾಗಾದರೆ ಕಾರ್ಯಕರ್ತರು ಎಲ್ಲಿ ಹೋಗಬೇಕು, ಬಿಜೆಪಿ ಜೊತೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಈ ಮೊದಲು ಹೇಳಿದ್ದವರು ಈಗ ಮಾಡಿದ್ದೇನು, ರಾಜ್ಯದ ಜನರಿಗೆ ನಿಮ್ಮಿಂದ ಯಾವ ಸಂದೇಶ ರವಾನೆಯಾಗಿದೆ ಎಂದು ಪ್ರಶ್ನಿಸಿದರು.

ಪ್ರತಿಯೊಂದು ಮನೆಯಿಂದಲೂ ಒಬ್ಬೊಬ್ಬ ಕಾರ್ಯಕರ್ತರನ್ನು ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ. ಆ ಕೆಲಸವನ್ನು ನಮ್ರತೆಯಿಂದ ಮಾಡುತ್ತೇನೆ. ಕುಮಾರಸ್ವಾಮಿಯವರನ್ನು ಬೆಳೆಸಿದ ಜನರೇ ಇಂದು ಆ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಎಷ್ಟೇ ಬೆದರಿಸಿ, ಹೆದರಿಸಿದರೂ, ಬುಲೆಟ್‍ನ ಮಾತುಗಳನ್ನಾಡಿದರು. ಅದನ್ನು ಮೀರಿ ಕಾಂಗ್ರೆಸ್ ಸೇರಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಸೇರ್ಪಡೆಯಾದ ಜೆಡಿಎಸ್ ನಾಯಕರು ಕ್ಷೇತ್ರಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ ಅನ್ನು ಸಂಘಟಿಸಬೇಕು ಎಂದು ಸಲಹೆ ನೀಡಿದರು. ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬಿಜೆಪಿ, ಜೆಡಿಎಸ್ ಪಕ್ಷಗಳ ಸಿದ್ಧಾಂತಗಳೇ ಬೇರೆ. ಅದನ್ನು ಮರೆತು ಮೈತ್ರಿ ಮಾಡಿಕೊಂಡಿದ್ದಾರೆ. ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಎರಡು ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಪಾಠ ಕಲಿಯಲಿವೆ ಎಂದು ಎಚ್ಚರಿಸಿದರು.

ಸಚಿವ ಜಮೀರ್ ಅಹಮ್ಮದ್ ಖಾನ್, ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಯವರು 60-70 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿಲ್ಲ. ಕೇವಲ 12 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರ ಗೆಲುವಿಗೆ ಮುಸಲ್ಮಾನರ ಮತಗಳೇ ಕಾರಣ. ಈಗ ಮುಸಲ್ಮಾನರು ನನಗೆ ಅನಿವಾರ್ಯವಾಗಿ ಮತ ನೀಡಿದ್ದಾರೆ ಎಂಬ ಹೇಳಿಕೆಗಳು ತೀವ್ರ ನೋವುಂಟು ಮಾಡಿವೆ ಎಂದರು.

ಶಿವಮೊಗ್ಗದಲ್ಲಿ ಪೊಲೀಸರ ಕ್ರಮದಿಂದ ದೊಡ್ಡ ಅನಾಹುತ ತಪ್ಪಿದೆ : ಗೃಹಸಚಿವ ಪರಮೇಶ್ವರ್

ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ರಾಜ್ಯಾದ್ಯಂತ 50 ರಿಂದ 70 ಜನ ಪಾಲಿಕೆ ಸದಸ್ಯರು, ಮಾಜಿ ಶಾಸಕರು, ಪ್ರಮುಖ ನಾಯಕರು, ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ದೇವೇಗೌಡರು ಜಾತ್ಯತೀತರು ಎಂದು ಈಗಲೂ ನಾನು ನಂಬುತ್ತೇನೆ. ಆದರೆ ಕುಮಾರಸ್ವಾಮಿ ಪ್ಯಾಂಟ್ ಒಳಗೆ ಖಾಕಿ ಚಡ್ಡಿ ಹಾಕಿಕೊಂಡು ರಾಜಕಾರಣ ಮಾಡಿದವರು. ಈಗ ತಮ್ಮ ಅಸಲಿ ಬಣ್ಣ ಬಯಲು ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಅಶ್ವತ್ಥ ನಾರಾಯಣ ಮಾತನಾಡಿ, ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದಾಗಿ ಬೇಸರವಾಗಿ ಹಾಗೂ ಸಂಸದ ಡಿ.ಕೆ.ಶಿವಕುಮಾರ್ ಅವರ ಕಾರ್ಯವೈಖರಿ ಮೆಚ್ಚಿ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದರು.

ಅಲ್ಪಸಂಖ್ಯಾತ ಮುಖಂಡ ಜಬಿವುಲ್ಲಾಖಾನ್ ಅವರು ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರನ್ನು ಸೋಲಿಸಬೇಕೆಂದು ಕಾಂಗ್ರೆಸ್‍ನವರ ಕೈ, ಕಾಲನ್ನು ಹಿಡಿದು ಕುಮಾರಸ್ವಾಮಿಯವರಿಗೆ ಮತ ಹಾಕಿಸಿದ್ದೆವು. ಈಗ ಅಲ್ಪಸಂಖ್ಯಾತರ ಕುರಿತು ಹಗುರವಾಗಿ ಮಾತನಾಡುತ್ತಿರುವುದನ್ನು ಕೇಳಿದರೆ ಮನಸ್ಸಿಗೆ ನೋವಾಗುತ್ತಿದೆ ಎಂದು ಹೇಳಿದರು.

ವೈದ್ಯಕೀಯ ನಿಯಮ ಉಲ್ಲಂಘಿಸಿದರೆ 1 ಕೋಟಿ ರೂ. ದಂಡ

ನವದೆಹಲಿ,ಅ.2- ರಾಷ್ಟ್ರೀಯ ವೈದ್ಯಕೀಯ ನಿಯಂತ್ರಕ ಆಯೋಗದ ನಿಯಮಾವಳಿಗಳನ್ನು ಅನುಸರಿಸಲು ವಿಫಲವಾದ ವೈದ್ಯಕೀಯ ಕಾಲೇಜುಗಳಿಗೆ 1 ಕೋಟಿ ರೂ.ಗಳವರೆಗೆ ದಂಡ ವಿಧಿಸುವ ಸಾಧ್ಯತೆಗಳಿವೆ. ವೈದ್ಯಕೀಯ ಶಿಕ್ಷಣದಲ್ಲಿ ಉನ್ನತ ಗುಣಮಟ್ಟವನ್ನು ಕುರಿತು ಮಾತನಾಡುವ ವೈದ್ಯಕೀಯ ಶಿಕ್ಷಣ ನಿಯಮಗಳ ಗುಣಮಟ್ಟ ನಿರ್ವಹಣೆ 2023 ಶೀರ್ಷಿಕೆಯ ಅಧಿಸೂಚನೆ ಹೊರಡಿಸಲಾಗುತ್ತಿದೆ.

ಈ ಅಧಿಸೂಚನೆಯಲ್ಲಿ ಹೇಳಿರುವಂತೆ, ವೈದ್ಯಕೀಯ ಸಂಸ್ಥೆಗಳು ಅನುಗುಣವಾದ ಮಂಡಳಿಗೆ ವಾರ್ಷಿಕ ಬಹಿರಂಗಪಡಿಸುವಿಕೆಯ ವರದಿಯನ್ನು ನೀಡಲು ಬದ್ಧವಾಗಿರುತ್ತವೆ, ಇದು ಕಾಲೇಜುಗಳು ಮಾನದಂಡಗಳನ್ನು ಅನುಸರಿಸುತ್ತಿದೆಯೇ ಎಂದು ನಿರ್ಣಯಿಸಲು ಅಗತ್ಯವೆನಿಸಿದಾಗ ಹೆಚ್ಚುವರಿ ಮಾಹಿತಿಯನ್ನು ಪಡೆಯಬಹುದು. ಮಾಹಿತಿಯನ್ನು ಒದಗಿಸುವುದು ವೈದ್ಯಕೀಯ ಕಾಲೇಜಿನ ಕರ್ತವ್ಯವಾಗಿದೆ ಎಂದು ಎನ್‍ಎಂಸಿ ಹೇಳಿದೆ.

ಇದು ಉಲ್ಲೇಖಿಸಲಾದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸದಿದ್ದರೆ, ಮಂಡಳಿಯು ವೈದ್ಯಕೀಯ ಕಾಲೇಜು ಅಥವಾ ವೈದ್ಯಕೀಯ ಸಂಸ್ಥೆಗೆ ದಂಡ ವಿಧಿಸುತ್ತದೆ ಮತ್ತು/ಅಥವಾ ಅಂತಹ ಕಾಯ್ದೆಯ ಕುರಿತು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತದೆ ಎಂದು ಅಧಿಸೂಚನೆಯಲ್ಲಿ ಓದಲಾಗಿದೆ.

ಶಿವಮೊಗ್ಗದಲ್ಲಿ ಪೊಲೀಸರ ಕ್ರಮದಿಂದ ದೊಡ್ಡ ಅನಾಹುತ ತಪ್ಪಿದೆ : ಗೃಹಸಚಿವ ಪರಮೇಶ್ವರ್

ಡಾಕ್ಯುಮೆಂಟ್‍ನಲ್ಲಿ ನಿರ್ದಿಷ್ಟಪಡಿಸಿದ ದಂಡದ ಮೊತ್ತವು . 1 ಕೋಟಿ ರೂ.ಗಳವರೆಗೆ ಇರುತ್ತದೆ. ಇದರ ಹೊರತಾಗಿ, ಸುಳ್ಳು ಘೋಷಣೆ/ದಾಖಲೆಗಳು/ದಾಖಲೆಗಳನ್ನು (ರೋಗಿಗಳ ದಾಖಲೆಗಳನ್ನು ಒಳಗೊಂಡಂತೆ) ಸಲ್ಲಿಸಲು ಅಧ್ಯಾಪಕರು/ವಿಭಾಗದ ಮುಖ್ಯಸ್ಥರು (ಏಟಈ)/ ಡೀನï/ನಿರ್ದೇಶಕರು/ವೈದ್ಯರಿಗೆ 5 ಲಕ್ಷ ದಂಡ ವಿಧಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ವೈದ್ಯಕೀಯ ಸಂಸ್ಥೆಗಳಿಗೆ ತಮ್ಮ ನ್ಯೂನತೆಗಳನ್ನು ಸರಿಪಡಿಸಲು ಸಮಂಜಸವಾದ ಅವಕಾಶ ನೀಡಿದ ನಂತರ ಕ್ರಮವನ್ನು ಪ್ರಾರಂಭಿಸಲಾಗುವುದು.

ಉಲ್ಲಂಘನೆಗಳು ವೈದ್ಯಕೀಯ ಕಾಲೇಜುಗಳ ಮಾನ್ಯತೆಯನ್ನು ತಡೆಹಿಡಿಯುವುದು, ಐದು ವರ್ಷಗಳವರೆಗೆ ಮಾನ್ಯತೆಯನ್ನು ಹಿಂಪಡೆಯುವುದು ಮತ್ತು ಒಂದು ಅಥವಾ ಹೆಚ್ಚಿನ ಕೋರ್ಸ್‍ಗಳಿಗೆ ಪ್ರವೇಶವನ್ನು ಸ್ಥಗಿತಗೊಳಿಸುವಂತಹ ಕಠಿಣ ಕ್ರಮಗಳಿಗೆ ಕಾರಣವಾಗುತ್ತದೆ. ಅಂತಹ ಕಾಲೇಜುಗಳು ಸುಳ್ಳು ಮಾಹಿತಿ ಅಥವಾ ದಾಖಲೆಗಳನ್ನು ಒದಗಿಸುವುದಕ್ಕಾಗಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಬೇಕಾಗುತ್ತದೆ.

ಕೇವಲ 14 ನಿಮಿಷದಲ್ಲೇ ಸ್ವಚ್ಛವಾಗುತ್ತೆ ವಂದೇ ಭಾರತ್ ರೈಲು

ವರದಿಗಳ ಪ್ರಕಾರ, ಎನ್‍ಎಂಸಿ ಇಂತಹ ಕಠಿಣ ವಿತ್ತೀಯ ದಂಡವನ್ನು ಪರಿಚಯಿಸಿರುವುದು ಇದೇ ಮೊದಲು. ಹಲವಾರು ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳು ಅಧ್ಯಾಪಕರ ಕೊರತೆಯನ್ನು ಎದುರಿಸುತ್ತಿರುವ ಕಾರಣ ನಿಯಮಗಳ ಉತ್ತಮ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮವು ಉದ್ದೇಶಿಸಿದೆ. ಕಳೆದ ಕೆಲವು ವರ್ಷಗಳಿಂದ ಸ್ಥಾಪಿಸಲಾದ ಕೆಲವು ಸರ್ಕಾರಿ ಕಾಲೇಜುಗಳು ಈ ಮಾನದಂಡಗಳನ್ನು ಅನುಸರಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ವರದಿಗಳು ಬಂದಿವೆ.

ಗೃಹ ಸಚಿವ ಪರಮೇಶ್ವರ್ ವಿರುದ್ಧ ಈಶ್ವರಪ್ಪ ಹಿಗ್ಗಾಮುಗ್ಗಾ ವಾಗ್ದಾಳಿ

ಶಿವಮೊಗ್ಗ,ಅ.2- ಕೋಮು ಗಲಭೆ ಉಂಟಾದಾಗ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುವುದು ಸಹಜ ಎಂದಿರುವ ಸಚಿವ ಡಾ.ಜಿ.ಪರಮೇಶ್ವರ್ ಗೃಹಸಚಿವರಾಗಿ ಮುಂದುವರೆಯಲು ಅಸಮರ್ಥರು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಸಚಿವರಾಗಿ ಈ ರೀತಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಕೋಮುಗಲಭೆ ಉಂಟಾದಾಗ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುವುದು ಸಾಮಾನ್ಯ ಎಂದರೆ ಇವರು ಅಧಿಕಾರದಲ್ಲಿ ಮುಂದುವರೆ ಯಬಾರದು. ಕೂಡಲೇ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯ ಮಾಡಿದರು.

ಅಮಾಯಕರ ಮನೆಗಳ ಮೇಲೆ ಕೆಲ ಗೂಂಡಾಗಳು ಹಲ್ಲೆ ನಡೆಸಿ ಕಲ್ಲು ತೂರಾಟ ನಡೆಸಿದ್ದಾರೆ. ಅನೇಕ ಕಡೆ ಮನೆಗಳಿಗೆ ನುಗ್ಗಿ ಬಾಟಲಿಗಳಿಂದ ಹೊಡೆದಿದ್ದಾರೆ ಇವರನ್ನು ಅಮಾಯಕರು ಎನ್ನಬೇಕೇ ಇಲ್ಲವೇ ಗೂಂಡಾಗಳೆಂದು ಕರೆಯಬೇಕೆ ಎಂದು ಪ್ರಶ್ನೆ ಮಾಡಿದರು.

ಶಿವಮೊಗ್ಗದಲ್ಲಿ ಪೊಲೀಸರ ಕ್ರಮದಿಂದ ದೊಡ್ಡ ಅನಾಹುತ ತಪ್ಪಿದೆ : ಗೃಹಸಚಿವ ಪರಮೇಶ್ವರ್

ಮೆರವಣಿಗೆ ಸಂದರ್ಭದಲ್ಲಿ ಯಾವ ಕಾರಣಕ್ಕಾಗಿ ತಲ್ವಾರ್ ಹಿಡಿದುಕೊಂಡು ಬಂದಿದ್ದರು? ನೀವು ಶಾಂತಿಧೂತರಾಗಿದ್ದರೆ ಗಲಭೆ ಸೃಷ್ಟಿ ಮಾಡುವ ಅಗತ್ಯವಿತ್ತೇ? ನೀವು ತಲ್ವಾರ್ ಕೈಯಲ್ಲಿಡಿದರೆ ಅದಕ್ಕೆ ಉತ್ತರ ಕೊಡುವುದು ನಮಗೂ ಗೊತ್ತು ಎಂದು ಈಶ್ವರಪ್ಪ ಎಚ್ಚರಿಸಿದರು.

ಇದನ್ನು ಒಂದು ರ್ನಿಧಿಷ್ಟ ಸಮುದಾಯ ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹೊಡೆದಿರುವ ಉದ್ದೇಶವಾದರೂ ಏನು? ಈಗ ಒಂದೇ ಸಮುದಾಯದವರು ಮಾಡಿಲ್ಲ ಎಂದು ಕೆಲವರು ತಿಪ್ಪೆ ಸವರುವ ಕೆಲಸ ಮಾಡುತ್ತಿದ್ದಾರೆ. ಹಿಂದೂಗಳು ಸಿಡಿದೆದ್ದರೆ ಯಾರೂ ಉಳಿಯುವುದಿಲ್ಲ ಎಂದು ಈಶ್ವರಪ್ಪ ಎಚ್ಚರಿಕೆ ಕೊಟ್ಟರು.

ಶಾಸಕ ಚನ್ನಬಸಪ್ಪ ಮಾತನಾಡಿ, ಹಿಂದೂ ಮಹಾಸಭಾದ ವತಿಯಿಂದ ಹಮ್ಮಿಕೊಂಡಿದ್ದ ಗಣಪತಿ ವಿಸರ್ಜನೆ ವೇಳೆ ಲಕ್ಷಾಂತರ ಭಕ್ತರು ಸೇರಿದ್ದರು. ಒಂದೇ ಒಂದು ಸಣ್ಣ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ನಾವು ಕಾರ್ಯಕ್ರಮ ನಡೆಸಿಕೊಟ್ಟೆವು. ಭಾನುವಾರ ನಡೆದ ಕೃತ್ಯ ಪೂರ್ವ ನಿಯೋಜಿತ ಎಂದು ದೂರಿದರು.

ಶಾಂತಿಪ್ರಿಯ ಶಿವಮೊಗ್ಗದಲ್ಲಿ ಗಲಭೆ ಸೃಷ್ಟಿಸುವ ಏಕೈಕ ಉದ್ದೇಶದಿಂದ ಈ ಕೃತ್ಯ ನಡೆಸಲಾಗಿದೆ. ಘಟನೆಯಲ್ಲಿ ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ಸ್ಥಳೀಯರು ಅಥವಾ ಹೊರಗಿನಿಂದ ಬಂದವರು ಈ ಕೃತ್ಯ ನಡೆಸಿದ್ದಾರೆ. ಈದ್ ಮಿಲಾದ್ ಆಚರಣೆ ಮಾಡುವವರಿಗೆ ಔರಂಗಜೇಬ್ ಕಟೌಟ್ ಹಾಕುವ ಉದ್ದೇಶವಾದರೂ ಏನು? ಅದಕ್ಕೂ ಇದಕ್ಕೂ ಏನು ಸಂಬಂಧ ಎಂದು ಪ್ರಶ್ನೆ ಮಾಡಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ವಿಫಲ : ಬೊಮ್ಮಾಯಿ

ಬಹುತೇಕ ಕಡೆ ಅಮಾಯಕ ಹಿಂದೂ ಮನೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಲಾಗಿದೆ. ಹಾನಿಗೊಳಗಾಗಿರುವ ಮನೆಗಳು ಬಡವರಿಗೆ ಸೇರಿದ್ದಾಗಿವೆ, ಗಾಯಗೊಂಡವರೂ ಸಹ ಆರ್ಥಿಕವಾಗಿ ಹಿಂದುಳಿದವರು. ಅವರಿಗೆ ರಕ್ಷಣೆ ಕೊಡುವವರು ಯಾರು ಎಂದು ಚನ್ನಬಸಪ್ಪ ಪ್ರಶ್ನೆ ಮಾಡಿದರು.

ಮೇಲ್ನೋಟಕ್ಕೆ ಶಿವಮೊಗ್ಗದಲ್ಲಿ ನಡೆದಿರುವುದು ಪೂರ್ವ ನಿಯೋಜಿತ ಕೃತ್ಯ. ಬಿಳಿ ಓಮ್ನಿ ಕಾರಿನಲ್ಲಿ ಬಂದ ಕೆಲವರು ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡೆ ಮೆರವಣಿಗೆ ಬಂದಿದ್ದರು. ಸರ್ಕಾರ ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಭೂಮಿ ಸಾಫ್ಟ್ ವೇರ್ ಮಾದರಿಯಲ್ಲಿ ಗ್ರಾ.ಪಂಗಳ ಅಸ್ತಿ ಸಂರಕ್ಷಣೆಗೆ ಕ್ರಮ : ಡಿಸಿಎಂ

ಬೆಂಗಳೂರು,ಅ.2- ಭೂಮಿ ಸಾಫ್ಟ್‍ವೇರ್ ಮಾದರಿಯಲ್ಲಿ ಗ್ರಾಮಪಂಚಾಯಿತಿಗಳು ಸ್ಥಿರಾಸ್ತಿಗಳ ದಾಖಲಾತಿಗಳನ್ನು ಸಂರಕ್ಷಿಸಿ ದುರುಪಯೋಗವನ್ನು ತಡೆಗಟ್ಟಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಗಾಂಧಿ ಗ್ರಾಮ ಪುರಸ್ಕಾರ ಮತ್ತು ಸ್ವಚ್ಛ ಸರ್ವೇಕ್ಷಣ ರಾಜ್ಯಮಟ್ಟದ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲೂ ನಮ್ಮ ಸ್ವತ್ತು ಎಂಬ ವ್ಯವಸ್ಥೆಯ ಮೂಲಕ ಆಸ್ತಿ ದಾಖಲಾತಿಗಳ ದುರುಪಯೋಗವನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಗ್ರಾಮ ಪಂಚಾಯಿತಿಗಳು ಸ್ವಾವಲಂಬಿ ಆರ್ಥಿಕತೆಯನ್ನು ರೂಢಿಸಿಕೊಳ್ಳಬೇಕು. ತೆರಿಗೆಯನ್ನು ಹೆಚ್ಚು ವಸೂಲಿ ಮಾಡಬೇಕು. ಗ್ರಾಮ ಪಂಚಾಯಿತಿ ಸದಸ್ಯರು, ಗುತ್ತಿಗೆದಾರರು ಹಾಗೂ ಕಮಿಷನ್‍ಗೆ ಆದ್ಯತೆ ನೀಡದೆ, ಉತ್ತಮ ಕೆಲಸ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಶಿವಮೊಗ್ಗ ಗಲಾಟೆಗೆ ಸಂಬಂಧಿಸಿದಂತೆ 43 ಮಂದಿ ಬಂಧನ : ಸಿಎಂ

ನರೇಗಾ ಯೋಜನೆ ಮೂಲಕ ಗ್ರಾಮೀಣ ಭಾಗದಲ್ಲಿ ಶಾಶ್ವತ ಆಸ್ತಿಗಳು ನಿರ್ಮಾಣಗೊಳ್ಳುತ್ತಿವೆ, ಆರ್ಥಿಕ ಸಬಲೀಕರಣ ಹೆಚ್ಚಾಗಿದೆ, ಪ್ರತಿ ಪಂಚಾಯಿತಿಯಲ್ಲೂ ಸುಮಾರು 5 ಕೋಟಿ ರೂ.ವರೆಗೂ ಕೆಲಸಗಳಾಗುತ್ತಿವೆ. ಸ್ಥಳೀಯವಾಗಿ ಕೆಲಸಗಳನ್ನು ಮಾಡಲು ಯಾರ ಅನುಮತಿಯ ಅಗತ್ಯವೂ ಇಲ್ಲ ಎಂದು ಹೇಳಿದರು.

ಇದೇ ವೇಳೆ ಮುಖ್ಯಮಂತ್ರಿಯವರು ಬಾಪೂಜಿ ಸೇವಾಕೇಂದ್ರಗಳಲ್ಲಿ 44 ಸೇವೆಗಳನ್ನು ಪೂರೈಸುವುದಕ್ಕೆ ಚಾಲನೆ ನೀಡಿದರು. 800 ಪಂಚಾಯಿತಿಗಳಿಗೆ ಸ್ಮಾರ್ಟ್‍ಫೋನ್ ಮತ್ತು ಲ್ಯಾಪ್‍ಟಾಪ್‍ಗಳನ್ನು ವಿತರಿಸಿದರು.

ಗ್ರಾಮಮಟ್ಟದ ಸಮಸ್ಯೆಗಳನ್ನು ಬಗೆಹರಿಸಲು ಪಂಚಮಿತ್ರ ಸಹಾಯವಾಣಿ

ಬೆಂಗಳೂರು, ಅ.2-ರಾಜ್ಯದ ಪ್ರತಿಯೊಂದು ಗ್ರಾಮಗಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಪಂಚಮಿತ್ರ ಎಂಬ ಸಹಾಯವಾಣಿ ವ್ಯವಸ್ಥೆಯನ್ನು ಜಾರಿಗೆ ತರುತ್ತಿರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಗಾಂಧಿ ಗ್ರಾಮ ಪುರಸ್ಕಾರ ಮತ್ತು ಸ್ವಚ್ಛ ಸರ್ವೇಕ್ಷಣ ರಾಜ್ಯಮಟ್ಟದ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೈಗಾರಿಕೆ ಮಾಹಿತಿ ತಂತ್ರಜ್ಞಾನ ವಲಯದಂತೆ ಪಂಚಾಯಿತಿಗಳಲ್ಲೂ ಸುಗಮ ಆಡಳಿತಕ್ಕಾಗಿ ನೂತನ ನೀತಿ ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮುಂದಿನ ವರ್ಷದಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳ ವರ್ಗಾವಣೆಗೆ ಕೌನ್ಸಿಲಿಂಗ್ ಪದ್ಧತಿಯನ್ನು ಪಾರದರ್ಶಕವಾಗಿ ಜಾರಿಗೊಳಿಸಲಾಗುವುದು. ಪಿಡಿಒ ಗಳನ್ನು ಹೆಚ್ಚು ಉತ್ತರದಾಯಿ ಹಾಗೂ ಹೊಣೆಗಾರರನ್ನಾಗಿಸುವ ನಿಟ್ಟಿನಲ್ಲಿ ಜಿಪಿಎಸ್ ಪೆನ್ಸಿಂಗ್ ಅಳವಡಿಸಲಾಗಿದೆ. ಈ ಮೂಲಕ ಗ್ರಾಮ ಪಂಚಾಯಿತಿ ಅಧಿಕಾರಿ ಎಲ್ಲಿ ತಿರುಗಾಡುತ್ತಿದ್ದಾರೆ, ಎಷ್ಟು ದಿನ ಕೆಲಸಕ್ಕೆ ಹಾಜರಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯ, ಅಧಿಕಾರಿ ಕೆಲಸ ಮಾಡಿದ ದಿನಕ್ಕಷ್ಟೆ ವೇತನ ನೀಡುವ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದರು.

ಶಿವಮೊಗ್ಗದಲ್ಲಿ ಪೊಲೀಸರ ಕ್ರಮದಿಂದ ದೊಡ್ಡ ಅನಾಹುತ ತಪ್ಪಿದೆ : ಗೃಹಸಚಿವ ಪರಮೇಶ್ವರ್

ಗ್ರಾಮಮಟ್ಟದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಪಂಚಮಿತ್ರ ಎಂಬ ಸಹಾಯವಾಣಿಯನ್ನು ಇನ್ನೆರಡು ತಿಂಗಳಲ್ಲಿ ಆರಂಭಿಸಲಾಗುವುದು. ಇದು ರಾಜ್ಯಾದ್ಯಂತ ಎಲ್ಲಾ ಪಂಚಾಯಿತಿಗಳ ವ್ಯವಸ್ಥೆಗೂ ಅನ್ವಯವಾಗಲಿದೆ. ಪಂಚತಂತ್ರ-2 ಸಾಫ್ಟ್ವೇರ್ ಮೂಲಕ ಮುಂದಿನ ದಿನಗಳಲ್ಲಿ 2 ರಿಂದ 3 ಸಾವಿರ ಕೋಟಿ ತೆರಿಗೆ ಸಂಗ್ರಹಿಸಲು ಸಾಧ್ಯವಾಗಲಿದೆ.

ಪಂಚಾಯಿತಿ ಸಭೆಗಳ ಮಾಹಿತಿ ಕೂಡ ಇದರಲ್ಲಿ ದಾಖಲಾಗಲಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ 70 ಸಾವಿರ ಸಭೆಗಳು ನಡೆದಿವೆ. ಪಿಡಿಒ ಗಳ ಹಾಜರಾತಿ ಮೇಲೆ ಇದೇ ವ್ಯವಸ್ಥೆಯಲ್ಲಿ ನಿಗಾ ವಹಿಸಲಾಗುವುದು ಎಂದು ಹೇಳಿದರು. ಪಂಚಾಯಿತಿ ವ್ಯವಸ್ಥೆಗಳನ್ನು ಮತ್ತಷ್ಟು ಪ್ರಜಾಪ್ರಭುತ್ವ ಹಾಗೂ ಆರ್ಥಿಕ ಸಬಲೀಕರಣ ಮಾಡಲು ನಿರಂತರವಾಗಿ ಚರ್ಚೆ ನಡೆಸಲಾಗುತ್ತಿದೆ. ಈವರೆಗೂ ನೂರಕ್ಕೂ ಹೆಚ್ಚು ಸಭೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

ಗಾಂಧೀಜಿ, ಶಾಸ್ತ್ರಿರವರ ಮೌಲ್ಯಗಳು ನಮಗೆ ದಾರಿದೀಪ : ಸಿಎಂ

ಬೆಂಗಳೂರು,ಅ.2- ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‍ಬಹದ್ದೂರ್ ಶಾಸ್ತ್ರಿಯವರ ಬದುಕು ಹಾಗೂ ಮೌಲ್ಯಗಳು ನಮಗೆ ದಾರಿದೀಪ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮಹಾತ್ಮ ಗಾಂಧೀಜಿ ಯವರ 154 ನೇ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಯವರ 119 ನೇ ಜನ್ಮದಿನದ ಅಂಗವಾಗಿ ವಿಧಾನಸೌಧದಲ್ಲಿರುವ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

ದೇಶಾದ್ಯಂತ ಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಆಚರಿಸಲಾಗುತ್ತಿದೆ. ಮಹಾತ್ಮ ಗಾಂಧೀಜಿ ಯವರಿಗೆ ನಾವು ನಮನ ಸಲ್ಲಿಸಿದ್ದೇವೆ. ಅವರ ಹೋರಾಟದ ಬದುಕು ನಮ್ಮೆಲ್ಲರಿಗೂ ಸ್ಪೋರ್ತಿಯಾಗಲಿ ಎಂದು ಹಾರೈಸಿದರು.

ಕೇವಲ 14 ನಿಮಿಷದಲ್ಲೇ ಸ್ವಚ್ಛವಾಗುತ್ತೆ ವಂದೇ ಭಾರತ್ ರೈಲು

ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನಿ. ಜೀವನದ್ದುದ್ದಕ್ಕೂ ಪ್ರಾಮಾಣಿಕವಾಗಿ ಬದುಕಿದವರು. ಅವರು ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಮೌಲ್ಯ ನಮ್ಮೆಲ್ಲರಿಗೂ ದಾರಿದೀಪ. ಗಾಂಧೀಜಿ ಯವರು ಸರಳ ಜೀವನ ನಡೆಸಿದವರು. ಅಹಿಂಸಾ ಮಾರ್ಗ ಅನುಸರಿಸಿ, ಅಹಿಂಸಾತ್ಮಕ ಹೋರಾಟದಿಂದಲೇ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಸಮಾಜದ ಅತ್ಯಂತ ಕಟ್ಟಕಡೆಯ ವ್ಯಕ್ತಿಯಂತೆ ಸರಳವಾಗಿ ಬದುಕಲು ಪ್ರಯತ್ನಿಸಿದರು ಎಂದರು.

ಮೂರನೇ ದರ್ಜೆ ಬೋಗಿಯಲ್ಲಿ ಯಾವಾಗಲೂ ಪ್ರಯಾಣಿಸುತ್ತಿದ್ದರು. ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, 3 ನೇ ದರ್ಜೆಗಿಂತಲೂ ಕೆಳ ದರ್ಜೆಯ ಬೋಗಿ ಇಲ್ಲವಾದ್ದರಿಂದ ನಾನು 3 ನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದೇನೆ ಎಂದು ಉತ್ತರಿಸಿದರು. ಅಷ್ಟರ ಮಟ್ಟಿಗೆ ಸರಳವಾಗಿ ಬದುಕಿದ ಅವರು ತಮ್ಮ ಜೀವನದುದ್ದಕ್ಕೂ ಸತ್ಯ, ಅಹಿಂಸೆಯನ್ನು ಅಳವಡಿಸಿಕೊಂಡವರು ಎಂದು ಹೇಳಿದರು.

ದಕ್ಷಿಣ ಆಫ್ರಿಕಾದಲ್ಲಿದ್ದಾಗಲೂ ಸೆರೆಮನೆ ವಾಸ ಅನುಭವಿಸಿದ್ದರು. ಭಾರತದಲ್ಲಿಯೂ ಸೆರೆಮನೆಯ ವಾಸ ಅನುಭವಿಸಿ ದೇಶಕ್ಕೆ ಮಾದರಿಯಾಗಿದ್ದರು. ಅವರ ನೇತೃತ್ವದಲ್ಲಿ ಅನೇಕ ಜನರು ತ್ಯಾಗ, ಬಲಿದಾನಗಳನ್ನು ಅರ್ಪಿಸಿದರು. ಅಂತಿಮವಾಗಿ ಮತಾಂಧ ನಾಥೂರಾಮ್ ಗೋಡ್ಸೆ ಗುಂಡಿಗೆ ಬಲಿಯಾದರು ಎಂದು ಸ್ಮರಿಸಿದರು.

ವಿಶ್ವನಾಯಕ ಗಾಂಧಿ :
ಸಮಾಜದಲ್ಲಿ ಎಲ್ಲ ಜನರೂ ಶಾಂತಿ, ನೆಮ್ಮದಿಯಿಂದ ಇರಬೇಕು. ಜಾತಿ, ಧರ್ಮ ಎಂದು ಹೊಡೆದಾಡಬಾರದು. ದೇಶ ಇಬ್ಭಾಗವಾಗಬಾರದು ಎಂದು ಹೋರಾಡಿದರು. ಜವಹರಲಾಲ್ ನೆಹರೂ ಅವರು ಸ್ವಾತಂತ್ರ್ಯ ನಂತರ ಮೊದಲ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಕಲ್ಕತ್ತಾದಲ್ಲಿ ಸತ್ಯಾಗ್ರಹ ಮಾಡುತ್ತಿದ್ದರು. ಅಷ್ಟು ಹೊತ್ತಿಗೆ ದೇಶ ವಿಭಜನೆಯಾಗಿ ಜನರ ಸಂಘರ್ಷದಿಂದ ಬೆಂಕಿ ಹೊತ್ತಿಕೊಂಡಿತ್ತು. ಅದನ್ನು ಬಗೆಹರಿಸಲು ಸತ್ಯಾಗ್ರಹ ಮಾಡಿದರು. ಜಗತ್ತಿನ 148 ದೇಶಗಳಲ್ಲಿ ಅವರ ಪ್ರತಿಮೆಗಳಿವೆ.

ಮಿಸ್ಟರ್ ಡಿ.ಕೆ.ಶಿವಕುಮಾರ್, ನಿಮ್ಮ ಕಸನು ಈಡೇರುವುದಿಲ್ಲ : ಎಚ್‍ಡಿಡಿ ವಾಗ್ದಾಳಿ

ಅವರು ಕೇವಲ ಭಾರತದ ನಾಯಕರಾಗಿರಲಿಲ್ಲ. ಜಗತ್ತಿನಲ್ಲಿಯೇ ಗೌರವಕ್ಕೆ ಪ್ರಾತ್ರರಾದ ವಿಶ್ವನಾಯಕರು. ಅಂಥವರ ಜನ್ಮದಿನವನ್ನು ಆಚರಣೆ ಮಾಡುತ್ತಿದ್ದೇವೆ. ಅವರ ಹೋರಾಟ, ಸತ್ಯ, ಧರ್ಮನಿಷ್ಠೆ ಎಲ್ಲವೂ ನಮಗೆ ದಾರಿದೀಪವಾಗಲಿ ಹಾಗೂ ಸೂರ್ತಿ ನೀಡಲಿ ಎಂದರು. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.