Sunday, April 28, 2024
Homeರಾಜಕೀಯಗೃಹ ಸಚಿವ ಪರಮೇಶ್ವರ್ ವಿರುದ್ಧ ಈಶ್ವರಪ್ಪ ಹಿಗ್ಗಾಮುಗ್ಗಾ ವಾಗ್ದಾಳಿ

ಗೃಹ ಸಚಿವ ಪರಮೇಶ್ವರ್ ವಿರುದ್ಧ ಈಶ್ವರಪ್ಪ ಹಿಗ್ಗಾಮುಗ್ಗಾ ವಾಗ್ದಾಳಿ

ಶಿವಮೊಗ್ಗ,ಅ.2- ಕೋಮು ಗಲಭೆ ಉಂಟಾದಾಗ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುವುದು ಸಹಜ ಎಂದಿರುವ ಸಚಿವ ಡಾ.ಜಿ.ಪರಮೇಶ್ವರ್ ಗೃಹಸಚಿವರಾಗಿ ಮುಂದುವರೆಯಲು ಅಸಮರ್ಥರು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಸಚಿವರಾಗಿ ಈ ರೀತಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಕೋಮುಗಲಭೆ ಉಂಟಾದಾಗ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುವುದು ಸಾಮಾನ್ಯ ಎಂದರೆ ಇವರು ಅಧಿಕಾರದಲ್ಲಿ ಮುಂದುವರೆ ಯಬಾರದು. ಕೂಡಲೇ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯ ಮಾಡಿದರು.

ಅಮಾಯಕರ ಮನೆಗಳ ಮೇಲೆ ಕೆಲ ಗೂಂಡಾಗಳು ಹಲ್ಲೆ ನಡೆಸಿ ಕಲ್ಲು ತೂರಾಟ ನಡೆಸಿದ್ದಾರೆ. ಅನೇಕ ಕಡೆ ಮನೆಗಳಿಗೆ ನುಗ್ಗಿ ಬಾಟಲಿಗಳಿಂದ ಹೊಡೆದಿದ್ದಾರೆ ಇವರನ್ನು ಅಮಾಯಕರು ಎನ್ನಬೇಕೇ ಇಲ್ಲವೇ ಗೂಂಡಾಗಳೆಂದು ಕರೆಯಬೇಕೆ ಎಂದು ಪ್ರಶ್ನೆ ಮಾಡಿದರು.

ಶಿವಮೊಗ್ಗದಲ್ಲಿ ಪೊಲೀಸರ ಕ್ರಮದಿಂದ ದೊಡ್ಡ ಅನಾಹುತ ತಪ್ಪಿದೆ : ಗೃಹಸಚಿವ ಪರಮೇಶ್ವರ್

ಮೆರವಣಿಗೆ ಸಂದರ್ಭದಲ್ಲಿ ಯಾವ ಕಾರಣಕ್ಕಾಗಿ ತಲ್ವಾರ್ ಹಿಡಿದುಕೊಂಡು ಬಂದಿದ್ದರು? ನೀವು ಶಾಂತಿಧೂತರಾಗಿದ್ದರೆ ಗಲಭೆ ಸೃಷ್ಟಿ ಮಾಡುವ ಅಗತ್ಯವಿತ್ತೇ? ನೀವು ತಲ್ವಾರ್ ಕೈಯಲ್ಲಿಡಿದರೆ ಅದಕ್ಕೆ ಉತ್ತರ ಕೊಡುವುದು ನಮಗೂ ಗೊತ್ತು ಎಂದು ಈಶ್ವರಪ್ಪ ಎಚ್ಚರಿಸಿದರು.

ಇದನ್ನು ಒಂದು ರ್ನಿಧಿಷ್ಟ ಸಮುದಾಯ ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹೊಡೆದಿರುವ ಉದ್ದೇಶವಾದರೂ ಏನು? ಈಗ ಒಂದೇ ಸಮುದಾಯದವರು ಮಾಡಿಲ್ಲ ಎಂದು ಕೆಲವರು ತಿಪ್ಪೆ ಸವರುವ ಕೆಲಸ ಮಾಡುತ್ತಿದ್ದಾರೆ. ಹಿಂದೂಗಳು ಸಿಡಿದೆದ್ದರೆ ಯಾರೂ ಉಳಿಯುವುದಿಲ್ಲ ಎಂದು ಈಶ್ವರಪ್ಪ ಎಚ್ಚರಿಕೆ ಕೊಟ್ಟರು.

ಶಾಸಕ ಚನ್ನಬಸಪ್ಪ ಮಾತನಾಡಿ, ಹಿಂದೂ ಮಹಾಸಭಾದ ವತಿಯಿಂದ ಹಮ್ಮಿಕೊಂಡಿದ್ದ ಗಣಪತಿ ವಿಸರ್ಜನೆ ವೇಳೆ ಲಕ್ಷಾಂತರ ಭಕ್ತರು ಸೇರಿದ್ದರು. ಒಂದೇ ಒಂದು ಸಣ್ಣ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ನಾವು ಕಾರ್ಯಕ್ರಮ ನಡೆಸಿಕೊಟ್ಟೆವು. ಭಾನುವಾರ ನಡೆದ ಕೃತ್ಯ ಪೂರ್ವ ನಿಯೋಜಿತ ಎಂದು ದೂರಿದರು.

ಶಾಂತಿಪ್ರಿಯ ಶಿವಮೊಗ್ಗದಲ್ಲಿ ಗಲಭೆ ಸೃಷ್ಟಿಸುವ ಏಕೈಕ ಉದ್ದೇಶದಿಂದ ಈ ಕೃತ್ಯ ನಡೆಸಲಾಗಿದೆ. ಘಟನೆಯಲ್ಲಿ ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ಸ್ಥಳೀಯರು ಅಥವಾ ಹೊರಗಿನಿಂದ ಬಂದವರು ಈ ಕೃತ್ಯ ನಡೆಸಿದ್ದಾರೆ. ಈದ್ ಮಿಲಾದ್ ಆಚರಣೆ ಮಾಡುವವರಿಗೆ ಔರಂಗಜೇಬ್ ಕಟೌಟ್ ಹಾಕುವ ಉದ್ದೇಶವಾದರೂ ಏನು? ಅದಕ್ಕೂ ಇದಕ್ಕೂ ಏನು ಸಂಬಂಧ ಎಂದು ಪ್ರಶ್ನೆ ಮಾಡಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ವಿಫಲ : ಬೊಮ್ಮಾಯಿ

ಬಹುತೇಕ ಕಡೆ ಅಮಾಯಕ ಹಿಂದೂ ಮನೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಲಾಗಿದೆ. ಹಾನಿಗೊಳಗಾಗಿರುವ ಮನೆಗಳು ಬಡವರಿಗೆ ಸೇರಿದ್ದಾಗಿವೆ, ಗಾಯಗೊಂಡವರೂ ಸಹ ಆರ್ಥಿಕವಾಗಿ ಹಿಂದುಳಿದವರು. ಅವರಿಗೆ ರಕ್ಷಣೆ ಕೊಡುವವರು ಯಾರು ಎಂದು ಚನ್ನಬಸಪ್ಪ ಪ್ರಶ್ನೆ ಮಾಡಿದರು.

ಮೇಲ್ನೋಟಕ್ಕೆ ಶಿವಮೊಗ್ಗದಲ್ಲಿ ನಡೆದಿರುವುದು ಪೂರ್ವ ನಿಯೋಜಿತ ಕೃತ್ಯ. ಬಿಳಿ ಓಮ್ನಿ ಕಾರಿನಲ್ಲಿ ಬಂದ ಕೆಲವರು ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡೆ ಮೆರವಣಿಗೆ ಬಂದಿದ್ದರು. ಸರ್ಕಾರ ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

RELATED ARTICLES

Latest News