Home Blog Page 1926

ಚರ್ಚ್ ಮೇಲ್ಛಾವಣಿ ಕುಸಿದು 9 ಮಂದಿ ಸಾವು

ಸಿಯುಡಾಡ್ ಮಡೆರೊ (ಮೆಕ್ಸಿಕೊ), ಅ.2- ಉತ್ತರ ಮೆಕ್ಸಿಕೊದಲ್ಲಿ ಸಾಮೂಹಿಕ ಪ್ರಾರ್ಥನೆಯ ವೇಳೆ ಚರ್ಚ್‍ನ ಮೇಲ್ಛಾವಣಿ ಕುಸಿದು ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 50 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಛಾವಣಿ ಕುಸಿತದ ಸಮಯದಲ್ಲಿ ಸುಮಾರು 100 ಜನರು ಚರ್ಚ್‍ನಲ್ಲಿದ್ದರು ಎಂದು ತಮೌಲಿಪಾಸ್ ರಾಜ್ಯ ಪೊಲೀಸರು ತಿಳಿಸಿದ್ದಾರೆ.

ರಾಜ್ಯ ಭದ್ರತಾ ವಕ್ತಾರರ ಕಚೇರಿ ಘಟನೆಯಲ್ಲಿ ಒಂಬತ್ತು ಜನರು ಕುಸಿತದಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು, ಇದು ರಚನಾತ್ಮಕ ವೈಪಲ್ಯದಿಂದ ಉಂಟಾಗಿರಬಹುದು ಎಂದು ವಿವರಿಸಿದೆ. ರಾಷ್ಟ್ರೀಯ ಗಾರ್ಡ್, ರಾಜ್ಯ ಪೊಲೀಸ್ ಮತ್ತು ರಾಜ್ಯ ನಾಗರಿಕ ರಕ್ಷಣಾ ಕಚೇರಿ ಮತ್ತು ರೆಡ್‍ಕ್ರಾಸ್‍ನ ಘಟಕಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ ಎಂದು ತಮೌಲಿಪಾಸ್ ರಾಜ್ಯ ಪೊಲೀಸರು ತಿಳಿಸಿದ್ದಾರೆ.

ಎಸ್.ಎಂ.ಕೃಷ್ಣರವರು ಆಕರ್ಷಕ ವ್ಯಕ್ತಿತ್ವ ಉಳ್ಳವರು : ಡಾ.ಬಿ.ಎಲ್.ಶಂಕರ್

ಘಟನೆಯಲ್ಲಿ ಇನ್ನಿತರ ಹಲವಾರು ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವು-ನೋವಿನ ಸಂಖ್ಯೆ ಹೆಚ್ಚಳವಾಗಬಹುದು ಎಂದು ಶಂಕಿಸಲಾಗಿದೆ. ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವವರ ರಕ್ಷಣಾ ಕಾರ್ಯ ಮುಂದುವರೆದಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-10-2023)

ನಿತ್ಯ ನೀತಿ: ಮಾನವನು ನಿಜವಾದ ಜ್ಞಾನದಿಂದ ವಂಚಿತನಾಗಿರುವುದು ಸಹಜ. ಏಕೆಂದರೆ, ಅವನನ್ನು ಅಜ್ಞಾನವು ಸದಾಕಾಲ ಸುತ್ತುವರಿದಿರುತ್ತದೆ.

ಪಂಚಾಂಗ ಸೋಮವಾರ 02-10-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಭರಣಿ / ಯೋಗ: ಹರ್ಷಣ / ಕರಣ: ಭವ

ಸೂರ್ಯೋದಯ : ಬೆ.06.09
ಸೂರ್ಯಾಸ್ತ :06.09
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ
ಮೇಷ
: ಉತ್ತಮ ಹೆಸರು, ಕೀರ್ತಿ, ಮಾನ- ಸನ್ಮಾನಗಳು ಲಭಿಸಲಿವೆ. ಉತ್ತಮ ದಿನ.
ವೃಷಭ: ಕಟ್ಟಡ ವ್ಯವಹಾರಕ್ಕೆ ಸಂಬಂಸಿದ ಜನರಿಗೆ ಬಹಳ ಅನುಕೂಲಕರವಾದ ದಿನವಾಗಿದೆ.
ಮಿಥುನ: ಶತ್ರುಗಳ ಕಾಟ ಅಕವಿರುತ್ತದೆ. ಆದರೆ ಅವರು ನಿಮ್ಮನ್ನು ಏನೂ ಮಾಡಲು ಆಗುವುದಿಲ್ಲ.

ಕಟಕ: ಆರ್ಥಿಕವಾಗಿ ನೀವು ಅಂದುಕೊಂಡದ್ದಕ್ಕಿಂತ ಹೆಚ್ಚು ನಷ್ಟ ಉಂಟಾಗಬಹುದು.
ಸಿಂಹ: ಸರ್ಕಾರಿ ವಲಯದಲ್ಲಿ ಕೆಲಸ ಮಾಡುವವರಿಗೆ ಅತ್ಯುತ್ತಮವಾದ ದಿನ.
ಕನ್ಯಾ: ವೃತ್ತಿಪರರು ವೃತ್ತಿಜೀವನದಲ್ಲಿ ಸಕಾರಾತ್ಮಕ ಫಲಿತಾಂಶ ಪಡೆಯಲು ಗಮನ ಹರಿಸಬೇಕು.

ತುಲಾ: ಕಚೇರಿಯಲ್ಲಿ ಉನ್ನತ ಅಕಾರಿಯೊಂದಿಗೆ ವಾದ- ವಿವಾದ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.
ವೃಶ್ಚಿಕ: ವ್ಯಾಪಾರಿಗಳು ಅಥವಾ ವೃತ್ತಿಯಲ್ಲಿರುವ ವರು ಅಕೃತ ಪ್ರಯಾಣ ಕೈಗೊಳ್ಳಬೇಕಾಗುತ್ತದೆ.
ಧನುಸ್ಸು: ಮಕ್ಕಳಿಂದ ಬೇಸರ ಉಂಟಾಗಲಿದೆ. ಅನಾರೋಗ್ಯ ಸಮಸ್ಯೆ ಕಾಡಬಹುದು.

ಮಕರ: ಯಾವುದೇ ನಿರ್ಧಾರವನ್ನು ಅವಸರದಲ್ಲಿ ತೆಗೆದು ಕೊಳ್ಳದಿರಿ.ಪ್ರೇಮ ಸಂಬಂಧದಲ್ಲಿ ಸೂಕ್ಷ್ಮತೆ ಇರಲಿದೆ.
ಕುಂಭ: ಹಿಡಿದ ಕೆಲಸ ಗಳನ್ನು ಒಂದೇ ಬಾರಿಗೆ ಪೂರ್ಣಗೊಳಿಸುವುದು ಕಷ್ಟಸಾಧ್ಯವಾಗಲಿದೆ.
ಮೀನ: ಪ್ರಯಾಣದಲ್ಲಿ ಸಕಾರಾತ್ಮಕ ವಾತಾ ವರಣವಿರಲಿದೆ. ಮಾನಸಿಕ ನೆಮ್ಮದಿ ಸಿಗುವುದು.

ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಕಾಮುಕ ಖಾಕಿ ಬಲೆಗೆ

ಬೆಂಗಳೂರು, ಅ.1- ಒಂಟಿಯಾಗಿ ಓಡಾಡುವ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಕಾಮುಕನನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವೈಯಾಲಿಕಾವಲ್ ನಿವಾಸಿ ಅಯ್ಯಪ್ಪ ಬಂಧಿತ ಆರೋಪಿ. ತಮಿಳುನಾಡು ಮೂಲದವನಾದ ಈತ ವರ್ಕ್‍ಶಾಪ್‍ನಲ್ಲಿ ಕೆಲಸ ಮಾಡತ್ತಿದ್ದನು. ಈತ ಬೈಕ್‍ನಲ್ಲಿ ಸುತ್ತಾಡುತ್ತಾ ಒಂಟಿಯಾಗಿ ಹೋಗುವ ಯುವತಿಯರನ್ನು ತಬ್ಬಿಕೊಂಡು ನಂತರ ಸ್ಥಳದಿಂದ ಪರಾರಿಯಾಗುತ್ತಿದ್ದನು.

ವಸಂತನಗರದಲ್ಲಿ ಇತ್ತೀಚೆಗೆ ರಾತ್ರಿ ವೇಳೆ ವಾಯು ವಿಹಾರ ಮಾಡುತ್ತಿದ್ದ ಯುವತಿಯನ್ನು ಕಂಡು ಸ್ವಲ್ಪ ದೂರದಲ್ಲಿ ಬೈಕ್ ನಿಲ್ಲಿಸಿ ನಂತರ ಯುವತಿಯನ್ನು ಹಿಂಬಾಲಿಸಿಕೊಂಡು ಹೋಗಿ ಆಕೆಯನ್ನು ತಬ್ಬಿಕೊಂಡು ನಂತರ ಅಸಭ್ಯವಾಗಿ ವರ್ತಿಸಿದ್ದ. ಈತನ ವರ್ತನೆಯಿಂದ ಯುವತಿ ಕಿರುಚಿಕೊಳ್ಳುತ್ತಿದ್ದಂತೆ ಬೈಕ್ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದನು.

ಬಿಜೆಪಿ ಅಧಿಕಾರದಲ್ಲಿದ್ದಾಗ ಪೊಲೀಸ್ ಠಾಣೆಗೆ ಕೂಡ ರಕ್ಷಣೆ ಇರಲಿಲ್ಲ : ಸಚಿವ ಖರ್ಗೆ

ಈ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆರೋಪಿಯು ವರ್ಕ್‍ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದು, ರಿಪೇರಿಗೆ ಬರುವ ಬೈಕನ್ನು ತೆಗೆದುಕೊಂಡು ಸುತ್ತಾಡುತ್ತಾ ಇದೇ ರೀತಿ ಅನೇಕ ಸಲ ಒಂಟಿ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ವಿಚಾರಣೆಯಿಂದ ಗೊತ್ತಾಗಿದೆ.

ಎಸ್.ಎಂ.ಕೃಷ್ಣರವರು ಆಕರ್ಷಕ ವ್ಯಕ್ತಿತ್ವ ಉಳ್ಳವರು : ಡಾ.ಬಿ.ಎಲ್.ಶಂಕರ್

ಬೆಂಗಳೂರು,ಅ.1- ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ರಾಜಕಾರಣ ಮೀರಿ ಬೆಳೆದಿದ್ದಾರೆ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಅಭಿಪ್ರಾಪಟ್ಟರು. ಚಿತ್ರಕಲಾ ಪರಿಷತ್‍ನಲ್ಲಿಂದು ಹಮ್ಮಿಕೊಂಡಿದ್ದ ಸ್ವಪ್ನ ಬುಕ್‍ಹೌಸ್ ಪ್ರಕಾಶನದಿಂದ ಪ್ರಕಟಗೊಂಡ ಡಾ.ಎನ್.ಜಗದೀಶ್ ಕೊಪ್ಪ ಅವರು ರಚಿಸಿರುವ ಎಸ್.ಎಂ.ಕೃಷ್ಣ ಅವರ ಜೀವನಗಾಥೆ ಆಧರಿಸಿದ ನೆಲದ ಸಿರಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರಕಲಾ ಪರಿಷತ್‍ಗೆ ಜಾಗ ಸಿಕ್ಕಿದ್ದೇ ಎಸ್.ಎಂ.ಕೃಷ್ಣ ಅವರಿಂದ. ಸಾಂಸ್ಕøತಿಕ ನಾಯಕರೂ ಹೌದು. ಆಕರ್ಷಕ ವ್ಯಕ್ತಿತ್ವ ಉಳ್ಳವರು ಕೂಡ. ಕೃಷ್ಣ ಪಥದಲ್ಲಿ ಇಲ್ಲದ ಅನೇಕ ಅಂಶಗಳು ನೆಲದ ಸಿರಿಯಲ್ಲಿವೆ ಎಂದರು.

ನಾನು ವಿಧಾನಪರಿಷತ್ ಸಭಾಪತಿಯಾಗಲು ಹಾಗೂ ಚಿತ್ರಕಲಾ ಪರಿಷತ್‍ನ ಅಧ್ಯಕ್ಷನಾಗಲು ಕೃಷ್ಣ ಅವರೇ ಕಾರಣ ಎಂದು ಹೇಳಿದರು. ಮಾಡದ ಕೆಲಸಗಳಿಗೆ ಹೆಸರು ಪಡೆಯುವ ರಾಜಕಾರಣಿಗಳ ನಡುವೆ ಮಾಡಿದ ಕೆಲಸಗಳಿಗೆ ಕ್ರೆಡಿಟ್ ತೆಗೆದುಕೊಳ್ಳದ ವ್ಯಕ್ತಿತ್ವ ಕೃಷ್ಣ ಅವರದು ಎಂದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಪೊಲೀಸ್ ಠಾಣೆಗೆ ಕೂಡ ರಕ್ಷಣೆ ಇರಲಿಲ್ಲ : ಸಚಿವ ಖರ್ಗೆ

ಮಾಜಿ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಎಸ್.ಎಂ.ಕೃಷ್ಣ ಅವರು ದೂರದೃಷ್ಟಿಯುಳ್ಳ ನಾಯಕರು. ನನ್ನ ರಾಜಕೀಯ ಗುರುಗಳು. ಬೆಂಗಳೂರಿನ ಐಟಿಬಿಟಿಗೆ ಭದ್ರ ಬುನಾದಿ ಹಾಕಿದವರು. ಕರ್ನಾಟಕ ಮಾತ್ರವಲ್ಲ ಭಾರತದ ಚರಿತ್ರೆಯಲ್ಲಿ ಅಜರಾಮರಾಗಿ ನಿಲ್ಲುತ್ತಾರೆ. ರೈತಪರ ಬದ್ದತೆಯಿಂದ ಮುಖ್ಯಮಂತ್ರಿಯಾಗಿದ್ದರು. ಕಾವೇರಿಗಾಗಿ ಪಾದಯಾತ್ರೆ ಮಾಡಿದವರು ಎಂದು ಬಣ್ಣಿಸಿದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮಾತನಾಡಿ, ನೆಲದ ಸಿರಿ ಪುಸ್ತಕ ರಚನೆ ಮಾಡುವಾಗ ಲೇಖಕರಾದ ಜಗದೀಶ್ ಕೊಪ್ಪ ಅವರು ನಮ್ಮನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ಶೂಟರ್‌ಗಳ ಪ್ರಾಬಲ್ಯ : ಟ್ರ್ಯಾಪ್ ವಿಭಾಗದಲ್ಲಿ ಒಲಿದ ಮತ್ತೊಂದು ಚಿನ್ನ

ಹ್ಯಾಂಗ್ಝೌ,ಅ.1- ಶೂಟಿಂಗ್ ವಿಭಾಗದಲ್ಲಿ ಪದಕಗಳ ಸರಮಾಲೆಯನ್ನೇ ಪೋಣಿಸಿರುವ ಭಾರತದ ಶೂಟರ್‍ಗಳು ತಮ್ಮ ಬತ್ತಳಿಕೆಗೆ ಮತ್ತೊಂದು ಚಿನ್ನದ ಪದಕವನ್ನು ಸೇರಿಸಿಕೊಂಡಿದ್ದಾರೆ. ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ 2023ನೇ ಸಾಲಿನ ಏಷ್ಯಾನ್ ಗೇಮ್ಸ್‍ನಲ್ಲಿ ಇದುವರೆಗೂ 7 ಚಿನ್ನದ ಪದಕಗಳನ್ನು ಗೆದ್ದು ಸಂಭ್ರಮಿಸಿದ್ದು, ಇಂದು ನಡೆದ ಪುರುಷರ ಟ್ರಾಪ್ ವಿಭಾಗದಲ್ಲೂ ಮತ್ತೊಂದು ಸ್ವರ್ಣದ ಪದಕ ಲಭಿಸಿದೆ.

ಪುರುಷರ ಟ್ರಾಪ್ ವಿಭಾಗದ ಫೈನಲ್ ಸುತ್ತಿನಲ್ಲಿ ಭಾರತವನ್ನು ಪ್ರತಿನಿಸಿದ್ದ ಕನ್ನನ್ ಚೆನಯ್, ಜೊರವರ್ ಸಿಂಗ್ ಸಂಧು ಮತ್ತು ಪೃಥ್ವಿರಾಜ್ ತೊಂಡೈಮನ್ ಅವರು ಒಟ್ಟು 361 ಅಂಕಗಳನ್ನು ಕಲೆ ಹಾಕುವುದರೊಂದಿಗೆ ಸ್ವರ್ಣ ಪದಕವನ್ನು ಜಯಿಸಿದ್ದಾರೆ.

ಬಿಜೆಪಿ ಅಧಿಕಾರದಲ್ಲಿದ್ದಾಗ ಪೊಲೀಸ್ ಠಾಣೆಗೆ ಕೂಡ ರಕ್ಷಣೆ ಇರಲಿಲ್ಲ : ಸಚಿವ ಖರ್ಗೆ

ಕುವೈತ್‍ನ ಶೂಟರ್‍ಗಳು 352 ಅಂಕ ಹಾಗೂ ಚೀನಾ 346 ಅಂಕಗಳನ್ನು ಕಲೆ ಹಾಕುವ ಮೂಲಕ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಗೆದ್ದು ಸಂಭ್ರಮಿಸಿದರು.

ಮಹಿಳಾ ಶೂಟರ್‍ಗಳಿಗೆ ಬೆಳ್ಳಿ ಬೆಡಗಿ:
ಇಂದು ಬೆಳಗ್ಗೆ ನಡೆದ ಮಹಿಳೆಯರ ಟ್ರಾಪ್ ವಿಭಾಗದಲ್ಲಿ ಭಾರತದ ರಾಜೇಶ್ವರಿ ಕುಮಾರಿ, ಮನಿಶಾ ಕೈರ್, ಪ್ರೀತಿ ರಜಾಕ್ ಅವರು 337 ಅಂಕಗಳನ್ನು ಕಲೆ ಹಾಕುವ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಭಾರತದ ಮಹಿಳಾ ಶೂಟರ್‍ಗಳಿಗೆ ಪ್ರಬಲ ಪೈಪೋಟಿ ನೀಡಿದ ಚೀನಾ ಚಿನ್ನದ ಪದಕವನ್ನು ಗೆದ್ದು ಸಂಭ್ರಮಿಸಿದೆ.

ಏಷ್ಯಾನ್ ಗೇಮ್ಸ್ ನಲ್ಲಿ ಕನ್ನಡತಿಗೆ ಬೆಳ್ಳಿ ಪದಕ

ಹ್ಯಾಂಗ್ಝೌ,ಅ.1- ಚೀನಾದಲ್ಲಿ ನಡೆಯುತ್ತಿರುವ 19ನೇ ಏಷ್ಯಾನ್ ಗೇಮ್ಸ್‍ನಲ್ಲಿ ಪದಕದ ಬೇಟೆಯನ್ನು ಮುಂದುವರಿಸಿರುವ ಭಾರತದ ಬತ್ತಳಿಕೆಗೆ ಕನ್ನಡತಿ ಅದಿತಿ ಅಶೋಕ್ ಅವರು ಬೆಳ್ಳಿ ಪದಕವನ್ನು ಸೇರ್ಪಡೆಗೊಳಿಸಿದ್ದಾರೆ.

ಮಹಿಳೆಯರ ವೈಯಕ್ತಿಕ ಗಾಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಬೆಂಗಳೂರಿನ ಕುವರಿ ಅದಿತಿ ಅಶೋಕ್ ವೆಸ್ಟ್ ಲೇಕ್ ಇಂಟರ್‍ನ್ಯಾಷನಲ್ ಗಾಲ್ ಕೋರ್ಸ್‍ನಲ್ಲಿ ನಡೆದ ಪೈನಲ್ ಪಂದ್ಯದಲ್ಲಿ 67-66-61-73ರ ಸುತ್ತುಗಳೊಂದಿಗೆ 17 ಅಂಡರ್‍ಗಳೊಂದಿಗೆ 2ನೇ ಸ್ಥಾನ ಪಡೆದು ರಜತ ಪದಕಕ್ಕೆ ಕೊರಳೊಡ್ಡಿದ್ದಾರೆ.

ಅದಿತಿ ಅಶೋಕ್‍ಗೆ ಪ್ರಬಲ ಪೈಪೋಟಿ ನೀಡಿದ ಥಾಯ್ಲೆಂಡ್‍ನ ಅರ್ಪಿಚಯಾ ಯುಬೋಲ್ ಅವರು 67-65-69-77ರ ಸುತ್ತುಗಳೊಂದಿಗೆ 19 ಅಂಡರ್‍ಗಳೊಂದಿಗೆ ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡರೆ, ದಕ್ಷಿಣ ಕೊರಿಯಾದ ಹ್ಯುಂಜೋ ಯೂ ಅವರು 67-67-68-65 ಸುತ್ತುಗಳೊಂದಿಗೆ 16 ಅಂಡರ್‍ಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟು ಕೊಂಡರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಪೊಲೀಸ್ ಠಾಣೆಗೆ ಕೂಡ ರಕ್ಷಣೆ ಇರಲಿಲ್ಲ : ಸಚಿವ ಖರ್ಗೆ

ದಾಖಲೆ ಬರೆದ ಅದಿತಿ:
ಏಷ್ಯಾನ್ ಗೇಮ್ಸ್ ನ ಮಹಿಳೆಯರ ಗಾಲ್‍ನಲ್ಲಿ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ ಅದಿತಿ ಅಶೋಕ್ ಪದಕ ಗೆದ್ದ ಮೊದಲ ಹಾಗೂ 2ನೇ ಭಾರತೀಯಳು ಎಂಬ ದಾಖಲೆ ನಿರ್ಮಿಸಿದ್ದಾರೆ. 2002ರ ಬುಸಾನ್ ಏಷ್ಯಾಮ್ ಗೇಮ್ಸ್‍ನಲ್ಲಿ ಶಿವಕಪೂರ್ ಅವರು ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದರು. ಟೊಕಿಯೋ ಒಲಿಂಪಿಕ್ಸ್‍ನಲ್ಲಿ ಅದಿತಿ 4ನೇ ಸ್ಥಾನ ಪಡೆದು ಪದಕ ಗೆಲ್ಲದೆ ನಿರಾಸೆ ಅನುಭವಿಸಿದ್ದರು.

ಕಾವೇರಿ ವಿವಾದ ಪರಿಹಾರಕ್ಕೆ ಸಂಕಷ್ಟ ಸೂತ್ರ ಅಗತ್ಯ : ಎಸ್.ಎಂ.ಕೃಷ್ಣ

ಬೆಂಗಳೂರು,ಅ.1- ಕಾವೇರಿ ನದಿನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸೂತ್ರವನ್ನು ರೂಪಿಸುವುದು ಅಗತ್ಯ ಎಂದು ಮಾಜಿ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ ಅವರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಕಷ್ಟ ಸೂತ್ರ ರೂಪಿಸುವ ಮೂಲಕ ಕಾವೇರಿ ವಿವಾದಕ್ಕೆ ತೆರೆ ಎಳೆಯಬೇಕು. ಕಾವೇರಿ ನದಿಪಾತ್ರದ ನಾಲ್ಕೂ ರಾಜ್ಯಗಳು ಸಂಕಷ್ಟ ಸೂತ್ರದ ಬಗ್ಗೆ ಚರ್ಚಿಸಿ ಆನಂತರ ಸಂಕಷ್ಟ ಸೂತ್ರದ ಚೌಕಟ್ಟಿನಲ್ಲಿ ನದಿ ನೀರು ನಿರ್ವಹಣೆ ಬಗ್ಗೆ ಸೂಕ್ತ ತೀರ್ಮಾನವನ್ನು ಮಾಡಬೇಕು ಎಂದು ಸಲಹೆ ಮಾಡಿದರು.

ತಾವು ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಕಾವೇರಿ ವಿಚಾರದಲ್ಲಿ ಇಂಥದ್ದೇ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ಸಂಧಾನ ಮಾಡಲು ಯತ್ನ ಮಾಡಿದರೂ ಸಫಲವಾಗಲಿಲ್ಲ. ಅಂತಿಮವಾಗಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಬೇಕಾಯಿತು ಎಂದು ಹೇಳಿದರು. ಆಗ ಸುಪ್ರೀಂಕೋರ್ಟ್‍ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವೆಂಕಟಾಚಲ ಅವರಂತಹ ಕಾನೂನು ಪರಿಣಿತರ ಸಲಹೆ ಪಡೆದು ಮುಂದಿನ ಹೆಜ್ಜೆ ಇಡಲಾಗುತ್ತಿತ್ತು. ಅದೇ ರೀತಿ ಈ ಸರ್ಕಾರವು ಮುಂದುವರೆಯಬೇಕು ಎಂದು ಅವರು ಸಲಹೆ ನೀಡಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಪೊಲೀಸ್ ಠಾಣೆಗೆ ಕೂಡ ರಕ್ಷಣೆ ಇರಲಿಲ್ಲ : ಸಚಿವ ಖರ್ಗೆ

ಕಾವೇರಿ ಜಲಾನಯನ ಭಾಗದಲ್ಲಿ ಮಳೆ ಕಡಿಮೆಯಾದಾಗ ಕಾವೇರಿ ವಿಚಾರ ಸದ್ದು ಮಾಡುತ್ತದೆ. ಮಳೆಗಾಲ ಕ್ಷೀಣಿಸಿದಾಗ ನೀರಿಗಾಗಿ ಒತ್ತಡ ಉಂಟಾಗಲಿದೆ. ತಮಿಳುನಾಡಿನ ಹೇಳಿಕೆಗಳು ಬಹಳ ಮಟ್ಟಿಗೆ ವಸ್ತುಸ್ಥಿತಿಗೆ ನಾಚಿಸುವಂತಿವೆ. ಕಾವೇರಿ ವಿಚಾರದಲ್ಲಿ ಕರ್ನಾಟಕ ತೆಗೆದುಕೊಂಡ ನಿಲುವನ್ನು ಸಮರ್ಥಿಸುವುದಾಗಿ ಹೇಳಿದರು.

ರಾಜಕಾರಣ ಮಾತನಾಡು ವುದಿಲ್ಲ: ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಎಸ್.ಎಂ.ಕೃಷ್ಣಾ ಅವರು ನಾನೀಗ ರಾಜಕಾರಣದಲ್ಲಿ ಇಲ್ಲ. ಹೀಗಾಗಿ ಮೈತ್ರಿ ವಿಚಾರದಲ್ಲಿ ನನ್ನ ನಿಲುವು ಅಪ್ರಸ್ತುತ ಎಂದರು.

ಕನ್ನಡದ ಬಗ್ಗೆ ಅವಹೇಳನ ಬರಹ ಪ್ರಕಟಿಸಿದ್ದ ಪಶ್ಚಿಮ ಬಂಗಾಳ ಯುವಕನ ಬಂಧನ

ಬೆಂಗಳೂರು, ಅ.1- ಸಾಮಾಜಿಕ ಜಾಲತಾಣ ಇನ್‍ಸ್ಟ್ರಾಗ್ರಾಮ್‍ನಲ್ಲಿ ಕರ್ನಾಟಕ, ಬೆಂಗಳೂರು ಜನರು ಹಾಗೂ ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿ ಬರಹ ಪ್ರಕಟಿಸಿದ್ದ ಪಶ್ಚಿಮ ಬಂಗಾಳದ ಯುವಕನನ್ನು ಕೊಡಿಗೆ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರ್‍ಟಿ ನಗರದಲ್ಲಿ ವಾಸವಾಗಿದ್ದ ನಿಲಯ್ ಮಂಡಲ್ (23) ಬಂಧಿತ ಯುವಕ. ಈತ ಕೊಡಿಗೆಹಳ್ಳಿಯಲ್ಲಿರುವ ಕಂಪೆನಿಯೊಂದರ ಉದ್ಯೋಗಿ.

ನಗರದಲ್ಲಿ ವಾಸವಾಗಿದ್ದುಕೊಂಡು ಈ ಯುವಕ ಕರ್ನಾಟಕದ ಬಗ್ಗೆ ಕೆಟ್ಟದಾಗಿ ಅವಹೇಳನ ಮಾಡಿದ್ದಲ್ಲದೆ, ಉತ್ತರ ಭಾರತದವರು ಬೆಂಗಳೂರಿನಿಂದ ಹೊರಟು ಹೋದರೆ ಬೆಂಗಳೂರಿಗರು ಕಾಡು ಜನರಿಗೆ ಸಮವಾಗುತ್ತಾರೆ ಎಂದು ಅತಿರೇಕವಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿದ್ದಾನೆ.

ರಾಜ್ಯ, ಜನ, ಕನ್ನಡ ಭಾಷೆ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿದ ಬರಹದಿಂದ ರಾಜ್ಯದ ಜನರ ನಡುವೆ ಗೊಂದಲ ಸೃಷ್ಟಿಸಿ ಭಾಷೆ ಮತ್ತು ವಾಸ ಮಾಡುವ ಸ್ಥಳ, ಇತ್ಯಾದಿಗಳ ಆಧಾರದ ಮೇಲೆ ದ್ವೇಷವನ್ನುಂಟು ಮಾಡುವ ಮತ್ತು ಸೌಹಾರ್ದತೆಗೆ ಬಾಧಕವಾಗುವ ರೀತಿ ಸಾಮಾಜಿಕ ಜಾಲತಾಣ ಇನ್‍ಸ್ಟ್ರಾಗ್ರಾಮ್‍ನಲ್ಲಿ ಸಂದೇಶವನ್ನು ಫೋಸ್ಟ್ ಮಾಡಿದ್ದನು.

ಬಿಜೆಪಿ ಅಧಿಕಾರದಲ್ಲಿದ್ದಾಗ ಪೊಲೀಸ್ ಠಾಣೆಗೆ ಕೂಡ ರಕ್ಷಣೆ ಇರಲಿಲ್ಲ : ಸಚಿವ ಖರ್ಗೆ

ಈ ಬಗ್ಗೆ ಅನೇಕ ಕನ್ನಡಪರ ಸಂಘಟನೆಗಳು, ಕಾರ್ಯಕರ್ತರು ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ, ಕೆಲಸ ಮಾಡುತ್ತಿದ್ದ ಕಂಪೆನಿ ಹಾಗೂ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಕೀಳು ಅಭಿಪ್ರಾಯದ ವಿರುದ್ಧ ಕಂಪೆನಿ ಸಹ ಆತನ ವಿರುದ್ಧ ಸೂಕ್ತ ಕ್ರಮದ ಭರವಸೆ ನೀಡಿತ್ತು. ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿದ ಕೊಡಿಗೆಹಳ್ಳಿ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಸ್ಯಾಂಡಲ್‍ವುಡ್ ನಟ ನಾಗಭೂಷಣ್ ಅರೆಸ್ಟ್

ಬೆಂಗಳೂರು, ಅ.1- ಸ್ಯಾಂಡಲ್‍ವುಡ್ ನಟರೊಬ್ಬರು ಅತಿ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ನಿಯಂತ್ರಣ ತಪ್ಪಿ ದಂಪತಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ವಸಂತಪುರ ಮುಖ್ಯರಸ್ತೆಯ ಸುಪ್ರಭಾತ ಶ್ರೀಂ ಬ್ರೀಜ್ ಅಪಾರ್ಟ್‍ಮೆಂಟ್ ನಿವಾಸಿ ಪ್ರೇಮಾ(48) ಮೃತಪಟ್ಟ ದುರ್ದೈವಿ. ಇವರ ಪತಿ ಕೃಷ್ಣಾ(58) ಗಂಭೀರ ಗಾಯಗೊಂಡಿದ್ದು ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾತ್ರಿ 9.45ರ ಸುಮಾರಿನಲ್ಲಿ ಪ್ರೇಮಾ ಹಾಗೂ ಕೃಷ್ಣ ದಂಪತಿ ವಸಂತಪುರ ಮುಖ್ಯರಸ್ತೆಯ ತಮ್ಮ ಅಪಾರ್ಟ್‍ಮೆಂಟ್ ಹತ್ತಿರ ಫುಟ್‍ಪಾತ್ ಮೇಲೆ ನಡೆದುಕೊಂಡು ಕೋಣನಕುಂಟೆ ಕ್ರಾಸ್ ಕಡೆಗೆ ಹೋಗುತ್ತಿರುವಾಗ ಹಿಂದಿನಿಂದ ಅಂದರೆ ಉತ್ತರಹಳ್ಳಿ ಕಡೆಯಿಂದ ಕೋಣನಕುಂಟೆ ಕ್ರಾಸ್ ಕಡೆಗೆ ಕಾರು ಚಾಲನೆ ಮಾಡಿಕೊಂಡು ನಟ ನಾಗಭೂಷಣ್ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ದಂಪತಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಗಂಭೀರ ಗಾಯಗೊಂಡರು.

ತಕ್ಷಣ ದಂಪತಿಯನ್ನು ಸಮೀಪದ ಅಸ್ಟ್ರಾ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಪ್ರೇಮಾ ಅವರ ತಲೆಗೆ ಗಂಭೀರ ಪೆಟ್ಟಾಗ ತೀವ್ರ ರಕ್ತಸ್ರಾವವಾಗಿ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕೃಷ್ಣ ಅವರ ಎರಡು ಕಾಲು, ಹೊಟ್ಟೆ ಭಾಗ ಹಾಗೂ ತಲೆಗೆ ಗಂಭೀರ ಪೆಟ್ಟಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬನ್ನೇರುಘಟ್ಟದ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಟ ನಾಗಭೂಷಣ್ ಬಂಧನ: ದಂಪತಿಯ ಮಗ ಪಾರ್ಥ ಎಂಬುವರು ನ್ಯೂಟ್ರೀನೋಸ್ ಕಂಪೆನಿಯ ಉದ್ಯೋಗಿಯಾಗಿದ್ದು, ಇವರು ನೀಡಿದ ದೂರಿನ ಮೇರೆಗೆ ನಟ ನಾಗಭೂಷಣ್‍ನನ್ನು ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆ ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಶೂಟಿಂಗ್ ಮುಗಿಸಿಕೊಂಡು ನಾಗಭೂಷಣ್ ಕಾರಿನಲ್ಲಿ ಬರುತ್ತಿದ್ದಾಗ ಅಪಘಾತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್.ಎಂ.ಕೃಷ್ಣ ಅಭಿವೃದ್ಧಿ ಹರಿಕಾರ-ಆದರ್ಶ ನಾಯಕ : ಡಿಕೆಶಿ ಬಣ್ಣನೆ

ಬೆಂಗಳೂರು,ಅ.1- ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಮೆಟ್ರೋ ಯೋಜನೆಯಂತಹ ದೂರದೃಷ್ಟಿಯುಳ್ಳ ಮಹತ್ವದ ಯೋಜನೆಗಳನ್ನು ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದು ಬೆಂಗಳೂರಿಗೆ ಅಂತಾರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟವರು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರಕಲಾ ಪರಿಷತ್‍ನಲ್ಲಿಂದು ಹಮ್ಮಿಕೊಂಡಿದ್ದ ಸ್ವಪ್ನ ಬುಕ್‍ಹೌಸ್ ಪ್ರಕಾಶನದಿಂದ ಪ್ರಕಟಗೊಂಡ ಡಾ.ಎನ್.ಜಗದೀಶ್ ಕೊಪ್ಪ ಅವರು ರಚಿಸಿರುವ ಎಸ್.ಎಂ.ಕೃಷ್ಣ ಅವರ ಜೀವನಗಾಥೆ ಆಧರಿಸಿದ ನೆಲದ ಸಿರಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಡಿನ ಹಿತಕ್ಕಾಗಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಲು ಮುಂದಾಗಿದ್ದರು ಎಂದು ಹೇಳಿದರು.

ಅವರ ರಾಜಕೀಯ ಜೀವನದಲ್ಲಿ ಸಾಕಷ್ಟು ಜನರಿಗೆ ಒಳ್ಳೆಯದನ್ನು ಮಾಡಿರುವುದು ಬಿಟ್ಟರೆ ಬೇರೆಯವರಿಗೆ ತೊಂದರೆ ಕೊಡಲಿಲ್ಲ. ರಾಜಕೀಯವಾಗಿ ನನ್ನಂತಹ ಹತ್ತಾರು ನಾಯಕರನ್ನು ಎಲ್ಲ ಸಮುದಾಯದಲ್ಲೂ ಬೆಳೆಸಿದ್ದಾರೆ ಎಂದರು.

ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿಯಾಗಿ ನಾಲ್ಕೂವರೆ ವರ್ಷದ ಆಡಳಿತಾವಧಿಯಲ್ಲಿ ಎಸ್.ಎಂ.ಕೃಷ್ಣ ಅವರು ಇತಿಹಾಸ ಸೃಷ್ಟಿ ಮಾಡಿದ್ದಾರೆ. ಅವರು ಏನನ್ನು ತೆಗೆದುಕೊಂಡು ಹೋಗಲಿಲ್ಲ. ಅವರ ಆದರ್ಶ, ನಾಯಕತ್ವವನ್ನು ನೀಡಿದ್ದಾರೆ. ನನಗೆ ರಾಜಕೀಯ ಮರುಜನ್ಮ ನೀಡಿದವರು ಎಂದು ಹೇಳಿದರು.

ಅವರ ಆಡಳಿತ ಅವಧಿಯಲ್ಲಿ ರಾಜ್ಯವು ತೀವ್ರ ಬರ, ಕಾವೇರಿ ನೀರಿನ ಹಂಚಿಕೆ ಸಮಸ್ಯೆ, ವರನಟ ಡಾ.ರಾಜ್‍ಕುಮಾರ್ ಅಪಹರಣ, ಆರ್ಥಿಕ ಸಂಕಷ್ಟ ಇದ್ದರೂ ರಾಜ್ಯವು ಯಶಸ್ಸನ್ನು ಕಂಡಿತ್ತು. ಕೃಷ್ಣ ಅವರ ಕಾಲ ಎಂದು ಬಿಂಬಿಸುವಂತಾಯಿತು ಎಂದರು. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವಿಕಾಸಸೌಧ, ಉದ್ಯೋಗಸೌಧ ಹಾಗೂ ಬೆಂಗಳೂರು ಮೆಟ್ರೊ ಯೋಜನೆ ಅವರ ಆಡಳಿತಾವಯ ಕೊಡುಗೆಗಳು ಎಂದು ಬಣ್ಣಿಸಿದರು.

ಶಾಲೆ ಬಿಡುವ ಮಕ್ಕಳನ್ನು ಮರಳಿ ಶಾಲೆಗೆ ತರಲು ದೇಶದಲ್ಲಿಯೇ ಮೊದಲ ಬಾರಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆ ಜಾರಿಗೆ ತಂದರು. ಅದು ಈಗಲೂ ಮುಂದುವರೆದಿದೆ. ಹೆಣ್ಣುಮಕ್ಕಳ ಆರ್ಥಿಕ ಸಬಲೀಕರಣಕ್ಕಾಗಿ ಸ್ತ್ರೀ ಶಕ್ತಿ ಸಂಘಗಳ ಕಾರ್ಯಕ್ರಮಗಳನ್ನು ಜಾರಿಗೆ ತರಲಾಯಿತು. ಸುಮಾರು ನಾಲ್ಕೂವರೆ ಕೋಟಿ ಮಹಿಳೆಯರು ವಿವಿಧ ಸಂಘಗಳ ಸದಸ್ಯರಾಗಿದ್ದು, ಶೇ.95ರಷ್ಟು ಹಣ ಮರುಪಾವತಿಯಾಗುತ್ತಿದೆ.

ಗ್ರಾಮೀಣ ಹಾಗೂ ಬಡಜನರ ಆರೋಗ್ಯಕ್ಕಾಗಿ ಯಶಸ್ವಿನಿಧಿ ಯೋಜನೆಯನ್ನು ಜಾರಿಗೆ ತರಲಾಯಿತು. ಮೊದಲ ಬಾರಿಗೆ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು ಎಂದರು.
ವಿಮಾನ ನಿಲ್ದಾಣದ ಉದ್ಘಾಟನೆಗೆ ಬಂದಿದ್ದ ಆಗಿನ ಪ್ರಧಾನಿ ವಾಜಪೇಯಿ ಅವರು ಕೃಷ್ಣ ಅವರ ಆಡಳಿತದಿಂದಾಗಿ ವಿಶ್ವದ ನಾಯಕರು ಬೆಂಗಳೂರಿನತ್ತ ಗಮನಹರಿಸುವಂತಾಗಿದೆ ಎಂದು ಬಣ್ಣಿಸಿದ್ದರೆಂದು ಡಿ.ಕೆ.ಶಿವಕುಮಾರ್ ಸ್ಮರಿಸಿದರು. ಭೂಮಿ ಯೋಜನೆ , ಪಾನೀಯ ನಿಗಮ ಅವರ ಕಾಲದಲ್ಲೇ ಸ್ಥಾಪನೆಯಾಯಿತು. ಅವರಿಗೆ ರಾಜ್ಯದ ಹಿತ ಮುಖ್ಯವಾಗಿತ್ತೇ ಹೊರತು ಬೇರೆನೂ ಇಲ್ಲ ಎಂದು ಹಲವು ನಿದರ್ಶನಗಳನ್ನು ನೀಡಿ ವಿಶ್ಲೇಷಿಸಿದರು.

ಅವರನ್ನು ಕುರಿತಾದ ನೆಲದಸಿರಿ ಪುಸ್ತಕ ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿದೆ. ಅವರು ತಮ್ಮದೇ ಆದ ಇತಿಹಾಸವನ್ನು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ನಿರ್ಮಿಸಿದ್ದಾರೆ ಎಂದು ಹೇಳಿದರು.

ಪಕ್ಷಾತೀತ ವ್ಯಕ್ತಿ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಜಾಗತಿಕ ನೆಲೆಯಲ್ಲಿ ಗುರುತಿಸಿಕೊಳ್ಳಬೇಕಾದ ಮಾದರಿ ರಾಜಕಾರಣಿ. ಅಷ್ಟೇ ಅಲ್ಲ ಪಕ್ಷಾತೀತ ವ್ಯಕ್ತಿ. ಅವರು ಕನ್ನಡಿಗರ ಹೆಮ್ಮೆ ಎಂದು ಹಿರಿಯ ಸಾಹಿತಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಬಣ್ಣಿಸಿದರು.

ನೆಲದ ಸಿರಿ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಾಹಿತ್ಯದ ಸಂಪರ್ಕ ಅಗತ್ಯ. ಮಹಾತ್ಮ ಗಾಂ, ಜವಾಹರ್‍ಲಾಲ್ ನೆಹರು ಸೇರಿದಂತೆ ಶ್ರೇಷ್ಠ ರಾಜಕೀಯ ಚಿಂತಕರು ಸ್ವತಃ ಸಾಹಿತಿಗಳಾಗಿದ್ದರು ಇಲ್ಲವೇ ಸಾಹಿತ್ಯದ ಸಂಪರ್ಕವುಳ್ಳವರಾಗಿ ದ್ದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಲೋಹಿಯ ಕೂಡ ಸಾಹಿತ್ಯದ ನಿಕಟ ಸಂಪರ್ಕ ಹೊಂದಿದ್ದರು ಎಂದರು ಹೇಳಿದರು.

ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಬೆಳಗಾವಿಯಲ್ಲಿ ವೇದಿಕೆ ಸಿದ್ದ

ಎಸ್.ಎಂ.ಕೃಷ್ಣ ಅವರು ಸಾಹಿತ್ಯ, ಸಂಗೀತ, ಕ್ರೀಡೆ ಬಗ್ಗೆ ಆಸಕ್ತಿಯುಳ್ಳ ಸಂವೇದನಾಶೀಲ ವ್ಯಕ್ತಿ. ಚಿತ್ರಕಲಾ ಪರಿಷತ್ ಸಾಂಸ್ಕøತಿಕ ಕೇಂದ್ರವಾಗಲು ಇವರ ಕೊಡುಗೆ ಕಾರಣ. ನೆಲದ ಸಿರಿ ಕೃತಿ ಕೇವಲ ಕೃಷ್ಣಾ ಅವರ ಜೀವನಗಾಥೆಯಲ್ಲ. ಭಾರತದ ಒಂದು ಕಾಲಘಟ್ಟದ ರಾಜಕೀಯ ಸಾಂಸ್ಕøತಿಕ ಮಹತ್ವವನ್ನು ಬಿಂಬಿಸುವ ಚರಿತ್ರೆ. ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ ಪಠ್ಯವಾಗಿ ಈ ಕೃತಿಯನ್ನು ಅಧ್ಯಯನ ಮಾಡಬೇಕು. ಜಗದೀಶ್ ಕೊಪ್ಪ ಅವರು ವಸ್ತುನಿಷ್ಠವಾಗಿ, ಮುಕ್ತ ಮನಸ್ಸಿನಿಂದ ನೆಲದ ಸಿರಿಯನ್ನು ವಿಶ್ಲೇಷಣೆ ಮಾಡಿ ರಚಿಸಿದ್ದು, ಓದಿಸಿಕೊಂಡು ಹೋಗುವಂತಹ ಕೃತಿಯಾಗಿದೆ ಎಂದು ವಿಶ್ಲೇಷಿಸಿದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಹಿರಿಯ ಸಾಹಿತಿ ಡಾ.ಹಂಪಾನಾಗರಾಜಯ್ಯ, ಕೃತಿಕಾರ ಎನ್.ಜಗದೀಶ್ ಕೊಪ್ಪ, ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್, ಮಾಜಿ ಸಚಿವರಾದ ಡಾ.ಕೆ.ಸುಧಾಕರ್, ನಫೀಜ ಫಜಲ್, ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ, ದಿನೇಶ್ ಗೂಳಿಗೌಡ, ಡಿ.ಕೆ.ಶಿವಕುಮಾರ್ ಅವರ ಪತ್ನಿ ಉಷಾ, ಎಸ್.ಎಂ.ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ ಮತ್ತಿತರರು ಇದ್ದರು.