Thursday, May 2, 2024
Homeರಾಜ್ಯಬಿಜೆಪಿ ಅಧಿಕಾರದಲ್ಲಿದ್ದಾಗ ಪೊಲೀಸ್ ಠಾಣೆಗೆ ಕೂಡ ರಕ್ಷಣೆ ಇರಲಿಲ್ಲ : ಸಚಿವ ಖರ್ಗೆ

ಬಿಜೆಪಿ ಅಧಿಕಾರದಲ್ಲಿದ್ದಾಗ ಪೊಲೀಸ್ ಠಾಣೆಗೆ ಕೂಡ ರಕ್ಷಣೆ ಇರಲಿಲ್ಲ : ಸಚಿವ ಖರ್ಗೆ

ಬೆಂಗಳೂರು,ಅ.1- ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ಮನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಇಂದು ಬೆಳಿಗ್ಗೆ ಭೇಟಿ ನೀಡಿ ಮಹತ್ವದ ಚರ್ಚೆ ನಡೆಸಿದ್ದಾರೆ. ಗುಜರಾತಿನ ಶಾಸಕ ಜಿಗ್ನೇಶ್ ಮೇವಾನಿ, ಕಾಂಗ್ರೆಸ್ ಮುಖಂಡರೂ ಆಗಿರುವ ಮಾಜಿ ಐಎಎಸ್ ಅಧಿಕಾರಿ ಸೆಂಥಿಲ್ ಈ ಸಂದರ್ಭದಲ್ಲಿ ಹಾಜರಿದ್ದರು. ಹೆಚ್ಚುವರಿ ಉಪಮುಖ್ಯಮಂತ್ರಿಗಳ ಬೇಡಿಕೆ ವಿವಾದದ ನಡುವೆಯೇ ನಡೆದಿರುವ ಈ ಸಭೆ ಕುತೂಹಲ ಕೆರಳಿಸಿದೆ.

ಬಿಜೆಪಿ ಟೀಕೆ ಅಪ್ರಸ್ತುತ :ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಇದೊಂದು ಸೌಜನ್ಯದ ಭೇಟಿ ಎಂದು ಹೇಳಿದ್ದಾರೆ. ಮುಂದುವರೆದು ಮಾತನಾಡಿದ ಅವರು, ಬೆಂಗಳೂರಿನ ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆ ಕುರಿತು ಬಿಜೆಪಿ ನಾಯಕರು ಟೀಕೆ ಮಾಡುತ್ತಿರುವುದು ಅಪ್ರಸ್ತುತ. ಗಲಾಟೆ ನಡೆದು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದಾಗ ಗೃಹ ಸಚಿವರಾಗಿದ್ದವರ್ಯಾರು, ಮುಖ್ಯಮಂತ್ರಿಯಾಗಿದ್ದವರ್ಯಾರು ಎಂದು ಪ್ರಶ್ನಿಸಿದರು.

“ಪಕ್ಷ ತೊರೆಯುತ್ತಿರುವವರ ಸಮಾಧಾನಕ್ಕೆ ಹೆಚ್ಡಿಕೆ ಹಿಟ್ ಅಂಡ್ ರನ್ ಹೇಳಿಕೆ ನೀಡಿದ್ದಾರೆ”

ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಶಾಸಕರ ಮನೆಯಷ್ಟೇ ಅಲ್ಲ, ಕನಿಷ್ಠ ಪೊಲೀಸ್ ಠಾಣೆಯನ್ನೂ ರಕ್ಷಣೆ ಮಾಡಲಾಗಲಿಲ್ಲ. ಗಲಭೆಕೋರರು ಠಾಣೆಗೆ ಬೆಂಕಿ ಹಚ್ಚಿದ್ದರು. ಆ ಎಲ್ಲಾ ಘಟನೆಗಳು ನಮ್ಮ ಕಣ್ಣೆದುರಿಗೇ ಇವೆ. ಬಿಜೆಪಿಯವರು ಸಾಮಾನ್ಯ ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು ಎಂದು ತಿರುಗೇಟು ನೀಡಿದರು.

ಈಗಷ್ಟೇ ಮ್ಯಾಜಿಸ್ಟ್ರೇಟ್ ತನಿಖಾ ವರದಿ ಬಂದಿದೆ. ಅದರಲ್ಲಿ ಯಾವೆಲ್ಲಾ ಅಂಶಗಳನ್ನು ಪರಿಗಣಿಸಬೇಕು ಎಂಬ ವಿಚಾರಗಳನ್ನು ಸರ್ಕಾರ ಪರಿಶೀಲಿಸಲಿದೆ. ಪ್ರಕರಣ ನಡೆದಾಗ ಬಿಜೆಪಿಯವರು ಏನು ಮಾಡುತ್ತಿದ್ದರು ಎಂಬುದಕ್ಕೆ ಮೊದಲು ಉತ್ತರ ಕೊಡಲಿ ಎಂದು ಸವಾಲು ಹಾಕಿದರು.

ಗಲಭೆ ಕುರಿತು ಬಿಜೆಪಿಯವರು ತನಿಖೆ ಮಾಡಿ ವರದಿ ನೀಡಿಲ್ಲ. ಮ್ಯಾಜಿಸ್ಟ್ರೇಟ್ ತನಿಖೆ ಆಗಿದೆ. ಪ್ರತಿಯೊಂದಕ್ಕೂ ಬಿಜೆಪಿಯವರು ಹೇಳಿದಾಕ್ಷಣವೇ ನಾವು ಪ್ರತಿಕ್ರಿಯಿಸಬೇಕೆಂದೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಜೆಡಿಎಸ್ ನಾಯಕರು ವೈಯಕ್ತಿಕ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಮೈತ್ರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವವರ ವಿರುದ್ಧ ಕುಮಾರಸ್ವಾಮಿ ಉಡಾಫೆಯಿಂದ ಮಾತನಾಡುತ್ತಿದ್ದಾರೆ. ಇದರ ಅರ್ಥ ಕುಮಾರಸ್ವಾಮಿಯವರಿಗೆ ಜನರೂ ಬೇಕಾಗಿಲ್ಲ, ಜಾತ್ಯತೀತ ತತ್ವ ಮತ್ತು ಸಂವಿಧಾನವೂ ಬೇಕಾಗಿಲ್ಲ ಎಂಬುದಾಗಿದೆ ಎಂದರು.

ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ಬೆಲೆ 209 ರೂ. ಏರಿಕೆ

ಜಾತ್ಯತೀತ ಜನತಾದಳದಲ್ಲಿ ಈಗ ಜಾತ್ಯತೀತ ಜನರೂ ಇಲ್ಲ, ಜಾತ್ಯತೀತ ತತ್ವವೂ ಇಲ್ಲ. ನಾಯಕರ ವಲಸೆ ಹೆಚ್ಚಾಗುತ್ತಿರುವುದರಿಂದ ಮುಂದೆ ದಳವೂ ಉಳಿಯುವುದಿಲ್ಲ. ಅಲ್ಪಸಂಖ್ಯಾತರಷ್ಟೇ ಅಲ್ಲ, ತತ್ವ ಸಿದ್ಧಾಂತವನ್ನು ನಂಬಿ ಜೆಡಿಎಸ್‍ನಲ್ಲಿದ್ದ ಬಹಳಷ್ಟು ನಾಯಕರು ಪಕ್ಷ ತೊರೆಯುತ್ತಿದ್ದಾರೆ.

ರಾಜಕೀಯದಲ್ಲಿರುವವರು ಕುಟುಂಬ ಅಥವಾ ವ್ಯಕ್ತಿಯನ್ನಷ್ಟೇ ನಂಬಿ ಪಕ್ಷದಲ್ಲಿರುವುದಿಲ್ಲ, ಸಿದ್ಧಾಂತವನ್ನು ನಂಬಿರುತ್ತಾರೆ. ಅದಕ್ಕೆ ಧಕ್ಕೆಯಾದಾಗ ಸಹಜವಾಗಿಯೇ ಅಲ್ಲಿಂದ ಹೊರಬರುವುದು ಸಾಮಾನ್ಯ. ಜೆಡಿಎಸ್‍ನಿಂದ ಹೊರಬಂದವರು ಕಾಂಗ್ರೆಸ್ ಸಿದ್ಧಾಂತ ನಂಬಿ ನಮ್ಮ ಪಕ್ಷ ಸೇರುವುದಾದರೆ ಸ್ವಾಗತಿಸುತ್ತೇವೆ ಎಂದರು.

RELATED ARTICLES

Latest News