Home Blog Page 1931

ಮಧ್ಯಪ್ರದೇಶ ಹಾಳು ರಾಜ್ಯವಾಗಿದೆ ; ಕಮಲ್‍ನಾಥ್

ಭೋಪಾಲ್,ಸೆ.30- ಉಜ್ಜಯಿನಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಮಧ್ಯಪ್ರದೇಶವನ್ನು ಹಾಳು ರಾಜ್ಯವನ್ನಾಗಿ ಆಗಿ ಪರಿವರ್ತಿಸಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

15 ವರ್ಷದ ಅತ್ಯಾಚಾರ ಸಂತ್ರಸ್ತೆಯನ್ನು ಅರ್ಚಕರೊಬ್ಬರು ರಕ್ಷಿಸಿದ ಆಘಾತಕಾರಿ ಘಟನೆಯ ನಂತರ ಕಾಂಗ್ರೆಸ್ ನಾಯಕರ ಈ ಹೇಳಿಕೆಗಳು ಬಂದಿವೆ.ರಾಜ್ಯದಲ್ಲಿ ಇಂತಹ ಸಾಕಷ್ಟು ಘಟನೆಗಳು ಗಮನಕ್ಕೆ ಬರುವುದಿಲ್ಲ. ಕೆಲವು ಗಮನಕ್ಕೆ ಬರುತ್ತವೆ. ಆದರೆ ರಾಜ್ಯದಲ್ಲಿ ಇಂತಹ ಸಾಕಷ್ಟು ಘಟನೆಗಳು ನಡೆಯುತ್ತಿವೆ, ಅದರ ಮಾಹಿತಿ ನಮಗೆ ಸಿಗುವುದಿಲ್ಲ. ಆಜ್ ಯೇ ಚೌಪತ್ ಪ್ರದೇಶ್ ಬನ್ ಗಯಾ ಹೈ ಎಂದು ಮಾಜಿ ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ.

ಇದುವರೆಗೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಆಟೋರಿಕ್ಷಾ ಚಾಲಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಮತ್ತು ಆತನ ವಿರುದ್ಧ ಐಪಿಸಿ ಸೆಕ್ಷನ್ 376 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಎರಡನೇ ಆರೋಪಿ ಆಟೋರಿಕ್ಷಾ ಚಾಲಕನ ವಿರುದ್ಧ ಸಾಕ್ಷ್ಯವನ್ನು ಮುಚ್ಚಿಟ್ಟ ಆರೋಪವನ್ನೂ ಹೊರಿಸಲಾಗಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(30-09-2023)

ಮಧ್ಯಪ್ರದೇಶದ ಉಜ್ಜಯಿನಿಯ ವಿಶೇಷ ನ್ಯಾಯಾಲಯವು ಆಟೋರಿಕ್ಷಾ ಚಾಲಕನನ್ನು ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಪ್ರಮುಖ ಆರೋಪಿಯನ್ನು ಉಜ್ಜಯಿನಿಯಲ್ಲಿರುವ ಮಕ್ಕಳ ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಕಾಯ್ದೆ (ಪೆÇೀಕ್ಸೊ) ಅಡಿಯಲ್ಲಿ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ನಮಗೆ ಮಾಹಿತಿ ಬಂದ ತಕ್ಷಣ, ಹುಡುಗಿಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಯಿತು, ಏನಾಯಿತು ಎಂಬುದರ ಕುರಿತು ಹುಡುಗಿ ಪೊಲೀಸರಿಗೆ ತಿಳಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಸಹಾಯಕ್ಕಾಗಿ ಆಪ್ತಸಮಾಲೋಚಕರನ್ನು ಕರೆಸಲಾಯಿತು. ಸಮಾಲೋಚಕರು ಅವಳೊಂದಿಗೆ ಸಂವಾದ ನಡೆಸಿ ದೃಢಪಡಿಸಿದರು. ಹಲ್ಲೆಯ ಬಗ್ಗೆ ಪೊಲೀಸರಿಗೆ ತಿಳಿಸಲಾಗಿದೆ ಎಂದು ಎಸ್ಪಿ ಶರ್ಮಾ ತಿಳಿಸಿದ್ದಾರೆ.

ವೈದ್ಯಕೀಯ ಆಧಾರದ ಮೇಲೆ, ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‍ಐಟಿ) ರಚಿಸಲಾಗಿದೆ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು ಮತ್ತು ಲಭ್ಯವಿರುವ ಎಲ್ಲಾ ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಿದರು, ಅದರ ಆಧಾರದ ಮೇಲೆ ಆಟೋ ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(30-09-2023)

ನಿತ್ಯ ನೀತಿ :
ಮಾನವ ಜೀವನ ಯಾತ್ರೆಗೆ ನಂದಾ ದೀವಿಗೆಯಾಗಿ ಬೆಳಕು ನೀಡಬಲ್ಲ ಸಾಮಥ್ರ್ಯವನ್ನು ಹೊಂದಿರುವುದೇ ಸನಾತನ ಧರ್ಮ.

ಪಂಚಾಂಗ : ಶನಿವಾರ, 30-09-2023
ಶೋಭಕೃತ್ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ
ತಿಥಿ: ಪ್ರತಿಪದ್ / ನಕ್ಷತ್ರ: ರೇವತಿ / ಯೋಗ: ಧ್ರುವ / ಕರಣ: ತೈತಿಲ

ಸೂರ್ಯೋದಯ : ಬೆ.06.09
ಸೂರ್ಯಾಸ್ತ : 06.11
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30

ಇಂದಿನ ರಾಶಿಭವಿಷ್ಯ

ಮೇಷ: ದೂರ ಪ್ರಯಾಣದಿಂದ ತೊಂದರೆ. ಅನಗತ್ಯ ಸಮಸ್ಯೆಗಳು ಎದುರಾಗಬಹುದು.
ವೃಷಭ: ಚಾಡಿ ಮಾತುಗಳನ್ನು ಕೇಳದಿರಿ. ಉದ್ಯೋಗದ ಕಡೆ ಗಮನ ನೀಡುವುದು ಒಳಿತು.
ಮಿಥುನ: ಭೂಮಿ ವಿಚಾರದಲ್ಲಿ ನಷ್ಟ ಅನುಭವಿಸುವಿರಿ. ನಂಬಿಕಸ್ಥ ರಿಂದ ದ್ರೋಹವಾಗಲಿದೆ.

ಕಟಕ: ಆರೋಗ್ಯ ಕಾಪಾಡಿ ಕೊಳ್ಳಲು ವ್ಯಾಯಾಮ ಅಥವಾ ಯೋಗ ಮಾಡಿ. ಬಂಧುಗಳೊಂದಿಗೆ ಅನಗತ್ಯ ವಿವಾದ ಬೇಡ.
ಸಿಂಹ: ಸಹೋದರರೊಂದಿಗೆ ಮನಸ್ತಾಪವಾಗಲಿದೆ. ಮನಸ್ಸಿನಲ್ಲಿ ಗೊಂದಲ.
ಕನ್ಯಾ: ಹಳೆ ಸ್ನೇಹಿತರ ಜೊತೆ ಸಂವಾದ ನಡೆಸುವುದರಿಂದ ಮನಸ್ಸಿಗೆ ಸಂತೋಷವಾಗುತ್ತದೆ. ಕುಲದೇವರನ್ನು ಪ್ರಾರ್ಥಿಸಿ.

ತುಲಾ: ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ತೋರಿಸುವರು. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ವ್ಯವಹಾರದಲ್ಲಿ ಹೊಸ ಒಪ್ಪಂದಗಳಾಗಲಿವೆ.
ವೃಶ್ಚಿಕ: ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗಕ್ಕೆ ಅವಕಾಶಗಳು ಒದಗಿಬರಲಿವೆ.
ಧನುಸ್ಸು: ಆರ್ಥಿಕ ಸ್ಥಿತಿಯು ಮೊದಲಿಗಿಂತ ಉತ್ತಮ ವಾಗಿರುತ್ತದೆ. ತಲೆ ಅಥವಾ ಬೆನ್ನುನೋವು ಕಾಡಲಿದೆ.

ಮಕರ: ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ಎಚ್ಚರಿಕೆಯಿಂದಿರಬೇಕು.
ಕುಂಭ: ಸ್ವಸಾಮಥ್ರ್ಯದಿಂದ ಪ್ರಗತಿ ಸಾಸುವಿರಿ. ಧಾರ್ಮಿಕ ಆಚರಣೆಗಳಿಂದ ತೃಪ್ತಿ ಸಿಗಲಿದೆ.
ಮೀನ: ಯಾವುದೇ ಅಪಾಯಕಾರಿ ಸವಾಲುಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ.

ಸಂಕಷ್ಟ ಸೂತ್ರ ರಚನೆಗೆ ಬಗ್ಗೆ ಚರ್ಚೆ : ಡಿಸಿಎಂ ಡಿಕೆಶಿ

ಬೆಂಗಳೂರು, ಸೆ.29- ಸಂಕಷ್ಟ ಸೂತ್ರ ರಚನೆಯ ಬಗ್ಗೆ ರಾಜ್ಯ ಸರ್ಕಾರ ತನ್ನ ಪಾಲಿನ ಸೂತ್ರಗಳನ್ನು ರೂಪಿಸಲು ಇಂದು ನಡೆಯುವ ಮಹತ್ವದ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಕಷ್ಟ ಸೂತ್ರವನ್ನು ಕೇಂದ್ರ ಸರ್ಕಾರ ರಚನೆ ಮಾಡಬೇಕಿದೆ. ಬೇರೆ ಪಕ್ಷದವರು ಹೇಳಿದಂತೆ ನಾನು ಮಾತನಾಡಲು ಸಾಧ್ಯವಿಲ್ಲ. ಸಚಿವನಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕಿದೆ. ಸಂಕಷ್ಟ ಸೂತ್ರಕ್ಕೆ ಮೊದಲು ನಮ್ಮ ಸಮಸ್ಯೆ ಬಗ್ಗೆ ಮಾರ್ಗಸೂಚಿ ಸಿದ್ದ ಪಡಿಸಿಕೊಳ್ಳ ಬೇಕಿದೆ. ಅದಕ್ಕಾಗಿ ಇಂದು ಮಹತ್ವದ ಸಭೆ ನಡೆಸಲಾಗುತ್ತಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಿವೃತ್ತ ನ್ಯಾಯಾೀಶರು, ಮಾಜಿ ಅಡ್ವೋಕೆಟ್ ಜನರಲ್ಗಳು ಹಾಗೂ ಹಿರಿಯ ವಕೀಲರ ತಂಡದ ಜೊತೆ ಚರ್ಚೆ ನಡೆಸಲಾಗುತ್ತಿದೆ ಎಂದರು. ಇಂದು ಕಾವೇರಿ ನೀರು ನಿರ್ವಹಣಾ ಪ್ರಾಕಾರದ ಸಭೆ ನಡೆಯುತ್ತಿದೆ.

15 ವರ್ಷ ಹಳೆಯ 5 ಸಾವಿರ ಸರ್ಕಾರಿ ವಾಹನಗಳನ್ನು ನಾಶಪಡಿಸಲು ಅನುಮತಿ

ಅಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆಯ ಆದೇಶವನ್ನು ಪ್ರಶ್ನೆ ಮಾಡಿದ್ದೇವೆ. ಸದ್ಯಕ್ಕೆ ಮಳೆಯಿಲ್ಲ. ಹಾಗಾಗಿ ಸಮಿತಿಯ ಆದೇಶದಂತೆ ಪ್ರತಿದಿನ ಮೂರು ಸಾವಿರ ಕ್ಯೂಸೆಕ್ ನೀರು ಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಪ್ರತಿಪಾದಿಸಿದ್ದೇವೆ ಎಂದು ಹೇಳಿದರು.

ಕಾವೇರಿ ವಿಷಯದಲ್ಲಿ ಕರ್ನಾಟಕ ಬಂದ್ ಅವಶ್ಯಕತೆ ಇರಲಿಲ್ಲ. ಕೆಲ ಸಂಘಟನೆಗಳು ಬಂದ್ಗೆ ಕರೆ ನೀಡಿದ್ದವು. ಆದರೆ ಸರ್ಕಾರ ಜನರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದೆ. ಎಲ್ಲೆಡೆ ಸಂಚಾರ ಎಂದಿನಂತಿದೆ. ಅಂಗಡಿ, ವ್ಯಾಪಾರ ವಹಿವಾಟುಗಳು ಮುಂದುವರೆದಿದೆ. ಶಾಂತಿಯುತ ವಾತಾವರಣವನ್ನು ಜನ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ದಿ ಬರುತ್ತಿದೆ : ಬೊಮ್ಮಾಯಿ

ಬೆಂಗಳೂರು: ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ದಿ ಬರುತ್ತಿದ್ದು, ಈಗ ಕಾನೂನು ತಜ್ಞರು, ರೈತರನ್ನು ಕರೆದು ಮಾತನಾಡಿಸುತ್ತಿದೆ. ಈ ಕೆಲಸ ಮೊದಲೇ ಮಾಡಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಸಿಎಂ ಡಿಸಿಎಂ ನಡುವೆ ಹೊಂದಾಣಿಕೆಯಿಲ್ಲ ಆದರೆ, ಗೃಹ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲ ಎನ್ನುವುದು ಸಾಬೀತಾಗಿದೆ.

ಕೊಳ್ಳೆ ಹೊಡೆದ ಮೇಲೆ ಬಾಗಿಲು ಹಾಕಿದಂತೆ ಈಗ ಕಾನೂನು ಹೊರಾಟ ಮಾಡಲು ಹೊರಟಿದ್ದಾರೆ. ಕಾನೂನು ತಜ್ಞರ ಜೊತೆ ಮಾತನಾಡುವ ಕೆಲಸವನ್ನು ಮುಂಚೆಯೇ ಮಾಡಬೇಕಿತ್ತು. ಈಗಲಾದರೂ ಸರ್ಕಾರ ಪ್ರಾಮಾಣಿಕವಾಗಿ ಕಾನೂನು ಹೋರಾಟ ಮಾಡಿ, ಮುಂದಿನ ದಿನಗಳಲ್ಲಿ ರಾಜ್ಯದ ವಿರುದ್ದ ಬರುವ ಆದೇಶಗಳು ಬರದಂತೆ ನೋಡಿಕೊಳ್ಳಲಿ ಎಂದರು.

15 ವರ್ಷ ಹಳೆಯ 5 ಸಾವಿರ ಸರ್ಕಾರಿ ವಾಹನಗಳನ್ನು ನಾಶಪಡಿಸಲು ಅನುಮತಿ

ಈ ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ದಿ ಬರುತ್ತಿದೆ. ಕಾನೂನು ತಜ್ಞರು ರೈತರನ್ನು ಮುಂಚೆಯೇ ಮಾತನಾಡಬೇಕಿತ್ತು. ಗಡಿ, ನೆಲ ಜಲ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಮೂರ್ತಿ ಶಿವರಾಜ ಪಾಟಿಲ್ ಪರಿಣಿತರಿದ್ದಾರೆ‌ ಅವರನ್ನು‌ ಕರೆದು ಮಾತನಾಡಿಸಬೇಕಿತ್ತು. ಇನ್ನೂ ಅನೇಕ ಕಾನೂನು ತಜ್ಞರಿದ್ದಾರೆ. ಅವರೊಡನೆ ಮಾತಬಾಡಬೇಕಿತ್ತು ಎಂದರು.

ಬರ ಪರಿಹಾರ ನೀಡಲಿ
ರಾಜ್ಯದಲ್ಲಿ ಬರಗಾಲ ಇದ್ದಾಗ ಇಂತಹ ಸರ್ಕಾರ ಇರೋದು ದುರಂತ‌. ಉತ್ತರ ಕರ್ನಾಟಕದ ನೂರಾರು ತಾಲೂಕುಗಳಲ್ಲಿ ಬರ ಇದೆ. ಇದಕ್ಕೂ ಇವರು ಕೇಂದ್ರದ ಕಡೆಗೆ ಬೆರಳು ತೋರಿಸುತ್ತಾರೆ. ಪ್ರವಾಹ ಬಂದಾಗ ನಾವೇ ಪರಿಹಾರ ಕೊಟ್ಟಿದ್ದೇವೆ. ಕೇಂದ್ರದ ಪರಿಹಾರಕ್ಕಿಂತ ಎರಡು ಪಟ್ಟು ಹಣ ಕೊಟ್ಡಿದ್ದೆವೆ. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಯಾವ ರೀತಿ ವರ್ತಿಸುತ್ತಿದೆ. ಅನ್ನುವುದರ ಮೇಲೆ ಸರ್ಕಾರದ ನಡೆ ಗೊತ್ತಾಗುತ್ತಿದೆ ಎಂದು ಹೇಳಿದರು.

ಇನ್ನು ಕೋಲಾರದಲ್ಲಿ ಈದ ಮಿಲಾದ್ ಸಂದರ್ಭದಲ್ಲಿ ಖಡ್ಗ ಹಿಡಿದು ಮೆರವಣಿಗೆ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆಡಳಿತ ಹೇಗಿರುತ್ತದೆಯೋ ಹಾಗೆ ಇಂತವರ ಆಟಗಳು ನಡೆಯುತ್ತವೆ. ಈಗ ಗೂಂಡಾಗಳಿಗೆ, ಗಲಾಟೆ ಮಾಡುವವರಿಗೆ ಯಾವುದೇ ಭಯ ಇಲ್ಲ. ಹೀಗಾಗಿ ಮುಕ್ತವಾಗಿ ಈ ರೀತಿ ತಿರುಗಾಡುವಂತಾಗಿದೆ ಎಂದು ಹೇಳಿದರು

ಶಿರೋಮಣಿ ಅಕಾಲಿದಳದ ನಾಯಕನ ಹತ್ಯೆ

ಹೊಶಿಯಾರ್ಪುರ,ಸೆ.29- ಶಿರೋಮಣಿ ಅಕಾಲಿದಳ (ಎಸ್ಎಡಿ) ಮುಖಂಡ ಸುರ್ಜಿತ್ ಸಿಂಗ್ ಅವರನ್ನು ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ನಾಯಕ ಹತ್ತಿರದ ಕಿರಾಣಿ ಅಂಗಡಿಯ ಹೊರಗೆ ಕುಳಿತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ತಲ್ವಿಂದರ್ ಸಿಂಗ್ ತಿಳಿಸಿದ್ದಾರೆ. ರಾತ್ರಿ 7 ಗಂಟೆಯ ಸುಮಾರಿಗೆ ಸುರ್ಜಿತ್ ಸಿಂಗ್ ಅವರು ತಮ್ಮ ಪ್ರದೇಶದಲ್ಲಿ ದಿನಸಿ ಅಂಗಡಿಯೊಂದರ ಹೊರಗೆ ಕುಳಿತಿದ್ದರು.

ಇಬ್ಬರು ವ್ಯಕ್ತಿಗಳು ಬೈಕ್ನಲ್ಲಿ ಬಂದು ಸುರ್ಜಿತ್ ಸಿಂಗ್ ಕಡೆಗೆ ನಾಲ್ಕು ಸುತ್ತು ಗುಂಡು ಹಾರಿಸಿದರು. ಅವರನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಕಾವೇರಿಗಾಗಿ ಕೆರಳಿದ ಚಿತ್ರರಂಗ, ಒಂದಾಗಿ ಹೋರಾಟಕ್ಕಿಳಿದ ತಾರೆಯರು

ಎಸ್ಎಡಿ ನಾಯಕ ಸುರ್ಜಿತ್ ಸಿಂಗ್ ಮೆಗೋವಾಲ್ ಗಂಜಿಯಾನ್ ಗ್ರಾಮದ ಮಾಜಿ ಸರಪಂಚ್ ಆಗಿದ್ದು, ಪ್ರಸ್ತುತ ಅವರ ಪತ್ನಿ ಅದೇ ಹುದ್ದಾಯಲ್ಲಿದ್ದಾರೆ. ಹತ್ಯೆಯ ಹಿಂದಿನ ಕಾರಣ ತಿಳಿದುಬಂದಿಲ್ಲ ಮತ್ತು ಅಪರಿಚಿತ ದುಷ್ಕರ್ಮಿಗಳಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

15 ವರ್ಷ ಹಳೆಯ 5 ಸಾವಿರ ಸರ್ಕಾರಿ ವಾಹನಗಳನ್ನು ನಾಶಪಡಿಸಲು ಅನುಮತಿ

ಬೆಂಗಳೂರು, ಸೆ.29- ಹದಿನೈದು ವರ್ಷಗಳನ್ನು ಪೂರೈಸಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು, ನಿಗಮ, ಮಂಡಳಿಗಳು, ಸ್ಥಳೀಯ ಸಂಸ್ಥೆಗಳಲ್ಲಿನ ಐದು ಸಾವಿರ ವಾಹನಗಳನ್ನು ನಾಶಪಡಿಸಲು ಸರ್ಕಾರ ಅನುಮೋದನೆ ನೀಡಿದೆ.

ರಾಜ್ಯದಲ್ಲಿನ ಹಳೆಯ ವಾಹನಗಳನ್ನು ನಾಶಪಡಿಸಲು ನೊಂದಾಯಿತ ವಾಹನಗಳ ಸ್ಕ್ರಾಪಿಂಗ್ ಪಾಲಿಸಿ 2022ರ ಅಡಿಯಲ್ಲಿ 15 ವರ್ಷ ಪೂರೈಸಿರುವ ಸರ್ಕಾರಿ ಸ್ವಾಮ್ಯದ ವಾಹನಗಳನ್ನು ಆದ್ಯತೆ ಮತ್ತು ಉಪಯೋಗದ ಆಧಾರದ ಮೇಲೆ ಹಂತ-ಹಂತವಾಗಿ ನಾಶಪಡಿಸಲು ಸಾರಿಗೆ ಇಲಾಖೆ ಅನುಮೋದನೆ ನೀಡಿ ಆದೇಶಿಸಿದೆ.

ಅತೀ ಹೆಚ್ಚು ವರ್ಷಗಳನ್ನು ಪೂರೈಸಿರುವ ವಾಹನಗಳನ್ನು ಮೊದಲು ನಾಶ ಪಡಿಸಲು ಆದ್ಯತೆ ನೀಡಬೇಕು ಎಂದು ಸಾರಿಗೆ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ನಾಶಪಡಿಸಲು ಉದ್ದೇಶಿಸಿರುವ ವಾಹನದ ಮೇಲಿನ ಕೊನೆಯ ಒಂದು ವರ್ಷದಲ್ಲಿ ಸಾರಿಗೆ ಇಲಾಖೆಯ ಶಾಸನದ ಕ್ರಮದಡಿಯಲ್ಲಿ ದಾಖಲಾದ ಪ್ರಕರಣದ ದಂಡಗಳು ಮತ್ತು ಪೊಲೀಸ್ ಇಲಾಖೆಯ ಸಂಚಾರ ನಿಯಮ ಉಲ್ಲಂಘಟನೆಯಡಿ ದಾಖಲಾದ ಪ್ರಕರಣಗಳಿಗೆ ಸೀಮಿತಗೊಳಿಸಿ ದಂಡಗಳ ವಸೂಲಾತಿಗಳಿಂದ ವಿನಾಯಿತಿ ನೀಡಲಾಗಿದೆ.

ಕರ್ನಾಟಕ ಬಂದ್ : ಎಲ್ಲೆಲ್ಲಿ ಏನೇನಾಯ್ತು..? ಇಲ್ಲಿದೆ ಕಂಪ್ಲೀಟ್ ಚಿತ್ರಣ

ಈ ವಿನಾಯಿತಿಯೂ ಆದೇಶ ಹೊರಡಿಸಿದ ದಿನಾಂಕದಿಂದ ಒಂದು ವರ್ಷದವರೆಗೆ ಮಾತ್ರ ಅನ್ವಯವಾಗುವಂತೆ ವಿನಾಯಿತಿ ನೀಡಲಾಗಿದೆ. ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಸಲ್ಲಿಸಿದ ಪ್ರಸ್ತಾವನೆ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. 15 ವರ್ಷ ಮೀರಿದ ಸರ್ಕಾರಿ ವಾಹನಗಳ ನೊಂದಾಯಿತ ಪ್ರಮಾಣಪತ್ರವನ್ನು ನವೀಕರಿಸಲು ನಿಷೇಸಲಾಗಿದ್ದು, ಅಂತಹ ವಾಹನಗಳನ್ನು ಕಡ್ಡಾಯವಾಗಿ ಕೇಂದ್ರ ಮೋಟಾರು ವಾಹನಗಳ ನಿಯಮದ ಪ್ರಕಾರ ನಾಶಪಡಿಸಬೇಕಾಗಿದೆ.

ನಾಶಪಡಿಸಲಾದ ವಾಹನಗಳ ಮೇಲಿನ ಬಾಕಿ ಇರುವ ಹೊಣೆಗಾರಿಕೆಗಳನ್ನು ಒಂದು ಬಾರಿಗೆ ಅನ್ವಯವಾಗುವಂತೆ ಒಂದು ವರ್ಷದ ಅವಗೆ ಸೀಮಿತವಾಗಿ ಮನ್ನಾ ಮಾಡುವ ಬಗ್ಗೆ ಕೇಂದ್ರ ಸರ್ಕಾರ ನಿರ್ದೇಶಿಸಿದೆ. ಅಲ್ಲದೆ, ಹಳೆಯ ವಾಹನಗಳನ್ನು ನಾಶಮಾಡಲು ಕೇಂದ್ರ ಸರ್ಕಾರ 200 ಕೋಟಿ ರೂ.ಗಳನ್ನು ಪೊ್ರೀತ್ಸಾಹವನ್ನು ನಿಗದಿಪಡಿಸಿದೆ.

ಮೂರು ಮೈಸ್ಟೋನ್ಗಳ ಗುರಿಗಳನ್ನು ಪೊ್ರೀತ್ಸಾಹ ಧನ ಪಡೆಯಲು ನಿಗದಿಪಡಿಸಿದೆ. ಅದರಂತೆ ರಾಜ್ಯ ಸರ್ಕಾರವೂ ಮೊದಲ ಮೈನ್ಸ್ ಸ್ಟೋರ್ನಲ್ಲಿ ನಿಗದಿ ಪಡಿಸಿರುವ ಗುರಿಗಳನ್ನು ಪೂರ್ಣಗೊಳಿಸಿದರೆ ಕೇಂದ್ರ ಸರ್ಕಾರದ ನೂರು ಕೋಟಿ ಪೊ್ರೀತ್ಸಾಹಕ ಅನುದಾನ ಲಭ್ಯವಾಗಲಿದೆ.

ಕಾವೇರಿ ವಿಚಾರದಲ್ಲಿ ಸರ್ಕಾರಗಳು ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕು : ಶಿವಣ್ಣ

ಬೆಂಗಳೂರು, ಸೆ.29- ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಚರ್ಚೆ ಮಾಡಿ ಕಾವೇರಿ ನದಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹೇಳಿದರು.

ಕರ್ನಾಟಕ ಬಂದ್ ಪ್ರಯುಕ್ತ ಕನ್ನಡ ಚಲನಚಿತ್ರವಾಣಿಜ್ಯ ಮಂಡಳಿ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾವೇರಿ ತಾಯಿ ಇಲ್ಲಿಯೂ ಇರಬೇಕು, ಅಲ್ಲಿಗೂ ಹೋಗಬೇಕು. ಅದಕ್ಕೆ ತಾಯಿಯನ್ನು ದೇವರು ಎನ್ನುತ್ತೇವೆ. ಆಕೆ ಎಲ್ಲ ನೋವನ್ನು ತಡೆದುಕೊಳ್ಳುತ್ತಾಳೆ. ಆ ಶಕ್ತಿ ಆಕೆಗಿದೆ ಎಂದರು.

ಕಾವೇರಿ ಹೋರಾಟಕ್ಕೆ ಚಿತ್ರರಂಗದ ಕಲಾವಿದರು ಬಂದಿಲ್ಲ ಎಂದು ಪ್ರಶ್ನೆ ಮಾಡಲಾಗುತ್ತಿದೆ. ನಾವು ಬಂದು ಏನು ಮಾಡುವುದು. ನಾವು ನಿಮ್ಮಂತೆ ಮನುಷ್ಯರು, ಪ್ರತಿಭಟನೆಗೆ ಬಂದು ನಿಂತುಕೊಳ್ಳಬಹುದಷ್ಟೆ. ನಮಗೆ ಸ್ಟಾರ್ಡಂ ಕೊಟ್ಟಿರುವುದೇ ನೀವು, ಬೇಕಿದ್ದರೆ ಅದನ್ನು ವಾಪಾಸ್ ಕಿತ್ತುಕೊಳ್ಳಿ ಎಂದು ಪರೋಕ್ಷ ಅಸಮಧಾನ ವ್ಯಕ್ತಪಡಿಸಿದರು.

ಅಲ್ಲಿ ಮತ್ತು ಇಲ್ಲಿ ಇರುವ ಎರಡೂ ಸರ್ಕಾರಗಳು ಕುಳಿತು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಇದಕ್ಕೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಅಲ್ಲಿ ಮತ್ತು ಇಲ್ಲಿನ ರೈತರು ಒಂದೇ, ಸಮಸ್ಯೆ ಯಾರಿಗೆ ಆದರೂ ಅದು ನೋವೆ ತಾನೆ. ಚುನಾಯಿತ ಸರ್ಕಾರಗಳು ಕುಳಿತು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ಕಾವೇರಿಗಾಗಿ ಕೆರಳಿದ ಚಿತ್ರರಂಗ, ಒಂದಾಗಿ ಹೋರಾಟಕ್ಕಿಳಿದ ತಾರೆಯರು

ಮೊನ್ನೆ ತಮಿಳುನಾಡಿನ ನಟ ಸಿದ್ಧಾರ್ಥ್ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸುವುದಕ್ಕೆ ಕೆಲವರು ಅಡ್ಡಿ ಪಡಿಸಿದ್ದಾರೆ, ಅದು ಯಾರು ಎಂದು ಗೋತ್ತಿಲ್ಲ. ಆದರೆ ಅವರು ಮಾಡಿದ್ದು ತಪ್ಪು. ನಟ ಸಿದ್ಧಾರ್ಥ್ಗೆ ಇದು ನೋವುಂಟು ಮಾಡಿದೆ, ದಯವಿಟ್ಟು ಕ್ಷಮಿಸಿ ಎಂದು ನಾವು ಅವರ ಕ್ಷಮೆ ಕೇಳುತ್ತೇವೆ. ಕನ್ನಡಿಗರು ಸಮಸ್ಯೆಯನ್ನು ನುಂಗಿ ಬದುಕುತ್ತಾರೆ. ಸಮಸ್ಯೆಯನ್ನು ನಾವು ಸಹಿಸಿಕೊಳ್ಳಬೇಕು, ಅದನ್ನು ಬಗೆಹರಿಸಲು ಯೋಚಿಸಬೇಕು. ಕನ್ನಡಿಗರು ಎಲ್ಲಾ ಭಾಷೆಯ ಚಿತ್ರಗಳನ್ನು ನೋಡುತ್ತಾರೆ ಎಂದರು.

ಹೋರಾಟ ಮಾಡಬೇಕು, ಏನು ಹೋರಾಟ ಮಾಡುವುದು. ಯಾರೇ ಆದರೂ ಪರಿಸ್ಥಿತಿ ನೋಡಿ ಅನುಕೂಲ ಪಡೆದುಕೊಳ್ಳಬಾರದು. ಅದು ಹೋರಾಟದ ಉದ್ದೇಶವಲ್ಲ. ಕಲ್ಲು ಹೊಡೆದರೆ ಅದು ಹೋರಾಟವೇ ಎಂದು ಪ್ರಶ್ನಿಸಿದರು.ಕನ್ನಡಿಗರಿಗೆ ವಿಶ್ವಾದ್ಯಂತ ಗೌರವ ಇದೆ. ಟ್ವಿಟ್ ಮಾಡಿದಾಕ್ಷಣ ಕಾವೇರಿ ಬಗ್ಗೆ ಪ್ರೀತಿ ಇದೆ, ಇಲ್ಲವಾದರೆ ಇಲ್ಲ ಎಂದಲ್ಲ.

ನಾನು ಹೃದಯದಿಂದ ಮಾತನಾಡುತ್ತೇನೆ. ಮೈಂಡ್ನಿಂದ ಮಾತನಾಡುವುದಿಲ್ಲ. ಚಿತ್ರರಂಗದ ಯಾರನ್ನೂ ಬ್ಲೆಮ್ ಮಾಡಬೇಡಿ. ಅವರು ಬಂದಿಲ್ಲ, ಇವರು ಬಂದಿಲ್ಲ ಎಂದು ದೂಷಿಸಬೇಡಿ. ಏನೇ ಮಾಡಿದರೂ ಪ್ರಾಮಾಣಿಕವಾಗಿ ಮಾಡಿ, ನಾವು ಇರುವುದರಿಂದ ಎಲ್ಲರೂ ಬಂದಂತೆ. ತಮಿಳುನಾಡು ಎಲ್ಲಿದೆ ಪಕ್ಕದಲ್ಲೇ ಇದೆ ತಾನೇ. ಇಲ್ಲಿಗೆ ಬರದಿದ್ದರೆ ಎಂದರೆ ಅವರಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲು ಇಷ್ಟ ಇಲ್ಲ ಎಂದಲ್ಲ. ಕೆಲವರು ನಮ್ಮ ಮುಖ ನೋಡಲು ಬರುತ್ತಾರೆ, ಇನ್ನೂ ಕೆಲವರು ಸೆಲಿ ತೆಗೆದುಕೊಳ್ಳಲು ಬರುತ್ತಾರೆ. ನಮಗೂ ಸ್ವಲ್ಪ ಕಾಲಾವಕಾಶ ಕೊಡಿ ಎಂದರು.

ತಮಿಳುನಾಡು ಸರ್ಕಾರದ ಜೊತೆ ಚರ್ಚೆ ಮಾಡಿ, ಕೇಂದ್ರ ಸರ್ಕಾರವೂ ಮಧ್ಯ ಪ್ರವೇಶ ಮಾಡಲಿ. ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆ ಹರಿಸಿ. ವಾರದಲ್ಲಿ ಮಳೆ ಬಂದರೆ ಸಮಸ್ಯೆ ತನ್ನಷ್ಟಕ್ಕೆ ಬಗೆ ಹರಿಯುತ್ತದೆ. ಇದಕ್ಕೆ ಪರಸ್ಪರ ನಂಬಿಕೆ ವಿಶ್ವಾಸ ಬೇಕು ಎಂದು ಹೇಳಿದರು.

ಕಾವೇರಿ ವಿಷಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ : ತೇಜಸ್ವಿ ಸೂರ್ಯ ಆಕ್ರೋಶ

ಬೆಂಗಳೂರು, ಸೆ.29- ತಮಿಳುನಾಡಿಗೆ ಇದೇ ರೀತಿ ನೀರನ್ನು ಬಿಡುಗಡೆ ಮಾಡುತ್ತಿದ್ದರೆ ಮುಂದೆ ಬೆಂಗಳೂರಿನ ಜನಕ್ಕೆ ಕುಡಿಯಲು ನೀರಿರಲ್ಲ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ರಾಜ್ಯದ ಪರಿಸ್ಥಿತಿಯನ್ನು ಪ್ರಸ್ತುತಪಡಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಸಂಸದರ ಮೇಲೆ, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಬೇಡ ಎಂದು ಬೆಂಗಳೂರು ದಕ್ಷಿಣದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾವೇರಿ ಕೊಳ್ಳದ ರೈತರ ಬೆನ್ನಿಗೆ ಬಿಜೆಪಿ ನಿಂತಿದ್ದು, ಕರ್ನಾಟಕ ಬಂದ್ಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ರಾಜ್ಯ ಸರ್ಕಾರ ಸಿಡಬ್ಲ್ಯೂಎಂಎ ಮುಂದೆ ರಾಜ್ಯದ ವಸ್ತುಸ್ಥಿತಿಯನ್ನು ಪ್ರಸ್ತುತಪಡಿಸಲು ವಿಫಲರಾಗಿದ್ದಾರೆ. ಇದರಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿಕೊಳ್ಳುವಂತೆ ಮಾಡಿದ್ದಾರೆ ಕಿಡಿಕಾರಿದರು.

ನಾಡು, ನುಡಿ, ಜಲ ವಿಚಾರದಲ್ಲಿ ನಾವು ರಾಜಕೀಯ ಮಾಡಬಾರದು ಎಂದು ಎಷ್ಟೇ ಎಂದುಕೊಂಡರು ಕೂಡ ರಾಜ್ಯದಲ್ಲಿರುವ ಆಡಳಿತಾರೂಢ ಸರ್ಕಾರ ತನ್ನ ವಿಫಲತೆಯನ್ನು ಮರೆತು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಈ ರಾಜಕೀಯದಿಂದ ರಾಜ್ಯ ರೈತರಿಗಾಗಲಿ, ಬೆಂಗಳೂರಿನ ಒಂದು ಕೋಟಿ ಜನರಿಗಾಗಲಿ ಯಾವುದೇ ರೀತಿಯ ಉಪಯೋಗವಿಲ್ಲ. ರಾಜಕೀವನ್ನು ಬದಿಗೆ ಸರಿಸಿ ಸಂಘಟಿತವಾಗಿ ರಾಜಕೀಯೇತರವಾಗಿ ಹೋರಾಟ ಮಾಡಬೇಕಿರುವ ಅನಿವಾರ್ಯತೆ ಬಂದಿದೆ ಎಂದು ಹೇಳಿದರು.

ಕಾವೇರಿಗಾಗಿ ಕೆರಳಿದ ಚಿತ್ರರಂಗ, ಒಂದಾಗಿ ಹೋರಾಟಕ್ಕಿಳಿದ ತಾರೆಯರು

ರಾಜ್ಯದಲ್ಲಿ ಈ ವರ್ಷ ಶೇ.60ರಷ್ಟು ಮಳೆ ಕೊರತೆಯಾಗಿದೆ. ಕಾವೇರಿ ಕೊಳ್ಳದ 32 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ನಮಗೆ ಮುಂಗಾರಿನಲ್ಲಿ ಮಾತ್ರ ಮಳೆ ಬರುತ್ತದೆ. ತಮಿಳುನಾಡಿನಲ್ಲಿ ಮುಂಗಾರು, ಹಿಂಗಾರು, ನೈರುತ್ಯ ಮಾರುತಗಳಲ್ಲಿಯೂ ಮಳೆ ಬರುತ್ತದೆ. ಅಕ್ಟೋಬರ್, ನವೆಂಬರ್ನಲ್ಲಿ ತಮಿಳುನಾಡಿನಲ್ಲಿ ಮಳೆಯಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಕಾವೇರಿ ನೀರು ನಿರ್ವಹಣಾ ಪ್ರಾಕಾರದ ಮುಂದೆ ಈ ಅಂಶವನ್ನು ಪ್ರಸ್ತುತಪಡಿಸುವಲ್ಲಿ ಪ್ರತಿ ಬಾರಿಯೂ ವಿಫಲವಾಗಿದೆ ಎಂದರು.

ಕೆಲ ದಿನಗಳ ಹಿಂದೆ ಸಿಡಬ್ಲ್ಯೂಆರ್ಸಿ ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂದು ಹೇಳಿದಾಗ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಸ್ವಾಗತಿಸುತ್ತಾರೆ. ಅತ್ತ ಸಿಎಂ ಸಿದ್ದರಾಮಯ್ಯ ಸುಪ್ರೀಂ ಕೋರ್ಟ್ಗೆ ಹೋಗುತ್ತೇವೆ ಎಂದು ಹೇಳುತ್ತಾರೆ. ಕಾವೇರಿ ವಿಚಾರದಲ್ಲಿ ಸಿಎಂ ಹಾಗೂ ಡಿಸಿಎಂ ನಡುವೆ ಸಹಮತ ಇಲ್ಲ. ಇದರಿಂದ ನಮ್ಮ ವಕೀಲರ ತಂಡದ ಮನೋಬಲವೂ ಕುಸಿಯುತ್ತದೆ. ಈ ರೀತಿಯ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದರೆ ಸಿಡಬ್ಲ್ಯೂಆರ್ಸಿ ಅಧಿಕಾರಿಗಳು ಯಾರನ್ನು ನಂಬುತ್ತಾರೆ ಎಂದು ಹೇಳಿದರು.

ಕಾವೇರಿ ನದಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕರ್ನಾಟಕದ ಪರ ಎಂದಿಗೂ ಇದೆ. 2018ರಲ್ಲಿ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದ್ದರಿಂದ ಕರ್ನಾಟಕಕ್ಕೆ 14.75 ಟಿಎಂಸಿ ನೀರನ್ನು ತಮಿಳುನಾಡಿನಿಂದ ಕಡಿತಗೊಳಿಸಿ ನೀಡಲಾಯಿತು. ಸಿಡಬ್ಲ್ಯೂಎಂಎ ಸಭೆಗಳಲ್ಲಿ ರಾಜ್ಯ ಸರ್ಕಾರದ ವಾದಕ್ಕೆ ಕೇಂದ್ರ ಸರ್ಕಾರದ ಪ್ರತಿನಿಗಳು ದನಿಗೂಡಿಸಿದ್ದಾರೆ. ಇದರ ಹಿಂದೆ ರಾಜ್ಯದ 25 ಸಂಸದರ, ಬಿ.ಎಸ್.ಯಡಿಯೂರಪ್ಪ, ಪ್ರಹ್ಲಾದ್ ಜೋಶಿ ಅವರ ಪ್ರಯತ್ನ ಇದೆ. ಆದರೆ, ಇವರು ಸಂಸದರು ಏನು ಮಾಡಿಲ್ಲ ಅಂತಾರೆ ಎಂದು ಕಿಡಿಕಾರಿದರು.

ಮೇಕೆದಾಟಿಗೆ ಅನುಮತಿ ಪಡೆದುಕೊಳ್ಳಿ: ಕಾಂಗ್ರೆಸ್ ಹಾಗೂ ಡಿಎಂಕೆ ಎರಡು ಈಗ ಐಎನ್ಡಿಐಎ ಮೈತ್ರಿಕೂಟದಲ್ಲಿವೆ. ನಿಮ್ಮ ರಾಜಕೀಯ ದೋಸ್ತಿಯನ್ನು ರಾಜ್ಯದ ಹಿತಾಸಕ್ತಿಗಾಗಿ ಬಳಸಿ, ಬಹಳಷ್ಟು ದಶಕಗಳಿಂದ ಇರುವ ಕಾವೇರಿ ವಿವಾದವನ್ನು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರಿಗೆ ಮನವರಿಕೆ ಮಾಡಿಕೊಡಿ. ನೆನೆಗುದಿಗೆ ಬಿದ್ದಿರುವ ಮೇಕೆದಾಟು ಡ್ಯಾಂ ನಿರ್ಮಾಣಕ್ಕೆ ತಮಿಳುನಾಡಿನಿಂದ ಅನುಮತಿ ಕೊಡಿಸಿ. ಆಗ ಕರ್ನಾಟಕದ ಇತಿಹಾಸದಲ್ಲಿ ಕಾವೇರಿ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಿದ ಕ್ರೆಡಿಟ್ ಯಾರದ್ದು ಎಂದರೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರದ್ದಾಗುತ್ತದೆ. ಇದನ್ನು ದಯವಿಟ್ಟು ಮಾಡಿ ನಾವೆಲ್ಲರೂ ನಿಮ್ಮ ಬೆಂಬಲಕ್ಕೆ ಇದ್ದೇವೆ, ಕೇಂದ್ರ ಸರ್ಕಾರ ನಿಮ್ಮ ಜೊತೆ ಇದೆ ಎಂದು ಹೇಳಿದರು.

ಕಾವೇರಿಗಾಗಿ ಕೆರಳಿದ ಚಿತ್ರರಂಗ, ಒಂದಾಗಿ ಹೋರಾಟಕ್ಕಿಳಿದ ತಾರೆಯರು

ಬೆಂಗಳೂರು, ಸೆ.29- ಕರ್ನಾಟಕ ಬಂದ್ ಸಂದರ್ಭದಲ್ಲಿ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಬೆಂಬಲ ವ್ಯಕ್ತಪಡಿಸಿದ್ದ ಕನ್ನಡ ಚಿತ್ರರಂಗವು ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತನ್ನ ಆಕ್ರೋಶ ವ್ಯಕ್ತಪಡಿಸಿದೆ.

ಪ್ರಮುಖ ನಟರಾದ ಶಿವರಾಜ್ಕುಮಾರ್, ಶ್ರೀನಾಥ್, ಶ್ರೀನಿವಾಸಮೂರ್ತಿ, ಸುಂದರ್ರಾಜ್, ಉಪೇಂದ್ರ, ಶರಣ್, ಶ್ರೀಮುರಳಿ, ಪ್ರೇಮ್, ಧ್ರುವ ಸರ್ಜಾ, ದುನಿಯಾ ವಿಜಯ್, ಸೃಜನ್ಲೋಕೇಶ್, ವಶಿಷ್ಠ, ರಘು ಮುಖರ್ಜಿ, ಅನಿರುದ್ಧ, ಕಿಟ್ಟಿ, ನಟಿಯರಾದ ಉಮಾಶ್ರೀ, ಶೃತಿ, ಗಿರೀಜಾ ಲೋಕೇಶ್, ಪೂಜಾಗಾಂ, ಪ್ರಮೀಳಾ ಜೋಶಾಯ್, ಸಂಗೀತ ನಿರ್ದೇಶಕರಾದ ಹಂಸಲೇಖ, ಗುರುಕಿರಣ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್.ಎಂ.ಸುರೇಶ್ ನೇತೃತ್ವದಲ್ಲಿ ಚಿತ್ರರಂಗದ ವಿವಿಧ ಘಟಕಗಳಾದ ನಿರ್ದೇಶಕರ, ನಿರ್ಮಾಪಕರ, ಕಲಾವಿದರ, ಛಾಯಾಗ್ರಾಹಕರು ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಛಾಲೆಂಜಿಂಗ್ ಸ್ಟಾರ್ ದರ್ಶನ್ ನಾನು ಈಗಾಗಲೇ ಮಾತನಾಡಿದ್ದೇನೆ. ಇಂದು ಹಿರಿಯರಾದ ಶಿವಣ್ಣ ಮಾತನಾಡುತ್ತಾರೆ ಎಂದಷ್ಟೆ ಹೇಳಿ ಕುಳಿತರು.ಹಂಸಲೇಖ ಮಾತನಾಡಿ, ಚಿತ್ರೋದ್ಯಮ ಚುಕ್ಕಾಣಿ ಇಲ್ಲದ ಹಡಗಾಗಿದೆ ಎಂದು ಕಳೆದ ತಿಂಗಳು ನಾನು ಹೇಳಿದ್ದೆ. ಹೊಸಬರನ್ನು ಕೇಳುವವರಿಲ್ಲಎಂಬಂತಾಗಿತ್ತು. ಇಂದು ಶಿವಣ್ಣ ಹೋರಾಟದ ವೇದಿಕೆಗೆ ಬಂದಿದ್ದಾರೆ. ಅವಿರೋಧವಾಗಿ ಎಲ್ಲರೂ ಭಾಗಿಯಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಶ್ರೇಷ್ಠ ಮಾರ್ಗ, ಕಲಾವಿದರು ಸಾಂಸ್ಕøತಿಕವಾಗಿ ಪ್ರತಿಭಟನೆ ಮಾಡಿದರೆ ಅದು ಜನಾಕರ್ಷಣೆಯಾಗಿರುತ್ತದೆ ಎಂದರು.

ಹತ್ತನೆ ಶತಮಾನದಲ್ಲಿ ಶಿಲಾಕೃತಿಯಲ್ಲಿ ಕಾವೇರಿ ವಿವಾದದ ಬಗ್ಗೆ ಪ್ರಸ್ತಾಪವಾಗಿದೆ. ಅದರಲ್ಲಿ ಕಾವೇರಿಯನ್ನು ಅಡಮಾನ ಇಟ್ಟುಕೊಂಡಿದ್ದಾನಾ ಎಂದು ಪ್ರಶ್ನಿಸಿರುವುದು ಕಂಡು ಬಂದಿದೆ. ಚಿತ್ರರಂಗ ಕಾವೇರಿ ಸಮಸ್ಯೆ ಹೇಗೆ ಬಗೆ ಹರಿಸಬಹುದು ಎಂಬ ಕುರಿತು ರಚನಾತ್ಮಕ ಚಿತ್ರಕತೆ ಬರೆದು ಅದನ್ನು ಸಿನಿಮಾ ಮೂಲಕ ವಾಸ್ತವತೆಯನ್ನು ಪ್ರಜಾಪ್ರತಿನಿಗಳಿಗೆ ಅರ್ಥ ಮಾಡಿಸಬೇಕು. ಸಂಸತ್ ಮತ್ತು ಸಂಪತ್ತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಕಲಾವಿದರು ಆ ಚಿತ್ರದಲ್ಲಿ ಭಾಗವಹಿಸಬೇಕು. ಚಲನಚಿತ್ರ ಮಂಡಳಿ ಅಂತಹ ಚಿತ್ರ ನಿರ್ಮಾಣ ಮಾಡಲು ಮುಂದಾದರೆ ತಾವು ಚಿತ್ರಕತೆ, ಸಂಗೀತ ನಿರ್ದೇಶನ ಹಾಗು ಹೂಡಿಕೆಯನ್ನು ಮಾಡಲು ಸಿದ್ಧ ಎಂದು ಘೋಷಿಸಿದರು.

ಕುವೆಂಪು ನಾಡನ್ನು ಜೈ ಭಾರತ ಜನನಿಯ ತನುಜಾತೆ ಎಂದು ಹೇಳಿದ್ದಾರೆ. ಈಗ ದೇಶದಲ್ಲಿ 21 ತನುಜಾತೆಯರಿದ್ದಾರೆ. ತಾಯಿ ಅವರೆನ್ನೆಲ್ಲಾ ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗ ಸಿನಿಮಾ ಮಾಡಿ ಮನವರಿಕೆ ಮಾಡಿಕೊಟ್ಟು ದೇಶದಲ್ಲಿ ಅಂತರ್ಜಲ ನದಿ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವ ಕುರಿತು ಮಾದರಿಯಾಗಬೇಕು ಎಂದರು.
ಮೈಸೂರು ದಸರಾವನ್ನು ನಾನು ನಿಮ್ಮೆಲ್ಲರ ಸಂಕೇತವಾಗಿ ಉದ್ಘಾಟಿಸಲಿದ್ದೇನೆ. ದಸರಾದಲ್ಲಿ ದೀಪ ಹಚ್ಚುವ ಕೈನಲ್ಲಿರುವ ಚೆತನ್ಯ ಎಲ್ಲ ಕನ್ನಡ ನಾಡಿನ ಶಕ್ತಿಯಾಗಿದೆ. ಐದು ವರ್ಷ ಜನ ಕಾಡಿಗೆ ಹೋಗುವುದನ್ನು ನಿಲ್ಲಿಸಿದರೆ, ಪ್ರಕೃತಿ ಉಳಿದರೆ ಮಳೆಯಾಗಿ ನೀರಿನ ಸಮಸ್ಯೆ ಬಗೆ ಹರಿಯುತ್ತದೆ ಎಂದು ಹೇಳಿದರು.

ನಿರ್ಮಾಪಕ ಚಿನ್ನೇಗೌಡ ಮಾತನಾಡಿ, ಮದ್ರಾಸ್ ಪ್ರೆಸಿಡೆನ್ಸಿ ಕಾಲದಲ್ಲಿ ಮಾಡಿಕೊಂಡ ಒಪ್ಪಂದ ಭಾಗವಾಗಿ ಕಾವೇರಿ ವಿವಾದ ಜೀವಂತವಾಗಿ ಉಳಿದಿದೆ. ಕನ್ನಡಿಗರು, ಉದಾರಿಗಳು, ನೀರು ತಾನೇ ಹರಿದು ಹೋಗಲಿ ಎಂದು ಇಷ್ಟು ದಿನ ಸಹಿಸಿಕೊಂಡಿದ್ದರು. ಆದರೆ ಮಳೆ ಇಲ್ಲದೆ ನಮಗೆ ಕುಡಿಯುವ ನೀರಿಲ್ಲದ ಕಾಲದಲ್ಲೂ ನೀರು ಬಿಡಬೇಕು ಎಂಬ ವಾದ ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಬದ್ಧತೆಯನ್ನು ತೋರಿಸಿ ವಿವಾದವನ್ನು ಶಾಶ್ವತವಾಗಿ ಬಗೆ ಹರಿಸುವ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.

ಸೂಪರ್ ಸ್ಟಾರ್ ಉಪೇಂದ್ರ ಮಾತನಾಡಿ, ಕಾವೇರಿ ನಮ್ಮದು, ನೀರು ಬಿಡುತ್ತಿಲ್ಲ ಎಂದು ತಮಿಳುನಾಡು ಪ್ರತಿಭಟನೆ ನಡೆಸಬೇಕಿತ್ತು. ಆದರೆ ನೀರು ಬಿಡಬೇಡಿ ಎಂದು ನಾವೇ ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದಿರುವುದು ದುರಂತ ಎಂದರು.

ಶ್ರೀಮುರಳಿ ಮಾತನಾಡಿ, ಕಾವೇರಿ ಸೂಕ್ಷ್ಮ ವಿಚಾರ ನಾವು ಏನೋ ಮಾತನಾಡುವುದು ಅದು ವಿವಾದವಾಗುವುದು ಬೇಡ. ಅದಕ್ಕಾಗಿ ತಿಳಿದವರನ್ನು ಕೇಳಿ ಒಂದಿಷ್ಟು ಬರೆದುಕೊಂಡು ಬಂದಿದ್ದೇನೆ. ಅದನ್ನು ಓದಿ ಬಿಡುತ್ತೇನೆ ಎಂದು ಹೇಳಿ, ಕಾವೇರಿ ನಮ್ಮ ಹಕ್ಕು, ಮೊದಲು ನಮ್ಮ ನಾಡು, ನಮ್ಮ ರೈತರು ಮುಖ್ಯ, ಅನ್ಯ ಭಾಷೆ ಮತ್ತು ರಾಜ್ಯವನ್ನು ಪ್ರೀತಿಸುತ್ತೇವೆ. ಆದರೆ ನಮ್ಮ ನಾಡುನುಡಿಗೆ ಮೊದಲ ಆದ್ಯತೆ. ರಾಜಕಾರಣಿಗಳು ಸಮಸ್ಯೆ ಬಗೆಹರಿಸುತ್ತಿಲ್ಲ. ನಮಗೆ ನೀರಿಲ್ಲದಿದ್ದಾಗ ತಮಿಳುನಾಡಿಗೆ ಹರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಶರಣ್ ಅವರು, ನಾಡಿಗೆ ಪದೇ ಪದೇ ಈ ರೀತಿಯ ಪರಿಸ್ಥಿತಿ ಬರುತ್ತಿದೆ. ಆದರೆ ನಮ್ಮ ಅನಿವಾರ್ಯತೆಯನ್ನು ಮುಟ್ಟಿಸುವ ಕೆಲಸ ಮಾಡಬೇಕು. ನಾಡಿನ ಹಿತಾಸಕ್ತಿಗೆ ಧಕ್ಕೆ ಬಂದಾಗ ಎಲ್ಲಾ ಸಂಘಟನೆಗಳ ಜೊತೆ ಚಿತ್ರರಂಗ ನಿಂತಿದೆ ಎಂದು ಹೇಳಿದರು.
ಸೃಜನ್ಲೋಕೇಶ್, ನೀರಿನ ಸಮಸ್ಯೆ ಎಲ್ಲರಿಗೂ ಗೊತ್ತಿದೆ. ಪ್ರಕೃತಿ ವೈಪರಿತ್ಯ, ಮಳೆಯ ಅಭಾವದಿಂದ ವಿವಾದ ಹೆಚ್ಚಾಗುತ್ತಿದೆ. ನೀರಿಗಾಗಿ ಪ್ರತಿಭಟನೆ ನಡೆಸುವ ಜೊತೆಗೆ ಪರಿಸರ ಸಂರಕ್ಷಣೆ ಸಲುವಾಗಿಯೂ ಪ್ರತಿಭಟನೆ ನಡೆಸಬೇಕಿದೆ. ಸಾವಿರಾರು ಮರ ನೆಟ್ಟರೆ ಮಳೆ ಹೆಚ್ಚಾಗುತ್ತದೆ, ಸಮಸ್ಯೆ ತನ್ನಷ್ಟಕ್ಕೆ ತಾನೇ ಬಗೆ ಹರಿಯುತ್ತದೆ. ಕಾವೇರಿ ನಮ್ಮದು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರೂ ಆಗಿರುವ ಹಿರಿನ ನಟಿ ಉಮಾಶ್ರೀ, ಹಿಂದೆ ಕನ್ನಡ ನಾಡು ನುಡಿ ಪರವಾದ ಹೋರಾಟದಲ್ಲಿ ವರನಟ ಡಾ.ರಾಜ್ಕುಮಾರ್ ಅವರ ಉಪಸ್ಥಿತಿ ಆನೆ ಬಲ ತಂದುಕೊಡುತ್ತಿತ್ತು. ಈ ಹಂತದಲ್ಲಿ ತಮಿಳುನಾಡಿನ ಕುರಿತು ಯಾವುದೇ ಕನಿಕರ ಅಗತ್ಯವಿಲ್ಲ. ನಮ್ಮ ರೈತರ ರಕ್ಷಣೆ ಹಾಗೂ ಕುಡಿಯುವ ನೀರಿನ ಅಗತ್ಯ ಬಹಳ ಮುಖ್ಯ. ಸಂಕಷ್ಟ ಸೂತ್ರ ಇಲ್ಲದ ಕಾರಣ ಮಳೆ ಇಲ್ಲದಾಗ ಕಾವೇರಿ ವಿವಾದ ಬುಗಿಲೇಳುತ್ತಿದೆ.

ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಸಂಧಾನ ಸೂತ್ರ ರೂಪಿಸಬೇಕು. ರಾಜಕಾರಣ ಬದಿಗಿಟ್ಟು ಎಲ್ಲರೂ ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಮನವಿ ಮಾಡಿದರು. ಶೃತಿ ಮಾತನಾಡಿ, ಈ ಪ್ರತಿಭಟನೆ ಪ್ರತಿಷ್ಠೆಯ ಸಂಕೇತ ಅಲ್ಲ, ಒಗ್ಗಟ್ಟಿನ ಪ್ರದರ್ಶನವಾಗಿದೆ. ಕಾವೇರಿ ಎಂದರೆ ತಮಿಳುನಾಡು ಮೊದಲು ಅರ್ಜಿ ಹಾಕುತ್ತದೆ, ನಂತರ ನಾವು ಅದಕ್ಕೆ ಸ್ಪಷ್ಟನೆ ಕೊಡುವಂತಾಗಿದೆ. ವಾಸ್ತವವನ್ನು ಮನವರಿಕೆ ಮಾಡಿಕೊಡಲು ನಮಗೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ನಟಿ ಅನುಪ್ರಭಾಕರ್ ಮಾತನಾಡಿ, ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಕಾರಗಳು ವಾಸ್ತವ ಪರಿಸ್ಥಿತಿಯನ್ನು ಮನಗಂಡು ಕಾವೇರಿ ವಿಷಯದಲ್ಲಿ ಆದೇಶ ನೀಡಬೇಕು ಎಂದು ಮನವಿ ಮಾಡಿದರು. ಗಿರೀಜಾ ಲೋಕೇಶ್ ಮಾತನಾಡಿ, ಕೆಆರ್ಎಸ್ ಅಣೆಕಟ್ಟು ಇರುವ ಮಂಡ್ಯದಲ್ಲೇ ಜನ ನೀರು ಸಂಗ್ರಹಿಸಿಟ್ಟುಕೊಳ್ಳಲು ಪ್ರತಿಮನೆಯಲ್ಲೂ ಡ್ರಮ್ ಇಟ್ಟುಕೊಂಡಿದ್ದಾರೆ.

ಅಣೆಕಟ್ಟೆಯ ಸಮೀಪದಲ್ಲೇ ಇಂತಹ ಪರಿತಸ್ಥಿತಿ ಯಾಕೆ ಎಂದು ಕೇಳಿದರೆ ಎರಡು ಮೂರು ದಿನಕ್ಕೊಮ್ಮೆ ನೀರು ಬಿಡುತ್ತಾರೆ ಎಂದು ಅಲ್ಲಿನ ಜನ ಹೇಳುತ್ತಾರೆ. ಇಂತಹ ಸಂಕಷ್ಟ ಇರುವಾಗ ತಮಿಳುನಾಡಿಗೆ ಹೇಗೆ ನೀರು ಬೀಡಲು ಹೇಗೆ ಸಾಧ್ಯ ಎಂದರು.

“ಬೆಂಗಳೂರಲ್ಲಿ ಬಂದ್ ಸಂಪೂರ್ಣ ಶಾಂತಿಯುತವಾಗಿದೆ”

ಬೆಂಗಳೂರು, ಸೆ.29- ನಗರದಲ್ಲಿ ಬಂದ್ ಸಂಪೂರ್ಣ ಶಾಂತಿಯುತವಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ತಿಳಿಸಿದರು. ಈ ಸಂಜೆ ಯೊಂದಿಗೆ ಮಾತನಾಡಿದ ಅವರು, ಮುಂಜಾಗ್ರತಾ ಕ್ರಮವಾಗಿ ಕನ್ನಡ ಪರ ಸಂಘಟನೆಗಳ ಕೆಲವು ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಗಸ್ತಿನಲ್ಲಿದ್ದಾರೆ, ಇದುವರೆಗೂ ಯಾವುದೇ ರೀತಿಯ ಸಣ್ಣ ಪುಟ್ಟ ಘಟನೆಗಳೂ ನಡೆದಿಲ್ಲ, ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಟೌನ್ ಹಾಲ್ ಮುಂಭಾಗ ರ್ಯಾಲಿ ನಡೆಸಲು ಮುಂದಾದ ವಾಟಾಳ್ ನಾಗರಾಜ್, ಸಾರಾ ಗೋವಿಂದು ಸೇರಿದಂತೆ ಹಲವು ಮುಖಂಡರನ್ನು ವಶಕ್ಕೆ ಪಡೆದು ಫ್ರೀಡಂ ಪಾರ್ಕ್ಗೆ ಕರೆದೊಯ್ದಿದ್ದಾರೆ ಎಂದರು. ನಗರದಾದ್ಯಂತ ರಾತ್ರಿ 12 ಗಂಟೆಯವರೆಗೆ 144 ಸೆಕ್ಷನ್ ಜಾರಿಯಲ್ಲಿರುತ್ತದೆ ಎಂದು ಆಯುಕ್ತರು ತಿಳಿಸಿದರು.