Friday, November 7, 2025
Home Blog Page 3

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-11-2025)

ನಿತ್ಯ ನೀತಿ : ಪ್ರಜಾಪ್ರಭುತ್ವದಲ್ಲಿ ಬಲಿಷ್ಠನಿಗೆ ಇರುವ ಅವಕಾಶಗಳು ದುರ್ಬಲನಿಗೂ ಇರಬೇಕು. ಅದೇ ನಿಜವಾದ ಪ್ರಜಾಪ್ರಭುತ್ವ. – ಮಹಾತ ಗಾಂಧೀಜಿ

ಪಂಚಾಂಗ : ಗುರುವಾರ, 06-11-2025
ಶೋಭಕೃತ್‌ನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು:ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಶುಕ್ಲ / ತಿಥಿ: ಪ್ರತಿಪದಾ / ನಕ್ಷತ್ರ: ಭರಣಿ / ಯೋಗ: ವೃತೀಪಾತ / ಕರಣ: ತೈತಿಲ
ಸೂರ್ಯೋದಯ – ಬೆ.06.15
ಸೂರ್ಯಾಸ್ತ – 5.52
ರಾಹುಕಾಲ – 1.30-3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00-10.30

ರಾಶಿಭವಿಷ್ಯ :
ಮೇಷ
:ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
ವೃಷಭ: ದಿನವು ಸಂತೋಷದಿಂದ ಪ್ರಾರಂಭವಾಗಲಿದೆ.
ಮಿಥುನ: ನೀವು ಮಾಡುವ ಕೆಲಸ-ಕಾರ್ಯಗಳಿಗೆ ಮನೆಯ ಸದಸ್ಯರ ಬೆಂಬಲ ದೊರೆಯಲಿದೆ.

ಕಟಕ: ಕಚೇರಿಯಲ್ಲಿ ಕೆಲವು ಹೊಸ ಜವಾಬ್ದಾರಿಗಳು ನಿಮ್ಮ ಮೇಲೆ ಬೀಳಲಿವೆ.
ಸಿಂಹ: ವ್ಯಾಪಾರದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು ಸಂಪೂರ್ಣ ವಾಗಿ ಬೆಂಬಲಿಸುವರು.
ಕನ್ಯಾ: ಆದಾಯ ಹೆಚ್ಚಲಿದೆ.

ತುಲಾ: ಉದ್ಯೋಗದಲ್ಲಿರುವವರು ಕೆಲಸದಲ್ಲಿನ ಅಡೆತಡೆಗಳಿಂದ ತೊಂದರೆಗೊಳಗಾಗುವರು.
ವೃಶ್ಚಿಕ: ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಧನುಸ್ಸು: ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರಿಗೆ ನಿರೀಕ್ಷಿತ ಲಾಭ ಸಿಗಲಿದೆ.

ಮಕರ: ಗಂಟಲು ಮತ್ತು ಹೊಟ್ಟೆಗೆ ಸಂಬಂ ಸಿದ ಆರೋಗ್ಯ ಸಮಸ್ಯೆಗಳು ಕಾಡಬಹುದು.
ಕುಂಭ: ಆದಾಯದಲ್ಲಿನ ಸ್ವಲ್ಪ ಹಣ ಉಳಿಯಲಿದ್ದು, ಎಚ್ಚರಿಕೆಯಿಂದ ವಿನಿಯೋಗಿಸಿ.
ಮೀನ: ಬಂಧುಗಳ ಆಗಮನದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆರೋಗ್ಯ ಸುಧಾರಣೆಗಾಗಿ ಯೋಗ ಮಾಡಿ.

37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಕೊಹ್ಲಿ

ನವದೆಹಲಿ, ನ. 5– ಟೀಮ್‌ ಇಂಡಿಯಾದ ಮಾಜಿ ನಾಯಕ, ದಾಖಲೆಗಳ ಸರದಾರ ವಿರಾಟ್‌ ಕೊಹ್ಲಿ ಅವರು ಇಂದು ತಮ 37ನೇ ಜನದಿನದ ಸಂಭ್ರಮವನ್ನು ಪತ್ನಿ ಅನುಷ್ಕಾ ಶರ್ಮಾ ಹಾಗೂ ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದಾರೆ.

ವಿರಾಟ್‌ ಕೊಹ್ಲಿ ಅವರ ಹುಟ್ಟುಹಬ್ಬಕ್ಕೆ ಮಾಜಿ ಆಟಗಾರರಾದ ಎಬಿಡಿ ವಿಲಿಯರ್ಸ್‌, ಸುರೇಶ್‌ರೈನಾ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿ, ಆಟಗಾರರು ಸೇರಿದಂತೆ ಹಲವು ದಿಗ್ಗಜರು ಶುಭ ಕೋರಿದ್ದಾರೆ. ಅಂಡರ್‌ 18 ವಿಶ್ವಕಪ್‌ ಗೆದ್ದ ನಂತರ ಇಡೀ ವಿಶ್ವವೇ ತಮತ್ತ ತಿರುಗಿ ನೋಡುವಂತೆ ಮಾಡಿದ ವಿರಾಟ್‌ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲೂ ಟೀಮ್‌ ಇಂಡಿಯಾ ಏಕದಿನ ಹಾಗೂ ಟ್ವೆಂಟಿ-20 ವಿಶ್ವಕಪ್‌ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.

ಕ್ರಿಕೆಟ್‌ ಜಗತ್ತಿನಲ್ಲಿ ದಾಖಲೆಯ ಸರದಾರನೆಂದೇ ಬಿಂಬಿಸಿಕೊಂಡಿರುವ ವಿರಾಟ್‌ ಕೊಹ್ಲಿ ಕೆಲವು ಅಚ್ಚಳಿಯದೆ ಇರುವ ದಾಖಲೆಗಳನ್ನು ತಮ ಕ್ರಿಕೆಟ್‌ ಬತ್ತಳಿಕೆಗೆ ಸೇರಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 51 ಶತಕಗಳಿಸಿದ ಏಕೈಕ ಆಟಗಾರ ಎಂಬ ದಾಖಲೆಗೆ ಭಾಜರಾಗಿರುವ ಕಿಂಗ್‌ ಕೊಹ್ಲಿ, ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ (49) ಅವರ ದಾಖಲೆಯನ್ನು ಮುರಿದು ಗಮನ ಸೆಳೆದಿದ್ದಾರೆ.

ಚೇಸಿಂಗ್‌ ಮಾಸ್ಟರ್‌ ಎನಿಸಿಕೊಂಡಿರುವ ಕೊಹ್ಲಿ ಚೇಸಿಂಗ್‌ ವೇಳೆ 14,234 ರನ್‌ ಗಳಿಸಿದ್ದು, ಕುಮಾರಸಂಗಾಕ್ಕರ (18,426 ರನ್‌) ನಂತರದ ಸ್ಥಾನದಲ್ಲಿದ್ದರೆ, 2023ರ ಏಕದಿನ ವಿಶ್ವಕಪ್‌ 765 ರನ್‌ ಗಳಿಸಿರುವುದು ಗರಿಷ್ಠ ರನ್‌ ಆಗಿದ್ದು, ಇನ್ನೂ ಹಲವು ದಾಖಲೆಗಳಿಗೆ ಕೊಹ್ಲಿಯೇ ಸರದಾರನಾಗಿದ್ದಾನೆ.

ವರ್ಜೀನಿಯಾ ಲೆಫ್ಟಿನೆಂಟ್‌ ಗವರ್ನರ್‌ ಆದ ಭಾರತೀಯ ಮಹಿಳೆ

ನ್ಯೂಯಾರ್ಕ್‌, ನ. 5 (ಪಿಟಿಐ)– ಭಾರತ ಮೂಲದ ಅಮೇರಿಕನ್‌ ರಾಜಕಾರಣಿ ಗಜಲಾ ಹಶ್ಮಿ ವರ್ಜೀನಿಯಾದ ಲೆಫ್ಟಿನೆಂಟ್‌ ಗವರ್ನರ್‌ ಆಗಿ ಆಯ್ಕೆಯಾಗಿದ್ದಾರೆ, ರಾಜ್ಯದ ಉನ್ನತ ರಾಜಕೀಯ ಹುದ್ದೆಗೆ ಆಯ್ಕೆಯಾದ ಮೊದಲ ಮುಸ್ಲಿಂ ಮತ್ತು ದಕ್ಷಿಣ ಏಷ್ಯಾದ ಅಮೇರಿಕನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಡೆಮೋಕ್ರಾಟ್‌ ಪಕ್ಷದ 61 ವರ್ಷದ ಹಶ್ಮಿ 1,465,634 ಮತಗಳನ್ನು (ಶೇಕಡಾ 54.2) ಗಳಿಸಿದ್ದಾರೆ, ಅವರ ರಿಪಬ್ಲಿಕನ್‌ ಪ್ರತಿಸ್ಪರ್ಧಿ ಜಾನ್‌ ರೀಡ್‌ 1,232,242 ಮತಗಳನ್ನು ಗಳಿಸಿ 79 ಪ್ರತಿಶತ ಮತಗಳನ್ನು ಗಳಿಸಿದ್ದಾರೆ.

ಚುನಾವಣಾ ದಿನದಂದು ವಿಜಯಶಾಲಿಯಾಗಿ ಹೊರಹೊಮ್ಮಿದ ವರ್ಜೀನಿಯಾ ಸ್ಟೇಟ್‌ ಸೆನೆಟರ್‌ 2025 ರ ಚುನಾವಣೆಯಲ್ಲಿ ರಾಷ್ಟ್ರವ್ಯಾಪಿ ಪ್ರಮುಖ ಸ್ಥಾನಗಳಿಗೆ ಸ್ಪರ್ಧಿಸಿದ್ದ 30 ಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ನರು ಮತ್ತು ದಕ್ಷಿಣ ಏಷ್ಯಾದ ಅಭ್ಯರ್ಥಿಗಳಲ್ಲಿ ಒಬ್ಬರು. ಹಶ್ಮಿ ಅವರು ಉನ್ನತ ರಾಜ್ಯ ಹುದ್ದೆಗೆ ಸ್ಪರ್ಧಿಸುತ್ತಿದ್ದಾಗ ಅವರ ಚುನಾವಣೆಯನ್ನು ಹೆಚ್ಚು ಗಮನ ಸೆಳೆಯಲಾಯಿತು.

ಹಶ್ಮಿ ಅವರು ವರ್ಜೀನಿಯಾ ಸೆನೆಟ್‌ನಲ್ಲಿ ಸೇವೆ ಸಲ್ಲಿಸಿದ ಮೊದಲ ಮುಸ್ಲಿಂ ಮತ್ತು ಮೊದಲ ದಕ್ಷಿಣ ಏಷ್ಯಾದ ಅಮೇರಿಕನ್‌‍.ಒಬ್ಬ ಅನುಭವಿ ಶಿಕ್ಷಕಿ ಮತ್ತು ಸಮಗ್ರ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯದ ಪ್ರತಿಪಾದಕಿಯಾಗಿ, ಅವರ ಶಾಸಕಾಂಗ ಆದ್ಯತೆಗಳಲ್ಲಿ ಸಾರ್ವಜನಿಕ ಶಿಕ್ಷಣ, ಮತದಾನದ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಸಂರಕ್ಷಣೆ, ಸಂತಾನೋತ್ಪತ್ತಿ ಸ್ವಾತಂತ್ರ್ಯ, ಬಂದೂಕು ಹಿಂಸಾಚಾರ ತಡೆಗಟ್ಟುವಿಕೆ, ಪರಿಸರ, ವಸತಿ ಮತ್ತು ಕೈಗೆಟುಕುವ ಆರೋಗ್ಯ ಸೇವೆ ಸೇರಿವೆ ಎಂದು ಅವರ ಅಧಿಕೃತ ಪ್ರೊಫೈಲ್‌ ತಿಳಿಸಿದೆ.

ಸಮುದಾಯ ಸಂಸ್ಥೆ ಇಂಡಿಯನ್‌ ಅಮೇರಿಕನ್‌ ಇಂಪ್ಯಾಕ್ಟ್‌ ಫಂಡ್‌ ವರ್ಜೀನಿಯಾದ ಲೆಫ್ಟಿನೆಂಟ್‌ ಗವರ್ನರ್‌ ಸಾರ್ವತ್ರಿಕ ಚುನಾವಣೆಯಲ್ಲಿ ಹಶ್ಮಿ ಅವರ ಐತಿಹಾಸಿಕ ವಿಜಯಕ್ಕಾಗಿ ಅವರನ್ನು ಅಭಿನಂದಿಸಿತು.ತಡೆಗೋಡೆ ಮುರಿಯುವ ನಾಯಕರನ್ನು ಆಯ್ಕೆ ಮಾಡುವ ಬದ್ಧತೆಯ ಭಾಗವಾಗಿ, ಮತದಾರರನ್ನು ಸಜ್ಜುಗೊಳಿಸಲು ಮತ್ತು ಸರ್ಕಾರದ ಪ್ರತಿಯೊಂದು ಹಂತದಲ್ಲೂ ಪ್ರಾತಿನಿಧ್ಯವನ್ನು ಬಲಪಡಿಸಲು ಹಶ್ಮಿ ಅವರ ಅಭಿಯಾನದಲ್ಲಿ 175,000 ಹೂಡಿಕೆ ಮಾಡಿದೆ ಎಂದು ಇಂಪ್ಯಾಕ್ಟ್‌ ಹೇಳಿದೆ.

ಇಂಡಿಯನ್‌ ಅಮೇರಿಕನ್‌ ಇಂಪ್ಯಾಕ್ಟ್‌ ಫಂಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಚಿಂತನ್‌ ಪಟೇಲ್‌ ಹಶ್ಮಿ ಅವರ ವಿಜಯವನ್ನು ಸಮುದಾಯ, ಕಾಮನ್‌ವೆಲ್ತ್‌‍ ಮತ್ತು ಪ್ರಜಾಪ್ರಭುತ್ವಕ್ಕೆ ಒಂದು ಹೆಗ್ಗುರುತು ಕ್ಷಣ ಎಂದು ಬಣ್ಣಿಸಿದರು. ವಲಸಿಗ, ಶಿಕ್ಷಕಿ ಮತ್ತು ದಣಿವರಿಯದ ವಕೀಲೆ, ಅವರು ವರ್ಜೀನಿಯಾದಾದ್ಯಂತ ದುಡಿಯುವ ಕುಟುಂಬಗಳಿಗೆ ಅವಕಾಶಗಳನ್ನು ವಿಸ್ತರಿಸಲು ಮತ್ತು ಫಲಿತಾಂಶಗಳನ್ನು ನೀಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಸಂತಾನೋತ್ಪತ್ತಿ ಸ್ವಾತಂತ್ರ್ಯ ಮತ್ತು ಕೈಗೆಟುಕುವ ಆರೋಗ್ಯ ರಕ್ಷಣೆಯಿಂದ ಸಾರ್ವಜನಿಕ ಶಿಕ್ಷಣ ಮತ್ತು ವಸತಿ ಸಮಾನತೆಯವರೆಗೆ, ಗಜಲಾ ಹಶ್ಮಿ ವರ್ಜೀನಿಯನ್ನರಿಗೆ ಹೆಚ್ಚು ಮುಖ್ಯವಾದ ವಿಷಯಗಳ ಬಗ್ಗೆ ಮುನ್ನಡೆಸಿದ್ದಾರೆ ಎಂದು ಪಟೇಲ್‌ ಹೇಳಿದರು.ಹಶ್ಮಿ ಅವರು ನವೆಂಬರ್‌ 2019 ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಆಯ್ಕೆಯಾದರು, ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷರನ್ನು ಅಸಮಾಧಾನಗೊಳಿಸಿದರು ಮತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಡೆಮೋಕ್ರಾಟ್‌ಗಳಿಗೆ ಬಹುಮತವನ್ನು ನೀಡಿದರು ಮತ್ತು ರಾಜಕೀಯ ಸ್ಥಾಪನೆಗೆ ಆಘಾತ ನೀಡಿದರು.

ಇಂಡಿಯನ್‌ ಅಮೇರಿಕನ್‌ ಇಂಪ್ಯಾಕ್ಟ್‌ ಫಂಡ್‌ ಹಶ್ಮಿ 2019 ರಲ್ಲಿ ತನ್ನ ಗೆಲುವಿನೊಂದಿಗೆ ಇತಿಹಾಸ ನಿರ್ಮಿಸಿದರು, ರಿಪಬ್ಲಿಕನ್‌ ಹಿಡಿತದಲ್ಲಿರುವ ಸ್ಥಾನವನ್ನು ಉರುಳಿಸಿ ಡೆಮೋಕ್ರಾಟ್‌ಗಳು ರಾಜ್ಯ ಸೆನೆಟ್‌ನ ನಿಯಂತ್ರಣವನ್ನು ಪಡೆಯಲು ಸಹಾಯ ಮಾಡಿದರು ಎಂದು ಗಮನಿಸಿದರು.

ಇಂದು ರಾತ್ರಿ ಅವರು ವರ್ಜೀನಿಯಾದ ಮೊದಲ ದಕ್ಷಿಣ ಏಷ್ಯಾದ ಅಮೇರಿಕನ್‌ ಮತ್ತು ಮುಸ್ಲಿಂ ಲೆಫ್ಟಿನೆಂಟ್‌ ಗವರ್ನರ್‌ ಆಗಿ ಮತ್ತೆ ಇತಿಹಾಸ ನಿರ್ಮಿಸಿದ್ದಾರೆ. ಇಂಪ್ಯಾಕ್ಟ್‌ ಮೊದಲಿನಿಂದಲೂ ಅವರನ್ನು ಬೆಂಬಲಿಸಲು ಹೆಮ್ಮೆಪಡುತ್ತದೆ ಏಕೆಂದರೆ ನಮಗೆ ಏನು ಅಪಾಯದಲ್ಲಿದೆ ಎಂದು ತಿಳಿದಿತ್ತು: ನಮ್ಮ ಹಕ್ಕುಗಳನ್ನು ರಕ್ಷಿಸುವುದು, ಉಗ್ರವಾದದಿಂದ ನಮ್ಮ ಸಮುದಾಯಗಳನ್ನು ರಕ್ಷಿಸುವುದು ಮತ್ತು ವರ್ಜೀನಿಯಾವನ್ನು ಮನೆ ಎಂದು ಕರೆಯುವ ಎಲ್ಲರಿಗೂ ಅವಕಾಶವನ್ನು ವಿಸ್ತರಿಸುವುದು.

2024 ರಲ್ಲಿ, ಹಶ್ಮಿ ಅವರನ್ನು ಸೆನೆಟ್‌ ಶಿಕ್ಷಣ ಮತ್ತು ಆರೋಗ್ಯ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ರಾಜ್ಯ ಸೆನೆಟರ್‌ ಆಗಿ, ಗಜಾಲಾ ಅವರು ವಸತಿ, ಶಿಕ್ಷಣ, ಆರೋಗ್ಯ ರಕ್ಷಣೆ, ಪರಿಸರ ನ್ಯಾಯ ಮತ್ತು ಇನ್ನೂ ಹೆಚ್ಚಿನವುಗಳಲ್ಲಿನ ಅಸಮಾನತೆಯ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವ ಮೂಲಕ ಇತರರ ಜೀವನವನ್ನು ಸುಧಾರಿಸಲು ತಮ್ಮ ಪ್ರಯತ್ನಗಳನ್ನು ಮೀಸಲಿಟ್ಟಿದ್ದಾರೆ.ಹಶ್ಮಿ ನಾಲ್ಕು ವರ್ಷದವಳಾಗಿದ್ದಾಗ ಭಾರತದಿಂದ ತನ್ನ ತಾಯಿ ಮತ್ತು ಅಣ್ಣನೊಂದಿಗೆ ಅಮೆರಿಕಕ್ಕೆ ವಲಸೆ ಬಂದರು.

ಬೆಂಗಳೂರಿನ ಇಂದಿನ ಕ್ರೈಂ ಸುದ್ದಿಗಳು

ತಲೆ ಮರೆಸಿಕೊಂಡಿದ್ದ ಮನೆಗಳ್ಳನ ಬಂಧನ, 23.64 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
ಬೆಂಗಳೂರು,ನ.5- ಬರೋಬ್ಬರಿ 150 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಕುಖ್ಯಾತ ಮನೆಗಳ್ಳನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿ 23.64 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ಮೈಸೂರಿನ ನಿವಾಸಿ ಸೈಯದ್‌ ಅಸ್ಲಂ ಅಲಿಯಾಸ್‌‍ ಅಸ್ಲಂ (40) ಬಂಧಿತ ಆರೋಪಿ. ತಮ ವಿಭಾಗದ ಪೊಲೀಸ್‌‍ ಠಾಣೆಗಳ ಸ್ವತ್ತು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ವಾರಂಟ್‌ ಜಾರಿ ಮಾಡಲು ಈಶಾನ್ಯ ವಿಭಾಗದ ಉಪ ಪೊಲೀಸ್‌‍ ಆಯುಕ್ತರಾದ ಸಜೀತ್‌ ಅವರು ಸೂಚಿಸಿದ್ದರು.

ಚಿಕ್ಕಬೆಟ್ಟಹಳ್ಳಿಯ ಸಾಯಿ ಲೇಔಟ್‌ನ ನಿವಾಸಿ ಸರಸ್ವತಿ ಎಂಬುವವರು ರೂಮಿನ ಕಿಟಕಿ ತೆಗೆದು ಮಂಚದ ಮೇಲೆ ಮಲಗಿದ್ದಾಗ ಮಧ್ಯರಾತ್ರಿ 2 ಗಂಟೆ ಸುಮಾರಿನಲ್ಲಿ ಕಿಟಕಿ ಮೂಲಕ ಯಾರೋ ಕೈತೋರಿಸಿ ಕೊರಳಿಗೆ ಕೈ ಹಾಕಿದ್ದಾರೆ.ಏನೋ ಸ್ಪರ್ಷಿಸಿದಂತೆ ಆಗಿ ತಕ್ಷಣ ಅವರು ಎಚ್ಚರಗೊಂಡು ನೋಡಿಕೊಂಡಾಗ ಕೊರಳಲ್ಲಿದ್ದ ಮಾಂಗಲ್ಯ ಸರ ಇರಲಿಲ್ಲ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಅದರಂತೆ ಈ ತಂಡಗಳು ಕಾರ್ಯಾ ಚರಣೆ ನಡೆಸಿ ಮಾಹಿತಿಗಳನ್ನು ಕಲೆಹಾಕಿ, ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಆಧಾರದ ಮೇಲೆ ಈಗಾಗಲೇ ನಗರ, ಮೈಸೂರು, ಚಿಕ್ಕಮಗಳೂರು, ಹಾಸನ, ಮಂಡ್ಯ , ಶಿವಮೊಗ್ಗ, ದಾವಣಗೆರೆ, ನಂಜನಗೂಡು, ಕನಕಪುರ ಸೇರಿದಂತೆ ಇನ್ನೂ ಹಲವು ಕಡೆಗಳಲ್ಲಿ ರಾತ್ರಿ ವೇಳೆ ಮನೆಗಳ್ಳತನ ಮಾಡಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದಿರುವ ಆರೋಪಿ ಸೈಯದ್‌ ಅಸ್ಲಂ ನನ್ನು ಬಂಧಿಸಿವೆ.

ಆರೋಪಿಯನ್ನು ಸುದೀರ್ಘ ವಿಚಾರಣೆ ಒಳಪಡಿಸಿ ಕನ್ನ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ 22.80 ಲಕ್ಷ ರೂ. ಬೆಲೆ ಬಾಳುವ 120 ಗ್ರಾಂ ಚಿನ್ನಾಭರಣಗಳು, 4 ಕೆಜಿ 292 ಗ್ರಾಂ ಬೆಳ್ಳಿ ವಸ್ತುಗಳು, 2 ಮೊಬೈಲ್‌, 3 ಕೈಗಡಿಯಾರ ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಬಂಧನದಿಂದ ವಿದ್ಯಾರಣ್ಯಪುರ 2, ಬಾಗಲಗುಂಟೆ 1 ಹಾಗೂ ಸೋಲದೇವನಹಳ್ಳಿಯ 3 ಪ್ರಕರಣಗಳು ಪತ್ತೆಯಾದಂತಾ ಗಿವೆ.ಈ ಕಾರ್ಯಾಚರಣೆಯಲ್ಲಿ ಶ್ರಮಿಸಿದ ಇನ್‌್ಸಪೆಕ್ಟರ್‌ ಶಿವಸ್ವಾಮಿ, ಸಬ್‌ ಇನ್‌್ಸಪೆಕ್ಟರ್‌ಗಳಾದ ಪ್ರಭು, ಇಬ್ರಾಹಿಂ ಹಾಗೂ ಸಿಬ್ಬಂದಿಗಳನ್ನು ಮೇಲಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಆರೋಪಿ ವಿರುದ್ಧ ಬೆಂಗಳೂರಿನ 7 ವಿವಿಧ ಪೊಲೀಸ್‌‍ ಠಾಣೆಗಳಲ್ಲಿ, ಮೈಸೂರಿನ ಮಂಡಿ, ಹುಬ್ಬಳ್ಳಿಯ ವಿದ್ಯಾನಗರ, ಹೊಸಕೋಟೆ, ದಾವಣಗೆರೆಯ ಹೊನ್ನಳ್ಳಿ, ರಾಣೆಬೆನ್ನೂರು, ಬಾಣವಾರ, ಸಿಗ್ಗಾವ್‌, ಶಿವಮೊಗ್ಗದ 29 ವಿವಿಧ ಪೊಲೀಸ್‌‍ ಠಾಣೆಗಳಲ್ಲಿ, ಕೆಆರ್‌ನಗರ, ಸಾಲಿಗ್ರಾಮ ತಲಾ 1, ಭದ್ರಾವತಿ ಓಲ್ಡ್ ಟೌನ್‌ ಪೊಲೀಸ್‌‍ ಠಾಣೆಯಲ್ಲಿ 3, ಕಡೂರು ಪೊಲೀಸ್‌‍ ಠಾಣೆಯಲ್ಲಿ 4 , ಚಿಕ್ಕಮಗಳೂರು 2 ಪ್ರಕರಣಗಳು ಸೇರಿದಂತೆ 150 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿ ಬಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು `ಈ ಸಂಜೆ’ಗೆ ತಿಳಿಸಿದ್ದಾರೆ.


8 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ
ಮನೆಗಳ್ಳತನವನ್ನೇ ಕಸುಬನ್ನಾಗಿ ಮಾಡಿಕೊಂಡು ಸುಮಾರು ಎಂಟು ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಯಲಹಂಕ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ದಾರನಾಯಕನಪಾಳ್ಯ ಗ್ರಾಮದ ನಾರಾಯಣಸ್ವಾಮಿ (35) ಬಂಧಿತ ಆರೋಪಿ.

ಈತನ ವಿರುದ್ಧ ಯಲಹಂಕ ಉಪನಗರ ಪೊಲೀಸ್‌‍ ಠಾಣೆಯಲ್ಲಿ 3 ಮನೆಗಳವು, ವಿದ್ಯಾರಣ್ಯಪುರ 2, ಗೌರಿಬಿದನೂರು 2, ಚಿಕ್ಕಬಳ್ಳಾಪುರ 2, ಗುಡಿಬಂಡೆ 1, ಉಡುಪಿ ಮಣಿಪಾಲ್‌ ಪೊಲೀಸ್‌‍ ಠಾಣೆಯ 3, ಮಂಚೇನಹಳ್ಳಿ 2 ಹಾಗೂ ತುಮಕೂರು ಟೌನ್‌ ಪೊಲೀಸ್‌‍ ಠಾಣೆಯಲ್ಲಿ ತಲಾ 1 ಪ್ರಕರಣಗಳು ಭಾಗಿಯಾಗಿವೆ.

ಆರೋಪಿಯು ಮನೆಗಳವು ಪ್ರಕರಣಗಳಲ್ಲಿ ಭಾಗಿಯಾಗಿ ಆಗಾಗ್ಗೆ ತನ್ನ ವಿಳಾಸವನ್ನು ಬದಲಿಸುತ್ತಾ ಸುಮಾರು 8 ವರ್ಷಗಳಿಂದ ಪೊಲೀಸರಿಗೆ ಸಿಗದೇ, ನ್ಯಾಯಾಲಯಕ್ಕೂ ಹಾಜರಾಗದೇ ಕಳ್ಳಾಟವಾಡುತ್ತಿ ದ್ದನು. ಇದೀಗ ಯಲಹಂಕ ಉಪನಗರ ಠಾಣೆಯ ಇನ್‌್ಸಪೆಕ್ಟರ್‌ ಸುಧಾಕರ ರೆಡ್ಡಿ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಕದ್ದ ವಾಹನದಲ್ಲೇ ಸರಗಳ್ಳತನ ಮಾಡುತ್ತಿದ್ದವನ ಬಂಧನ
ಕಳ್ಳತನ ಮಾಡಿದ ದ್ವಿಚಕ್ರವಾಹನದಲ್ಲೇ ಸುತ್ತಾಡುತ್ತಾ ಸರ ಅಪಹರಣ ಮಾಡುತ್ತಿದ್ದ ಸರಗಳ್ಳನನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿ 2 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಸುದ್ದಗುಂಟೆಪಾಳ್ಯದ ನಿವಾಸಿ ನೇಹರಾಜ್‌ (26) ಬಂಧಿತ ವಾಹನ ಹಾಗೂ ಸರಗಳ್ಳ. ಸುಲ್ತಾನಪಾಳ್ಯದ ನಿವಾಸಿ ಯೊಬ್ಬರು ಹೆಬ್ಬಾಳದ ಮನೋ ರಾಯನಪಾಳ್ಯದ ಅಪಾರ್ಟ್‌ ಮೆಂಟ್‌ವೊಂದರ ಬಳಿ ನಡೆದು ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಹಿಂಭಾಲಿಸಿಕೊಂಡು ಬಂದ ಇಬ್ಬರು ಅವರ ಕುತ್ತಿಗೆಗೆ ಕೈ ಹಾಕಿ 30 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ.ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ತಲಘಟ್ಟಪುರ ಠಾಣೆಯ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸರಗಳವು ಮಾಡಿರುವುದಾಗಿ ಹೇಳಿದ್ದಾನೆ.

ಆರೋಪಿಯು ನಗರದ ವಿವಿಧ ಪೊಲೀಸ್‌‍ಠಾಣೆ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನ ಕಳವು ಮಾಡಿ ಅವುಗಳನ್ನು ವಿ.ನಾಗೇನಹಳ್ಳಿಯ ಪಿಳೆಕಮ ದೇವಸ್ಥಾನ ಮುಂಭಾಗದ ಖಾಲಿ ಜಾಗದಲ್ಲಿ ನಾಲ್ಕು ವಾಹನಗಳನ್ನು ನಿಲ್ಲಿಸಿರುವುದಾಗಿ ಹೇಳಿದ್ದು, ಆ ವಾಹನಗಳನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೊಬ್ಬನಿಗಾಗಿ ಪತ್ತೆ ಕಾರ್ಯ ಮುಂದುವರೆದಿದೆ.


ಸೊಸೈಟಿ ವಂಚನೆ ಪ್ರಕರಣ:ಆರೋಪಿಗಳ ಮನೆಗಳ ಮೇಲೆ ದಾಳಿ
ಬೆಂಗಳೂರು,ನ.5- ನಗರದ ರಾಜಾರಾಮ್‌ ಮೋಹನ್‌ರಾಯ್‌ ರಸ್ತೆಯಲ್ಲಿರುವ ಇಪಿಎಫ್‌ಒ ಸ್ಟಾಫ್‌ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯಲ್ಲಿನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ಆರೋಪಿಗಳ ಮನೆಗಳ ಮೇಲೆ ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ದಾಳಿ ಮಾಡಿದ್ದಾರೆ. ನಗರದ ರಿಚ್‌ಮಂಡ್‌ ಸರ್ಕಲ್‌ ಬಳಿಯ ಕಚೇರಿ ಹಾಗೂ ಆರ್‌ಆರ್‌ನಗರ, ಜೆಪಿ ನಗರ ಮತ್ತು ಅಂಜನಾಪುರದಲ್ಲಿರುವ ನಾಲ್ವರು ಆರೋಪಿಗಳ ಮನೆಗಳನ್ನು ಪೊಲೀಸರು ಶೋಧ ನಡೆಸಿದಾಗ ಚಿನ್ನಾಭರಣ, ಹಣ, ದಾಖಲೆಗಳು, ಹೂಡಿಕೆ ಪತ್ರಗಳು ಪತ್ತೆಯಾಗಿವೆ. ಭವಿಷ್ಯದ ದಿನಗಳಲ್ಲಿ ಸಹಾಯವಾಗುತ್ತದೆ ಎಂದು ಅನೇಕರು ಉಳಿತಾಯದ ಹಣವನ್ನು ತಾವೇ ಮಾಡಿಕೊಂಡಿದ್ದ ಇಪಿಎಫ್‌ಒ ಸ್ಟಾಫ್‌ ಕ್ರೆಡಿಟ್‌ ಕೋ- ಅಪರೇಟಿವ್‌ ಸೊಸೈಟಿಯಲ್ಲಿ ಹೂಡಿಕೆ ಮಾಡಿದ್ದರು.

ಈ ಸೊಸೈಟಿ ಚೆನ್ನಾಗಿ ನಡೆಯುತ್ತಿತ್ತು. ಪ್ರತಿ ತಿಂಗಳು ಬಡ್ಡಿಯೂ ಬರುತ್ತಿತ್ತು. ಆದರೆ ಕಳೆದ ಮೂರು ತಿಂಗಳಿಂದ ಬಡ್ಡಿ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡು ಹೂಡಿಕೆ ಮಾಡಿದ್ದವರು ಸೊಸೈಟಿಯಲ್ಲಿ ಹಣದ ವಹಿವಾಟು ಪರಿಶೀಲಿಸಿದಾಗ 73 ಕೋಟಿ ಹಣದ ಪೈಕಿ 70 ಕೋಟಿ ವಂಚನೆ ನಡೆದಿರುವುದು ಗೊತ್ತಾಗಿದೆ. ಸೊಸೈಟಿಯಲ್ಲಿ ಕೇವಲ 3 ಕೋಟಿ ಹಣವನ್ನಷ್ಟೇ ಬಿಟ್ಟು, ಉಳಿದ ಹಣವನ್ನೆಲ್ಲಾ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸಿಇಓ ಹಾಗೂ ಅಕೌಂಟೆಂಟ್‌ ವಿರುದ್ಧ ಹೂಡಿಕೆದಾರರು ಗಂಭೀರ ಆರೋಪ ಮಾಡಿ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ಹಲವು ಮಾಹಿತಿಗಳನ್ನು ಕಲೆ ಹಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಹಿಳೆ ಸೇರಿದಂತೆ ಇಬ್ಬರನ್ನು ಪೊಲೀಸರುಬಂಧಿಸಿದ್ದಾರೆ.

ಸೊಸೈಟಿಯ ಲೆಕ್ಕಾಧಿಕಾರಿಗೆ ತಿಂಗಳಿಗೆ 21 ಸಾವಿರ ಸಂಬಳವಿತ್ತು. ಹೀಗಿದ್ದರೂ ಅವರ ಮನೆಯಲ್ಲಿ ಐಷಾರಾಮಿ ಕಾರುಗಳು, ಆತನ ಪತ್ನಿಖಾತೆಯಲ್ಲಿ ಕೋಟ್ಯಾಂತರ ವಹಿವಾಟು ನಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ಕಾರ್ಯಾಚರಣೆ ಮುಂದುವರೆಸಿ ಅವರ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಿದಾಗ ಸೊಸೈಟಿಯ ಖಾತೆಯಿಂದಲೇ ಹಣ ವರ್ಗಾವಣೆಯಾಗಿರುವುದು ಕಂಡು ಬಂದಿದೆ. ಈ ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ಇನ್ನಷ್ಟು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.


ಕಾರು ಡಿಕ್ಕಿ ಬಿಹಾರದ ಮೆಕ್ಯಾನಿಕ್‌ ಸಾವು..
ಸ್ಕೂಟರ್‌ನಲ್ಲಿಹೋಗುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆತ ಮೃತಪಟ್ಟಿರುವ ಘಟನೆ ಕೆಆರ್‌ಪುರ ಸಂಚಾರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬಿಹಾರ ಮೂಲದ ರಜತ್‌ ಅಲಿ (26) ಮೃತಪಟ್ಟ ಸ್ಕೂಟರ್‌ ಸವಾರ. ಈತ ್ರಡ್‌್ಜ ಹಾಗೂ ಎಸಿ ರಿಪೇರಿ ಮಾಡುವ ಮೆಕ್ಯಾನಿಕ್‌.ಕಲ್ಕೆರೆಯಲ್ಲಿ ವಾಸವಾಗಿದ್ದ ರಜತ್‌ಅಲಿ ಅವರು ರಾತ್ರಿ 9.30 ರ ಸುಮಾರಿನಲ್ಲಿ ತನ್ನ ಸ್ಕೂಟಿಯಲ್ಲಿ ಬೂದಿಗೆರೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಅತೀ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಕೆಆರ್‌ ಪುರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


ದ್ವಿಚಕ್ರ ವಾಹನ:ಕಳ್ಳನ ಬಂಧನ
ಮನೆಗಳ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಪರಿಚಯಸ್ಥನಿಗೆ ನೀಡಿದ್ದ ಆರೋಪಿಯೊಬ್ಬನನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿ 1.50 ಲಕ್ಷ ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ರಾಜಗೋಪಾಲನಗರದ ನಿವಾಸಿ ಅಭಿಷೇಕ್‌ (30) ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆ ಕಾರ್ಯ ಮುಂದುವರೆದಿದೆ.

ಸಾಗರಹಳ್ಳಿ ಯ ಬಯ್ಯಣ್ಣ ಲೇಔಟ್‌ ನಿವಾಸಿಯೊಬ್ಬರು ತಮ ಮನೆ ಮುಂಭಾಗ ದ್ವಿಚಕ್ರ ವಾಹನ ನಿಲ್ಲಿಸಿದ್ದು, ಮಾರನೇ ದಿನ ನೋಡಿದಾಗ ವಾಹನ ಇರಲಿಲ್ಲ.ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಲಗ್ಗೆರೆ ಬಿಡ್ಜ್ ಬಳಿ ಆರೋಪಿಯನ್ನು ದ್ವಿಚಕ್ರ ವಾಹನ ಸಮೇತ ಬಂಧಿಸಿದ್ದಾರೆ.ಆರೋಪಿಯು ರಾಜಾಜಿ ನಗರದಲ್ಲೂ ದ್ವಿಚಕ್ರವಾಹನ ಕಳವು ಮಾಡಿರುವುದು ವಿಚಾರಣೆಯಿಂದ ಗೊತ್ತಾಗಿದೆ.ಇನ್‌್ಸಪೆಕ್ಟರ್‌ ಭೈರ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡಿದ್ದರು.


ಚೋರನ ಬಂಧನ:6.95 ಲಕ್ಷ ಮೌಲ್ಯದ ವಾಹನಗಳ ಜಪ್ತಿ
ವಾಹನ ಚೋರನೊಬ್ಬನನ್ನು ಮಹಾಲಕ್ಷ್ಮೀ ಲೇಔಟ್‌ ಠಾಣೆ ಪೊಲೀಸರು ಬಂಧಿಸಿ 6.95 ಲಕ್ಷ ಮೌಲ್ಯದ 10 ಸೈಕಲ್‌ಗಳು,ಗೂಡ್ಸ್ ವಾಹನ ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ನಾಗಪುರದ ನಿವಾಸಿಯೊಬ್ಬರು ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಸೈಕಲ್‌ ಕಳವಾಗಿತ್ತು. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ರಾಜಾಜಿನಗರದ ನವರಂಗ್‌ ಚಿತ್ರಮಂದಿರದ ಬಳಿ ಸೈಕಲ್‌ ಸಮೇತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಈ ಸೈಕಲ್‌ ಕಳ್ಳತನ ಮಾಡಿರುವುದಾಗಿ ಹೇಳಿದ್ದಾನೆ.ಅಲ್ಲದೇ ನಗರದ ವಿವಿಧ ಕಡೆಗಳಲ್ಲಿ ಸೈಕಲ್‌ಗಳು ಮತ್ತು ದ್ವಿಚಕ್ರ ವಾಹನ ಹಾಗೂ ಟಾಟಾ ಏಸ್‌‍ ವಾಹನ ಕಳವು ಮಾಡಿ ಅವುಗಳನ್ನು ಪೈಪ್‌ಲೈನ್‌ ರಸ್ತೆಯ ಈಶ್ವರ ದೇವಸ್ಥಾನದ ಪಕ್ಕದ ಖಾಲಿ ಜಾಗದಲ್ಲಿ ಹಾಗೂ ಆರ್‌ಎಂಸಿ ಯಾರ್ಡ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯ ಉಲ್ಲಾಸ್‌‍ ಚಿತ್ರಮಂದಿರ ಮುಂಭಾಗ ನಿಲ್ಲಿಸಿರುವುದಾಗಿ ತಿಳಿಸಿದ್ದು, ಅದರಂತೆ ಆ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್‌ ಮಂಜು ಹಾಗೂ ಸಿಬ್ಬಂದಿ ತಂಡ ಕೈಗೊಂಡು ಆರೋಪಿಯನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಬೆಂಗಳೂರಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಯನ್ನು ಕೊಂದು ಮಾಂಗಲ್ಯ ಸರ ದೋಚಿದ ದುಷ್ಕರ್ಮಿಗಳು

ಬೆಂಗಳೂರು,ನ.5- ಹಾಡಹಗಲೇ ಮನೆಗೆ ನುಗ್ಗಿದ ಹಂತಕರು ಕುತ್ತಿಗೆ ಹಿಸುಕಿ ವೃದ್ಧೆಯನ್ನು ಕೊಲೆ ಮಾಡಿ 45 ಗ್ರಾಂ ಮಾಂಗಲ್ಯ ಸರ ದೋಚಿರುವ ಘಟನೆ ಸುಬ್ರಮಣ್ಯಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಉತ್ತರಹಳ್ಳಿಯ ನ್ಯೂಮಿಲಿನಿಯಂ ಶಾಲೆ ರಸ್ತೆಯ ನಿವಾಸಿ ಲಕ್ಷ್ಮೀ (65) ಕೊಲೆಯಾದ ವೃದ್ಧೆ.


ಉತ್ತರಹಳ್ಳಿಯಲ್ಲಿ ಅಶ್ವತ್‌ನಾರಾಯಣ ಹಾಗೂ ಲಕ್ಷ್ಮೀ ದಂಪತಿ ವಾಸವಾಗಿದ್ದು ಅಗರಬತ್ತಿ ಕಾರ್ಖಾನೆಯಲ್ಲಿ ಪತಿ ಕೆಲಸ ಮಾಡುತ್ತಿದ್ದಾರೆ. ಎಂದಿನಂತೆ ಅಶ್ವತ್‌ನಾರಾಯಣ ಅವರು ನಿನ್ನೆ ಬೆಳಗ್ಗೆ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿ ಲಕ್ಷ್ಮೀ ಒಬ್ಬರೇ ಇದ್ದರು.

ಆ ಸಂದರ್ಭದಲ್ಲಿ ಇವರ ಮನೆಗೆ ನುಗ್ಗಿದ ಹಂತಕರು ಲಕ್ಷ್ಮೀ ಅವರ ಮುಖದ ಮೇಲೆ ಹಲ್ಲೆ ಮಾಡಿ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಅವರ ಕೊರಳಲ್ಲಿದ್ದ ಮಾಂಗಲ್ಯ ಸರ ದೋಚಿ ಪರಾರಿಯಾಗಿದ್ದಾರೆ.ಮಧ್ಯಾಹ್ನ 12.15 ರ ಸುಮಾರಿನಲ್ಲಿ ಅಶ್ವತ್‌ನಾರಾಯಣ ಅವರು ಪತ್ನಿಗೆ ಕರೆ ಮಾಡಿದ್ದಾರೆ. ಆದರೆ ಅವರು ಕರೆ ಸ್ವೀಕರಿಸಿಲ್ಲ. ಮಲಗಿರಬಹುದೆಂದು ಸುಮನಾಗಿದ್ದಾರೆ.

ಮತ್ತೆ ಸಂಜೆ 5.30 ರ ಸುಮಾರಿನಲ್ಲಿ ಕರೆ ಮಾಡಿದಾಗ ಆಗಲೂ ಅವರು ಕರೆ ಸ್ವೀಕರಿಸಿಲ್ಲ. ಇದರಿಂದ ಗಾಬರಿಯಾದ ಅಶ್ವತ್‌ನಾರಾಯಣ ಅವರು ತಮ ಮನೆಯಲ್ಲಿ ಬಾಡಿಗೆಗೆ ವಾಸವಿರುವ ಪಣಿರಾಜು ಅವರಿಗೆ ಕರೆ ಮಾಡಿ ನನ್ನ ಪತ್ನಿ ಮಧ್ಯಾಹ್ನದಿಂದ ಫೋನ್‌ ತೆಗೆಯುತ್ತಿಲ್ಲ. ಹೋಗಿ ನೋಡುವಂತೆ ತಿಳಿಸಿದ್ದಾರೆ.

ಪಣಿರಾಜು ಅವರು ನಾನು ಹೊರಗಡೆ ಇದ್ದು, ತನ್ನ ಪತ್ನಿಗೆ ತಿಳಿಸುವುದಾಗಿ ಹೇಳಿ ಅವರ ಪತ್ನಿಗೆ ಸಂಜೆ 6 ಗಂಟೆ ಸುಮಾರಿನಲ್ಲಿ ಮೊಬೈಲ್‌ ಕರೆ ಮಾಡಿ ಲಕ್ಷ್ಮೀ ಅವರ ಮನೆಗೆ ಹೋಗಿ ನೋಡುವಂತೆ ತಿಳಿಸಿದ್ದಾರೆ.

ಪಣಿರಾಜು ಅವರ ಪತ್ನಿ ಮನೆಗೆ ಹೋಗಿ ನೋಡಿದಾಗ ಲಕ್ಷ್ಮೀ ಅವರು ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದೆ. ಸಮೀಪ ಹೋಗಿ ನೋಡಿದಾಗ ಉಸಿರಾಡುತ್ತಿಲ್ಲವೆಂದು ತಿಳಿದು ತಕ್ಷಣ ಅಶ್ವತ್‌ನಾರಾಯಣ ಅವರಿಗೆ ಫೋನ್‌ ಮಾಡಿ ಹೇಳಿದ್ದಾರೆ.

ಅಶ್ವತ್‌ನಾರಾಯಣ ಅವರು ತಕ್ಷಣ ಮನೆಗೆ ಬಂದು ನೋಡಿದಾಗ ಲಕ್ಷ್ಮೀ ಅವರ ಕುತ್ತಿಗೆಯ ಬಲ ಭಾಗದಲ್ಲಿ ಹಾಗೂ ತುಟಿಯ ಮೇಲೆ ಗಾಯವಾಗಿರುವುದು ಕಂಡು ಬಂದಿದೆ. ಅಲ್ಲದೇ ಮುಖದ ಮೇಲೆ ಪರಚಿದ ಗಾಯಗಳಾಗಿದ್ದು , ಕುತ್ತಿಗೆಯಲ್ಲಿ ಮಾಂಗಲ್ಯ ಸರ ಕಂಡು ಬಂದಿಲ್ಲ. ಅಶ್ವತ್‌ನಾರಾಯಣ ಅವರು ತಕ್ಷಣ ತನ್ನ ನಾದಿನಿ ಸಂಪತಿ ಲಕ್ಷ್ಮೀ ಅವರಿಗೆ ಕರೆ ಮಾಡಿ ವಿಚಾರಿಸಿದಾಗ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಅಕ್ಕನಿಗೆ ಕರೆ ಮಾಡಿದಾಗ ಮನೆಗೆ ಯಾರೋ ಗಂಡ-ಹೆಂಡತಿ ಬಂದು ಇಬ್ಬರು ಟಿವಿ ಚೆಕ್‌ ಮಾಡುತ್ತಿದ್ದು, ನಾನು ಹೊರಗಡೆ ಬಂದು ಮಾತನಾಡುತ್ತಿರುವುದಾಗಿ ತಿಳಿಸಿದರೆಂದು ಹೇಳಿದ್ದಾರೆ.

ಯಾರೋ ಪರಿಚಿತರು ಮನೆಗೆ ಬಂದು ಪತ್ನಿಯನ್ನು ಕೊಲೆ ಮಾಡಿ ಮಾಂಗಲ್ಯ ಸರ ತೆಗೆದುಕೊಂಡು ಹೋಗಿದ್ದಾರೆ. ಆ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಅಶ್ವತ್‌ನಾರಾಯಣ ಅವರು ಸುಬ್ರಮಣ್ಯಪುರ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮನೆಯ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

ನವೆಂಬರ್‌ ಕ್ರಾಂತಿಯ ಚರ್ಚೆ ಬೆನ್ನಲ್ಲೇ ಸಿದ್ದು ಬಲ ಪ್ರದರ್ಶನಕ್ಕೆ ಅಹಿಂದ ಸಮಾವೇಶ

ಬೆಂಗಳೂರು, ನ.5– ನವೆಂಬರ್‌ ಕ್ರಾಂತಿಯ ಸದ್ದಿನ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ಅಹಿಂದ ಸಮಾ ವೇಶಕ್ಕೆ ತಯಾರಿ ಆರಂಭಿಸಿದ್ದಾರೆ.ಈ ಮೊದಲು 2023, 2024ರಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಅಹಿಂದ ಸಮಾವೇಶಗಳನ್ನು ಆಯೋಜಿಸಲಾಗಿತ್ತು 2025ರಲ್ಲಿ ಇದೇ ಮಾದರಿಯ ಸಮಾವೇಶಗಳನ್ನು ನಡೆಸಲು ಪ್ರಯತ್ನಿಸಿದಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅಡ್ಡಗಾಲು ಹಾಕಿದರು. ಕಾಂಗ್ರೆಸ್‌‍ ಪಕ್ಷದ ಮುಖಂಡರು ಮತ್ತು ಸರ್ಕಾರದ ಸಂಪನೂಲ ಬಳಸಿ ನಡೆಸಲಾಗುವ ಈ ಕಾರ್ಯಕ್ರಮವನ್ನು ಪಕ್ಷೇತರವಾಗಿ ಬಿಂಬಿಸುವ ಬದಲಾಗಿ ಕಾಂಗ್ರೆಸ್ಸಿನ ವೇದಿಕೆಯಲ್ಲೇ ಮಾಡಬೇಕೆಂದು ಪಟ್ಟು ಹಿಡಿದರು.

ಹೀಗಾಗಿ ಹಾಸನದಲ್ಲಿನ ಸಮಾವೇಶ ಕಾಂಗ್ರೆಸ್‌‍ ಕಾರ್ಯಕ್ರಮವಾಗಿ ಪರಿವರ್ತನೆಯಾಯಿತು. ಅಲ್ಲಿಂದಾಚೆಗೆ ಅಹಿಂದ ಸಮಾವೇಶಗಳು ಕಾಂಗ್ರೆಸ್‌‍ ಕಾರ್ಯಕ್ರಮಗಳಾಗಿ ಬದಲಾಗಿವೆ. ಸಿದ್ದರಾಮಯ್ಯ ಅವರಿಗೆ ರಾಜಕೀಯ ಅಸ್ಥಿರತೆ ಕಾಡಿದಾಗಲೆಲ್ಲ ಅಹಿಂದ ಸಮಾವೇಶಗಳ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಅದರ ಬೆನ್ನಲ್ಲೇ ಸಿದ್ದರಾಮಯ್ಯ ಅವರಿಗೆ ಎದುರಾದ ಅಡೆ-ತಡೆಗಳು ನಿವಾರಣೆಯಾಗಿವೆ. ಈಗ ನವೆಂಬರ್‌ ಕ್ರಾಂತಿಯ ನೆಪದಲ್ಲಿ ಸಿದ್ದರಾಮಯ್ಯ ಅವರ ಬಲ ಕುಗ್ಗಿಸುವ ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನಗಳಾಗುತ್ತಿವೆ. ಹೀಗಾಗಿ ಮತ್ತೊಮೆ ಅಹಿಂದ ವರ್ಗ ಮೈಕೊಡವಿ ನಿಂತಿದೆ. ವರ್ಷಾಂತ್ಯಕ್ಕೆ ಬೃಹತ್‌ ಅಹಿಂದ ಸಮಾವೇಶ ನಡೆಸುವ ಚರ್ಚೆಗಳಾಗಿವೆ. ಅದಕ್ಕೆ ಈ ತಿಂಗಳ ಕೊನೆಯಲ್ಲಿ ಪೂರ್ವಭಾವಿ ಸಭೆ ನಡೆಸುವ ಚರ್ಚೆಯಾಗಿದೆ. ಈ ಬಾರಿಯ ಅಹಿಂದ ಸಮಾವೇಶವನ್ನು ಪಕ್ಷತೀತವಾಗಿ ಮಾಡಬೇಕೆಬುದು ಸಿದ್ದರಾಮಯ್ಯ ಅವರ ಬೆಂಬಲಿಗರ ಆಶಯವಾಗಿದೆ.

ಹೀಗಾಗಿ ಡಿ.ಕೆ.ಶಿವಕುಮಾರ್‌ ಅವರ ಒತ್ತಡಕ್ಕೆ ಮಣಿಯದೇ ಸಮಾವೇಶ ನಡೆಸಲು ಪ್ರತ್ಯೇಕ ತಂತ್ರಗಾರಿಕೆಗಳು ನಡೆಯುತ್ತಿವೆ. ಕಾಂಗ್ರೆಸ್‌‍, ಜೆಡಿಎಸ್‌‍, ಬಿಜೆಪಿ ಎಲ್ಲಾ ಪಕ್ಷಗಳಲ್ಲಿರುವ ಅಹಿಂದ ನಾಯಕರನ್ನು ಒಂದೇ ವೇದಿಕೆಗೆ ಕರೆ ತರುವ ಚಿಂತನೆ ಇದೆ. ರಾಷ್ಟ್ರೀಯ ಮಟ್ಟದಲ್ಲಿ ಅಹಿಂದ ನಾಯಕರಾಗಿ ಗುರುತಿಸಿಕೊಂಡಿರುವ ಪ್ರಭಾವಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಸಾಧ್ಯತೆ ಇದೆ. ಪಕ್ಷ ಅಥವಾ ಸರ್ಕಾರದ ಕಾರ್ಯಕ್ರಮವಾಗಿಸದೆ ಪ್ರತ್ಯೇಕ ಸಮಾವೇಶ ಮಾಡಿ, ಅಹಿಂದ ವರ್ಗದ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸುವುದು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಒಕ್ಕೊರಲ ಬೆಂಬಲ ವ್ಯಕ್ತಪಡಿಸುವ ಮೂಲ ಆಶಯ ವ್ಯಕ್ತವಾಗಿದೆ ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಅಹಿಂದ ವರ್ಗ ತಿರುಗಿ ಬೀಳಲಿದೆ ಎಂಬ ಸಂದೇಶವನ್ನು ರವಾನಿಸುವುದು ಕಾರ್ಯಕ್ರಮದ ಮೂಲ ಉದ್ದೇಶ. ಆದರೆ ಅಹಿಂದ ಬೇಡಿಕೆಗಳನ್ನು ಆಧಾರವಾಗಿಟ್ಟುಕೊಂಡು ರಾಷ್ಟ್ರ ಮಟ್ಟದ ಚರ್ಚೆಗೆ ವೇದಿಕೆ ಕಲ್ಪಿಸುವುದಾಗಿ ಸಂಘಟಕರು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಡಿಸಿ ಕಚೇರಿ ಮುಂದೆ ಬೆಂಕಿ ಹಚ್ಚಿಕೊಂಡಿದ್ದ ರೈತ ದುರ್ಮರಣ

ಬೆಂಗಳೂರು,ನ.5- ಭೂಸ್ವಾಧೀನಗೊಂಡ ಜಮೀನಿಗೆ ಹಲವಾರು ವರ್ಷಗಳಿಂದ ಪರಿಹಾರ ಸಿಕ್ಕಿಲ್ಲ, ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ನಿನ್ನೆ ಬೆಂಕಿ ಹಚ್ಚಿಕೊಂಡು ಆತಹತ್ಯೆಗೆ ಯತ್ನಿಸಿದ್ದ ರೈತ ಮಂಜೇಗೌಡ ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ.

ಕೆ.ಆರ್‌ಪೇಟೆ ತಾಲ್ಲೂಕಿನ ಮೂಡನಹಳ್ಳಿಯ ಮಂಜೇಗೌಡ ಅವರು ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಬಳಿ ಬಂದು ತಮ ಜಮೀನನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದರು.

ಆದರೆ ಅಲ್ಲಿನ ಅಧಿಕಾರಿಗಳು ಸ್ಪಂದಿಸದೇ, ಜಿಲ್ಲಾಧಿಕಾರಿ ಭೇಟಿಗೂ ಅವಕಾಶ ಕೊಡದ ಹಿನ್ನಲೆಯಲ್ಲಿ ಸಮೀಪದಲ್ಲೇ ಇದ್ದ ಉದ್ಯಾವನಕ್ಕೆ ಹೋಗಿ ಮೈಮೇಲೆ ಪೆಟ್ರೋಲ್‌ ಸುರಿದು ಕೊಂಡು ಮಂಜೇಗೌಡ ಆತಹತ್ಯೆಗೆ ಪ್ರಯತ್ನಿಸಿದ್ದರು. ಸ್ಥಳದಲ್ಲಿ ಇದ್ದ ಸಾರ್ವಜನಿಕರು ಬೆಂಕಿಯನ್ನು ನಂದಿಸಿ ಅವರನ್ನು ರಕ್ಷಿಸಿ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು.

ಈ ವೇಳೆ ಕೆಲ ಮಾಧ್ಯಮದ ಜೊತೆ ಮಾತನಾಡಿದ್ದ ಮಂಜೇಗೌಡ ಅವರು, ತಹಸೀಲ್ದಾರ್‌ ಸೇರಿದಂತೆ ಯಾವೊಬ್ಬ ಅಧಿಕಾರಿಯು ನನಗೆ ಸಹಾಯ ಮಾಡುತ್ತಿಲ್ಲ. ನನಗಿದ್ದ ಜಮೀನನ್ನು ಅರಣ್ಯ ಇಲಾಖೆಯವರು ವಶಪಡಿಸಿಕೊಂಡಿದ್ದಾರೆ. ಸರ್ಕಾರವೂ ಕೂಡ ನೆರವಾಗುತ್ತಿಲ್ಲವೆಂದು ನೋವು ತೋಡಿಕೊಂಡಿದ್ದರು.ಆದರೆ ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ವಿಷಯ ತಿಳಿದು ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದೆ.

ತುಪ್ಪದ ಬೆಲೆ ಏರಿಕೆ ಬೆನ್ನಲ್ಲೇ ಹಾಲಿನ ದರ ಏರಿಕೆ ಸುಳಿ ಕೊಟ್ಟ ಡಿ.ಕೆ.ಸುರೇಶ್‌

ಬೆಂಗಳೂರು, ನ.5- ಬೇರೆ ರಾಜ್ಯಗಳಲ್ಲಿ ಹಾಲಿನ ದರ ನಮಗಿಂತಲೂ ಹೆಚ್ಚಿದೆ. ಹೀಗಾಗಿ ನಮಲ್ಲೂ ದರ ಪರಿಷ್ಕರಣೆಯಾಗಬೇಕೆಂದು ಕರ್ನಾಟಕ ಹಾಲು ಒಕ್ಕೂಟ ಮಹಾ ಮಂಡಳಿಗೆ ಮನವಿ ಮಾಡಲಾಗಿದೆ ಎಂದು ಮಾಜಿ ಸಂಸದ ಹಾಗೂ ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿಲ್ಲ. ಆದರೆ ಮಂಡಳಿಗೆ ಮನವಿ ಮಾಡಿದ್ದೇವೆ. ಅರ್ಧ ಲೀಟರ್‌ ಹಾಲು ಮಾರಿದರೆ ನಷ್ಟವಾಗುತ್ತಿದ್ದು, ಒಂದು ಲೀಟರ್‌ ಹಾಲು ಮಾರಿದರೆ ಲಾಭವಾಗುತ್ತದೆ. ತುಪ್ಪದ ದರ ಇಂದಿನಿಂದ ಏರಿಕೆಯಾಗುತ್ತಿದೆ ಎಂದು ತಿಳಿಸಿದರು.

ಖಾಸಗಿ ಕಂಪಗಳ ಹಾಲು ಆನ್‌ಲೈನ್‌ ಮಾರುಕಟ್ಟೆ ಹೆಚ್ಚಾಗಿದೆ. ನಾವು ರೈತರಿಗೆ ಹಾಲು ಖರೀದಿಸಿದ ಹಣವನ್ನು ಕಾಲಕಾಲಕ್ಕೆ ಬಿಡುಗಡೆ ಮಾಡುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿ ಸಾಕಷ್ಟು ಬಾಕಿ ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದರು.ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್‌‍ನಲ್ಲಿ ತಾವು ಇಲ್ಲ. ಅಧ್ಯಕ್ಷ ಗದ್ದುಗೆಯ ಬಗ್ಗೆ ತಮಗೆ ಯಾವುದೇ ರೀತಿಯ ಆತುರ ಇಲ್ಲ. ಇನ್ನೂ ಸಮಯವಿದೆ. ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದರು.

ನವೆಂಬರ್‌ ಕ್ರಾಂತಿಯ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆಗಳಾಗಿಲ್ಲ. ಸಿದ್ದರಾಮಯ್ಯ ಎಷ್ಟು ದಿನ ಮುಖ್ಯಮಂತ್ರಿಯಾಗಿರುತ್ತಾರೋ ಅಲ್ಲಿಯವರೆಗೂ ಇರಲಿ. ಅವರಿಗೆ ಇನ್ನೂ ವಯಸ್ಸು ಆಗಿಲ್ಲ. ನಾಯಕತ್ವ ಗಟ್ಟಿಯಾಗಿದೆ. ಎಲ್ಲಾ ನಾಯಕರು ಸೇರಿದರೆ ಮಾತ್ರ ಪಕ್ಷ ಸದೃಢವಾಗಿರಲು ಸಾಧ್ಯ. ಸತೀಶ್‌ ಜಾರಕಿಹೊಳಿ, ಎಚ್‌.ಸಿ. ಮಹದೇವಪ್ಪ, ಎಂ.ಬಿ. ಪಾಟೀಲ್‌ ಸೇರಿದಂತೆ ಎಲ್ಲಾ ನಾಯಕರೂ ಸೇರಿ ಪಕ್ಷ ಕಟ್ಟಿದ್ದಾರೆ ಎಂದರು.

ಗ್ರೇಟರ್‌ ಬೆಂಗಳೂರು ಪಾಲಿಕೆಗಳ ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆಗಳು ಮಾಡಿಕೊಳ್ಳಲಾಗಿದೆ. ಸುಪ್ರೀಂಕೋರ್ಟ್‌ ಗಡುವು ನೀಡಿದ್ದು, ವಾರ್ಡ್‌ ಮೀಸಲಾತಿ ಕೂಡ ಅಂತಿಮಗೊಳಿಸಬೇಕಿದೆ. ಆಕ್ಷೇಪಗಳನ್ನು ಪರಿಶೀಲಿಸಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದರೆ ಸುಪ್ರೀಂ ಕೋರ್ಟ್‌ ಚಾಟಿ ಬೀಸುತ್ತದೆ. ಚುನಾವಣೆ ಎಂದರೆ ಎಲ್ಲರಿಗೂ ಟಾಸ್ಕ್‌. ಪ್ರತಿಯೊಬ್ಬ ನಾಯಕರು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದರು.

ಮತಗಳ್ಳತನದ ಬಗ್ಗೆ ದೇಶಾದ್ಯಂತ ಹೋರಾಟ ನಡೆಯುತ್ತಿದೆ. ಜನರಲ್ಲೂ ಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ರಾಹುಲ್‌ ಗಾಂಧಿ ಕೆಲಸ ಮಾಡುತ್ತಿದ್ದಾರೆ ಎಂದರು.
ಕಬ್ಬು ಬೆಳೆಗಾರರಿಗೆ ಬಿಜೆಪಿ ಸರ್ಕಾರ ಹೆಚ್ಚಿನ ಬೆಲೆ ನೀಡಿರಲಿಲ್ಲ. ಆದರೆ ನಮ ಸರ್ಕಾರ ಉತ್ತಮ ದರ ನಿಗದಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಾವೇರಿ ವಿವಾದ ಕುರಿತು ನ್ಯಾಯಾಲಯದಲ್ಲಿನ ಪ್ರಕರಣಗಳ ಬಗ್ಗೆ ವಕೀಲರೊಂದಿಗೆ ಚರ್ಚಿಸಲು ದೇಹಲಿಗೆ ಭೇಟಿ ನೀಡುತ್ತಿದ್ದಾರೆ. ಅವಕಾಶ ಸಿಕ್ಕರೆ ವರಿಷ್ಠರನ್ನೂ ಭೇಟಿ ಯಾಗುತ್ತಾರೆ. ಇದರಲ್ಲಿ ವಿಶೇಷ ಏನೂ ಇಲ್ಲ ಎಂದರು.
ಸಂಸದ ತೇಜಸ್ವಿಸೂರ್ಯ ಕಳೆದ 10 ವರ್ಷಗಳಲ್ಲಿ ಬೆಂಗಳೂರಿಗೆ ಒಂದು ಯೋಜನೆಯನ್ನಾದರೂ ತಂದಿದ್ದಾರೆಯೇ? ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ರಾಜ್ಯ ಸರ್ಕಾರವೇ ಹೆಚ್ಚಿನ ಹಣ ಖರ್ಚು ಮಾಡುತ್ತಿದೆ. ಶೇ. 10ರಷ್ಟು ಪಾಲು ನೀಡಿ ಯೋಜನೆ ತಮದು ಎಂದು ಬಿಂಬಿಸಿಕೊಳ್ಳುತ್ತಾರೆ. ಹೆಚ್ಚು ತೆರಿಗೆ ಪಾವತಿಸುತ್ತಿದ್ದರೂ ನಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆಕ್ಷೇಪಿಸಿದರು.

ಒಲಿಪಿಂಕ್‌ ಕ್ರೀಡಾಕೂಟವನ್ನು ಗುಜರಾತ್‌ನಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರು, ಚೆನ್ನೈ, ಹೈದರಾಬಾದ್‌, ಕೊಚ್ಚಿನಲ್ಲಿ ಕ್ರೀಡಾಕೂಟ ನಡೆಸಲು ಏಕೆ ಬೆಂಬಲ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು. ಸುರಂಗ ರಸ್ತೆಯ ಬಗ್ಗೆ ಮಾತನಾಡುವ ತೇಜಸ್ವಿಸೂರ್ಯ ಮೆಟ್ರೋ ಯೋಜನೆಯಲ್ಲಿ ಕೇಂದ್ರದ ಪಾಲು ಎಷ್ಟು ಹೇಳಲಿ ಎಂದು ಸವಾಲು ಹಾಕಿದರು.

ಮೈಸೂರಿನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಸಂಸದ ಯದುವೀರ ಒಡೆಯರ್‌ ತೀವ್ರ ವಿರೋಧ

ಬೆಂಗಳೂರು,ನ.5- ಸಾಂಸ್ಕೃತಿಕ ನಗರಿ ಮೈಸೂರು ನಗರದೊಳಗೆ ಎರಡು ಫ್ಲೈಓವರ್‌ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವ ಕ್ರಮಕ್ಕೆ ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ Xನಲ್ಲಿ ಪೋಸ್ಟ್‌ ಮಾಡಿರುವ ಅವರು, ಜೆಎಲ್‌ಬಿ ರಸ್ತೆ, ವಿನೋಬಾ ರಸ್ತೆಗಳು ಪಾರಂಪರಿಕ ರಸ್ತೆಗಳಾಗಿವೆ. ಈ ರಸ್ತೆಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಜನಾಭಿಪ್ರಾಯ ಪಡೆಯದೇ ಈ ಮಾರ್ಗದಲ್ಲಿ ಫ್ಲೈಓವರ್‌ ನಿರ್ಮಾಣ ಕಾರ್ಯಕ್ಕೆ ಮುಂದಾ ಗಿದ್ದಾರೆ. ಡಿಪಿಆರ್‌ ಕೂಡ ಸಿದ್ಧಪಡಿಸುತ್ತಿದ್ದಾರೆ. ಇದಕ್ಕೆ ನಮ ತೀವ್ರ ವಿರೋಧವಿದೆ ಎಂದಿದ್ದಾರೆ.

ವಿನೋಬಾ ರಸ್ತೆಯಲ್ಲಿ ಫ್ಲೈಓವರ್‌ ನಿರ್ಮಿಸಲು ಮುಂದಾದರೆ ಮರಗಳ ಹರಣವಾಗಲಿದೆ. ಹಾಗಾಗಿ ಈ ಮಾರ್ಗದಲ್ಲಿ ಫ್ಲೈಓವರ್‌ ನಿರ್ಮಾಣ ಮಾಡಬಾರದು. ಅಭಿವೃದ್ಧಿ ನೆಪದಲ್ಲಿ ಮೈಸೂರಿನ ಸೌಂದರ್ಯ ಹಾಳು ಮಾಡಬಾರದು. ಪಾರಂಪರಿಕ ನಗರಿಯ ಗುರುತು ಉಳಿಸಿಕೊಳ್ಳಬೇಕು. ಸಿಎಂ ಕೂಡ ಗ್ರೇಟರ್‌ ಮೈಸೂರು ಸಭೆಯಲ್ಲಿ ಮೈಸೂರಿನ ಪಾರಂಪರಿಕತೆ ಉಳಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಅವರ ಸಲಹೆಯಂತೆ ಅಧಿಕಾರಿಗಳು ನಡೆದುಕೊಳ್ಳಬೇಕೆಂದು ಹೇಳಿದ್ದಾರೆ.

ಫ್ಲೈಓವರ್‌ ನಿರ್ಮಾಣವೇ ಶಾಶ್ವತ ಪರಿಹಾರವಲ್ಲ. ಮೆಟ್ರೋ ಮಾರ್ಗ ನಿರ್ಮಾಣಕ್ಕೆ ನಮ ವಿರೋಧವಿಲ್ಲ. ಮುಂಬೈ ಮಾದರಿಯಲ್ಲಿ ಅಂಡರ್‌ ಗ್ರೌಂಡ್‌ನಲ್ಲಿ ಮೆಟ್ರೋ ನಿರ್ಮಾಣ ಮಾಡಲಿ. ಮೈಸೂರಿನ ಜನಸಂಖ್ಯೆಗನುಗುಣವಾಗಿ ಕಾಮಗಾರಿ ಕೈಗೊಳ್ಳಲಿ, ಗ್ರೇಟರ್‌ ಮೈಸೂರು ನಿರ್ಮಾಣ ಮಾಡುವಾಗ ಸ್ಥಳೀಯರಿಗೆ ಅನುಕೂಲವಾಗುವಂತೆ ಅಭಿವೃದ್ಧಿ ಕಾಮಗಾರಿ ಮಾಡಲಿ, ಜನರ ವಿರೋಧದ ನಡುವೆ ಫ್ಲೈಓವರ್‌ ಕಾಮಗಾರಿ ಕೈಗೆತ್ತಿಕೊಂಡರೆ ಕಾನೂನಾತಕ ಹೋರಾಟ ಮಾಡುತ್ತೇವೆ. ಜನರ ಸಹಕಾರದೊಂದಿಗೆ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಗ್ರೇಟರ್‌ ಮೈಸೂರಿನಿಂದ ಒಳಿತಾಗಲಿದೆ. ಆದರೆ ಗ್ರೇಟರ್‌ ಮೈಸೂರು ನಿರ್ಮಾಣ ಮಾಡುವಾಗ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಬೆಂಗಳೂರು ಮಾದರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಬಾರದು ಎಂದು ಸಂಸದ ಯದುವೀರ್‌ ಒಡೆಯರ್‌ ಹೇಳಿದ್ದಾರೆ.

ತೀವ್ರಗೊಂಡ ಕಬ್ಬು ಬೆಳೆಗಾರರ ಹೋರಾಟ, ಹೆದ್ದಾರಿ ಬಂದ್‌, ವಿಜಯೇಂದ್ರ ಅಹೋರಾತ್ರಿ ಧರಣಿ

ಬೆಂಗಳೂರು,ನ.5– ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿ ಹಾಗೂ ಬಾಕಿ ಹಣವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟ 7ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರ ನಡೆಸಿದ ಸಂಧಾನವು ವಿಫಲವಾಗಿದೆ.

ರೈತರ ಸಹನೆ ಕಟ್ಟೆ ಒಡೆದಿದ್ದು, ಬೆಳಗಾವಿಯ ಸುವರ್ಣಸೌಧದ ಬಳಿ ಪುಣೆ-ಬೆಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 4ನ್ನು ಬಂದ್‌ ಮಾಡಿದ್ದಾರೆ. ಮತ್ತೊಂದೆಡೆ ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳಗಾವಿ, ಚಿಕ್ಕೋಡಿ, ಹುಕ್ಕೇರಿ ಸೇರಿದಂತೆ ಮತ್ತಿತರ ಕಡೆ ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸರ್ಕಾರ ಕಬ್ಬಿಗೆ ಬೆಲೆ ನಿಗದಿಪಡಿಸುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ರೈತರು ಗುಡುಗಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಸರ್ಕಾರದ ಪರವಾಗಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಬಂದು ರೈತರ ಮನವೊಲಿಸುವ ಪ್ರಯತ್ನ ನಡೆಸಿದರು. ಸರ್ಕಾರ ನಿಮ ಪರವಾಗಿದೆ. ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಪ್ರತಿಭಟನೆಯನ್ನು ಕೈಬಿಡಿ ಎಂದು ಮನವಿ ಮಾಡಿಕೊಂಡರು.
ಆದರೆ ಪಟ್ಟು ಸಡಿಲಿಸದ ರೈತರು ನಮಗೆ ಸ್ಥಳದಲ್ಲೇ ದರ ಘೋಷಣೆ ಮಾಡಬೇಕು. ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ಈ ಸ್ಥಳದಿಂದ ಕದಲುವುದಿಲ್ಲ ಎಂದರು.

ಇನ್ನೊಂದೆಡೆ ರೈತರು ಹೆದ್ದಾರಿಗಳನ್ನು ಬಂದ್‌ ಮಾಡಿ ಅರೆಬೆತ್ತಲೆ ಮೆರವಣಿಗೆ ನಡೆಸಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಕಣರೆಯಾಗಿದ್ದಾರೆ ಇವರನ್ನು ಹುಡುಕಿಕೊಡಿ ಎಂದು ಎಂದು ಶವಯಾತ್ರೆಯ ಅಣಕು ಪ್ರದರ್ಶನ ನಡೆಸಿದರು. ಇನ್ನು ಕೆಲವು ರೈತರು ಬಾರುಕೋಲು ಚಳವಳಿಯನ್ನೂ ಸಹ ನಡೆಸಿ ತಮ ಆಕ್ರೋಶವನ್ನು ಹೊರಹಾಕಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಬ್ಬಿಗೆ ಬೆಲೆ ನಿಗದಿ ಮಾಡದ ಕಾರಣ ನಾವು ಬೀದಿಗೆ ಬಿದ್ದಿದ್ದೇವೆ. ತತಕ್ಷಣವೇ ಪ್ರತಿ ಟನ್‌ ಕಬ್ಬಿಗೆ 3,500 ಬೆಲೆ ನಿಗದಿ ಹಾಗೂ ಹಿಂದಿನ ಎರಡು ವರ್ಷಗಳ ಬಾಕಿ ಪಾವತಿಸಬೇಕು. ಮತ್ತೊಂದೆಡೆ ಅನ್ನದಾತರು ಪಂಜಾಬ್‌ ಮಾದರಿಯ ಹೋರಾಟಕ್ಕೂ ಮುಂದಾಗಿದ್ದು, ನವೆಂಬರ್‌ 7ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ ಕೊಟ್ಟಿದ್ದಾರೆ.

ಅನೇಕ ಜಿಲ್ಲೆಗಳಲ್ಲಿ ಹೆದ್ದಾರಿಗಳು ನಿರ್ಬಂಧಿಸಲ್ಪಟ್ಟಿರುವುದರಿಂದ, ರೈತರ ಚಳವಳಿಯು ಈಗ ರಾಜ್ಯವು ಇತ್ತೀಚಿನ ದಿನಗಳಲ್ಲಿ ಕಂಡ ಅತಿದೊಡ್ಡ ಕೃಷಿ ಸಂಘರ್ಷಗಳಲ್ಲಿ ಒಂದಾಗಿದೆ, ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ರಾಜಕೀಯ ಸವಾಲನ್ನು ತಂದೊಡ್ಡಿದೆ. ರೈತರ ಪ್ರತಿಭಟನೆಗೆ ಬೆಂಬಲ ನೀಡಿರುವ ಬಿಜೆಪಿ ನಾಯಕರು ರೈತರ ಜೊತೆ ರಾತ್ರಿ ಇಡೀ ಕೊರೆಯುವ ಚಳಿಯಲ್ಲೇ ಮಲಗಿದ್ದರು.

ಕಬ್ಬು ಬೆಳೆಗಾರರ ಹೋರಾಟಕ್ಕೆ ನೆರೆಯ ರಾಜ್ಯ ಮಹಾರಾಷ್ಟ್ರದ ರಾಜಕಾರಣಿಗಳು, ರೈತ ನಾಯಕರು ಭೇಟಿ ನೀಡುತ್ತಿದ್ದಾರೆ. ಅದರಲ್ಲೂ ರಾಷ್ಟ್ರವ್ಯಾಪಿ ರೈತ ಚಳುವಳಿಯ ನಾಯಕ ರಾಜು ಶೆಟ್ಟಿ ಅವರ ಆಗಮನ ಗಮನ ಸೆಳೆದಿದೆ. ಆದರೆ ರಾಜ್ಯವನ್ನು ಆಳುವ ಪಕ್ಷದ ನಾಯಕರಿಂದ ಯಾವುದೇ ಸ್ಪಂದನೆ ಕಾಣಿಸುತ್ತಿಲ್ಲ. ಇತ್ತ ಸಕ್ಕರೆ ಕಾರ್ಖಾನೆ ಮಾಲೀಕರು ಜಾಣ ಮೌನ ವಹಿಸಿರುವುದು ಚರ್ಚೆಗೆ ಕಾರಣವಾಗಿದೆ.

ಗುರ್ಲಾಪುರ ಕ್ರಾಸ್‌‍ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋರಾಟ ನಡೆಯುತ್ತಿದ್ದು, ಮನೆಮಠ ಬಿಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲೇ ರೈತರು ಜೀವನ ನಡೆಸುತ್ತಿದ್ದಾರೆ. ರಸ್ತೆಯಲ್ಲಿಯೇ ಊಟ, ನಿದ್ದೆ ಎಲ್ಲವೂ ನಡೆಯುತ್ತಿದೆ. ರಸ್ತೆ ಪಕ್ಕದಲ್ಲಿ ರೈತರಿಗಾಗಿ ಬೃಹತ್‌ ಪ್ರಮಾಣದ ಊಟ ತಯಾರಿಸಲಾಗುತ್ತಿದೆ. ಅಕ್ಕಪಕ್ಕದ ಗ್ರಾಮಸ್ಥರು ರೈತರಿಗೆ ದವಸ ಧಾನ್ಯಗಳನ್ನು ನೀಡಿದ್ದಾರೆ.

ಕನ್ನಡ ಸಂಘಟನೆಗಳ ಬೆಂಬಲದೊಂದಿಗೆ ರೈತರು ಅಥಣಿಯಲ್ಲಿ ಬಂದ್‌ಗೆ ಕರೆ ನೀಡಿದ್ದು, ಇದು ಚಿಕ್ಕೋಡಿ, ಗುರ್ಲಾಪುರ, ಜಂಬೋಟಿ ಮತ್ತು ಗೋಕಾಕ್‌ಗೆ ವ್ಯಾಪಿಸಿ, ಸಾಮಾನ್ಯ ಜನಜೀವನ ಸ್ಥಗಿತಗೊಂಡಿದೆ. ಅಂಗಡಿಗಳು ಮತ್ತು ವ್ಯವಹಾರಗಳು ಸ್ವಯಂಪ್ರೇರಣೆಯಿಂದ ಮುಚ್ಚಲ್ಪಟ್ಟಿದ್ದರೆ, ಗೋಕಾಕ್‌-ಅಥಣಿ ರಸ್ತೆ ಮತ್ತು ದರೂರ್‌-ಹಲ್ಯಾಲ್‌ ಸೇತುವೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ರೈತರು ಪ್ರಮುಖ ಹೆದ್ದಾರಿಗಳನ್ನು ತಡೆದಿದ್ದಾರೆ.

ರೈತರ ಬೇಡಿಕೆಗಳೇನು?:
ಸರ್ಕಾರವು ಪ್ರತಿ ಟನ್‌ ಕಬ್ಬಿಗೆ 3,500 ರೂ. ಬೆಂಬಲ ಬೆಲೆ ಘೋಷಿಸಬೇಕು ಮತ್ತು ಬಾಕಿ ಪಾವತಿಗಳನ್ನು ವಿಳಂಬ ಮಾಡದೆ ಪಾವತಿಸಬೇಕೆಂದು ಒತ್ತಾಯಿಸಿದ್ದು, ನಾವು ಸರ್ಕಾರಕ್ಕೆ ಸಂಜೆಯವರೆಗೆ ಸಮಯ ನೀಡುತ್ತಿದ್ದೇವೆ. ಸಕಾರಾತಕವಾಗಿ ಪ್ರತಿಕ್ರಿಯಿಸಲು ವಿಫಲವಾದರೆ, ರಾಜ್ಯಾದ್ಯಂತ ತೀವ್ರ ಆಂದೋಲನ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿ ಟನ್‌ ಕಬ್ಬಿಗೆ ಕೇಂದ್ರ, ರಾಜ್ಯ ತಲಾ 5 ಸಾವಿರ ರೂ ತೆರಿಗೆ ತೆಗೆದುಕೊಳ್ಳುತ್ತೆ. ರಾಜ್ಯ, ಕೇಂದ್ರ ಸರ್ಕಾರ ತಲಾ ಒಂದು ಸಾವಿರ ರೂ ತೆರಿಗೆ ಹಣ ರೈತರಿಗೆ ನೀಡಲಿ. ಸಕ್ಕರೆ ಕಾರ್ಖಾನೆಯಿಂದ 3,500, ಕೇಂದ್ರ, ರಾಜ್ಯದಿಂದ 2 ಸಾವಿರ ರೂ.ನಂತೆ. ಆ ಮೂಲಕ ಪ್ರತಿ ಟನ್‌ ಕಬ್ಬಿಗೆ 5500 ರೂ. ನೀಡಬೇಕೆಂದು ಮತ್ತೊಂದು ಬೇಡಿಕೆಯಾಗಿದೆ.

ಹತ್ತು ವರ್ಷಗಳ ಹಿಂದೆ ಸಕ್ಕರೆ ಕೆ.ಜಿ.ಗೆ 27 ಇತ್ತು, ಆಗಲೂ ರೈತರಿಗೆ 3,000 ಮಾತ್ರ ಸಿಕ್ಕಿತು. ಈಗ ಅದು 50 ತಲುಪಿದರೂ ರೈತನ ಪಾಲಿನ ದರದಲ್ಲಿ ಬದಲಾವಣೆ ಇಲ್ಲ. ರೈತರು ಹೇಳುವಂತೆ ಕಾರ್ಖಾನೆ ಮಾಲೀಕರು ನಮಿಂದ 100 ರೂ.ತೆಗೆದುಕೊಳ್ಳುತ್ತಾರೆ. ಅದರಲ್ಲಿ 40 ರೂ. ತಾವು ಇಟ್ಟುಕೊಂಡು 60 ರೂ.ರೈತನಿಗೆ ನೀಡಲಿ. ಆದರೆ 100 ರೂ.ಗಳಲ್ಲಿ 90 ರೂ. ತಮ ಜೇಬಿಗೆ ಹಾಕಿಕೊಂಡು 10 ರೂ.ಮಾತ್ರ ಬೆಳೆಗಾರರಿಗೆ ಕೊಟ್ಟು ಅನ್ಯಾಯ ಮಾಡುತ್ತಿದ್ದಾರೆ ಎಂಬ ಆರೋಪ ಇದೆ.