Friday, November 7, 2025
Home Blog Page 30

ದೀಪಾವಳಿಯಂದು ದೇಶವಾಸಿಗಳಿಗೆ ಪತ್ರ ಬರೆದ ಪ್ರಧಾನಿ ಮೋದಿ

ನವದೆಹಲಿ,ಅ.21- ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿಯಂದು ದೇಶದ ನಾಗರಿಕರಿಗೆ ಪತ್ರ ಬರೆದಿದ್ದು, ಆಪರೇಷನ್‌ ಸಿಂಧೂರ್‌ ಮತ್ತು ನಕ್ಸಲಿಸಂ ವಿರುದ್ಧದ ಹೋರಾಟದ ಯಶಸ್ಸು ಕಂಡಿದೆ. ಜಗತ್ತು ಬಿಕ್ಕಟ್ಟಿನಿಂದ ಸುತ್ತುವರಿದಿರುವ ಸಮಯದಲ್ಲಿ ಭಾರತವು ಸ್ಥಿರತೆಯ ಸಂಕೇತವಾಗಿ ಹೊರಹೊಮ್ಮಿದೆ ಎಂದು ಪ್ರತಿಪಾದಿಸಿದ್ದಾರೆ.

ತಮ ಸರ್ಕಾರದ ಐತಿಹಾಸಿಕ ಸಾಧನೆಗಳಲ್ಲಿ ಜಿಎಸ್ಟಿ ದರಗಳನ್ನು ಕಡಿಮೆ ಮಾಡುವ ನಿರ್ಧಾರವನ್ನು ಪಟ್ಟಿ ಮಾಡಿರುವ ಅವರು, ಜಿಎಸ್ಟಿ ಉಳಿತಾಯ ಉತ್ಸವ ಸಮಯದಲ್ಲಿ ನಾಗರಿಕರು ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿಸುತ್ತಿದ್ದಾರೆ.

ಏಕ್‌ ಭಾರತ್‌, ಶ್ರೀಷ್ಠ ಭಾರತದ ಮನೋಭಾವವನ್ನು ಉತ್ತೇಜಿಸಲು, ಎಲ್ಲಾ ಭಾಷೆಗಳನ್ನು ಗೌರವಿಸಲು, ಆರೋಗ್ಯಕ್ಕೆ ಆದ್ಯತೆ ನೀಡಲು ಮತ್ತು ಯೋಗವನ್ನು ಅಳವಡಿಸಿಕೊಳ್ಳಲು ನಾಗರಿಕರು ಅಳವಡಿಸಿಕೊಳ್ಳಬೇಕೆಂದು ಸ್ವದೇಶಿಯರಿಗೆ ಕರೆಕೊಟ್ಟಿದ್ದಾರೆ.

ಈ ಎಲ್ಲಾ ಪ್ರಯತ್ನಗಳು ತ್ವರಿತವಾಗಿ ವಿಕ್ಷಿತ್‌ ಭಾರತ್‌ ಕಡೆಗೆ ನಮನ್ನು ಕರೆದೊಯ್ಯುತ್ತವೆ. ದೀಪಾವಳಿಯ ಶುಭ ಸಂದರ್ಭದಲ್ಲಿ ನಾನು ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಹೇಳುತ್ತೇನೆ, ಇದು ಶಕ್ತಿ ಮತ್ತು ಉತ್ಸಾಹದಿಂದ ತುಂಬಿದ ಹಬ್ಬವಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರದ ಭವ್ಯ ನಿರ್ಮಾಣದ ನಂತರ ಇದು ಎರಡನೇ ದೀಪಾವಳಿ ಎಂದು ಅವರು ಹೇಳಿದರು.

ಭಗವಂತ ಶ್ರೀರಾಮನು ನಮಗೆ ಸದಾಚಾರವನ್ನು ಎತ್ತಿಹಿಡಿಯಲು ಕಲಿಸುತ್ತಾನೆ. ಅನ್ಯಾಯದ ವಿರುದ್ಧ ಹೋರಾಡಲು ನಮಗೆ ಧೈರ್ಯವನ್ನು ನೀಡುತ್ತಾನೆ. ನಾವು ಕೆಲವು ತಿಂಗಳ ಹಿಂದೆ ಆಪರೇಷನ್‌ ಸಿಂಧೂರ್‌ ಸಮಯದಲ್ಲಿ, ಭಾರತವು ಧರ್ಮವನ್ನು ಎತ್ತಿಹಿಡಿಯಿತು ಮಾತ್ರವಲ್ಲದೆ ಅನ್ಯಾಯದ ಸೇಡು ತೀರಿಸಿಕೊಂಡಿತು ಎಂದು ಹೇಳಿದ್ದಾರೆ.

ಈ ದೀಪಾವಳಿ ವಿಶೇಷವಾಗಿ ಏಕೆಂದರೆ ಮೊದಲ ಬಾರಿಗೆ ದೇಶದಾದ್ಯಂತ ದೂರದ ಪ್ರದೇಶಗಳು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ.ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯನ್ನು ಬೇರು ಸಮೇತ ನಿರ್ಮೂಲನೆ ಮಾಡಿರುವ ಜಿಲ್ಲೆಗಳಿವು. ಇತ್ತೀಚಿನ ದಿನಗಳಲ್ಲಿ ಹಿಂಸಾಚಾರದ ಹಾದಿಯನ್ನು ತೊರೆದು ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರುತ್ತಿರುವ ಅನೇಕ ವ್ಯಕ್ತಿಗಳು ನಮ ದೇಶದ ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವುದನ್ನು ನಾವು ನೋಡಿದ್ದೇವೆ. ಇದು ರಾಷ್ಟ್ರದ ದೊಡ್ಡ ಸಾಧನೆಯಾಗಿದೆ ಎಂದು ಮೋದಿ ಅವರು ಪ್ರಶಂಸಿದ್ದಾರೆ.

ಬಿಹಾರ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ RJD ಅಭ್ಯರ್ಥಿ ಅರೆಸ್ಟ್

ಸಸಾರಂ,ಅ.21- ಬಿಹಾರದ ಸಸಾರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಕೂಡಲೇ ಆರ್ಜೆಡಿ ಅಭ್ಯರ್ಥಿ ಸತೇಂದ್ರ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸತೇಂದ್ರ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿಯಾಗಿರುವ ಹಿನ್ನೆಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ನಾಮಪತ್ರ ಸಲ್ಲಿಕೆ ವೇಳೆ ಅವರೊಂದಿಗೆ ಆಗಮಿಸಿದ್ದ ಬೆಂಬಲಿಗರಿಗೆ ಈ ಕುರಿತು ಯಾವುದೇ ಮಾಹಿತಿ ಇರಲಿಲ್ಲ.

ನಿನ್ನೆ ಸತೇಂದ್ರ ಬೆಂಬಲಿಗರೊಂದಿಗೆ ಸಸಾರಂ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆಗೆ ಆಗಮಿಸಿದರು. ಇದೇ ವೇಳೆ ಪೊಲೀಸರು ಜಾಮೀನು ರಹಿತ ವಾರಂಟ್‌ನೊಂದಿಗೆ ಪೊಲೀಸರು ಕೂಡ ಆಗಮಿಸಿದರು. ಬಳಿಕ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಿದ ಪೊಲೀಸರು, ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಸತೇಂದ್ರ ಅವರನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿ ತಿಳಿಸಿದ್ದಾರೆ.

2004 ರಲ್ಲಿ ಗಹ್ರ್ವಾ ಜಿಲ್ಲೆಯ ಚಿರೌಂಜಿಯಾ ಮೋರ್ನಲ್ಲಿ ನಡೆದ ಬ್ಯಾಂಕ್‌ ದರೋಡೆ ಪ್ರಕರಣದಲ್ಲಿ ಸತೇಂದ್ರ ಆರೋಪಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬೆಳವಣಿಗೆ ಕುರಿತು ಮಾಹಿತಿ ನೀಡಿದ ಜಾರ್ಖಂಡ್‌ನ ಗಹ್ರ್ವಾದ ಸದರ್‌ ಪೊಲೀಸ್‌‍ ಠಾಣೆಯ ಉಸ್ತುವಾರಿ ಅಧಿಕಾರಿ ಸುನಿಲ್‌ ತಿವಾರಿ, 2018ರಲ್ಲಿ ಬ್ಯಾಂಕ್‌ ದರೋಡೆ ಪ್ರಕರಣದಲ್ಲಿ ಸತೇಂದ್ರ ವಿರುದ್ಧ ಶಾಶ್ವತ ವಾರಂಟ್‌ ಜಾರಿಯಾಗಿದೆ.

ಪೊಲೀಸ್‌‍ ಸಿಬ್ಬಂದಿಯ ದೃಢವಾದ ಸಮರ್ಪಣೆಯನ್ನು ಸ್ಮರಿಸಿದ ಪ್ರಧಾನಿ ಮೋದಿ

ನವದೆಹಲಿ,ಅ.21-ದೃಢವಾದ ಸಮರ್ಪಣೆ ರಾಷ್ಟ್ರ ಮತ್ತು ಅದರ ಜನರನ್ನು ಸುರಕ್ಷಿತವಾಗಿರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪೊಲೀಸ್‌‍ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿದ್ದಾರೆ. ಪೊಲೀಸ್‌‍ ಸ್ಮರಣಾರ್ಥ ದಿನದಂದು, ನಾವು ನಮ್ಮ ಪೊಲೀಸ್‌‍ ಸಿಬ್ಬಂದಿಯ ಧೈರ್ಯವನ್ನು ವಂದಿಸುತ್ತೇವೆ ಮತ್ತು ಕರ್ತವ್ಯದ ಸಾಲಿನಲ್ಲಿ ಅವರು ಮಾಡಿದ ಅತ್ಯುನ್ನತ ತ್ಯಾಗವನ್ನು ಸರಿಸುತ್ತೇವೆ. ಅವರ ದೃಢವಾದ ಸಮರ್ಪಣೆ ನಮ ದೇಶ ಮತ್ತು ಜನರನ್ನು ಸುರಕ್ಷಿತವಾಗಿರಿಸುತ್ತದೆ ಎಂದು ಪ್ರಧಾನಿ ಮೋದಿ ಎಕ್ಸನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿಕ್ಕಟ್ಟಿನ ಸಮಯದಲ್ಲಿ ಮತ್ತು ಅಗತ್ಯದ ಕ್ಷಣಗಳಲ್ಲಿ ಅವರ ಧೈರ್ಯ ಮತ್ತು ಬದ್ಧತೆ ಶ್ಲಾಘನೀಯ. ಪ್ರತಿ ವರ್ಷ ಅ. 21 ರಂದು ಪೊಲೀಸ್‌‍ ಸರಣಾರ್ಥ ದಿನವನ್ನು ಆಚರಿಸಲಾಗುತ್ತದೆ. 1959 ರಲ್ಲಿ ಚೀನಾದೊಂದಿಗಿನ ಭಾರತದ ಗಡಿಯನ್ನು ರಕ್ಷಿಸುವ ಸಂದರ್ಭದಲ್ಲಿ ತಮ ಪ್ರಾಣವನ್ನು ಅರ್ಪಿಸಿದ ಹತ್ತು ಪೊಲೀಸರ ತ್ಯಾಗವನ್ನು ಸರಿಸಲು ಈ ದಿನವನ್ನು ದೇಶದ ಎಲ್ಲಾ ಪೊಲೀಸ್‌‍ ಪಡೆಗಳಲ್ಲಿ ಹುತಾತರ ದಿನವನ್ನಾಗಿ ಆಚರಿಸಲಾಗುತ್ತದೆ.

ನವದೆಹಲಿ,ಅ.21-ಪೊಲೀಸರು ಮತ್ತು ಭದ್ರತಾ ಪಡೆಗಳ ಅವಿರತ ಪ್ರಯತ್ನದಿಂದಾಗಿ ಭಾರತದಲ್ಲಿ ಎಡಪಂಥೀಯ ಉಗ್ರವಾದ ಹೋರಾಟ ಶೀಘ್ರದಲ್ಲೇ ಇತಿಹಾಸದ ಪುಟ ಸೇರಲಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.ಪೋಲಿಸ್‌‍ ಸಂಸರಣಾ ದಿನಾಚರಣೆಯಲ್ಲಿ ದೆಹಲಿಯ ಚಾಣಕ್ಯಪುರಿಯಲ್ಲಿರುವ ರಾಷ್ಟ್ರೀಯ ಪೊಲೀಸ್‌‍ ಸಾರಕದಲ್ಲಿ ಔಪಚಾರಿಕ ಸಿಬ್ಬಂದಿಯಿಂದ ಪುಷ್ಪಾರ್ಚನೆ ಮಾಡಿದರು ಮತ್ತು ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ನಕ್ಸಲೀಯರ ವಿರುದ್ಧದ ಅಭಿಯಾನದ ಯಶಸ್ಸನ್ನು ನಾವು ಒಂದು ಕಾಲದಲ್ಲಿ ರಾಜ್ಯದ ವಿರುದ್ಧ ಶಸಾಸಗಳನ್ನು ಹಿಡಿದಿದ್ದ ಮಾವೋವಾದಿಗಳು ಇಂದು ಶರಣಾಗುತ್ತಿದ್ದಾರೆ. ಅಭಿವೃದ್ಧಿಯ ಮುಖ್ಯವಾಹಿನಿಯಲ್ಲಿ ತಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಭದ್ರತಾ ಪಡೆಗಳ ಅವಿರತ ಪ್ರಯತ್ನದಿಂದಾಗಿ, ಈ ಸಮಸ್ಯೆಯು ಈಗ ಇತಿಹಾಸದ ಅಂಚಿನಲ್ಲಿದೆ. ಇದಕ್ಕಾಗಿ ನಮ ಎಲ್ಲಾ ಭದ್ರತಾ ಸಿಬ್ಬಂದಿಗಳು ಅಭಿನಂದನೆಗೆ ಅರ್ಹರು ಎಂದು ಶ್ಲಾಸಿದರು.

2026ರ ಮಾರ್ಚ್‌ ವೇಳೆಗೆ ಭಾರತದಲ್ಲಿ ನಕ್ಸಲ್‌ ಹಾವಳಿ ಅಂತ್ಯವಾಗಲಿದೆ ಎಂದು ಕೇಂದ್ರ ಘೋಷಿಸಿದೆ. ನಮ ಆಂತರಿಕ ಭದ್ರತೆಗೆ ಬಹುಕಾಲದಿಂದ ನಕ್ಸಲಿಸಂ ಸಮಸ್ಯೆಯಾಗಿದೆ, ಛತ್ತೀಸ್ಗಢ, ಜಾರ್ಖಂಡ್‌, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ಹಲವು ಜಿಲ್ಲೆಗಳು ನಕ್ಸಲಿಸಂ ಪೀಡಿತವಾಗಿದ್ದ ಕಾಲವೊಂದಿತ್ತು.

ಹಳ್ಳಿಗಳಲ್ಲಿ ಶಾಲೆಗಳು ಮುಚ್ಚಿದ್ದವು, ರಸ್ತೆಗಳಿಲ್ಲ, ಜನ ಭಯದಲ್ಲಿ ಬದುಕುತ್ತಿದ್ದರು.ಈ ಸಮಸ್ಯೆ ಇನ್ನು ಮುಂದೆ ಉಳಿಯಬಾರದು ಎಂದು ನಾವು ನಿರ್ಧರಿಸಿದ್ದೇವೆ. ನಮ ಪೊಲೀಸ್‌‍, ಸಿಆರ್‌ಪಿಎ್‌‍, ಬಿಎಸ್‌‍ಎ್‌‍ ಮತ್ತು ಸ್ಥಳೀಯ ಆಡಳಿತವು ಸಂಘಟಿತ ರೀತಿಯಲ್ಲಿ ಒಟ್ಟಾಗಿ ಕೆಲಸ ಮಾಡಿದ ರೀತಿ ಶ್ಲಾಘನೀಯ ಎಂದು ಹಾಡಿಹೊಗಳಿದರು.

ಒಂದು ಕಾಲದಲ್ಲಿ ನಕ್ಸಲ್‌ ಹಬ್‌ ಆಗಿದ್ದ ಪ್ರದೇಶಗಳು ಈಗ ಶೈಕ್ಷಣಿಕ ಕೇಂದ್ರಗಳಾಗಿ ಬದಲಾಗುತ್ತಿವೆ.ಒಂದು ಕಾಲದಲ್ಲಿ ಕೆಂಪು ಕಾರಿಡಾರ್‌ ಎಂದು ಕುಖ್ಯಾತವಾಗಿದ್ದ ಭಾರತದ ಭಾಗಗಳು ಈಗ ಬೆಳವಣಿಗೆಯ ಕಾರಿಡಾರ್‌ ಆಗಿ ಬದಲಾಗಿವೆ. ಅಂತಹ ಬದಲಾವಣೆಗಳನ್ನು ತರಲು ಸರ್ಕಾರಕ್ಕೆ ಸಾಧ್ಯವಾಗಿದೆ ಮತ್ತು ಇದು ಸಂಭವಿಸಲು, ಪೊಲೀಸರು ಮತ್ತು ಭದ್ರತಾ ಪಡೆಗಳು ಅತ್ಯಂತ ಮಹತ್ವದ ಕೊಡುಗೆಯನ್ನು ನೀಡಿವೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಒದಗಿಸುತ್ತಿರುವ ಪೊಲೀಸ್‌‍ ಪಡೆಗಳ ಆಧುನೀಕರಣಕ್ಕಾಗಿ ಸಂಪನೂಲಗಳು ಮತ್ತು ಬಜೆಟ್‌ ಕುರಿತು ಮಾತನಾಡಿದ ಅವರು, ಈ ಸೀಮಿತ ಸಂಪನೂಲಗಳ ಅತ್ಯುತ್ತಮ ಬಳಕೆಯ ಅಗತ್ಯವನ್ನು ಪ್ರತಿಪಾದಿಸಿದರು.ವಿವಿಧ ಭದ್ರತಾ ಪಡೆಗಳ ನಡುವೆ ಸಮನ್ವಯ ಮತ್ತು ಏಕೀಕರಣದ ಮೂಲಕ ಇದನ್ನು ಸಾಧಿಸಬಹುದು.

ಪ್ರಸ್ತುತ ದಿನಗಳಲ್ಲಿ ಪೊಲೀಸರು ಅಪರಾಧದ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಗ್ರಹಿಕೆಯ ವಿರುದ್ಧ ಸಹ ಹೋರಾಡಬೇಕಾಗಿದೆ ಎಂದು ಅವರು ಕರೆಕೊಟ್ಟರು.
1959 ರಲ್ಲಿ ಲಡಾಖ್ನ ಹಾಟ್‌ ಸ್ಪ್ರಿಂಗ್‌ ಪ್ರದೇಶದಲ್ಲಿ ಚೀನಿ ಸೈನಿಕರು ನಡೆಸಿದ ದಾಳಿಯಲ್ಲಿ 10 ಸೆಂಟ್ರಲ್‌ ರಿಸರ್ವ್‌ ಪೊಲೀಸ್‌‍ ೇರ್ಸ್‌ ಸಿಬ್ಬಂದಿಯನ್ನು ಕೊಲ್ಲಲಾಗಿತ್ತು. ಅವರ ಸಾರಣಾರ್ಥ ಪ್ರತಿ ವರ್ಷ ಪೊಲೀಸ್‌‍ ಸರಣಾರ್ಥ ದಿನವನ್ನು ಆಚರಿಸಲಾಗುತ್ತದೆ.

ಬಿಹಾರ ಚುನಾವಣೆಗೆ ಕಾಂಗ್ರೆಸ್‌‍ ಸರ್ಕಾರ ಹಣ ನೀಡುತ್ತಿದೆ ಬಿಜೆಪಿಯವರು ಸುಳ್ಳುಹೇಳುತ್ತಿದ್ದಾರೆ : ರಾಮಲಿಂಗಾರೆಡ್ಡಿ ಕಿಡಿ

ಬೆಂಗಳೂರು, ಅ.21- ಬಿಹಾರ ಚುನಾವಣೆಗೆ ಕಾಂಗ್ರೆಸ್‌‍ ಸರ್ಕಾರ ಹಣ ನೀಡುತ್ತಿದೆ ಎಂಬ ಬಿಜೆಪಿಯವರ ಕಪೋಲಕಲ್ಪಿತ ಆರೋಪ ಹಾಸ್ಯಾಸ್ಪದ. ಸುಳ್ಳಿನ ಸರಮಾಲೆಗೆ ಕೊನೆಯೇ ಇಲ್ಲವೇ? ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.

ಸಂಸದ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್‌ ಅವರು ಹೇಳಿಕೆಗಳನ್ನು ನೀಡಿ ಬಿಹಾರದ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌‍ ಸರ್ಕಾರ ಹಣ ನೀಡುತ್ತಿದೆ ಎಂದು ಟೀಕಿಸಿದರು.
ಇದಕ್ಕೆ ತಮ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿರುವ ಅವರು, ಕರ್ನಾಟಕ ಬಿಜೆಪಿಯ ಸುಳ್ಳಿನ ಕಾರ್ಖಾನೆ ಮತ್ತೆ ಓವರ್‌ ಟೈಮ್‌ ಕೆಲಸ ಮಾಡುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

ಚುನಾವಣೆಗೆ ಅಕ್ರಮ ಭ್ರಷ್ಟಾಚಾರದ ಹಣವನ್ನು ಬಳಸುವುದು ಬಿಜೆಪಿಯವರ ಜಾಯಮಾನ, ಕಾಂಗ್ರೆಸ್‌‍ನದ್ದಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ದೇಶಕ್ಕೆ ನೀಡಿದ ಕೊಡುಗೆ ಮತ್ತು ಜನಪರ ಕೆಲಸಗಳಿಂದ ಕಾಂಗ್ರೆಸ್‌‍ ಪಕ್ಷ ಇಂದಿಗೂ ಸದೃಢವಾಗಿದೆ ಎಂದಿದ್ದಾರೆ.

ನಿಮದೇ ಆಡಳಿತದ ಕರಾಳ ಇತಿಹಾಸವನ್ನು ಒಮೆ ನೆನಪಿಸುತ್ತೇನೆ. 2008-2013 ಮತ್ತು 2019-2023ರ ಈ ಅವಧಿಗಳಲ್ಲಿ ಕರ್ನಾಟಕದಲ್ಲಿ ನಿಮದೇ ಸರ್ಕಾರವಿತ್ತು. ಆಗ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್‌‍. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಜಗದೀಶ್‌ ಶೆಟ್ಟರ್‌ ಮತ್ತು ಬಸವರಾಜ ಬೊಮಾಯಿ ಅವರ ಕಾಲದಲ್ಲಿ ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್‌ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಚುನಾವಣೆಗಳು ನಡೆದವು. ಆಗ ಕರ್ನಾಟಕದ ಸಂಪತ್ತನ್ನು ಆ ಚುನಾವಣೆಗಳಿಗೆ ನೀವೆಲ್ಲರೂ ಹಂಚಿ ಕಳುಹಿಸಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಜನತೆಯ ಮುಂದೆ ಉತ್ತರಿಸುವ ಧೈರ್ಯ ನಿಮಗಿದೆಯೇ? ಆಪರೇಷನ್‌ ಕಮಲ ಹಣದ ಹೊಳೆ ಹರಿಸಿ, ಶಾಸಕರನ್ನು ಕುದುರೆಗಳಂತೆ ಖರೀದಿಸಿ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡಿದ ಆಪರೇಷನ್‌ ಕಮಲದ ಪಿತಾಮಹರು ನೀವು ಎನ್ನುವುದು ರಾಜ್ಯದ ಮೂಲೆ ಮೂಲೆಯಲ್ಲಿರುವ ಸಾಮಾನ್ಯ ಪ್ರಜೆಗೂ ತಿಳಿದಿದೆ ಎಂದು ತಿರುಗೇಟು ನೀಡಿದ್ದಾರೆ.

ಭ್ರಷ್ಟಾಚಾರದ ಗಂಗೋತ್ರಿಯಾದ ನೀವು, ಇಂದು ಶುದ್ಧ ಹಸ್ತರೆಂದು ಬಿಂಬಿಸಿಕೊಳ್ಳಲು ಹೊರಟಿರುವುದು ಈ ಶತಮಾನದ ಅತಿ ದೊಡ್ಡ ಜೋಕ್‌! ಅಧಿಕಾರಕ್ಕಾಗಿ ನೀವು ಖರೀದಿಸಿದ ಕ್ರಿಮಿನಲ್‌ ಹಿನ್ನೆಲೆಯ ಶಾಸಕರನ್ನು ಕರ್ನಾಟಕ ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.
ರಾಜ್ಯ ಗುತ್ತಿಗೆದಾರರ ಸಂಘವು ಶೇ. 40 ರಷ್ಟು ಕಮಿಷನ್‌ ಆರೋಪ ಮಾಡಿ ಪ್ರಧಾನಿಗೆ ಪತ್ರ ಬರೆದು ನಿಮ ಸರ್ಕಾರದ ಭ್ರಷ್ಟಾಚಾರವನ್ನು ಜಗಜ್ಜಾಹೀರು ಮಾಡಿತ್ತು. ಆ ಕಮಿಷನ್‌ ಹಣ ಯಾವ ಯಾವ ರಾಜ್ಯಗಳಿಗೆ ಹೋಯಿತು ಎಂದು ಜನತೆಗೆ ಈಗಲಾದರೂ ಲೆಕ್ಕ ಕೊಡುವಿರ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ನಮ ಸರ್ಕಾರ ಗ್ಯಾರಂಟಿಗಳ ಮೂಲಕ ರಾಜ್ಯದ ಬಡವರ ಖಾತೆಗೆ ನೇರವಾಗಿ ಹಣ ಜಮೆ ಮಾಡುತ್ತಿದೆ. ನಿಮಂತೆ ಚುನಾವಣಾ ಬಾಂಡ್‌ಗಳ ಹೆಸರಿನಲ್ಲಿ ಕಪ್ಪು ಹಣವನ್ನು ಬಿಳಿ ಮಾಡುವ ಚಾಳಿ ನಮಗಿಲ್ಲ. ವಾಸ್ತವವಾಗಿ, 2019ರಿಂದ ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ ಬರೋಬ್ಬರಿ 6,060 ಕೋಟಿ ಸಂಗ್ರಹಿಸಿದ್ದು, ಅದರಲ್ಲಿ ಇಡಿ-ಐಟಿ ತನಿಖೆ ಎದುರಿಸುತ್ತಿದ್ದ ಕಂಪನಿಗಳಿಂದಲೇ 2746 ಕೋಟಿಗೂ ಹೆಚ್ಚು ದೊಡ್ಡ ಮೊತ್ತದ ದೇಣಿಗೆ ಪಡೆಯಲಾಗಿತ್ತು. ಈ ಭ್ರಷ್ಟ ಹಣವನ್ನೇ ನೀವು ಬೇರೆ ರಾಜ್ಯಗಳ ಚುನಾವಣೆಗೆ ಬಳಸುತ್ತಿರುವುದು ಅಲ್ಲವೇ? ನೀವು ನಮಗೆ ಪಾಠ ಹೇಳುವ ನೈತಿಕತೆ ಉಳಿಸಿಕೊಂಡಿಲ್ಲ. ಮೊದಲು ನಿಮ ಆಡಳಿತದ ಬಗ್ಗೆ ಆತಾವಲೋಕನ ಮಾಡಿಕೊಳ್ಳಿ ಎಂದು ತಾಕೀತು ಮಾಡಿದ್ದಾರೆ.

ಡಿಸಿಎಂ ಡಿಕೆಶಿ ಭೇಟಿ ಮಾಡಿದ ಉದ್ಯಮಿ ಕಿರಣ್‌ ಮಜುಂದಾರ್‌ ಷಾ

ಬೆಂಗಳೂರು, ಅ.21- ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಟೀಕೆ ಮಾಡಿ ವಿರೋಧ ಪಕ್ಷಗಳಿಗೆ ಅಸ್ತ್ರ ಒದಗಿಸಿದ್ದ ಉದ್ಯಮಿ ಕಿರಣ್‌ ಮಜುಂದಾರ್‌ ಷಾ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ತಮ ಸಂಸ್ಥೆಯ ಕಾರ್ಯಕ್ರಮಕ್ಕೆ ಆಹ್ವಾನಿಸುವ ಸಲುವಾಗಿ ಕಿರಣ್‌ಮಜುಂದಾರ್‌ ಷಾ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಹಾಗೂ ಇತರ ಸಚಿವರನ್ನು ಭೇಟಿಯಾಗಿದ್ದರು ಎನ್ನಲಾಗಿದೆ.ಈ ಸಂದರ್ಭದಲ್ಲಿ ಇಬ್ಬರು ನಾಯಕರ ಜೊತೆ ಪ್ರತ್ಯೇಕ ಮಾತುಕತೆ ನಡೆಸಿರುವ ಕಿರಣ್‌ ಮಜುಂದಾರ್‌ ಷಾ ಇತ್ತೀಚಿನ ದಿನಗಳ ತಮ ಟೀಕೆಗಳ ಕುರಿತು ಸ್ಪಷ್ಟನೆ ನೀಡುವುದಾಗಿ ತಿಳಿದು ಬಂದಿದೆ.

ರಸ್ತೆ ಗುಂಡಿಗಳ ವಿಚಾರವಾಗಿ ಕಿರಣ್‌ ಮಜುಂದಾರ್‌ ಷಾ ಹಾಗೂ ಇನ್ಫೋಸಿಸ್‌‍ನ ಸಂಸ್ಥಾಪಕರಲ್ಲೊಬ್ಬರಾದ ಮೋಹನ್‌ದಾಸ್‌‍ ಪೈ ಇಬ್ಬರೂ ನಿರಂತರವಾಗಿ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದರು. ತಮ ಸಾಮಾಜಿಕ ಜಾಲತಾಣಗಳಲ್ಲಿ ರಸೆ್ತಗಳ ದುಸ್ಥಿತಿ, ಸಂಚಾರ ದಟ್ಟಣೆ ಸೇರಿದಂತೆ ಹಲವಾರು ಅವ್ಯವಸ್ಥೆಗಳ ಬಗ್ಗೆ ಪ್ರಸ್ತಾಪಿಸಿದರು. ಇದು ಪರ ವಿರೋಧಗಳ ಚರ್ಚೆಗೆ ಕಾರಣವಾಗಿತ್ತು.

ಕಿರಣ್‌ ಮಜುಂದಾರ್‌ ಷಾ ಅವರ ನಡುವಳಿಕೆಗಳನ್ನು ಬಹಳಷ್ಟು ಮಂದಿ ಸ್ವಾಗತಿಸಿದ್ದರೆ, ಟೀಕೆಗಳು ರಾಜಕೀಯ ಪ್ರೇರಿತ ಎಂದು ಕೆಲವರು ಹೀಯಾಳಿಸಿದ್ದರು. ಇದಕ್ಕೆ ತಕ್ಕ ಹಾಗೇ ಕಿರಣ್‌ ಮಜುಂದಾರ್‌ ಷಾ ತಮ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸಚಿವರೂ ಹಾಗೂ ಬಿಜೆಪಿ ನಾಯಕರ ಫೋಟೋಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದದ್ದು, ಟೀಕೆಗಳಿಗೆ ಆಸ್ಪದವಾಗಿತ್ತು.

ಕೆಲವು ಟ್ರೋಲ್‌ ಪೇಜ್‌ಗಳ ಪೋಸ್ಟ್‌ಗಳನ್ನು ಕಿರಣ್‌ ಮಜುಂದಾರ್‌ ಷಾ ಶೇರ್‌ ಮಾಡಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದ್ದರು, ಸಚಿವರಾದ ಎಂ.ಬಿ.ಪಾಟೀಲ್‌, ಪ್ರಿಯಾಂಕ ಖರ್ಗೆ, ಸಂತೋಷ್‌ ಲಾಡ್‌ ಸೇರಿದಂತೆ ಹಲವರ ಆಕ್ಷೇಪಗಳಿಗೂ ಸಾಮಾಜಿಕ ಜಾಲತಾಣದಲ್ಲೇ ಉತ್ತರ ನೀಡುವ ಮೂಲಕ ಮತ್ತಷ್ಟು ಸಂಚಲನ ಮೂಡಿಸಿದ್ದರು.

ಕಿರಣ್‌ ಮಜುಂದಾರ್‌ ಷಾ ಈ ಹೇಳಿಕೆಗಳು ಉದ್ಯಮ ವಲಯದಲ್ಲಿ ಭಾರೀ ಪರಿಣಾಮ ಬೀರುತ್ತಿವೆ, ಸರ್ಕಾರಕ್ಕೆ ಕೆಟ್ಟ ಹೆಸರು ತರಲಿದೆ ಎಂಬ ತೀವ್ರ ಆಕ್ಷೇಪದ ನಡುವೆಯೂ ಮಜುಂದಾರ್‌ ಷಾ ಸುಮನಾಗಿರಲಿಲ್ಲ. ತೀವ್ರ ಸ್ವರೂಪದ ವಾಗ್ವಾದಗಳ ಬಳಿಕ ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ದೀಪಾವಳಿ ಶುಭಾಶಯ ತಿಳಿಸಿ, ತಮ ಸಂಸ್ಥೆಯ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಇನ್ನು ಮಂದೆಯಾದರೂ ಕಿರಣ್‌ ಮಜುಂದಾರ್‌ ಷಾ ಟೀಕೆಗಳು, ತಣ್ಣಗಾಗಬಹುದೇ ಎಂಬ ಕುತೂಹಲ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಪಟಾಕಿ ಸಿಡಿದು 61 ಮಂದಿಗೆ ಗಾಯ

ಬೆಂಗಳೂರು, ಅ.21- ದೀಪಾವಳಿ ಹಬ್ಬದ ಸಂಭ್ರದಲ್ಲಿ ಪಟಾಕಿ ಸಿಡಿಸುವಾಗ ನಗರದಲ್ಲಿ 61 ಮಂದಿ ಗಾಯಗೊಂಡಿದ್ದಾರೆ.ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಇಬ್ಬರಿಗೆ ಶಸ್ತ್ರಚಿಕಿತ್ಸೆ ಸೇರಿದಂತೆ ಒಟ್ಟು 13 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ನಿನ್ನೆ ಇಬ್ಬರು ಮಕ್ಕಳ ಕಣ್ಣಿಗೆ ಪಟಾಕಿ ಸಿಡಿಸುವಾಗ ಹಾನಿಯಾಗಿದ್ದು, ಅವರಿಗೆ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ನಿನ್ನೆ ರಾತ್ರಿಯಿಂದ ಇಂದು ಬೆಳಿಗ್ಗೆ ವರೆಗೆ 11 ಮಂದಿ ಆಸ್ಪತ್ರೆ ಆಗಮಿಸಿದ್ದರು. ಅವರಲ್ಲಿ 7 ಮಕ್ಕಳಿಗೆ ಸಾಧಾರಣ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ಮಿಂಟೋ ಆಸ್ಪತ್ರೆ ತಿಳಿಸಿದೆ.

ನಾಲ್ವರಿಗೆ ತೀವ್ರ ತೊಂದರೆಯಾಗಿದ್ದು, ತೀವ್ರ ಹಾನಿಯಾಗಿದ್ದ ಇಬ್ಬರ ಕಣ್ಣುಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನಿಬ್ಬರ ಕಣ್ಣಿನಲ್ಲಿ ತೀವ್ರ ರಕ್ತಸ್ರಾವ ಆಗಿದ್ದು, ಒಳ ರೋಗಿಗಳಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಿಂಟೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಪಟಾಕಿಯಿಂದ ಗಾಯಗೊಂಡಿರುವ 13 ಮಂದಿಯಲ್ಲಿ 10 ಗಂಡು ಮಕ್ಕಳು ಹಾಗೂ ಮೂವರು ಹೆಣ್ಣು ಮಕ್ಕಳು ಸೇರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.ನಾರಾಯಣ ನೇತ್ರಾಲಯದಲ್ಲಿ ಅ.19 ರಿಂದ ಇಂದು ಬೆಳಿಗ್ಗೆವರೆಗೆ, ಪಟಾಕಿ ಸಂಬಂಧಿತ ಕಣ್ಣಿನ ಗಾಯಗಳು ಸಂಖ್ಯೆ 43ಕ್ಕೆ ಏರಿಕೆಯಾಗಿದೆ. 18 ವರ್ಷದ ಯುವಕನಿಗೆ ಗಂಭೀರ ಕಣ್ಣಿನ ಗಾಯವಾಗಿದೆ.10 ವರ್ಷದ ಬಾಲಕನೊಬ್ಬ ಪಟಾಕಿ ಹಚ್ಚುವಾಗ ಅದು ಆತನ ಮುಖದ ಬಳಿಯೇ ಸ್ಫೋಟಗೊಂಡ ಕಾರಣ ತಕ್ಷಣವೇ ತುರ್ತು ಚಿಕಿತ್ಸೆಗೆ ದಾಖಲಿಸಲಾಯಿತು ಎಂದು ನಾರಾಯಣ ಆಸ್ಪತ್ರೆ ತಿಳಿಸಿದೆ.
ಡಾ. ನರೇನ್‌ ಶೆಟ್ಟಿ ಅವರು ಪಟಾಕಿಗಳನ್ನು ಹಚ್ಚುವಾಗ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಮತ್ತು ಕಣ್ಣಿನ ಗಾಯಗಳಿಂದ ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ಕಣ್ಣಿನ ರಕ್ಷಣಾ ಕನ್ನಡಕಗಳನ್ನು ಬಳಸಲು ಸಲಹೆ ಮಾಡಿದ್ದಾರೆ.

ಶೇಖರ್‌ ಕಣ್ಣಿನ ಆಸ್ಪತ್ರೆಯಲ್ಲಿ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದ ಐವರಿಗೆ ಚಿಕಿತ್ಸೆ ನೀಡಲಾಗಿದೆ. ಗಾಯಗೊಂಡವರಲ್ಲಿ ದೀಪಾವಳಿ ಹಬ್ಬದ ಪಟಾಕಿ ಸಿಡಿಸಿದವರಲ್ಲದೆ, ಪಟಾಕಿ ಸಿಡಿಸುವುದನ್ನು ನೋಡುತ್ತಾ ನಿಂತವರು, ರಸ್ತೆಗಳಲ್ಲಿ ನಡೆದು ಹೋಗುತ್ತಿದ್ದವರೂ ಸೇರಿದ್ದಾರೆ. ಪ್ರತಿ ವರ್ಷ ಪಟಾಕಿ ಸಿಡಿತದಿಂದಾಗುವ ಅನಾಹುತದ ಬಗ್ಗೆ ಅರಿವು ಮೂಡಿಸಿ ಮುನ್ನೆಚ್ಚರಿಕೆ ವಹಿಸಲು ಕಣ್ಣಿನ ಆಸ್ಪತ್ರೆಗಳು ಸಲಹೆ ಮಾಡುತ್ತಿವೆ. ಆದರೆ, ಹಬ್ಬದ ಸಡಗರ ಸಂಭ್ರಮದಲ್ಲಿ ಮುನ್ನೆಚ್ಚರಿಕೆ ವಹಿಸದೇ ಅನಾಹುತಗಳಾಗುತ್ತಿರುವುದು ಕೂಡ ಮರುಕಳಿಹಿಸುತ್ತಲೇ ಇವೆ.

ಅಮೆರಿಕಾ ಮಾಜಿ ಅಧ್ಯಕ್ಷ ಬಿಡೆನ್‌ಗೆ ಪ್ರಾಸ್ಟೇಟ್‌ ಕ್ಯಾನ್ಸರ್‌ ಚಿಕಿತ್ಸೆ

ವಾಷಿಂಗ್ಟನ್‌,ಅ.21- ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಾಜಿ ಅಧ್ಯಕ್ಷ ಜೋ ಬಿಡೆನ್‌ ಅವರಿಗೆ ಮೊದಲ ಸುತ್ತಿನ (ರೇಡಿಯೇಷನ್‌)ವಿಕಿರಣ ಚಿಕಿತ್ಸೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.ಬಿಡೆನ್‌ ಫಿಲಡೆಲ್ಫಿಯಾದ ಪೆನ್‌ ಮೆಡಿಸಿನ್‌ ರೇಡಿಯೇಶನ್‌ ಆಂಕೊಲಾಜಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಹಾಯಕ ಕೆಲ್ಲಿ ಸ್ಕಲ್ಲಿ ಹೇಳಿದ್ದಾರೆ.

ಬಿಡೆನ್‌ ಅವರ ವಯಸ್ಸು,ಆರೋಗ್ಯ ಮತ್ತು ಮಾನಸಿಕ ಫಿಟ್‌ನೆಸ್‌‍ ಬಗ್ಗೆ ಕಳವಳಗಳ ನಡುವೆ ಕಳೆದ ಚುನಾವಣೆಯಲ್ಲ ಅಧಿಕಾರವನ್ನು ತೊರೆದಿದ್ದರು.ಮೇ ತಿಂಗಳಲ್ಲಿ, 82 ವರ್ಷದ ಬಿಡೆನ್‌ ಅವರಿಗೆ ಪ್ರಾಸ್ಟೇಟ್‌ ಕ್ಯಾನ್ಸರ್‌ ಇರುವುದು ಪತ್ತೆಯಾಗಿದೆ ಮತ್ತು ಅದು ಅವರ ಮೂಳೆಗಳಿಗೆ ಹರಡಿದೆ ಎಂದು ಅಧ್ಯಕ್ಷೀಯ ಕಚೇರಿ ಘೋಷಿಸಿತು.

ರಿಪಬ್ಲಿಕನ್‌ ಡೊನಾಲ್‌್ಡ ಟ್ರಂಪ್‌ವಿರುದ್ಧದ ಚುನಾವಣಾ ಚರ್ಚೆಯಲ್ಲಿ ನೇರ ಹೋರಾಟ ನಡೆಸಿದರೂ ಅವರು ಪರಾಭವಗೊಂಡಿದ್ದರು.ಗ್ಲೀಸನ್‌ ಸ್ಕೋರ್‌ ಬಳಸಿಕೊಂಡು ಪ್ರಾಸ್ಟೇಟ್‌ ಕ್ಯಾನ್ಸರ್‌ಗಳನ್ನು ಆಕ್ರಮಣಶೀಲತೆಗೆ ಶ್ರೇಣೀಕರಿಸಲಾಗುತ್ತದೆ. ಅಂಕಗಳು 6 ರಿಂದ 10 ರವರೆಗೆ ಇರುತ್ತವೆ, 8, 9 ಮತ್ತು 10 ಪ್ರಾಸ್ಟೇಟ್‌ ಕ್ಯಾನ್ಸರ್‌ಗಳು ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸುತ್ತವೆ.

ಬಿಡೆನ್‌ ಅವರ ಕಚೇರಿಯು ಅವರ ಅಂಕ 9 ಎಂದು ಹೇಳಿದ್ದು, ಇದು ಅವರ ಕ್ಯಾನ್ಸರ್‌ ಅತ್ಯಂತ ಆಕ್ರಮಣಕಾರಿ ಎಂದು ಸೂಚಿಸುತ್ತದೆ.ಕಳೆದ ತಿಂಗಳು, ಬಿಡೆನ್‌ ಅವರ ಹಣೆಯಿಂದ ಚರ್ಮದ ಕ್ಯಾನ್ಸರ್‌ ಗಾಯಗಳನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ಮಾಡಲಾಯಿತು.

ತೆಂಗಿನಕಾಯಿ ವ್ಯಾಪಾರಿಗೆ 49.47 ಲಕ್ಷ ರೂ. ವಂಚನೆ

ಮೈಸೂರು,ಅ.21-ಉದ್ಯಮಿಯೊಬ್ಬರು ತೆಂಗಿನಕಾಯಿ ವ್ಯಾಪಾರಿಯೊಬ್ಬರಿಗೆ 49,47,401ರೂ ವಂಚಿಸಿರುವ ಘಟನೆ ಮಂಡಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚೆನ್ನೈನ ಇಂಪೋರ್ಟ್‌ ಅಂಡ್‌ ಎಕ್ಸ್ಪೋರ್ಟ್‌ ಉದ್ಯಮಿ ಶ್ರೀವತ್ಸ ನ್‌ ಮೈಸೂರಿನ ತೆಂಗಿನಕಾಯಿ ವ್ಯಾಪಾರಿ ಸುಬೇದ್‌ ಅಗರವಾಲ್‌ ಎಂಬುವವರಿಗೆ ವಂಚಿಸಿದ ಉದ್ಯಮಿ. ಸುಬೇದ್‌ ಅಗರವಾಲ್‌ ಅವರು ಮೈಸೂರಿನ ಮಂಡಿ ಮೊಹಲ್ಲಾದ ಅಕ್ಬರ್‌ ರಸ್ತೆಯಲ್ಲಿ ಸುನಿಲ್‌ ಕುಮಾರ್‌ ಅಗರವಾಲ್‌ ಹೆಸರಲ್ಲಿ 15 ವರ್ಷಗಳಿಂದ ತೆಂಗಿನ ಕಾಯಿ ವ್ಯಾಪಾರ ಮಾಡುತ್ತಿದ್ದಾರೆ.

ಮಾರ್ಚ್‌ ತಿಂಗಳಲ್ಲಿ ಸುಬೇದ್‌ ಅಗರವಾಲ್‌ ರನ್ನ ಶ್ರೀವತ್ಸನ್‌ ರವರನ್ನು ಸಂಪರ್ಕಿಸಿ ವ್ಯಾಪಾರ ಕುದುರಿಸಿ ಸುಮಾರು 15 ಲಕ್ಷ ಮೌಲ್ಯದ ತೆಂಗಿನಕಾಯಿ ಖರೀದಿಸಿ 10 ಲಕ್ಷ ನೀಡಿದ್ದಾರೆ.
ನಂತರ ಶ್ರೀವತ್ಸನ್‌ ಸೂಚನೆಯಂತೆ ವಿವಿದೆಡೆಗೆ ತೆಂಗಿನಕಾಯಿ ಲೋಡ್‌ ಕಳಿಸಿದ್ದಾರೆ. ಕೆಲವು ತಿಂಗಳುಗಳು ಕಳೆದರೂ ತೆಂಗಿನಕಾಯಿ ಹಣ ಬಂದಿಲ್ಲ. ಶ್ರೀವತ್ಸನ್‌ ಅವರಿಗೆ ಸೇರಿದ ನಾಲ್ಕು ಮೊಬೈಲ್‌ ಗಳು ಸ್ವಿಚ್‌ ಆ್‌‍ ಆಗಿದೆ. ಶ್ರೀವತ್ಸನ್‌ ರಿಂದ ಒಟ್ಟು 49,47,401ರೂ ಬಾಕಿ ಬರಬೇಕಿದೆ ಎಂದು ಸುಬೇದ್‌ ಅಗರವಾಲ್‌ ಮಂಡಿ ಪೊಲೀಸ್‌‍ ಠಾಣೆಯಲ್ಲಿ ದೂರು ನೀಡಿದ್ದಾರೆ.

ಹಾಸನಾಂಬೆ ಸಾರ್ವಜನಿಕರ ದರ್ಶನೋತ್ಸವಕ್ಕೆ ನಾಳೆ ತೆರೆ

ಹಾಸನ,ಅ.21-ವರ್ಷಕ್ಕೊಮೆ ದರ್ಶನ ಭಾಗ್ಯ ನೀಡುವ ಶಕ್ತಿ ದೇವತೆ ಹಾಸನಾಂಬೆಯ ಸಾರ್ವಜನಿಕ ದರ್ಶನಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದ್ದು, ಇಂದು ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿ ಮುಖವಾಗಿದೆ. ಕಳೆದ 12 ದಿನಗಳಿಂದ ದೇವಿಯ ದರ್ಶನಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ, ಹರಸಾಹಸಪಟ್ಟು ದರ್ಶನ ಪಡೆದಿದ್ದರು.

ಭಕ್ತರನ್ನು ನಿಯಂತ್ರಿಸುವುದು ಕೂಡ ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ಸಾಹಸದ ಕೆಲಸವಾಗಿತ್ತು. ಆದರೆ ಇಂದು ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿ ಮುಖವಾಗಿತ್ತು. ಕಿಮೀ ಗಟ್ಟಲೆ ನಿಲ್ಲುತ್ತಿದ್ದ ಧರ್ಮ ದರ್ಶನದ ಸಾಲು ಇಂದು ಖಾಲಿ ಖಾಲಿಯಾಗಿತ್ತು. ಇಂದು ದರ್ಶನಕ್ಕೆ ಬಂದಿದ್ದ ಭಕ್ತರು ಸರಾಗವಾಗಿ ದೇವಿಯನ್ನು ಕಣ್ತುಂಬಿಕೊಂಡರು. ಕಳೆದ ಅ.10 ರಿಂದ ಪ್ರಾರಂಭವಾಗಿ ಸಾರ್ವಜನಿಕ ದರ್ಶನಕ್ಕೆ ನಾಳೆ ಸಂಜೆ ಕೊನೆಯಾಗಲಿದ್ದು,ಇಲ್ಲಿಯವರೆಗೆ ಬರೋಬ್ಬರಿ 23 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ.

ದೇವಿಯ ದರ್ಶನಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದ್ದು, ಟಿಕೆಟ್‌ ಹಾಗೂ ಲಾಡು ಮಾರಾಟದಿಂದ ಬರೋಬ್ಬರಿ 17 ಕೋಟಿಗೂ ಹೆಚ್ಚು ಆದಾಯ ಹರಿದು ಬಂದಿದೆ. ದೀಪಾವಳಿ ಪ್ರಯುಕ್ತ ಇಂದು ರಾತ್ರಿ 9 ಗಂಟೆಗೆ ಸಾರ್ವಜನಿಕ ದರ್ಶನದ ಬಾಗಿಲುಗಳನ್ನು ಮುಚ್ಚಲಾಗುವುದು. ನಾಳೆ ಬೆಳಗಿನ ಜಾವ 5.30ಕ್ಕೆ ಪೂಜೆ ಮುಗಿದ ನಂತರ ಮತ್ತೆ ದರ್ಶನ ಆರಂಭವಾಗಲಿದೆ. ಸಂಜೆ 7 ಗಂಟೆಯವರೆಗೆ ಮಾತ್ರ ಸಾರ್ವಜನಿಕ ದರ್ಶನಕ್ಕೆ ಅವಕಾಶವಿದ್ದು ಗುರುವಾರ 12.30 ಕ್ಕೆ ಪೂಜೆ ಹಾಗೂ ನೈವೇದ್ಯವನ್ನಿಟ್ಟು ಬಾಗಿಲನ್ನು ಮುಚ್ಚಲಾಗುವುದು.

ಗುರುವಾರ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುವುದಿಲ್ಲ. ಕಳೆದ 12 ದಿನಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದರು. ಕಳೆದ 4 ದಿನಗಳಿಂದ ಭಕ್ತರ ಸಂಖ್ಯೆ ಬಹಳಷ್ಟು ಸಂಖ್ಯೆ ಹೆಚ್ಚಳವಾಗಿತ್ತು. ಭಕ್ತರನ್ನು ನಿಯಂತ್ರಿಸುವುದೇ ಒಂದು ಸವಾಲಾಗಿತ್ತು.

ಕೊನೆಯ 2 ದಿನ ಮತ್ತಷ್ಟು ಭಕ್ತರ ಸಂಖ್ಯೆ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಇಂದು ಭಕ್ತರ ಸಂಖ್ಯೆ ಮಾತ್ರ ಇಳಿಮುಖವಾಗಿತ್ತು. ಒಂದೆಡೆ ಮಳೆ ಹಾಗೂ ಹೆಚ್ಚಿದ ಭಕ್ತರ ನಡುವೆ ಜಂಜಾಟವೇಕೆ ಎಂದು ಕೆಲವರು ಪ್ಲಾನ್‌ ಬದಲಾಯಿಸಿ ಬೇರೆಡೆ ತೆರಳಿದ್ದರಿಂದ ಇಂದು ಭಕ್ತರ ಸಂಖ್ಯೆ ಇಳಿಕೆಯಾಗಿದೆ.

ಈ ಭಾರಿ ಹೆಚ್ಚಾಗಿ ಚಲನಚಿತ್ರ ನಟ-ನಟಿಯರು, ಮಠಾಧೀಶರು,ರಾಜಕೀಯ ನಾಯಕರುಗಳು ಹಾಗೂ ಗಣ್ಯರು ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ ದೇವಿಯ ದರ್ಶನ ಪಡೆದಿದ್ದಾರೆ. ಈ ಭಾರಿ ಹಾಸನಾಂಬ ಜಾತ್ರಾ ಮಹೋತ್ಸವ ಇತಿಹಾಸ ಸೃಷ್ಟಿಸಿದೆ.

ಆಟೋ ಚಾಲಕನನ್ನು ಕೊಂದು ದೇಹವನ್ನು ಪ್ರಯಾಣಿಕರ ಸೀಟ್‌ನಲ್ಲಿಟ್ಟು ಪರಾರಿಯಾದ ದುಷ್ಕರ್ಮಿಗಳು

ಕೋಲಾರ, ಆ.21- ಆಟೋ ಚಾಲಕನನ್ನು ಬರ್ಬರವಾಗಿ ಕೊಂದು ಆತನ ದೇಹವನ್ನು ಪ್ರಯಾಣಿಕರ ಸೀಟ್‌ನಲ್ಲಿಟ್ಟು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಅಫ್ರೀದ್‌ (40) ಮೃತ ಆಟೋ ಚಾಲಕ. ಈತ ಮೂಲತಃ ಬಂಗಾರಪೇಟೆಯ ಎಲೆಸಂದ್ರ ಗ್ರಾಮದವರಾಗಿದ್ದು, ಪ್ರಸ್ತುತ ಬೆಂಗಳೂರಿನ ಅಂಜನಾನಗರದಲ್ಲಿ ಪತ್ನಿ-ಮಕ್ಕಳೊಂದಿಗೆ ವಾಸವಾಗಿದ್ದರು.

ಮನೆಗೆ ಹೋಗದೆ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಅಫ್ರೀದ್‌ನನ್ನು ಕಳೆದ ರಾತ್ರಿ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಶವವನ್ನು ಹಿಂಬದಿ ಹಾಕಿಕೊಂಡು ಕೋಲಾರದ ಎಂಪೈರ್‌ ಹೊಟೇಲ್‌ ಬಳಿ ಇರುವ ಅಪಾರ್ಟ್‌ಮೆಂಟ್‌ ಬಳಿ ಆಟೋ ತಂದು ನಿಲ್ಲಿಸಿ ಹೋಗಿದ್ದಾರೆ.

ಇಂದು ಮುಂಜಾನೆ 4.30ರ ಸಂದರ್ಭದಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬೇರೆಲ್ಲೋ ಕೊಲೆ ಮಾಡಿ ಆಟೋದಲ್ಲಿ ತಂದು ನಿಲ್ಲಿಸಿ ದುಷ್ಕರ್ಮಿಗಳು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.

ಈತ ಊರಿಗೆ ಹೋಗುತ್ತಿರಲಿಲ್ಲ. ಬೆಂಗಳೂರಿನಿಂದ ಇಲ್ಲಿಗೆ ಹೇಗೆ ಬಂದ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆತನ ದೇಹದ ಹಲವು ಭಾಗಗಳಿಗೆ ಇರಿಯಲಾಗಿದೆ. ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.