Friday, November 7, 2025
Home Blog Page 31

ಅನೈತಿಕ ಪೊಲೀಸ್‌‍ಗಿರಿಗೆ ರಾಜ್ಯದಲ್ಲಿ ಕಡಿವಾಣ ಹಾಕಿದ ಪೊಲೀಸರಿಗೆ ಸಿಎಂ ಮೆಚ್ಚುಗೆ

ಬೆಂಗಳೂರು, ಅ.21- ರಾಜ್ಯದ ಘನತೆ, ಅಭಿವೃದ್ಧಿ ಮತ್ತು ಪ್ರಗತಿಗೆ ಕಂಟಕವಾಗಿದ್ದ ಸಂವಿಧಾನ ವಿರೋಧಿ ಅನೈತಿಕ ಪೊಲೀಸ್‌‍ ಗಿರಿಗೆ ರಾಜ್ಯದಲ್ಲಿ ಕಡಿವಾಣ ಬಿದ್ದಿದೆ. ಇದರ ಶ್ರೇಯಸ್ಸು ಪೊಲೀಸ್‌‍ ಇಲಾಖೆಗೆ ಸಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪೊಲೀಸ್‌‍ ಸಂಸರಣಾ ದಿನಾಚರಣೆಯಲ್ಲಿ ಹುತಾತ ಪೊಲೀಸ್‌‍ ಅಧಿಕಾರಿ ಮತ್ತು ಸಿಬ್ಬಂದಿಗೆ ಸಂತಾಪ ಸಲ್ಲಿಸಿ ಮಾತನಾಡಿದರು. ಪೊಲೀಸ್‌‍ ಇಲಾಖೆ ಶಾಂತಿ-ಸುವ್ಯವಸ್ಥೆ ಕಾಪಾಡಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಹೀಗಾಗಿ ಅನೈತಿಕ ಪೊಲೀಸ್‌‍ ಗಿರಿಗೆ ಕಡಿವಾಣ ಬಿದ್ದಿರುವುದು ಉತ್ತಮ ಕೆಲಸ. ಹಾಗೆಯೇ ಮಾದಕ ವಸ್ತು ಹಾವಳಿಗೂ ಬ್ರೇಕ್‌ ಬಿದ್ದಿದ್ದು ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬೇಕಿದೆ. ಈ ಸಾಧನೆಯ ಶ್ರೇಯಸ್ಸು ಪೊಲೀಸ್‌‍ ಇಲಾಖೆಗೆ ಸಲ್ಲಬೇಕು ಎಂದರು.

ರಾಜ್ಯದಲ್ಲಿ ಪರಿಶಿಷ್ಠ ಜಾತಿ ವರ್ಗದವರ ಮೇಲಿನ ದೌರ್ಜನ್ಯ ತಡೆಗೆ ಡಿಸಿಆರ್‌ ಪೊಲೀಸ್‌‍ ಠಾಣೆಗಳನ್ನು ಕಾರ್ಯೋನುಖಗೊಳಿಸಿದ್ದೇವೆ. ಇವು ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ಸಾಂವಿಧಾನಿಕ ಹಕ್ಕು ಮತ್ತು ಮೌಲ್ಯಗಳನ್ನು ಕಾಪಾಡುವ ಕೆಲಸ ಆಗಬೇಕಿದೆ ಎಂದರು.

ಒಂದು ವರ್ಷದಲ್ಲಿ ರಾಜ್ಯದ 8 ಮಂದಿ ಸೇರಿ ದೇಶದಲ್ಲಿ 191 ಮಂದಿ ಕರ್ತವ್‌ಯ ನಿರ್ವಹಣೆ ವೇಳೆ ಪ್ರಾಣತ್ಯಾಗ ಮಾಡುವ ಹುತಾತರಾಗಿದ್ದಾರೆ. ಇವರ ತ್ಯಾಗ, ಬಲಿದಾನಕ್ಕೆ ಬೆಲೆ ಕಟ್ಟಲಾಗದು. ಇವರನ್ನು ಇಡೀ ದೇಶ ಸರಿಸಿ, ವಂದಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ದೇಶದ ಶಾಂತಿ ಸುವ್‌ಯವಸ್ಥೆ ಕಾಪಾಡುವುದರಲ್ಲಿ ಪೊಲೀಸ್‌‍ ಸಿಬ್ಬಂದಿ ಅಗ್ರ ಸ್ಥಾನದಲ್ಲಿದ್ದಾರೆ. ಕೋಮು ಶಕ್ತಿಗಳು, ದುಷ್ಟ ಶಕ್ತಿಗಳ ನಿಗ್ರಹದಲ್ಲಿ ನಿಮ ಪಾತ್ರ ದೊಡ್ಡದಿದೆ. ಸಂವಿಧಾನದಲ್ಲಿ ಜನರಿಗೆ ಕೊಟ್ಟಿರುವ ಹಕ್ಕುಗಳನ್ನು ಕಾಪಾಡುವ ಜವಾಬ್ದಾರಿಯನ್ನೂ ಪೊಲೀಸ್‌‍ ಇಲಾಖೆ ನಿರ್ವಹಿಸುತ್ತಿದೆ ಎಂದರು.

ತಮ ಸರ್ಕಾರ 116 ಮಂದಿಗೆ ಅನುಕಂಪದ ಆಧಾರದ ಅಡಿ ಸರ್ಕಾರ ಉದ್ಯೋಗ ನೀಡಿ ಆದೇಶ ಹೊರಡಿಸಿದೆ. ನಿವೃತ್ತ ಪೊಲೀಸರ ಆರೋಗ್ಯ ಯೋಜನೆಯ ವೈದ್ಯಕೀಯ ಮರು ಪಾವತಿ ವೆಚ್ಚವನ್ನು ವಾರ್ಷಿಕ 1 ಲಕ್ಷ ರೂಗಳಿಂದ 1.50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಎಲ್ಲಾ ಪೊಲೀಸ್‌‍ ಸಿಬ್ಬಂದಿಯ ಆರೋಗ್ಯ ತಪಾಸಣಾ ವೆಚ್ಚವನ್ನು 1 ಸಾವಿರ ರೂಗಳಿಂದ 1500 ರೂ.ಗೆ ಹೆಚ್ಚಿಸಲಾಗಿದೆ ಎಂದು ವಿವರಿಸಿದರು.

ಗೃಹಸಚಿವ ಡಾ.ಜಿ.ಪರಮೇಶ್ವರ್‌ ರಾಜ್ಯದ ಪೊಲೀಸ್‌‍ ಮಹಾ ನಿರ್ದೇಶಕ ಡಾ. ಎಂ.ಎ. ಸಲೀಂ, ಗೃಹ ಇಲಾಖೆಯ ಅಪಾರ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-10-2025)

ನಿತ್ಯ ನೀತಿ : ಇನ್ನೊಬ್ಬರ ಮುಖದಲ್ಲಿ ನಗು ತರಿಸುವುದೇ ಬದುಕಿನ ಅತಿ ದೊಡ್ಡ ಸಾಧನೆ..!!

ಪಂಚಾಂಗ : ಮಂಗಳವಾರ, 21-10-2025
ಶೋಭಕೃತ್‌ನಾಮ ಸಂವತ್ಸರ / ದಕ್ಷಿಣಾಯನ / ಋತು: ಸೌರ ಶರದ್‌ / ಮಾಸ:ಆಶ್ವಯುಜ / ಪಕ್ಷ: ಕೃಷ್ಣ / ತಿಥಿ: ಅಮಾವಾಸ್ಯೆ / ನಕ್ಷತ್ರ: ಚಿತ್ತಾ / ಯೋಗ: ವಿಷ್ಕಂಭ / ಕರಣ: ಕಿಂಸ್ತುಘ್ನ ಪೂರ್ಣ

ಸೂರ್ಯೋದಯ – ಬೆ.06.11
ಸೂರ್ಯಾಸ್ತ – 5.58
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30

ರಾಶಿಭವಿಷ್ಯ :
ಮೇಷ
: ಮಾನಸಿಕ ಯಾತನೆಗೆ ಒಳಗಾಗುವ ಸಾಧ್ಯತೆ ಗಳು ಹೆಚ್ಚಾಗಿವೆ. ಸದಾ ದೇವರ ಧ್ಯಾನ ಮಾಡಿ.
ವೃಷಭ: ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಪ್ರಯತ್ನಿಸುತ್ತಾ ವಿದೇಶಕ್ಕೆ ತೆರಳಬೇಕು ಎಂದಿದ್ದಲ್ಲಿ ಮಧ್ಯವರ್ತಿಗಳಿಂದ ಹುಷಾರಾಗಿರಬೇಕು.
ಮಿಥುನ: ವೃತ್ತಿ ಜೀವನದಲ್ಲಿ ಶತ್ರುಗಳಿಂದ ದೂರವಿರಬೇಕಾಗುತ್ತದೆ. ಎಚ್ಚರಿಕೆಯಿಂದಿರಿ.

ಕಟಕ: ಯಾರದ್ದೋ ಮಾತು ಕೇಳಿ ನಿಮ್ಮ ಅಮೂಲ್ಯ ಸಮಯ, ಹಣ ವ್ಯರ್ಥ ಮಾಡಿಕೊಳ್ಳದಿರಿ.
ಸಿಂಹ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿವೆ.
ಕನ್ಯಾ: ದೂರ ಪ್ರಯಾಣ ಮಾಡುವುದರಿಂದ ನಷ್ಟವಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ತುಲಾ: ಷೇರು ಮಾರುಕಟ್ಟೆ ಯಲ್ಲಿ ಹಣ ಹೂಡಿಕೆ ಮಾಡುವವರು ಎಚ್ಚರಿಕೆಯಿಂದಿರಿ.
ವೃಶ್ಚಿಕ: ನೀವು ಮಾತನಾಡುವ ರೀತಿಯಿಂದಾಗಿ ಬೇರೆಯವರಿಗೆ ನೋವಾಗಬಹುದು.
ಧನುಸ್ಸು: ಯಾವುದೇ ಕೆಲಸ ಮಾಡುವಾಗ ಹಿರಿಯರ ಸಲಹೆ-ಸೂಚನೆಗಳನ್ನು ಪಡೆಯುವುದು ಒಳಿತು.

ಮಕರ: ಸಂಗಾತಿ ಮೇಲೆ ಒತ್ತಡ ಹಾಕುವುದರಿಂದ ಅಸಮಾಧಾನವಾಗುವ ಸಾಧ್ಯತೆ ಇದೆ.
ಕುಂಭ: ದೂರದ ಬಂಧುಗಳ ಆಗಮನವಾಗಲಿದೆ. ನೆರೆಹೊರೆಯವರು ನಿಮ್ಮ ನೆರವಿಗೆ ಬರುವರು.
ಮೀನ: ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

ಕೇವಲ 4 ನಿಮಿಷದಲ್ಲಿ ನೆಪೋಲಿಯನ್‌ ಕಿರೀಟದ ಆಭರಣಗಳನ್ನು ಕದ್ದ ಕಳ್ಳನ ಕೈಚಳಕಕ್ಕೆ ಫಿದಾ ಆದ ಸಚಿವೆ..!

ಪ್ಯಾರಿಸ್‌‍,ಅ.20-ವಿಶ್ವದ ಅತಿ ಹೆಚ್ಚು ಭೇಟಿ ನೀಡುವ ಇಲ್ಲಿನ ವಸ್ತುಸಂಗ್ರಹಾಲಯದ ಒಳಗೆ ಕಿಟಕಿಯ ಮೂಲಕ ಒಳಬಂದು ಕಳ್ಳ ನೆಪೋಲಿಯನ್‌ ಶಿಲೆಯ ಕಿರೀಟದ ಆಭರಣವನ್ನುಕೇವಲ 4 ನಿಮಿಷದೊಳಗೆ ಕದ್ದು ಪರಾರಿಯಾಗಿದ್ದಾನೆ.

ಮೂಸಿಯಂನ ಲೌವ್ರೆಯ ಮುಂಭಾಗದ ಕಿಟಕಿಯ ಮೂಲಕ ಕಳ್ಳ ಪ್ರವೇಶಿಸಿ ಪ್ರದರ್ಶನ ಪೆಟ್ಟಿಗೆಗಳನ್ನು ಒಡೆದು ಬೆಲೆಬಾಳುವ ನೆಪೋಲಿಯನ್‌ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸ್‌‍ ಅಧಿಕಾರಿಗಳು ತಿಳಿಸಿದ್ದಾರೆ.ಮೂಸಿಯಂ ತೆರೆದ ಸುಮಾರು 30 ನಿಮಿಷಗಳ ನಂತರ ಹಗಲು ಹೊತ್ತಿನಲ್ಲಿ ಈ ದರೋಡೆ ನಡೆದಿದ್ದು ಕಳ್ಳನ ಕೈಚಳಕ ಆನೇಕರನ್ನು ಬೆರಗುಗೊಳಿಸಿದೆ.

ಆನೇಕ ಪ್ರೇಕ್ಷಕರು ಅತ್ಯಂತ ಹಳೆಯ ಮೂಸಿಯಂ ವೀಕ್ಷಣೆಗೆ ಒಳ ಪ್ರವೇಶಿಸಿದ್ದರು. ಭದ್ರತಾ ಸಿಬ್ಬಂದಿ ಜನಸಂದಣಿ ಹರಸಾಹಸದ ನಡುವೆ ಕಳ್ಳ ಕೇಲವ 4 ನಿಮಿಷದಲ್ಲಿ ತನ್ನ ಕೆಲಸ ಮುಗಿಸಿದ್ದಾನೆ.

ಮೋನಾ ಲಿಸಾದಿಂದ ಕೇವಲ 250 ಮೀಟರ್‌ ದೂರದಲ್ಲಿ ಕಳ್ಳತನ ನಡೆದಿದೆ, ಇದನ್ನು ಸಂಸ್ಕೃತಿ ಸಚಿವೆ ರಾಚಿಡಾ ದಾತಿ ವೃತ್ತಿಪರನ ನಾಲ್ಕು ನಿಮಿಷಗಳ ಕಾರ್ಯಾಚರಣೆ ಎಂದು ಬಣ್ಣಿಸಿದ್ದಾರೆ.
ನೆಪೋಲಿಯನ್‌ನ ಪತ್ನಿ ಸಾಮ್ರಾಜ್ಞ ಯುಜೀನಿಯ ಪಚ್ಚೆ-ಸೆಟ್‌ ಸಾಮ್ರಾಜ್ಯಶಾಹಿ ಕಿರೀಟವು 1,300 ಕ್ಕೂ ಹೆಚ್ಚು ವಜ್ರಗಳನ್ನು ಹೊಂದಿದ್ದು, ಇದು ವಸ್ತುಸಂಗ್ರಹಾಲಯದ ಹೊರಗೆ ಕಂಡುಬಂದಿದೆ ಎಂದು ಫ್ರೆಂಚ್‌ ಅಧಿಕಾರಿಗಳು ತಿಳಿಸಿದ್ದಾರೆ.ಆದರೆ ಇದನ್ನು ಮುರಿದು ಕೆಲವನ್ನು ಮಾತ್ರ ದೋಚಲಾಗಿದೆ.

ಘಟನೆ ನಂತರ ಸೀನ್‌ ನದಿಯ ಉದ್ದಕೂ ಇರುವ ರಸ್ತೆಯನ್ನು ಅಧಿಕಾರಿಗಳು ಮುಚ್ಚಿದ್ದಾರೆ. ಗೊಂದಲಕ್ಕೊಳಗಾದ ಪ್ರವಾಸಿಗರನ್ನು ಗಾಜಿನ ಪಿರಮಿಡ್‌ ಮತ್ತು ಪಕ್ಕದ ಅಂಗಳಗಳಿಂದ ಹೊರಗೆ ಕರೆದೊಯ್ಯುಲಾಗಿದೆ. ಬೆಳಿಗ್ಗೆ 9.30 ರ ಸುಮಾರಿಗೆ, ಹಲವಾರು ಒಳನುಗ್ಗಿದ್ದು, ಕಿಟಕಿಯನ್ನು ಬಲವಂತವಾಗಿ ಒಡೆದು, ಡಿಸ್ಕ್‌ ಕಟ್ಟರ್‌ನಿಂದ ಫಲಕಗಳನ್ನು ಕತ್ತರಿಸಿ ನೇರವಾಗಿ ಗಾಜಿನ ಪ್ರದರ್ಶನ ದೊಳಗೆ ಹೋದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

23 ವಸ್ತುಗಳ ರಾಜಮನೆತನದ ಸಂಗ್ರಹದೊಂದಿಗೆ ಸಭಾಂಗಣವನ್ನು ತಲುಪಲು ನದಿಯ ಮುಂಭಾಗದ ಬ್ಯಾಸ್ಕೆಟ್‌ ಲಿಫ್‌್ಟ ಬಳಸಿ ಹೊರಗಿನಿಂದ ಪ್ರವೇಶಿಸಿರಬೇಕು ಎಂದು ಆಂತರಿಕ ಸಚಿವ ಲಾರೆಂಟ್‌ ನುನೆಜ್‌ ಹೇಳಿದರು.

ಅವರ ಗುರಿ ಗಿಲ್ಡೆಡ್‌ ಅಪೊಲೊನ್‌ ಗ್ಯಾಲರಿಯಾಗಿತ್ತು, ಅಲ್ಲಿ ರೀಜೆಂಟ್‌‍, ಸ್ಯಾನ್ಸಿ ಮತ್ತು ಹಾರ್ಟೆನ್ಸಿಯಾ ಸೇರಿದಂತೆ ಕ್ರೌನ್‌ ಡೈಮಂಡ್ಸ್ ಅನ್ನು ಪ್ರದರ್ಶಿಸಲಾಗುತ್ತದೆ. ಕಳ್ಳರು ಎರಡು ಫಲಕ ಒಡೆದಿದ್ದಾರೆ ನಂತರ ಮೋಟಾರ್‌ಬೈಕ್‌ಗಳಲ್ಲಿ ಪರಾರಿಯಾಗಿದ್ದಾರೆ ಎಂದು ನುನೆಜ್‌ ಹೇಳಿದರು.

ಅಧಿಕಾರಿಗಳ ಪ್ರಕಾರ ಎಂಟು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ: 19 ನೇ ಶತಮಾನದ ಫ್ರೆಂಚ್‌ ರಾಣಿಯರಾದ ಮೇರಿ-ಅಮೆಲಿ ಮತ್ತು ಹಾರ್ಟೆನ್ಸ್ ಗೆ ಸಂಬಂಧಿಸಿದ ಹೊಂದಾಣಿಕೆಯ ಸೆಟ್‌ನಿಂದ ನೀಲಮಣಿ ಕಿರೀಟ, ಹಾರ ಮತ್ತು ಏಕ ಕಿವಿಯೋಲೆ; ನೆಪೋಲಿಯನ್‌ ಬೊನಪಾರ್ಟೆಯ ಎರಡನೇ ಪತ್ನಿ ಸಾಮ್ರಾಜ್ಞ ಮೇರಿ-ಲೂಯಿಸ್‌‍ ಅವರ ಹೊಂದಾಣಿಕೆಯ ಸೆಟ್‌ನಿಂದ ಪಚ್ಚೆ ಹಾರ ಮತ್ತು ಕಿವಿಯೋಲೆಗಳು; ಸ್ಮಾರಕ ಬ್ರೂಚ್‌‍; ಸಾಮ್ರಾಜ್ಞ ಯುಜೀನಿಯ ಕಿರೀಟ; ಮತ್ತು ಅವಳ ದೊಡ್ಡ ಕಾರ್ಸೇಜ್‌‍-ಬಿಲ್ಲು ಬ್ರೂಚ್‌ ಸೇರಿದೆ.

ಸಾರ್ವಜನಿಕ ಸಮಯದಲ್ಲಿ ಹಗಲು ದರೋಡೆಗಳು ಅಪರೂಪ. ಕಳ್ಳತನವು ಈಗಾಗಲೇ ಪರಿಶೀಲನೆಯಲ್ಲಿರುವ ವಸ್ತುಸಂಗ್ರಹಾಲಯಕ್ಕೆ ಹೊಸ ಮುಜುಗರವಾಗಿದೆ.ಅವರು ಲಿಫ್‌್ಟನಲ್ಲಿ ಕಿಟಕಿಗೆ ಹೋಗಿ ಹಗಲಿನ ವೇಳೆಯಲ್ಲಿ ಆಭರಣಗಳನ್ನು ಹೇಗೆ ತೆಗೆದುಕೊಂಡು ಹೋಗುತ್ತಾರೆ? ಎಂದು ಲಿಯಾನ್‌ ಬಳಿಯ ಫ್ರೆಂಚ್‌ ಶಿಕ್ಷಕಿ ಮಗಲಿ ಕುನೆಲ್‌ ಹೇಳಿದರು.

ಇಷ್ಟು ಪ್ರಸಿದ್ಧವಾದ ವಸ್ತುಸಂಗ್ರಹಾಲಯವು ಇಷ್ಟೊಂದು ಸ್ಪಷ್ಟವಾದ ಭದ್ರತಾ ಅಂತರವನ್ನು ಹೊಂದಿರುವುದು ನಂಬಲಾಗದ ಸಂಗತಿ.ಲೌವ್ರೆಯಲ್ಲಿ ಕಳ್ಳತನ ಮತ್ತು ದರೋಡೆ ಪ್ರಯತ್ನಗಳ ದೀರ್ಘ ಇತಿಹಾಸವಿದೆ. ಅತ್ಯಂತ ಪ್ರಸಿದ್ಧವಾದದ್ದು 1911 ರಲ್ಲಿ ಬಂದಿತು, ಮೋನಾಲಿಸಾ ಅದರ ಚೌಕಟ್ಟಿನಿಂದ ಕಣರೆಯಾಯಿತು

ಓಲಾ ಕಂಪನಿ ನೌಕರ ಆತ್ಮಹತ್ಯೆ ಪ್ರಕರಣ : ಕಂಪನಿ ಸಿಇಓ, ಹಿರಿಯ ಅಧಿಕಾರಿ ವಿರುದ್ಧ ಎಫ್‌ಐಆರ್‌

ಬೆಂಗಳೂರು,ಅ.20-ಓಲಾ ಕಂಪನಿ ನೌಕರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸುಬ್ರಹಣ್ಯಪುರ ಪೊಲೀಸ್‌‍ ಠಾಣೆಯಲ್ಲಿ ಕಂಪನಿ ಸಿಇಓ ಹಾಗೂ ಹಿರಿಯ ಅಧಿಕಾರಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಸಿಇಓ ಭವೇಶ್‌, ಹಿರಿಯ ಅಧಿಕಾರಿ ಸುಬ್ರತ್‌ ಕುಮಾರ್‌ ದಾಸ್‌‍ ವಿರುದ್ಧ ದೂರು ದಾಖಲಾಗಿದೆ. ಓಲಾ ಎಲೆಕ್ಟ್ರಿಕ್‌ ಕಂಪನಿಯ ಹೋಮೋಲೋಗೆಷನ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೆ.ಅರವಿಂದ್‌ ಅವರು ಚಿಕ್ಕಲ್ಲಸಂದ್ರ ಮಂಜುನಾಥನಗರದ ನಿವಾಸಿ ಸೆ.28 ರಂದು 11.30 ರಿಂದ 12.45 ರ ನಡುವೆ ಆತಹತ್ಯೆ ಮಾಡಿಕೊಂಡಿದ್ದರು.

ಅಂದು ಪೊಲೀಸರು ಯುಡಿಆರ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಈ ನಡುವೆ ಅರವಿಂದ್‌ ಅವರ ಖಾತೆಗೆ ಕಂಪನಿಯಿಂದ 17.46 ಲಕ್ಷ ಹಣ ಜಮೆಯಾಗಿರುವುದನ್ನು ಗಮನಿಸಿ ಕುಟುಂಬದವರು ಕಂಪನಿಯವರನ್ನು ಪ್ರಶ್ನಿಸಿದಾಗ, ಕಂಪನಿಯ ಹೆಚ್‌ಆರ್‌ ಸೇರಿದಂತೆ ಕೆಲ ಸಿಬ್ಬಂದಿ ಅಸ್ಪಷ್ಟ ಮಾಹಿತಿ ನೀಡಿದ್ದಾರೆ.

ಸಿಬ್ಬಂದಿಯ ವರ್ತನೆಯಿಂದ ಅನುಮಾನಗೊಂಡ ಕುಟುಂಬದವರು ಮನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಸುಮಾರು 28 ಪುಟಗಳ ಡೆತ್‌ನೋಟ್‌ ಪತ್ತೆಯಾಗಿದೆ. ಡೆತ್‌ನೋಟ್‌ನಲ್ಲಿ ಕೆಲಸದ ವಿಚಾರವಾಗಿ ಕಂಪನಿಯ ಹಿರಿಯ ಅಧಿಕಾರಿ ಸುಬ್ರತ್‌ಕುಮಾರ್‌ ದಾಸ್‌‍, ಸಿಇಓ ಭವೇಶ್‌ ಅಗರ್ವಾಲ್‌ ಇವರಿಬ್ಬರೂ ತೀವ್ರ ಒತ್ತಡ ನೀಡುತ್ತಿದ್ದಾರೆ. ನನಗೆ ಭತ್ಯೆ ಮತ್ತು ವೇತನ ನೀಡದೇ ಕಿರುಕುಳ ನೀಡುತ್ತಿರುವುದರಿಂದ ಆತಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವುದು ಕಂಡು ಬಂದಿದೆ.

ಡೆತ್‌ನೋಟ್‌ ಆಧಾರದಲ್ಲಿ ಇದೀಗ ಅರವಿಂದ್‌ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದು, ಇದೀಗ ಪೊಲೀಸರು ಕಂಪನಿಯ ಸಿಇಓ ಹಾಗೂ ಹಿರಿಯ ಅಧಿಕಾರಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ದೀಪಾವಳಿ ಮೊದಲ ದಿನವೇ ದೆಹಲಿಯಲ್ಲಿ ಹೆಚ್ಚಿದ ವಾಯುಮಾಲಿನ್ಯ

ನವದೆಹಲಿ, ಅ.20- ಬೆಳಕಿನ ಹಬ್ಬ ದೀಪಾವಳಿ ಮೊದಲ ದಿನವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಹದಗೆಟ್ಟಿದೆ.ಕಳೆದ ಏಳು ದಿನಗಳಿಂದ ನಿರಂತರವಾಗಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಸದ್ಯ ಎಕ್ಯೂಐ 400ರ ಗಡಿ ದಾಟಿದೆ. ಮುಂದಿನ ಒಂದು ವಾರದಲ್ಲಿ ಈ ಪ್ರಮಾಣ 600 ಗಡಿ ದಾಟಬಹುದು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ ನೀಡಿದೆ.

ದೆಹಲಿಯ 38 ಮೇಲ್ವಿ ಚಾರಣಾ ಕೇಂದ್ರಗಳ ಪೈಕಿ 24 ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟ ತುಂಬಾ ಕಳಪೆ ಮಟ್ಟವನ್ನು ದಾಖಲಿಸಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಇಂದು ಬೆಳಗ್ಗೆ, ಆನಂದ್‌ ವಿಹಾರ್‌ ನಗರದಲ್ಲಿ ಅತ್ಯಂತ ವಿಷಕಾರಿ ಗಾಳಿಯನ್ನು ವರದಿ ಮಾಡಿದೆ, ಎಕ್ಯೂಐ 417 ರೊಂದಿಗೆ, ಇದು ತೀವ್ರ ಕಳಪೆ ವರ್ಗಕ್ಕೆ ಇಳಿದಿದೆ. ವಜೀರ್‌ಪುರ (364), ವಿವೇಕ್‌ ವಿಹಾರ್‌ (351), ದ್ವಾರಕಾ (335), ಮತ್ತು ಆರ್‌ಕೆ ಪುರಂ (323) ಸೇರಿದಂತೆ 12 ನಿಲ್ದಾಣಗಳು ಗಾಳಿಯ ಗುಣಮಟ್ಟವನ್ನು ತುಂಬಾ ಕಳಪೆ ವ್ಯಾಪ್ತಿಯಲ್ಲಿ ವರದಿ ಮಾಡಿವೆ.

ಸಿಪಿಸಿಬಿ ದತ್ತಾಂಶದ ಪ್ರಕಾರ, ಸಿರಿ ಫೋರ್ಟ್‌, ದಿಲ್ಶಾದ್‌ ಗಾರ್ಡನ್‌
ಮತ್ತು ಜಹಾಂಗೀರ್‌ಪುರಿ ಮುಂತಾದ ಇತರ ಪ್ರದೇಶಗಳು 318 ಎಕ್ಯೂಐ ದಾಖಲಿಸಿವೆ. ಪಂಜಾಬಿ ಬಾಗ್‌ 313, ನೆಹರು ನಗರ 310, ಅಶೋಕ್‌ ವಿಹಾರ್‌ 305 ಮತ್ತು ಬವಾನಾ 304ರ ವಾಯು ಗುಣಮಟ್ಟ ಸೂಚ್ಯಂಕವನ್ನು ದಾಖಲಿಸಿವೆ.

ದೆಹಲಿಯಲ್ಲಿ ಮಾಲಿನ್ಯ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೆಹಲಿ-ಎನ್‌ಸಿಆರ್‌ ಪ್ರದೇಶದಲ್ಲಿ ಗ್ರೇಡೆಡ್‌ ರೆಸ್ಪಾನ್ಸ್ ಆಕ್ಷನ್‌ ಪ್ಲಾನ್‌ ರಚಿಸಲಾಗಿದೆ. ಆಕ್ಷನ್‌ ಕ್ವಾಲಿಟಿ ಇಂಡೆಕ್ಸ್ 301 ರಿಂದ 400ರವರೆಗಿನ ಅತ್ಯಂತ ಕಳಪೆ ವರ್ಗಕ್ಕೆ ಸೇರಿದಾಗ ಇದನ್ನು ಜಾರಿಗೊಳಿಸಲಾಗುತ್ತದೆ.

ಈ ನಿಯಮಗಳ ಪ್ರಕಾರ ಮಾಲಿನ್ಯ ನಿಯಂತ್ರಣಕ್ಕೆ ಬರುವವರೆಗೂ ಕಟ್ಟಡ ನಿರ್ಮಾಣ ಕಾಮಗಾರಿಗಳ ನಿಲ್ಲಿಸಬೇಕಾಗುತ್ತದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಓಪನ್‌ ಈಟರಿಗಳಲ್ಲಿ ತಂದೂರ್‌ಗಳಲ್ಲಿ ಕಲ್ಲಿದ್ದಲು ಬಳಕೆ ನಿಷೇಧ ಮಾಡಲಾಗುತ್ತದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಡೀಸೆಲ್‌ ಜನರೇಟರ್‌ಗಳ ಬಳಕೆಯನ್ನು ನಿರ್ಬಂಧಿಸಲಾಗುತ್ತದೆ.

ಅಂತರ್‌ ರಾಜ್ಯ ಬಸ್‌‍ಗಳ ಪ್ರವೇಶವನ್ನು , ಎಲೆಕ್ಟ್ರಿಕ್‌ ಅಥವಾ – ಡೀಸೆಲ್‌ ಇಂಧನದ್ದಕ್ಕೆ ಮಾತ್ರ ಸೀಮಿತಗೊಳಿಸುವುದು. ದೆಹಲಿಯಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದು, ಮತ್ತು ಎಲೆಕ್ಟ್ರಿಕ್‌ ಬಸ್‌‍ಗಳನ್ನು ಹೆಚ್ಚಿಸುವುದು, ಮೆಟ್ರೋ ಸೇವೆಗಳ ಆಪರೇಷನ್‌ ಫ್ರೀಕ್ವೆನ್ಸಿಯನ್ನು ಹೆಚ್ಚಿಸುವುದು, ಖಾಸಗಿ ವಾಹನಗಳನ್ನು ತಡೆಯಲು ಪಾರ್ಕಿಂಗ್‌ ಶುಲ್ಕಗಳನ್ನು ಹೆಚ್ಚಿಸಲಾಗುವುದು ಸೇರಿವೆ.

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ದೀಪಾವಳಿಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ನಿವಾಸಿಗಳಿಗೆ ಶುಭ ಹಾರೈಸಿದರು ಮತ್ತು ಸುಪ್ರೀಂ ಕೋರ್ಟ್‌ ಆದೇಶದಂತೆ ಎಲ್ಲರೂ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸುವಂತೆ ಮನವಿ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ, ಪಟಾಕಿಗಳನ್ನು ಬೆಳಿಗ್ಗೆ 6ರಿಂದ 7ರವರೆಗೆ ಮತ್ತು ನಂತರ ರಾತ್ರಿ 8ರಿಂದ ರಾತ್ರಿ 10ರವರೆಗೆ ಮಾತ್ರ ಮಾರಾಟ ಮಾಡಲು ಅವಕಾಶವಿರುತ್ತದೆ ಮತ್ತು ಅಕ್ಟೋಬರ್‌ 18 ರಿಂದ 20ರವರೆಗೆ ಮಾರಾಟ ಮಾಡಲಾಗುತ್ತದೆ.

ದೀಪಗಳನ್ನು ಬೆಳಗಿಸುವ ಮೂಲಕ, ರಂಗೋಲಿ ಬಿಡಿಸುವ ಮೂಲಕ ಮತ್ತು ಸಿಹಿತಿಂಡಿಗಳನ್ನು ಹಂಚಿಕೊಳ್ಳುವ ಮೂಲಕ ಸಾಂಪ್ರದಾಯಿಕ ರೀತಿಯಲ್ಲಿ ಬೆಳಕಿನ ಹಬ್ಬವನ್ನು ಆಚರಿಸಲು ಜನರಿಗೆ ಅವರು ಕರೆ ನೀಡಿದ್ದಾರೆ.

ಆರ್‌ಎಸ್‌‍ಎಸ್‌‍ ಚಟುವಟಿಕೆಗಳಿಗೆ ನಿರ್ಬಂಧ : ಸರ್ಕಾರದ ವಿರುದ್ಧ ಶೆಟ್ಟರ್‌ ವಾಗ್ದಾಳಿ

ಧಾರವಾಡ,ಅ.20- ಆರ್‌ಎಸ್‌‍ಎಸ್‌‍ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರವೇ ಅನುಮತಿ ನೀಡಿರುವಾಗ ರಾಜ್ಯ ಸರ್ಕಾರ ಅದಕ್ಕೆ ನಿರ್ಬಂಧ ಹಾಕುವುದು ಎಷ್ಟರಮಟ್ಟಿಗೆ ಸರಿ
ಎಂದು ಸಂಸದ ಜಗದೀಶ್‌ಶೆಟ್ಟರ್‌ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ 66 ವರ್ಷಗಳ ಹಿಂದೆ ಹಾಕಿದ್ದ ನಿರ್ಬಂಧವನ್ನು ಕೇಂದ್ರ ಗೃಹ ಇಲಾಖೆ ತೆಗೆದು ಹಾಕಿದೆ. ಆರ್‌ಎಸ್‌‍ಎಸ್‌‍ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸಲು ಅವಕಾಶವಿದೆ. ಪಿಡಿಒ ಅಮಾನತು ಸರಿಯಲ್ಲ ಎಂದು ಆಕ್ಷೇಪಿಸಿದರು.

1966ರಲ್ಲಿ ನೆಹರು ಅವರು ಆರ್‌ಎಸ್‌‍ಎಸ್‌‍ ಮತ್ತು ಇಸ್ಲಾಂ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸಬಾರದು ಅಂತಾ ಆದೇಶ ಮಾಡಿದ್ದರು. 1970ರಲ್ಲಿ ಅದು ಕೊಂಚ ತಿದ್ದುಪಡಿಯಾಗಿದ್ದು, 1980ರಲ್ಲಿ ಮತ್ತೊಮೆ ತಿದ್ದುಪಡಿ ಮಾಡಲಾಗಿದೆ. ಮೋದಿ ಪ್ರಧಾನಿ ಅವರು ಜು. 9, 2024ರಲ್ಲಿ ಸಂಘದ ಚಟುವಟಿಕೆ ಮಾಡುವ ಬಗ್ಗೆ ಮತ್ತೊಂದು ಆದೇಶ ಮಾಡಿದ್ದಾರೆ. ಅದರಲ್ಲಿ ಹಿಂದಿನ ಆದೇಶದಲ್ಲಿದ್ದ ಆರ್‌ಎಸ್‌‍ಎಸ್‌‍ ಹೆಸರನ್ನು ತೆಗೆಯಲಾಗಿದೆ. ಈ ಬಗ್ಗೆ ಪ್ರಧಾನಿ ಕಚೇರಿಯಿಂದ ಆದೇಶವಾಗಿದೆ ಎಂದರು.

ಸಂಘದ ಚಟುವಟಿಕೆಯಲ್ಲಿ ಸರ್ಕಾರಿ ನೌಕರರು ಭಾಗವಹಿಸಲು ತೊಂದರೆ ಇಲ್ಲ. ಹೀಗಾಗಿ ರಾಜ್ಯ ಸರ್ಕಾರ ಈ ರೀತಿ ಆದೇಶಿಸಲು ಅಧಿಕಾರವಿಲ್ಲ. ಲಿಂಗಸೂರಿನಲ್ಲಿ ಪಿಡಿಒರನ್ನು ಅಮಾನತು ಮಾಡಿರುವುದು ಕಾನೂನು ಬಾಹಿರ. ಈ ಆದೇಶದ ಪ್ರಕಾರ ಅಮಾನತು ಮಾಡುವಂತಿಲ್ಲ. ಕೂಡಲೇ ಅಮಾನತು ಆದೇಶವನ್ನು ಹಿಂಪಡೆಯಬೇಕು. ಕೋರ್ಟ್‌ಗೆ ಹೋದರೆ ಸರ್ಕಾರದ ಆದೇಶ ವಜಾ ಆಗುತ್ತದೆ ಎಂದರು.

ಆರ್‌ಎಸ್‌‍ಎಸ್‌‍ ವಿಚಾರದಲ್ಲಿ ತಮ ಮೇಲಿನ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 2013ರಲ್ಲಿ ಬಿಜೆಪಿಯೇ ಈ ಆದೇಶ ಮಾಡಿತ್ತು ಅಂತಾರೆ. ನಾನು ಸಿಎಂ ಇದ್ದಾಗಿನ ಆದೇಶವನ್ನೇ ಮುಂದುವರೆಸಿರುವುದಾಗಿ ಹೇಳುತ್ತಾರೆ. ಅವತ್ತು ಆಗಿದ್ದ ಆದೇಶವನ್ನು ಸರಿಯಾಗಿ ಅವರು ಓದಿದ್ದಾರಾ?. ಆದೇಶದಲ್ಲಿ ಎಲ್ಲಿಯೂ ಆರ್‌ಎಸ್‌‍ಎಸ್‌‍ ಪದ ಬಳಸಿಲ್ಲ. ನಮ ಕ್ಯಾಬಿನೆಟ್‌ ಸಭೆಯಲ್ಲಿ ಮಾಡಿದ್ದ ಆದೇಶವಲ್ಲ. ಯಾವುದೋ ಒಂದು ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆ ಜಾಗ ಕೇಳಿದ್ದರು. ಶಿಕ್ಷಣ ಇಲಾಖೆ ಜಾಗದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಅವಕಾಶವಿಲ್ಲ ಎಂದು ಆಗ ಶಿಕ್ಷಣ ಇಲಾಖೆ ಅಧಿಕಾರಿಗಳು ಡಿಡಿಪಿಐಗೆ ಬರೆದಿರುವ ಆದೇಶವದು. ಇನ್ನಾದರು ನಾಟಕ ಮಾಡೋದನ್ನು ಬಿಡಿ ಎಂದು ವಾಗ್ದಾಳಿ ಮಾಡಿದರು.

ಚಿತ್ತಾಪುರ ಘಟನೆ: ಆರ್‌ಎಸ್‌‍ಎಸ್‌‍ ಪಥಸಂಚಲನಕ್ಕೆ ಅನುಮತಿ ಪಡೆಯುವ ಚಿತ್ತಾಪುರದ ಘಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯ, ಪ್ರಿಯಾಂಕ್‌ ಖರ್ಗೆಗೆ ಏನಾಗಿದೆಯೋ ಗೊತ್ತಿಲ್ಲ. ಸಿದ್ದು ಸರ್ಕಾರ ಆಡಳಿತದಲ್ಲಿ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಚಿತ್ತಾಪುರ ಪಥಸಂಚಲನದಲ್ಲಿ ಸಾವಿರಾರು ಯುವಕರು ಭಾಗವಹಿಸುತ್ತಿದ್ದಾರೆ. ಹೀಗಾಗಿ ಇದರ ಜನಪ್ರಿಯತೆಯನ್ನು ಸಿಎಂಗೂ, ಪ್ರಿಯಾಂಕ್‌ ಖರ್ಗೆಗೆ ಸಹಿಸಲು ಆಗುತ್ತಿಲ್ಲ. ಇದೇ ಕಾರಣಕ್ಕೆ ಚಿತ್ತಾಪುರದಲ್ಲಿ ತಡೆಯುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ, ಗುತ್ತಿಗೆದಾರರು 33,000 ಕೋಟಿ ಬಿಲ್‌ ಬಾಕಿ ಇದೆ ಎನ್ನುತ್ತಿದ್ದಾರೆ. ಹಂತ ಹಂತವಾಗಿ ಕೊಡಬಹುದಿತ್ತು, ಅದನ್ನು ಕೊಡುವ ಕೆಲಸವೂ ಆಗುತ್ತಿಲ್ಲ. ಅವರು ಆತಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ರೈತರು ಆತಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಪರಿಹಾರದ ಹಣ ಕೊಡುತ್ತಿಲ್ಲ. ಇಡೀ ಆಡಳಿತ ಕುಸಿದು ಹೋಗಿದೆ. ಹೀಗಾಗಿ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಒಂದೊಂದೇ ವಿಚಾರ ಹೊರಗೆ ಬಿಡುತ್ತಿದ್ದಾರೆ ಶೆಟ್ಟರ್‌ ಇದೇ ವೇಳೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಹಾಸನಾಂಬ ದರ್ಶನ ಪಡೆದು ವಾಪಸ್ಸಾಗುತ್ತಿದ್ದಾಗ ಭೀಕರ ಅಫಘಾತ : ಇಬ್ಬರ ಸಾವು

ಹಾಸನ,ಅ.20– ಹಾಸನಾಂಬೆಯ ದರ್ಶನ ಪಡೆದು ವಾಪಸ್ಸಾಗುತ್ತಿದ್ದಾಗ ಎರಡು ದ್ವಿಚಕ್ರವಾಹನ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಫಘಾತದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಕಗ್ಗಲಿಕಾವಲು ಫಾರೆಸ್ಟ್‌ಬಳಿ ನಡೆದಿದೆ.ಬಸವರಾಜು (24), ಅನು (20) ಮೃತಪಟ್ಟ ದುರ್ದೈವಿಗಳು.

ಬೆಂಗಳೂರು ಮೂಲದ ಬಸವರಾಜು, ಅನು ಹಾಗೂ ಛಾಯಾ ಎಂಬುವವರು ಯಮಹಾ ಬೈಕ್‌ನಲ್ಲಿ ಬಂದು ಹಾಸನಾಂಬದೇವಿ ದರ್ಶನ ಪಡೆದು ಒಂದೆ ಬೈಕ್‌ನಲ್ಲಿ ಮೂವರು ತೆರಳುತ್ತಿದ್ದಾಗ ಚನ್ನರಾಯಪಟ್ಟಣ ಕಡೆಯಿಂದ ವೇಗವಾಗಿ ಬಂದ ಕಾರು ಹೌಸಿಂಗ್‌ ಬೋರ್ಡ್‌ ಬಳಿ ಮೊದಲು ಆಕ್ಟಿವಾಗೆ ಡಿಕ್ಕಿ ಹೊಡೆದು ನಂತರ ಬೈಕ್‌ ಅಪ್ಪಳಿಸಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಬಸವಾರಜು ಹಾಗೂ ಅನು ಸ್ಥಳದಲ್ಲೇ ಸಾವನ್ನಪ್ಪಿದರೆ ಛಾಯಾ ಹಾಗೂ ಆಕ್ಟಿವಾ ಸವಾರ ಮೋಹಮದ್‌ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಚನ್ನರಾಯಪಟ್ಟಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ಕೂಡೆಲೇ ಚೆನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಿಟಿ ಮಾಲ್‌ನಿಂದ ಬಿದ್ದು ಯುವಕ ಸಾವು

ಬೆಂಗಳೂರು,ಅ.20- ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್‌ನ 3ನೇ ಮಹಡಿಯಿಂದ ಬಿದ್ದು ಯುವಕ ಮೃತಪಟ್ಟಿರುವ ಘಟನೆ ಕೆಪಿ ಅಗ್ರಹಾರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಸುಮಾರು 30 ರಿಂದ 35 ವರ್ಷದಂತೆ ಕಾಣುವ ಈ ಯುವಕನ ಹೆಸರು, ವಿಳಾಸ ಸದ್ಯಕ್ಕೆ ತಿಳಿದು ಬಂದಿಲ್ಲ.ಇಂದು ಬೆಳಗ್ಗೆ ಮಾಲ್‌ ತೆರೆಯುತ್ತಿದ್ದಂತೆ 10.15 ರ ಸುಮಾರಿನಲ್ಲಿ
ಈ ಯುವಕ ಜಿಟಿ ಮಾಲ್‌ ಪ್ರವೇಶಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈತ 3ನೇ ಮಹಡಿಗೆ ಹೋಗಿದ್ದಾಗ ಅಲ್ಲಿಂದ ಬಿದ್ದು ಮೃತಪಟ್ಟಿದ್ದಾನೆ.

ಇದು ಆಕಸಿಕವಾಗಿ ಆಯತಪ್ಪಿ ಬಿದ್ದಿರುವುದೋ ಅಥವಾ ಆತಹತ್ಯೆಯೋ ಎಂಬುವುದು ನಿಗೂಢವಾಗಿದೆ.ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೆಪಿ ಅಗ್ರಹಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡು ಮಾಲ್‌ನ ಸಿಸಿ ಕ್ಯಾಮೆರಾಗಳನ್ನು ಕೂಲಂಕುಶವಾಗಿ ಪರಿಶೀಲಿಸುತ್ತಿದ್ದಾರೆ.

ಈ ಘಟನೆ ಹಿನ್ನೆಲೆಯಲ್ಲಿ ಮಾಲ್‌ಗೆ ಸಾರ್ವಜನಿಕ ಪ್ರವೇಶವನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ಯುವಕನ ಮೈ ಮೇಲೆ ನೈಟ್‌ ಡ್ರಸ್‌‍ ಇದ್ದು, ಆತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿಗಾಗಿ ಆರ್‌ಎಸ್‌‍ಎಸ್‌‍ ಮರು ಅರ್ಜಿ

ಕಲಬುರಗಿ, ಅ.20- ಹೈಕೋರ್ಟ್‌ ಆದೇಶದ ಬಳಿಕ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್‌ 2 ರಂದು ಪಥ ಸಂಚಲನ ನಡೆಸಲು ಅನುಮತಿಗಾಗಿ ಆರ್‌ಎಸ್‌‍ಎಸ್‌‍ ಮರು ಅರ್ಜಿ ಸಲ್ಲಿಸಿದೆ. ಆರ್‌ಎಸ್‌‍ಎಸ್‌‍ನ ಕಲಬುರಗಿ ಜಿಲ್ಲಾ ಸಂಚಾಲಕ ಅಶೋಕ್‌ ಪಾಟೀಲ್‌ ಎಂಬುವವರು ಕಲಬುರಗಿ ಜಿಲ್ಲಾಧಿಕಾರಿಗಳ, ಎರಡು ಅಧಿಕೃತ ಇ-ಮೇಲ್‌ ವಿಳಾಸ ಮತ್ತು ವಾಟ್ಸಾಪ್‌ಗೆ ಅರ್ಜಿಯನ್ನು ರವಾನಿಸಿದ್ದು, ಪಥ ಸಂಚಲನಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ನಿನ್ನೆ ಚಿತ್ತಾಪುರದಲ್ಲಿ ನಡೆಯಬೇಕಿದ್ದ ಪಥ ಸಂಚಲನಕ್ಕೆ ತಹಶೀಲ್ದಾರ್‌ ಅವರು ಕಡಿವಾಣ ಹಾಕಿದ್ದರು. ಅದನ್ನು ಆರ್‌ಎಸ್‌‍ಎಸ್‌‍ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಕಲಬುರಗಿ ವಿಭಾಗದ ಹೈಕೋರ್ಟ್‌ ಪೀಠ, ತುರ್ತು ವಿಚಾರಣೆ ನಡೆಸಿ ನವೆಂಬರ್‌ 2ರಂದು ಪಥ ಸಂಚಲನಕ್ಕೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಜೊತೆಗೆ ಅನುಮತಿಗಾಗಿ ಮತ್ತೊಮೆ ಅರ್ಜಿ ಸಲ್ಲಿಸಲು ಆರ್‌ಎಸ್‌‍ಎಸ್‌‍ಗೆ ಸೂಚನೆ ನೀಡಿತ್ತು. ಅದನ್ನು ಆಧರಿಸಿ, ಅಶೋಕ್‌ ಪಾಟೀಲ್‌ ಅವರು ಮರು ಅರ್ಜಿ ಸಲ್ಲಿಸಿದ್ದಾರೆ.

ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ತಾವು ಮನವಿ ಸಲ್ಲಿಸಲು ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದು, ಅಲ್ಲಿ ನಮನ್ನು ಒಳಗೆ ಬಿಡಲಿಲ್ಲ. ಆಪ್ತ ಸಹಾಯಕರಿಗೆ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರು ಕರೆ ಸ್ವೀಕರಿಸಲಿಲ್ಲ, ಹೀಗಾಗಿ ಇ-ಮೇಲ್‌ ಮೂಲಕ ಅರ್ಜಿ ಸಲ್ಲಿಸುತ್ತಿದ್ದೇವೆ. ವಾಟ್ಸಾಪ್‌ ಮೂಲಕವೂ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೈಕೋರ್ಟ್‌ ಅದೇಶದ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಆರ್‌ಎಸ್‌‍ಎಸ್‌‍ ಮುಂದಾಗಿದೆ. ಅಕ್ಟೋಬರ್‌19ರಂದು ಚಿತ್ತಾಪುರದಲ್ಲಿ ಪಥ ಸಂಚಲನ ನಡೆಸಲು ಅನುಮತಿ ನೀಡುವಂತೆ ಈ ಮೊದಲು ಅಕ್ಟೋಬರ್‌ 13 ರಂದು ಅಶೋಕ್‌ ಪಾಟೀಲ್‌ ಅವರು ಚಿತ್ತಾಪುರ ಪುರಸಭೆ ಮುಖ್ಯಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು.

ಈ ವೇಳೆ ಚಿತ್ತಾಪುರ ಎಪಿಎಂಸಿ ಯಾರ್ಡ್‌ ಮತ್ತು ಬಸ್‌‍ ನಿಲ್ದಾಣದ ಎದರುಗಡೆಯಿಂದ ಪಥ ಸಂಚಲನ ಆರಂಭಗೊಂಡು ಅಂಬೇಡ್ಕರ್‌ ವೃತ್ತ, ಭುವನೇಶ್ವರಿ ವೃತ್ತ, ಪಾಲಪ್‌ಗಲ್ಲಿ, ಹೋಳಿಕಟ್ಟಿ, ಬಸವೇಶ್ವರ ಚೌಕ, ಹಳೇ ಕಪಡ ಬಜಾರ್‌ ವೃತ್ತ, ಜನತಾಚೌಕ್‌, ನಾಗಾವಿಚೌಕ್‌ನಿಂದ ನಂದಕಿಶೋರ್‌ ಬಜಾಜ್‌ ಮನೆ ಎದರುಗಡೆ ತಿರುಗಿ ಸೇವಾಲಾಲ್‌ ಚೌಕ್‌ ಪುರಸಭೆ ಕಾರ್ಯಾಲಯ ಮುಂಭಾಗ ಹಳೆ ಗಂಜ್‌ ವೃತ್ತ, ಕಾಶೀಗಲ್ಲಿ, ಗಣೇಶ ಮಂದಿರ ಮೂಲಕ ಬಜಾಜ್‌ ಕಲ್ಯಾಣ ಮಂಟಪ ತಲುಪಿ ಸಾರ್ವಜನಿಕ ಸಮಾರಂಭ ಆಯೋಜಿಸಿರುವುದಾಗಿ ತಿಳಿಸಲಾಗಿತ್ತು. ಈ ಮಾರ್ಗಗಳಲ್ಲಿ ಸ್ಚಚ್ಛ ಮಾಡಿಕೊಡಬೇಕು ಹಾಗೂ ಬ್ಯಾನರ್‌ ಬಟಿಂಗ್‌್ಸಗಳನ್ನು ಕಟ್ಟಲು ಅವಕಾಶ ನೀಡಬೇಕು ಎಂದು ಕೋರಲಾಗಿತ್ತು.

ಚಿತ್ತಾಪುರ ತಹಶೀಲ್ದಾರ್‌ ಅವರು ಪಥ ಸಂಚಲನ ನಡೆಸುವ ಉದ್ದೇಶ, ಭಾಗವಹಿಸುವವರ ಹೆಸರು ಮತ್ತು ಈ ಸಂದರ್ಭದಲ್ಲಿ ಕಾನೂನು ಸುವ್ಯಸ್ಥೆಗೆ ಧಕ್ಕೆಯಾದರೆ ಅದರ ಜವಬ್ದಾರಿ ಹೊರುವ ಹೊಣೆಗಾರಿಕಾ ಪ್ರಮಾಣ ಪತ್ರ ಮತ್ತು ಪಥ ಸಂಚಲನ ಆಯೋಜಿಸುವ ಸಂಸ್ಥೆಯ ನೋಂದಣಿ ದಾಖಲಾತಿ ಪತ್ರಗಳನ್ನು ಒದಗಿಸುವಂತೆ ಸೂಚಿಸಿದರು.

ಅದ್ಯಾವುದನ್ನು ನೀಡದ ಕಾರಣ ತಹಶೀಲ್ದಾರ್‌ ನಾಗಯ್ಯ ಹಿರೇಮಠ್‌ ಪಥ ಸಂಚಲನಕ್ಕೆ ಅನುಮತಿಯನ್ನು ನಿರಾಕರಿಸಿದರು. ಹೈಕೋರ್ಟ್‌ನಲ್ಲಿ ವಾದ-ವಿವಾದದ ಬಳಿಕ ಎರಡನೇ ಅರ್ಜಿ ಸಲ್ಲಿಕೆಯಾಗಿದೆ. ನಿನ್ನೆ ಸಚಿವ ಪ್ರಿಯಾಂಕ ಖರ್ಗೆ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಆರ್‌ಎಸ್‌‍ಎಸ್‌‍ ಮತ್ತೊಮೆ ಅರ್ಜಿ ಸಲ್ಲಿಸಿ ಷರತ್ತುಗಳನ್ನು ಪೂರೈಸಿದರೆ ಪಥ ಸಂಚಲನಕ್ಕೆ ಅನುಮತಿ ನೀಡುವ ಬಗ್ಗೆ ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. ಹೈ ಕೋರ್ಟ್‌ ಆದೇಶದ ಬೆನ್ನಲ್ಲೇ ಆರ್‌ಎಸ್‌‍ಎಸ್‌‍ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದೆ.

ಈ ನಡುವೆ ನಿನ್ನೆ ಸೇಡಂನಲ್ಲಿ ನಡೆದ ಆರ್‌ಎಸ್‌‍ಎಸ್‌‍ ಪಥಸಂಚಲನದಲ್ಲಿ ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ನಾಗರಾಜು ಅವರು, ಗಣವೇಷ ಧರಿಸಿ ಭಾಗವಹಿಸಿದ್ದರು. ಕೆಸಿಎಸ್‌‍ಆರ್‌ ನಿಯಮದ ಪ್ರಕಾರ ಸರ್ಕಾರಿ ನೌಕರರು ಸಂಘ ಸಂಸ್ಥೆಗಳ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ ಎಂಬ ನಿಬಂಧನೆಯಿದೆ.

ಈ ಮೊದಲು ನಡೆದಿದ್ದ ಪಥ ಸಂಚಲನದಲ್ಲಿ ಭಾಗವಹಿಸಿದ್ದರು ಎಂಬ ಕಾರಣಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪಿಡಿಓ ಅವರನ್ನು ಅಮಾನತು ಗೊಳಿಸಲಾಗಿತ್ತು. ಅದರ ಬಳಿಕವೂ ತಾಲ್ಲೂಕು ವೈದ್ಯಾಧಿಕಾರಿ ಅವರು ಪಥ ಸಂಚಲನದಲ್ಲಿ ಭಾಗವಹಿಸಿ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.ನಿನ್ನೆಯ ಸೇಡಂ ಪಥ ಸಂಚಲನದಲ್ಲಿ ಕೆಲ ಕಾಂಗ್ರೆಸ್‌‍ ಕಾರ್ಯಕರ್ತರೂ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ.

ಕೇರಳ : ಎಸ್‌‍ಡಿಪಿಐ-ಸಿಪಿಐ ನಡುವೆ ಘರ್ಷಣೆ, ಆ್ಯಂಬುಲೆನ್ಸ್‌ಗೆ ಬೆಂಕಿ

ತಿರುವನಂತಪುರಂ, ಅ. 20 (ಪಿಟಿಐ)– ಕೇರಳದ ನೆಡುಮಂಗಾಡ್‌ನಲ್ಲಿ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌‍ಡಿಪಿಐ) ಮತ್ತು ಸಿಪಿಐ(ಎಂ) ಕಾರ್ಯಕರ್ತರ ನಡುವಿನ ಘರ್ಷಣೆ ನಡೆದು ಆ್ಯಂಬ್ಯು ಲೆನ್‌್ಸಗೆ ಬೆಂಕಿ ಹಚ್ಚಲಾಗಿದೆ.

ನೆಡುಮಂಗಾಡ್‌ ಪೊಲೀಸರ ಪ್ರಕಾರ, ಸ್ಥಳೀಯ ಸಿಪಿಐ(ಎಂ) ನಾಯಕನ ಮೇಲೆ ನಿನ್ನೆ ಸಂಜೆ ಎಸ್‌‍ಡಿಪಿಐ ಕಾರ್ಯಕರ್ತರು ದಾಳಿ ನಡೆಸಿದ್ದರು. ಹೀಗಾಗಿ ಅಪರಿಚಿತ ವ್ಯಕ್ತಿಗಳು ಎಸ್‌‍ಡಿಪಿಐ ಕಾರ್ಯಕರ್ತರ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಮುಖವಾಡ ಧರಿಸಿದ ವ್ಯಕ್ತಿಗಳು ತಡರಾತ್ರಿ ಆಂಬ್ಯುಲೆನ್ಸ್ ಮತ್ತು ಎಸ್‌‍ಡಿಪಿಐ ಕಾರ್ಯಕರ್ತನ ಒಡೆತನದ ಕಾರಿಗೆ ಹಾನಿ ಮಾಡಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂದೇಹವಾದ ಪ್ರತೀಕಾರದ ಕ್ರಮದಲ್ಲಿ, ಸರ್ಕಾರಿ ಆಸ್ಪತ್ರೆಯ ಬಳಿ ನಿಲ್ಲಿಸಲಾಗಿದ್ದ ಸಿಪಿಐ(ಎಂ) ಯುವ ಘಟಕವಾದ ಡೆಮಾಕ್ರಟಿಕ್‌ ಯೂತ್‌ ಫೆಡರೇಶನ್‌ ಆಫ್‌ ಇಂಡಿಯಾ (ಡಿವೈಎಫ್‌ಐ) ನಡೆಸುತ್ತಿದ್ದ ಆಂಬ್ಯುಲೆನ್ಸ್ಗೆ ಇಂದು ಮುಂಜಾನೆ ಬೆಂಕಿ ಹಚ್ಚಲಾಗಿದೆ.

ಈ ದಾಳಿಗಳು ಹಿಂದಿನ ಘರ್ಷಣೆಯ ಪರಿಣಾಮವೇ ಎಂದು ಖಚಿತಪಡಿಸಿಕೊಳ್ಳಲು ಮತ್ತು ಭಾಗಿಯಾಗಿರುವವರನ್ನು ಗುರುತಿಸಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ, ಪ್ರದೇಶದಲ್ಲಿ ಯಾವುದೇ ಹೆಚ್ಚಿನ ಘರ್ಷಣೆಗಳನ್ನು ತಡೆಗಟ್ಟಲು ಗಸ್ತು ತಿರುಗುವ ಚಟುವಟಿಕೆಗಳನ್ನು ಬಲಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.