Friday, November 7, 2025
Home Blog Page 34

ಗುತ್ತಿಗೆದಾರರನ್ನು ಬೆದರಿಸುವ ಆಟ ನಡೆಯುವುದಿಲ್ಲ : ಆರ್‌.ಅಶೋಕ್‌ ವಾಗ್ದಾಳಿ

ಬೆಂಗಳೂರು,ಅ.19-ಗುತ್ತಿಗೆ ದಾರರ ಮೇಲೆ ಸರ್ಕಾರದ ಬೆದರಿಕೆ ನಡೆಯುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ. ಗುತ್ತಿಗೆದಾರರು ಬೇಕಾದರೆ ಹೈಕಮಾಂಡ್‌ ಮುಂದೆ ಹೋಗಲಿ. ಅದಕ್ಕೆ ನಾನೇ ಸಮಯ ಅವಕಾಶ ಕೊಡಿಸುತ್ತೇನೆ ಎಂದು ಡಿ.ಕೆ.ಶಿವ ಕುಮಾರ್‌ ಹೇಳಿದ್ದರು.

ಇದಕ್ಕೆ ತಮ ಎಕ್‌್ಸ ಖಾತೆಯಲ್ಲಿ ತಿರುಗೇಟು ನೀಡಿರುವ ಅಶೋಕ್‌,ಬಾಕಿ ಬಿಲ್‌ ಕೊಡಿ ಎಂದು ಕೇಳಿದರೆ ಅದು ಧಮ್ಕಿ ಹೇಗೆ ಆಗುತ್ತದೆ ಡಿಸಿಎಂ ಶಿವಕುಮಾರ್‌ ಅವರೇ? ಬಾಕಿ ಬಿಲ್‌ ಕೊಡದಿದ್ದರೆ ತಮ ಹಕ್ಕಿಗಾಗಿ ಮುಷ್ಕರ ಮಾಡಬೇಕಾಗುತ್ತದೆ ಎಂದು ಹೇಳುವುದು ಧಮ್ಕಿ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಬಹುಶಃ ಕಾಂಗ್ರೆಸ್‌‍ನವರು ಜೇಬಿನಲ್ಲಿ ಇಟ್ಟುಕೊಂಡು ಓಡಾಡುವ ಸಂವಿಧಾನ ಪುಸ್ತಕದಲ್ಲಿ ನಾಗರೀಕರಿಗೆ ಮುಷ್ಕರ, ಹೋರಾಟ ಮಾಡುವ ಹಕ್ಕಿಲ್ಲ ಅನ್ನಿಸುತ್ತದೆ. ಆದರೆ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಸಂವಿಧಾನದಲ್ಲಿ ನಾಗರಿಕರು, ಗುತ್ತಿಗೆದಾರರು ತಮ ಹಕ್ಕಿಗಾಗಿ ಸರ್ಕಾರವನ್ನು ಪ್ರಶ್ನಿಸಲೂಬಹುದು, ಮುಷ್ಕರ ಮಾಡಬಹುದು, ಹೋರಾಟವನ್ನೂ ಮಾಡಬಹುದು ಎಂದು ಹೇಳಿದ್ದಾರೆ.

ಇಷ್ಟಕ್ಕೂ ಗುತ್ತಿಗೆದಾರರ ಬಿಲ್‌ ಯಾಕೆ ಕ್ಲಿಯರ್‌ ಮಾಡುತ್ತಿಲ್ಲ? ಒಂದಾ ಪಾಪರ್‌ ಸರ್ಕಾರದ ಬಳಿ ದುಡ್ಡಿಲ್ಲದೆ ಸಂಪೂರ್ಣವಾಗಿ ದಿವಾಳಿ ಆಗಿರಬೇಕು. ಇಲ್ಲಾ ನಿಮ ಕಮಿಷನ್‌ ಬೇಡಿಕೆ ಈಡೇರಿಸಲಾಗದೆ ಗುತ್ತಿಗೆದಾರರು ನೀವು ಕೇಳುತ್ತಿರುವ ಪರ್ಸೆಂಟೇಜ್‌ಗೆ ಒಪ್ಪದೇ ಇರಬಹುದು ಎಂದು ವ್ಯಂಗ್ಯವಾಡಿದ್ದಾರೆ.

ರಸ್ತೆಗುಂಡಿಗಳ ದುಸ್ಥಿತಿ ಬಗ್ಗೆ ದನಿ ಎತ್ತಿದ ಉದ್ಯಮಿಗಳಿಗೆ ಧಮ್ಕಿ ಹಾಕಿ ಅವಮಾನ ಮಾಡಿದ್ದಾಯ್ತು, ಈಗ ಗುತ್ತಿಗೆದಾರರಿಗೆ ಧಮ್ಕಿ ಹಾಕುತ್ತಿದೆ ಈ ಲಜ್ಜೆಗೆಟ್ಟ ಕಾಂಗ್ರೆಸ್‌‍ ಸರ್ಕಾರ. ಪರಿಸ್ಥಿತಿ ಹೀಗೆ ಮುಂದುವರೆದರೆ ಕರ್ನಾಟಕಕ್ಕೆ ಯಾವ ಉದ್ಯಮಗಳೂ ಬರುವುದಿಲ್ಲ, ಯಾವ ಗುತ್ತಿಗೆದಾರರು ಸರ್ಕಾರದ ಕೆಲಸ ಮಾಡುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಕಾಶ್ಮೀರಿ ಪಂಡಿತರ ಮರೆತ ಬಿಜೆಪಿ

ಜಮ್ಮು, ಅ. 19 (ಪಿಟಿಐ)- ತಮ್ಮ ಪಕ್ಷವು ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕ ಜಹಾನ್‌ಜೈಬ್‌‍ ಸಿರ್ವಾಲ್‌‍ ಅವರು, ಸಮುದಾಯ ದೊಂದಿಗಿನ ದೀರ್ಘಕಾಲದ ಅನ್ಯಾಯವನ್ನು ಪರಿಹರಿಸಲು ಅರ್ಥಪೂರ್ಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಮ್ಮ ಪಕ್ಷದ ನಾಯಕತ್ವಕ್ಕೆ ಕರೆ ನೀಡಿದ್ದಾರೆ.

ಈ ಸಮುದಾಯವು ಬಿಜೆಪಿಗೆ ಅತ್ಯಂತ ದೃಢವಾದ ಪ್ರಚಾರಕರಲ್ಲಿ ಒಂದಾಗಿದೆ.
ಅವರ ನೋವನ್ನು ಬಿಜೆಪಿ ನಾಯಕತ್ವವು ರಾಜಕೀಯ ಲಾಭಕ್ಕಾಗಿ ಸಂಸತ್ತಿನಲ್ಲಿ 500 ಕ್ಕೂ ಹೆಚ್ಚು ಬಾರಿ ಉಲ್ಲೇಖಿಸಿದೆ ಮತ್ತು ಪ್ರತಿ ರಾಜಕೀಯ ವಿರೋಧಿಯ ವಿರುದ್ಧ ಸಾಧನವಾಗಿ ಬಳಸಿದೆ ಎಂದು ಕಾಂಗ್ರೆಸ್‌‍ ತೊರೆದ ನಂತರ ಕಳೆದ ವರ್ಷ ಏಪ್ರಿಲ್‌ನಲ್ಲಿ ಬಿಜೆಪಿಗೆ ಸೇರಿದ ಸಿರ್ವಾಲ್‌ ಹೇಳಿದರು.

ಕಾಶ್ಮೀರಿ ಪಂಡಿತ ಸಮುದಾಯದೊಂದಿಗೆ ದೀರ್ಘಕಾಲದ ಅನ್ಯಾಯವನ್ನು ಪರಿಹರಿಸಲು ನಿರ್ಣಾಯಕ ಮತ್ತು ಅರ್ಥಪೂರ್ಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಾನು ಪಕ್ಷದ ನಾಯಕತ್ವವನ್ನು ಕೋರುತ್ತೇನೆ. ಅವರು ಸಾಂಕೇತಿಕ ಸನ್ನೆಗಳು ಅಥವಾ ಸಂಸತ್ತಿನ ಚರ್ಚೆಗಳಲ್ಲಿ ಪುನರಾವರ್ತಿತ ಉಲ್ಲೇಖಗಳಿಗಿಂತ ಹೆಚ್ಚಿನದನ್ನು ಅರ್ಹರು ಎಂದು ಅವರು ಹೇಳಿದರು.

ಇದಕ್ಕೂ ಮೊದಲು, ಅಕ್ಟೋಬರ್‌ 3 ರಂದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಮುಸ್ಲಿಮರ ವಿರುದ್ಧದ ಸ್ವೀಕಾರಾರ್ಹವಲ್ಲದ ಹೇಳಿಕೆಗಳು ಮತ್ತು ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ರಾಜ್ಯ ಪೊಲೀಸರ ಪ್ರತಿಕಾರಾತ್ಮಕ ಮನೋಭಾವವನ್ನು ಉಲ್ಲೇಖಿಸಿ ಸಿರ್ವಾಲ್‌ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು.

ಕಾಶ್ಮೀರಿ ಪಂಡಿತರು ತಮ್ಮ ತಾಯ್ನಾಡಿಗೆ ಸುರಕ್ಷಿತವಾಗಿ ಮರಳುವುದನ್ನು ಖಚಿತಪಡಿಸಿಕೊಳ್ಳುವ, ಅವರ ಹಕ್ಕುಗಳನ್ನು ಪುನಃಸ್ಥಾಪಿಸುವ ಮತ್ತು ಅವರಿಗೆ ದೀರ್ಘಕಾಲದಿಂದ ನಿರಾಕರಿಸಲ್ಪಟ್ಟ ಭದ್ರತೆ ಮತ್ತು ಅವಕಾಶಗಳನ್ನು ಒದಗಿಸುವ ನೀತಿಗಳಿಗೆ ನಾಯಕತ್ವ ಆದ್ಯತೆ ನೀಡಬೇಕು ಎಂದು ಬಿಜೆಪಿ ಮುಖಂಡರು ಹೇಳಿದರು.

ಅವರು ಸ್ಪಷ್ಟವಾದ ಕ್ರಮಕ್ಕೆ ಅರ್ಹರು, ಹಿರಿಯ ನಾಯಕರು ಅವರ ಹೋರಾಟಗಳನ್ನು ನೇರವಾಗಿ ವೀಕ್ಷಿಸಲು ಅವರ ಶಿಬಿರಗಳಿಗೆ ಭೇಟಿ ನೀಡುವುದರೊಂದಿಗೆ ಪ್ರಾರಂಭಿಸಿ, ನಂತರ ಅವರಲ್ಲಿರುವ ಕೆಲವೇ ಪಕ್ಷದ ಸದಸ್ಯರು ಸೇರಿದಂತೆ ಸಮುದಾಯದ ಪ್ರತಿನಿಧಿಗಳೊಂದಿಗೆ ಸಮಗ್ರ ಸಮಾಲೋಚನೆಗಳನ್ನು ನಡೆಸಿ, ಅವರ ಗೌರವಾನ್ವಿತ ಪುನರ್ವಸತಿಗಾಗಿ ಸಮಗ್ರ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಲು ಎಂದು ಸಿರ್ವಾಲ್‌ ಇಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಸಮುದಾಯದ ದುಃಸ್ಥಿತಿಯನ್ನು ಪರಿಹರಿಸಲು ಅವರು ಒತ್ತಾಯಿಸಲ್ಪಟ್ಟಿದ್ದಾರೆ ಎಂದು ಅವರು ಹೇಳಿದರು, ಇದು ತುರ್ತು ಗಮನ ಮತ್ತು ಕ್ರಮದ ಅಗತ್ಯವಿರುವ ಆಳವಾದ ಕಳವಳದ ವಿಷಯವಾಗಿದೆ.

ಪ್ರಧಾನಿ ಅಥವಾ ಗೃಹ ಸಚಿವರು ಸೇರಿದಂತೆ ಉನ್ನತ ನಾಯಕತ್ವವು ಒಮ್ಮೆಯೂ ಸಹ ಅವರು ಅನುಭವಿಸುತ್ತಿರುವ ಶೋಚನೀಯ ಪರಿಸ್ಥಿತಿಗಳನ್ನು ವೀಕ್ಷಿಸಲು ಅವರ ಶಿಬಿರಗಳಿಗೆ ಭೇಟಿ ನೀಡದಿರುವುದು ತೀವ್ರ ದುರದೃಷ್ಟಕರ ಎಂದು ಅವರು ಹೇಳಿದರು.ಸರಿಯಾದ ವಸತಿ, ಆರೋಗ್ಯ ರಕ್ಷಣೆ ಮತ್ತು ಆರ್ಥಿಕ ಮತ್ತು ಸಾಮಾಜಿಕ ಪುನರ್ವಸತಿಗೆ ಅವಕಾಶಗಳ ಕೊರತೆಯಿಂದಾಗಿ ಅವರ ಶಿಬಿರಗಳಲ್ಲಿನ ಪರಿಸ್ಥಿತಿಗಳು ಮೂರು ದಶಕಗಳಿಗೂ ಹೆಚ್ಚು ಕಾಲ ಮುಂದುವರಿದಿರುವ ಮಾನವೀಯ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ವಿಫಲವಾಗಿದೆ ಎಂದು ಸಿರ್ವಾಲ್‌ ಹೇಳಿದರು.

ಕಾಶ್ಮೀರಿ ಪಂಡಿತರ ವಲಸೆಯನ್ನು ಗಂಭೀರ ಮಾನವ ದುರಂತ ಎಂದು ಕರೆದ ಅವರು, ಇದು ಕೇವಲ ಆರ್ಥಿಕ ಸಮಸ್ಯೆಯಲ್ಲ ಎಂದು ಪ್ರತಿಪಾದಿಸಿದರು.ಕುಟುಂಬಗಳನ್ನು ಅವರ ಮನೆಗಳಿಂದ ಹರಿದು ಹಾಕಲಾಯಿತು, ಅವರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಬೇರು ಸಹಿತ ಕಿತ್ತುಹಾಕಲಾಯಿತು, ಮತ್ತು ಅವರು ತಮ್ಮದೇ ದೇಶದೊಳಗೆ ದೇಶಭ್ರಷ್ಟರಾಗಿ ವಾಸಿಸಲು ಒತ್ತಾಯಿಸಲ್ಪಟ್ಟರು, ಅಸಮರ್ಪಕ ಸೌಲಭ್ಯಗಳು ಮತ್ತು ನಿರ್ಲಕ್ಷ್ಯದಿಂದ ಗುರುತಿಸಲ್ಪಟ್ಟ ಶಿಬಿರಗಳಲ್ಲಿ ದಶಕಗಳ ಕಾಲ ಕಷ್ಟಗಳನ್ನು ಸಹಿಸಿಕೊಂಡರು ಎಂದು ಸಿರ್ವಾಲ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.ತಮ್ಮ ಕುಂದುಕೊರತೆಗಳನ್ನು ಪರಿಹರಿಸಲು ಅಥವಾ ಅವರ ಪುನರ್ವಸತಿಗಾಗಿ ಕೆಲಸ ಮಾಡಲು ಸಮುದಾಯದೊಂದಿಗೆ ಅರ್ಥಪೂರ್ಣ ಚರ್ಚೆ ಇಲ್ಲದಿರುವುದನ್ನು ಅವರು ಖಂಡಿಸಿದರು.

ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ ಬಿಜೆಪಿ ಸಂಸದನ ಮೇಲೆ ದಾಳಿ ಯತ್ನ

ಕೋಲ್ಕತ್ತಾ, ಅ. 19 (ಪಿಟಿಐ)- ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ ಬಿಜೆಪಿ ಸಂಸದರ ಮೇಲೆ ದಾಳಿ ಯತ್ನ ನಡೆದಿದೆ.ಬಿಜೆಪಿ ಸಂಸದ ರಾಜು ಬಿಸ್ತಾ ಅವರು ಡಾರ್ಜಿಲಿಂಗ್‌ನ ಮಸ್ಧುರಾ ಪ್ರದೇಶದ ಮೂಲಕ ಹಾದುಹೋಗುವಾಗ ತಮ್ಮ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಸಂಬಂಧ ಬಿಜೆಪಿ ಜೋರೆಬಂಗ್ಲೋ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಇಂದು ಸುಖಿಯಾ ಪೋಖಾರಿ ಬಳಿಯ ಮಸ್ಧುರಾದಲ್ಲಿ,
ನನ್ನ ಬೆಂಗಾವಲು ಪಡೆಯ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆ ಹೇಡಿಗಳು ನನ್ನ ಮೇಲೆ ದಾಳಿ ಮಾಡಿದ್ದರೂ, ದಾಳಿಯ ಬಲವು ನನ್ನ ಹಿಂದಿನ ವಾಹನದ ಮೇಲೆ ಬಿದ್ದಿತು ಎಂದಿದ್ದಾರೆ.

ಕೋಲ್ಕತ್ತಾಗೆ ನಿಷ್ಠರಾಗಿರುವವರು ಇಂತಹ ದಾಳಿಗಳಿಂದ ನಾವು ಭಯಭೀತರಾಗುತ್ತೇವೆ ಎಂದು ಭಾವಿಸಿದರೆ, ಅದು ತಪ್ಪು. ನಾವು ಹೆದರುವುದಿಲ್ಲ ಮತ್ತು ಅಂತಹ ಹೇಡಿತನದ ದಾಳಿಗಳು ನಮ್ಮ ಉತ್ಸಾಹವನ್ನು ಹೆಚ್ಚಿಸುತ್ತವೆ ಎಂದು ಅವರು ಹೇಳಿದರು.ಬಿಸ್ತಾ ಅವರ ಆಪ್ತ ಸಹಾಯಕ ಮತ್ತು ಬಿಜೆಪಿ ಕಾರ್ಯಕರ್ತ ಸಂಜೀವ್‌ ಲಾಮಾ ಕುಳಿತಿದ್ದ ವಾಹನಕ್ಕೆ ಕಲ್ಲು ತಗುಲಿದ ಘಟನೆ ನಡೆದಿದೆ ಎಂದು ಪೊಲೀಸ್‌‍ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ಒಂದು ಸಣ್ಣ ಕಲ್ಲು ಕಾರಿಗೆ ಡಿಕ್ಕಿ ಹೊಡೆದಂತೆ ಕಂಡುಬಂದಿದೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.ಬಿಸ್ತಾ ಅವರು ಎಕ್‌್ಸ ಪೋಸ್ಟ್‌ನಲ್ಲಿ, ಇಂದು ಶಾಂತಿ ಕದಡಲು ಪ್ರಯತ್ನಿಸಿದವರಿಗೆ ನಾನು ಎಚ್ಚರಿಕೆ ನೀಡುತ್ತಿದ್ದೇನೆ, ನಿಮ್ಮ ದುಷ್ಟ ಪ್ರಯತ್ನಗಳು ಯಶಸ್ವಿಯಾಗಲು ನಾವು ಬಿಡುವುದಿಲ್ಲ. ನಮ್ಮ ಪ್ರದೇಶದಲ್ಲಿ ಶಾಶ್ವತ ಶಾಂತಿಗಾಗಿ ನಾವು ಕೆಲಸ ಮಾಡುತ್ತೇವೆ ಮತ್ತು ಭೂಮಿಯ ಮೇಲಿನ ಯಾವುದೇ ಶಕ್ತಿಯು ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಸೇರಿಸಿದ್ದಾರೆ.

ಬಿಸ್ತಾ ಅವರ ಬೆಂಗಾವಲು ವಾಹನದ ಮೇಲೆ ನಡೆದ ದಾಳಿಯನ್ನು ಕೇಂದ್ರ ಸಚಿವ ಮತ್ತು ಮಾಜಿ ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್‌ ಖಂಡಿಸಿದ್ದಾರೆ, ಇದನ್ನು ಬಾಡಿಗೆ ದುಷ್ಕರ್ಮಿಗಳು ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ…. ಇಂದು ಮತ್ತೊಂದು ಹೇಯ ಮತ್ತು ಹೇಡಿತನದ ಪಿತೂರಿ ಬಯಲಾಗಿದೆ.

ಈ ಬಾರಿ ನಮ್ಮ ಡಾರ್ಜಿಲಿಂಗ್‌ ಸಂಸದ ಜಿ ಅವರನ್ನು ಬಾಡಿಗೆ ದುಷ್ಕರ್ಮಿಗಳ ಮೂಲಕ ಗುರಿಯಾಗಿಸಿಕೊಂಡಿದ್ದಾರೆ. ಹಠಾತ್‌ ದಾಳಿಯಲ್ಲಿ, ಅವರ ಕಾರಿನ ಹಿಂದಿನ ವಾಹನ ಹಾನಿಗೊಳಗಾಯಿತು, ಆದರೆ ಸರ್ವಶಕ್ತನ ಕೃಪೆಯಿಂದ ರಾಜು ಜಿ ಸುರಕ್ಷಿತರಾಗಿದ್ದಾರೆ. ಈ ನೀಚ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಉತ್ತರ ಪ್ರದೇಶ : ಬೈಕ್‌ಗೆ ಟ್ರಕ್‌ ಡಿಕ್ಕಿಯಾಗಿ 3 ಮಕ್ಕಳ ಸಾವು

ಹರ್ದೋಯ್‌,ಅ.19- ಕಳೆದ ರಾತ್ರಿ ಉತ್ತರ ಪ್ರದೇಶದ ಹರ್ದೋಯ್‌ ಜಿಲ್ಲೆಯ ಬೇಗಮ್‌ಗಂಜ್‌‍ ಫ್ಲೈಓವರ್‌ ಮೇಲೆ ಟ್ರಕ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 3 ಮಕ್ಕಳು ಸಾವನ್ನಪ್ಪಿದ್ದಾರೆ. ಕರಣ್‌,ಕಾಜಲ್‌ (10) ಮತ್ತು ಅಂಶಿಕಾ (11) ಮೃತ ದುದೈವಿಗಳು.

ಉನ್ನಾವ್‌ ಜಿಲ್ಲೆಯ ಪ್ರದೀಪ್‌ ಕುಮಾರ್‌ ತಮ ಪತ್ನಿ ಜಿತೆ ತರಳುತ್ತಿದ್ದರೆ, ಹಾರ್ದೋಯ್‌ನ ಪಲ್ಹರೈ ಗ್ರಾಮದ ನಿವಾಸಿ ಅವರ ಅವರ ಸೋದರಳಿಯ ಕರಣ್‌ ಅವರು ಪ್ರದೀಪ್‌ ಅವರ ಪುತ್ರಿಯರಾದ ಕಾಜಲ್‌ ಮತ್ತು ಅಂಶಿಕಾ ಅವರೊಂದಿಗೆ ಮತ್ತೊಂದು ಬೈಕ್‌ನಲ್ಲಿ ಬರುತ್ತಿದ್ದರು.

ಬೇಗಮ್‌ಗಂಜ್‌‍ ಫ್ಲೈಓವರ್‌ ಬಳಿ, ವಿರುದ್ಧ ದಿಕ್ಕಿನಿಂದ ಬಂದ ಟ್ರಕ್‌ ಕರಣ್‌ ಅವರ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದಿದೆ ಈ ವೇಳೆ ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ.
ಪೊಲೀಸರು ಸ್ಥಳಕ್ಕೆ ದಾವಿಸಿ ಗಾಯಾಳುಗಳನ್ನು ಹತ್ತಿರದ ಸಂದಿಲಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು, ಆದರೆ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಪೊಲೀಸ್‌‍ ವರಿಷ್ಠಾಧಿಕಾರಿ ಅಶೋಕ್‌ ಕುಮಾರ್‌ ಮೀನಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಟ್ರಕ್‌ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಮತ್ತು ತನಿಖೆ ನಡೆಯುಯ್ತಿದೆ ಎಂದು ಅವರು ತಿಳಿಸಿದ್ದಾರೆ.

ಹಾಸನಾಂಬೆ ದರ್ಶನಕ್ಕೆ ನೂಕುನುಗ್ಗಲು, ಭಕ್ತರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ

ಹಾಸನ, ಅ.19- ಹಾಸನಾಂಬೆ ಸಾರ್ವಜನಿಕ ದರ್ಶನೋತ್ಸವಕ್ಕೆ ಇನ್ನು ಮೂರು ದಿನ ಮಾತ್ರ ಬಾಕಿ ಉಳಿದಿದ್ದು, ಇಂದು ಸಹ ಭಕ್ತರ ದಂಡೇ ಹರಿದುಬಂದಿತ್ತು.ಶುಕ್ರವಾರ ಬೆಳಗ್ಗೆಯಿಂದ ಶನಿವಾರ ಬೆಳಗ್ಗೆವರೆಗೂ 3.70 ಲಕ್ಷಕ್ಕೂ ಹೆಚ್ಚು ಭಕ್ತರು ತಾಯಿಯ ದರ್ಶನ ಪಡೆದಿರುವುದು ಹೊಸ ದಾಖಲೆಯಾಗಿದೆ.

ಇಂದು ಕೂಡ ಭಕ್ತರ ಸಾಗರವೇ ಹರಿದು ಬರುತ್ತಿದ್ದು, ದರ್ಶನದ ನಿರೀಕ್ಷಾ ಅವಧಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಭಕ್ತರ ಸುರಕ್ಷತೆ ಹಾಗೂ ಅನುಕೂಲಕ್ಕಾಗಿ ಪೊಲೀಸ್‌‍ ಇಲಾಖೆ ಹಾಗೂ ಜಿಲ್ಲಾಡಳಿತ ವಿಶೇಷ ವ್ಯವಸ್ಥೆ ಕೈಗೊಂಡಿದ್ದು, ಮಳೆಯ ಸಾಧ್ಯತೆಯ ಕಾರಣ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ದೀಪಾವಳಿ ನವರಾತ್ರಿ ಉತ್ಸವದ ಭಾಗವಾಗಿ ಹಾಸನಾಂಬ ದರ್ಶನೋತ್ಸವ ಸಹಸ್ರಾರು ಜನರನ್ನು ಆಕರ್ಷಿಸುತ್ತಿದ್ದು, ಇಡೀ ನಗರವನ್ನೆ ಧಾರ್ಮಿಕ ಉತ್ಸವ ಆವರಿಸಿದಂತಾಗಿದೆ.
ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಈ ನಡುವೆ ಭಕ್ತರಿಗೆ ದರ್ಶನಕ್ಕೆ ಅಡ್ಡಿಯಾಗದಂತೆ ಜಿಲ್ಲಾಡಳಿತ ಶಿಷ್ಟಾಚಾರ ದರ್ಶನದಲ್ಲಿ ಮಹತ್ವದ ಬದಲಾವಣೆ ಮಾಡಿದೆ.

ಇದರಿಂದ ಸಚಿವರ ಪತ್ರ ಹಿಡಿದು ಶಿಷ್ಟಾಚಾರದಡಿ ದರ್ಶನಕ್ಕೆ ಬರುವವರಿಗೆ ಬ್ರೇಕ್‌ ಬಿದ್ದಂತಾಗಿದ್ದು, ಗಣ್ಯರ ಪತ್ರ ತರುವ ಕುಟುಂಬ ಸದಸ್ಯರಿಗೆ ದೇವಿ ದರ್ಶನಕ್ಕೆ ಅವಕಾಶ ಇಲ್ಲವಾಗಿದೆ. ಸಚಿವರ ಜೊತೆಯಲ್ಲಿ ಬರುವವರಿಗೆ ಮಾತ್ರ ಶಿಷ್ಟಾಚಾರ ದರ್ಶನ ಎಂದು ಆದೇಶ ನೀಡುವಂತೆ ಹಾಸನಾಂಬೆ ದೇವಾಲಯ ಆಡಳಿತಾಧಿಕಾರಿ ಮಾರುತಿ ಆದೇಶ ಮಾಡಿದ್ದು, ಸಚಿವರ ಸೂಚನೆಯಂತೆ ಈ ಮಾರ್ಪಾಡು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಹಾಸನಾಂಬೆ ದರ್ಶನೋತ್ಸವಕ್ಕೆ ಬೆಂಗಳೂರು ಕಡೆಯಿಂದ ಸಾರಿಗೆ ಬಸ್‌‍ಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಸಮಯಕ್ಕೆ ಸರಿಯಾಗಿ ಬಸ್‌‍ಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಇಂದು ಭಾನುವಾರವಾದ್ದರಿಂದ ಭಾರೀ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದು, ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಕಿಲೋಮೀಟರ್‌ಗಟ್ಟಲೆ ಧರ್ಮದರ್ಶನದ ಸಾಲು ನಿಂತಿದ್ದು, ದರ್ಶನಕ್ಕೆ ಎರಡರಿಂದ ಮೂರು ಗಂಟೆಗಳ ಕಾಲ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರತಿನಿತ್ಯ ಮೂರರಿಂದ ಮೂರೂವರೆ ಲಕ್ಷ ಭಕ್ತರು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ಭಕ್ತರನ್ನು ನಿಯಂತ್ರಿಸುವುದೇ ಒಂದು ದೊಡ್ಡ ಸವಾಲಾಗಿದೆ.

ಸುಗಮ ದರ್ಶನ ವ್ಯವಸ್ಥೆಗೆ ಎಷ್ಟೇ ಕ್ರಮ ಕೈಗೊಂಡರೂ ಕಷ್ಟಸಾಧ್ಯವಾಗುತ್ತಿದೆ. 300ರೂ. ಹಾಗೂ 1000ರೂ.ಗಳ ಟಿಕೆಟ್‌ ಪಡೆದವರು ಕೂಡ ದರ್ಶನ ಮಾಡಿ ಬರುವಷ್ಟರಲ್ಲಿ ಹೈರಾಣಾಗಿದ್ದಾರೆ. ದರ್ಶನೋತ್ಸವದ ವೇಳೆ ತೊಂದರೆ ಸಂಭವಿಸಿದರೆ ಪೊಲೀಸ್‌‍ ಇಲಾಖೆ ಹೊಣೆಯಲ್ಲ ಎಂದು ಎಸ್‌‍ಪಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ.

ದೊಣ್ಣೆ ಹಿಡಿದು ಭಯ ಹುಟ್ಟಿಸಬಹುವುದೇ ಹೊರತು ಭರವಸೆ ಮೂಡಿಸಲು ಸಾಧ್ಯವಿಲ್ಲ : ಹರಿಪ್ರಸಾದ್‌

ಬೆಂಗಳೂರು, ಅ.19– ಕೈಯಲ್ಲಿ ದೊಣ್ಣೆ ಹಿಡಿದು ಜನರಲ್ಲಿ ಭಯ ಹುಟ್ಟಿಸಬಹುದೇ ಹೊರತು ಭರವಸೆ ಮೂಡಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌‍ನ ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ತಿರುಗೇಟು ನೀಡಿದ್ದಾರೆ.

ತಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರಿಗೆ ತಿರುಗೇಟು ನೀಡಿದ್ದಾರೆ.ದೇಶದ ಜನರಲ್ಲಿ ಆತವಿಶ್ವಾಸ, ಧೈರ್ಯ, ಭರವಸೆ ಮೂಡಿಸಿರುವುದು ಬಾಬಾ ಸಾಹೇಬರು ನೀಡಿರುವ ಸಂವಿಧಾನದಿಂದ ಮಾತ್ರ. ಪಥ ಸಂಚಲನ ಸಾಗುವ ದ್ವೇಷದ ಬೀದಿಯಲ್ಲಿ ಪ್ರೀತಿ ಹುಟ್ಟುವುದಾದರೂ ಹೇಗೆ? ದೊಣ್ಣೆ, ಲಾಠಿ, ಬೂಟಿನ ಪಥ ಸಂಚಲನದಿಂದ ಸಮಾಜದಲ್ಲಿ ಭಯ, ದ್ವೇಷದ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದಿದ್ದಾರೆ.

ಪಥ ಸಂಚಲನದ ಉದ್ದೇಶವೇ ಭಯದ ವಾತಾವರಣದ ನಿರ್ಮಾಣ ಎನ್ನುವುದು ಸ್ಪಷ್ಟ. ಆರ್‌.ಎಸ್‌‍.ಎಸ್‌‍ ಪೇಯ್‌್ಡ ಸಂಘಟನೆಯಲ್ಲ ಎಂದಾದರೆ ದೇಶ-ವಿದೇಶಿ ಮೂಲದಿಂದಲೂ ಹರಿದು ಬರುತ್ತಿರುವ ಹಣಕ್ಕೆ ಹೊಣೆ ಯಾರು? ಸಮಾಜ ಸೇವೆ ಮಾಡಲು ಆರ್‌.ಎಸ್‌‍.ಎಸ್‌‍ ಸರ್ಕಾರಿ ಸಂಸ್ಥೆಯೂ ಅಲ್ಲ, ಸರ್ಕಾರೇತರ ಸಂಸ್ಥೆಯೂ ಅಲ್ಲ, ಕನಿಷ್ಠ ಪಕ್ಷ ನೋಂದಾವಣಿಯೂ ಆಗಿಲ್ಲ. ಹಾಗಾದರೆ ಇದೊಂದು ಭೂಗತ ಸಂಘಟನೆ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ವಿದೇಶದಿಂದ ಆರ್‌ಎಸ್‌‍ಎಸ್‌‍ಗೆ ಮಾತ್ರ ಹಣ ಬರಲಿ ಎಂಬ ಕಾರಣಕ್ಕಾಗಿಯೇ ಅಲ್ಲವೇ ಎನ್‌.ಜಿ.ಓ.ಗಳಿಗೆ ವಿದೇಶಿ ಫಂಡ್‌ ಬರುವುದನ್ನು ನಿಲ್ಲಿಸಿರುವುದು. ನೂರು ವರ್ಷದ ಇತಿಹಾಸದಲ್ಲಿ ದೊಣ್ಣೆ ಹಿಡಿದು ಸಾಗಿರುವ ಪಥ ಸಂಚಲನದಿಂದ ಸಮಾಜಕ್ಕೆ ಆಗಿರುವ ಲಾಭವೇನು? ಎಂದು ಕಿಡಿಕಾರಿದ್ದಾರೆ.

ಹಾದಿ ಬೀದಿಯಲ್ಲಿ ದೊಣ್ಣೆ ಹಿಡಿದು ಶಾಂತಿ-ಸುವ್ಯಸ್ಥೆಯನ್ನು ಹಾಳು ಮಾಡಿದ್ದೇ ಸಾಧನೆಯೇ? ದೊಣ್ಣೆ ಜನರ ಕೈಗೆ ಸಿಕ್ಕಿ ಬಡಿಸಿಕೊಳ್ಳಬೇಡಿ, ಬೇಗ ಎಚ್ಚೆತ್ತುಕೊಳ್ಳದಿದ್ದರೆ ಸಂಘಕ್ಕೆ ಉಳಿಗಾಲವಿಲ್ಲ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಇನ್ನೊಂದು ವಾರ ಮಳೆ ಮುಂದುವರಿಕೆ

ಬೆಂಗಳೂರು, ಅ.19– ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದ್ದು, ವಾರಾಂತ್ಯದವರೆಗೆ ಮುಂದುವರೆಯುವ ಸಾಧ್ಯತೆಗಳಿವೆ.

ಕಳೆದ ಮೂರು ನಾಲ್ಕು ದಿನಗಳಿಂದ ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ನಿನ್ನೆ ಸಾಧಾರಣ ಮಳೆಯಾಗಿದೆ.

ಅರಬ್ಬೀ ಸಮುದ್ರದಲ್ಲಿ ಹಾಗೂ ಬಂಗಾಳ ಕೊಲ್ಲಿಯಲ್ಲಿ ಮೇಲೈ ಸುಳಿಗಾಳಿ ಉಂಟಾಗಿರುವ ಪರಿಣಾಮದಿಂದ ರಾಜ್ಯದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬರುತ್ತಿದ್ದು, ಆಗಾಗ್ಗೆ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುತ್ತಿದೆ.

ಹವಾಮಾನ ಮುನ್ಸೂಚನೆ ಪ್ರಕಾರ ಅ.25ರವರೆಗೆ ಮಳೆ ಮುಂದುವರೆಯಲಿದೆ. ಮುಂಗಾರು ಮಾರುತಗಳು ಮರಳಿದ್ದು, ಹಿಂಗಾರು ಮಾರುತಗಳು ಕ್ರಿಯಾಶೀಲವಾಗಿರುವ ಹಿನ್ನಲೆಯಲ್ಲಿ ವಾತಾವರಣದಲ್ಲಿ ಹಲವು ಬದಲಾವಣೆಗಳಾಗುತ್ತಿವೆ. ಇದರ ಪರಿಣಾಮದಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಕರಾವಳಿ ಹಾಗೂ ಮಲೆನಾಡಿನ ಕೆಲವು ಕಡೆ ಅಧಿಕ ಮಳೆಯಾಗುವ ಮುನ್ಸೂಚನೆಗಳಿವೆ. ಉತ್ತರ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಹಲವೆಡೆ ಮಳೆಯಾಗುವ ಸಾಧ್ಯತೆಗಳಿವೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಅಕ್ಟೋಬರ್‌ ಒಂದರಿಂದ ನಿನ್ನೆಯವರೆಗೆ ದಕ್ಷಿಣ ಒಳನಾಡು ಹೊರತುಪಡಿಸಿ ರಾಜ್ಯದ ಉಳಿದೆಡೆ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಇನ್ನೊಂದು ವಾರದ ಕಾಲ ಉತ್ತಮ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಮಳೆ ಕೊರತೆಯ ಪ್ರಮಾಣ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ರಸ್ತೆಯಲ್ಲಿ ನಮಾಜ್‌ ಮಾಡಲು ಅನುಮತಿ ನಿರಾಕರಣೆ ಕುರಿತು ಪರಿಶೀಲನೆ : ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು, ಅ.19– ರಸ್ತೆಯಲ್ಲಿ ನಮಾಜ್‌ ಮಾಡಲು ಅನುಮತಿ ನೀಡದಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ. ಖಾಸಗಿ ಸಂಘ ಸಂಸ್ಥೆಗಳು ಸರ್ಕಾರಿ ಜಾಗದಲ್ಲಿ ತಮ್ಮ ಚಟುವಟಿಕೆ ನಡೆಯಬಾರದು ಎಂದು ತೀರ್ಮಾನ ತೆಗೆದುಕೊಂಡಿದೆ. ಸಹಜವಾಗಿಯೇ ಮುಸ್ಲಿಮರಿಗೆ ರಸ್ತೆಯಲ್ಲಿ ನಮಾಜ್‌ ಮಾಡಲು ಅವಕಾಶ ನಿರಾಕರಿಸಲಾಗುತ್ತಿದೆಯೇ ಎಂದು ಕೇಳಲಾಗುತ್ತಿದೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸರ್ಕಾರ ಒಬ್ಬರಿಗೊಂದು ಮತ್ತೊಬ್ಬರಿಗೆ ಇನ್ನೊಂದು ನಿಯಮ ಮಾಡಲು ಸಾಧ್ಯವಿಲ್ಲ. ರಸ್ತೆಯಲ್ಲಿನ ಚಟುವಟಿಕೆಗಳನ್ನು ನಿಯಂತ್ರಿಸಲು ಪರಿಶೀಲನೆ ನಡೆಸಲಾಗುತ್ತದೆ ಎಂದರು.ಆರ್‌ಎಸ್‌‍ಎಸ್‌‍ ಹೊಸತೇನಲ್ಲ. 100 ವರ್ಷಗಳ ಇತಿಹಾಸ ಹೊಂದಿದೆ. ಅಂದಿನಿಂದಲೂ ದೇಶದಲ್ಲಿ ಗೊಂದಲಗಳಾಗುತ್ತಲೇ ಇದೆ. ಈ ಬಗ್ಗೆ ಪದೇ ಪದೇ ಚರ್ಚೆಗಳಾಗಿವೆ. ಕಾಲಕಾಲಕ್ಕೆ ಸರ್ಕಾರಗಳು ಕ್ರಮಗಳನ್ನು ತೆಗೆದುಕೊಂಡಿವೆ ಎಂದರು.

ಜಗದೀಶ್‌ಶೆಟ್ಟರ್‌ 2013ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅವರದೇ ಪಕ್ಷದ ಅಂಗ ಸಂಸ್ಥೆಯಾದ ಆರ್‌ಎಸ್‌‍ಎಸ್‌‍ನ ಚಟುವಟಿಕೆಗಳಿಗೆ ನಿಯಂತ್ರಣ ಹಾಕಿದ್ದರು. ಕಾಂಗ್ರೆಸ್‌‍ ಸರ್ಕಾರ ಆದೇಶ ಹೊರಡಸಿದ್ದರೆ, ಗಲಾಟೆ ಮಾಡುತ್ತಾರೆ. ಜಗದೀಶ್‌ ಶೆಟ್ಟರ್‌ ಆದೇಶವನ್ನು ಕಂಡೂ ಕಾಣದಂತಿರುತ್ತಾರೆ. ಅನಗತ್ಯ ಪ್ರಚೋದನೆ ಬೇಡ ಎಂದು ನಾವು ಸುಮನಿದ್ದೇವೆ ಎಂದರು.

ಭಜರಂಗ ದಳವನ್ನು ನಿಷೇಧ ಮಾಡುವ ಬಗ್ಗೆ ಸದ್ಯಕ್ಕೆ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಆರ್‌ಎಸ್‌‍ಎಸ್‌‍ ಪಥ ಸಂಚಲನದಲ್ಲಿ ಭಾಗವಹಿಸಿದ್ದ ಪಿಡಿಓ ಅವರನ್ನು ಅಮಾನತುಗೊಳಿಸಿರುವ ಕ್ರಮ ಸಮರ್ಥನೀಯ. ಸರ್ಕಾರಿ ನೌಕರರು ಖಾಸಗಿ ಸಂಸ್ಥೆಗಳ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ, ಸದಸ್ಯತ್ವ ಪಡೆಯುವಂತಿಲ್ಲ, ಗೊಂದಲಗಳ ನಡುವೆಯೂ ಪಥ ಸಂಚಲನದಲ್ಲಿ ಭಾಗಿಯಾಗಿರುವುದು ಸೂಕ್ತವಲ್ಲ ಎಂದು ಹೇಳಿದರು.

ಖಾಸಗಿ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ಸರ್ಕಾರಿ ಸ್ವತ್ತುಗಳಲ್ಲಿ ಅವಕಾಶ ಇಲ್ಲ ಎಂದು ಕಳೆದ ಸಂಪುಟದಲ್ಲೇ ತೀರ್ಮಾನ ತೆಗೆದುಕೊಂಡಿದ್ದೇವೆ. ಈ ಬಗ್ಗೆ ನಿನ್ನೆ ಸಂಜೆ ಅಧಿಕೃತ ಆದೇಶ ಪ್ರಕಟಿಸಲಾಗಿದೆ. ಅದರ ಹಿನ್ನೆಲೆಯಲ್ಲಿ ಕಲಬುರರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಲ್ಲಿ ಆರ್‌ಎಸ್‌‍ಎಸ್‌‍ ಪಥ ಸಂಚಲನಕ್ಕೆ ಅನುಮತಿ ನೀಡಲಾಗಿಲ್ಲ. ಎಲ್ಲಾ ಸಂಘಟನೆಗಳಿಗೂ ಈ ನಿಯಮ ಅನ್ವಯವಾಗಲಿದ್ದು, ಭೀಮ್‌ ಅರ್ಮಿ ಅಥವಾ ಯಾವುದೇ ಸಂಘಟನೆ ಇರಲಿ, ನಿಬಂಧನೆಗಳನ್ನು ಅನುಸರಿಸಿ ಅನುಮತಿ ನೀಡಲಾಗುವುದು ಎಂದು ಹೇಳಿದರು.

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ನಾವೇ ಮುಚ್ಚಿದ್ದೇವೆ ಎಂದು ಉದ್ಯಮಿ ಕಿರಣ್‌ ಮಜುಂದಾರ್‌ ಷಾ ನೀಡಿರುವ ಹೇಳಿಕೆ ಆಕ್ಷೇಪಾರ್ಹವಾದದ್ದು, ಅವರು ಸಾಕಷ್ಟು ಪ್ರಭಾವಿಯಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ. ತಮ ಹೇಳಿಕೆ ಪರಿಣಾಮ ಏನಾಗುತ್ತದೆ ಎಂಬುದರ ಬಗ್ಗೆ ಅವರು ಗಮನ ಕೊಡಬೇಕು. ಸಮಸ್ಯೆಗಳಿದ್ದರೆ, ಮುಖ್ಯಮಂತ್ರಿ ಜೊತೆ ಮಾತನಾಡಿ ಬಗೆ ಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಮಾಧ್ಯಮಗಳಲ್ಲಿ ಮಾತನಾಡುವುದು ಸೂಕ್ತವಲ್ಲ ಎಂದರು.

ಆರ್‌ಎಸ್‌‍ಎಸ್‌‍ ವಿಶ್ವದ ಅತಿದೊಡ್ಡ ಸಂಘಟನೆ : ರಾಜನಾಥ್‌ ಸಿಂಗ್‌

ಲಕ್ನೋ, ಅ.19- ಕೆಲವೇ ಸದಸ್ಯರೊಂದಿಗೆ ಸ್ಥಾಪನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌‍ಎಸ್‌‍) 100 ವರ್ಷಗಳಲ್ಲಿ ವಿಶ್ವದ ಅತಿದೊಡ್ಡ ಸಂಘಟನೆಯಾಗಿ ವಿಕಸನಗೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದ ಸಿಂಗ್‌, ಸುಮಾರು 100 ವರ್ಷಗಳ ಹಿಂದೆ ಕೇವಲ ಐದು ಅಥವಾ ಏಳು ಸದಸ್ಯರನ್ನು ಹೊಂದಿರುವ ಸಣ್ಣ ಕೋಣೆಯಲ್ಲಿ ಆರ್‌ಎಸ್‌‍ಎಸ್‌‍ ಸ್ಥಾಪನೆಯಾಯಿತು. ಈಗ ಅದು ವಿಶ್ವದ ಅತಿದೊಡ್ಡ ಸಂಘಟನೆಯಾಗುತ್ತದೆ ಎಂದು ಹೇಳಿದರು.

ಭಾರತೀಯ ಜನತಾ ಪಕ್ಷ (ಬಿಜೆಪಿ) ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿರುವುದು ದೈವಿಕ ಆಶೀರ್ವಾದ ಎಂದು ಪ್ರತಿಪಾದಿಸಿದ ಸಿಂಗ್‌‍, ಅನೇಕ ಜನರು ಋಷಿಗಳು ಮತ್ತು ತಪಸ್ವಿಗಳಂತೆ ತಮ ಜೀವನವನ್ನು ನಡೆಸುತ್ತಿದ್ದುಬೆಳವಣಿಗೆಗೆ ಕಾರಣ ಎಂದು ಹೇಳಿದರು.

ನಮ ದೇಶದ ಪ್ರಗತಿಯನ್ನು ನೋಡಿದೆ 2014 ರಲ್ಲಿ, ನಾವು 11 ನೇ ಸ್ಥಾನದಲ್ಲಿದ್ದೆವು ಮತ್ತು ಇಂದು, ಪ್ರಧಾನ ಮಂತ್ರಿ ಮೋದಿಯವರ ನಾಯಕತ್ವದಲ್ಲಿ, ವಿಶ್ವದ ಆರ್ಥಿಕತೆಯಲ್ಲಿ ನಾವು ನಾಲ್ಕನೇ ಸ್ಥಾನಕ್ಕೆ ಏರಿದ್ದೇವೆ. ಆರ್ಥಿಕ ತಜ್ಞರು ಇನ್ನು ಎರಡು ಮೂರು ವರ್ಷಗಳಲ್ಲಿ ನಾವು ಮೂರನೇ ಸ್ಥಾನವನ್ನು ತಲುಪುತ್ತೇವೆ ಎಂದು ಭವಿಷ್ಯ ನುಡಿದಿದ್ದಾರೆ ಎಂದು ಹೇಳಿದರು.
ಲಖನೌದ ಲೋಕಸಭಾ ಸಂಸದರಾಗಿ ನಾನು ಬಿಜೆಪಿ ಕಾರ್ಯಕರ್ತರನ್ನು ನಿಯಮಿತವಾಗಿ ಭೇಟಿಯಾಗಬೇಕು,ನಿಮಂತೆಯೇ, ನಾನು ಕೂಡ ಒಬ್ಬ ಕೆಲಸಗಾರ ಎಂದು ಅವರು ಒತ್ತಿ ಹೇಳಿದರು.

ಪ್ರತಿಯೊಂದು ಸಂಸ್ಥೆಯು ಒಂದು ವ್ಯವಸ್ಥೆಯನ್ನು ಹೊಂದಿದೆ ಮತ್ತು ವೈಯಕ್ತಿಕ ಸಾಮರ್ಥ್ಯಗಳಿಗೆ ಅನುಗುಣವಾಗಿ ಜವಾಬ್ದಾರಿಗಳನ್ನು ನಿಗದಿಪಡಿಸಲಾಗಿದೆ ಇದರಲ್ಲಿ ಪ್ರತಿಯೊಬ್ಬರೂ ಹೇಗೆ ನಂಬರ್‌ ಒನ್‌ ಆಗಬಹುದು ಎಂದು ನೀವು ಹೇಳುತ್ತೀರಿ? ಯಾರು ಎಲ್ಲಿಗೆ ತಲುಪುತ್ತಾರೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಇದು ಒಂದು ವಾಸ್ತವ ಆದ್ದರಿಂದ, ಯಾರೂ ಬೇರೆಯವರಿಗಿಂತ ಚಿಕ್ಕವರಲ್ಲ ಅಥವಾ ದೊಡ್ಡವರಲ್ಲ ಎಂದು ಸಿಂಗ್‌ ಹೇಳಿದರು.

ಪ್ರತ್ಯೇಕ ಕಾರ್ಯಕ್ರಮದಲ್ಲಿ, ಸಿಂಗ್‌ ಲಕ್ನೋದಲ್ಲಿ ದಿವಂಗತ ಗಜೇಂದ್ರ ದತ್‌ ನೈಥಾನಿ ಸಾರಕ ದೀನಬಂಧು ಕಣ್ಣಿನ ಆಸ್ಪತ್ರೆಗೆ ಶಿಲಾನ್ಯಾಸ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ನಾನು 26 ವರ್ಷದವನಿದ್ದಾಗ, ನಾನು ಆಗಾಗ್ಗೆ ಬಿಜೆಪಿಯ ರಾಜ್ಯ ಕಚೇರಿಗೆ ಭೇಟಿ ನೀಡುತ್ತಿದ್ದೆ. ಶಾಸಕನಾದ ನಂತರವೂ ಭೇಟಿ ನೀಡುತ್ತಿದ್ದೆ. ಆ ಸಮಯದಲ್ಲಿ, ನೈಥಾನಿ ಜಿ ಅವರಿಂದ ನನಗೆ ಅಪಾರ ಪ್ರೀತಿ ಸಿಕ್ಕಿತು. ಅವಿವಾಹಿತರಾಗಿದ್ದ ಅವರು ತಮ ಜೀವನದುದ್ದಕ್ಕೂ ರಾಷ್ಟ್ರ ನಿರ್ಮಾಣಕ್ಕಾಗಿ ತಮನ್ನು ತಾವು ಅರ್ಪಿಸಿಕೊಂಡರು ಎಂದು ಅವರು ಹೇಳಿದರು.

ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ, ಹರ್ಷ ವ್ಯಕ್ತಪಡಿಸಿದ ಬಿ.ವೈ.ವಿಜಯೇಂದ್ರ

ಬೆಂಗಳೂರು,ಅ.19-ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನಕ್ಕೆ ಅನುಮತಿ ನೀಡಿದ ಘನ ಉಚ್ಛ ನ್ಯಾಯಾಲಯದ ತೀರ್ಪು ಜನತಂತ್ರದ ವಿಜಯ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.

ಚಿತ್ತಾಪುರದಲ್ಲಿ ನ.2ರಂದು ಆರ್‌ಎಸ್‌‍ಎಸ್‌‍ ಪಥಸಂಚಲನಕ್ಕೆ ಕಲಬುರಗಿ ಸಂಚಾರಿ ಪೀಠ ಅನುಮತಿ ನೀಡಿರುವುದಕ್ಕೆ ಎಕ್‌್ಸ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಪ್ರಜಾತಂತ್ರದ ಹಕ್ಕು ಕಸಿಯಲು ಹೊರಟ ಕಾಂಗ್ರೆಸ್‌‍ ಸರ್ಕಾರಕ್ಕೆ ಉಚ್ಛ ನ್ಯಾಯಾಲಯ ಚಾಟಿ ಬೀಸಿ ಸಂವಿಧಾನದ ಘನತೆಯನ್ನು ಎತ್ತಿ ಹಿಡಿದಿದೆ ಎಂದು ಹೇಳಿದರು.

ಚಿತ್ತಾಪುರದಲ್ಲಿ ಆರ್‌ಎಸ್‌‍ಎಸ್‌‍ ಪಥಸಂಚಲನ ನಿರ್ಬಂಧಿಸಲು ಹೊರಟವರಿಗೆ ಮುಖಭಂಗವಾಗಿದೆ. ನ್ಯಾಯಾಲಯದ ತೀರ್ಪು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರಿ ಆಡಳಿತ ನಡೆಸಲು ಅವಕಾಶವಿಲ್ಲ ಎಂಬ ಸ್ಪಷ್ಟ ಸಂದೇಶ ಸಾರಿದೆಯಲ್ಲದೇ, ದಿನಬೆಳಗಾದರೆ ಸಂವಿಧಾನದ ಬಗ್ಗೆ ಬೊಗಳೆ ಮಾತನಾಡುವವರಿಗೆ ತಕ್ಕ ಪಾಠ ಹೇಳಿದೆ ಎಂದು ತಿರುಗೇಟು ನೀಡಿದ್ದಾರೆ.

ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳಿಗೆ ಕಾನೂನು ಸುವ್ಯವಸ್ಥೆಯ ಷರತ್ತು ವಿಧಿಸಿ ಅನುಮತಿ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ, ಆದರೆ ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಸಿರುಗಟ್ಟಿಸಲು ಹೋದರೆ ದೇಶದ ಸಂವಿಧಾನ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂಬ ಸಂದೇಶ ಇಂದಿನ ತೀರ್ಪಿನ ಮೂಲಕ ರವಾನೆಯಾಗಿದೆ, ರಾಷ್ಟ್ರಭಕ್ತ ಸಂಘಟನೆಗಳನ್ನು ಮೆಟ್ಟಿ ನಿಲ್ಲುವ ಕಾಂಗ್ರೆಸ್‌‍ನ ಕುಟಿಲ ನೀತಿಯು ನ್ಯಾಯಾಲಯದ ತೀರ್ಪಿನಿಂದ ನಿಷ್ಕಿಯಗೊಂಡಂತಾಗಿದೆ ಎಂದು ಹೇಳಿದ್ದಾರೆ.