Thursday, November 6, 2025
Home Blog Page 417

ಶಾಂತಿ ಮಂತ್ರದ ಪೋಸ್ಟ್ : ಕಾಂಗ್ರೆಸ್‌‍ ನಾಯಕರು ಜನರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಆಗ್ರಹ

ಬೆಂಗಳೂರು,ಮೇ 7- ರಾಜ್ಯದ ಕಾಂಗ್ರೆಸ್‌‍ ನಾಯಕರು ತಮ್ಮ ಟ್ವೀಟ್‌ ಸಂಬಂಧ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಕರ್ನಾಟಕ ಕಾಂಗ್ರೆಸ್ಸಿನವರು ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಶಾಂತಿ ಎಂದು ಇವತ್ತು ಟ್ವೀಟ್‌ ಮಾಡಿದ್ದಾರೆ. ಇವರಿಗೆ ನಾಚಿಕೆ ಆಗಬೇಕಾಗಿತ್ತು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಮತ್ತು ರಾಹುಲ್‌ ಗಾಂಧಿಯವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಇಂಥ ಸಂದರ್ಭದಲ್ಲಿ ಕಾಂಗ್ರೆಸ್‌‍ ಪಕ್ಷ ಇಂಥ ಹೇಳಿಕೆ ನೀಡಿದ್ದು, ಶೋಭೆ ತರತಕ್ಕಂಥದ್ದಲ್ಲ ಎಂದು ಆಕ್ಷೇಪಿಸಿದರು.

ರಾಜ್ಯ ಕಾಂಗ್ರೆಸ್‌‍ ನಾಯಕರು ಯಾವ ರೀತಿ ಟ್ವೀಟ್‌ ಮಾಡಿದ್ದಾರೋ ಇದಕ್ಕೆ ಸ್ಪಷ್ಟನೆ ನೀಡಬೇಕು. ಕಾಂಗ್ರೆಸ್ಸಿನವರು ಉಗ್ರರ ಪರವಾಗಿ ಇದ್ದಾರಾ? ಭಾರತದ ಪರವಾಗಿ ಇದ್ದಾರಾ? ಅಥವಾ ಪಾಕಿಸ್ತಾನದ ಪರವಾಗಿದ್ದಾರೋ ಎಂಬುದನ್ನು ಸ್ಪಷ್ಟಪಡಿಸಬೇಕಿದೆ ಎಂದು ಆಗ್ರಹಿಸಿದರು.

ಜನಾಕೋಶ ಯಾತ್ರೆ ತಾತ್ಕಾಲಿಕ ಮುಂದೂಡಿಕೆ :
ಬಿಜೆಪಿ ಕೊನೆಯ ಹಂತದ ಜನಾಕೋಶ ಯಾತ್ರೆಯನ್ನು ಇಂದಿನಿಂದ ಪ್ರಾರಂಭಿಸಿದೆ. ಇವತ್ತು ಕೋಲಾರ, ನಾಳೆ ತುಮಕೂರು, ಚಿತ್ರದುರ್ಗ- ಈ ರೀತಿ ಪ್ರವಾಸ ಘೋಷಿಸ್ದೆಿವು. ಭಾರತ-ಪಾಕಿಸ್ತಾನದ ನಡುವೆ ಒಂದು ರೀತಿ ಯುದ್ಧ ಪ್ರಾರಂಭವಾದ ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯರೂ ಒಂದಾಗಿ ಇರಬೇಕು ಎಂದು ತಿಳಿಸಿದರು. ರಾಜಕೀಯ ಪಕ್ಷಗಳೂ ಒಟ್ಟಾಗಿ, ಒಂದಾಗಿ ದೇಶದ ಜೊತೆ ನಿಲ್ಲಬೇಕು ಎಂದು ಬಿ.ವೈ.ವಿಜಯೇಂದ್ರ ಅವರು ಮನವಿ ಮಾಡಿದರು.

ಈ ಸದುದ್ದೇಶ ಇಟ್ಟುಕೊಂಡಿದ್ದೇವೆ. ನಿಗದಿಯಂತೆ ಕೋಲಾರದಲ್ಲಿ ಇವತ್ತು ಜನಾಕೋಶ ಯಾತ್ರೆ ನಡೆಯಲಿದೆ. ನಾಳೆಯಿಂದ ನಡೆಯಬೇಕಿದ್ದ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಮುಂದೂಡುತ್ತಿದ್ದೇವೆ ಎಂದು ಪ್ರಕಟಿಸಿದರು.

ವಿಶೇಷ ಪೂಜೆ ಸಲ್ಲಿಸಿ ನೈತಿಕ ಸ್ಥೈರ್ಯ ತುಂಬಲು ಮನವಿ :
ಪ್ರತಿಯೊಬ್ಬ ಭಾರತೀಯರೂ ನಮ ಸೈನಿಕರಿಗೆ ಬೆಂಬಲ ನೀಡಬೇಕು. ಬಿಜೆಪಿ ಕಾರ್ಯಕರ್ತರು ಮತ್ತು ರಾಜ್ಯದ ಜನತೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಬೇಕು ಎಂದು ಮನವಿ ಮಾಡಿದರು. ಯೋಧರಿಗೆ ನೈತಿಕ ಸ್ಥೈರ್ಯ ತುಂಬಬೇಕೆಂದು ವಿನಂತಿಸಿದರು.

ಉಗ್ರಗಾಮಿಗಳ ಅಟ್ಟಹಾಸಕ್ಕೆ 26 ಭಾರತೀಯರು ತಮ ಪ್ರಾಣ ಕಳಕೊಂಡಿದ್ದರು. ನಂತರ ಇಡೀ ದೇಶದಲ್ಲಿ ಆಕೋಶ ವ್ಯಕ್ತವಾಗಿತ್ತು. ಪ್ರತೀಕಾರ ತೆಗೆದುಕೊಳ್ಳಬೇಕೆಂದು ಹಾಗೂ ಪಾಕಿಸ್ತಾನ, ಪಾಕ್‌ ಉಗ್ರರಿಗೆ ಬುದ್ಧಿ ಕಲಿಸಬೇಕೆಂದು ಪ್ರತಿಯೊಬ್ಬ ಭಾರತೀಯರೂ ಅಪೇಕ್ಷಿಸಿದ್ದರು. ಉಗ್ರರಿಗೆ ತಕ್ಕ ಶಾಸ್ತಿ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅದಕ್ಕೆ ಪೂರಕವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.

ನಿನ್ನೆ ಮಧ್ಯರಾತ್ರಿ ಪಾಕಿಸ್ತಾನ ಆಕ್ರಮಿತ ಕಾಶೀರದಲ್ಲಿ ಉಗ್ರರ ಅಡಗುತಾಣಗಳ ಮೇಲೆ ಕಾರ್ಯಾಚರಣೆ ನಡೆಸಿದ್ದು, ಪ್ರತಿಯೊಬ್ಬ ಭಾರತೀಯರಲ್ಲಿ ಹೆಮೆ, ಸಂತಸಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಿದರು.

ಉಗ್ರರ ವಿರುದ್ಧ ಸೇನೆಯಿಂದ ‘ಆಪರೇಷನ್‌ ಸಿಂಧೂರ್, ದೇಶದೆಲ್ಲೆಡೆ ಸಂಭ್ರಮಾಚರಣೆ

ನವದೆಹಲಿ,ಮೇ 7– ಜಮು-ಕಾಶೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್‌ 22ರಂದು ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್‌ ಸಿಂಧೂರ್‌ನಿಂದ 100ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಜಮು-ಕಾಶೀರ ಸೇರಿದಂತೆ ದೇಶಾದ್ಯಂತ ಸಂಭ್ರಮಾಚರಣೆ ಜೋರಾಗಿದೆ.

ಆಪರೇಷನ್‌ ಸಿಂಧೂರ್‌ ಮೂಲಕ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದ್ದು, ದೇಶಾದ್ಯಂತ ಸಂಭ್ರಮಾಚರಣೆ ಮುಗಿಲುಮುಟ್ಟಿದೆ. ಜಮು-ಕಾಶೀರದಲ್ಲಿ ವಿಶೇಷವಾಗಿ ದೇಶಪ್ರೇಮಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಪರಿಸ್ಥಿತಿ ಸೂಕ್ಷ್ಮವಾಗಿರುವುದರಿಂದ ಜಮು-ಕಾಶೀರದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮಧ್ಯರಾತ್ರಿ 1.30 ರ ಸುಮಾರಿಗೆ ಪಾಕಿಸ್ತಾನದ ಉಗ್ರರ ಅಡಗುದಾಣಗಳ ಮೇಲೆ ಭಾರತೀಯ ಸೇನೆ ಆಪರೇಷನ್‌ ಸಿಂಧೂರ್‌ ಹೆಸರಿನಲ್ಲಿ ಕ್ಷಿಪಣಿ ದಾಳಿ ಮಾಡಿದೆ. ಪಾಕಿಸ್ತಾನದ 9 ಸ್ಥಳಗಳ ಮೇಲೆ ದಾಳಿ ನಡೆದಿದೆ. ಈ ದಾಳಿಯಲ್ಲಿ ಅನೇಕ ಭಯೋತ್ಪಾದಕರು ಮೃತಪಟ್ಟಿದ್ದಾರೆ. ದಾಳಿಯ ನಂತರ, ಭಾರತೀಯ ಸೇನೆಯು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿ, ಜೈ ಹಿಂದ್‌, ನ್ಯಾಯ ಸಿಕ್ಕಿದೆ ಎಂದು ಉಲ್ಲೇಖಿಸಿದೆ.

ಈ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮೊದಲು, ಸೈನ್ಯವು ದಾಳಿ ಮಾಡಲು ಸಿದ್ಧವಾಗಿದೆ, ಗೆಲ್ಲಲು ತರಬೇತಿ ಪಡೆದಿದೆ ಎಂದು ಪೋಸ್ಟ್‌ ಮಾಡಿತ್ತು.ರಕ್ಷಣಾ ಸಚಿವಾಲಯವು ಈ ದಾಳಿಯ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುವ ಮೂಲಕ ಮಾಹಿತಿ ನೀಡಿದೆ. ಪಾಕಿಸ್ತಾನದ ವಿರುದ್ಧ ತೆಗೆದುಕೊಂಡ ಈ ಕ್ರಮಕ್ಕೆ ಆಪರೇಷನ್‌ ಸಿಂಧೂರ್‌ ಎಂದು ಹೆಸರಿಸಲಾಗಿದೆ.

ನೇಪಾಳಿ ಪ್ರಜೆ ಸೇರಿದಂತೆ 26 ಜನರ ಪ್ರಾಣವನ್ನು ಬಲಿ ಪಡೆದ ಬರ್ಬರ ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ನಿಖರ ಮತ್ತು ಸಂಯಮದ ಪ್ರತಿಕ್ರಿಯೆಯಾಗಿ ಭಾರತ ಆಪರೇಷನ್‌ ಸಿಂಧೂರ್‌ ಪ್ರಾರಂಭಿಸಿದೆ ಎಂದು ರಕ್ಷಣಾ ಸಚಿವಾಲಯ ಪೋಸ್ಟ್‌ ಮಾಡಿದೆ.

ಕಾರ್ಯಾಚರಣೆಯ ವಿವರಗಳನ್ನು ನೀಡಿರುವ ರಕ್ಷಣಾ ಸಚಿವಾಲಯವು, ಗಡಿಯಾಚೆಗಿನ ಭಯೋತ್ಪಾದನಾ ಪೋಷಣೆಯ ಬೇರುಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಜಮು ಮತ್ತು ಕಾಶೀರದಲ್ಲಿನ 9 ಭಯೋತ್ಪಾದಕ ಮೂಲಸೌಕರ್ಯ ತಾಣಗಳನ್ನು ಕೇಂದ್ರೀಕರಿಸಿ ದಾಳಿಗಳನ್ನು ನಡೆಸಲಾಗಿದೆ. ಮುಖ್ಯವಾಗಿ, ಯಾವುದೇ ಪಾಕಿಸ್ತಾನಿ ಸೇನಾ ಸೌಲಭ್ಯದ ಮೇಲೆ ದಾಳಿ ನಡೆದಿಲ್ಲ. ಅನಗತ್ಯ ಪ್ರಚೋದನೆಯನ್ನು ಹಬ್ಬಿಸುವುದು ಬೇಡ. ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡುವ ಭಾರತದ ಸಂಕಲ್ಪವನ್ನು ಈ ಕಾರ್ಯಾಚರಣೆ ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ.

ಆಪರೇಷನ್‌ ಸಿಂಧೂರ್‌ ವೇಳೆ ಭಾರತೀಯ ಸೇನೆಗೆ ಹಾನಿಯಾಗಿಲ್ಲ

ನವದೆಹಲಿ,ಮೇ 7- ಆಪರೇಷನ್‌ ಸಿಂಧೂರ್‌ ದಾಳಿ ನಡೆಸಿದ ಎಲ್ಲಾ ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ. ಭಾರತ ತನ್ನ ದಾಳಿಯಲ್ಲಿ ಆರು ಸ್ಥಳಗಳನ್ನು ಹೊಡೆದುರುಳಿಸಿದೆ. ಇದರಲ್ಲಿ ಹಲವಾರು ಮಂದಿ ಸಾವನಪ್ಪಿದ್ದಾರೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

ಆದರೂ ಭಾರತೀಯ ಸೇನೆಗೆ ಯಾವುದೇ ಹಾನಿಯಾಗಿಲ್ಲ ಎಂಬುದು ಸಮಾಧಾನಕರವಾಗಿದೆ. ಆಪರೇಷನ್‌ ಸಿಂಧೂರ್‌ನಲ್ಲಿ ಭಾಗಿಯಾಗಿರುವ ಎಲ್ಲಾ ವಾಯುಪಡೆ ಪೈಲಟ್‌ಗಳು ಸೇಫ್‌ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

‘ಆಪರೇಷನ್ ಸಿಂಧೂರ್’ ಕುರಿತು ರಾಷ್ಟ್ರಗಳಿಗೆ ಮಾಹಿತಿ ನೀಡಿದ ಭಾರತ

ನವದೆಹಲಿ,ಮೇ 7– ಕೇಂದ್ರ ಸರ್ಕಾರ ಇಂದು ಮುಂಜಾನೆ ಯುಎಸ್‌‍, ರಷ್ಯಾ, ಯುಕೆ ಮತ್ತು ಸೌದಿ ಅರೇಬಿಯಾ ಸೇರಿದಂತೆ ಹಲವಾರು ಪ್ರಮುಖ ದೇಶಗಳನ್ನು ಸಂಪರ್ಕಿಸಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ-ಕಾಶ್ಮೀರದ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ನಡೆಸಿದ ಮಿಲಿಟರಿ ದಾಳಿಯ ಬಗ್ಗೆ ವಿವರಿಸಿದೆ ಎಂದು ಮೂಲಗಳು ತಿಳಿಸಿವೆ.

ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಈ ದಾಳಿಗಳನ್ನು ನಡೆಸಲಾಯಿತು. ಭಾರತ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಲು ಹಿರಿಯ ಭಾರತೀಯ ಅಧಿಕಾರಿಗಳು ಹಲವಾರು ದೇಶಗಳಲ್ಲಿನ ತಮ್ಮ ಸಹವರ್ತಿಗಳೊಂದಿಗೆ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವುಗಳಲ್ಲಿ ಅಮೆರಿಕ, ಬ್ರಿಟನ್‌‍, ಸೌದಿ ಅರೇಬಿಯಾ, ಯುನೈಟೆಡ್‌ ಅರಬ್‌ ಎಮಿರೇಟ್ಸ್ ಮತ್ತು ರಷ್ಯಾ ಸೇರಿವೆ.ಭಾರತ ಮತ್ತು ವಿದೇಶಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಎರಡು ವಾರಗಳ ನಂತರ ಭಾರತ ಈ ಕ್ರಮ ಕೈಗೊಂಡಿದೆ.

25 ಭಾರತೀಯರು ಮತ್ತು ಒಬ್ಬ ನೇಪಾಳಿ ಪ್ರಜೆಯನ್ನು ಹತ್ಯೆ ಮಾಡಿದ ಅನಾಗರಿಕ ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಈ ಕ್ರಮಗಳು ಬಂದಿವೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.ಈ ದಾಳಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂಬ ಬದ್ಧತೆಗೆ ನಾವು ಬದ್ಧರಾಗಿದ್ದೇವೆ ಎಂದು ಅದು ಹೇಳಿದೆ.

ಹಲವು ದೇಶಗಳೊಂದಿಗೆ ಮಾಹಿತಿ ವಿನಿಮಯ
ಭಾರತವು ಇಂದು ನಸುಕಿನ ಜಾವವೇ ಅಮೆರಿಕ, ರಷ್ಯಾ, ಯುಕೆ ಮತ್ತು ಸೌದಿ ಅರೇಬಿಯಾ ಸೇರಿದಂತೆ ಹಲವು ಪ್ರಮುಖ ದೇಶಗಳನ್ನು ಸಂಪರ್ಕಿಸಿ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶೀರದಲ್ಲಿನ ಒಂಬತ್ತು ಭಯೋತ್ಪಾದಕ ಸ್ಥಳಗಳ ಮೇಲೆ ನಡೆಸಿದ ಸೇನೆಯ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಕುರಿತಂತೆ ವಿವರಿಸಿದೆ ಎಂದು ಮೂಲಗಳು ತಿಳಿಸಿವೆ.

ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಈ ದಾಳಿಗಳನ್ನು ನಡೆಸಲಾಗಿದೆ. ಭಾರತ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಲು ಹಿರಿಯ ಭಾರತೀಯ ಅಧಿಕಾರಿಗಳು ಹಲವಾರು ದೇಶಗಳಲ್ಲಿನ ತಮ ಸಹವರ್ತಿಗಳೊಂದಿಗೆ ಮಾತನಾಡಿದ್ದಾರೆ.

ಎಲ್‌‍ಒಸಿ ಉದ್ದಕ್ಕೂ ಪಾಕ್‌ ಅಪ್ರಚೋದಿತ ದಾಳಿಗೆ 7 ನಾಗರಿಕರು ಬಲಿ

ಶ್ರೀನಗರ, ಮೇ 7- ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‌‍ಒಸಿ) ಉದ್ದಕ್ಕೂ ಪಾಕಿಸ್ತಾನ ಸೇನೆಯು ಫಿರಂಗಿ ಮತ್ತು ಮೋರ್ಟಾರ್‌ ಶೆಲ್‌ ದಾಳಿಯಿಂದ ಮಹಿಳೆ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 38 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಭಾರತ ಕ್ಷಿಪಣಿ ದಾಳಿ ನಡೆಸಿದ ನಂತರ ಪಾಕಿಸ್ತಾನ ಪಡೆಗಳ ಕದನ ವಿರಾಮ ಉಲ್ಲಂಘನೆಯ ಬಗ್ಗೆ ಭಾರತೀಯ ಸೇನೆಯು ಶೆಲ್‌ ದಾಳಿಗೆ ಸಮಾನ ಪ್ರಮಾಣದಲ್ಲಿ ಪ್ರತಿಕ್ರಿಯಿಸುತ್ತಿದೆ ಎಂದು ಅವರು ಹೇಳಿದರು.

ಅತಿ ಹೆಚ್ಚು ಹಾನಿಗೊಳಗಾದ ಪೂಂಚ್‌ ಜಿಲ್ಲೆಯಲ್ಲಿ ಎಲ್ಲಾ ಏಳು ಸಾವುಗಳು ವರದಿಯಾಗಿದ್ದು, ಇನ್ನೂ 25 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ 10 ಜನರು ಗಾಯಗೊಂಡಿದ್ದಾರೆ ಮತ್ತು ರಾಜೌರಿ ಜಿಲ್ಲೆಯಲ್ಲಿ ಇತರ ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಆಪರೇಷನ್‌ ಸಿಂಧೂರ್‌’ ಹೆಸರಿಟ್ಟವರು ಯಾರು..?

ನವದೆಹಲಿ, ಮೇ 7- ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ದಾಳಿ ನಡೆಸುವ ಕಾರ್ಯಚರಣೆಗೆ ಅಪರೇಷನ್‌ ಸಿಂಧೂರ್‌ ಎಂದು ಹೆಸರಿಟ್ಟವರು ಬೇರೆ ಯಾರೂ ಅಲ್ಲ ನಮ ದೇಶದ ಪ್ರಧಾನಿ ನರೇಂದ್ರ ಮೋದಿ ಎನ್ನುವುದು ವಿಶೇಷವಾಗಿದೆ.

ಭಾರತೀಯ ನಾರಿಯರ ಕುಂಕುಮ ಅಳಿಸಿದ ಉಗ್ರರ ಹತ್ಯೆಗೆ ಮೋದಿ ಆಪರೇಷನ್‌ ಸಿಂಧೂರ್‌ ಎಂಬ ಪ್ರಚೋದನಕಾರಿ ಪದವನ್ನು ಆಯ್ಕೆ ಮಾಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭಯೋತ್ಪಾದಕರು 26 ನಾಗರಿಕರನ್ನು ಗುಂಡಿಕ್ಕಿ ಕೊಂದರು, ಎಲ್ಲರೂ ಪುರುಷರು ಮತ್ತು ಹೆಚ್ಚಾಗಿ ಪ್ರವಾಸಿಗರು ಮತ್ತು ಹಲವಾರು ಬಲಿಪಶುಗಳ ವಿನಾಶಕ್ಕೊಳಗಾದ ಪತ್ನಿಯರು ದುರಂತದ ಮುಖವಾಗುವುದರೊಂದಿಗೆ, ಆಪರೇಷನ್‌ ಸಿಂಧೂರ್‌ ಎಂಬ ಹೆಸರನ್ನು ಪ್ರತೀಕಾರದ ಅಭ್ಯಾಸಕ್ಕೆ ಸೂಕ್ತವಾದ ಹೆಸರೆಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.

ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದವು, ಇದರಲ್ಲಿ ಜೈಶ್‌-ಎ-ಮೊಹಮ್ಮದ್‌ ಭದ್ರಕೋಟೆಯಾದ ಬಹವಾಲ್ಪುರ ಮತ್ತು ಮುರಿಡ್ಕೆಯಲ್ಲಿರುವ ಲಷ್ಕರ್‌-ಎ-ತೈಬಾದ ನೆಲೆ ಸೇರಿವೆ. 26 ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್‌ ದಾಳಿಯ ಎರಡು ವಾರಗಳ ನಂತರ ಆಪರೇಷನ್‌ ಸಿಂಧೂರ್‌ ಅಡಿಯಲ್ಲಿ ಮಿಲಿಟರಿ ದಾಳಿಗಳನ್ನು ನಡೆಸಲಾಗುತ್ತಿದೆ.

‘ಆಪರೇಷನ್‌ ಸಿಂಧೂರ್‌’ನಲ್ಲಿ ಆಧುನಿಕ ಶಸ್ತ್ರಾಸ್ತ್ರ ಮತ್ತು ಕ್ಷಿಪಣಿ ಬಳಕೆ

ನವದೆಹಲಿ,ಮೇ.7- ಆಪರೇಷನ್‌ ಸಿಂಧೂರ್‌ನಲ್ಲಿ ಭಾರತವು ಅನೇಕ ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಬಳಸಿದೆ. ಭಾರತೀಯ ಸೇನೆಯು ರಫೇಲ್‌ ಜೆಟ್‌ಗಳಲ್ಲಿ ಅಳವಡಿಸಲಾದ ಸ್ಕಾಲ್ಪ್‌‍ ಕ್ರೂಸ್‌‍ ಕ್ಷಿಪಣಿ, ಹ್ಯಾಮರ್‌ ಕ್ಷಿಪಣಿ ಹಾಗೂ ಆತಾಹುತಿ ಡೋನ್‌ಗಳಂಥ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿರುವುದು ಬೆಳಕಿಗೆ ಬಂದಿದೆ.

ಆಪರೇಷನ್‌ ಸಿಂಧೂರ್‌ನಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಸ್ಕಾಲ್ಪ್‌‍ ಕ್ರೂಸ್‌‍ ಕ್ಷಿಪಣಿಯನ್ನು ಬಳಸಿವೆ. ಇದನ್ನು ಯುರೋಪಿಯನ್‌ ರಕ್ಷಣಾ ಕಂಪನಿ ಎಂಬಿಡಿಎ ತಯಾರಿಸಿದೆ. ಇದು ಸುಮಾರು 1,300 ಕಿಲೋಗ್ರಾಂಗಳಷ್ಟು (2,870 ಪೌಂಡ್‌ಗಳು) ತೂಕವಿದ್ದು, ಗಟ್ಟಿಯಾದ ಬಂಕರ್ಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳಂತಹ ಗುರಿಗಳನ್ನು ನಾಶಮಾಡುವ ದೃಷ್ಟಿಯಿಂದ ವಿನ್ಯಾಸಗೊಳಿಸಲಾಗಿದೆ. ಇದರ ವ್ಯಾಪ್ತಿಯು 250 ರಿಂದ 560 ಕಿಲೋಮೀಟರ್‌ ಆಗಿದೆ. ಇದರ ವೇಗ ಗಂಟೆಗೆ ಸುಮಾರು 1000 ಕಿಲೋಮೀರ್ಟ.

ಸ್ಕಾಲ್ಪ್‌‍ ಕ್ಷಿಪಣಿಯು ಜಿಪಿಎಸ್‌‍ ಸೇರಿ ಅತ್ಯಾಧುನಿಕ ನ್ಯಾವಿಗೇಷನ್‌ ವ್ಯವಸ್ಥೆಗಳನ್ನು ಬಳಸಿಕೊಂಡು ಸರಿಯಾದ ಹಾದಿಯಲ್ಲಿ ಚಲಿಸುವಂತೆ ಮಾಡುತ್ತದೆ. ಈ ಕ್ಷಿಪಣಿಯು ಬಾಂಬ್‌ ರಾಯಲ್‌ ಆರ್ಡನೆನ್‌್ಸ ಆಗೆಂಟೆಡ್‌ ಚಾರ್ಜ್‌ನೊಂದಿಗೆ ಸಜ್ಜುಗೊಂಡಿದ್ದು, ಇದು ಬಂಕರ್‌ಗಳು ಮತ್ತು ಬಲವಾದ ಗುರಿಗಳನ್ನು ಸಹ ಭೇದಿಸಬಲ್ಲದು. 2020 ರಲ್ಲಿ ಲಡಾಖ್‌ನಲ್ಲಿನ ಉದ್ವಿಗ್ನತೆಯ ಸಮಯದಲ್ಲಿ, ಚೀನಾದ ಟಿಬೆಟ್‌ ಪ್ರದೇಶದ ಗುರಿಗಳ ಮೇಲೆ ದಾಳಿ ಮಾಡಲು ಸ್ಕಾಲ್ಪ್‌‍ ಹೊಂದಿದ ರಫೇಲ್‌ ಜೆಟ್‌ಗಳನ್ನು ಅಂಬಾಲಾದಲ್ಲಿ ನಿಯೋಜಿಸಲಾಗಿತ್ತು.

ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಗೆ ಹ್ಯಾಮರ್‌ ಕ್ಷಿಪಣಿಯನ್ನೂ (ಹೈಲಿ ಅಗೈಲ್‌ ಮಾಡ್ಯುಲರ್‌ ಮ್ಯುನಿಷನ್‌ ಎಕ್ಸ್ಟೆಂಡೆಡ್‌ ರೇಂಜ್‌) ಬಳಸಲಾಗಿತ್ತು. ಇದನ್ನು ಫ್ರಾನ್‌್ಸನ ರಕ್ಷಣಾ ಕಂಪನಿ ಸಾಫ್ರಾನ್‌ ತಯಾರಿಸಿದೆ. ಇದು ಮಧ್ಯಮ ವ್ಯಾಪ್ತಿಯ ಕ್ಷಿಪಣಿಯಾಗಿದೆ. ಈ ಕ್ಷಿಪಣಿಯನ್ನು ಆಕಾಶದಿಂದ ನೆಲದ ಗುರಿಯತ್ತ ಹಾರಿಸಬಹುದಾಗಿದೆ. 2020 ರಲ್ಲಿ ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ಸಮಯದಲ್ಲಿ ಭಾರತವು ರಫೇಲ್‌ ಜೆಟ್‌ಗಳಿಗಾಗಿ ಈ ಶಸಾ್ತ್ರಸ್ತ್ರವನ್ನು ಖರೀದಿಸಿತ್ತು.

ಈ ಕ್ಷಿಪಣಿ 20 ರಿಂದ 70 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸಬಲ್ಲದು. ಕ್ಷಿಪಣಿಯ ವ್ಯಾಪ್ತಿಯು ಹೆಚ್ಚಾಗಿ ಅದರ ಉಡಾವಣೆ ಮತ್ತು ಗುರಿಯನ್ನು ಅವಲಂಬಿಸಿರುತ್ತದೆ. ಈ ಕ್ಷಿಪಣಿ ವಿವಿಧ ಗಾತ್ರಗಳು ಮತ್ತು ತೂಕಗಳಲ್ಲಿ ಲಭ್ಯವಿದೆ. ಇದು 125 ಕೆಜಿಯಿಂದ 1000 ಕೆಜಿ ವರೆಗೆ ಇರಬಹುದು.

ಹ್ಯಾಮರ್‌ ಕ್ಷಿಪಣಿಯು ಜಿಪಿಎಸ್‌‍ ಅನ್ನು ಹೊಂದಿದ್ದು ನಿಖರವಾಗಿ ದೂರದ ಗುರಿಯನ್ನು ತಲುಪಬಲ್ಲದು. ಈ ಕ್ಷಿಪಣಿಯು ಲೇಸರ್‌ ಗೈಡ್‌ಲೈನ್‌ ಸಹ ಹೊಂದಿದ್ದು, ನಿಖರವಾದ ಗುರಿಯನ್ನು ತಲುಪಲು ಸುಲಭವಾಗುತ್ತದೆ. ಈ ಕ್ಷಿಪಣಿಯು ಎಲೆಕ್ಟ್ರಾನಿಕ್‌ ಜಾಮರ್‌ ಅನ್ನು ಸುಲಭವಾಗಿ ತಡೆದು ಕಡಿಮೆ ಎತ್ತರದಲ್ಲಿ ಮತ್ತು ಪರ್ವತ ಪ್ರದೇಶಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ದಾಳಿ ನಡೆಸಬಲ್ಲದು.

ಕಾಮಿಕೇಜ್‌ ಡೋನ್‌ಗಳ ವಿಶೇಷವೇನು? :
ಆಪರೇಷನ್‌ ಸಿಂಧೂರ್‌ನಲ್ಲಿ ಆತಹತ್ಯಾ ಡೋನ್‌ ಅಥವಾ ಕಾಮಿಕೇಜ್‌ ಡೋನ್‌ಗಳ್ನೂ ಬಳಸಲಾಗಿತ್ತು. ಇವು ಮಾನವರಹಿತ ವೈಮಾನಿಕ ಶಸಾ್ತ್ರಸ್ತ್ರಗಳಾಗಿವೆ. ಇವುಗಳ ವಿಶೇಷತೆಯೆಂದರೆ, ಗುರಿಗಿಂತ ಮೇಲಿರುವ ಆಕಾಶದಲ್ಲಿ ಸುಳಿದಾಡುತ್ತಲೇ ಇದ್ದು, ಆದೇಶ ಬಂದ ಕೂಡಲೇ ಶತ್ರುಗಳ ಅಡಗುತಾಣವನ್ನು ನಾಶಮಾಡುತ್ತವೆ. ಇವುಗಳು ನಿಖರತೆಗೆ ಹೆಸರುವಾಸಿಯಾಗಿವೆ. ಈ ಆತಹತ್ಯಾ ಡೋನ್‌ಗಳ ಗಾತ್ರ, ಪೇಲೋಡ್‌ ಮತ್ತು ಸಿಡಿತಲೆಗಳಲ್ಲಿ ವ್ಯತ್ಯಾಸಗಳಿವೆ.

ಈ ಡೋನ್‌ಗಳು ಏಕ-ಬಳಕೆಯ ಯುದ್ಧ ಸಾಮಗ್ರಿಗಳಾಗಿದ್ದು, ಗುರಿಯ ಮೇಲೆ ಸ್ಫೋಟಗೊಂಡು ಅದನ್ನು ನಾಶಮಾಡುತ್ತವೆ. ಹೀಗಾಗಿ ಆತಹತ್ಯಾ ಡೋನ್‌ಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಮೊದಲು 1980 ರ ದಶಕದಲ್ಲಿ ಬಳಸಲಾಯಿತು. ಆದರೆ 1990 ಮತ್ತು 2000 ರ ದಶಕಗಳಲ್ಲಿ ಅವುಗಳ ಬಳಕೆ ಹೆಚ್ಚಾಯಿತು.

ಜಮು ಮತ್ತು ಕಾಶೀರದ ಅನಂತ್‌ನಾಗ್‌ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನ ಉಗ್ರ ತಾಣಗಳ ವಿರುದ್ಧ ಆಪರೇಷನ್‌ ಸಿಂಧೂರ್‌ ಸೇನಾ ಕಾರ್ಯಾಚರಣೆ ನಡೆಸಿದೆ. ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶೀರದಲ್ಲಿ 9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದೆ.

ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತು ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ

ಬೆಂಗಳೂರು, ಮೇ.7- ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನ ಯಾವುದೇ ಕ್ರಮಗಳನ್ನು ಕೈಗೊಂಡರೂ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಸೇನೆಯ ದಿಟ್ಟ ಕ್ರಮವಾಗಿದೆ. ಇದು ಅನಿವಾರ್ಯವಾಗಿತ್ತು ಎಂದರು. ಪಾಕಿಸ್ತಾನದ ಬೆಂಬಲಿತರು ಮಾಡಿದ್ದನ್ನೆಲ್ಲಾ ಸಹಿಸಲಾಗುವುದಿಲ್ಲ. ಕೇಂದ್ರ ಸರ್ಕಾರ ಮತ್ತು ಸೇನೆಯ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನವೂ ಪ್ರತಿ ದಾಳಿ ಮಾಡಬಹುದು. ಇದಕ್ಕೆ ನಾವು ಸಜ್ಜುಗೊಳ್ಳಬೇಕು. ಇಂತಹ ಅನೇಕ ದಾಳಿಗಳನ್ನು ನಾವು ಮಾಡಿದ್ದೇವೆ. ಪಾಕಿಸ್ತಾನ ಇನ್ನೂ ಬುದ್ದಿ ಕಲಿತಿಲ್ಲ. ಆಪರೇಷನ್ ಸಿಂಧೂರ್ ಯಶಸ್ವಿಯಾಗಲಿ. ಯುದ್ಧ ಆಗಬಾರದು. ಅದರ ಅನಿವಾರ್ಯವಾದರೆ ಸ್ವಾಭಿಮಾನದ ಪ್ರಶ್ನೆ ಎದುರಾದರೆ ಯುದ್ದ ನಡೆಯಬೇಕಾಗುತ್ತದೆ. ಅಮಾಯಕರನ್ನು ಕಗ್ಗೋಲೆ ಮಾಡಿದ್ದಕ್ಕೆ ಇಂತಹ ಕ್ರಮಗಳು ಅನಿವಾರ್ಯ ಎಂದು ಹೇಳಿದರು.

ಭಾರತ ನಡೆಸಿದ ದಾಳಿಯಲ್ಲಿ ಉಗ್ರ ಮಸೂದ್ ಅಜರ್ ಕುಟುಂಬದ 10 ಸದಸ್ಯರು ಮತ್ತು ನಾಲ್ವರು ಸಹಾಯಕರು ಫಿನಿಷ್

ನವದೆಹಲಿ,ಮೇ 7- ಪಾಕಿಸ್ತಾನದ ಬಹವಾಲ್ಟುರದಲ್ಲಿ ಭಾರತ ನಡೆಸಿದ ದಾಳಿಯಲ್ಲಿ ಮೋಸ್ಟ್ ವಾಂಟೆಂಡ್ ಉಗ್ರ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ತನ್ನ ಕುಟುಂಬದ 10 ಸದಸ್ಯರು ಮತ್ತು ನಾಲ್ವರು ಸಹಾಯಕರು ಸಾವನ್ನಪ್ಪಿದ್ದಾರೆ.

ಕೊಲ್ಲಲ್ಪಟ್ಟವರಲ್ಲಿ ಅಜರ್‌ನ ಅಕ್ಕ ಮತ್ತು ಆಕೆಯ ಪತಿ, ಆತನ ಸೋದರಳಿಯ ಮತ್ತು ಪತ್ನಿ, ಮತ್ತೊಬ್ಬ ಸೊಸೆ ಮತ್ತು ಆತನ ಕುಟುಂಬದ ಐವರು ಮಕ್ಕಳು ಸೇರಿದ್ದಾರೆ. ಜೊತೆಗೆ ದಾಳಿಯಲ್ಲಿ ಆಜರ್ ಮತ್ತು ಆತನ ತಾಯಿಯ ಆಪ್ತ ಸಹಾಯಕ ಮತ್ತು ಇತರ ಇಬ್ಬರು ಆಪ್ತರು ಸಾವನ್ನಪ್ಪಿದ್ದಾರೆ.

ವಿಶ್ವಸಂಸ್ಥೆಯಿಂದ ಗೊತ್ತುಪಡಿಸಿದ ಭಯೋತ್ಪಾದಕನ ಸೋದರ ಮಾವ ಕೂಡ ದಾಳಿಯಲ್ಲಿ ಸಾವನ್ನಪ್ಪಿದ ಕುಟುಂಬ ಸದಸ್ಯರಲ್ಲಿ ಸೇರಿದ್ದಾರೆ. ಪಾಕಿಸ್ತಾನದ ಮಾಧ್ಯಮಗಳು ಅವರ ಮನೆಯಲ್ಲಿ 14 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದ್ದವು. ಅವರ ಅಂತ್ಯಕ್ರಿಯೆ ಪಾಕಿಸ್ತಾನದ ಪಂಜಾಬ್‌ ಬಹವಾಲ್ಟುರದಲ್ಲಿ ನಡೆಯಲಿದೆ.

ಭಾರತೀಯ ದಾಳಿಗಳಲ್ಲಿ ಅವನ ಕುಟುಂಬ ಸದಸ್ಯರನ್ನು ಕೊಲ್ಲಲಾಗಿದೆ ಎಂಬ ವರದಿಗಳು ಹೊರಹೊಮ್ಮುತ್ತಿದ್ದಂತೆ, ಭಾರತಕ್ಕೆ ಬೇಕಾಗಿರುವ ಭಯೋತ್ಪಾದಕರಲ್ಲಿ ಒಬ್ಬನಾದ ಅಜರ್ ಕೂಡ ಸತ್ತಿದ್ದಾನೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

2001 ರ ನವದೆಹಲಿಯ ಸಂಸತ್ತಿನ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಮಸೂದ್ ಅಜರ್ ಹಲವಾರು ತಿಂಗಳುಗಳಿಂದ ಸಾರ್ವಜನಿಕ ದೃಷ್ಟಿಯಿಂದ ಕಾಣೆಯಾಗಿದ್ದನು ಮತ್ತು 2024 ರ ಅಂತ್ಯದ ವೇಳೆಗೆ ಬಹಾವಲ್ಲುರದಲ್ಲಿ ಮತ್ತೆ ಕಾಣಿಸಿಕೊಂಡಿದ್ದ. ಭಾರತೀಯ ಗುಪ್ತಚರ ಇಲಾಖೆಯು ಅವನ ಚಲನವಲನಗಳ ಮೇಲೆ ನಿಗಾ ಇಟ್ಟಿತ್ತು. ಇತ್ತೀಚಿನ ಉಪಗ್ರಹ ಚಿತ್ರಣ ಮತ್ತು ಮಾನವ ಗುಪ್ತಚರ ಮಾಹಿತಿಯ ಪ್ರಕಾರ, ಗೋಡೆಯ ಸಂಕೀರ್ಣದೊಳಗಿನಿಂದಲೇ ಅವನು ಭಯೋತ್ಪಾದಕ ಚಟುವಟಿಕೆಗಳ ಮೇಲೆ ಮತ್ತೆ ಹಿಡಿತ ಸಾಧಿಸಿದ್ದಾನೆ ಎಂದು ತಿಳಿದುಬಂದಿದೆ.

ಪಿಒಕೆಯ ಕೋಟಿಯಲ್ಲಿ ಲಷ್ಕರ್ ಧಾರ್ಮಿಕ ಪ್ರಚಾರಕ ಖಾರಿ ಮೊಹಮ್ಮದ್ ಇಕ್ವಾಲ್ ಕೂಡ ಕೊಲ್ಲಲ್ಪಟ್ಟಿದ್ದಾರೆ. ಬಹವಾಲ್ಟು ಪಾಕಿಸ್ತಾನದ 12ನೇ ಅತಿದೊಡ್ಡ ನಗರವಾಗಿದ್ದು, ಲಾಹೋರ್‌ನಿಂದ 400 ಕಿ.ಮೀ ದೂರದಲ್ಲಿದೆ. ಮಸೀದಿಯನ್ನು ಹೊಂದಿರುವ ಸುಭಾನ್ ಅಲ್ಲಾ ಶಿಬಿರವು. ಇಂಡಿಯಾ ಟುಡೇ ಪ್ರತ್ಯೇಕವಾಗಿ ಪ್ರವೇಶಿಸಿದ ದೃಶ್ಯಗಳು ತೋರಿಸಿದಂತೆ ಅವಶೇಷಗಳಾಗಿ ಮಾರ್ಪಟ್ಟಿದೆ. ಸುಭಾನ್ ಅಲ್ಲಾ ಶಿಬಿರದೊಳಗಿನ ಮಸೀದಿಯಲ್ಲಿ ಎಲ್ಲೆಡೆ ರಂಧ್ರಗಳು, ಭಗ್ನಾವಶೇಷಗಳು ಉಳಿದಿವೆ.

18 ಎಕರೆ ಪ್ರದೇಶದಲ್ಲಿ ಹರಡಿರುವ ಈ ಶಿಬಿರವನ್ನು ಉಸ್ಮಾನ್-ಒ-ಅಲಿ ಕ್ಯಾಂಪಸ್ ಎಂದೂ ಕರೆಯುತ್ತಾರೆ, ಇದು ಚೆಂಎಂನ ನೇಮಕಾತಿ, ನಿಧಿಸಂಗ್ರಹಣೆ ಮತ್ತು ಬೋಧನೆಗಾಗಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.

ಈ ದಾಳಿಗಳು ಜೆಇಎಂನ ಮತ್ತೊಂದು ಭದ್ರ ಕೋಟೆಯಾದ ಮುರಿಡೈಯಲ್ಲಿರುವ ಮಸೀದ್ ವಾ ಮರ್ಕಚ್ ಶೈಲಾ ಮಸೀದಿಯ ಮೇಲೂ ಪರಿಣಾಮ ಬೀರಿವೆ. ಭಾರತೀಯ ದಾಳಿಯಲ್ಲಿ ಬಹಾವಬ್ದುರ್ ಮತ್ತು ಮುರಿಡೈಯಲ್ಲಿ ತಲಾ 30 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.

ಇತರ ಸ್ಥಳಗಳಲ್ಲಿ ಸಾವನ್ನಪ್ಪಿದ ಭಯೋತ್ಪಾದಕರ ಸಂಖ್ಯೆಯನ್ನು ಅಧಿಕಾರಿಗಳು ಇನ್ನೂ ದೃಢಪಡಿಸುತ್ತಿದ್ದರೆ, 70 ರಿಂದ 80 ರ ನಡುವೆ ನಿಷ್ಕ್ರಿಯಗೊಳಿಸಲಾಗಿದೆ ಎಂದು
ವರದಿಯಾಗಿದೆ. ನಾವು ನೆಲಮಟ್ಟದ ಗುಪ್ತಚರ ಮಾಹಿತಿಯನ್ನು ಪರಿಶೀಲಿಸುತ್ತಿದ್ದೇವೆ, ಆದರೆ ದಾಳಿಯ ಸಮಯದಲ್ಲಿ ಆಜರ್ ಸ್ಥಳದಲ್ಲಿದ್ದ ಸಾಧ್ಯತೆಯನ್ನು ಸೂಚಿಸುತ್ತಿದ್ದಾರೆ ಎಂದು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜೈಶ್, ಲಷ್ಕರ್-ಎ-ತೈಲಾ ಮತ್ತು ಹಿಬ್ಬುಲ್ ಮುಜಾಹಿದ್ದೀನ್‌ಗೆ ಸಂಬಂಧಿಸಿದ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಭಾರತ ಹೊಡೆದುರುಳಿಸಿದೆ. ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು 26 ಜನರನ್ನು ಕೊಂದ ಪಹಲ್ಯಾಮ್ ಹತ್ಯಾಕಾಂಡಕ್ಕೆ ಭಾರತ ನಡೆಸಿದ ಪ್ರತಿಕ್ರಿಯೆಯಾಗಿ ಆಪರೇಷನ್ ಸಿಂಧೂರ್‌ನ ಭಾಗವಾಗಿ ಬಹವಾಲ್ಟುರದ ಸುಭಾನ್ ಅಲ್ಲಾ ಸಂಕೀರ್ಣದ ಮೇಲೆ ನಡೆದ ಎರಡು ಮಹತ್ವದ ದಾಳಿಗಳಲ್ಲಿ ಇದು ಒಂದಾಗಿದೆ.

ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಪಂಜಾಬ್ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿವೆ. ಜೈಶ್ ಮತ್ತು ಲಷ್ಕರ್ ಪ್ರಧಾನ ಕಚೇರಿ ಇರುವ ಪಂಜಾಬ್‌ನಲ್ಲಿ 4 ಗುರಿಗಳ ಮೇಲೆ ದಾಳ ನಡೆಸಲಾಗಿದ್ದು, ಪಿಒಕೆಯಲ್ಲಿ ಗುರಿಗಳನ್ನು ನಾಶಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಪರೇಷನ್ ಸಿಂಧೂರ್‌ನ ಎರಡು ಪ್ರಮುಖ ದಾಳಿಗಳಲ್ಲಿ ಒಂದು ಬಹಾವಲುರದ ಸುಭಾನ್ ಅಲ್ಲಾ ಸಂಕೀರ್ಣದ ಮೇಲೆ ನಡೆಯಿತು. ದಾಳಿಗಳು ಪಾಕಿಸ್ತಾನದ ಮಿಲಿಟರಿ ಸ್ಥಾಪನೆಗಳ ಮೇಲೆ ಅಲ್ಲ, ಬದಲಾಗಿ ಭಯೋತ್ಪಾದಕ ಶಿಬಿರಗಳ ಮೇಲೆ ನಡೆದಿವೆ.

ದಾಳಿಯಲ್ಲಿ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಲಾಗಿದೆ ಎಂಬ ಪಾಕಿಸ್ತಾನದ ಹೇಳಿಕೆಗಳನ್ನು ಸತ್ಯವೆಂದು ಪರಿಶೀಲಿಸುತ್ತಾ, ಯಾವುದೇ ನಾಗರಿಕ ಸಾವುನೋವುಗಳ ವರದಿಯಾಗಿಲ್ಲ. ಭಾರತದ ಯಾವುದೇ ಮಿಲಿಟ ಕ್ರಮವನ್ನು ಯುದ್ಧದ ಕೃತ್ಯ ಎಂದು ಈ ಹಿಂದೆ ಕರೆದಿದ್ದ ಪಾಕಿಸ್ತಾನ, ಭಾರತ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದರೆ ದೇಶವು ಪ್ರತಿರೋಧಿಸಲು ಸಿದ್ಧವಾಗಿದೆ ಎಂದು ಹೇಳಿದೆ.

ಪರಿಸ್ಥಿತಿಯನ್ನು ಉಲ್ಬಣಗೊಳಿಸಬಹುದಾದ ಯಾವುದೇ ದುಸ್ಸಾಹಸಗಳನ್ನು ಅನುಸರಿಸದಂತೆ ಭಾರತವು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.ಯಾವುದೇ ಮಿಲಿಟರಿ ಸ್ಥಾಪನೆಯನ್ನು ಗುರಿಯಾಗಿಸಿಕೊಂಡಿಲ್ಲ, ಮತ್ತು ನಾಗರಿಕರ ಸಾವುನೋವುಗಳ ವರದಿಗಳಲ್ಲ. ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಪಾಕಿಸ್ತಾನದ ದುಸ್ಸಾಹಸಕ್ಕೆ ಪ್ರತಿಕ್ರಿಯಿಸಲು ಭಾರತೀಯ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಸಿದ್ಧವಾಗಿವೆ ಎಂದು ಹೇಳಲೇಬೇಕು. ವಿಶ್ವಾಸಾರ್ಹ ಗುಪ್ತಚರ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಅವರ ಪಾಲ್ಗೊಳ್ಳುವಿಕೆಯ ಆಧಾರದ ಮೇಲೆ ಭಯೋತ್ಪಾದಕ ಗುರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ವಿಂಗ್ ಕಮಾಂಡರ್ ವೋಮಿಕಾ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪಾಕ್ ಉಗ್ರರ ಮೇಲೆ ಭಾರತ ದಾಳಿ ಮಾಡುತ್ತಿದ್ದಂತೆ ಗಾಂಧೀಜಿ ಶಾಂತಿ ಮಂತ್ರ ಪಠಿಸಿದ ಕಾಂಗ್ರೆಸ್, ವ್ಯಾಪಕ ಟೀಕೆ ಬೆನ್ನಲ್ಲೇ ಪೋಸ್ಟ್ ಡಿಲೀಟ್

ಬೆಂಗಳೂರು, ಮೇ.7- ಯುದ್ಧಕಾಲದಲ್ಲಿ ಶಾಂತಿಮಂತ್ರ ಪಠಿಸಿದ ಕಾಂಗ್ರೆಸ್ ಪಕ್ಷ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಅದನ್ನು ಸಮರ್ಥಿಸಿಕೊಳ್ಳಲು ನಾಯಕರು ಪರದಾಡಿದ್ದಾರೆ. ಇಂದು ಬೆಳಿಗ್ಗೆ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯನವರಿಗೆ ಈ ಪ್ರಶ್ನೆ ಎದುರಾಗುತ್ತಿದ್ದಂತೆ, ಅವರು ನಿರುಕ್ತರರಾಗಿ ಎದ್ದು ಹೋದರು. ಅವರ ಜೊತೆಯಲ್ಲಿದ್ದ ಸಚಿವ ಭೈರತಿ ಸುರೇಶ್, ಅದನ್ನೆಲ್ಲಾ ಈಗ ಚರ್ಚೆ ಮಾಡುವುದು ಬೇಡ, ಬಿಡಿ ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು.

ಗೃಹಸಚಿವ ಪರಮೇಶ್ವ‌ರ್, ಯಾರು, ಯಾವಾಗ, ಏನೆಂದು ಟ್ವಿಟ್ ಮಾಡಿದ್ದಾರೋ ನನಗೆ ಗೊತ್ತಿಲ್ಲ ಎಂದರು. ಸಚಿವ ದಿನೇಶ್ ಗುಂಡೂರಾವ್, ನಾವು ಶಾಂತಿಪ್ರಿಯರು. ಯುದ್ಧದ ಉದ್ದೇಶವೇ ಶಾಂತಿ ಸ್ಥಾಪನೆಯಾಗಿದೆ. ನಮ್ಮದು ಶಾಂತಿಯುತ ದೇಶ. ಸಂಕಷ್ಟದ ಸಮಯದಲ್ಲಿ ಇಷ್ಟ ಇರಲಿ, ಇಲ್ಲದೇ ಇರಲಿ, ಎಲ್ಲರೂ ಒಟ್ಟಾಗಿರಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿಂದು ಸ್ಪಷ್ಟನೆ ನೀಡಿದ ಕಾಂಗ್ರೆಸ್ ವಕ್ತಾರ ವಿ.ಎಸ್.ಉಗ್ರಪ್ಪ, ಮಹಾತ್ಮಗಾಂಧೀಜಿಯವರು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಅಧ್ಯಕ್ಷತೆ ವಹಿಸಿ 100 ವರ್ಷ ಕಳೆದ ಹಿನ್ನೆಲೆಯಲ್ಲಿ ಹಲವು ದಿನಗಳಿಂದಲೂ ಪ್ರತಿದಿನ ಕಾಂಗ್ರೆಸ್‌ ಎಕ್ಸ್ ಖಾತೆಯಲ್ಲಿ ಒಂದೊಂದು ಸಂದೇಶ ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರ ಹಾಕಲಾಗುತ್ತಿತ್ತು.

ಅದೇ ರೀತಿ ಇಂದು ಬೆಳಿಗ್ಗೆ ಕೂಡ ಒಂದು ಪೋಸ್ಟ್ ಹಾಕಲಾಗಿದೆ. ಅದಕ್ಕೂ ಆಪರೇಷನ್ ಸಿಂಧೂರ್‌ಗೂ ಸಂಬಂಧವಿಲ್ಲ. ಇದರಲ್ಲಿ ಯಾರನ್ನೂ ಅಥವಾ ಯಾವ ಕಾರ್ಯಾಚರಣೆಯನ್ನೂ ಅಗೌರವಿಸುವ ಉದ್ದೇಶ ಇರಲಿಲ್ಲ. ಎಂದಿನಂತೆ ಹಾಕಲಾಗಿರುವ ಸಂದೇಶವನ್ನು ಬೇರೆ ದೃಷ್ಟಿಕೋನದಿಂದ ನೋಡಬಾರದು ಎಂದು ಹೇಳಿದರು.

ಕಾಂಗ್ರೆಸ್‌ನ ಮತ್ತೊಬ್ಬ ಮುಖಂಡ ಪ್ರಕಾಶ್ ರಾಥೋಡ್, ಕಾಂಗ್ರೆಸ್‌ನ ಎಐಸಿಸಿ ಮತ್ತು ಕೆಪಿಸಿಸಿಯಿಂದ ಆಪರೇಷನ್ ಸಿಂಧೂರ್ ಅನ್ನು ಬೆಂಬಲಿಸಿ ಈಗಾಗಲೇ ಹೇಳಿಕೆಗಳನ್ನು ನೀಡಲಾಗಿದೆ. ದೇಶ ರಕ್ಷಣೆಯ ವಿಚಾರದಲ್ಲಿ ಯಾವುದೇ ಒಡಕುಗಳಿಲ್ಲ. ಎಲ್ಲಾ ನಾಯಕರ ಎಕ್ಸ್ ಖಾತೆಗಳಲ್ಲೂ ಸೇನಾ ಕಾರ್ಯಾಚರಣೆಯನ್ನು ಬೆಂಬಲಿಸಿ ಸಂದೇಶಗಳು ರವಾನೆಯಾಗಿವೆ.

ದೇಶದ ಸಾರ್ವಭೌಮತೆಗೆ ನಮ್ಮ ಬೆಂಬಲ ವ್ಯಕ್ತಪಡಿಸಲಾಗಿದೆ ಎಂದು ಹೇಳಿದರು.
ಶಾಂತಿಯೇ ಪ್ರಬಲ ಅಸ್ತ್ರ ಎಂದು ಯುದ್ಧಕಾಲದಲ್ಲಿ ಶಾಂತಿಮಂತ್ರ ಪ್ರಕಟಿಸಿದ ಕಾಂಗ್ರೆಸ್‌ನ ಜಾಲತಾಣದ ಪೋಸ್ಟ್ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ತನ್ನ ಟ್ವಿಟ್ ಅನ್ನು ಡಿಲೀಟ್ ಮಾಡಿತ್ತು.