Thursday, November 6, 2025
Home Blog Page 418

ಗಡಿಯಾಚೆಗಿನ ದಾಳಿ ತಡೆಯಲು ಭಾರತ ಹಕ್ಕು ಚಲಾಯಿಸಿದೆ : ವಿಕ್ರಮ್ ಮಿಸ್ತ್ರಿ

ನವದೆಹಲಿ, ಮೇ.7- ಏ. 22 ರಂದು ನಡೆದ ಪಹಲ್ಲಾಮ್ ಭಯೋತ್ಪಾದಕ ದಾಳಿಯ ನಂತರ ಇಂತಹ ಗಡಿಯಾಚೆಗಿನ ದಾಳಿಗಳಿಗೆ ಪ್ರತಿಕ್ರಿಯಿಸಲು ಮತ್ತು ತಡೆಯಲು ಭಾರತ ತನ್ನ ಹಕ್ಕನ್ನು ಚಲಾಯಿಸಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಹೇಳಿದ್ದಾರೆ.

ಇಂದು ಬೆಳಿಗ್ಗೆ, ನಿಮಗೆ ತಿಳಿದಿರುವಂತೆ, ಭಾರತವು ಅಂತಹ ಹೆಚ್ಚಿನ ಗಡಿಯಾಚೆಗಿನ ದಾಳಿಗಳಿಗೆ ಪ್ರತಿಕ್ರಿಯಿಸಲು ಮತ್ತು ಮುಂಚಿತವಾಗಿ ತಡೆಗಟ್ಟಲು ಮತ್ತು ತಡೆಯಲು ತನ್ನ ಹಕ್ಕನ್ನು ಚಲಾಯಿಸಿತು. ಈ ಕ್ರಿಯೆಗಳನ್ನು ಅಳೆಯಲಾಯಿತು. ಅಸ್ಥಿರ, ಪ್ರಮಾಣಾನುಗುಣ ಮತ್ತು ಜವಾಬ್ದಾರಿಯುತವಾಗಿತ್ತು. ಅವರು ಭಯೋತ್ಪಾದಕ ಮೂಲಸೌಕರ್ಯಗಳನ್ನು ನಿರ್ಮೂಲನೆ ಮಾಡಲು ಮತ್ತು ಭಾರತಕ್ಕೆ ಕಳುಹಿಸುವ ಸಾಧ್ಯತೆಯಿರುವ ಭಯೋತ್ಪಾದಕರನ್ನು ನಿಷ್ಕ್ರಿಯಗೊಳಿಸುವತ್ತ ಗಮನ ಹರಿಸಿದರು ಎಂದು ಮಿಸ್ತ್ರಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.

ಕೋಮು ಸಂಘರ್ಷವನ್ನು ಪ್ರಚೋದಿಸುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂದು ಮಿಸ್ತ್ರಿ ಹೇಳಿದ್ದಾರೆ.ಜಮ್ಮು ಮತ್ತು ಕಾಶ್ಮೀರ ಮತ್ತು ಇತರ ಭಾಗಗಳಲ್ಲಿ ಕೋಮು ಸಂಘರ್ಷವನ್ನು ಪ್ರಚೋದಿಸುವ ಉದ್ದೇಶದಿಂದ ಈ ದಾಳಿಯ ವಿಧಾನವನ್ನು ನಡೆಸಲಾಯಿತು.

ತನ್ನ ಭೂಪ್ರದೇಶದಲ್ಲಿ ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಪಾಕಿಸ್ತಾನ ಸರ್ಕಾರವನ್ನು ಅವರು ಪ್ರಶ್ನಿಸುತ್ತಲೇ ಇದ್ದರು. ದಾಳಿ ನಡೆದು ಹದಿನೈದು ದಿನಗಳು ಕಳೆದರೂ, ಪಾಕಿಸ್ತಾನವು ತನ್ನ ಭೂಪ್ರದೇಶದಲ್ಲಿ ಅಥವಾ ತನ್ನ ನಿಯಂತ್ರಣದಲ್ಲಿರುವ ಭೂಪ್ರದೇಶದಲ್ಲಿ ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಯಾವುದೇ ಗಮನಾರ್ಹ ಕ್ರಮ ಕೈಗೊಂಡಿಲ್ಲ.

ಬದಲಾಗಿ, ಅದು ನಿರಾಕರಣೆ ಮತ್ತು ಆರೋಪಗಳಲ್ಲಿ ತೊಡಗಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಮಾಡ್ಯೂಲ್ಗಳ ಬಗ್ಗೆ ನಮ್ಮ ಗುಪ್ತಚರ ಮೇಲ್ವಿಚಾರಣೆಯು ಭಾರತದ ವಿರುದ್ಧ ಮತ್ತಷ್ಟು ದಾಳಿಗಳು ಬರಲಿವೆ ಎಂದು ಸೂಚಿಸಿದೆ. ಹೀಗಾಗಿ ತಡೆಯುವುದು ಮತ್ತು ಮುಂಚಿತವಾಗಿ ತಡೆಯುವುದು ಎರಡೂ ಅನಿವಾರ್ಯವಾಗಿತ್ತು ಎಂದು ಅವರು ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಆಪರೇಷನ್ ಸಿಂಧೂರ್ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಅಗತ್ಯ ಮುನ್ನೆಚ್ಚರಿಕೆ : ಗೃಹಸಚಿವ ಪರಮೇಶ್ವರ್

ಬೆಂಗಳೂರು, ಮೇ.7- ಆಪರೇಷನ್ ಸಿಂಧೂರ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಗತ್ಯ ಇರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಭದ್ರತೆ ನಿಯೋಜಿಸಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಕ್ಷಣಾ ಸಚಿವಾಲಯ ಕ್ರಮ ತೆಗೆದುಕೊಂಡಿರುವುದಕ್ಕೆ ನಮ್ಮೆಲ್ಲರ ಬೆಂಬಲ ಇದೆ.

ದೇಶದ ಹಿತ ಕಾಪಾಡಲು ಎಲ್ಲರೂ ಒಟ್ಟಾಗಿದ್ದೇವೆ ಎಂದು ಈಗಾಗಲೇ ಹೇಳಿದ್ದೇವೆ. ಇಡೀ ಜನಸಮುದಾಯ ಹಾಗೂ ಸರ್ಕಾರ ಕೇಂದ್ರದ ಜೊತೆಗಿರಲಿದ್ದೇವೆ. ಕೇಂದ್ರ ಗೃಹಸಚಿವಾಲಯ ಈಗಾಗಲೇ ಮಾರ್ಗಸೂಚಿಗಳನ್ನು ಕಳುಹಿಸಿ ನಾಗರಿಕ ರಕ್ಷಣೆಗೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸಲಹೆ ನೀಡಿದೆ ಎಂದರು.

ಎಲ್ಲೆಲ್ಲಿ ವಿದ್ಯುತ್ ಉತ್ಪಾದನೆ, ನೀರು ಸಂಗ್ರಹಣೆ ಅಣೆಕಟ್ಟು, ಬಂದರು ಸೇರಿದಂತೆ ಸೂಕ್ಷ್ಮ ಪ್ರದೇಶಗಳಿಗೆ ಕೈಗಾರಿಕಾ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ. ಗುಪ್ತಚರ ದಳವನ್ನು ಚುರುಕುಗೊಳಿಸಲಾಗಿದ್ದು, ಮಾಹಿತಿ ಸಂಗ್ರಹಕ್ಕೆ ಅಣಿಗೊಳಿಸಲಾಗಿದೆ. ಕೇಂದ್ರದ ತನಿಖಾ ಸಂಸ್ಥೆಗಳ ಜೊತೆ ಕೇಂದ್ರ ಸಂಪರ್ಕದಲ್ಲಿರಲಾಗಿದೆ ಎಂದರು.

ನಾಗರಿಕ ಭದ್ರತಾ ವ್ಯವಸ್ಥೆಯನ್ನು ಡ್ರಿಲ್ ಮಾಡಲು ಸೂಚಿಸಲಾಗಿದೆ. ಹಾಗಾಗಿ ಅಗ್ನಿಶಾಮಕ ದಳಗಳ ಎಲ್ಲಾ ಕೇಂದ್ರ ಕಚೇರಿಗಳಲ್ಲಿ ಇಂದು ಸಂಜೆ 4 ಗಂಟೆಗೆ ಅಣಕು ಪ್ರದರ್ಶನ ನಡೆಸಲಾಗುವುದು. ಕೇಂದ್ರ ಸರ್ಕಾರ ಅಗತ್ಯವಿರುವ ಕಡೆ ತನ್ನದೇ ಆದ ಭದ್ರತೆ ಮಾಡಿಕೊಂಡಿದೆ. ರಾಜ್ಯ ಸರ್ಕಾರದ ಜವಾಬ್ದಾರಿ ಇರುವ ಕಡೆ ನಾವು ಸಾಕಷ್ಟು ಭದ್ರತೆಗಳನ್ನು ತೆಗೆದುಕೊಂಡಿದ್ದೇವೆ. ಅಣುಸ್ಥಾವರ, ಕೈಗಾರಿಕೆಗಳು, ಸರ್ಕಾರಿ ಸಂಸ್ಥೆಗಳು ಎಲ್ಲಾ ಕಡೆ ಸೂಕ್ಷ್ಮದೃಷ್ಟಿಯಿಂದ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದರು.

ಪಾಕಿಸ್ತಾನದ ಪ್ರಜೆಗಳನ್ನು ವಾಪಸ್ ಕಳುಹಿಸಲಾಗಿದೆ. ಎಫ್‌ಆರ್‌ಆರ್ ಜೊತೆ ಸಂಪರ್ಕದಲ್ಲಿದ್ದೇವೆ. ಬಾಕಿ ಇರುವವರನ್ನೂ ಕಳುಹಿಸುತ್ತೇವೆ ಎಂದರು. ನಮ್ಮ ನಡುವಿನ ವ್ಯತ್ಯಾಸಗಳೇನೇ ಇದ್ದರೂ ದೇಶದ ವಿಚಾರ ಬಂದಾಗ ಐಕ್ಯತೆಯನ್ನು ಪ್ರದರ್ಶಿಸುವುದು ಅಗತ್ಯ. ರಕ್ಷಣೆಯಂತಹ ವಿಚಾರಗಳಲ್ಲಿ ಬೇರೆ ಚರ್ಚೆಗಳೇ ಇಲ್ಲ. ಈ ಕಾರಣಕ್ಕೆ ರಾಯಚೂರಿನ ಸಮಾವೇಶವನ್ನು ಕಾಂಗ್ರೆಸ್‌ ರದ್ದುಗೊಳಿಸಿದೆ ಎಂದು ಹೇಳಿದರು.

ಸಿಂಧೂರ ಅಳಿಸಿದ ಪಾಪಿಗಳಿಗೆ ಮಹಿಳಾ ಅಧಿಕಾರಿಗಳ ಮುಂದಾಳತ್ವದಲ್ಲೇ ದಿಟ್ಟ ಉತ್ತರ ಕೊಟ್ಟ ಭಾರತ

ನವದೆಹಲಿ,ಮೇ 7-ಪಹಲ್ಯಾಮ್‌ ನಲ್ಲಿ ನಡೆದ ನರಮೇಧದ ವೇಳೆ 26 ಭಾರತೀಯರ ಸಿಂಧೂರವನ್ನು ಅಳಿಸಿಹಾಕಿ ಅಟ್ಟಹಾಸ ಮೆರೆದಿದ್ದ ಉಗ್ರರ ಸಂಹಾರಕ್ಕೆ ಭಾರತೀಯ ಸೇನೆ ಕಾರ್ಯಾಚರಣೆಗೆ ಬಳಸಿದ್ದು ಇಬ್ಬರು ದಕ್ಷ ಮಹಿಳಾ ಅಧಿಕಾರಿಗಳನ್ನು,ಆಪರೇಷನ್ ಸಿಂಧೂರ್ ಹೆಸರು ಮಾತ್ರವಲ್ಲ ದಾಳಿಗೆ ನಿಯೋಜನೆ ಮಾಡುವಲ್ಲೂ ಚಾಣಕ್ಷತೆ ಮೆರೆದ ಸರಕಾರ ಎರಡು ವಿಭಿನ್ನ ಧರ್ಮಗಳ ಇಬ್ಬರು ಮಹಿಳಾ ಅಧಿಕಾರಿಗಳ ನೇತೃತ್ವದಲ್ಲಿ ದಾಳಿಗೆ ಮಾಸ್ಟರ್ ಪ್ಲಾನ್ ಮಾಡಲಾಗಿತ್ತು.

ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ಪ್ರೋಮಿಕಾ ಸಿಂಗ್ ಕ್ಯಾಪ್ಟನ್ಸಿಯಲ್ಲಿ ದಾಳಿ. ಮಹಿಳಾ ಅಧಿಕಾರಿಗಳ ನೇತೃತ್ವದಲ್ಲೇ ದಾಳಿ ನಡೆಸುವ ಮೂಲಕ ಅತ್ಯುತ್ತಮ ಸಂದೇಶವನ್ನು ಕೇಂದ್ರ ಸರ್ಕಾರ ರವಾನಿಸಿದೆ. ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ಯೋಮಿಕಾ ಸಿಂಗ್ ಅವರು ಭಾರತದ ಕಾರ್ಯಾಚರಣೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಮಹಿಳಾ ಅಧಿಕಾರಿಗಳ ಆಯ್ಕೆಯು ಶಕ್ತಿ ಮತ್ತು ತ್ಯಾಗದ ಗುರುತನ್ನು ಪ್ರತಿಬಿಂಬಿಸುವ ಪ್ರಬಲ ಕ್ರಮವಾಗಿದೆ. ಇದು ಭಾರತದ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆ ಸಿಂಧೂರ್‌ಗೆ ಸಾಂಕೇತಿಕವಾಗಿದೆ.

ಪಹಲ್ಯಾಮ್ ದಾಳಿಯಲ್ಲಿ ಭಯೋತ್ಪಾದಕರು ಪುರುಷರನ್ನು ಕೊಂದ ನಂತರ ವಿಧವೆಯರಾದ ಮಹಿಳೆಯರಿಗೆ ಗೌರವ ಸಲ್ಲಿಸುವ ಮಾರ್ಗವಾಗಿ ವಿಶ್ವಾಸಾರ್ಹ ಗುಪ್ತಚರ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಅವರ ಒಳಗೊಳ್ಳುವಿಕೆಯ ಆಧಾರದ ಮೇಲೆ ಭಯೋತ್ಪಾದನಾ ಗುರಿಗಳನ್ನು ಆಯ್ಕೆ ಮಾಡಲಾಗಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನದಲ್ಲಿ ಯಾವುದೇ ಮಿಲಿಟರಿ ಸ್ಥಾಪನೆಯನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಕರ್ನಲ್ ಸೋಫಿಯಾ ಖುರೇಷಿ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಪಾಕ್ ಬಾಲಬಿಚ್ಚಿದ್ದರೆ ನಾವು ಎಲ್ಲ ರೀತಿಯಲ್ಲೂ ಸಿದ್ಧವಾಗಿದ್ದೇವೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ, ಸಂತ್ರಸ್ತರಿಗೆ ನ್ಯಾಯ ಒದಗಿಸುವ ಸಲುವಾಗಿ ಆಪರೇಷನ್ ಸಿಂಧೂರಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಪಾಕಿಸ್ತಾನ ದಶಕಗಳಿಂದ ಉಗ್ರರಿಗೆ ತರಬೇತಿ ನೀಡಲು ವ್ಯವಸ್ಥಿತ ಕೇಂದ್ರಗಳನ್ನು ನಿರ್ಮಾಣ ಮಾಡಿದೆ. ಉಗ್ರರಿಗೆ ನೇಮಕ ಮಾಡಿ ತರಬೇತಿ ನೀಡುವ ಕಂಪ್ಲೇಸ್‌ಗಳನ್ನು ಪಾಕ್ ನಿರ್ಮಾಣ ಮಾಡಿದ್ದು, ಇಂತಹ 9 ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ. ಪಾಕಿಸ್ತಾನ ಹಾಗೂ ಪಾಕಿಸ್ತಾನ ಅಕ್ರಮಿತ ಕಾಶ್ಮೀರದ 9 ಉಗ್ರರ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ. ಅವುಗಳನ್ನು ಯಶಸ್ವಿಯಾಗಿ ನಾಶಪಡಿಸಲಾಗಿದೆ. ಉಗ್ರರ ತರಬೇತಿ ಕೇಂದ್ರಗಳನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು.

ವಿಂಗ್ ಕಮಾಂಡರ್ ಪ್ರೋಮಿಕಾ ಸಿಂಗ್ ಮಾತನಾಡಿ, ಪಾಕಿಸ್ತಾನದ ಯಾವುದೇ ದುಸ್ಸಾಹಸವನ್ನು ಎದುರಿಸಲು ಭಾರತ ಸಿದ್ಧವಾಗಿದೆ. ಪಾಕಿಸ್ತಾನ ನಾಗರಿಕರಿಗೆ ಯಾವುದೇ ಪರಿಣಾಮ ಉಂಟು ಮಾಡದಂತೆ 9 ಉಗ್ರರ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ. ಪಾಕಿಸ್ತಾನ ಮತ್ತು ಪಿಒಕೆನಲ್ಲಿ 21 ಉಗ್ರ ತರಬೇತಿ ಕೇಂದ್ರಗಳನ್ನು ಗುರುತು ಮಾಡಿದ್ದು, ಭಾರತೀಯ ಸೇವೆಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ನಿರ್ಧಾರ ಮಾಡಿದ ಉಗ್ರರ ಅಡಗು ತಾಣಗಳ ಮೇಲೆ ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿದೆ. ಪಾಕಿಸ್ತಾನ ಸೇನೆಯ ಯಾವುದೇ ಪ್ರದೇಶದ ಮೇಲೆ ದಾಳಿ ಮಾಡಿಲ್ಲ. ಎಲ್‌ಒಸಿಯಿಂದ 30 ಕಿಮೀ ದೊರಲ್ಲಿರುವ ಮುಜಾಫರಾಬಾದ್‌ನ ಸವಾಯಿ ನಾಲಾ ಕ್ಯಾಂಪ್. ಇಲ್ಲಿ ಲಷ್ಕರ್ ಉಗ್ರರ ತರಬೇತಿ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಉಗ್ರರ ನೆಲೆಗಳ ಮೇಲಿನ ದಾಳಿ ಸಂದರ್ಭದಲ್ಲಿ ಭಾರತೀಯ ಸೇನೆಯೂ ಆಧುನಿಕ ಶಸ್ತ್ರಾಸ್ತ್ರಗಳು ಹಾಗೂ ವಾರ್ ಹೆಡ್ ಗಳ ಆಯ್ಕೆಯನ್ನು ಎಚ್ಚರಿಕೆಯಿಂದ ಮಾಡಲಾಗಿದೆ. ಇದು ಭಾರತೀಯ ಸೇನೆಯ ಸಾಮರ್ಥ್ಯವನ್ನು ತೋರಿಸುತ್ತಿದ್ದು, ಟಾರ್ಗೆಟ್‌ಗಳು ಖಚಿತವಾಗಿ ಉಗ್ರರ ಅಡುಗು ತಾಣಗಳು, ನಿಖರ ಕಟ್ಟಡಗಳು ಮತ್ತು ಕಂಬ್ರೇಕ್‌ಗಳಾಗಿತ್ತು. ಭಾರತ ಸೇನೆಯ ಆಪರೇಷನ್ ಹಾಗೂ ಕಾರ್ಯಚರಣೆ ದಕ್ಷತೆಯನ್ನು ಈ ದಾಳಿ ತೋರಿಸುತ್ತಿದೆ. ಭಾರತೀಯ ಸೇನೆಯೂ ಪಾಕಿಸ್ತಾನ ಕೈಗೊಳ್ಳುವ ಯಾವುದೇ ಪ್ರತಿದಾಳಿಗೂ ಸಿದ್ಧವಾಗಿದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ವಿಂಗ್ ಕಮಾಂಡರ್ ಪ್ರೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಯಾರು?
ವಿಂಗ್ ಕಮಾಂಡರ್ ಪ್ರೋಮಿಕಾ ಸಿಂಗ್ ಅವರು ಭಾರತೀಯ ವಾಯುಪಡೆಯಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿದ್ದಾರೆ. ನ್ಯಾಷನಲ್ ಕೆಡೆಟ್ ಕಾಪ್‌ಗೆ ಸೇರಿ ನಂತರ ತನ್ನ ಎಂಜಿನಿಯರಿಂಗ್ ಅಧ್ಯಯನವನ್ನು ಪೂರ್ಣಗೊಳಿಸಿದರು.

ಕರ್ನಲ್ ಸೋಫಿಯಾ ಖುರೇಷಿ ಭಾರತೀಯ ಸೇನೆಯ ಸಿಗ್ನಲ್ಸ್ ಕಾಪ್ಪನ ಅಲಂಕೃತ ಅಧಿಕಾರಿ. ಬಹುರಾಷ್ಟ್ರೀಯ ಮಿಲಿಟರಿ ವ್ಯಾಯಾಮದಲ್ಲಿ ಭಾರತೀಯ ಸೇನೆಯ ತುಕಡಿಯನ್ನು ಮುನ್ನಡೆಸುವ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ – ಇದು ಭಾರತದ ನೆಲದಲ್ಲಿ ಇದುವರೆಗೆ ನಡೆಸಿದ ಅತಿದೊಡ್ಡ ವಿದೇಶಿ ಮಿಲಿಟರಿ ವ್ಯಾಯಾಮಗಳಲ್ಲಿ ಒಂದಾಗಿದೆ.
ಅಧಿಕಾರಿಯಾಗಿದ್ದಾರೆ. T

ರಜೆಯಲ್ಲಿರುವ ಅರೆಸೇನಾಪಡೆಯ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲು ಗೃಹ ಸಚಿವ ಅಮಿತ್ ಶಾ ಆದೇಶ

ನವದೆಹಲಿ,ಮೇ7- ರಜೆಯಲ್ಲಿರುವ ತಮ್ಮ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲು ಅರೆಸೈನಿಕ ಪಡೆಗಳ ಮುಖ್ಯಸ್ಥರಿಗೆ ಗೃಹ ಸಚಿವ ಅಮಿತ್ ಶಾ ಆದೇಶ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆಪರೇಷನ್ ಸಿಂಧೂ‌ರ್ ಮುಗಿದ ನಂತರವೂ ಈ ರೀತಿಯ ಆದೇಶ ಕೊಟ್ಟಿದ್ಯಾಕೆ ಅಮಿತ್ ಶಾ ಮತ್ತೊಂದು ದಾಳಿಗೆ ಸಜ್ಜಾಗುತ್ತಿದೆಯಾ ಭಾರತ ಎಂಬ ಪ್ರಶ್ನೆ ಮೂಡುವಂತೆ ಈ ಮಾಡಿದೆ ಈ ಆದೇಶ.

ಮಹತ್ವದ ಆದೇಶ ಹೊರಡಿಸಿದ ಅಮಿತ್ ಶಾ: ಆಪರೇಷನ್ ಸಿಂಧೂರ್ ಯಶಸ್ವಿಯಾದ ಬೆನ್ನಲ್ಲಿಯೇ ಮಹತ್ವದ ಆದೇಶವನ್ನು ಅಮಿತ್ ಶಾ ಕೊಟ್ಟಿದ್ದಾರೆ. ಆಪರೇಷನ್ ಸಿಂಧೂರ್ ದಾಳಿಗೆ ತತ್ತರಿಸಿದ ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ ಕೊಡಲು ಭಾರತ ಸಜ್ಜಾಗಿದಿಯೇ ಎಂ ಪ್ರಶ್ನೆ ಉದ್ಭವವಾಗಿದೆ.

ಪಾಕಿಸ್ತಾನದ ಉಗ್ರ ನೆಲೆಗಳನ್ನು ಉಡೀಸ್ ಮಾಡಿದ ಆಪರೇಷನ್ ಸಿಂಧೂರ್ ನಡೆದ ಬೆನ್ನಲ್ಲಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹತ್ವದ ಆದೇಶ ಕೊಟ್ಟಿದ್ದಾರೆ. ಆಪರೇಷನ್ ಸಿಂಧೂರ್ ದಾಳಿಯ ನಂತರ ಪಹಲ್ಟಾಮ್‌ನ ಕ್ರೂರ ಪರೇಷನ್ ಸಿಂಧೂರ್ ನಮ್ಮ ಉತ್ತರ ಎಂದ ಅಮಿತ್ ಶಾ ಅವರು ಈಗ ಆಪರೇಷನ್ ಸಿಂಧೂರ್‌ಗಿಂತ ದೊಡ್ಡದಾದ ಅಪರೇಷನ್ ನಡೆಯುಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಆಪರೇಷನ್ ಸಿಂಧೂರ್ ನಡೆದ ನಂತರ ಪ್ರಮುಖ ರಾಜಕಾರಣಿಗಳು, ಭಾರತದ ಸೆಲೆಬ್ರಿಟಿಗಳು ಭಾರತೀಯ ಸೇನೆಗೆ ಗೌರವ ತೋರಿಸಿ ಬೆಂಬಲಿಸಿ ಟ್ವಿಟ್ ಮಾಡುತ್ತಿದ್ದಾರೆ. ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕೂಡಾ ಆಪರೇಷನ್ ಸಿಂಧೂರ್ ಬಗ್ಗೆ ಟ್ವಿಟ್ ಮಾಡಿದ್ದರು.

ಆಪರೇಷನ್ ಸಿಂಧೂರ್ : ಸೇನೆಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು ಮೇ 7 – ಪಹಲ್ಯಾಮ್ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿರುವ ಅಪರೇಷನ್ ಸಿಂಧೂರ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಧಿಯಾಗಿ ರಾಜ್ಯದ ಎಲ್ಲಾ ನಾಯಕರು ಬೆಂಬಲ ವ್ಯಕ್ತ ಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಆಪರೇಷನ್ ಸಿಂಧೂರ್ ನಡೆಸಿರುವ ನಮ್ಮ ಸೇನೆಯ ಅಸೀಮ ಧೈರ್ಯಕ್ಕೆ ಒಂದು ಸಲ್ಯೂಟ್, ಯೋಧರ ದಿಟ್ಟ ನಾಯಕತ್ವದ ಹೋರಾಟ ಭಾರತ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂಬ ಸಂದೇಶ ರವಾನೆ ಮಾಡಿದೆ ಎಂದಿದ್ದಾರೆ.

ಪಹಲ್ಟಾಮ್ ನ ಫೈಶಾಚಿಕ ದಾಳಿ ಅಮಾಯಕರ ಕೊಲೆಗಳಷ್ಟೇ, ಭಾರತದ ಸ್ಪೂರ್ತಿಯ ಕಗ್ಗೋಲೆಯೂ ಹೌದು. ಬಲಿಪಶುಗಳಾದವರ ಕುಟುಂಬದವರಿಗೆ ನ್ಯಾಯ ದೊರಕಿಸುವುದು, ಮಾನವೀಯತೆ ಮತ್ತು ಶಾಂತಿಯ ಮೇಲೆ ನಂಬಿಕೆ ಇಟ್ಟ ಪ್ರತಿಯೊಬ್ಬ ಭಾರತೀಯರಿಗೆ ನ್ಯಾಯ ದೊರಕಿಸುವಲ್ಲಿ ಸೈನಿಕರ ಪರಿಶ್ರಮದ ಪ್ರತಿಜ್ಞೆ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಹೇಳಿದರು.

ದೇಶದ ಸಾರ್ವಭೌಮತ್ವ ಹಾಗೂ ನಮ್ಮ ಸೇನೆಯ ಜೊತೆಗೆ ಕರ್ನಾಟಕ ನಿಂತಿದೆ. ದೇಶ ರಕ್ಷಣೆಯಲ್ಲಿ ಶೌರ್ಯ, ತ್ಯಾಗದ ಯೋಧರ ಬದ್ದತೆ ಹೆಮ್ಮೆ ಪಡುವ ವಿಚಾರ, ಭಯೋತ್ಪಾದನೆಗೆ ನಮ್ಮ ನೆಲದಲ್ಲಿ ಜಾಗ ಇಲ್ಲ, ಭಾರತದ ಉಗ್ರವಾದಕ್ಕೆ ಒಮ್ಮತದಿಂದ ಬಲವಾದ ಪ್ರತಿರೋಧ ವ್ಯಕ್ತ ಪಡಿಸಲಿದೆ ಎಂದು ಹೇಳಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತಮ್ಮ ಸಂದೇಶದಲ್ಲಿ ಆಪರೇಷನ್ ಸಿಂಧೂರ್ ಪಹಲ್ಯಾಮ್ ದಾಳಿಯ ಹೇಡಿತನದ ಭಯೋತ್ಪಾದನಾ ಕೃತ್ಯಕ್ಕೆ ಯೋಗ್ಯವಾದ ಉತ್ತರ. ಸರ್ಕಾರ ಹಾಗೂ ಸೇನೆಯ ಜೊತೆಗೆ ನಾವು ನಿಲ್ಲುತ್ತೇವೆ ಎಂದು ಹೇಳಿದ್ದಾರೆ.

ಸಚಿವ ಹೆಚ್.ಕೆ.ಪಾಟೀಲ್, ಉಗ್ರವಾದವನ್ನು ಬೆಂಬಲಿಸುವ ಪಾಕಿಸ್ತಾನಕ್ಕೆ ಪಾಠ ಕಲಿಸಲು ತೀಕ್ಷ್ಮವಾದ ಏರ್ ಸ್ಟೈಕ್ ಮಾಡಿರುವ ಆಪರೇಷನ್ ಸಿಂಧೂರ್ ಶಾಂತಿ ಮತ್ತು ಭದ್ರತೆ ಪ್ರಬಲ ಸಂದೇಶ ರವಾನೆ ಮಾಡಿದೆ ಎಂದು ಹೇಳಿದ್ದಾರೆ.

ಸಚಿವ ದಿನೇಶ್ ಗುಂಡೂರಾವ್, ಆಪರೇಷನ್ ಸಿಂಧೂರ್ ಭಾರತವನ್ನು ಕಡೆಗಣ್ಣಿನಿಂದ ನೋಡಿದವರಿಗೆ ತಕ್ಕ ಉತ್ತರವಾಗಿದೆ. ಇಡೀ ದೇಶವೇ ಒಗ್ಗಟ್ಟಿನಲ್ಲಿದೆ. ನಮ್ಮ ಸೇನೆಗೆ ಸದಾ ಕೃತಜ್ಞರಾಗಿರುತ್ತೇವೆ ಎಂದು ತಿಳಿಸಿದ್ದಾರೆ. ಸಚಿವರಾದ ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳ್ವರ್ ಸೇರಿದಂತೆ ಎಲ್ಲರೂ ಆಪರೇಷನ್ ಸಿಂಧೂರ್ ಅನ್ನು ಸ್ವಾಗತಿಸಿದ್ದಾರೆ.

ನದಿಯಲ್ಲಿ ಮುಳುಗಿ ಕಾಂತಾರ ಚಾಪ್ಟರ್ -1 ಚಿತ್ರದ ಸಹನಟ ಸಾವು

ಬೆಂಗಳೂರು, ಮೇ 7 – ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ಹೋಗಿದ್ದ ಕಾಂತರಾ-1 ಚಿತ್ರದ ಸಹನಟ ಕಪಿಲ್ ಸುಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ನಿನ್ನೆ ಕಾಂತರಾ-1ರ ಚಿತ್ರೀಕರಣ ಮುಗಿಸಿ ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಸ್ನೇಹಿತರೊಂದಿಗೆ ಕಪಿಲ್ ಈಜಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಸುಳಿಯಲ್ಲಿ ಸಿಲುಕಿದ ಕೇರಳ ಮೂಲದ ನಟ ಕಪಿಲ್ ಅವರನ್ನು ಸ್ನೇಹಿತರು ಹಾಗೂ ಸ್ಥಳೀಯರು ರಕ್ಷಿಸಲು ಪ್ರಯತ್ನಿಸಿದರೂ ಸಾವನ್ನಪ್ಪಿದ್ದಾರೆ. ಕೊಲ್ಲೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಕಾಂತರಾ-1 ಚಿತ್ರಕ್ಕೆ ಆರಂಭದಿಂದಲೂ ಸಂಕಷ್ಟಗಳು ಎದುರಾಗುತ್ತಿದ್ದು, ಈ ಹಿಂದೆ ಚಿತ್ರದ ಕಲಾವಿದರು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿಯಾಗಿ 6 ಜನ ಗಂಭೀರವಾಗಿ ಗಾಯಗೊಂಡಿದ್ದರು.

2022ರಲ್ಲಿ ತೆರೆ ಕಂಡಿದ್ದ ಕಾಂತಾರ ಸಿನಿಮಾಕ್ಕೆ ಫ್ಯಾನ್ ಇಂಡಿಯಾದ ಸ್ಪರ್ಶ ಸಿಕ್ಕಿದ್ದು ದಾಖಲೆ ಮಟ್ಟದಲ್ಲಿ ಸದ್ದು ಮಾಡಿ ಆ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಈಗ ಕಾಂತರಾ ಚಿತ್ರದ ಪ್ರೀಕ್ವೆಲ್ ಆಗಿರುವ ಕಾಂತರಾ-1 ಸಿನಿಮಾವು ಸಾಕಷ್ಟು ಕ್ರೇಜ್ ಹುಟ್ಟು ಹಾಕಿದ್ದು, ಸ್ಯಾಂಡಲ್‌ವುಡ್ ಅಲ್ಲದೆ ಕೇರಳ ಹಾಗೂ ಹಾಲಿವುಡ್‌ನ ಸಾಕಷ್ಟು ಸಹ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

‘ಆಪರೇಷನ್ ಸಿಂಧೂರ್’ಗೆ ರಾಜಕೀಯ ಪಕ್ಷಗಳ ಒಕ್ಕೊರಲ ಬೆಂಬಲ

ಅಹಮದಾಬಾದ್‌, ಮೇ 7: ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಕ್ಷಿಪಣಿ ದಾಳಿಯನ್ನು ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಶ್ಲಾಘಿಸಿದ್ದಾರೆ.ಭಯೋತ್ಪಾದನೆ ವಿರುದ್ಧ ಭಾರತದ ಗೆಲುವು ಭಾರತ್‌ ಮಾತಾ ಕಿ ಜೈ ಎಂದು ಅವರು Xನಲ್ಲಿ ಬರೆದುಕೊಂಡಿದ್ದಾರೆ.

26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ನಡೆಸಿದ ದಾಳಿಯನ್ನು ಗುಜರಾತ್‌ನ ಇತರ ನಾಯಕರು ಜೈ ಹಿಂದ್‌‍ ಮತ್ತು ಭಾರತ್‌ ಮಾತಾ ಕಿ ಜೈ ಎಂಬ ಸಂದೇಶಗಳೊಂದಿಗೆ ಶ್ಲಾಘಿಸಿದ್ದಾರೆ.

140 ಕೋಟಿ ಭಾರತೀಯರ ಬಯಕೆ! ಜೈ ಹಿಂದ್‌ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಿ.ಆರ್‌.ಗೃಹ ಖಾತೆ ರಾಜ್ಯ ಸಚಿವ ಹರ್ಷ್‌ ಸಾಂಘವಿ, ಜೈ ಹಿಂದ್‌‍! ಜೈ ಹಿಂದ್‌ ಕಿಸಾನ್‌ ಎಂದು ಅವರು ಎಕ್‌್ಸ ನಲ್ಲಿ ಧರ್ಮೋ ರಕ್ಷತಿ ರಕ್ಷಿತಾ (ಧರ್ಮವನ್ನು (ನೀತಿ) ರಕ್ಷಿಸುವವರನ್ನು ಧರ್ಮವು ರಕ್ಷಿಸುತ್ತದೆ) ಎಂಬ ಸಂಸ್ಕೃತ ಶ್ಲೋಕವನ್ನು ಸಹ ಪೋಸ್ಟ್‌ ಮಾಡಿದ್ದಾರೆ.

ಗುಜರಾತ್‌ ಕಾಂಗ್ರೆಸ್‌‍ ನಾಯಕರಾದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಜೈರಾಮ್‌ ರಮೇಶ್‌ ಅವರು ಆಪರೇಷನ್‌ ಸಿಂಧೂರ್‌ ಅನ್ನು ಶ್ಲಾಘಿಸಿ ಟ್ವೀಟ್‌ ಮಾಡಿದ್ದಾರೆ.

ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯವನ್ನು ಸಂಪೂರ್ಣವಾಗಿ ನಾಶಪಡಿಸಬೇಕು: ಓವೈಸಿ
ಪಾಕಿಸ್ತಾನದಲ್ಲಿನ ಭಯೋತ್ಪಾದಕ ಮೂಲಸೌಕರ್ಯವನ್ನು ಸಂಪೂರ್ಣವಾಗಿ ನಾಶಪಡಿಸಬೇಕು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ.
ರಕ್ಷಣಾ ಪಡೆಗಳ ಆಪರೇಷನ್‌ ಸಿಂಧೂರ್‌ ಸ್ವಾಗತಿಸಿದ ಪಾಕಿಸ್ತಾನಕ್ಕೆ ಕಠಿಣ ಪಾಠ ಕಲಿಸಬೇಕು. ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯವನ್ನು ಸಂಪೂರ್ಣವಾಗಿ ನಾಶಪಡಿಸಬೇಕು. ಜೈ ಹಿಂದ್‌‍! ಎಂದು ಜಾಲತಾಣದಲ್ಲಿ ಹೇಳಿದ್ದಾರೆ

ಭಾರತದ ದಾಳಿಗೆ ಆರ್‌ಜೆಡಿ ಸಾಥ್‌
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸುತ್ತಿರುವ ದಾಳಿಗೆ ಬಿಹಾರದ ರಾಜಕೀಯ ನಾಯಕರು ಪಕ್ಷಾತೀತವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.1.40 ಕೋಟಿ ಭಾರತೀಯರು ಸೇನೆ ಮತ್ತು ಸರ್ಕಾರದೊಂದಿಗೆ ನಿಂತಿದ್ದೇವೆ ಎಂದು ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಆರ್‌ಜೆಡಿ ಶಾಸಕ ತೇಜಸ್ವಿ ಯಾದವ್‌ ಹೇಳಿದ್ದಾರೆ.

ಬಿಹಾರದ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ವಿಜಯ್‌ ಕುಮಾರ್‌ ಸಿನ್ಹಾ ಅವರು ಎಕ್‌್ಸ ನಲ್ಲಿ ಪೋಸ್ಟ್‌ ಮಾಡಿ, ಪಹಲ್ಗಾಮ್‌ ಭಯೋತ್ಪಾದಕ ದಾಳಿ ನಡೆದ ದಿನವೇ, ಪಾಕಿಸ್ತಾನದ ಭಯೋತ್ಪಾದಕರನ್ನು ಇನ್ನು ಮುಂದೆ ಬಿಡುವುದಿಲ್ಲ ಎಂದು ನಿರ್ಧರಿಸಲಾಯಿತು ಎಂದು ಬರೆದಿದ್ದಾರೆ.

ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಇಂದು ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದವು, ಇದರಲ್ಲಿ ಜೈಶ್‌-ಎ-ಮೊಹಮ್ಮದ್‌ ಭದ್ರಕೋಟೆಯಾದ ಬಹವಾಲ್ಪುರ ಮತ್ತು ಮುರಿಡ್ಕೆಯಲ್ಲಿರುವ ಲಷ್ಕರ್‌-ಎ-ತೈಬಾದ ನೆಲೆ ಸೇರಿವೆ.
26 ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್‌ ದಾಳಿಯ ಎರಡು ವಾರಗಳ ನಂತರ ಆಪರೇಷನ್‌ ಸಿಂಧೂರ್‌ ಅಡಿಯಲ್ಲಿ ಮಿಲಿಟರಿ ದಾಳಿಗಳನ್ನು ನಡೆಸಲಾಗುತ್ತಿದೆ.

ಸರಿಯಾಗಿ ಪಟ್ಟು ನೀಡಿದೆ :
ಹೈದರಾಬಾದ್‌, ಮೇ.7-ಭಾರತೀಯ ಪಡೆಗಳು ಈ ಭಾರಿ ಶತ್ರುಗಳಿಗೆ ಸರಿಯಾಗಿ ಹೊಡೆದಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್‌ ಕುಮಾರ್‌ ಹೇಳಿದ್ದಾರೆ.
ಆಪರೇಷನ್‌ ಸಿಂಧೂರ್‌ ಉಲ್ಲೇಖಿಸಿ, ನಿಖರ, ನಿರ್ದಯ ಮತ್ತು ಕ್ಷಮಿಸದೆ ಭಾರತ ದಾಳಿ ಮಾಡಿದೆ.ನಮ ಪಡೆಗಳು ಬಯೋತ್ಪಾದಕರು ನೋಡಿಕೊಳ್ಳವಂತೆ ದಾಳಿ ಮಾಡುತ್ತವೆ.
ನಮ ಧೈರ್ಯಶಾಲಿಗಳ ಬಗ್ಗೆ ಹೆಮ್ಮೆ! ಮೇರಾ ಭಾರತ್‌ ಮಹಾನ್‌‍ ಎಂದಿದ್ದಾರೆ.
ಕೇಂದ್ರ ಸಚಿವೆ ಮತ್ತು ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ ಕಿಶನ್‌ ರೆಡ್ಡಿ ಪೋಸ್ಟ್‌ನಲ್ಲಿ ಭಾರತ್‌ ಮಾತಾ ಕಿ ಜೈ! ಹರ್‌ ಹರ್‌ ಮಹಾದೇವ್‌ ಜೈ ಹಿಂದ್‌‍ ಎಂದು ಹೇಳಿದ್ದಾರೆ.
ಬಿಆರ್‌ಎಸ್‌‍ ನಾಯಕಿ ಕೆ ಕವಿತಾ ತಮ್ಮ ಪೋಸ್ಟ್‌ನಲ್ಲಿ ಭಾರತ್‌ ಮಾತಾ ಕಿ ಜೈ. ಜೈ ಹಿಂದ್‌‍ ಎಂದು ಹೇಳಿದ್ದಾರೆ.

ನಿಖರ ದಾಳಿ ನಡೆಸಿ ಬಹಾವಲ್ಪುರದ ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರ ಉಡಾಯಿಸಿದ ಭಾರತ

ನವದೆಹಲಿ,ಮೇ.7- ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರದ ಮೇಲೆ ವಾಯುದಾಳಿ ನಡೆಸಿದೆ. ಭಯೋತ್ಪಾದಕರನ್ನು ಪೋಷಿಸಿ ಕಾಶ್ಮೀರಕ್ಕೆ ಬಂದು ಹತ್ಯಾಕಾಂಡ ಸೃಷ್ಟಿಸಿದ್ದು ಇದೇ ಸ್ಥಳ. ಈ ಬಹವಾಲ್ಕು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿದೆ.

ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಪ್ರಧಾನ ಕಚೇರಿ ಇಲ್ಲೇ ಇದೆ. ಇದಲ್ಲದೆ, ಬಹವಾಲ್ಟುರದ ಮಸೀದಿಯನ್ನು ಜೈಶ್ ಭಯೋತ್ಪಾದಕ ತರಬೇತಿ ಕೇಂದ್ರವಾಗಿ ಪರಿವರ್ತಿಸಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಭಾರತ ದಾಳಿ ನಡೆಸಿರುವ ಮುರಿಡೈಯಲ್ಲಿ ಹಫೀಜ್ ಸಯೀದ್ ನೇತೃತ್ವದ ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಯ ಪ್ರಧಾನ ಕಚೇರಿಯಿದ್ದರೆ,ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹಲ್ವಾಪುರದಲ್ಲಿ ಮಸೂದ್ ಅಜರ್ ನಡೆಸುತ್ತಿರುವ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಇದೆ. ಈ ಎರಡು ನೆಲೆಗಳನ್ನು ಭಾರತ ಉಡೀಸ್ ಮಾಡಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಯಾವ್ಯಾವ ಸ್ಥಳಗಳ ಮೇಲೆ ದಾಳಿ ನಡೆಸಿದ್ದೇವೆ ಎಂದು ಭಾರತ ಸ್ಪಷ್ಟಪಡಿಸಿಲ್ಲ. ಆದರೆ, ಪಾಕಿಸ್ತಾನ ಎಲ್ಲೆಲ್ಲಿ ದಾಳಿ ನಡೆದಿದೆ ಎಂದು ಹೇಳಿದೆ.

ಅನೇಕ ಭಯೋತ್ಪಾದಕರು ಇಲ್ಲಿ ತರಬೇತಿ ಪಡೆಯುತ್ತಿದ್ದರು. ಭಾರತ ಪಹಲ್ಯಾಮ್ಗೆ ಸೇಡು ತೀರಿಸಿಕೊಳ್ಳುವುದಾಗಿ ಘೋಷಿಸಿದಾಗ, ಭಯೋತ್ಪಾದಕರನ್ನು ಇಲ್ಲಿಂದ ಕೆಲವು ದಿನಗಳವರೆಗೆ ತೆಗೆದುಹಾಕಲಾಯಿತು ಎಂದು ಹೇಳಲಾಗುತ್ತಿದೆ. ಆದರೆ ನಂತರ ಈ ಭಯೋತ್ಪಾದಕರು ಅಲ್ಲಿಗೆ ಬಂದು ವಾಸಿಸಲು ಪ್ರಾರಂಭಿಸಿದರು. ಭಾರತ ಈ ಸ್ಥಳಕ್ಕೆ ಬರುತ್ತದೆ ಎಂದು ಅವರು ಊಹಿಸಿರಲಿಕ್ಕಿಲ್ಲ.

ಜೈಶ್-ಎ-ಮೊಹಮ್ಮದ್ 2000 ರಲ್ಲಿ ಬಹಾಗಲ್ಪುರದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಸ್ಥಾಪಿಸಿತು. ಈ ಭಯೋತ್ಪಾದಕ ಶಿಬಿರವನ್ನು ಅಲ್-ರೆಹಮತ್ ಟ್ರಸ್ಟ್ ಎಂಬ ಮುಂಭಾಗದ ಸಂಘಟನೆಯ ಮೂಲಕ ನಡೆಸಲಾಗುತ್ತಿತ್ತು. ಅದು ದಾನ ಕಾರ್ಯಗಳನ್ನು ಮಾಡುತ್ತಿತ್ತು ಎಂದು ಹೇಳಲಾಗುತ್ತದೆ, ಆದರೆ ಅದರ ಮುಖ್ಯ ಉದ್ದೇಶ ಭಯೋತ್ಪಾದಕರಿಗೆ ತರಬೇತಿ ನೀಡುವುದಾಗಿತ್ತು.

ಜೈಶ್ ಅನ್ನು ಮಸೂದ್ ಅಜರ್ ಸೃಷ್ಟಿಸಿದನು ಮತ್ತು ಭಯೋತ್ಪಾದಕರನ್ನು ಇಲ್ಲಿಂದ ಕಾಶ್ಮೀರಕ್ಕೆ ನಿರಂತರವಾಗಿ ಕಳುಹಿಸಲಾಗುತ್ತಿತ್ತು. 2019 ರಲ್ಲಿ ಪೇಶಾವರದಲ್ಲಿ ನಡೆದ ಸ್ಫೋಟದ ನಂತರ ಮಸೂದ್ ಅಜರ್ ಕಣ್ಮರೆಯಾದನು. ಆದರೆ 2024 ರಲ್ಲಿ ಮತ್ತೆ ಕಾಣಿಸಿಕೊಂಡನು. ಅಂದಿನಿಂದ ಅವನು ಏನೋ ತಪ್ಪು ಮಾಡುವ ಉದ್ದೇಶದಿಂದ ಬಂದಿದ್ದಾನೆ ಎಂದು ಅಂದಾಜಿಸಲಾಗಿತ್ತು.

ಬಹವಾಲ್ವುರ ಶಿಬಿರವನ್ನು ಜೈಶ್ ಭಯೋತ್ಪಾದಕರ ನೇಮಕಾತಿ ಮತ್ತು ನಿಧಿಸಂಗ್ರಹಕ್ಕಾಗಿ ಬಳಸಿಕೊಂಡಿತ್ತು. ಇಲ್ಲಿ ನೇಮಕಗೊಂಡ ಭಯೋತ್ಪಾದಕರನ್ನು ನಂತರ ಟೈಬರ್ ಪಬ್ದುನ್ಯಾ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದ ವಿವಿಧ ಶಿಬಿರಗಳಿಗೆ ತರಬೇತಿಗಾಗಿ ಕಳುಹಿಸಲಾಯಿತು. 2001 ರ ಭಾರತೀಯ ಸಂಸತ್ತಿನ ದಾಳಿ ಮತ್ತು 2019 ರ ಪುಲ್ವಾಮಾ ದಾಳಿ ಸೇರಿದಂತೆ ಹಲವಾರು ಪ್ರಮುಖ ದಾಳಿಗಳನ್ನು ಈ ಶಿಬಿರದಿಂದ ಯೋಜಿಸಲಾಗಿತ್ತು.

ಡೇಮಿಯನ್ ಸೈಮನ್ (ದಿ ಇಂಟೆಲ್ ಲ್ಯಾಬ್) ವರದಿಯ ಪ್ರಕಾರ, ಪಾಕಿಸ್ತಾನವನ್ನು ಎಫ್‌ಎಟಿಎಫ್‌ನ ಬೂದು ಪಟ್ಟಿಯಿಂದ ತೆಗೆದುಹಾಕಿದ ನಂತರ ಈ ಶಿಬಿರವು ವಿಸ್ತರಿಸುತ್ತಿದೆ.
ಪ್ರಧಾನಿ ಮೋದಿ ಸಭೆ ಮೇಲೆ ಸಭೆ ನಡೆಸಿದ್ದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜನರು ಬಯಸಿದ ರೀತಿಯಲ್ಲೇ ಪ್ರತೀಕಾರ ಎಂದಿದ್ದರು. ಇದರ ಬೆನ್ನಲ್ಲೆ ಆಪರೇಷನ್ ಸಿಂಧೂರ ಮೂಲಕ ಭಾರತ ದಾಳಿ ನಡೆಸಿದೆ.

ಪಾಕಿಸ್ತಾನದ ಜೆಎಫ್-17 ಯುದ್ಧ ವಿಮಾನ ಉಡೀಸ್

ನವದೆಹಲಿ,ಮೇ.7-ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ದಾಳಿಗೆ ಮುಂದಾದ ಪಾಕಿಸ್ತಾನದ ಜೆಎಫ್-17 ಯುದ್ಧ ವಿಮಾನವನ್ನು ಹೊಡೆದು ಉರುಳಿಸಲಾಗಿದೆ.
ಮುಂಜಾನೆ ಚೀನಾ ನಿರ್ಮಿತ ಜೆಎಫ್-17 ಯುದ್ಧ ವಿಮಾನ ಭಾರತದ ಮೇಲೆ ದಾಳಿಗೆ ಬಂದಾಗ ಭಾರತ ಸೇನೆ ಕ್ಷಿಪಣಿ ಮೂಲಕ ಪ್ರತ್ಯೋತ್ತರ ನೀಡಲಾಗಿದೆ ಎಮದು ವರದಿಯಾಗಿದೆ.

ಈ ವಿಚಾರದ ಬಗ್ಗೆ ಇಲ್ಲಿಯವರೆಗೆ ಭಾರತ ಸೇನೆ ಅಧಿಕೃತವಾಗಿ ತಿಳಿಸಿಲ್ಲ. ಪಾಕಿಸ್ತಾನದ ಬಳಿ 150 ಜೆಎಫ್ 17 ವಿಮಾನಗಳಿದ್ದು ಬಹುತೇಕ ನಿರ್ವಹಣೆ ಕೊರತೆ ಇದೆ ಎನ್ನಲಾಗಿದೆ.

‘ಆಪರೇಷನ್ ಸಿಂಧೂರ್’ ಉಗ್ರರಿಗೆ ಭಾರತದ ಮಹಿಳೆಯರು ನೀಡಿದ ಉತ್ತರದಂತೆ : ರಾಮಚಂದ್ರನ್ ಅವರ ಪುತ್ರಿ ಆರತಿ

ಕೊಚ್ಚಿ, ಮೇ 7: ಕಾಶ್ಮೀರದ ಪಹಲ್ಲಾಮ್ ನಲ್ಲಿ ಭಯೋತ್ಪಾದಕರಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟ ಎನ್ ರಾಮಚಂದ್ರನ್ ಅವರ ಪುತ್ರಿ ಆರತಿ ಅವರು ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಕಾರ್ಯಚರಣೆಯನ್ನು ಸ್ವಾಗತಿಸಿದ್ದಾರೆ.

ಆಪರೇಷನ್ ಸಿಂಧೂರ್ ಕಾರ್ಯಚರಣೆ ಸೇನೆ ಮತ್ತು ಸರ್ಕಾರದ ಮೂಲಕ ಭಾರತದ ಮಹಿಳೆಯರು ನೀಡಿದ ಉತ್ತರದಂತೆ ತೋರುತ್ತದೆ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಸೇನೆ ಮತ್ತು ಕೇಂದ್ರ ಸರ್ಕಾರಕ್ಕೆ ಅವರು ನಮನ ಸಲ್ಲಿಸಿದ್ದಾರೆ.

ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಲಾಮ್‌ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾಗ ಆರತಿ ಅವರ ತಂದೆಯನ್ನು ಅವರ ಮುಂದೆಯೇ ಭಯೋತ್ಪಾದಕರು ಹತ್ಯೆ ಮಾಡಿದ್ದರು. ಇಲ್ಲಿನ ಎಡಪಲ್ಲಿಯಲ್ಲಿರುವ ತನ್ನ ಮನೆಯಲ್ಲಿ ಪಿಟಿಐ ವೀಡಿಯೊಗಳೊಂದಿಗೆ ಮಾತನಾಡಿದ ಮಹಿಳೆ, ತಾವು ಅನುಭವಿಸಿದ ನಷ್ಟವನ್ನು ಯಾರೂ ಸರಿದೂಗಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಆದರೆ, ಈ ಸುದ್ದಿಯು ಸರ್ಕಾರ ಮತ್ತು ಇದನ್ನು ಮಾಡಿದ ಸೈನ್ಯದಿಂದ ಒಂದು ರೀತಿಯ ಪರಿಹಾರವಾಗಿದೆ ಎಂದು ಅವರು ಹೇಳಿದರು.