Friday, November 7, 2025
Home Blog Page 420

ಪಾಪಿಸ್ತಾನಕ್ಕೆ ಕಂತ್ರಿ ಬುದ್ದಿಯ ಚೀನಾ ಬೆಂಬಲ

ಇಸ್ಲಾಮಾಬಾದ್‌, ಮೇ 6- ಭಾರತಕ್ಕೆ ಮಿತ್ರ ರಾಷ್ಟ್ರ ರಷ್ಯಾ ಬೆಂಬಲ ವ್ಯಕ್ತಪಡಿಸಿರುವ ಬೆನ್ನಲ್ಲೆ ಚೀನಾ ಪಾಕಿಸ್ತಾನಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದೆ. ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಬಿಗಡಾಯಿಸುವ ಪರಿಸ್ಥಿತಿ ಉಂಟಾಗಿದೆ. ಒಂದು ಕಡೆ ಭಾರತಕ್ಕೆ ರಷ್ಯಾ, ಜಪಾನ್‌ ಬೆಂಬಲಿ ನೀಡಿದರೆ, ಇನ್ನೊಂದು ಕಡೆ ನೆರೆ ರಾಷ್ಟ್ರ ಚೀನಾ ಪಾಕ್‌ಗೆ ಬೆಂಬಲ ನೀಡುವುದಾಗಿ ಹೇಳಿದೆ.

ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗಾಗಿ ನಾವು ಸದಾ ಪಾಕಿಸ್ತಾನ ಬೆಂಬಲಿಸುತ್ತೇವೆ ಎಂದು ಚೀನಾ ಹೇಳಿಕೊಂಡಿದೆ ಎಂದು ಪಾಕ್‌ ಮಾಧ್ಯಮಗಳು ಬರೆದುಕೊಂಡಿವೆ.ಪಾಕ್‌ ಅಧ್ಯಕ್ಷ ಅಲಿ ಜರ್ದಾರಿ ಅವರನ್ನು ಪಾಕಿಸ್ತಾನದಲ್ಲಿನ ಚೀನಾ ರಾಯಭಾರಿ ಜಿಯಾಂಗ್‌ ಜೈಡಾಂಗ್‌ ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಚೀನಾ ಮತ್ತು ಪಾಕಿಸ್ತಾನದ ಸ್ನೇಹ ಶಾಶ್ವತವಾಗಿದೆ.

ಕಾಲ ಕಾಲಕ್ಕೆ ಪರೀಕ್ಷೆಗೆ ಒಳಗಾಗಿದ್ದರೂ ಯಾವಾಗಲೂ ಸವಾಲಿನ ಸಮಯದಲ್ಲಿ ಪರಸ್ಪರ ಬೆಂಬಲಿಸಿದ ಸ್ನೇಹ ನಮ್ಮದಾಗಿದೆ. ಹೀಗಾಗಿ ದಕ್ಷಿಣ ಏಷ್ಯಾ ಶಾಂತಿಗಾಗಿ ಪಾಕ್‌ಗೆ ನಮ್ಮ ಬೆಂಬಲವಿದೆ ಎಂದಿದ್ದಾರೆ ಎಂದು ಜರ್ದಾರಿ ತಿಳಿಸಿದ್ದಾರೆ. ಪಾಕ್‌ ಬೆಂಬಲಿಸುವುದಾಗಿ ತಿಳಿಸಿ ಮಾತನಾಡಿದ ಜರ್ದಾರಿ, ಭಾರತವು ಬೇಜಾವಾಬ್ದಾರಿ ಮತ್ತು ಆಕ್ರಮಣಕಾರಿ ನಡೆಯನ್ನು ಅನುಸರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಅಪರಾಧ ನಿಯಂತ್ರಣಕ್ಕೆ ಬೆಂಗಳೂರಿನಾದ್ಯಂತ 5.35 ಲಕ್ಷ ಸಿಸಿ ಕ್ಯಾಮೆರಾ ಅಳವಡಿಕೆ

ಬೆಂಗಳೂರು, ಮೇ 6- ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ನಗರದ ವಿವಿಧ ಪ್ರದೇಶಗಳಲ್ಲಿ 5,35,815 ಸಿಸಿ ಕ್ಯಾಮೆರಾ ಅಳವಡಿಸುವ ಕಾರ್ಯ ದಲ್ಲಿ ಪೊಲೀಸ್‌‍ ಇಲಾಖೆ ಯಶಸ್ವಿಯಾಗಿದೆ ಎಂದು ನಗರ ಪೊಲೀಸ್‌‍ ಆಯುಕ್ತ ಬಿ.ದಯಾನಂದ್‌ ತಿಳಿಸಿದ್ದಾರೆ.

2024ರ ಜನವರಿಯಲ್ಲಿ ನಗರದಲ್ಲಿ ಕೇವಲ 2.32 ಲಕ್ಷ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆ ಸಂದರ್ಭದಲ್ಲಿ ನಗರದಲ್ಲಿರುವ ಸಿಸಿ ಕ್ಯಾಮೆರಾಗಳ ಸಂಖ್ಯೆಯನ್ನು 5 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿತ್ತು. ಅದರಂತೆ 2025ರ ಏಪ್ರಿಲ್‌ 30ರ ತನಕ 5.35 ಲಕ್ಷ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇದರ ಜೊತೆಗೆ ನಗರದಲ್ಲಿ ಅಳವಡಿಸಲಾಗಿರುವ 5,35,815 ಸಿಸಿ ಕ್ಯಾಮೆರಾಗಳನ್ನು ಜಿಯೋ ಟ್ಯಾಗಿಂಗ್‌ಗೆ ಒಳಪಡಿಸುವಲ್ಲಿಯೂ ನಾವು ಯಶಸ್ವಿಯಾಗಿದ್ದೇವೆ ಎಂದು ಅವರು ತಿಳಿಸಿದರು.
ಬೆಂಗಳೂರು ನಗರ ಶೀಘ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಇಲ್ಲಿಗೆ ಪ್ರತಿನಿತ್ಯ ದೇಶ ವಿದೇಶಗಳ ಹಲವಾರು ಗಣ್ಯರು ಭೇಟಿ ನೀಡುತ್ತಿರುವುದರಿಂದ ನಗರದಲ್ಲಿ ಸಾರ್ವಜನಿಕ ಭದ್ರತೆ ಮತ್ತು ಅಪರಾಧ ನಿಯಂತ್ರಣ ಮಾಡುವ ಉದ್ದೇಶದಿಂದ ಮೋಬೈಲ್‌ ಕಂಪೆನಿಯನ್‌ ಫಾರ್‌ ಕ್ರೈಂ ಮತ್ತು ಕ್ರಿಮಿನಲ್‌ ಟ್ರ್ಯಾಕಿಂಗ್‌ ನೆಟ್‌ವರ್ಕ್‌ ಸಿಸ್ಟಮ್‌(ಎಂಸಿಸಿಟಿಎನ್‌ಎಸ್‌‍) ಯೋಜನೆಯಡಿ ನಗರದಲ್ಲಿರುವ ಎಲ್ಲಾ ಸಿಸಿ ಕ್ಯಾಮೆರಾಗಳನ್ನು ಜಿಯೋ ಟ್ಯಾಗಿಂಗ್‌ ಮಾಡಲು ತೀರ್ಮಾನಿಸಲಾಗಿತ್ತು.

2024 ರಲ್ಲಿ ಕೇವಲ 2.32 ಲಕ್ಷ ಸಿಸಿ ಕ್ಯಾಮೆರಾಗಳನ್ನು ಮಾತ್ರ ಜಿಯೋ ಟ್ಯಾಗಿಂಗ್‌ ಮಾಡಲಾಗಿತ್ತು. ಇದೀಗ ನಾವು ಕೇವಲ ಒಂದು ವರ್ಷದಲ್ಲೇ ಮೂರು ಲಕ್ಷಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಜಿಯೋ ಟ್ಯಾಗಿಂಗ್‌ ಮಾಡಿ ದಾಖಲೆ ಬರೆದಿದ್ದೇವೆ ಎಂದು ಅವರು ಹೇಳಿದರು.
ಜಿಯೋ ಟ್ಯಾಗಿಂಗ್‌ ಆಗಿರುವ ಸಿಸಿ ಕ್ಯಾಮೆರಾಗಳನ್ನು ನಾವು ವಿವಿಧ ಕ್ಷೇತ್ರಗಳು, ವಸತಿ ಪ್ರದೇಶಗಳು, ವ್ಯಾಪಾರ ಕೇಂದ್ರಗಳು, ಮುಖ್ಯರಸ್ತೆಗಳು, ಸಿಗ್ನಲ್‌ಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬ್ಯಾಂಕ್‌ಗಳು ಹಾಗೂ ಇತರ ಜನನಿಬಿಡ ಪ್ರದೇಶಗಳಲ್ಲಿ ಅಳವಡಿಸಿರುವುದರಿಂದ ಯಾವುದೇ ಅಪರಾಧ ಪ್ರಕರಣಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಜಿಯೋ ಟ್ಯಾಗಿಂಗ್‌ ವ್ಯವಸ್ಥೆಯಿಂದ ಪೊಲೀಸರಿಗೆ ಅಪರಾಧ ನಡೆಯುವ ಸ್ಥಳದ ನಿಖರ ಮಾಹಿತಿ ದೊರೆಯುವುದರಿಂದ ಅದಷ್ಟು ಬೇಗ ತನಿಖೆ ನಡೆಸಿ ಆರೋಪಿಗಳಿಗೆ ಹೆಡೆಮುರಿ ಕಟ್ಟಲು ಸಾಧ್ಯವಾಗುತ್ತದೆ ಎಂದು ಆಯುಕ್ತರು ವಿವರಣೆ ನೀಡಿದರು.

ನಗರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳನ್ನು ನಾವು ಎಂಸಿಸಿಟಿಎನ್‌ಎಸ್‌‍ ಯೋಜನೆಯಡಿ ಜಿಯೋ ಟ್ಯಾಗಿಂಗ್‌ ಮಾಡಿರುವುದರಿಂದ ಭವಿಷ್ಯದಲ್ಲಿ ಸಾರ್ಟ್‌ ಪ್ಯಾಟ್ರೋಲಿಂಗ್‌, ಡಿಜಿಟಲ್‌ ನಗರ ಭದ್ರತಾ ವ್ಯವಸ್ಥೆ ಮತ್ತು ವಿಶ್ಲೇಷಣಾ ತನಿಖಾ ಯೋಜನೆಗಳಿಗೂ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ಇದೆಲ್ಲದರ ಜೊತೆ ನಾವು ಪೊಲೀಸ್‌‍ ಇಲಾಖೆಯ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸಿಕೊಂಡು ಸಾರ್ವಜನಿಕ ಸೇವೆಯನ್ನು ಪರಿಣಾಮಕಾರಿಯಾಗಿ ಮುಂದುವರೆಸಿಕೊಂಡು ಹೋಗಲು ಬದ್ಧರಾಗಿರುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ಆಯುಕ್ತರು ಭರವಸೆ ನೀಡಿದರು.

ಬೆಂಗಳೂರು : ರೌಡಿ ಸೇರಿ ನಾಲ್ವರ ಬಂಧನ : 90 ಲಕ್ಷ ರೂ.ಬೆಲೆಯ ಗಾಂಜಾ ಜಪ್ತಿ

ಬೆಂಗಳೂರು,ಮೇ 6-ನಗರ ಪೊಲೀಸರು ರೌಡಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂ ಸಿ 90 ಲಕ್ಷ ರೂ. ಬೆಲೆಯ ಗಾಂಜಾ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಚ್‌.ಎಸ್‌.ಆರ್‌ ಲೇಔಟ್‌ ಪೊಲೀಸ್‌ ಠಾಣೆ ಪೊಲೀಸರು ಆರೋಪಿಯೊಬ್ಬನನ್ನು ಬಂ ಸಿ 60 ಲಕ್ಷ ರೂ.ವೌಲ್ಯದ ಗಾಂಜಾ,ಗೂಡ್‌್ಸ ವಾಹನ ವಶಪಡಿಸಿಕೊಂಡರೆ, ಗೋವಿಂದರಾಜನಗರ ಠಾಣೆ ಪೊಲೀಸರು ರೌಡಿಯನ್ನು ಬಂ ಸಿ 25 ಲಕ್ಷ ವೌಲ್ಯದ ಗಾಂಜಾ ಜಪ್ತಿಪಡಿಸಿಕೊಂಡಿದ್ದು,ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂ ಸಿ 4.20 ಲಕ್ಷ ರೂ. ವೌಲ್ಯದ ಗಾಂಜಾ,ಮೊಬೈಲ್‌ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಹೆಚ್‌.ಎಸ್‌.ಆರ್‌ ಲೇಔಟ್‌ : ಇಲ್ಲಿನ 4ನೇ ಸೆಕ್ಟರ್‌, ಪ್ರೆಢಂ ಇಂಟರ್‌ ನ್ಯಾಷನಲ್‌ ಶಾಲೆ ಹತ್ತಿರದ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಗಾಂಜಾವನ್ನು ಐಷರ್‌ ಗೂಡ್‌್ಸ ಕ್ಯಾರಿಯರ್‌ ವಾಹನದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ದಾವಿಸಿ ಆರೋಪಿಯನ್ನು ಗಾಂಜಾ ಸಮೇತ ಬಂ ಸಿದ್ದಾರೆ.

ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ, ಓಡಿಸ್ಸಾ ರಾಜ್ಯದಿಂದ ಕಡಿಮೆ ಬೆಲೆಗೆ ಗಾಂಜಾವನ್ನು ಖರೀದಿಸಿ, ನಂತರ ನಗರಕ್ಕೆ ತಂದು ಸಾಪ್‌್ಟವೇರ್‌ ಉದ್ಯೋಗಿಗಳಿಗೆ ಹಾಗೂ ಕಾಲೇಜ್‌ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ, ಹೆಚ್ಚಿನ ಲಾಭ ಗಳಿಸುತ್ತಿದದ್ದು ಗೊತ್ತಾಗಿದೆ.
ಆರೋಪಿಯಿಂದ 60 ಲಕ್ಷ ರೂ. ವೌಲ್ಯದ ಮೊಬೈಲ್‌ ಫೋನ್‌, ಕೃತ್ಯಕ್ಕೆ ಬಳಸಿದ ಐಷರ್‌ ಗೂಡ್‌್ಸ ಕ್ಯಾರಿಯರ್‌ ವಾಹನ ಮತ್ತು 62 ಕೆ.ಜಿ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್‌ ಹರೀಶ್‌ ಕುಮಾರ್‌ ಹಾಗೂ ಸಿಬ್ಬಂದಿಗಳ ತಂಡ ಯಶಸ್ವಿಯಾಗಿದೆ.

ರೌಡಿ ಬಂಧನ: ನಿಷೇದಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ರೌಡಿಯೊಬ್ಬನನ್ನು ಗೋಂದರಾಜ ನಗರ ಠಾಣೆ ಪೊಲೀಸರು ಬಂ ಸಿ 25 ಲಕ್ಷ ರೂ. ಬೆಲೆಯ 43 ಕೆ.ಜಿ 80 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಪಟ್ಟೇಗಾರ್‌ ಪಾಳ್ಯದ ದೊಡ್ಡ ಮೋರಿಯ ಬಳಿ ವ್ಯಕ್ತಿಯೊಬ್ಬ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಗಾಂಜಾ ವಶಪಡಿಸಿಕೊಂಡಿದ್ದು, ಈತ ಬನಶಂಕರಿ ಪೊಲೀಸ್‌ ಠಾಣೆಯ ರೌಡಿ ಎಂಬುವುದು ಗೊತ್ತಾಗಿದೆ.

 ಇನ್‌್ಸಪೆಕ್ಟರ್‌  ಸುಬ್ರಮಣಿ ಹಾಗೂ ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.

ಸಿಸಿಬಿ ಕಾರ್ಯಾಚರಣೆ: ಡ್ರಗ್‌್ಸ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಇಬ್ಬರುಆರೋಪಿಗಳನ್ನು ಸಿಸಿಬಿ ಪೊಲೀಸರು ಬಂ ಸಿ 4.20 ಲಕ್ಷ ರೂ. ಬೆಲೆಯ 4 ಕೆ.ಜಿ 185 ಗ್ರಾಂ ಗಾಂಜಾ, 2 ಮೊಬೈಲ್‌ ಫೊನ್‌ಗಳು,ಕೃತ್ಯಕ್ಕೆ ಬಳಸಿದ 1 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಬೈಯ್ಯಪ್ಪನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಜಿ.ಎಂ.ಪಾಳ್ಯದ ವೀರಾಂಜನೇಯಸ್ವಾಮಿ ದೇವಸ್ಥಾನದ ಬಳಿ ಇಬ್ಬರು ದ್ವಿಚಕ್ರ ವಾಹನದಲ್ಲಿ ಗಾಂಜಾವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಇಬ್ಬರನ್ನು ಬಂ ಸಿ ವಿಚಾರಣೆ ನಡೆಸಿದಾಗ ಆಂದ್ರಪ್ರದೇಶದ ಅರಕ್ಕೂ ವ್ಯಾಲಿಯ ಪರಿಚಯಸ್ಥರಿಂದ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿ ಮಾಡಿಕೊಂಡು ನಗರಕ್ಕೆ ತಂದು ಪರಿಚಯಸ್ಥರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ-ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ, ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದಾಗಿ ತಿಳಿಸಿದ್ದಾರೆ.

ಈ ಇಬ್ಬರು ಆರೋಪಿಗಳ ವಿರುದ್ದ ಈ ಹಿಂದೆ ಬೈಯ್ಯಪ್ಪನಹಳ್ಳಿ ಮತ್ತು ಹೆಚ್‌.ಎ.ಎಲ್‌ ಪೊಲೀಸ್‌ ಠಾಣೆಗಳಲ್ಲಿ ಎನ್‌.ಡಿ.ಪಿ.ಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದ್ದು, ತನಿಖೆ ಮುಂದುವರಿಸಿದ್ದಾರೆ.

ಕಾಶ್ಮೀರದ ಬುಡ್ಗಾಮ್‌ ಜಿಲ್ಲೆಯಲ್ಲಿ ಇಬ್ಬರು ಉಗ್ರ ಸಹಚರರ ಸೆರೆ

ಬುಡ್ಗಾಮ್‌‍, ಮೇ 6– ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್‌ ಜಿಲ್ಲೆಯಲ್ಲಿ ನಡೆದ ನಾಕಾ-ತಪಾಸಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕ ಸಹಚರರನ್ನು ಬಂಧಿಸಿದ್ದು, ಭಾರಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಗ್ರೆನೇಡ್‌ಗಳನ್ನು ವಶಪಡಿಸಿಕೊಂಡಿವೆ.

ಬುಡ್ಗಾಮ್‌ನ ಮಾಗಮ್‌ನ ಬುಚಿಪೋರಾ ಕವೂಸಾ ಅರೇಸ್‌‍ನಲ್ಲಿ ನಾಕಾ ತಪಾಸಣೆ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಬಂಧಿತರಿಂದ ಒಂದು ಪಿಸ್ತೂಲ್‌‍, ಒಂದು ಗ್ರೆನೇಡ್‌ ಮತ್ತು 15 ಸಜೀವ ಗುಂಡುಗಳು ಸೇರಿದಂತೆ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರು ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.ಏ. 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ, ಕೇಂದ್ರಾಡಳಿತ ಪ್ರದೇಶದ ಭದ್ರತಾ ಪಡೆಗಳು ಭದ್ರತೆಯನ್ನು ಹೆಚ್ಚಿಸಿವೆ ಮತ್ತು ಪ್ರದೇಶದಾದ್ಯಂತ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.

ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ನಾಳೆ ಮಾಕ್‌ ಡ್ರಿಲ್‌

ಬೆಂಗಳೂರು,ಮೇ6- ಕೇಂದ್ರ ಗೃಹ ಇಲಾಖೆಯ ಸೂಚನೆ ಮೇರೆಗೆ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ನಾಳೆ ಅಣಕು ಪ್ರದರ್ಶನ ನಡೆಯಲಿದೆ. ಬೆಂಗಳೂರು, ರಾಯಚೂರು ಜಿಲ್ಲೆಗಳಲ್ಲಿ ಮಾಕ್‌ ಡ್ರಿಲ್‌ ಮಾಡಲು ನಿರ್ಧಾರ ಮಾಡಲಾಗಿದೆ.

ಈ ಬಗ್ಗೆ ಈಗ ಕೇಂದ್ರ ಅಗ್ನಿಶಾಮಕ ದಳ, ಸಿವಿಲ್‌ ಡಿಫ್ಸೃ್‌ ಅಧಿಕಾರಿಗಳ ಜೊತೆ ಸಭೆ ಮಾಡಲಾಗಿದೆ. ಬೆಂಗಳೂರಿನಲ್ಲಿ ರಕ್ಷಣಾ ಇಲಾಖೆ ಸಂಬಂಧಿಸಿದಂತೆ ಹೆಚ್ಚು ಬೇಸ್‌‍ ಗಳು ಹಾಗೂ ಕಚೇರಿಗಳಿದ್ದು, ಸಂಜೆ 4 ಗಂಟೆ ಮಾಡಲು ನಿರ್ಧಾರ ಮಾಡಲಾಗಿದೆ. ಕೆಎಎ, ಕೆಎಸ್‌‍ಎಸ್‌‍ ಸಿವಿಲ್‌ ಡಿಫ್ಸೃ್‌, ವೈದ್ಯರುಗಳು, ಭಾಗಿಯಾಗಲಿದ್ದಾರೆ. ಪೊಲೀಸ್‌‍ ಠಾಣೆ ಮತ್ತು ಅಗ್ನಿಶಾಮಕ ದಳ ಪೊಲೀಸ್‌‍ ಠಾಣೆಗಳ ಮೇಲೆ ಸೈರನ್‌ ಇರಲಿದೆ. 35 ಕಡೆ ಇದ್ದು, 32 ಕೆಲಸ ಮಾಡುತ್ತಿದೆ.

ಕಳೆದ ತಡರಾತ್ರಿಯೇ ಸಿವಿಲ್‌ ಡಿಫ್ಸೆ್‌ ಕಚೇರಿಗೆ ಮೇಲ್‌ ರವಾನೆ ಆಗಿದ್ದು, ಶತ್ರುಗಳ ದಾಳಿಯಿಂದ ಜನರನ್ನ ಹೇಗೆ ರಕ್ಷಿಸಬೇಕು ಎಂಬುದರ ಬಗ್ಗೆ ಆಯಾ ರಾಜ್ಯಗಳ ಸಿವಿಲ್‌ ಡಿಫ್ಸೆ್‌ ಮುಖ್ಯಸ್ಥರಿಗೆ ಮಾಹಿತಿ, ಸಲಹೆಗಳನ್ನ ಮೇಲಾಧಿಕಾರಿಗಳು ನೀಡಿದ್ದಾರೆ.ಜನರು ಏನ್‌ ಮಾಡಬೇಕು. ಮಾಡಬಾರದು ಎಂಬುದರ ಬಗ್ಗೆ ಕೇಂದ್ರದಿಂದ ಸುತ್ತೋಲೆ ಬರುತ್ತದೆ. ಒಂದು ವಾರದ ಕಾಲ ಅಣುಕು ಪ್ರದರ್ಶನ ನಡೆಯಲಿದೆ.

ಜನರು ಅನಗತ್ಯವಾಗಿ ಆತಂಕಕ್ಕೆ ಒಳಪಡಬೇಕಾದ ಅಗತ್ಯವಿಲ್ಲ ಎಂದು ಅದಿಕಾರಿಗಳು ಮಾಹಿತಿ ನೀಡಿದ್ದಾರೆ. ಏಕೆಂದರೆ ಇದು ಕೇವಲ ತರಬೇತಿ ವ್ಯಾಯಾಮವಾಗಿದೆ. ನಿಜವಾದ ತುರ್ತು ಸಂದರ್ಭದಲ್ಲಿ , ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಿ, ಉದಾಹರಣೆಗೆ, ಮನೆಯ ಒಳಗೆ, ಕಟ್ಟಡದ ಒಳಗೆ, ಅಥವಾ ಸರ್ಕಾರವು ಗೊತ್ತುಪಡಿಸಿದ ಬಂಕರ್‌ಗೆ ತೆರೆದ ಪ್ರದೇಶಗಳಿಂದ ದೂರವಿರಬೇಕು. ಟಿವಿ, ರೇಡಿಯೋ, ಅಥವಾ ಸರ್ಕಾರದ ಅಧಿಕೃತ ಎಚ್ಚರಿಕೆ ಸಂದೇಶಗಳಿಗೆ ಗಮನ ಹರಿಸಬೇಕು. ವದಂತಿಗಳನ್ನು ನಂಬದಿರಿ ಮತ್ತು ಆಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಲಹೆ ನೀಡಿದ್ದಾರೆ.

ವಾಯುದಾಳಿ ಎಚ್ಚರಿಕೆ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುವುದು. ಭಾರತೀಯ ವಾಯುಸೇನೆಯೊಂದಿಗಿನ ಹಾಟ್‌ಲೈನ್‌/ರೇಡಿಯೊ ಸಂಪರ್ಕ ಲಿಂಕ್‌ಗಳ ಕಾರ್ಯಾಚರಣೆ.ನಿಯಂತ್ರಣ ಕೊಠಡಿಗಳು ಮತ್ತು ಶ್ಯಾಡೋ ನಿಯಂತ್ರಣ ಕೊಠಡಿಗಳ ಕಾರ್ಯನಿರ್ವಹಣೆಯನ್ನು ಪರೀಕ್ಷಿಸುವುದು.

ಶತ್ರು ದಾಳಿಯ ಸಂದರ್ಭದಲ್ಲಿ ಸ್ವರಕ್ಷಣೆಗಾಗಿ ನಾಗರಿಕರು, ವಿದ್ಯಾರ್ಥಿಗಳಿಗೆ ನಾಗರಿಕ ರಕ್ಷಣಾ ತರಬೇತಿ. ಕ್ರ್ಯಾಶ್‌ ಬ್ಲ್ಯಾಕೌಟ್‌ ಕ್ರಮಗಳನ್ನು ಒದಗಿಸಬೇಕು. ಪ್ರಮುಖ ಸ್ಥಾವರಗಳು, ಕಟ್ಟಡಗಳನ್ನು ಮರೆಮಾಚುವ ವ್ಯವಸ್ಥೆ. ನಾಗರಿಕ ರಕ್ಷಣಾ ಸೇವೆಗಳ ಸಕ್ರಿಯಗೊಳಿಸುವಿಕೆ ಮತ್ತು ಪ್ರತಿಕ್ರಿಯೆಯನ್ನು ಪರಿಶೀಲಿಸುವುದು, ಇದರಲ್ಲಿ ವಾರ್ಡನ್‌ ಸೇವೆಗಳು, ಅಗ್ನಿಶಾಮಕ, ರಕ್ಷಣಾ ಕಾರ್ಯಾಚರಣೆಗಳು ಮತ್ತು ಡಿಪೋ ನಿರ್ವಹಣೆ ಸೇರಿವೆ.

ಸ್ಥಳಾಂತರ ಯೋಜನೆಗಳ ಸಿದ್ಧತೆ ಮತ್ತು ಅವುಗಳ ಜಾರಿಯನ್ನು ಮೌಲ್ಯಮಾಪನ ಮಾಡುವುದು. ಈ ಅಣುಕು ಅಭ್ಯಾಸವನ್ನು ಗ್ರಾಮ ಮಟ್ಟದವರೆಗೆ ನಡೆಸಲು ಯೋಜಿಸಲಾಗಿದೆ. ಈ ಕಸರತ್ತು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಗರಿಕ ರಕ್ಷಣಾ ಕಾರ್ಯವಿಧಾನಗಳ ಸಿದ್ಧತೆಯನ್ನು ಮೌಲ್ಯಮಾಪನ ಮಾಡಲು ಮತ್ತು ವೃದ್ಧಿಸಲು ಗುರಿಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಗೃಹ ಸಚಿವಾಲಯದ ಆದೇಶವು, ಈ ಕಸರತ್ತಿನಲ್ಲಿ ಜಿಲ್ಲಾ ನಿಯಂತ್ರಕರು, ಸ್ಥಳೀಯಾಡಳಿತ, ನಾಗರಿಕ ರಕ್ಷಣಾ ವಾರ್ಡನ್‌ಗಳು, ಸ್ವಯಂಸೇವಕರು, ಹೋಂ ಗಾರ್ಡ್‌ಗಳು (ಸಕ್ರಿಯ ಮತ್ತು ಮೀಸಲು), ರಾಷ್ಟ್ರೀಯ ಕೆಡೆಟ್‌ ಕಾಪ್‌್ಸ್ರ (ಎನ್‌ಸಿಸಿ), ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌‍ಎಸ್‌‍), ನೆಹರು ಯುವ ಕೇಂದ್ರ ಸಂಘಟನೆ (ಎನ್‌ವೈಕೆಎಸ್‌‍) ಮತ್ತು ಕಾಲೇಜು ಹಾಗೂ ಶಾಲಾ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯನ್ನು ಒಳಗೊಂಡಿರುತ್ತದೆ ಎಂದು ಹೇಳಿದೆ.

ಯುದ್ಧಕ್ಕೆ ಬೆಂಬಲ ಕೇಳಿ ಮುಜುಗರಕ್ಕೀಡಾದ ಪಾಕ್‌ ಮೌಲ್ವಿ

ಇಸ್ಲಾಮಾಬಾದ್‌,ಮೇ6- ಒಂದು ವೇಳೆ ಭಾರತದ ವಿರುದ್ದ ಪಾಕಿಸ್ತಾನ ಯುದ್ದ ಮಾಡಿದರೆ, ನೀವು ನಮ ದೇಶದ ಪರವಾಗಿ ನಿಲ್ಲುತ್ತೀರಾ ಎಂದು ಇಸ್ಲಾಮಾಬಾದ್‌ನ ಲಾಲ್‌ ಮಸೀದಿಯ ವಿವಾದಾತಕ ಧರ್ಮ ಗುರು ಮೌಲಾನಾ ಅಬ್ದುಲ್‌ ಅಜೀಜ್‌ ಘಾಜಿ ಅವರು ಪ್ರೇಕ್ಷಕರನ್ನು ಕೇಳಿದಾಗ ಒಬ್ಬೇ ಒಬ್ಬರೂ ಕೂಡಾ ಕೈ ಎತ್ತದೆ ಮುಜುಗರಕ್ಕೆ ಸಿಲುಕಿಸಿರುವ ಘಟನೆ ನಡೆದಿದೆ. ಸಾಮಾಜಿಕ ಜಾಲ ತಾಣದಲ್ಲಿ ಇದು ಈಗ ಭಾರೀ ವೈರಲ್‌ ಆಗಿದ್ದು, ಪಾಪಿ ಪಾಕಿಸ್ತಾನಕ್ಕೆ ತನ್ನ ನೆಲದಲ್ಲೇ ಬೆಂಬಲ ಇಲ್ಲ ಎಂದು ನೆಟ್ಟಿಗರು ಕಿಚಾಯಿಸುತ್ತಿದ್ದಾರೆ.

ಲಾಲ್‌ ಮಸೀದಿಯಲ್ಲಿ ವಿದ್ಯಾರ್ಥಿಗಳು ಮತ್ತು ಅನುಯಾಯಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ನನಗೊಂದು ಪ್ರಶ್ನೆಯಿದೆ. ಪಾಕಿಸ್ತಾನವು ಭಾರತದ ವಿರುದ್ಧ ಹೋರಾಡಿದರೆ, ನಿಮಲ್ಲಿ ಎಷ್ಟು ಮಂದಿ ಪಾಕಿಸ್ತಾನವನ್ನು ಬೆಂಬಲಿಸುತ್ತೀರಿ ಮತ್ತು ಅದಕ್ಕಾಗಿ ಹೋರಾಡುತ್ತೀರಿ? ಎಂದು ಕೇಳಿದಾಗ ಯಾರೂ ಕೂಡಾ ಕೈ ಎತ್ತದೆ ಮೌನಕ್ಕೆ ಶರಣಾಗಿದ್ದಾರೆ.

ಉಗ್ರವಾದ ಮತ್ತು ರಾಜ್ಯ ಘರ್ಷಣೆಗೆ ಸಂಬಂಧಿಸಿದಂತೆ ಘಾಜಿ ಪಾಕಿಸ್ತಾನದ ಸ್ಥಾಪನೆಯನ್ನು ಟೀಕಿಸಲು ಮುಂದಾದರು, ಇಂದು ಪಾಕಿಸ್ತಾನದಲ್ಲಿ ಅಪನಂಬಿಕೆಯ ವ್ಯವಸ್ಥೆ ಇದೆ – ಕ್ರೂರ, ಅನುಪಯುಕ್ತ ವ್ಯವಸ್ಥೆ. ಇದು ಭಾರತಕ್ಕಿಂತ ಕೆಟ್ಟದಾಗಿದೆ.ಬಲೂಚಿಸ್ತಾನ ಮತ್ತು ಖೈಬರ್‌ ಪಖ್ತುಂಖ್ವಾದಲ್ಲಿನ ದೌರ್ಜನ್ಯಗಳನ್ನು ಉಲ್ಲೇಖಿಸಿದ ಧರ್ಮಗುರು, ಪಾಕಿಸ್ತಾನಿ ರಾಜ್ಯವು ತನ್ನದೇ ಜನರ ಮೇಲೆ ಬಾಂಬ್‌ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದರು.

ಬಲೂಚಿಸ್ತಾನದಲ್ಲಿ ಏನಾಯಿತು, ಅವರು ಪಾಕಿಸ್ತಾನದಲ್ಲಿ ಮತ್ತು ಖೈಬರ್‌ ಪಖ್ತುಂಖ್ವಾದಲ್ಲಿ ಏನು ಮಾಡಿದರು – ಇವುಗಳು ದೌರ್ಜನ್ಯಗಳು. ಜನರು ಸಿದ್ಧರಾದಾಗ, ರಾಜ್ಯವು ತನ್ನ ಸ್ವಂತ ನಾಗರಿಕರ ಮೇಲೆ ಬಾಂಬ್‌ ಸ್ಫೋಟಿಸಿತು.ಮೇ 2 ರಂದು ಜಾಮಿಯಾ ಹಫ್ಸಾ ಮತ್ತು ಲಾಲ್‌ ಮಸೀದಿಯಲ್ಲಿ ರೆಕಾರ್ಡ್‌ ಮಾಡಲಾದ ವೀಡಿಯೊ ಪಾಕಿಸ್ತಾನದ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.

ಏಪ್ರಿಲ್‌ 22 ರಂದು ಜಮು ಮತ್ತು ಕಾಶೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸುಮಾರು ಎರಡು ವಾರಗಳ ನಂತರ ಈ ಘಟನೆ ಸಂಭವಿಸಿದೆ, ಇದು 26 ಜೀವಗಳನ್ನು ಬಲಿ ತೆಗೆದುಕೊಂಡಿತು ಮತ್ತು ಭಾರತ-ಪಾಕಿಸ್ತಾನದ ಉದ್ವಿಗ್ನತೆಯನ್ನು ಹುಟ್ಟು ಹಾಕಿದೆ. ಇಸ್ಲಾಮಾಬಾದ್‌ ಸಂಭವನೀಯ ರಾಜತಾಂತ್ರಿಕ ಮತ್ತು ಮಿಲಿಟರಿ ವೈಫಲ್ಯಕ್ಕೆ ಕಟ್ಟುಬಿದ್ದಿರುವಾಗ, ಪಾಕಿಸ್ತಾನದ ಧಾರ್ಮಿಕ ಮತ್ತು ಸಾಮಾಜಿಕ ರಚನೆಯೊಳಗಿನ ಭಿನ್ನಾಭಿಪ್ರಾಯವು ಹೆಚ್ಚು ಗೋಚರಿಸುತ್ತಿದೆ.

ರಾಜ್ಯದಲ್ಲಿ ವಾಣಿಜ್ಯ ತೆರಿಗೆ ಸಂಗ್ರಹ 1317.61 ಕೋಟಿ ರೂ.ನಷ್ಟು ಇಳಿಕೆ

ಬೆಂಗಳೂರು, ಮೇ 6-ರಾಜ್ಯದಲ್ಲಿ ಪ್ರಸಕ್ತ ಆರ್ಥಿಕ ಸಾಲಿನ ಮೊದಲ ತಿಂಗಳಾದ ಏಪ್ರಿಲ್ ನಲ್ಲಿ 8560.86 ಕೋಟಿ ರೂ. ಮಾತ್ರ ವಾಣಿಜ್ಯ ತೆರಿಗೆಗಳ ಸಂಗ್ರಹವಾಗಿದೆ. ಇದು ಕಳೆದ ವರ್ಷದ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಒಂದು ಸಾವಿರ ಕೋಟಿ ರೂ.ಗಿಂತ ಹೆಚ್ಚು ಇಳಿಕೆಯಾಗಿರುವುದು ಕಂಡುಬಂದಿದೆ.

ವಾಣಿಜ್ಯ ತೆರಿಗೆಗಳ ಇಲಾಖೆ ಮಾಹಿತಿ ಪ್ರಕಾರ ಕಳೆದ 2024ರ ಏಪ್ರಿಲ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ 7677.87 ಕೋಟಿ ರೂ., ಕರ್ನಾಟಕ ಮಾರಾಟ ತೆರಿಗೆ 1811.32 ಕೋಟಿ ರೂ. ಹಾಗೂ ವೃತ್ತಿ ತೆರಿಗೆ 173.61 ಕೋಟಿ ರೂ. ಸೇರಿ ಒಟ್ಟು 9662.80 ಕೋಟಿ ರೂ. ಸಂಗ್ರಹವಾಗಿತ್ತು.

ಆದರೆ, 2025ರ ಏಪ್ರಿಲ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ 6360.26 ಕೋಟಿ ರೂ.. ಕರ್ನಾಟಕ ಮಾರಾಟ ತೆರಿಗೆ 2001.12 ಕೋಟಿ ರೂ. ಹಾಗೂ ವೃತ್ತಿ ತೆರಿಗೆ 199.48 ಕೋಟಿ ರೂ. ಸೇರಿ ಒಟ್ಟು 8560.86 ಕೋಟಿ ರೂ. ಸಂಗ್ರಹವಾಗಿದೆ.

ಇದರಿಂದ ಕಳೆದ ವರ್ಷದ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಏಪ್ರಿಲ್‌ನಲ್ಲಿ 1101.94 ಕೋಟಿ ರೂ.ನಷ್ಟು ಕಡಿಮೆ ಸಂಗ್ರಹವಾಗಿದೆ. ಆದರೆ, ಕರ್ನಾಟಕ ಮಾರಾಟ ತೆರಿಗೆ ಮತ್ತು ವೃತ್ತಿ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಿದೆ. ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ 1317.61 ಕೋಟಿ ರೂ.ನಷ್ಟು ಇಳಿಕೆಯಾಗಿದೆ. ಕಳೆದ ಆರ್ಥಿಕ ಸಾಲಿನಲ್ಲಿ ಈ ಮೂರು ತೆರಿಗೆ ಸೇರಿ ಒಟ್ಟು 102585.52 ಕೋಟಿ ರೂ.ನಷ್ಟು ಸಂಗ್ರಹವಾಗಿತ್ತು.

ಭಾರತದ ಉಗ್ರ ದಮನ ಕಾರ್ಯಕ್ಕೆ ಅಮೆರಿಕ ಬೆಂಬಲ

ನವದೆಹಲಿ,ಮೇ 6- ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟಕ್ಕೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿನ್ಸ್ ಸ್ಪೀಕರ್ ಮೈಕ್ ಜಾನ್ಸನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದನೆ ವಿರುದ್ಧ ಹೋರಾಡುವ ಭಾರತದ ಪ್ರಯತ್ನಕ್ಕೆ ಸಹಾಯ ಮಾಡಲು ಯುಎಸ್ ಅಗತ್ಯ ಶಕ್ತಿ ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಪಹಲ್ಲಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ಪಾಕಿಸ್ತಾನದ ವಿರುದ್ಧ ಕ್ರಮಗಳನ್ನು ಬಿಗಿಗೊಳಿಸುತ್ತಿರುವ ಸಂದರ್ಭದಲ್ಲಿ ಅವರ ಹೇಳಿಕೆ ಬಂದಿದೆ. ಭಾರತ ಭಯೋತ್ಪಾದನೆ ವಿರುದ್ಧ ನಿಲ್ಲಬೇಕು.

ಆ ಪ್ರಯತ್ನಗಳನ್ನು ಬೆಂಬಲಿಸಲು ನಾವು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ. ಟ್ರಂಪ್ ಆಡಳಿತವು ಭಯೋತ್ಪಾದನೆಯ ವಿರುದ್ಧ ಹೋರಾಡಲು ಭಾರತಕ್ಕೆ ಇಂಧನ ಮತ್ತು ಸಂಪನ್ಮೂಲಗಳೊಂದಿಗೆ ಸಹಾಯ ಮಾಡುತ್ತದೆ ಎಂದು ಜಾನ್ಸನ್ ಪ್ರತಿಪಾದಿಸಿದ್ದಾರೆ.

54 ವರ್ಷದ ಬಳಿಕ ನಾಳೆ ದೇಶದಾದ್ಯಂತ ಮಾಕ್ ಡ್ರಿಲ್, ಹೇಗಿರುತ್ತೆ ಅಣಕು ತಾಲೀಮು..? ಇಲ್ಲಿದೆ ಪೂರ್ಣ ಮಾಹಿತಿ

ನವದೆಹಲಿ, : ಪೆಹಲ್ಗಾಮ್ ನರಮೇಧದ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಪರಿಸ್ಥಿತಿ ಕೈ ಮೀರಿರುವ ಬೆನ್ನಲ್ಲೇ ನಾಳೆ ದೇಶದಾದ್ಯಂತ ಬರೋಬ್ಬರಿ 54 ವರ್ಷದ ಬಳಿಕ ಅಣಕು ತಾಲೀಮು (ಮಾಕ್ ಡ್ರಿಲ್) ನಡೆಯಲಿದೆ. ಇದು ನೆರೆಯ ರಾಷ್ಟ್ರದ ವಿರುದ್ಧ ಯುದ್ಧಕ್ಕೆ ಮುನ್ಸೂಚನೆ ಎಂದೇ ಹೇಳಲಾಗಿದೆ.

ಪಹಲ್ಯಾಮ್ ಪ್ರತೀಕಾರಕ್ಕೆ ಭಾರತ ಸನ್ನದ್ಧವಾಗುತ್ತಿದ್ದಂತೆ ದೇಶದ 244 ಸಿವಿಲ್ ಡಿಫೆನ್ಸ್ ಜಿಲ್ಲೆಗಳಲ್ಲಿ ನಾಳೆ ನಾಗರಿಕರ ರಕ್ಷಣೆ ಸಂಬಂಧ ಭದ್ರತಾ ತಾಲೀಮು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಸೂಚನೆ ಕೊಟ್ಟಿದೆ. ಯುದ್ಧದ ದಾಳಿ ಸಂದರ್ಭದಲ್ಲಿ ಜನರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಅಣಕು ತಾಲೀಮಿಗೆ ಸೂಚಿಸಲಾಗಿದೆ. ವಿದ್ಯಾರ್ಥಿಗಳು, ನಾಗರಿಕರ ರಕ್ಷಣೆಗಾಗಿ ಪ್ರಾತ್ಯಕ್ಷಿಕೆ ಕೊಡುವಂತೆ ಸಿವಿಲ್‌ ಡಿಫೆನ್ಸ್ ಗಳಿಗೆ ಸೂಚನೆ ನೀಡಲಾಗಿದೆ. ಈ ಅಣಕು ಕವಾಯತು ಭಾರತಾದ್ಯಂತ ವ್ಯಾಪಕವಾಗಲಿದೆ ಎಂದು ನಾಗರಿಕ ರಕ್ಷಣಾ ಮಹಾ ನಿರ್ದೇಶಕ ವಿವೇಕ್ ಶ್ರೀವಾಸ್ತವ ಹೇಳಿದ್ದಾರೆ.

ಅಪಾಯದ ವೇಳೆ ವಾಯುದಾಳಿಯ ಎಚ್ಚರಿಕೆ ಸೈರನ್ (ಸದ್ದು) ಅರಿತುಕೊಳ್ಳುವುದು, ದಾಳಿಯ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನಾಗರಿಕರಿಗೆ ತರಬೇತಿ ನೀಡುವಂತೆಯೂ ಕೇಂದ್ರ ಹೇಳಿದೆ. ಇದರ ಜೊತೆಗೆ, ಪ್ರಮುಖ ಸ್ಥಾವರಗಳ ರಕ್ಷಣೆ, ಅವುಗಳ ಮರೆಮಾಚುವಿಕೆ, ಸ್ಥಳಾಂತರ ಮತ್ತು ಅಪಾಯದ ವೇಳೆ ನಿರ್ವಹಿಸಬೇಕಾದ ಕ್ರಮಗಳ ಬಗ್ಗೆ ಪೂರ್ವಾಭ್ಯಾಸ ನಡೆಸಲೂ ತಿಳಿಸಿದೆ.

1971 ರಲ್ಲಿ ಸಮರಾಭ್ಯಾಸ ನಡೆಸಿದ್ದ ದೇಶ:
ಪಹಲ್ಟಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ನಡುವೆ ಎಲ್ಲ ರಾಜ್ಯಗಳಿಗೆ ಮಾಕ್ ಡ್ರಿಲ್ ನಡೆಸಲು ಸೂಚನೆ ನೀಡಲಾಗಿದೆ. ಇದಕ್ಕೂ ಮೊದಲು ಅಂದರೆ 1971 ರಲ್ಲಿ ಭಾರತ-ಪಾಕಿಸ್ತಾನದ ನಡುವೆ ನಡೆದಿದ್ದ ಯುದ್ಧದ ವೇಳೆ ಇದೇ ರೀತಿಯ ಸೂಚನೆ ನೀಡಲಾಗಿತ್ತು.

ಉಭಯ ರಾಷ್ಟ್ರಗಳ ನಡುವೆ ನಡೆದ ಅಂದಿನ ಯುದ್ದಕ್ಕೂ ಮೊದಲು ದೇಶದ ನಾಗರಿಕರ ರಕ್ಷಣೆಗಾಗಿ ಪೂರ್ವ ತಯಾರಿ ನಡೆಸಲು ರಾಜ್ಯ ಸರ್ಕಾರಗಳಿಗೆ ತಾಕೀತು ಮಾಡಲಾಗಿತ್ತು. ಅಂದಿನ ಯುದ್ಧದಲ್ಲಿ ಪಾಕಿಸ್ತಾನವು ಭಾರತದ ಮುಂದೆ ಮಂಡಿಯೂರಿತ್ತು. ಇತ್ತ ಬಾಂಗ್ಲಾದೇಶವು ವಿಮೋಚನೆ ಹೊಂದಿತ್ತು.

ಸಾಧಾರಣವಾಗಿ ಒಂದು ದೇಶ ಯುದ್ಧಕ್ಕೆ ಸಿದ್ದಗೊಳ್ಳುತ್ತಿದ್ದಾಗ ಮಾಕ್ ಡ್ರಿಲ್ ಮಾಡಲು ಕರೆ ನೀಡುತ್ತದೆ. 1971ರಲ್ಲಿ ಭಾರತ-ಪಾಕ್ ಯುದ್ಧ ನಡೆಯುವ ಮೊದಲು ರಕ್ಷಣಾ ಮಾಕ್ ಡ್ರಿಲ್ ನಡೆದಿತ್ತು. ಕಳೆದ ಭಾನುವಾರ ಪಂಜಾಬ್‌ನ ಫಿರೋಜ್ ಪುರ್ ಕಂಟೋನ್ಸೆಂಟ್‌ನಲ್ಲಿ ರಾತ್ರಿ 9 ರಿಂದ 9.30ರವರೆಗೆ ವಿದ್ಯುತ್ ದೀಪ ಆರಿಸಿ ಮಾಕ್ ಡ್ರಿಲ್ ನಡೆದಿತ್ತು. ಇದರ ಬೆನ್ನಲ್ಲೇ ಎಲ್ಲ ರಾಜ್ಯಗಳಿಗೆ ಮಾಕ್ ಡ್ರಿಲ್‌ಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.

1971ರ ಸಂದರ್ಭದಲ್ಲೂ ಮೊದಲಿಗೆ ಪಂಜಾಬ್‌ನಲ್ಲೇ ಮೊದಲ ಬಾರಿ ಮಾಕ್ ಡ್ರಿಲ್ ಮಾಡಲಾಗಿತ್ತು. ಈ ಬಾರಿಯೂ ಮೊದಲು ಪಂಜಾಬ್ ನಲ್ಲಿ ನಡೆಸಿ ಬಳಿಕ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿರುವುದು ವಿಶೇಷ. ಹೀಗಾಗಿ 1971 ರೀತಿ ಮತ್ತೊಮ್ಮೆ ಭಾರತ ಪಾಕ್ ಮಧ್ಯೆ ಯುದ್ಧ ನಡೆಯುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ.

ಮಾಕ್ ಡ್ರಿಲ್ ಎಂದರೇನು?
ಒಂದು ಕಾಲ್ಪನಿಕ ತುರ್ತು ಪರಿಸ್ಥಿತಿಯ ಸೃಷ್ಟಿ ಮಾಡಲಾಗುತ್ತದೆ. ಸರ್ಕಾರ, ಭದ್ರತಾ ಸಿಬ್ಬಂದಿ, ಸಾರ್ವಜನಿಕರ ಸಿದ್ಧತೆ ಪರೀಕ್ಷಿಸುವ ಅಭ್ಯಾಸ ಇದಾಗಿದ್ದು ನೈಜ ಘಟನೆಯಂತೆಯೇ ನಡೆಯುತ್ತದೆ. ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಸಂಕಷ್ಟದ ಸನ್ನಿವೇಶಗಳನ್ನು ಆಣಕುಪ್ರದರ್ಶನ ಮಾಡಿ ಅಭ್ಯಾಸ ಮಾಡಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ, ಜನರ ರಕ್ಷಣೆಯ ಸಾಮರ್ಥ್ಯ ಬಲಪಡಿಸುವ ಉದ್ದೇಶದ ಜೊತೆಗೆ ಶತ್ರು ದಾಳಿ ವೇಳೆ ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿ ಪಡಿಸಲು ಅಗತ್ಯ ಸಿದ್ಧತೆ ಮಾಡಲು ಈ ಅಭ್ಯಾಸ ಮಾಡಲಾಗುತ್ತದೆ.

ಯಾವುದೇ ತುರ್ತು ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು, ಪೊಲೀಸ್, ಆರೋಗ್ಯ ಇಲಾಖೆ ಮತ್ತು ಇತರ ಸಂಸ್ಥೆಗಳ ಸಮನ್ವಯ ಬೇಕಾಗುತ್ತದೆ. ಜನರಲ್ಲಿ ತುರ್ತು ಸನ್ನಿವೇಶದ ಬಗ್ಗೆ ಜಾಗೃತಿ ಮೂಡಿಸಿ ಸುರಕ್ಷಿತವಾಗಿರಲು ತರಬೇತಿ ನೀಡಲಾಗುತ್ತದೆ. ವಾಯುದಾಳಿಯ ಸಂದರ್ಭದಲ್ಲಿ ನಗರಗಳು ಮತ್ತು ಹಳ್ಳಿಗಳಲ್ಲಿ ಸಂಪೂರ್ಣ ವಿದ್ಯುತ್ ಕಡಿತ ಮಾಡಲಾಗುತ್ತದೆ. ರಾತ್ರಿ ವಾಹನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗುತ್ತದೆ. ವೈರಿ ದೇಶಗಳಿಗೆ ಊರುಗಳ ಗುರುತು ಪತ್ತೆ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತದೆ. 1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದ ವೇಳೆ ಈ ರೀತಿಯ ಮಾಕ್ ಡ್ರಿಲ್ ನಡೆದಿರಲಿಲ್ಲ. ಈ ಸಂದರ್ಭದಲ್ಲಿ ಪಾಕಿಸ್ತಾನವೇ ನೇರವಾಗಿ ಯುದ್ಧಕ್ಕೆ ಧುಮುಕಿದ್ದರಿಂದ ಮಾಕ್ ಡ್ರಿಲ್ ಮಾಡಲು ಸಮಯ ಸಿಕ್ಕಿರಲಿಲ್ಲ.

ಅಣಕು ಡ್ರಿಲ್ ಏನನ್ನು ಒಳಗೊಂಡಿದೆ?
ನಾಗರಿಕ ರಕ್ಷಣೆಯನ್ನು ನಾಗರಿಕ ರಕ್ಷಣಾ ಕಾಯ್ದೆಯಿಂದ ನಿಯಂತ್ರಿಸಲಾಗುತ್ತದೆ. ಈ ಕಾಯ್ದೆಯಡಿಯಲ್ಲಿ, ಜಿಲ್ಲಾ ಮ್ಯಾಜಿಸ್ಟ್ರೇಟ್ (ಆಒ) ಅಥವಾ ಜಿಲ್ಲಾಧಿಕಾರಿಗಳು ಪ್ರತಿ ಜಿಲ್ಲೆಯಲ್ಲಿ ನಾಗರಿಕ ರಕ್ಷಣೆಗಾಗಿ ನೋಡಲ್ ಅಧಿಕಾರಿಯನ್ನು ನಿಯೋಜಿಸುತ್ತಾರೆ.

ಬುಧವಾರದಿಂದ ಪ್ರಾರಂಭಿಸಿ, ಡಿಎಂಗಳು ನಾಗರಿಕ ರಕ್ಷಣಾ ಸ್ವಯಂಸೇವಕರ ಪಟ್ಟಿಯನ್ನು ಮರುಪರಿಶೀಲಿಸುತ್ತಾರೆ ಮತ್ತು ಯಾವುದೇ ತುರ್ತು ಸಂದರ್ಭದಲ್ಲಿ ಸಿದ್ಧಪಡಿಸಲಾಗುವ ಸಂಪರ್ಕ ಸಂಖ್ಯೆಗಳು ಮತ್ತು ಹೆಸರುಗಳನ್ನು ನವೀಕರಿಸುತ್ತಾರೆ. ಭಾರತದಾದ್ಯಂತ ದುರ್ಬಲ ಜಿಲ್ಲೆಗಳನ್ನು ಗುರುತಿಸಲಾಗಿದ್ದು, ಈ ಜಿಲ್ಲೆಗಳಲ್ಲಿ ಬುಧವಾರ ಜಿಲ್ಲಾಧಿಕಾರಿಗಳು ಡ್ರಿಲ್ ನೇತೃತ್ವ ವಹಿಸಲಿದ್ದಾರೆ.

ವಾಯುದಾಳಿಯ ಎಚ್ಚರಿಕೆ ಸೈರನ್‌ಗಳು
ಈ ಸಮರಾಭ್ಯಾಸದ ಪ್ರಮುಖ ಅಂಶವೆಂದರೆ ವಾಯುದಾಳಿ ಎಚ್ಚರಿಕೆ ವ್ಯವಸ್ಥೆಯ ಪರಿಶೀಲನೆ, ತುರ್ತು ಪರಿಸ್ಥಿತಿಯಲ್ಲಿ ನಾಗರಿಕರಿಗೆ ಎಚ್ಚರಿಕೆ ನೀಡುವ ಮೊದಲ ಹೆಜ್ಜೆ ಇದು. ವಾಯುಪಡೆಯು ಎಚ್ಚರಿಕೆಯನ್ನು ನೀಡುತ್ತದೆ ಮತ್ತು ಪ್ರತಿಯೊಂದು ಜಿಲ್ಲೆಯು ತನ್ನ ವಾಯುದಾಳಿ ಎಚ್ಚರಿಕೆ ಸೈರನ್ ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ನಾಗರಿಕ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಲವು ಮುಂಚೂಣಿ ಪ್ರದೇಶಗಳಲ್ಲಿ, ಮುಂದಿನ ಹಂತವು ನಾಗರಿಕರು ಸಂರಕ್ಷಿತ ಪ್ರದೇಶದಲ್ಲಿ ಆಶ್ರಯ ಪಡೆಯುವುದನ್ನು ಒಳಗೊಂಡಿರುತ್ತದೆ. ಕಾಶ್ಮೀರದ ಉರಿಯಂತಹ ಮುಂಚೂಣಿ ಪ್ರದೇಶಗಳು (ಯುದ್ಧ ನಡೆದರೆ ಮುಂಚೂಣಿಗೆ ಹತ್ತಿರವಿರುವ ಪ್ರದೇಶಗಳು) ಈಗಾಗಲೇ ಸಮುದಾಯ ಬಂಕರ್‌ಗಳನ್ನು ಸಿದ್ಧಪಡಿಸಲು ಪ್ರಾರಂಭಿಸಿವೆ.

ತುರ್ತು ಸಂದರ್ಭಗಳಲ್ಲಿ ಸ್ಥಳಾಂತರಿಸಲು ಅನಿವಾರ್ಯದಂತಹ ಅಂತಾರಾಷ್ಟ್ರೀಯ ಗಡಿಯಲ್ಲಿರುವ ವಿದ್ಯಾರ್ಥಿಗಳು ಈಗಾಗಲೇ ಅಣಕು ಕವಾಯತುಗಳನ್ನು ಅಭ್ಯಾಸ ಮಾಡಿದ್ದಾರೆ.

ಕೇಂದ್ರದ ಸೂಚನೆಗಳು:
ವಾಯುದಾಳಿ ಎಚ್ಚರಿಕೆ ಸೈರನ್‌ಗಳ ಕಾರ್ಯಾಚರಣೆ
ದಾಳಿಯ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನಾಗರಿಕರಿಗೆ ರಕ್ಷಣಾ ಕುರಿತು ತರಬೇತಿ:
ಕ್ಯಾಶ್ ಬ್ಲ್ಯಾಕೌಟ್ ಕ್ರಮಗಳನ್ನು ಒದಗಿಸುವುದು
ಪ್ರಮುಖ ಸ್ಥಾವರಗಳು, ಅಣೆಕಟ್ಟುಗಳ ಬಗ್ಗೆ ಎಚ್ಚರ
ಸ್ಥಳಾಂತರಿಸುವ ಯೋಜನೆಯ ನವೀಕರಣ ಮತ್ತು ಅದರ ಪೂರ್ವಾಭ್ಯಾಸ

ಅಮೆರಿಕಾದಲ್ಲಿ ದೋಣಿ ಮಗುಚಿ ನೀರುಪಾಲಾದ ಭಾರತೀಯ ಮಕ್ಕಳು

ಕ್ಯಾಲಿಫೋರ್ನಿಯಾ, ಮೇ 6- ಸ್ಯಾನ್ ಡಿಯಾಗೋ ಕರಾವಳಿಯಲ್ಲಿ ಭಾರತೀಯರು ಸೇರಿದಂತೆ ವಲಸಿಗರನ್ನು ಕರೆದೊಯ್ಯುತ್ತಿದ್ದ ಸಣ್ಣ ದೋಣಿ ಮಗುಚಿ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದಲ್ಲದೆ, ಅಪಘಾತದಲ್ಲಿ ನಾಲ್ಕು ಜನರು ಗಾಯಗೊಂಡಿದ್ದಾರೆ. ವಿನಾಶಕಾರಿ ಘಟನೆಯಲ್ಲಿ ಭಾರತೀಯ ಕುಟುಂಬವೂ ಬಾಧಿತವಾಗಿದೆ. ಸ್ಯಾನ್ ಫ್ರಾನ್ಸಿ ಸ್ಟೋದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಪೋಸ್ಟ್‌ನಲ್ಲಿ, ಇಬ್ಬರು ಭಾರತೀಯ ಮಕ್ಕಳು ಕಾಣೆಯಾಗಿದ್ದಾರೆ ಮತ್ತು ಅವರ ಪೋಷಕರು ಲಾ ಜೊಲ್ಲಾದ ಸ್ಕಿಪ್ಸ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಯುಎಸ್ ಕೋಸ್ಟ್ ಗಾರ್ಡ್ ಪ್ರಕಾರ, ನಾಲ್ಕು ಜನರನ್ನು ರಕ್ಷಿಸಲಾಗಿದ್ದು, ಏಳು ಜನರು ಇನ್ನೂ ಕಾಣೆಯಾಗಿದ್ದಾರೆ.ವಶಕ್ಕೆ ಪಡೆದ ಇಬ್ಬರನ್ನು ಮಾನಸ ಕಳ್ಳಸಾಗಣೆದಾರರು ಎಂದು ಶಂಕಿಸಲಾಗಿದೆ ಎಂದು ಕೋಸ್ಟ್ ಗಾರ್ಡ್ ವಕ್ತಾರ ಹಂಟರ್ ಶಾಬೆಲ್ ರಾಯಿಟರ್ಸ್ ಗೆ ತಿಳಿಸಿದ್ದಾರೆ.