Thursday, November 6, 2025
Home Blog Page 54

ಕಿಟಿಕಿ ಗಾಜು ಒಡೆಡಿದ್ದ 76 ಪ್ರಯಾಣಿಕ ಖಾಸಗಿ ವಿಮಾನ ಚೆನ್ನೈನಲ್ಲಿ ತುರ್ತು ಭೂಸ್ಪರ್ಶ

ಚೆನ್ನೈ, ಅ.11-ಖಾಸಗಿ ವಿಮಾನವೊಂದು ಮಧುರೈನಿಂದ 76 ಪ್ರಯಾಣಿಕರನ್ನು ಚೆನ್ನೈಗೆ ಕರೆತರುತ್ತಿರುವಾಗ ಪೈಲೆಟ್‌ ಮುಂದಿನ ಕಿಟಿಕಿ ಗಾಜು ಒಡೆದು ಹೋದ ಘಟನೆ ಕಳೆದ ರಾತ್ರಿ ನಡೆದಿದೆ.

ವಿಮಾನ ಇಳಿಯುವ ಮುನ್ನ ಪೈಲಟ್‌ ಕಿಟಕಿ ಗಾಜು ಬಿರುಕು ಬಿಟ್ಟಿರುವುದನ್ನು ಪೈಲಟ್‌ ಗಮನಿಸಿ ವಿಮಾನ ನಿಲ್ದಾಣದ ವಾಯು ಸಂಚಾರ ನಿಯಂತ್ರಕರಿಗೆ ಮಾಹಿತಿ ನೀಡಿದರು.
ಮಾಹಿತಿ ಪಡೆದ ನಂತರ, ಚೆನ್ನೈ ವಿಮಾನ ನಿಲ್ದಾಣದಲ್ಲಿ ತುರ್ತು ವ್ಯವಸ್ಥೆ ಮಾಡಲಾಯಿತು ಮತ್ತು ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು ಎಂದು ಅವರು ಅಧಿಕಾರಿಯೊಬ್ಬರು ಹೇಳಿದರು.

ನಂತರ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ (ಬೇ ಸಂಖ್ಯೆ 95) ಕೊಂಡೊಯ್ಯಲಾಯಿತು ಮತ್ತು ನಂತರ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಯಿತು. ಪ್ರಸ್ತುತ, ಕಿಟಕಿ ಗಾಜು(ವಿಂಡ್‌ಶೀಲ್ಡ್‌‍)ನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಮರ್ಗ ಮಧ್ಯ ಈ ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅವರು ಹೇಳಿದರು. ದುರಸ್ಥಿ ವಿಳಂಬದ ಹಿನ್ನಲೆಯಲ್ಲಿ ಮತ್ತೆ ಮಧುರೈಗೆ ವಿಮಾನದ ಹಿಂತಿರುಗುವ ಪ್ರಯಾಣವನ್ನು ರದ್ದುಗೊಳಿಸಲಾಗಿದೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯನವರೇ, ಬಿಹಾರ ಚುನಾವಣೆಗೆ ಎಷ್ಟು ಕೋಟಿ ಲೂಟಿ ಮಾಡಿ ಚಂದಾ ಕೊಟ್ಟಿದಿರಾ..? : ಆರ್‌.ಅಶೋಕ್‌

ಬೆಂಗಳೂರು,ಅ.11- ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬಿಹಾರ ಚುನಾವಣೆಗೆ ಎಷ್ಟು ಕೋಟಿ ಹಣ ಲೂಟಿ ಮಾಡಿ ರಾಹುಲ್‌ ಗಾಂಧಿಗೆ ಚಂದಾ ನೀಡುವ ಭರವಸೆ ಕೊಟ್ಟಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ರಾಜ್ಯದಲ್ಲಿರುವ ಕಾಂಗ್ರೆಸ್‌‍ ಸರ್ಕಾರ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಎಟಿಎಂ ಸರ್ಕಾರ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಪ್ರಶ್ನೆಸಿದ್ದಾರೆ.

ಬಿಹಾರ ಚುನಾವಣೆಗಾಗಿ ಹೈಕಮಾಂಡ್‌ಗೆ 300 ಕೋಟಿ ರೂ. ಕೊಟ್ಟು ಮಂತ್ರಿಗಿರಿ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್‌‍ ಶಾಸಕ ವೀರೇಂದ್ರ ಪಪ್ಪಿ ಅವರ ಕರ್ಮಕಾಂಡ ನೋಡುತ್ತಿದ್ದರೆ ಇನ್ನು ಸಿಎಂ, ಡಿಸಿಎಂ, ಮಂತ್ರಿಗಳು ಕುರ್ಚಿ ಉಳಿಸಿಕೊಳ್ಳಲು ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್‌ಗೆ ಕಪ್ಪ ನೀಡುತ್ತಿರಬೇಡ ನೀವೇ ಊಹಿಸಿಕೊಳ್ಳಿ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಒಂದು ಕಡೆ ಜನರಿಗೆ ಕ್ಯಾಸಿನೋ, ಜೂಜು, ಬೆಟ್ಟಿಂಗ್‌ ಆಡಿಸಿ ಬಡವರ ಮನೆಹಾಳು ಮಾಡಿ ಅಡ್ಡದಾರಿಯಲ್ಲಿ ದುಡ್ಡು ಮಾಡುವುದು. ಆ ಪಾಪದ ಹಣದಲ್ಲಿ ಟಿಕೆಟ್‌ ಪಡೆದು, ಚುನಾವಣೆ ಎದುರಿಸಿ, ಹೈಕಮಾಂಡ್‌ ಗೆ ಕಪ್ಪ ಕೊಟ್ಟು ಮಂತ್ರಿಗಿರಿ ಗಿಟ್ಟಿಸಿಕೊಳ್ಳುವುದು. ಆಮೇಲೆ ಮಂತ್ರಿಗಿರಿ ಬಳಸಿಕೊಂಡು ಇನ್ನಷ್ಟು ಲೂಟಿ ಮಾಡುವುದು. ಇದು ಕಾಂಗ್ರೆಸ್‌‍ ಸರ್ಕಾರ ಕರ್ನಾಟಕದಲ್ಲಿ ಹೆಣೆದಿರುವ ವಿಷ ವರ್ತುಲ ಎಂದು ವಾಗ್ದಳಿ ನಡೆಸಿದ್ದಾರೆ.

ತೆಲಂಗಾಣ ಚುನಾವಣೆಗೆ, ಲೋಕಸಭೆ ಚುವಾವಣೆಗೆ ವಾಲೀಕಿ ನಿಗಮದ ಹಣ ಸೇರಿದಂತೆ ಸಾವಿರಾರು ಕೋಟಿ ಲಪಟಾಯಿಸಿದ್ದಾಯ್ತು. ಈಗ ಬಿಹಾರ ಚುನಾವಣೆಗೆ ಕನ್ನಡಿಗರ ತೆರಿಗೆ ಹಣ ಇನ್ನೆಷ್ಟು ಲೂಟಿ ಆಗುತ್ತದೆಯೋ ಗೊತ್ತಿಲ್ಲ. ಈ ರೀತಿ ಪಾಪದ ಹಣದಲ್ಲಿ ಚುನಾವಣೆ ನಡೆಸುವ ಕಾಂಗ್ರೆಸ್‌‍ ನಾಯಕರಿಗೆ ಚುನಾವಣಾ ಪ್ರಕ್ರಿಯೆ ಬಗ್ಗೆ, ಚುನಾವಣಾ ಆಯೋಗದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆಯೇ? ನಾಚಿಕೆಯಾಗಬೇಕು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ಸುರಕ್ಷತೆ ಎಲ್ಲಿದೆ?
ಮತ್ತೊಂದು ಪೋಸ್ಟ್‌ನಲ್ಲಿ ಕುಸಿತು ಬಿದ್ದಿರುವ ಕಾನೂನು ಸುವ್ಯವಸ್ಥೆಯ ವಿರುದ್ದವೂ ಟೀಕಿಸಿರುವ ಅಶೋಕ್‌, ಮಹಿಳೆಯರಿಗೆ ಸುರಕ್ಷತೆಯ ಗ್ಯಾರೆಂಟಿ ಎಲ್ಲಿದೆ ಸ್ವಾಮಿ? ಎಂದು ತರಾಟೆಗೆ ತೆಗದುಕೊಂಡಿದ್ದಾರೆ.

ಕರ್ನಾಟಕವನ್ನು ಗೂಂಡಾ ರಾಜ್ಯವನ್ನಾಗಿ ಮಾಡುತ್ತಿರುವ ಗೃಹ ಸಚಿವ ಪರಮೇಶ್ವರ್‌ ಅವರು, ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಿ ಗೂಂಡಾಗಳ ಕೈಗೆ ಅಧಿಕಾರ ಕೊಟ್ಟಿದೆ. ಬೆಂಗಳೂರಿನಂತಹ ರಾಜಧಾನಿಯಲ್ಲೇ ಮಹಿಳೆಯರ ಮೇಲೆ ಹಲ್ಲೆ ದೌರ್ಜನ್ಯ, ಅತ್ಯಾಚಾರ ಆಗುತ್ತಿದ್ದರೂ ಕ್ರಮ ಕೈಗೊಳ್ಳದೆ ಗೂಂಡಾಗಳ ರಕ್ಷಣೆ ಮಾಡುತ್ತಿರುವ ಕಾಂಗ್ರೆಸ್‌‍ ಸರ್ಕಾರದ ಧೋರಣೆಯಿಂದ ಬೀದಿ ಕಾಮಣ್ಣರು ರಾಜಾರೋಷವಾಗಿ ಮಹಿಳೆಯರ ಮೇಲೆ ಎರಗುತ್ತಿದ್ದಾರೆ. ಸಿಲಿಕಾನ್‌ ಸಿಟಿಯನ್ನು ಕ್ರೈಮ್‌ ಸಿಟಿ ಮಾಡುತ್ತಿರುವ ಕಾಂಗ್ರೆಸ್‌‍ ಸರ್ಕಾರ ಬೆಂಗಳೂರು ನಗರದ ಇಮೇಜ್‌ಗೆ ಧಕ್ಕೆ ತರುತ್ತಿದೆ ಎಂದು ಸರ್ಕಾರ ಮೇಲೆ ಟೀಕೆಗಳ ಸುರಿಮಳೆಗೈದಿದ್ದಾರೆ.

ಹಾಸನಾಂಬೆ ದರ್ಶನಕ್ಕೆ ಹರಿಬಂದ ಭಕ್ತಸಾಗರ, ಮೊದಲ ದಿನವೇ 50 ಲಕ್ಷ ಕಾಣಿಕೆ ಸಂಗ್ರಹ

ಹಾಸನ, ಅ.11- ಹಾಸನಾಂಬೆದೇವಿಯ ಸಾರ್ವಜನಿಕ ದರ್ಶನದ 2ನೇ ದಿನವಾದ ಇಂದು ಸಹ ಜನಸಾಗರವೇ ಹರಿದುಬಂದಿತ್ತು. ಮುಂಜಾನೆ 4 ಗಂಟೆಯಿಂದಲೇ ಭಕ್ತರು ಸರತಿಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ವಿಐಪಿ, ವಿವಿಐಪಿ ಪಾಸ್‌‍ಗಳು ಇಲ್ಲದಿರುವುದರಿಂದ ಬೋರ್ಡ್‌ ಪಾಸ್‌‍ ಹಾಗೂ ಶಿಷ್ಟಾಚಾರಕ್ಕೆ ಸಮಯ ನಿಗದಿ ಮಾಡಿರುವ ಹಿನ್ನೆಲೆಯಲ್ಲಿ ಶೀಘ್ರವಾಗಿ ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ.

ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣಭೈರೇಗೌಡ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಜೊತೆಗೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ.
ಮಳೆಯಲ್ಲೂ ಸಹ ದೇವಾಲಯದ ಬಳಿಯೇ ನಿಂತು ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಯಾವುದೇ ರೀತಿಯ ತೊಂದರೆಯಾಗದಂತೆ ಭಕ್ತರಿಗೆ ದೇವಿಯ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಇಂದು ಶನಿವಾರ ನಾಳೆ ಭಾನುವಾರ ಆಗಿದ್ದರಿಂದ ಹೆಚ್ಚು ಜನರು ನಿರೀಕ್ಷೆಗೂ ಮೀರಿ ದೇವಾಲಯಕ್ಕೆ ಬರುವುದರಿಂದ ಎಲ್ಲಿಯೂ ಕೂಡ ಸಣ್ಣ ಲೋಪವಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.

ಮೊದಲ ದಿನವೇ 50 ಲಕ್ಷ ಸಂಗ್ರಹ
ನಗರದ ಅಧಿದೇವತೆ ಹಾಸನಾಂಬೆ ದೇವಿಯ ದರ್ಶನಕ್ಕೆ ಜನಸಾಗರವೇ ಹರಿದುಬರುತ್ತಿದ್ದು, ಒಂದೇ ದಿನ 50 ಲಕ್ಷ ರೂ. ಸಂಗ್ರಹವಾಗಿದೆ. ವರ್ಷಕ್ಕೊಮೆ ದರ್ಶನ ನೀಡುವ ದೇವಿಯನ್ನು ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಭಕ್ತರು ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೆ ಬರುತ್ತಿದ್ದು, ಸಾರ್ವಜನಿಕ ದರ್ಶನದ ಮೊದಲ ದಿನವೇ ಟಿಕೆಟ್‌ ಹಾಗೂ ಲಾಡು ಮಾರಾಟದಿಂದ 50 ಲಕ್ಷ ಸಂಗ್ರಹವಾಗಿದೆ.

300 ರೂ. ಟಿಕೆಟ್‌ನಲ್ಲಿ ಆನ್‌ಲೈನ್‌ನಲ್ಲಿ 1241, ಕೌಂಟರ್‌ನಲ್ಲಿ 5783 ರೂ. ಸೇರಿ ಒಟ್ಟು 7,024 ರೂ. ಟಿಕೆಟ್‌ಗಳು ಮಾರಾಟವಾಗಿ ಒಟ್ಟು 21,07,200 ರೂ. ಸಂಗ್ರಹವಾಗಿದೆ.
1000 ರೂ. ಟಿಕೆಟ್‌ನಲ್ಲಿ 1278 ಆನ್‌ಲೈನ್‌, ಕೌಂಟರ್‌ಗಳಲ್ಲಿ 2778 ಸೇರಿ 4,056 ಟಿಕೆಟ್‌ಗಳು ಮಾರಾಟದಿಂದ 40,56,000 ರೂ. ಸಂಗ್ರಹವಾಗಿದೆ.

2468 ಲಡ್ಡು ಪ್ರಸಾದ ಮಾರಾಟವಾಗಿದ್ದು, 2,46,800 ರೂ. ಸಂಗ್ರಹವಾಗಿದೆ. ಮೊದಲ ದಿನವೇ ದೊಡ್ಡ ಮಟ್ಟದಲ್ಲಿ ಟಿಕೆಟ್‌ ಹಾಗೂ ಪ್ರಸಾದ ಮಾರಾಟದಿಂದ ಆದಾಯ ಬಂದಿದ್ದರೆ, ಇನ್ನು ಹುಂಡಿಯಲ್ಲಿ ಹೆಚ್ಚು ಹಣ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-10-2025)

ನಿತ್ಯ ನೀತಿ : ಈ ಜಗತ್ತಿನಲ್ಲಿ ಎಲ್ಲವೂ ಬೆಲೆ ಬಾಳುವಂಥಾದ್ದೇ.. ಒಂದು ಸಿಗುವ ಮೊದಲು ಮತ್ತು ಕಳೆದುಕೊಂಡ ನಂತರ..

ಪಂಚಾಂಗ : ಶನಿವಾರ, 11-10-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಕೃಷ್ಣ / ತಿಥಿ: ಪಂಚಮಿ / ನಕ್ಷತ್ರ: ರೋಹಿಣಿ / ಯೋಗ: ವೃತೀಪಾತ / ಕರಣ: ಗರಜ
ಸೂರ್ಯೋದಯ – ಬೆ.06.10
ಸೂರ್ಯಾಸ್ತ – 06.03
ರಾಹುಕಾಲ – 9.00-10.30
ಯಮಗಂಡ ಕಾಲ – 1.30-3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :
ಮೇಷ: ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಹಿಂದೆ ಮುಂದೆ ಯೋಚಿಸಬೇಡಿ. ಆತ್ಮೀಯರಿಂದ ಸಹಾಯ ಸಿಗಲಿದೆ.
ವೃಷಭ: ಮಾನಸಿಕ ಒತ್ತಡ ಹೆಚ್ಚಾಗುವುದು. ಕೆಲಸ-ಕಾರ್ಯಗಳನ್ನು ಆದಷ್ಟು ಬೇಗ ಮುಗಿಸಿ.
ಮಿಥುನ: ಅಭಿವೃದ್ಧಿಯಲ್ಲಿ ಹಲವು ಅಡೆತಡೆಗಳು ಎದುರಾಗಲಿವೆ. ಆಯಾಸ ಹೆಚ್ಚಾಗಲಿದೆ.

ಕಟಕ: ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಕಡಿಮೆಯಾಗಲಿದೆ.
ಸಿಂಹ: ಅ ಕ ಆತ್ಮವಿಶ್ವಾಸ ದಿಂದ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡುವಿರಿ.
ಕನ್ಯಾ: ಯಾವುದೇ ಕಾರ್ಯ ಕೈಗೊಂಡರೂ ಹೆಜ್ಜೆ ಹೆಜ್ಜೆಗೂ ಅಡೆತಡೆ ಎದುರಾಗಲಿದೆ.

ತುಲಾ: ಅಮೂಲ್ಯ ವಸ್ತುಗಳ ಖರೀದಿಗೆ ಇಂದು ಉತ್ತಮವಾದ ದಿನ.
ವೃಶ್ಚಿಕ: ಮಧ್ಯವರ್ತಿಗಳ ಸಹಾಯದಿಂದ ವಿವಾಹದ ವಿಷಯದಲ್ಲಿ ಅನುಕೂಲಕರವಾಗಲಿದೆ.
ಧನುಸ್ಸು: ಕುಟುಂಬದವರೊಂದಿಗೆ ಸಾಕಷ್ಟು ಸಮಯ ಕಳೆಯಲು ಬಯಸುವಿರಿ.

ಮಕರ: ಪಿತ್ರಾರ್ಜಿತ ಆಸ್ತಿ ವಿವಾದ ತಾರಕಕ್ಕೇರಲಿದೆ. ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ.
ಕುಂಭ: ವ್ಯಾಪಾರದಲ್ಲಿ ಲಾಭವಿದೆ. ಅಪರಿಚಿತ ರೊಂದಿಗೆ ಹೆಚ್ಚು ಸಮಯ ಕಳೆಯದಿರಿ.
ಮೀನ: ಅದೃಷ್ಟ ನಿಮ್ಮೆಡೆಗಿದ್ದರೂ ಎಲ್ಲ ಕಾರ್ಯಗಳನ್ನೂ ಎಚ್ಚರಿಕೆಯಿಂದ ನಿರ್ವಹಿಸಿ.

ಅ.10 ರಿಂದ ಜಿಯೋಹಾಟ್‌ಸ್ಟಾರ್‌ನಲ್ಲಿ ಪ್ರತ್ಯೇಕವಾಗಿ ಸ್ಟ್ರೀಮ್ ಆಗಲಿದೆ ಮಿರಾಯ್

ಜಿಯೋಹಾಟ್‌ಸ್ಟಾರ್ ಅ. 10 ರಿಂದ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸ್ಟ್ರೀಮ್ ಆಗಲಿರುವ ಭವ್ಯ ಫ್ಯಾಂಟಸಿ ಆಕ್ಷನ್ ದೃಶ್ಯವಾದ ಮಿರೈನ ವಿಶೇಷ ಡಿಜಿಟಲ್ ಪ್ರೀಮಿಯರ್ ಅನ್ನು ಘೋಷಿಸಿದೆ. ಬಹು ನಿರೀಕ್ಷಿತ ಚಿತ್ರವು ಎಮೋಷನ್, ಪುರಾಣ ಮತ್ತು ಹೈ-ಆಕ್ಟೇನ್ ಆಕ್ಷನ್ ಅನ್ನು ಹಿಂದೆಂದೂ ನೋಡಿರದ ದೃಶ್ಯ ವೈಭವದಲ್ಲಿ ಬೆರೆಸುವ ವಿಶಿಷ್ಟ ಸಿನಿಮೀಯ ಅನುಭವವನ್ನು ನೀಡುತ್ತದೆ.

ವಿಧಿ ಮತ್ತು ದೈವತ್ವ ಘರ್ಷಿಸುವ ಜಗತ್ತಿನಲ್ಲಿ, ಮಿರಾಯ್ ಮಾನವೀಯತೆಗೆ ಸಮತೋಲನ ಮತ್ತು ಭರವಸೆಯನ್ನು ಪುನಃಸ್ಥಾಪಿಸಲು ಎಲ್ಲಾ ಪ್ರತಿಕೂಲಗಳ ವಿರುದ್ಧ ಹೋರಾಡುವ ಆಯ್ಕೆಮಾಡಿದ ಯೋಧನ ಕಥೆಯನ್ನು ಹೇಳುತ್ತದೆ. ಬೆರಗುಗೊಳಿಸುವ ದೃಶ್ಯಗಳು, ಶಕ್ತಿಯುತ ಪ್ರದರ್ಶನಗಳು ಮತ್ತು ತಲ್ಲೀನಗೊಳಿಸುವ ನಿರೂಪಣೆಯೊಂದಿಗೆ, ಮಿರಾಯ್ ಜಿಯೋಹಾಟ್‌ಸ್ಟಾರ್‌ನಲ್ಲಿ ವರ್ಷದ ಅತಿದೊಡ್ಡ ಪ್ಯಾನ್-ಸೌತ್ ಡಿಜಿಟಲ್ ಬಿಡುಗಡೆಗಳಲ್ಲಿ ಒಂದಾಗಿದೆ.

ಚಿತ್ರದ ಧ್ವನಿಪಥ, ಉಸಿರುಕಟ್ಟುವ ದೃಶ್ಯ ಪರಿಣಾಮಗಳು ಮತ್ತು ತೀವ್ರವಾದ ಕಥೆ ಹೇಳುವಿಕೆಯು ಈಗಾಗಲೇ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ, ಆರಂಭಿಕ ನೋಟಗಳು ಮತ್ತು ಟ್ರೇಲರ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿವೆ.

ಅಕ್ಟೋಬರ್ 10 ರಂದು ತನ್ನ ಡಿಜಿಟಲ್ ಪ್ರೀಮಿಯರ್‌ನೊಂದಿಗೆ, ಮಿರಾಯ್ ವೀಕ್ಷಕರನ್ನು ಜಿಯೋಹಾಟ್‌ಸ್ಟಾರ್‌ ಧೈರ್ಯ, ಹಣೆಬರಹ ಮತ್ತು ನಂಬಿಕೆಯ ಮಹಾಕಾವ್ಯವನ್ನು ವೀಕ್ಷಿಸಲು ಆಹ್ವಾನಿಸುತ್ತದೆ.

ಬೆಂಗಳೂರು : ಬಾರ್‌ ವಾಶ್‌ರೂಂನಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಅನುಮಾನಾಸ್ಪದವಾಗಿ ಸಾವು

ಬೆಂಗಳೂರು,ಅ.10-ಸ್ನೇಹಿತರೊಂದಿಗೆ ಬಾರ್‌ ಅಂಡ್‌ ರೆಸ್ಟೋರೆಂಟ್‌ಗೆ ಹೋಗಿದ್ದ ಬ್ಯಾಂಕ್‌ ಮಾನ್ಯೇಜರ್‌ರೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.ಮೂಲತಃ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಮೇಘರಾಜ್‌ (31) ಮೃತಪಟ್ಟ ಬ್ಯಾಂಕ್‌ ಮ್ಯಾನೇಜರ್‌. ನಗರದ ಉಲ್ಲಾಳದಲ್ಲಿ ಪತ್ನಿ ಹಾಗೂ ಆರು ತಿಂಗಳ ಮಗುವಿನೊಂದಿಗೆ ಮೇಘರಾಜ್‌ ವಾಸವಾಗಿದ್ದರು.ಅವರು ಜನ ಸಾಲ್‌ ಬ್ಯಾಂಕ್‌ನಲ್ಲಿ ಮ್ಯಾನೇಜರ್‌ ಆಗಿದ್ದರು.

ಆರ್‌ ಆರ್‌ ನಗರ ಮುಖ್ಯ ರಸ್ತೆಯಲ್ಲಿರುವ 1522 ಬಾರ್‌ ಅಂಡ್‌ ರೆಸ್ಟೋರೆಂಟ್‌ಗೆ ನಿನ್ನೆ ರಾತ್ರಿ ಮೂವರು ಸ್ನೇಹಿತರೊಂದಿಗೆ ಹೋಗಿ ಮದ್ಯ ಸೇವಿಸಿ ಊಟ ಮಾಡಿದ್ದಾರೆ. ನಂತರ ಬಿಲ್‌ ಕೊಟ್ಟು ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ನಿಂದ ರಾತ್ರಿ 11.30 ರ ಸುಮಾರಿನಲ್ಲಿ ಹೊರಗೆ ಹೋಗುವಾಗ ಒಂದು ನಿಮಿಷ ನಿಂತಿರಿ ಎಂದು ಹೇಳಿ ಮತ್ತೆ ಮೇಘರಾಜ್‌ ಒಳಗೆ ಹೋಗಿದ್ದಾರೆ.

ಎಷ್ಟು ಹೊತ್ತಾದರೂ ಮೇಘರಾಜ್‌ ಬಾರದಿದ್ದಾಗ ಸ್ನೇಹಿತರು ಒಳಗೆ ಹೋಗಿ ನೋಡಿದರೂ ಕಾಣಿಸಿಲ್ಲ. ನಂತರ ಬಾರ್‌ ಮ್ಯಾನೇಜರ್‌ನನ್ನು ವಿಚಾರಿಸಿ, ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ವಾಶ್‌ರೂಂಗೆ ಹೋಗಿರುವುದು ಕಂಡು ಬಂದಿದೆ. ಸ್ನೇಹಿತರು ವಾಶ್‌ ರೂಂ ಬಳಿ ಹೋಗಿ ಬಾಗಿಲು ತಟ್ಟಿ ಕೂಗಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಗಾಬರಿಯಾಗಿ ಮ್ಯಾನೇಜರ್‌ಗೆ ತಿಳಿಸಿದ್ದಾರೆ.

ತಕ್ಷಣ ಬಾಗಿಲು ಹೊಡೆದು ನೋಡಿದಾಗ ಮೇಘರಾಜ್‌ ಅವರು ಮೃತಪಟ್ಟಿರುವುದು ಗೊತ್ತಾಗಿದೆ.ಈ ಬಗ್ಗೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸೋಕೋ ಅಧಿಕಾರಿಗಳು ಆರ್‌ಆರ್‌ನಗರ ಠಾಣೆ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಮೇಘರಾಜ್‌ ಅವರ ಸಹೋದರ ವಿನಯ್‌ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮೇಘರಾಜ್‌ ಅವರ ಸಾವು ಹೇಗಾಗಿದೆ ಎಂಬುವುದು ಮರಣೋತ್ತರ ಪರೀಕ್ಷೆವರದಿ ಬಂದ ನಂತರವಷ್ಟೇ ಗೊತ್ತಾಗಲಿದೆ ಎಂದು ಡಿಸಿಪಿ ಗಿರೀಶ್‌ ಅವರು ಈ ಸಂಜೆಗೆ ತಿಳಿಸಿದ್ದಾರೆ.

ಕಸ ಎಸೆಯದಂತೆ ಬುದ್ಧಿ ಹೇಳಿದ ಪೌರಕಾರ್ಮಿಕನಿಗೆ ಥಳಿಸಿ ಪರಾರಿಯಾದ ತಂದೆ-ಮಗಳು

ಬೆಂಗಳೂರು, ಅ.10– ಬೀದಿ ಬದಿ ಕಸ ಎಸೆಯಬೇಡಿ ಎಂದು ಬುದ್ದಿಮಾತು ಹೇಳಿದ ಪೌರ ಕಾರ್ಮಿಕನ ಮೇಲೆ ಹಲ್ಲೆ ನಡೆಸಿ ಧಿಮಾಕು ಪ್ರದರ್ಶಿಸಿ ಪರಾರಿಯಾಗಿರುವ ತಂದೆ-ಮಗಳ ವಿರುದ್ದ ಗೋವಿಂದರಾಜನಗರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೌರ ಕಾರ್ಮಿಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ತಂದೆ-ಮಗಳ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಅವರ ಬಂಧನಕ್ಕೆ ಕಾರ್ಯಚರಣೆ ನಡೆಸಲಾಗುತ್ತಿದೆ.

ರಸ್ತೆ ಬದಿ ಕಸ ಎಸೆಯುವವರನ್ನು ಪತ್ತೆ ಹಚ್ಚಿ ಫೈನ್‌ ಹಾಕಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮನವಿ ಮಾಡಿಕೊಂಡಿರುವ ಸಂದರ್ಭದಲ್ಲೇ ಕಸ ಎಸೆದವರನ್ನು ಪ್ರಶ್ನಿಸಿದ ಪೌರ ಕಾರ್ಮಿಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಪೌರ ಕಾರ್ಮಿಕನ ಮೇಲೆ ಹಲ್ಲೆ ಮಾಡಿದ್ದೇ ಅಲ್ಲದೆ, ನಾನು ಯಾರು ಅಂತಾ ಗೊತ್ತಾ ನಿನಗೆ ನಾನು ವಿಧಾನಸೌಧದ ಅಧ್ಯಕ್ಷ ಎಂದು ಬೆದರಿಕೆ ಹಾಕಿರುವ ಅನಾಮಧೇಯ ಅಧ್ಯಕ್ಷನಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.ತಂದೆ-ಮಗಳ ಕ್ರೌರ್ಯ ಕುರಿತಂತೆ ನಾಗೇಂದ್ರ ಎಂಬ ಪೌರ ಕಾರ್ಮಿಕ ನೀಡಿದ ದೂರಿನ ಆಧಾರದ ಮೇಲೆ ಗೋವಿಂದರಾಜನಗರ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ನಾನು ಬೆಳಿಗ್ಗೆ ಠಾಣಾ ವ್ಯಾಪ್ತಿಯ ಶ್ರೀನಿವಾಸ ನಗರದ ಬಳಿ ಕಸ ಸ್ವಚ್ಛಗೊಳಿಸುತ್ತಿದ್ದಾಗ ಆಕ್ಟಿವ್‌ ಹೋಂಡಾದಲ್ಲಿ ಬಂದ ಅವರಿಬ್ಬರು ನಾನು ಶುಚಿಗೊಳಿಸಿದ್ದ ರಸ್ತೆ ಬದಿ ಕಸ ಎಸೆದು ಹೋಗುತ್ತಿದ್ದರು. ಆ ಸಂದರ್ಭದಲ್ಲಿ ನಾನು ಇಲ್ಲಿ ಕಸ ಹಾಕಬಾರದು ಎಂದು ಬುದ್ದಿವಾದ ಹೇಳಿದೆ.

ಈ ರೀತಿ ರಸ್ತೆ ಬದಿ ಕಸ ಎಸೆಯುವ ಬದಲು ನಿಮ ಮನೆ ಬಳಿ ಬರುವ ಕಸದ ಆಟೋಗೆ ನೀಡಿ ಎಂದಾಗ ಕಸ ಎಸೆದ ವ್ಯಕ್ತಿ ಕೋಪಗೊಂಡು ನೀನು ಕಸ ಗುಡಿಸುವವನು ಅಷ್ಟೇ… ನನಗೆ ಆರ್ಡರ್‌ ಮಾಡ್ಬೇಡ ಎಂದು ಅವಾಜ್‌ ಹಾಕಿದ್ದಲ್ಲದೆ, ನಾನು ಯಾರು ಅಂತಾ ಗೊತ್ತಾ ವಿಧಾನಸೌಧದಲ್ಲಿ ಅಧ್ಯಕ್ಷನಾಗಿದ್ದೇನೆ ನನ್ನ ಬಗ್ಗೆ ಗೊತ್ತಿಲ್ಲ ನಿಂಗೆ ಎಂದು ಧಮಕಿ ಹಾಕಿದ್ದ ಎಂದು ಪೌರ ಕಾರ್ಮಿಕ ದೂರು ನೀಡಿದ್ದಾರೆ.

ನೀವು ಯಾರಾದರೂ ಆಗಿರಿ ಇಲ್ಲಿ ಕಸ ಬಿಸಾಡಬೇಡಿ ಎಂದಿದ್ದರಿಂದ ಅವರು ನನ್ನ ಮೇಲೆ ಹೆಲೆಟ್‌ನಿಂದ ಮೂರಿ ಬಾರಿ ಹಲ್ಲೆ ನಡೆಸಿದ್ದಾರೆ ಎಂದು ಪೌರ ಕಾರ್ಮಿಕ ದೂರಿನಲ್ಲಿ ಆರೋಪಿಸಿದ್ದಾರೆ. ಕೊನೆಗೆ ಕಸ ಎಸೆದ ವ್ಯಕ್ತಿ ಇನ್ಮೇಲೆ ಇಲ್ಲಿ ಕಸ ಬಿಸಾಡ್ಬೇಡ ಎಂದು ಹೇಳಿದರೆ ಪರಿಸ್ಥಿತಿ ಸರಿ ಇರಲ್ಲ ನಿನ್ನನ್ನು ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ನಾಗೇಂದ್ರ ಹೇಳಿಕೊಂಡಿದ್ದಾರೆ.

ಮಲಗಿದ್ದ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿ ಕೊಂದ ಕಾಮುಕನಿಗೆ ಗುಂಡೇಟು

ಮೈಸೂರು,ಅ.10– ಹೊಟ್ಟೆಪಾಡಿಗಾಗಿ ಬಲೂನ್‌ ವ್ಯಾಪಾರಕ್ಕಾಗಿ ಮೈಸೂರು ದಸರಾಕ್ಕೆ ಬಂದಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಯ ಕಾಲಿಗೆ ಗುಂಡಿಕ್ಕಿ ಆತನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.ಅಲೆಮಾರಿ ಸಮುದಾಯದ ಬಾಲಕಿ ಮೇಲೆ ಪೈಶಾಚಿಕ ಕೃತ್ಯ ಎಸಗಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಹಾರಿಸಿದ ಗುಂಡೇಟಿನಿಂದ ಗಾಯಗೊಂಡು ಕೆಆರ್‌ಆಸ್ಪತ್ರೆಯಲ್ಲಿ ಆರೋಪಿ ಕಾರ್ತಿಕ್‌ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈತ ಮೈಸೂರಿನ ಸಿದ್ದಲಿಂಗಪುರ ನಿವಾಸಿ. ಮೈಸೂರು ದಸರಾ ಹಬ್ಬದ ವೇಳೆ ಬಲೂನು ಮಾರಾಟ ಮಾಡಲು ಕಲ್ಬುರ್ಗಿಯಿಂದ ಹಕ್ಕಿಪಿಕ್ಕಿ ಜನಾಂಗದ ಸುಮಾರು 50 ಕುಟುಂಬಗಳು ಬಂದು ಅರಮನೆ ಮುಂಭಾಗದ ದೊಡ್ಡ ಕೆರೆ ಮೈದಾನದ ಬಳಿ ತಾತ್ಕಾಲಿಕವಾಗಿ ಜೋಪಡಿ ಹಾಕಿಕೊಂಡು ತಂಗಿದ್ದಾರೆ. ಮೊನ್ನೆ ಚಾಮುಂಡೇಶ್ವರಿ ದೇವಾಲಯದ ತೆಪ್ರೋತ್ಸವ ಮುಗಿಸಿ, ನಿನ್ನೆ ಬೇರೆ ಕಡೆ ತೆರಳಲು ಸಿದ್ಧತೆ ನಡೆಸಿದ್ದರು. ಆದರೆ ಹಿಂದಿನ ರಾತ್ರಿ ವ್ಯಾಪಾರ ಮುಗಿಸಿ ಬಂದ ಬಾಲಕಿ ತಂದೆ, ತಾಯಿಯೊಂದಿಗೆ ಮಲಗಿದ್ದಳು.

ನಿನ್ನೆ ಮುಂಜಾನೆ ಎಲ್ಲರೂ ಎದ್ದಾಗ ಬಾಲಕಿ ಸ್ಥಳದಿಂದ ನಾಪತ್ತೆಯಾಗಿದ್ದಳು. ಹುಡುಕಾಡಿದಾಗ ಬೆಳಗ್ಗೆ 6.30 ರ ಸುಮಾರಿನಲ್ಲಿ ಜೋಪಡಿಯ ಪಕ್ಕದ ಗುಂಡಿಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಮೈಮೇಲೆ ಸರಿಯಾಗಿ ಬಟ್ಟೆ ಇರಲಿಲ್ಲ. ಹಾಗಾಗಿ ಕುಟುಂಬಸ್ಥರು ಅತ್ಯಾಚಾರ ಮತ್ತು ಕೊಲೆಯ ಶಂಕೆ ವ್ಯಕ್ತಪಡಿಸಿದ್ದರು.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ನಜರ್‌ಬಾದ್‌ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು.ಸಿಸಿಟಿವಿ ಆಧಾರದ ಮೇಲೆ ಹಂತಕನ ಚಹರೆ ಆಧರಿಸಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಮೈಸೂರು ಬಸ್‌‍ ನಿಲ್ದಾಣದಿಂದ ಕೊಳ್ಳೇಗಾಲ ಬಸ್‌‍ ಹತ್ತಿ ಹೋಗಿರುವುದು ಗೊತ್ತಾಗಿದೆ.ತಕ್ಷಣ ಕೊಳ್ಳೇಗಾಲಕ್ಕೆ ತೆರಳಿ ಶೋಧ ಕೈಗೊಂಡು ಆರೋಪಿಯನ್ನು ವಶಕ್ಕೆ ಪಡೆದು ನಗರಕ್ಕೆ ಕರೆತರುತ್ತಿದ್ದಾಗ ಮೇಟಗಳ್ಳಿ ಬಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.ತಕ್ಷಣ ಆತನನ್ನು ಹಿಡಿಯಲು ಮುಂದಾದಾಗ ಕಾನ್ಸ್ ಟೇಬಲ್‌ ವೆಂಕಟೇಶ್‌ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.

ಆ ವೇಳೆ ಸಬ್‌ ಇನ್‌್ಸಪೆಕ್ಟರ್‌ ಜೈಕೀರ್ತಿ ಅವರು ತಕ್ಷಣ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ.ಪೊಲೀಸರ ಮಾತಿಗೆ ಕಿವಿಗೊಡದೇ ಮತ್ತೆ ಪೊಲೀಸ್‌‍ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾಗ ಸಬ್‌ ಇನ್‌್ಸಪೆಕ್ಟರ್‌ ಹಾರಿಸಿದ ಗುಂಡು ಆರೋಪಿ ಕಾಲಿಗೆ ತಗುಲಿದ್ದು ಆತ ಕುಸಿದು ಬಿದ್ದಿದ್ದಾನೆ.ಆರೋಪಿ ಕಾರ್ತಿಕ್‌ ನನ್ನು ಸುತ್ತುವರೆದು ವಶಕ್ಕೆ ಪಡೆದು ಕೆ.ಆರ್‌.ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಆಯುಕ್ತರ ಭೇಟಿ:
ಆಸ್ಪತ್ರೆಗೆ ನಗರ ಪೊಲೀಸ್‌‍ ಕಮಿಷನರ್‌ ಸೀಮಾ ಲಾಟ್ಕರ್‌ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.ಮೈಸೂರಿನ ಸಿದ್ದಲಿಂಗಪುರ ನಿವಾಸಿಯಾಗಿರುವ ಕಾರ್ತಿಕ್‌, ಮಂಡ್ಯದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದ. ಆ ಪ್ರಕರಣದಲ್ಲಿ 2 ವರ್ಷ ಜೈಲಿನಲ್ಲಿದ್ದು, ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಆರೋಪಿ ಕಾರ್ತಿಕ್‌ ಮದ್ಯ ಸೇವಿಸಿ ಎಲ್ಲೆಂದರಲ್ಲಿ ಅಲೆದಾಡುತ್ತಿದ್ದ. ಮದ್ಯ ವ್ಯಸನಿ ಕಾರ್ತಿಕ್‌ ಕಣ್ಣಿಗೆ 10 ವರ್ಷದ ಬಾಲಕಿ ಬಿದ್ದಿದ್ದು, ಆಕೆಯನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ ಮಾಡಿ ಬಳಿಕ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ಪರಿಶೀಲನೆ ಮಾಡಿದ ಬಳಿಕ ಆರೋಪಿ ಕಾರ್ತಿಕ್‌ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ಶಾಸಕ ವೀರೇಂದ್ರ ಪಪ್ಪಿಯನ್ನು ಸೆಳೆಯಲು ಬಿಜೆಪಿ ಯತ್ನಸಿದೆ : ಸಂತೋಷ್‌ ಲಾಡ್‌

ಬೆಂಗಳೂರು, ಅ.10- ಬಿಜೆಪಿಯವರು ಯಾರನ್ನು ಯಾವಾಗ ಸೆಳೆಯುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ. ಅವರಿಗೆ ಅವರದೇ ಆದಂತಹ ತಂತ್ರಗಾರಿಕೆ ಇದೆ. ಕಾಂಗ್ರೆಸ್‌‍ನ ಶಾಸಕ ವೀರೇಂದ್ರ ಪಪ್ಪಿ ವಿರುದ್ಧವೂ ಅಂತಹ ಪ್ರಯತ್ನ ನಡೆದಿರಬಹುದು ಎಂದು ಕಾರ್ಮಿಕ ಸಚಿವ ಸಂತೋಷ್‌ಲಾಡ್‌ ಅನುಮಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌‍ನ ಶಾಸಕ ವೀರೇಂದ್ರ ಪಪ್ಪಿ ಅವರ ವಿರುದ್ಧ ಆರೋಪ ಮಾಡಿರುವುದು ರಾಜಕೀಯ ಕಾರಣಕ್ಕೆ. 40 ಕೆ.ಜಿ. ಚಿನ್ನ ಸಿಕ್ಕಿದೆ ಎಂದು ಹೇಳಲಾಗಿದೆೆ. ಈ ಹಿಂದೆ ಕಾಂಗ್ರೆಸ್‌‍ನಲ್ಲಿದ್ದ ಹಿಮಂತ್‌ ಬಿಸ್ವಾಶರ್ಮ ಅವರ ವಿರುದ್ಧ ಶಾರದಾ ಚಿಟ್‌ಫಂಡ್‌ ಹಗರಣ ಇತ್ತು. ಅದೇ ರೀತಿ ಮಹಾರಾಷ್ಟ್ರದಲ್ಲಿ ಅಜಿತ್‌ ಪವಾರ್‌ ವಿರುದ್ಧ ಸಾವಿರಾರು ಕೋಟಿ ರೂ.ಗಳ ಹಗರಣದ ಆರೋಪವಿತ್ತು. ಅವರನ್ನು ಬಿಜೆಪಿಗೆ ಸೇರಿಸಿಕೊಂಡರು ಈಗ ವಾಷಿಂಗ್‌ಪೌಡರ್‌ ನಿರ್ಮಾ ಹಾಕಿ ಸ್ವಚ್ಛಗೊಳಿಸಿದ್ದಾರೆಯೇ? ಎಂದು ಪ್ರಶ್ನಿಸಿದರು.

ವೀರೇಂದ್ರ ಪಪ್ಪಿ ಬಿಹಾರ ವಿಧಾನಸಭೆಯ ಚುನಾವಣೆಗಾಗಿ ಕಾಂಗ್ರೆಸ್‌‍ ಪಕ್ಷಕ್ಕೆ ದುಡ್ಡು ಕೊಟ್ಟಿಲ್ಲ. ಒಂದು ವೇಳೆ ಯಾರಾದರೂ ಆ ರೀತಿ ದುಡ್ಡು ಕೊಟ್ಟಿದ್ದರೆ ಪತ್ತೆ ಹಚ್ಚುವ ವ್ಯವಸ್ಥೆಗಳು ಮತ್ತು ಸಾಮರ್ಥ್ಯ ಕೇಂದ್ರ ಸರ್ಕಾರದ ಬಳಿ ಇವೆೆ. ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯ ಪೂರ್ಣ ಖರ್ಚನ್ನು ಅಜಿತ್‌ ಪವಾರ್‌ ನೋಡಿಕೊಂಡಿದ್ದರು ಎಂದು ಗಂಭೀರ ಆರೋಪ ಮಾಡಿದರು.

ಫೆಮಾ, ಇಡಿ ದಾಳಿ ಮಾಡಿಸಿ, ದುಡ್ಡು ಇರುವವರನ್ನು ಪತ್ತೆ ಹಚ್ಚಿ ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆ. ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳೇ ಅಜಿತ್‌ ಪವಾರ್‌ ವಿರುದ್ಧ ಆರೋಪ ಮಾಡಿದ್ದವು. ಈಗ ಅಜಿತ್‌ ಪವಾರ್‌ ಆರೋಪಿ ಅಲ್ಲವೇ ಎಂದು ಪ್ರಶ್ನಿಸಿದರು. ಭ್ರಷ್ಟಚಾರದ ಆರೋಪ ಇರುವವರನ್ನು ಬಿಜೆಪಿಗೆ ಸೇರಿಸಿಕೊಂಡು ತಮ ಬಳಿಯಿರುವ ವಾಷಿಂಗ್‌ಮೆಷಿನ್‌ವೊಂದಕ್ಕೆ ಹಾಕುತ್ತಾರೆ. ಅಲ್ಲಿಗೆ ಅವರು ಪ್ರಾಮಾಣಿಕರಾಗಿ ಸ್ವಚ್ಛಗೊಳ್ಳುತ್ತಾರೆ. ಭ್ರಷ್ಟಚಾರಿಗಳಾಗಿ ಉಳಿಯುವುದಿಲ್ಲ. ಈ ರೀತಿ 25 ನಾಯಕರನ್ನು ಸ್ವಚ್ಛಗೊಳಿಸಲಾಗಿದೆ ಎಂದು ಲೇವಡಿ ಮಾಡಿದರು.

ವಿಶ್ವದಲ್ಲಿ ಭಾರತ ಭ್ರಷ್ಟಚಾರ, ಆಭಿವ್ಯಕ್ತಿ ಸ್ವಾತಂತ್ರ್ಯ, ಹಸಿವಿನ ಸೂಚ್ಯಂಕ, ಪಾಸ್‌‍ಪೋರ್ಟ್‌ ರ್ಯಾಂಕಿಂಗ್‌ ಎಲ್ಲದರಲ್ಲೂ ಯಾವ ಸ್ಥಾನಮಾನದಲ್ಲಿದೆ ಎಂದು ಬಿಜೆಪಿಯವರು ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದರು. ಸಚಿವರಿಗೆ ಔತಣ ಕೂಟ ಆಯೋಜಿಸಿರುವುದು ಹೊಸದೇನಲ್ಲ. ಪ್ರತಿ ವರ್ಷವೂ ಮುಖ್ಯಮಂತ್ರಿಯವರು ಈ ರೀತಿ ಸಭೆ ನಡೆಸುತ್ತಾರೆ. ಅಲ್ಲಿ ಚರ್ಚೆ ಮಾಡುವುದು ಸಾಮಾನ್ಯ ಎಂದರು.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಶೇ. 80ರಷ್ಟು ಮುಗಿದಿದೆ. ಇದರಿಂದ ಮುಂದೆ ಉತ್ತಮ ಕೆಲಸಗಳಾಗುತ್ತವೆ. ಬಿಜೆಪಿಯವರು ಸಮಾಜ ಒಡೆಯುವ ಸಲುವಾಗಿ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ಅನಗತ್ಯವಾಗಿ ಆರೋಪ ಮಾಡಿದ್ದಾರೆ. ಕೇಂದ್ರ ಸರ್ಕಾರ ಇಡಬ್ಲ್ಯೂಎಸ್‌‍ ಅಡಿ ಮೇಲ್ವರ್ಗದವರಿಗಾಗಿ ಶೇ. 10 ರಷ್ಟು ಮೀಸಲಾತಿ ನೀಡಿರುವುದರಿಂದ ಸಮಾಜ ಒಡೆದಂತಾಗಿಲ್ಲವೇ ಎಂದು ಪ್ರಶ್ನಿಸಿದರು.

ಇಡಬ್ಲ್ಯೂಎಸ್‌‍ ಜಾರಿಗೊಳಿಸುವಂತೆ ಯಾರಾದರೂ ಕೇಳಿದರೇ?, ಅರ್ಜಿ ಹಾಕಿದ್ದರೆ?, ಎಲ್ಲಿಯಾದರೂ ಒಂದು ಕಡೆ ಪ್ರತಿಭಟನೆಗಳಾಗಿದ್ದವೆ? ಎಂದು ಪ್ರಶ್ನಿಸಿದ ಅವರು ರಾತ್ರೋರಾತ್ರಿ ಇಡಬ್ಲ್ಯೂಎಸ್‌‍ ಜಾರಿಗೊಳಿಸಿದ್ದೇಕೆ? ಇದರ ಬಗ್ಗೆ ಬಿಜೆಪಿಯವರು ಎಲ್ಲಿಯಾದರು ಪ್ರಶ್ನೆ ಮಾಡಿದ್ದಾರೆಯೇ? ಇದು ದೇಶದ ಸಮಸ್ಯೆ ಅಲ್ಲವೇ ಎಂದು ಕಿಡಿ ಕಾರಿದರು.

ಒಡಿಶಾದಿಂದ ರಂಜಿತಾಪ್ರಿಯದರ್ಶಿನಿ ಎಂಬ ಯುವತಿ ತಮ ಸ್ನೇಹಿತೆ ಕವಿತಾರೆಡ್ಡಿ ಅವರ ಜೊತೆ ಸೈಕಲ್‌ಯಾತ್ರೆಯಲ್ಲಿ ಬಂದು ತಮಗೆ ಒಂದು ವರ್ಷದ ಹಿಂದೆ ಮನವಿ ಕೊಟ್ಟು ಋತು ಚಕ್ರ ಸಂದರ್ಭದಲ್ಲಿ ದುಡಿಯುವ ಮಹಿಳೆಯರಿಗೆ ವೇತನ ಸಹಿತ ರಜೆ ನೀಡುವಂತೆ ಮನವಿ ಮಾಡಿದರು. ಅದರ ಕುರಿತು ಅಧ್ಯಯನ ನಡೆಸಲು ಸಮಿತಿ ರಚಿಸಿಲಾಗಿತ್ತು. ವರದಿ ಆಧರಿಸಿ, ನಿಯಮ ರೂಪಿಸಲಾಗಿದ್ದು, ಕಾನೂನು ತಿದ್ದುಪಡಿ ತರಲಾಗುತ್ತಿದೆ. ಇದರಿಂದ ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಬಿಗ್‌ಬಾಸ್‌‍ ಶೋ ನಡೆಸುತ್ತಿರುವ ಸ್ಟುಡಿಯೋದಲ್ಲಿ ಪರಿಸರ ಪಾಲನೆಯ ನಿಯಮಗಳ ಉಲ್ಲನೆಯಾಗಿತ್ತು. ಬಿಗ್‌ಬಾಸ್‌‍ ಶೋ ನಿಲ್ಲಿಸುವ ಉದ್ದೇಶ ಸರ್ಕಾರದ್ದಲ್ಲ. ನಟ್ಟುಬೋಲ್‌್ಟ ಹೇಳಿಕೆ ಹಳೆಯದಾಯಿತು. ಈಗ ಅದನ್ನು ಪ್ರಸ್ತಾಪಿಸುತ್ತಿರುವುದು ಅನಗತ್ಯ ಎಂದರು.

ಇಎಸ್‌‍ಐ ಯೋಜನೆಯಡಿ ವರ್ಷಕ್ಕೆ ಕೇಂದ್ರ ಸರ್ಕಾರಕ್ಕೆ 1200 ಕೋಟಿ ರೂ. ರಾಜ್ಯದಿಂದ ಹೋಗುತ್ತಿದೆ. ಅಲ್ಲಿಂದ ನಮಗೆ 400 ಕೋಟಿ ರೂ.ಗಳಿಗಿಂತಲೂ ಕಡಿಮೆ ಹಣ ಬರುತ್ತಿದೆ. ಹೆಚ್ಚಿನ ಹಣ ಪಡೆಯುವ ಸಲುವಾಗಿ ಇಎಸ್‌‍ಐ ಕಾರ್ಪೋರೇಷನ್‌ ರದ್ದುಗೊಳಿಸಿ, ಇಎಸ್‌‍ಐ ಸಂಸ್ಥೆಯನ್ನು ರಚಿಸಲಾಗಿದೆ. ಸಂಸದರು, ಕೇಂದ್ರ ಸಚಿವರಿಗೆ ಈ ವಿಚಾರವಾಗಿ ಪತ್ರ ಬರೆಯಲಾಗಿದೆ ಎಂದು ಹೇಳಿದರು.

50 ಸಾವಿರ ಕಾರ್ಮಿಕರು ಇರುವ ಕಡೆ ಇಎಸ್‌‍ಐ ಆಸ್ಪತ್ರೆ ಸ್ಥಾಪಿಸಬೇಕು ಎಂಬ ನಿಯಮ ಇದೆ. ಒಂದು ಜಿಲ್ಲೆಯಲ್ಲಿ ಅಗತ್ಯ ಸಂಖ್ಯೆಯ ನೋಂದಾಯಿತ ಕಾರ್ಮಿಕರು ಲಭ್ಯವಿಲ್ಲದಿದ್ದರೆ 2 ಜಿಲ್ಲೆಗಳನ್ನು ಸಂಯೋಜಿಸಿ, ಆಸ್ಪತ್ರೆ ನಿರ್ಮಿಸಿಕೊಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇನೆ ಎಂದರು.

ಮಹದೇವಪುರ ಕ್ಷೇತ್ರ ವಿಭಜನೆ ನಿರ್ಧಾರದ ವಿರುದ್ಧ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌‍

ಬೆಂಗಳೂರು, ಅ.10– ಮಹದೇವಪುರ ವಿಧಾನಸಭಾ ಕ್ಷೇತ್ರವನ್ನು ಗ್ರೇಟರ್‌ ಬೆಂಗಳೂರು ಆಡಳಿತವು ಬೆಂಗಳೂರು ಪೂರ್ವ ಮತ್ತು ದಕ್ಷಿಣ ನಗರ ಪಾಲಿಕೆಗಳ ನಡುವೆ ವಿಭಜಿಸುವ ನಿರ್ಧಾರದ ವಿರುದ್ಧ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿರುವ ಹೈಕೋರ್ಟ್‌ ಸರ್ಕಾರಕ್ಕೆ ನೋಟಿಸ್‌‍ ಜಾರಿ ಮಾಡಿದೆ.

ಮಹದೇವಪುರ ವಿಭಜನೆಯಲ್ಲಿ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್‌ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಹೆಚ್ಚಿನ ಭಾಗವನ್ನು ಬೆಂಗಳೂರು ಪೂರ್ವ ನಗರ ಪಾಲಿಕೆಗೆ ಮತ್ತು ಚಿಕ್ಕ ಭಾಗವನ್ನು ದಕ್ಷಿಣ ನಗರ ಪಾಲಿಕೆಗೆ ಸೇರ್ಪಡೆಗೊಳಿಸಲಾಗಿದ್ದು, ಇದು ಗ್ರೇಟ್‌ ಬೆಂಗಳೂರು ಆಡಳಿತ ಅಧಿನಿಯಮ 2024ರ ಸೆಕ್ಷನ್‌ 26(3)ರ ಉಲ್ಲಂಘನೆಯಾಗಿದೆ ಎಂದು ರಂಗನಾಥ್‌ ವಾದಿಸಿದ್ದರು.

ಮತದಾರರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ಇತರ ಕಾರ್ಯಕರ್ತರ ಆಕ್ಷೇಪಣೆಗಳ ನಡುವೆಯೂ ಅಂಬಲಿಪುರ, ಹರಳೂರು, ಕೈಲಾಂಡ್ರಹಳ್ಳಿ, ಕಾಸವನಹಳ್ಳಿ, ಕೆಪಿಸಿಎಲ್‌ ಲೇಔಟ್‌, ಜುನ್ನಸಂದ್ರ, ದೊಡ್ಡಕೋನಲ್ಲಿ ಸೇರಿದಂತೆ ಹಲವಾರು ಗ್ರಾಮ ಗಳನ್ನು ಪೂರ್ವ ಮತ್ತು ದಕ್ಷಿಣ ನಗರಪಾಲಿಕೆಗಳ ನಡುವೆ ವಿಭಜಿಸುವ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗಿದ್ದು, ಇದನ್ನು ಸರಿಪಡಿಸುವಂತೆ ಅವರು ನ್ಯಾಯಾಲಯವನ್ನು ಕೋರಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದ ವಿಭಾಗೀಯ ಪೀಠವು ಈ ನಿಟ್ಟಿನಲ್ಲಿ ವಿವರಣೆ ನೀಡುವಂತೆ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಿ ನೋಟಿಸ್‌‍ ನೀಡಿದೆ ಎಂದು ರಂಗನಾಥ್‌ ಅವರು ತಿಳಿಸಿದ್ದಾರೆ.