ಬೇಲೂರು,ಅ.8- ಗಣತಿಗೆಂದು ಶಿಕ್ಷಕಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ನಾಯಿಯೊಂದು ಅಟ್ಟಾಡಿಸಿ ಕಚ್ಚಿದ್ದರಿಂದ ಬಿದ್ದು ಗಾಯಗೊಂಡಿರುವ ಘಟನೆ ತಾಲೂಕಿನ ಗೆಂಡೇಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪಟ್ಟಣದಲ್ಲಿ ಮೂರು ದಿನಗಳ ಹಿಂದೆ ಮದ್ಯಾಹ್ನದ ಸಮಯದಲ್ಲಿ ಬೀದಿ ನಾಯಿ 6 ಜನರಿಗೆ ಕಚ್ಚಿ ಗಂಭಿರವಾಗಿ ಗಾಯಗೊಳಿಸಿದ್ದರಿಂದ ಎಲ್ಲ ಗಾಯಾಳುಗಳನ್ನು ಶಾಸಕ ಎಚ್.ಕೆ.ಸುರೇಶ್ ನೇತೃತ್ವದಲ್ಲಿ ಜಿಲ್ಲಾಸ್ಪತ್ರೆಗೆ ಕಳುಹಿಸಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಆದರೆ ಅದೇ ದಿನ ತಾಲೂಕಿನ ಗೆಂಡೇಹಳ್ಳಿ ಹಾಗೂ ಬಸ್ಕಲ್ನಲ್ಲಿ ಗಣತಿ ಮುಗಿಸಿಕೊಂಡು ಹಳೇ ಗೆಂಡೇಹಳ್ಳಿ ಗ್ರಾಮದಲ್ಲಿ ಸಂಜೆ 4 ಗಂಟೆ ಸಮಯದಲ್ಲಿ ಗಣತಿಗೆಂದು ಹೋದ ಗೆಂಡೇಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯ ಶಿಕ್ಷಕಿ ಲುಬ್ನಾಎಂಬುವವರು ತಮದ್ವಿಚಕ್ರ ವಾಹನದಲ್ಲಿ ಹೋದಂತಹ ಸಂದರ್ಭ ನಾಯಿಯೊಂದು ಇವರನ್ನು ಅಟ್ಟಾಡಿಸಿ ಬಂದು ಕಚ್ಚಿದ್ದರಿಂದ ಶಿಕ್ಷಕಿ ದ್ವಿಚಕ್ರ ವಾಹನದಿಂದಕೆಳಕ್ಕೆ ಬಿದ್ದಿದರಿಂದ್ದ ಎಡಗೈ ಮೂಳೆ ಮುರಿದಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಅವರನ್ನು ಕಳುಹಿಸಲಾಗಿದೆ. ವಿಷಯ ತಿಳಿದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್ ಮತ್ತುಇತರೆ ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಶಿಕ್ಷಕಿಯ ಆರೋಗ್ಯ ವಿಚಾರಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದತಾಲೂಕುಅಧ್ಯಕ್ಷ ಮಂಜುನಾಥ್ ಮಾತನಾಡಿ, ಎರಡು ದಿನಗಳ ಹಿಂದಷ್ಟೆ ಪಟ್ಟಣದಲ್ಲಿ ಶಿಕ್ಷಕಿಯೊಬ್ಬರ ಮೇಲೆ ನಾಯಿಗಳು ದಾಳಿ ಮಾಡಿದ ಘಟನೆ ಇನ್ನೂ ಮಾಸಿಲ್ಲ. ಅಷ್ಟರಲ್ಲಾಗಲೇ ತಾಲೂಕಿನ ನಾಗೇನಹಳ್ಳಿಯಲ್ಲಿ ಲತಾ, ಮತ್ತು ಗೆಂಡೇಹಳ್ಳಿಯಲ್ಲಿ ಲುಬ್ನಾರ ಮೇಲೆ ನಾಯಿ ದಾಳಿ ಮಾಡಿವೆ. ಇದರಿಂದ ಇತರೆ ಶಿಕ್ಷಕರು ಮಾನಸಿಕವಾಗಿ ನೊಂದಿದ್ದಾರೆ.
ಜತೆಗೆ ಈಗಾಗಲೇ ಸರ್ಕಾರ ನಿಗದಿಪಡಿಸಿರುವ ಗಣತಿಯನ್ನು ಶೇ. 90 ರಷ್ಟು ಮುಗಿಸಿದ್ದು, ಉಳಿದಿರುವ ಕೆಲವೇ ಮನೆಗಳಿಗೆ ತೆರಳುವ ಸಂದರ್ಭ ಇಂತಹ ಘಟನೆ ನಡೆಯುತಿದ್ದು, ಒಂಟಿ ಮನೆಗಳಿಗೆ ತೆರಳುವ ಸಂದರ್ಭದಲ್ಲಿ ಶಿಕ್ಷಕರು ಎಚ್ಚರಿಕೆ ವಹಿಸಬೇಕು ಎಂದರು. ಸರ್ಕಾರಿ ನೌಕರರ ಸಂಘದ ಮಾಜಿ ನಿರ್ದೇಶಕ ಗಂಗಾಧರ್ ಇದ್ದರು.
ಮೈಸೂರು, ಅ. 8- ನನ್ನ ಜೀವಕ್ಕೆ ಅಪಾಯವಿದೆ ಎಂದು ಈ ಹಿಂದೆಯೇ ವೆಂಕಟೇಶ್ ಪೊಲೀಸರಿಗೆ ತಿಳಿಸಿದ್ದನೆಂಬ ಮಾಹಿತಿ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ. ಹಲವು ದಿನಗಳಿಂದ ಓಡಾಡುತ್ತಿದ್ದ ಸ್ಥಳಗಳಲ್ಲಿ ನಿಂತು ನನ್ನ ಚಲನ-ವಲನಗಳನ್ನು ವೀಕ್ಷಿಸಿ ಕೊಲೆ ಮಾಡಲು ಹೊಂಚು ಹಾಕುತ್ತಿದ್ದರು ಎಂದು ವೆಂಕಟೇಶ್ ಪೋಲಿಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಲಿಲ್ಲ. ಹಾಗಾಗಿ ಹತ್ಯೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಹಿಂದೆ ಗುಂಪೊಂದು ವೆಂಕಟೇಶ್ನ ಮೇಲೆ ಎರಡು ಬಾರಿ ಹಲ್ಲೆ ನಡೆಸಿ ಕೊಲೆಗೆ ವಿಲ ಯತ್ನ ನಡೆಸಿತ್ತು. ಆದರೆ ಇದೀಗ ಮೂರನೇ ಬಾರಿಗೆ ಜನನಿಬಿಡ ಪ್ರದೇಶದಲ್ಲೇ ದಾಳಿ ಮಾಡಿ ಆತನನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದೆ.
ಮೈಸೂರಿನ ದಸರಾ ವಸ್ತುಪ್ರದರ್ಶನ ರಸ್ತೆಯಲ್ಲಿ ಕಾರು ಅಡ್ಡಗಟ್ಟಿ ವ್ಯಕ್ತಿಯನ್ನು ಹೊರಕ್ಕೆಳೆದು ಮಚ್ಚು-ಲಾಂಗ್ ಗಳಿಂದ ಕೊಚ್ಚಿ ಕೊಲೆಗೈದ ದೃಶ್ಯವನ್ನು ಅಲ್ಲಿದ್ದ ಸಾರ್ವಜನಿಕರು ೇಟೋ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಹರಿ ಬಿಟ್ಟಿದ್ದಾರೆ. ಆದರೆ ವೀಡಿಯೋ ಮಾಡಲು ಪ್ರಯತ್ನಿನಿಸಿದರಾದರೂ ದುಷ್ಕರ್ಮಿಗಳು ಅವರತ್ತ ಲಾಂಗ್ ತೋರಿದ್ದರಿಂದ ಹೆದರಿ, ರೆಕಾರ್ಡ್ ಮಾಡಲಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿ ರುವ ನಜರ್ ಬಾದ್ ಠಾಣೆ ಪೋಲಿಸರು ಸ್ಥಳ ಮಹಜರು ನಡೆಸಿ, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದರು.
ಘಟನಾ ಸ್ಥಳದಲ್ಲಿ ಸಾರ್ವಜನಿಕರು ತೆಗೆದಿರುವ ೇಟೋ ಹಾಗೂ ಆ ಮಾರ್ಗದ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಾಗಳ ಟೇಜ್ಗಳ ಸುಳಿವಿನ ಜಾಡು ಹಿಡಿದ ಪೋಲಿಸರು ದುಷ್ಕರ್ಮಿಗಳ ಪತ್ತೆಗೆ ಎರಡು ತನಿಖಾ ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಆರೋಪಿಗಳ ಬಗ್ಗೆ ಕೆಲ ಮಾಹಿತಿಗಳನ್ನು ಕಲೆ ಹಾಕಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಬೆಂಗಳೂರು,ಅ.8– ನಗರ ಪೊಲೀಸರು ಹಾಗೂ ಎಸ್ಒಸಿಒ ತಂಡಗಳು ಕಾರ್ಯಾಚರಣೆ ನಡೆಸಿ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಆರು ಮಂದಿಯನ್ನು ಬಂಧಿಸಿ 23.84 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಸಿಬಿ ಮಾದಕ ದ್ರವ್ಯ ನಿಗ್ರಹ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ 11.81 ಕೋಟಿ ರೂ. ಮೌಲ್ಯದ 7.176 ಕೆಜಿ ಹೈಡ್ರೋ ಗಾಂಜಾ, 1.399 ಕೆಜಿ ಎಂಡಿಎಂಎ ಕ್ರಿಸ್ಟಲ್, 2.30 ಕೆಜಿ ಅಫೀಮ್ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಉತ್ತರ ಹಾಗೂ ಪೂರ್ವವಿಭಾಗ ಮತ್ತು ಕೊತ್ತನೂರು ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ 12.03 ಕೋಟಿ ಮೌಲ್ಯದ 4.815 ಕೆಜಿ ಎಂಡಿಎಂಎ ಕ್ರಿಸ್ಟಲ್ ವಶಪಡಿಸಿಕೊಂಡಿದ್ದಾರೆ.
ರಾಜಸ್ಥಾನದ ಡ್ರಗ್ ಪೆಡ್ಲರ್ ಬಂಧನ: ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇದಿತ ಮಾದಕ ವಸ್ತು ಡ್ರಗ್ ಪೆಡ್ಲಿಂಗ್ ಕುರಿತು ಖಚಿತ ಮಾಹಿತಿ ಮೇರೆಗೆ, ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸ್ ಇನ್್ಸಪೆಕ್ಟರ್ ಮಂಜಪ್ಪ ರವರು ಪ್ರಕರಣ ದಾಖಲಿಸಿ, ಸಿಬ್ಬಂದಿಯೊಂದಿಗೆ ದಾಳಿ ನಡೆಸಿ, ರಾಜಸ್ಥಾನ ಮೂಲದ ಡ್ರಗ್ ಪೆಡ್ಲರ್ನನ್ನು ಬಂಧಿಸಿದ್ದಾರೆ.
ಕಳೆದ ವರ್ಷ ಬೆಂಗಳೂರಿಗೆ ಬಂದು ಚಾಲಕರಾಗಿ ಕೆಲಸ ಮಾಡುತ್ತಿದ್ದು, ಈ ಆದಾಯದಿಂದ ಖರ್ಚು ನಿರ್ವಹಿಸಲು ಸಾಧ್ಯವಾಗದೇ, ತನ್ನ ಸಂಬಂಧಿಯ ಸಹಾಯದೊಂದಿಗೆ ಕಳೆದ 3 ತಿಂಗಳಿಂದ ನಿಷೇದಿತ ಮಾದಕ ವಸ್ತು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.
ಆರೋಪಿಯಿಂದ 1 ಕೆ.ಜಿ 399 ಗ್ರಾಂ ಎಂಡಿಎಎಂಎ ಕ್ರಿಸ್ಟಲ್ ಮತ್ತು 2 ಕೆ.ಜಿ 30 ಗ್ರಾಂ ಅಫೀಮ್, ಒಟ್ಟು ಅಂದಾಜು 4 ಕೋಟಿ ಮೌಲ್ಯದ ಮಾದಕ ವಸ್ತುಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಂಚೆ ಕಚೇರಿಗೆ ಬರುತ್ತಿದ್ದ ಪಾರ್ಸೆಲ್: ಕೆ.ಜಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿದೇಶಿ ಅಂಚೆ ಕಚೇರಿಗೆ ಶಂಕಾಸ್ಪದ ಪಾರ್ಸೆಲ್ ಬಂದಿರುವ ಬಗ್ಗೆ ಖಚಿತ ಮಾಹಿತಿಯನ್ನು ಸಂಗ್ರಹಿಸಿ ಸ್ನಿಫರ್ ಶ್ವಾನಗಳ ಸಹಾಯದಿಂದ ಕಚೇರಿಗೆ ತೆರಳಿ ಪರಿಶೀಲಿಸಿ 3 ಕೆ.ಜಿ ಹೈಡ್ರೋ ಗಾಂಜಾ ಹಾಗೂ ಇತರೆ ವಸ್ತುಗಳು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 3.81 ಕೋಟಿ ರೂ. ಗಳೆಂದು ಅಂದಾಜಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಕೆಲವು ಅಪರಿಚಿತ ಆರೋಪಿಗಳು ಥೈಲ್ಯಾಂಡ್ ಮತ್ತು ಜರ್ಮನಿ ದೇಶಗಳಿಂದ ನಕಲಿ ಹೆಸರಿನಲ್ಲಿ ಕ್ರಿಪ್ಟೋ ಕರೆನ್ಸಿ ಮೂಲಕ ಹೈಡ್ರೋ ಗಾಂಜಾವನ್ನು ಖರೀದಿಸಿ, ಬೆಂಗಳೂರಿನಲ್ಲಿ ಮಾದಕ ವಸ್ತು ಪೆಡ್ಲಿಂಗ್ ಮಾಡುತ್ತಿದ್ದರೆಂಬುದು ಬೆಳಕಿಗೆ ಬಂದಿದೆ. ಮಾದಕ ವಸ್ತುಗಳನ್ನು ಆರ್ಡರ್ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಇದೇ ವ್ಯಾಪ್ತಿಯ ಮತ್ತೊಂದು ಪ್ರಕರಣದಲ್ಲಿ ವಿದೇಶಿ ಅಂಚೆ ಕಚೇರಿಯಲ್ಲಿ ನಿಷೇಧಿತ ಮಾದಕ ವಸ್ತುಗಳು ಇರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇರೆಗೆ, ಸ್ನಿರ್ ಶ್ವಾನಗಳ ಸಹಾಯದಿಂದ ಸಾಗಾಟು ಸರಕುಗಳಿಂದ ಬಂದ ಶಂಕಾಸ್ಪದ ಪಾರ್ಸೆಲ್ಗಳನ್ನು ಗುರುತಿಸಿ, 4 ಕೆ.ಜಿ. ಹೈಡ್ರೋ ಗಾಂಜಾ ಹಾಗೂ ಪಾರ್ಸೆಲ್ ಪ್ಯಾಕಿಂಗ್ಗೆ ಬಳಸಿದ ವಸ್ತುಗಳು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಅಂದಾಜು ಮೌಲ್ಯ ಸುಮಾರು 4 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.
ಇಬ್ಬರು ವಿದೇಶಿ ಮಹಿಳೆ ಸೆರೆ: ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯ ಎನ್.ಜಿ.ಗೊಲ್ಲಹಳ್ಳಿ ಗ್ರಾಮದ ಬಳಿ ಇರುವ ಅಪಾರ್ಟ್ಮೆಂಟ್ನಲ್ಲಿ, ವಿದೇಶಿ ಮೂಲದ ಮಹಿಳೆಯರಿಬ್ಬರು ಡ್ರಗ್ ಪೆಂಡ್ಲಿಂಗ್ನಲ್ಲಿ ತೊಡಗಿರುತ್ತಾರೆಂಬ ಮಾಹಿತಿ ಮೇರೆಗೆ ಸ್ಥಳದ ಮೇಲೆ ದಾಳಿ ಮಾಡಿ ಮಹಿಳೆಯರಿಬ್ಬರನ್ನು ವಶಕ್ಕೆ ಪಡೆದು 12.03 ಕೋಟಿ ರೂ. ಮೌಲ್ಯದ 4 ಕೆ.ಜಿ 815 ಗ್ರಾಂ ಎಂಡಿಎಎಂಎ ಕ್ರಿಸ್ಟಲ್ನ್ನು ವಶಪಡಿಸಿಕೊಳ್ಳಲಾಗಿದೆ.
ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ದಕ್ಷಿಣ, ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿ ಮತ್ತು ಸಿಸಿಬಿ ತಂಡಗಳು ಕಾರ್ಯನಿರ್ವಹಿಸಿರುತ್ತಾರೆ.
35 ವಿದೇಶಿ ಪ್ರಜೆಗಳು ಸೇರಿ 1048 ಡ್ರಗ್ ಪೆಡ್ಲರ್ಗಳ ಬಂಧನ : ಬೆಂಗಳೂರು,ಅ.8- ಪ್ರಸಕ್ತ ವರ್ಷದ ಜನವರಿ 1 ರಿಂದ ಈ ದಿನದ ವರೆಗೆ ಬೆಂಗಳೂರು ನಗರ ಪೊಲೀಸರು 35 ವಿದೇಶಿ ಪ್ರಜೆಗಳು ಸೇರಿದಂತೆ 1048 ಆರೋಪಿಗಳನ್ನು ಬಂಧಿಸಿ 81.21 ಕೋಟಿರೂ. ಮೌಲ್ಯದ ನಿಷೇದಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 771 ಪ್ರಕರಣಗಳಲ್ಲಿ 1486.55 ಕೆಜಿ ವಿವಿಧ ಮಾದಕ ವಸ್ತು ಗಳನ್ನು ವಶಪಡಿಸಿಕೊಳ್ಳಲಾಗಿದೆ.ಡ್ರಗ್ ಪೆಡ್ಲರ್ಗಳು, ವಿತರಕರು ಮತ್ತು ಅಂತರರಾಜ್ಯ ಜಾಲಗಳ ವಿರುದ್ಧ ಗುರುತರವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.
ವಿಭಾಗವಾರು ಪೊಲೀಸ್ ತಂಡಗಳು: ಎಲ್ಲಾ ವಿಭಾಗಗಳು, ಶಾಖೆಗಳು (ಸಿಸಿಬಿ, ನಾಗರಿಕ ಪೊಲೀಸ್, ಸಿಇಆರ್, ಪೊಲೀಸ್ ಶ್ವಾನದಳ, (ಸೋಕೋ) ಎಸ್.ಒ.ಸಿ.ಒ) ಒಕ್ಕೂಟವಾಗಿ ಡ್ರಗ್ ಪೆಡ್ಲರ್ಗಳನ್ನು ಬಂಧಿಸಲು ಕೇಂದ್ರೀಕೃತ ಮತ್ತು ವಿತರಿತ ಪ್ರಯತ್ನಗಳನ್ನು ಕೈಗೊಂಡಿವೆ.
ನಕಾಬಂದಿ ಮತ್ತು ಪ್ರದೇಶ ಆಧಿಪತ್ಯ: ಅನಿಯಮಿತವಾಗಿ ಸ್ಥಾಪಿಸಲಾದ ನಕಾಬಂದಿ ತಪಾಸಣೆ ಕೇಂದ್ರಗಳು ಮತ್ತು ಪ್ರದೇಶ ಆಧಿಪತ್ಯ ಅಭ್ಯಾಸಗಳಿಂದ ಪೆಡ್ಲರ್ಗಳ ವಿರುದ್ಧ ಕ್ರಮಕ್ಕೆ ಅಮೂಲ್ಯವಾದ ಮಾಹಿತಿ ದೊರೆತಿರುತ್ತದೆ.
ಗುಪ್ತಚರ ಸಂಗ್ರಹಣೆ: ಮಾನವ ಗುಪ್ತಚರ ಮತ್ತು ತಾಂತ್ರಿಕ ಮೂಲಗಳನ್ನು ಬಳಸಿಕೊಂಡು, ಅಕ್ರಮ ಚಟುವಟಿಕೆಗಳನ್ನು ಪತ್ತೆಹಚ್ಚುವುದು ಮತ್ತು ತಡೆಗಟ್ಟುವುದು.
ಸೋಶಿಯಲ್ ಮೀಡಿಯಾ ನಿಗಾ: ನಿಷೇದಿತ ಮಾದಕ ವಸ್ತು ಮಾರಾಟ ಅಥವಾ ಪ್ರಚಾರಕ್ಕಾಗಿ ಬಳಸಲಾಗುವ ರ್ಸೇಸ್ ವೆಬ್ ಮತ್ತು ಡಾರ್ಕ್ನೆಟ್ ವೇದಿಕೆಗಳ ಕುರಿತು ನಿರಂತರ ಮೇಲ್ವಿಚಾರಣೆ ಮಾಡಲಾಗುತ್ತವೆ.
ಸಂಸ್ಥಾಂತರ ಸಂಯೋಜನೆ: ಎ್ಆರ್ಆರ್ಒ, ಡಿಆರ್ಐ, ಎನ್ಸಿಬಿ ಮತ್ತು ಇತರ ಸಂಸ್ಥೆಗಳೊಂದಿಗೆ ನೇರ ಮಾಹಿತಿಯ ವಿನಿಮಯ ಮತ್ತು ಸಂಯುಕ್ತ ಕಾರ್ಯಾಚರಣೆ. ವಿದೇಶಿ ಪ್ರಜೆಗಳು ತಮ ನಿವಾಸಗಳಲ್ಲಿ ವಾಸಿಸುತ್ತಿರುವ ಬಗ್ಗೆ ಕಡ್ಡಾಯವಾಗಿ ಮಾಹಿತಿ ನೀಡದ ಮನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ಇದರಿಂದ ತಮ ತಮ ಆವರಣ,ಸ್ಥಳಗಳಲ್ಲಿ ಮಾದಕ ವಸ್ತು ಹರಡುವುದಕ್ಕೆ ಬಳಸುವುದನ್ನು ತಡೆಗಟ್ಟಲಾಗುತ್ತದೆ.
ಸಮುದಾಯ ಮತ್ತು ಸಂಸ್ಥಾತಕ ಸಹಭಾಗಿತ್ವ: ಶಾಲೆಗಳು, ಕಾಲೇಜುಗಳು, ಎನ್ಜಿಒಗಳು ಮತ್ತು ನಾಗರಿಕ ಸಂಘಟನೆಗಳ ಸಹಕಾರದೊಂದಿಗೆ ಜಾಗೃತಿ ಅಭಿಯಾನಗಳು ಮತ್ತು ಮಾದಕ ವಸ್ತು ದುರ್ಬಳಕೆಯನ್ನು ತಡೆಯಲು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿವೆ.ಮಾದಕ ವಸ್ತು ದುರ್ಬಳಕೆ, ಪ್ರೋತ್ಸಾಹ ಅಥವಾ ಪರೋಕ್ಷವಾಗಿ ಮಾರಾಟ ಮಾಡುವ ವ್ಯಕ್ತಿಗಳ ವಿರುದ್ಧ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ಅವರು ಎಚ್ಚರಿಸಿದ್ದಾರೆ. ನಮ ಬೆಂಗಳೂರನ್ನು ಸುಭದ್ರ ಮತ್ತು ಮಾದಕ ಮುಕ್ತ ನಗರವಾಗಿಸೋಣ ಹಾಗಾಗಿ ಸಾರ್ವಜನಿಕರೆಲ್ಲರೂ ಸಹಕರಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ.
ಬೆಂಗಳೂರು, ಅ.8– ಬಿಗ್ಬಾಸ್ ರಿಯಾಲಿಟಿ ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಮನೋರಂಜನೆ ಹಾಗೂ ಉದ್ಯೋಗದ ಸೃಷ್ಟಿಯ ದೃಷ್ಟಿಯಿಂದ ಬಿಗ್ಬಾಸ್ಗೆ ಮತ್ತೊಂದು ಅವಕಾಶ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಗ್ಬಾಸ್ ಶೋ ಅನ್ನು ನಾನೇ ಉದ್ಘಾಟನೆ ಮಾಡಿದ್ದೇನೆ. ನನಗೆ ಈ ವಿಚಾರದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಾಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದರು.
ಬಿಗ್ಬಾಸ್ ಶೋ ನಡೆಯದಂತೆ ಸಚಿವರು ನಟ್ಟುಬೋಲ್್ಟ ಟೈಟ್ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಆರೋಪಕ್ಕೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್ ಅವರು ಮಾಡುತ್ತಿರುವುದೆಲ್ಲಾ ರಾಜಕೀಯ ಎಂದರು. ಕುಮಾರಸ್ವಾಮಿಯಾದರೂ ಟ್ವೀಟ್ ಮಾಡಲಿ ಅಥವಾ ಮೇಲಿನವವರನ್ನಾದರೂ ಕರೆ ತಂದು, ಟೀಕೆ ಮಾಡಿಸಲಿ ನಾನು ಅದಕ್ಕೆ ಹೆದರುವುದಿಲ್ಲ. ನನ್ನನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ ನೆಮದಿಯೇ ಇರುವುದಿಲ್ಲ ಎಂದು ತಿರುಗೇಟು ನೀಡಿದರು.
ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ತೆಗೆದುಕೊಂಡ ಕ್ರಮಗಳ ಬಗ್ಗೆ ನಾನು ಮಾಹಿತಿ ಪಡೆದಿದ್ದೇನೆ. ಉದ್ಯೋಗ ಸೃಷ್ಟಿ ಬಹಳ ಮುಖ್ಯ. ಮನೋರಂಜನಾ ಚಟುವಟಿಕೆಗಳು ಮುಂದುವರಿಯಬೇಕು. ಜಾಲಿವುಡ್ ಸ್ಟುಡಿಯೋದವರು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಾವಳಿಗಳನ್ನು ಪಾಲಿಸಲಿ, ತಪ್ಪುಗಳನ್ನು ತಿದ್ದಿಕೊಳ್ಳಲಿ ಎಂದರು.
ಬಿಗ್ಬಾಸ್ ಶೋಗೆ ಮತ್ತೊಂದು ಅವಕಾಶ ನೀಡಬೇಕೆಂದು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಿಗೆ ಸಲಹೆ ನೀಡಿದ್ದೇನೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರ ಜೊತೆಯೂ ನಿನ್ನೆ ರಾತ್ರಿ ತಾವು ಚರ್ಚೆ ನಡೆಸಿದ್ದಾಗಿ, ಹೇಳಿದರು.
ಏನೋ ತಪ್ಪುಗಳಾಗಿರುತ್ತವೆ. ಸರಿಪಡಿಸಿಕೊಳ್ಳಲಿ ಖಾಸಗಿ ಸಂಸ್ಥೆಯ ಹೂಡಿಕೆಗಳು ರಾಜ್ಯಕ್ಕೆ ಬೇಕಿದೆ ಎಂದು ಸಮರ್ಥಿಸಿಕೊಂಡರು.ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಪ್ರಕರಣ ಬಹಳ ತಪ್ಪು. ಯಾರೇ ಇರಲಿ ನ್ಯಾಯದಾನ ನೀಡುವ ಸ್ಥಾನದಲ್ಲಿ ಕುಳಿತಿದ್ದಾಗ ಅವರನ್ನು ಗೌರವಿಸಬೇಕು. ಅಲ್ಲಿ ಧರ್ಮ ವಿಚಾರ ತಂದು ಅಧರ್ಮ ಮಾಡುವುದು ಅಕ್ಷಮ್ಯ ಎಂದರು.
ನ್ಯಾಯಮೂರ್ತಿಗಳು ಶೂ ಎಸೆದ ವ್ಯಕ್ತಿಯ ಮೇಲೆ ಕ್ರಮಕೈಗೊಳ್ಳದಂತೆ ಹೇಳಿದ್ದರೂ, ಸರ್ಕಾರ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು. ಮುಂದೆ ಈ ರೀತಿಯಾಗದಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.
ಬೆಂಗಳೂರಿನ ಹಿತಾಸಕ್ತಿಗೆ ಅನುಗುಣವಾಗಿ ಸುರಂಗ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಇದರಿಂದ ನಗರದ ಹೃದಯ ಭಾಗದಲ್ಲಿರುವ ಲಾಲ್ಬಾಗ್ಗೆ ಯಾವುದೇ ಹಾನಿಯಾಗುವುದಿಲ್ಲ. ಲಾಲ್ಬಾಗ್ ಪಾವಿತ್ರ್ಯ ಹಾಗೂ ಐತಿಹಾಸಿಕ ಹಿನ್ನೆಲೆ ಬಗ್ಗೆ ನಮಗೂ ಅರಿವಿದೆ. ಮುಂದಿನ ಶನಿವಾರ ಅಥವಾ ಭಾನುವಾರ ಎಲ್ಲಾ ಅಧಿಕಾರಿಗಳ ಜೊತೆ ನಾನೇ ಖುದ್ದಾಗಿ ಲಾಲ್ಬಾಗ್ಗೆ ಭೇಟಿ ನೀಡಿ, ಯಾವ ಜಾಗದಲ್ಲಿ ಕಾಮಗಾರಿ ನಡೆಯುತ್ತದೆ ಎಂದು ಪರಿಶೀಲಿಸುತ್ತೇನೆ. ಈ ವಿಷಯವಾಗಿ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದರು. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಅವರ ವಿವೇಚನಾಧಿಕಾರಕ್ಕೆ ಸೇರಿದೆ. ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.
ನವದೆಹಲಿ, ಅ. 8 (ಪಿಟಿಐ)- ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಗಣ್ಯರು ವಾಯುಸೇನೆಯ ಎಲ್ಲಾಯೋಧರು, ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳಿಗೆ ವಾಯುಪಡೆಯ ದಿನದಂದು ಶುಭಾಶಯ ಕೋರಿದರು ಮತ್ತು ಈ ಪಡೆ ತನ್ನ ಶಕ್ತಿ ಮತ್ತು ಪ್ರತಿಯೊಂದು ಸವಾಲನ್ನು ಎದುರಿಸುವ ಸಿದ್ಧತೆಯಿಂದ ದೇಶವನ್ನು ಹೆಮ್ಮೆಪಡುವಂತೆ ಮಾಡಿದೆ ಎಂದು ಹೇಳಿದ್ದಾರೆ.
ದೇಶದ ವಾಯು ಯೋಧರು ನಮ್ಮ ಆಕಾಶವನ್ನು ರಕ್ಷಿಸುತ್ತಾರೆ ಮತ್ತು ವಿಪತ್ತುಗಳು ಮತ್ತು ಮಾನವೀಯ ಕಾರ್ಯಾಚರಣೆಗಳ ಸಮಯದಲ್ಲಿ ದಣಿವರಿಯದ ಸಮರ್ಪಣೆಯೊಂದಿಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಾರೆ ಎಂದು ಮುರ್ಮು ಎಕ್್ಸ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ವಾಯುಪಡೆಯ ದಿನದಂದು ವಾಯುಪಡೆಯ ಸಿಬ್ಬಂದಿಗೆ ಶುಭಾಶಯ ಕೋರಿದರು ವಾಯುಪಡೆ ದಿನದಂದು ಎಲ್ಲಾ ಧೈರ್ಯಶಾಲಿ ವಾಯು ಯೋಧರು ಮತ್ತು ಅವರ ಕುಟುಂಬಗಳಿಗೆ ಶುಭಾಶಯಗಳು. ಭಾರತೀಯ ವಾಯುಪಡೆಯು ಶೌರ್ಯ, ಶಿಸ್ತು ಮತ್ತು ನಿಖರತೆಯನ್ನು ಸಾರುತ್ತದೆ. ಅತ್ಯಂತ ಸವಾಲಿನ ಸಂದರ್ಭಗಳಲ್ಲಿಯೂ ಸೇರಿದಂತೆ ನಮ್ಮ ಆಕಾಶವನ್ನು ರಕ್ಷಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮೋದಿ ಹೇಳಿದರು.ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಅವರ ಪಾತ್ರವು ತುಂಬಾ ಶ್ಲಾಘನೀಯವಾಗಿದೆ ಎಂದು ಮೋದಿ ಹೇಳಿದರು, ಅವರ ಬದ್ಧತೆ, ವೃತ್ತಿಪರತೆ ಮತ್ತು ಅದಮ್ಯ ಮನೋಭಾವವು ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಪಡುವಂತೆ ಮಾಡುತ್ತದೆ ಎಂದು ಪ್ರತಿಪಾದಿಸಿದರು.
ಅದೇ ರೀತಿ ಶಾ ಮತ್ತಿತರ ಗಣ್ಯರು ವಾಯುಪಡೆಯ ವಾರ್ಷಿಕೋತ್ಸವದಂದು ಶುಭಾಷಯ ಕೋರಿದ್ದಾರೆ.ವಾಯು ಯೋಧರು ಮಾಡಿದ ತ್ಯಾಗಗಳನ್ನು ಸ್ಮರಿಸಲು ಅಕ್ಟೋಬರ್ 8 ರಂದು ವಾಯುಪಡೆಯ ದಿನವನ್ನು ಆಚರಿಸಲಾಗುತ್ತದೆ.ವಾಯುಪಡೆಯ ದಿನದಂದು ಎಲ್ಲಾ ವಾಯು ಯೋಧರು, ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಹೃತ್ಪೂರ್ವಕ ಶುಭಾಶಯಗಳು! ಭಾರತೀಯ ವಾಯುಪಡೆ ಯಾವಾಗಲೂ ಧೈರ್ಯ, ಬದ್ಧತೆ ಮತ್ತು ಶ್ರೇಷ್ಠತೆಯನ್ನು ಪ್ರದರ್ಶಿಸಿದೆ. ನಮ್ಮ ವಾಯು ಯೋಧರು ನಮ್ಮ ಆಕಾಶವನ್ನು ರಕ್ಷಿಸುತ್ತಾರೆ ಮತ್ತು ವಿಪತ್ತುಗಳು ಮತ್ತು ಮಾನವೀಯ ಕಾರ್ಯಾಚರಣೆಗಳ ಸಮಯದಲ್ಲಿ ದಣಿವರಿಯದ ಸಮರ್ಪಣೆಯೊಂದಿಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಾರೆ.
ನಮ್ಮ ವಾಯುಪಡೆಯು ತನ್ನ ಶಕ್ತಿ ಮತ್ತು ಪ್ರತಿ ಸವಾಲನ್ನು ಎದುರಿಸುವ ಸಿದ್ಧತೆಯಿಂದ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ. ಭವಿಷ್ಯದ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸಿಗಾಗಿ ಭಾರತೀಯ ವಾಯುಪಡೆಗೆ ನಮ ಶುಭಾಷಯಗಳು ಎಂದು ಗಣ್ಯರು ಅಭಿನಂದಿಸಿದ್ದಾರೆ.
ಬೆಂಗಳೂರು,ಅ.8-ಜಾತಿಗಣತಿ ಹೆಸರಿನಲ್ಲಿ ಹತ್ತು ವರ್ಷಗಳ ಹಿಂದೆಯೇ 150 ಕೋಟಿ ರೂಪಾಯಿ ಹಣವನ್ನು ಪೋಲು ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಅದಕ್ಕಿಂತಲೂ ಹೆಚ್ಚಿನ ಸಾರ್ವಜನಿಕ ಹಣವನ್ನು ಅಪವ್ಯಯ ಮಾಡಲು ಹೊರಟಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲ ತಾಣ ಎಕ್್ಸನಲ್ಲಿ ಪೋಸ್ಟ್ ಮಾಡಿರುವ ಅವರು, ಜಾತಿಗಣತಿ ನಡೆಸಲು ಎಷ್ಟು ಸಮಯ ಬೇಕು ಎನ್ನುವ ಬಗ್ಗೆ ಪೂರ್ವಯೋಜನೆ ಇಲ್ಲ? ಜಾತಿಗಣತಿಯಲ್ಲಿ ಯಾವ ಪ್ರಶ್ನೆ ಕೇಳಬೇಕು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಜಾತಿಗಣತಿಗೆ ಶಿಕ್ಷಕರನ್ನು ನಿಯೋಜನೆ ಮಾಡಿದರೆ ಸರ್ಕಾರಿ ಶಾಲೆಗಳಲ್ಲಿ ಯಾರು? ಪಾಠ ಮಾಡುತ್ತಾರೆ ಎನ್ನುವ ಬಗ್ಗೆ ಯೋಚನೆ ಮಾಡಲಿಲ್ಲ ಎಂದು ಆರೋಪಿಸಿದ್ದಾರೆ.
ಯಾವುದೇ ಪೂರ್ವಸಿದ್ಧತೆ, ರೂಪುರೇಷೆ, ಗೊತ್ತು-ಗುರಿ ಇಲ್ಲದೆ, ಕೇವಲ ರಾಜಕೀಯ ತೆವಲಿಗೆ ಮಾಡುತ್ತಿರುವ ಈ ಜಾತಿಗಣತಿಯಿಂದ ಕನ್ನಡಿಗರಿಗೆ ನಯಾ ಪೈಸೆ ಉಪಯೋಗವಿಲ್ಲ. ಕಾಂಗ್ರೆಸ್ ಸರ್ಕಾರ, ಈಗ ಮತ್ತೊಮ್ಮೆ 650 ಕೋಟಿ ರೂಪಾಯಿ ಕನ್ನಡಿಗರ ತೆರಿಗೆ ಹಣವನ್ನು ಬೇಕಾಬಿಟ್ಟಿ ಪೋಲು ಮಾಡುತ್ತಿದೆ ಎಂದು ವಾಗ್ದಳಿ ನಡೆಸಿದ್ದಾರೆ.
ಬೆಲೆ ಇಳಿಕೆ ಯಾವಾಗ? ಮತ್ತೊಂದು ಪೋಸ್ಟ್ ನಲ್ಲಿ ಕಳೆದ ಎರಡು ವರ್ಷಗಳಿಂದ ಸತತವಾಗಿ ಏರಿಸಿರುವ ಹಾಲು, ಪೆಟ್ರೋಲ್, ಡಿಸೇಲ್, ನೀರು, ವಿದ್ಯುತ್ ಬೆಲೆಯನ್ನು ಇಳಿಸುವುದು ಯಾವಾಗ? ಎಂದು ಅಶೋಕ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಗ್ಯಾರಂಟಿ ಸಿದ್ದರಾಮಯ್ಯ ಟ್ಯಾಕ್್ಸ (ಜಿಎಸ್ ಟಿ) ಎಂದು ವ್ಯಂಗ್ಯವಾಡಿರುವ ಅಶೋಕ್, ಕಾಂಗ್ರೆಸ್ ಸರ್ಕಾರದಿಂದ ಕನ್ನಡಿಗರಿಗೆ ಮುಕ್ತಿ ಯಾವಾಗ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಎಸ್ಟಿ ಸುಧಾರಣೆ ನಂತರ ದಿನಬಳಕೆ ವಸ್ತುಗಳಿಂದ ಹಿಡಿದು ಬೈಕು-ಕಾರುಗಳವರೆಗೆ ದೇಶಾದ್ಯಂತ ವ್ಯಾಪಾರ ವಹಿವಾಟು ಜೋರಾಗಿದ್ದು, ಜನಸಾಮಾನ್ಯರು ಸಂತೋಷದಿಂದ ಜಿಎಸ್ಟಿ ಉಳಿತಾಯದ ಲಾಭ ಪಡೆಯುತ್ತಿದ್ದಾರೆ. ವ್ಯಾಪಾರಸ್ಥರು, ವರ್ತಕರು ಸಂತೋಷಗೊಂಡಿದ್ದಾರೆ.ಆದರೆ ರಾಜ್ಯದಲ್ಲಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರ ಯಾವುದಕ್ಕೂ ಮುಂದಾಗಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಈರುಳ್ಳಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ ಇನ್ನೊಂದು ಪೋಸ್ಟ್ ನಲ್ಲಿ ತೀವ್ರ ಸಂಕಷ್ಟದಲ್ಲಿರುವ ಈರುಳ್ಳಿ ಬೆಳೆಗಾರರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ತಕ್ಷಣವೇ ಧಾವಿಸಿ, ಉತ್ತಮ ಬೆಲೆ ಸಿಗುವಂತಹ ವ್ಯವಸ್ಥೆ ಮಾಡಬೇಕು. ಇದೇ ರೀತಿ ಬೆಲೆ ಕಡಿಮೆಯಾದರೆ ಈರುಳ್ಳಿ ಬೆಳೆಗಾರರು ಬೀದಿಗೆ ಬೀಳುತ್ತಾರೆ. ಕೂಡಲೇ ರಾಜ್ಯ ಸರ್ಕಾರ ರೈತರಿಗೆ ಉತ್ತಮ ಬೆಲೆ ಸಿಗುವಂತಹ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ನೆರೆ ಪ್ರದೇಶಕ್ಕೆ ಸಿಎಂ ಕಾಟಾಚಾರದ ವೈಮಾನಿಕ ಪರಿಶೀಲನೆ ಯಾತ್ರೆ, ಕುರ್ಚಿ ದಕ್ಕಿಸಿಕೊಳ್ಳಲು ಡಿಸಿಎಂ ಪದೇ ಪದೇ ದೆಹಲಿ ದಂಡಯಾತ್ರೆ.ರೈತರು ಬೆವರು ಸುರಿಸಿ ಬೆಳೆದ ಬೆಳೆಗೆ ಶವಯಾತ್ರೆ. ಇದು ರೈತ ವಿರೋಧಿ ಕಾಂಗ್ರೆಸ್ ಸರ್ಕಾರದಲ್ಲಿ ಕರ್ನಾಟಕದ ರೈತರ ಪಾಡು ಎಂದು ಸರ್ಕಾರದ ವಿರುದ್ದ ಅವರು ವಾಗ್ದಾಳಿ ನಡೆಸಿದ್ದಾರೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಿಂಗಳುಗಟ್ಟಲೆ ಶ್ರಮವಹಿಸಿ ದುಡಿದ ರೈತರಿಗೆ ಈ ಬಾರಿ ಈರುಳ್ಳಿ ಕಣ್ಣೀರು ತರಿಸುತ್ತಿದೆ. ಪ್ರತಿ ಕ್ವಿಂಟಲ್ಗೆ 3,000- 4,000 ರೂಪಾಯಿ ಸಿಗುತ್ತಿದ್ದದ್ದು, ಈಗ ಕ್ವಿಂಟಲ್ಗೆ 100-200 ರೂಪಾಯಿಗಳಿಗೆ ದಿಢೀರನೆ ಬೆಲೆ ಕುಸಿದಿದ್ದು ಸಾಗಾಟದ ವೆಚ್ಚಕ್ಕೂ ಹಣ ಸಿಗದೆ ರೈತರು ಕಂಗಾಲಾಗಿದ್ದಾರೆ ಎಂದು ಅಶೋಕ್ ಸರ್ಕಾರದ ಗಮನವನ್ನು ಸೆಳೆದಿದ್ದಾರೆ.
ನ್ಯೂಯಾರ್ಕ್, ಅ. 8 (ಪಿಟಿಐ)– ಬೆಳಕಿನ ಹಬ್ಬ ದೀಪಾವಳಿಗೆ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಅಧಿಕೃತ ರಜಾದಿನವನ್ನಾಗಿ ಘೋಷಿಸಲಾಗಿದೆ.ಇದು ಭಾರತದ ಬೆಳಕಿನ ಹಬ್ಬವನ್ನು ಅಧಿಕೃತವಾಗಿ ರಜಾದಿನವೆಂದು ಗುರುತಿಸಿದ ಅಮೆರಿಕದ ಮೂರನೇ ರಾಜ್ಯವಾಗಿದೆ.ಕ್ಯಾಲಿಫೋರ್ನಿಯಾ ಗವರ್ನರ್ ಗ್ಯಾವಿನ್ ನ್ಯೂಸಮ್ ಅವರು, ದೀಪಾವಳಿಯನ್ನು ರಾಜ್ಯ ರಜಾದಿನವೆಂದು ಗೊತ್ತುಪಡಿಸುವ ಅಸೆಂಬ್ಲಿ ಸದಸ್ಯ ಆಶ್ ಕಲ್ರಾ ಅವರ ಮಸೂದೆಗೆ ಸಹಿ ಹಾಕಿರುವುದಾಗಿ ಘೋಷಿಸಿದರು.
ಸೆಪ್ಟೆಂಬರ್ನಲ್ಲಿ, ದೀಪಾವಳಿಯನ್ನು ಅಧಿಕೃತ ರಾಜ್ಯ ರಜಾದಿನವೆಂದು ಗೊತ್ತುಪಡಿಸುವ 268 ಎಂಬ ಮಸೂದೆಯು ಕ್ಯಾಲಿಫೋರ್ನಿಯಾದ ಶಾಸಕಾಂಗದ ಎರಡೂ ಸದನಗಳನ್ನು ಯಶಸ್ವಿಯಾಗಿ ಅಂಗೀಕರಿಸಿತು ಮತ್ತು ನ್ಯೂಸಮ್ನಿಂದ ಅಂತಿಮ ಕ್ರಮಕ್ಕಾಗಿ ಕಾಯಲಾಗುತ್ತಿತ್ತು.
ಕ್ಯಾಲಿಫೋರ್ನಿಯಾ ಭಾರತೀಯ ಅಮೆರಿಕನ್ನರ ಅತಿದೊಡ್ಡ ಜನಸಂಖ್ಯೆಗೆ ನೆಲೆಯಾಗಿದೆ, ಮತ್ತು ದೀಪಾವಳಿಯನ್ನು ಅಧಿಕೃತ ರಾಜ್ಯ ರಜಾದಿನವೆಂದು ಗೊತ್ತುಪಡಿಸುವುದು ನಮ್ಮ ವೈವಿಧ್ಯಮಯ ರಾಜ್ಯದಾದ್ಯಂತ ಆಚರಿಸುವ ಮತ್ತು ಅದನ್ನು ಅನೇಕರಿಗೆ ಪರಿಚಯಿಸಲು ಸಹಾಯ ಮಾಡುವ ಲಕ್ಷಾಂತರ ಕ್ಯಾಲಿಫೋರ್ನಿಯಾದವರಿಗೆ ತನ್ನ ಸಂದೇಶವನ್ನು ಹೆಚ್ಚಿಸುತ್ತದೆ ಎಂದು ಕಲ್ರಾ ಕಳೆದ ತಿಂಗಳು ಹೇಳಿದ್ದರು.
ದೀಪಾವಳಿಯು ಸದ್ಭಾವನೆ, ಶಾಂತಿ ಮತ್ತು ಹಂಚಿಕೆಯ ನವೀಕರಣದ ಪ್ರಜ್ಞೆಯ ಸಂದೇಶದೊಂದಿಗೆ ಸಮುದಾಯಗಳನ್ನು ಒಟ್ಟುಗೂಡಿಸುತ್ತದೆ. ಕ್ಯಾಲಿಫೋರ್ನಿಯಾ ದೀಪಾವಳಿ ಮತ್ತು ಅದರ ವೈವಿಧ್ಯತೆಯನ್ನು ಸ್ವೀಕರಿಸಬೇಕು, ಅದನ್ನು ಕತ್ತಲೆಯಲ್ಲಿ ಮರೆಮಾಡಬಾರದು ಎಂದು ಅವರು ಹೇಳಿದರು.
ಅಕ್ಟೋಬರ್ 2024 ರಲ್ಲಿ, ಪೆನ್ಸಿಲ್ವೇನಿಯಾ ದೀಪಾವಳಿಯನ್ನು ಅಧಿಕೃತವಾಗಿ ರಾಜ್ಯ ರಜಾದಿನವೆಂದು ಗುರುತಿಸಿದ ಮೊದಲ ರಾಜ್ಯವಾಯಿತು, ನಂತರ ಈ ವರ್ಷ ಕನೆಕ್ಟಿಕಟ್ ಕೂಡ ಬಂದಿದೆ. ನ್ಯೂಯಾರ್ಕ್ ನಗರದಲ್ಲಿ, ದೀಪಾವಳಿಯನ್ನು ಸಾರ್ವಜನಿಕ ಶಾಲೆಗಳಿಗೆ ರಜಾದಿನವೆಂದು ಘೋಷಿಸಲಾಗಿದೆ.ಸಮುದಾಯ ಮುಖಂಡರು ಮತ್ತು ಪ್ರಮುಖ ವಲಸೆ ಸಂಸ್ಥೆಗಳು ದೀಪಾವಳಿಯನ್ನು ರಾಜ್ಯ ರಜಾದಿನವೆಂದು ಘೋಷಿಸುವ ಕ್ಯಾಲಿಫೋರ್ನಿಯಾದ ಘೋಷಣೆಯನ್ನು ಸ್ವಾಗತಿಸಿವೆ.
ಅಮರಾವತಿ, ಅ. 8 (ಪಿಟಿಐ)- ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತದಲ್ಲಿ 25 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಆಂಧ್ರಪ್ರದೇಶದ ಸಿಎಂ ಎನ್. ಚಂದ್ರಬಾಬು ನಾಯ್ಡು ಅವರು ಅಭಿನಂದಿಸಿದ್ದಾರೆ, ಅವರ ನಾಯಕತ್ವವು ದೂರದೃಷ್ಟಿ ಮತ್ತು ಸ್ಪೂರ್ತಿ ದಾಯಕವಾಗಿದೆ ಎಂದು ಕರೆದಿದ್ದಾರೆ.
ಈ ಮೈಲಿಗಲ್ಲನ್ನು ಗುರುತಿಸುವ ಪ್ರಧಾನಿಯವರ ಹುದ್ದೆಯನ್ನು ನಾಯ್ಡು ಮರುಟ್ವೀಟ್ ಮಾಡಿದ್ದಾರೆ ಮತ್ತು ಗುಜರಾತ್ ಮುಖ್ಯಮಂತ್ರಿಯಿಂದ ರಾಷ್ಟ್ರವನ್ನು ಮುನ್ನಡೆಸುವವರೆಗಿನ ಅವರ ಪ್ರಯಾಣವನ್ನು ನೆನಪಿಸಿಕೊಂಡು ಸಾರ್ವಜನಿಕ ಸೇವೆಗೆ ಅವರ ಬದ್ಧತೆಯನ್ನು ಶ್ಲಾಘಿಸಿದ್ದಾರೆ.
ಪ್ರಧಾನಿ ಮೋದಿ ಮಂಗಳವಾರ ಸರ್ಕಾರದ ಮುಖ್ಯಸ್ಥರಾಗಿ ತಮ್ಮ 25 ನೇ ವರ್ಷವನ್ನು ಪ್ರಾರಂಭಿಸಿದರು, ಜನರ ಜೀವನವನ್ನು ಸುಧಾರಿಸುವುದು ಮತ್ತು ಈ ಮಹಾನ್ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದು ಅವರ ನಿರಂತರ ಪ್ರಯತ್ನವಾಗಿದೆ ಎಂದು ಪ್ರತಿಪಾದಿಸಿದರು. ಪ್ರಧಾನಿಗಳೇ, ಈ ಗಮನಾರ್ಹ ಮೈಲಿಗಲ್ಲಿಗೆ ಅಭಿನಂದನೆಗಳು. ಸಾರ್ವಜನಿಕ ಸೇವೆ ಮತ್ತು ದೂರದೃಷ್ಟಿಯ ನಾಯಕತ್ವಕ್ಕೆ ನಿಮ್ಮ ಬದ್ಧತೆ ರಾಷ್ಟ್ರದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದು ನಾಯ್ಡು ಎಕ್್ಸನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿಯವರ ಸ್ಥಿರ ಮತ್ತು ದೃಢನಿಶ್ಚಯದ ನಾಯಕತ್ವವು ಭಾರತದ ಆಡಳಿತ ಮಾದರಿಯನ್ನು ಮರುರೂಪಿಸಿತು ಮತ್ತು ಒಂದು ರಾಜ್ಯ, ರಾಷ್ಟ್ರ ಮತ್ತು ಅದರ ಜನರ ಭವಿಷ್ಯವನ್ನು ಪರಿವರ್ತಿಸಿತು ಎಂದು ಅವರು ಹೇಳಿದರು.
ಪ್ರಧಾನಿಯವರು ರಾಷ್ಟ್ರಕ್ಕೆ ಇನ್ನೂ ಹಲವು ವರ್ಷಗಳ ಸಮರ್ಪಿತ ಸೇವೆಯನ್ನು ಮತ್ತು ಪರಿಣಾಮಕಾರಿ ಆಡಳಿತದ ಮೂಲಕ ಪ್ರತಿಯೊಬ್ಬ ನಾಗರಿಕನನ್ನು ಸಬಲೀಕರಣಗೊಳಿಸುವ ಮತ್ತು ಉನ್ನತೀಕರಿಸುವಲ್ಲಿ ನಿರಂತರ ಯಶಸ್ಸನ್ನು ಪಡೆಯಲಿ ಎಂದು ನಾಯ್ಡು ಹಾರೈಸಿದರು.
ಮುಂಬೈ– ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಎರಡು ದಿನಗಳ ಭಾರತಕ್ಕೆ ಭೇಟಿ ನೀಡಿದ್ದು, ಮುಕ್ತ ವ್ಯಾಪಾರ ಒಪ್ಪಂದ ಸೇರಿದಂತೆ ಉಭಯ ರಾಷ್ಟ್ರಗಳ ನಡುವೆ ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಮತ್ತು ಬ್ರಿಟಿಷ್ ವ್ಯವಹಾರಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಲಾಗಿದೆ.
ಇದು ಸ್ಟಾಮರ್ಟ್ ಅವರ ಭಾರತದ ಮೊದಲ ಅಧಿಕೃತ ಭೇಟಿಯಾಗಿದ್ದು, ಅವರು ನಾಳೆ ಮುಂಬೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಈ ಭೇಟಿಯಲ್ಲಿ ‘ವಿಷನ್ 2035’ಗೆ ಅನುಗುಣವಾಗಿ ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ವಿವಿಧ ಅಂಶಗಳಲ್ಲಿನ ಪ್ರಗತಿ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಹಾಗೇ ಪ್ರಾದೇಶಿಕ ಹಾಗೂ ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ.
ಲಂಡನ್ನಿಂದ ವ್ಯಾಪಾರ ನಿಯೋಗದೊಂದಿಗೆ ಆಗಮಿಸಿದ ಸ್ಟಾರ್ಮರ್ ಅವರನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್, ಉಪ ಮುಖ್ಯಮಂತ್ರಿಗಳಾದ ಏಕನಾಥ್ ಶಿಂದೆ ಮತ್ತು ಅಜಿತ್ ಪವಾರ್ ಹಾಗೂ ರಾಜ್ಯಪಾಲ ಆಚಾರ್ಯ ದೇವವ್ರತ್ ಸ್ವಾಗತಿಸಿದರು.
ಭಾರತ-ಬ್ರಿಟನ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಪ್ರಕ್ರಿಯೆಯ ಭಾಗವಾಗಿ ಮೋದಿ ಮತ್ತು ಸ್ಟಾರ್ಮರ್ ಗುರುವಾರ ಮುಂಬೈನಲ್ಲಿ ಭೇಟಿಯಾಗಲಿದ್ದಾರೆ.ಸಿಇಒ ಫೋರಂ ಸಭೆ ಮತ್ತು ಗ್ಲೋಬಲ್ ಫಿನ್ಟೆಕ್ ಫೆಸ್ಟ್ನ 6ನೇ ಆವೃತ್ತಿಯಲ್ಲಿ ಅವರು ಭಾಗವಹಿಸಲಿದ್ದಾರೆ.ಭಾರತಕ್ಕೆ ಬಂದ ತಕ್ಷಣವೇ ಕೀರ್ ಸ್ಟಾರ್ಮರ್ ಭಾರತವನ್ನು ಅಪ್ರತಿಮ ಅವಕಾಶಗಳ ನಾಡು ಎಂದು ಹೊಗಳಿದ್ದಾರೆ. ಜೊತೆಗೆ ಭಾರತ ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದಿದ್ದಾರೆ.
ಈ ಭೇಟಿಯಲ್ಲಿ ವಿಷನ್ 2035 ಮಾರ್ಗಸೂಚಿಯಡಿಯಲ್ಲಿ ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ರಕ್ಷಣೆ, ಹವಾಮಾನ ಬದಲಾವಣೆ, ಆರೋಗ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿನಿಮಯದಂತಹ ಕ್ಷೇತ್ರಗಳ ಪ್ರಗತಿಯನ್ನು ಪರಿಶೀಲಿಸಲಾಗುತ್ತದೆ. ಈ ರೋಡ್ಮ್ಯಾಪ್ 10 ವರ್ಷಗಳ ಒಳಗೆ ಎರಡು ದೇಶಗಳನ್ನು ಆರ್ಥಿಕವಾಗಿ ಒಗ್ಗೂಡಿಸುವ ಯೋಜನೆಯಾಗಿದ್ದು, ಇದರಿಂದ ಉಭಯ ದೇಶಗಳಿಗೂ ಲಾಭವಾಗುತ್ತದೆ. ಜುಲೈ 2025ರಲ್ಲಿ ಜರುಗಿದ ಭಾರತ-ಯುಕೆ ಸಮಗ್ರ ವ್ಯಾಪಾರ ಒಪ್ಪಂದದ ನಂತರ ಈ ಎರಡು ದಿನಗಳ ಪ್ರವಾಸವು ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಮತ್ತು ಬ್ರಿಟಿಷ್ ಕಂಪನಿಗಳಿಗೆ ಹೊಸ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಸಿಇಒ ವೇದಿಕೆ ಮತ್ತು 6ನೇ ಆವೃತ್ತಿಯ ಗ್ಲೋಬಲ್ ಫಿನ್ಟೆಕ್ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಸ್ಟಾರ್ಮರ್? ಎರಡು ದಿನದ ಭೇಟಿಯಲ್ಲಿ ಉಭಯ ನಾಯಕರು ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಂಬಂಧಗಳು ಸೇರಿದಂತೆ ದ್ವಿಪಕ್ಷೀಯ ಪಾಲುದಾರಿಕೆಯ ಬಗ್ಗೆ ಚರ್ಚಿಸಲಿದ್ದಾರೆ. ಜುಲೈನಲ್ಲಿ ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ) ಕುರಿತು ಚರ್ಚಿಸಲಿದ್ದಾರೆ.
ಹಲವು ನಿಯೋಗಳ ಭೇಟಿ ಸ್ಟಾರ್ಮರ್ ಜೊತೆಗೆ ಯುಕೆಯ 125 ಪ್ರಮುಖ ಸಿಇಒಗಳು, ಪ್ರಮುಖ ಉದ್ಯಮಿಗಳು, ವಿಶ್ವವಿದ್ಯಾಲಯದ ಉಪಕುಲಪತಿಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಪ್ರತಿನಿಧಿಗಳು ಭಾರತಕ್ಕೆ ಆಗಮಿಸಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಬೆಳವಣಿಗೆ ಮತ್ತು ವಿಸ್ತರಿಸಲು ಅವಕಾಶಗಳನ್ನು ಪಡೆದುಕೊಳ್ಳುವ ಭರವಸೆಯನ್ನು ನಿಯೋಗ ವ್ಯಕ್ತಪಡಿಸಿದೆ. ರೋಲ್ಸ್ ರಾಯ್ಸ್, ಬ್ರಿಟಿಷ್ ಟೆಲಿಕಾಂ, ಡಿಯಾಜಿಯೊ, ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಮತ್ತು ಬ್ರಿಟಿಷ್ ಏರ್ವೇಸ್ ಪ್ರಮುಖ ಸಂಸ್ಥೆಗಳ ಪ್ರತಿನಿಧಿಗಳು ನಿಯೋಗದಲ್ಲಿದ್ದಾರೆ.
ಸ್ಟಾರ್ಮರ್ ಅವರ ಪ್ರವಾಸವು ಭಾರತದ ತ್ವರಿತ ಆರ್ಥಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಹತ್ವದ್ದಾಗಿದೆ. 2028ರ ವೇಳೆಗೆ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊಳೆಯಲಿದ್ದು, ಈ ಸಂದರ್ಭದಲ್ಲಿ ಯುಕೆಯು ತನ್ನ ವ್ಯಾಪಾರ ನಿಯೋಗವನ್ನು ಒಳಗೊಂಡು ಭಾರತದ ಮಾರುಕಟ್ಟೆಯಲ್ಲಿ ತನ್ನ ಪಾಯವನ್ನು ಬಲಪಡಿಸುವ ಉದ್ದೇಶ ಹೊಂದಿದೆ.
ಜುಲೈ 23-24ರಂದು ಯುಕೆಯಲ್ಲಿ ನಡೆದ ಮೋದಿ ಅವರ ಭೇಟಿಯಲ್ಲಿ ಜರುಗಿದ ಒಪ್ಪಂದವು ಎರಡು ದೇಶಗಳ ನಡುವಿನ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದು, ಈಗ ಸ್ಟಾರ್ಮರ್ ಅವರ ಭೇಟಿ ಇದರ ಜಾರಿಗೊಳಿಸುವಲ್ಲಿ ಕೊನೆಯ ತಟಸ್ಥ ಹಂತವಾಗಿದೆ. ಜುಲೈನಲ್ಲಿ ನಾವು ಭಾರತದೊಂದಿಗೆ ಪ್ರಮುಖ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಇದು ಯಾವುದೇ ದೇಶಕ್ಕಿಂತ ಉತ್ತಮವಾದದ್ದು, ಆದರೆ ಕಥೆ ಅಲ್ಲಿಗೆ ನಿಲ್ಲುವುದಿಲ್ಲ” ಎಂದು ಸ್ಟಾರ್ಮರ್ ಹೇಳಿದ್ದಾರೆ.
ಅವಕಾಶಗಳ ಮಹಾಪೂರ ಭಾರತ 2028ರಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದು, ಅದರೊಂದಿಗೆ ವ್ಯಾಪಾರ ತ್ವರಿತ ಮತ್ತು ಸೌಲಭ್ಯಯುತವಾಗುತ್ತದೆ. ಅವಕಾಶಗಳ ಮಹಾಪೂರವೇ ಹರಿದುಬರಲಿದೆ. ಈ ನಿಯೋಗದ ಮೂಲಕ ಯುಕೆಯು ಭಾರತದಲ್ಲಿ ಹೂಡಿಕೆಯನ್ನು ಹೆಚ್ಚಿಸಿ, ತನ್ನ ಜನರಿಗೆ ಹೆಚ್ಚಿನ ಉದ್ಯೋಗಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಮುಂಬೈನಲ್ಲಿ ನಮ್ಮ 125 ದೊಡ್ಡ ಕಂಪನಿಗಳೊಂದಿಗೆ ಬ್ರಿಟಿಷ್ ವ್ಯಾಪಾರದ ಧ್ವಜವನ್ನು ಹಾರಿಸುತ್ತೇನೆ. ಭಾರತದ ಬೆಳವಣಿಗೆಯೇ ಬ್ರಿಟಿಷ್ ಜನರಿಗೆ ಹೆಚ್ಚಿನ ಆಯ್ಕೆ ಮತ್ತುಉದ್ಯೋಗಗಳನ್ನು ತಂದು ನೀಡುತ್ತದೆ ಎಂದು ಅವರು ಸೇರಿಸಿದ್ದಾರೆ.
ಸ್ಟಾರ್ಮರ್ ಅವರ ಈ ಭೇಟಿಯಿಂದ ಭಾರತ-ಯುಕೆ ಸಂಬಂಧಗಳ ಹೊಸ ಅಧ್ಯಾಯವನ್ನು ತೆರೆದಿಡಲಾಗುತ್ತದೆ. ಜುಲೈ ಒಪ್ಪಂದದಿಂದ ಉಂಟಾದ ಆವೇಗವನ್ನು ಮುಂದುವರಿಸುತ್ತಿದ್ದು, ಉಭಯ ದೇಶಗಳ ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುತ್ತದೆ. ಇಂಡೋ-ಪ್ಯಾಸಿಫಿಕ್ ಪ್ರದೇಶದಲ್ಲಿ ಉಭಯ ದೇಶಗಳ ತಂತ್ರಜ್ಞಾನ ಮತ್ತು ರಕ್ಷಣಾ ಸಹಕಾರವೂ ಚರ್ಚೆಗೆ ಬರುತ್ತದೆ. ಸ್ಟಾರ್ಮರ್ ಅವರ ಈ ಪ್ರವಾಸವು ಭಾರತದ ಆರ್ಥಿಕ ಶಕ್ತಿಯನ್ನು ಉಪಯೋಗಿಸಿಕೊಂಡು ಯುಕೆಯು ತನ್ನ ಅಭಿವೃದ್ಧಿಯನ್ನು ತ್ವರಿಸಲು ಅವಕಾಶ ಮಾಡಿಕೊಟ್ಟಿದ್ದು, ಎರಡು ದೇಶಗಳ ನಡುವಿನ ಸ್ನೇಹವನ್ನು ಇನ್ನಷ್ಟು ಬಲಪಡಿಸುತ್ತದೆ.
ಉಭಯ ರಾಷ್ಟ್ರಗಳ ನಡುವೆ ಒಪ್ಪಂದ ಇನ್ನು ಕಳೆದ ಜುಲೈ ತಿಂಗಳಿನಲ್ಲಿ ಬ್ರಿಟನ್ ಗೆ ಬೇಟಿ ನೀಡಿದ್ದ ಮೋದಿ ಅವರು, ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದ್ದರು. ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಸಂದರ್ಭದಲ್ಲಿ, ಬ್ರಿಟಿಷ್ ಪ್ರಧಾನಿ ಸ್ಟಾರ್ಮರ್ ಇದನ್ನು ‘ಐತಿಹಾಸಿಕ ಒಪ್ಪಂದ’ ಎಂದು ಕರೆದಿದ್ದರು. ಈ ಒಪ್ಪಂದವು ಎರಡೂ ದೇಶಗಳಿಗೆ, ವಿಶೇಷವಾಗಿ ಕಾರ್ಮಿಕರು, ವ್ಯಾಪಾರಿಗಳು ಮತ್ತು ಹೂಡಿಕೆದಾರರಿಗೆ ಪ್ರಯೋಜನಕಾರಿಯಾಗಲಿದೆ. ಅದೇ ಸಮಯದಲ್ಲಿ, ಇಂದು ನಮ್ಮ ಸಂಬಂಧಗಳಲ್ಲಿ ಐತಿಹಾಸಿಕ ದಿನವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಹಲವು ವರ್ಷಗಳ ಕಠಿಣ ಪರಿಶ್ರಮದ ನಂತರ, ಇಂದು ಎರಡೂ ದೇಶಗಳು ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವನ್ನು ತೀರ್ಮಾನಿಸಿವೆ ಎಂದು ನನಗೆ ಸಂತೋಷವಾಗಿದೆ ಎಂದು ಮೋದಿ ಹೇಳಿದ್ದರು.
ಭಾರತಕ್ಕೆ ಅತಿ ಹೆಚ್ಚು ಲಾಭ ರಫ್ತು ವಲಯದಲ್ಲಿ ಭಾರತಕ್ಕೆ ಹೆಚ್ಚಿನ ಲಾಭವಾಗಲಿದೆ. ಒಪ್ಪಂದದ ಅನುಷ್ಠಾನದ ನಂತರ, ಮುಂದಿನ ಕೆಲವು ವರ್ಷಗಳಲ್ಲಿ ಭಾರತದ ರಫ್ತು 10 ರಿಂದ 12 ಶತಕೋಟಿ ಡಾಲರ್ಗಳಷ್ಟು ಹೆಚ್ಚಾಗಬಹುದು. ಇದರರ್ಥ ಸುಮಾರು 86 ಸಾವಿರ ಕೋಟಿಗಳಿಂದ 1.1 ಲಕ್ಷ ಕೋಟಿ ರೂಪಾಯಿಗಳ ಹೆಚ್ಚುವರಿ ವ್ಯಾಪಾರ ಲಾಭಗಳು. ಇದು ಭಾರತೀಯ ಉತ್ಪಾದನೆ ಮತ್ತು ಸೇವಾ ವಲಯವನ್ನು ಬಲಪಡಿಸುತ್ತದೆ.
ಅನೇಕ ಉತ್ಪನ್ನಗಳ ಮೇಲಿನ ಸುಂಕಗಳನ್ನು ಕಡಿಮೆ ಮಾಡಲಾಗುತ್ತದೆ ಅಥವಾ ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ. ಇದು ಭಾರತೀಯ ಕಂಪನಿಗಳಿಗೆ ಬ್ರಿಟಿಷ್ ಮಾರುಕಟ್ಟೆಯಲ್ಲಿ ತಮ್ಮ ಹಿಡಿತವನ್ನು ಬಲಪಡಿಸಲು ಅವಕಾಶವನ್ನು ನೀಡುತ್ತದೆ. ವಿಶೇಷವಾಗಿ ಜವಳಿ, ಔಷಧ, ಆಟೋ ಬಿಡಿಭಾಗಗಳು ಮತ್ತು ಐಟಿ ವಲಯಗಳು ಈ ಒಪ್ಪಂದದಿಂದ ನೇರ ಲಾಭ ಪಡೆಯಬಹುದು. ಇದು ಭಾರತದಲ್ಲಿ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುತ್ತದೆ.
ಬ್ರಿಟಿಷ್ ಕಂಪನಿಗಳು ಭಾರತದಲ್ಲಿ ಕಡಿಮೆ ವೆಚ್ಚದ ಉತ್ಪಾದನೆ ಮತ್ತು ಸೇವೆಗಳ ಲಾಭವನ್ನು ಪಡೆಯಲಿವೆ. ಅಲ್ಲದೆ, ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಗ್ರಾಹಕ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಬ್ರಿಟಿಷ್ ಕಂಪನಿಗಳು ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಇದು ಎರಡು ದೇಶಗಳ ನಡುವಿನ ವ್ಯಾಪಾರ ಸಮತೋಲನ ಮತ್ತು ಹೂಡಿಕೆ ಹರಿವನ್ನು ಸುಧಾರಿಸುತ್ತದೆ.
ನ್ಯೂಯಾರ್ಕ್, ಅ. 8 (ಪಿಟಿಐ) ಸೆರ್ಗಿಯೊ ಗೋರ್ ಅವರನ್ನು ಭಾರತಕ್ಕೆ ಅಮೆರಿಕದ ಮುಂದಿನ ರಾಯಭಾರಿಯಾಗಿ ನಿಯೋಜಿಸಲಾಗಿದೆ. ಅಮೆರಿಕ ಸೆನೆಟ್ನಲ್ಲಿ ನಿನ್ನೆ ನಡೆದ ಏಕ ಮತದಾನದಲ್ಲಿ 107 ನಾಮನಿರ್ದೇಶಿತರಲ್ಲಿ 38 ವರ್ಷದ ಗೋರ್ ಕೂಡ ಒಬ್ಬರಾಗಿದ್ದರು, ಗೋರ್ ಅವರ ಪರವಾಗಿ 51 ಸೆನೆಟರ್ಗಳು ಮತ್ತು 47 ಮಂದಿ ವಿರುದ್ಧವಾಗಿ ಮತ ಚಲಾಯಿಸಿದರು.
ಪ್ರಸ್ತುತ ಅಮೆರಿಕ ಸರ್ಕಾರ ಸ್ಥಗಿತಗೊಂಡಿದ್ದರೂ ಸಹ ಈ ದೃಢೀಕರಣಗಳು ಬಂದವು.ದಕ್ಷಿಣ ಏಷ್ಯಾ ವ್ಯವಹಾರಗಳ ಸಹಾಯಕ ವಿದೇಶಾಂಗ ಕಾರ್ಯದರ್ಶಿಯಾಗಿ ಕ್ಯಾಲಿಫೋರ್ನಿಯಾದ ಪಾಲ್ ಕಪೂರ್ ಮತ್ತು ಸಿಂಗಾಪುರ ಗಣರಾಜ್ಯದ ರಾಯಭಾರಿಯಾಗಿ ಫ್ಲೋರಿಡಾದ ಅಂಜನಿ ಸಿನ್ಹಾ ಅವರು ದೃಢೀಕರಿಸಲ್ಪಟ್ಟ ಇತರ ನಾಮನಿರ್ದೇಶಿತರಲ್ಲಿ ಸೇರಿದ್ದಾರೆ.
ಆಗಸ್ಟ್ನಲ್ಲಿ, ಟ್ರಂಪ್ ಅಧ್ಯಕ್ಷೀಯ ಸಿಬ್ಬಂದಿ ನಿರ್ದೇಶಕರಾದ ಗೋರ್ ಅವರನ್ನು ಭಾರತಕ್ಕೆ ಮುಂದಿನ ಅಮೆರಿಕದ ರಾಯಭಾರಿಯಾಗಿ ಮತ್ತು ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ವಿಶೇಷ ರಾಯಭಾರಿಯಾಗಿ ನಾಮನಿರ್ದೇಶನ ಮಾಡಿದ್ದರು.
ಗೋರ್ ಅವರನ್ನು ಹಲವು ವರ್ಷಗಳಿಂದ ನನ್ನ ಪಕ್ಕದಲ್ಲಿರುವ ಉತ್ತಮ ಸ್ನೇಹಿತ ಎಂದು ಬಣ್ಣಿಸಿದ ಟ್ರಂಪ್, ವಿಶ್ವದ ಅತ್ಯಂತ ಜನಸಂಖ್ಯೆ ಹೊಂದಿರುವ ಪ್ರದೇಶಕ್ಕೆ, ನನ್ನ ಕಾರ್ಯಸೂಚಿಯನ್ನು ತಲುಪಿಸಲು ಮತ್ತು ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠವಾಗಿಸಲು ನಮಗೆ ಸಹಾಯ ಮಾಡಲು ನಾನು ಸಂಪೂರ್ಣವಾಗಿ ನಂಬಬಹುದಾದ ಯಾರಾದರೂ ಇರುವುದು ಮುಖ್ಯ ಎಂದು ಹೇಳಿದ್ದರು.
ಸೆರ್ಗಿಯೊ ಅದ್ಭುತ ರಾಯಭಾರಿಯಾಗುತ್ತಾರೆ.ಅಮೆರಿಕದಲ್ಲಿನ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ, ಗೋರ್ ಅವರ ನಾಮನಿರ್ದೇಶನವನ್ನು ಸ್ವಾಗತಿಸಿದ್ದರು, ಅವರನ್ನು ಟ್ರಂಪ್ ಅವರ ಅತ್ಯಂತ ವಿಶ್ವಾಸಾರ್ಹ ಸಹಾಯಕರಲ್ಲಿ ಒಬ್ಬರು ಎಂದು ಕರೆದಿದ್ದರು.
ಈ ನಿರ್ಧಾರವು ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳಿಗೆ ಅಮೆರಿಕ ನೀಡುವ ಪ್ರಾಮುಖ್ಯತೆ ಮತ್ತು ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.ಕಳೆದ ತಿಂಗಳು ಸೆನೆಟ್ ವಿದೇಶಾಂಗ ಸಂಬಂಧಗಳ ಸಮಿತಿಯಲ್ಲಿ ನಡೆದ ದೃಢೀಕರಣ ವಿಚಾರಣೆಯಲ್ಲಿ, ಭಾರತವು ಒಂದು ಕಾರ್ಯತಂತ್ರದ ಪಾಲುದಾರರಾಗಿದ್ದು, ಅವರ ಪಥವು ಪ್ರದೇಶವನ್ನು ಮತ್ತು ಅದರಾಚೆಗೆ ರೂಪಿಸುತ್ತದೆ ಎಂದು ಗೋರ್ ಹೇಳಿದ್ದರು.
ಈ ಪ್ರಮುಖ ಪಾಲುದಾರಿಕೆಯಲ್ಲಿ ಅಮೆರಿಕದ ಆಸಕ್ತಿಯನ್ನು ಮುನ್ನಡೆಸಲು ತಾನು ಬದ್ಧನಾಗಿದ್ದೇನೆ ಎಂದು ಅವರು ಹೇಳಿದರು.ಯುಎಸ್-ಭಾರತ ವ್ಯಾಪಾರ ಸಂಬಂಧಗಳನ್ನು ಸುಧಾರಿಸುವುದು ಅಮೆರಿಕದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದಲ್ಲದೆ, ಇತರ ರಾಷ್ಟ್ರಗಳ ಮೇಲೆ ಚೀನಾದ ಆರ್ಥಿಕ ಹತೋಟಿಯನ್ನು ಕಡಿಮೆ ಮಾಡುತ್ತದೆ ಎಂದು ಗೋರ್ ಹೇಳಿದ್ದರು.