Friday, November 7, 2025
Home Blog Page 69

ಜಿಲ್ಲೆಗಳಿಂದ ಜಿಲ್ಲೆಗೆ ಹಬ್ಬುತ್ತಿದೆ ‘ಐ ಲವ್‌ ಮಹಮದ್‌’ ಬ್ಯಾನರ್‌ ವಿವಾದ

ಬೆಂಗಳೂರು,ಅ.4-ಐ ಲವ್‌ ಮಹಮದ್‌ ಬ್ಯಾನರ್‌ ಹಾವಳಿ ಜಿಲ್ಲೆಗಳಿಂದ ಜಿಲ್ಲೆಗೆ ಹಬ್ಬುತಿದ್ದು ಸಂಘರ್ಷಕ್ಕೆ ಕಾರಣವಾಗುತ್ತಿದೆ. ರಾಜ್ಯದಲ್ಲಿ ಪ್ರಪ್ರಥಮವಾಗಿ ಬೆಣ್ಣೆನಗರಿ ದಾವಣಗೆರೆಯಲ್ಲಿ ಈ ಬ್ಯಾನರ್‌ ಹಾವಳಿ ಕಾಣಿಸಿಕೊಂಡಿದ್ದು ಇದೀಗ ಬೆಳಗಾವಿ, ಕಲ್ಬುರ್ಗಿ ಜಿಲ್ಲೆಗಳಿಗೂ ಆವರಿಸಿದೆ.

ದಾವಣಗೆರೆ: ಕೆಲವು ದಿನಗಳ ಹಿಂದೆಯಷ್ಟೆ ದಾವಣಗೆರೆಯ ಕಾರ್ಲ್‌ಮಾರ್ಕ್ಸ್ ನಗರದಲ್ಲಿ ಐ ಲವ್‌ ಮಹಮದ್‌ ಬ್ಯಾನರ್‌ ಹಾಕಿದ್ದ ವಿಚಾರ ಹಿಂದೂ-ಮುಸ್ಲೀಂರ ನಡುವೆ ಸಂಘರ್ಷಕ್ಕೆ ಕಾರಣವಾಗಿ ಕಲ್ಲು ತೂರಾಟ ನಡೆದಿತ್ತು.

ಈ ಬರಹವುಳ್ಳ ಫ್ಲೇಕ್ಸ್ ಹಾಕಿದ್ದನ್ನು ಹರಿದು ಹಾಕಲಾಗಿದೆ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲ ತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಸಂಘರ್ಷ ನಡೆದಿತ್ತು. ನಂತರ ಪೊಲೀಸರು ತಿಳಿಗೊಳಿಸಿದರು.

ಬೆಳಗಾವಿ:ನಗರದ ಖಡಕ್‌ ಗಲ್ಲಿಯ ಮೆಹಬೂಬ್‌ ಸುಭಾನಿ ದರ್ಗಾದ ಉರುಸ್‌‍ ಮೆರವಣಿಗೆಯ ಸಮಯದಲ್ಲಿ ನಿನ್ನೆ ರಾತ್ರಿ ಹಿಂದೂಗಳು ಹಾಗೂ ಅವರ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ.

ಅನುಮತಿ ನೀಡಿದ ದಾರಿ ಬಿಟ್ಟು ಬೇರೆ ಮಾರ್ಗದಲ್ಲಿ ಮೆರವಣಿಗೆ ನಡೆಸಿ ಐ ಲವ್‌ ಮುಹಮದ್‌ ಘೋಷಣೆ ಕೂಗಿದಾಗ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಲ್ಲು ತೂರಾಟ ನಡೆಸಲಾಗಿದೆ.
ಘಟನೆಯಿಂದ ಬೆಳಗಾವಿ ನಗರ ಉದ್ವಿಗ್ನಗೊಂಡಿದೆ. ಸ್ಥಳದಲ್ಲಿ ಪೊಲೀಸರು ಗಸ್ತಿನಲ್ಲಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಕಲ್ಬುರ್ಗಿ:
ವೈದ್ಯಕೀಯ ಶಿಕ್ಷಣ ಸಚಿವರ ತವರು ಕ್ಷೇತ್ರವಾದ ಸೇಡಂ ತಾಲ್ಲೂಕಿನ ಊಡಗಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಐ ಲವ್‌ ಮಹಮದ್‌ ಬ್ಯಾನರ್‌ ಕಂಡು ಬಂದಿದ್ದು, ವಿವಿಧ ಹಿಂದೂ ಸಂಘಟನೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಒಟ್ಟಾರೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಶುರುವಾಗಿ ದೇಶದ ವಿವಿಧೆಡೆ ಹಬ್ಬಿರುವ ಐ ಲವ್‌ ಮಹಮದ್‌ ಬ್ಯಾನರ್‌ ಹಾಗೂ ಘೋಷಣೆ ಈಗ ಕರ್ನಾಟಕದ ಹಲವು ಜಿಲ್ಲೆಗಳಿಗೆ ಹಬ್ಬಿರುವುದರಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ರಶ್ಮಿಕಾ – ವಿಜಯ್

ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಪ್ರೀತಿ ಬಗ್ಗೆ ಗುಸಗುಸು ಇಂದು ನಿನ್ನೆಯದ್ದಲ್ಲ. ಇವರು ಪ್ರೀತಿಯಲ್ಲಿದ್ದಾರೆ ಎಂಬುದು ಬಹು ವರ್ಷಗಳಿಂದ ಕೇಳಿಬರುತ್ತಿರುವ ಅಂತೆ-ಕಂತೆಗಳು. ಈ ಪ್ರೇಮಪಕ್ಷಿಗಳೂ ಕೂಡಾ ಆಗಾಗ್ಗೆ ವದಂತಿಗಳಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದರು. ಹಬ್ಬ ಹರಿದಿನಗಳಿಗೆ ರಶ್ಮಿಕಾ, ವಿಜಯ್ ಮನೆಗೆ ಹೋಗ್ತಾ ಇದ್ದದ್ದು, ಬರ್ತ್ ಡೇ, ನ್ಯೂ ಇಯರ್ ಇಬ್ಬರು ಒಟ್ಟಾಗಿ ಟ್ರಿಪ್ ಹೋಗ್ತಾ ಇದ್ದದ್ದು.

ಅದನ್ನ ಹೈಡ್ ಮಾಡಿ ಸಿಕ್ಕಿ ಬೀಳ್ತಾ ಇದ್ದದ್ದು, ಎಲ್ಲವೂ ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದೀಗ ಫೈನಲ್ ಒಂದು ಸ್ಪೆಷಲ್ ನ್ಯೂಸ್ ಸಿಕ್ಕಿದೆ. ಟಾಲಿವುಡ್ ಅಂಗಳದಲ್ಲೆಲ್ಲಾ ಅದು ಹರಿದಾಡುತ್ತಿದೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಿಶ್ಚಿತಾರ್ಥವಾಗಿದೆಯಂತೆ. ಶೀಘ್ರದಲ್ಲಿಯೇ ಹಸೆಮಣೆ ಏರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ನಿನ್ನೆ, ಶುಕ್ರವಾರ ಹೈದರಾಬಾದ್ನಲ್ಲಿ ಎರಡೂ ಕುಟುಂಬಗಳು ಮತ್ತ ಆತ್ಮೀಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿದೆ. 2026ರ ಫೆಬ್ರವರಿಯಲ್ಲಿ ವಿವಾಹವಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

2017ರಲ್ಲಿ ನಟ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ನಿಶ್ಚಿತಾರ್ಥವಾಗಿತ್ತು, ಆದ್ರೆ ಕಾರಣಾಂತರಗಳಿಂದ ಇಬ್ಬರ ಮದುವೆ ಮುರಿದುಬಿದ್ದಿತ್ತು.. ರಶ್ಮಿಕಾ ಮಂದಣ್ಣ ಟಾಲಿವುಡ್ಗೆ ಕಾಲಿಟ್ಟ ದಿನದಿಂದ ವಿಜಯ್ ದೇವರಕೊಂಡ ಜೊತೆ ಅವರ ಹೆಸರು ತಳುಕು ಹಾಕಿಕೊಳ್ಳುತ್ತಲೇ ಇತ್ತು. ‘ಗೀತಾ ಗೋವಿಂದಂ’ ಸಿನಿಮಾ ಇಬ್ಬರ ವೃತ್ತಿ ಬದುಕಿಗೆ ಏಳಿಗೆ ಕೊಟ್ಟಿದ್ದಷ್ಟೇ ಅಲ್ಲದೇ.

ವೈಯಕ್ತಿಕ ಬದುಕಲ್ಲೂ ಬೆಳಕು ಮೂಡಿಸಿತ್ತು. ಇದೀಗ ಸದ್ದಿಲ್ಲದೇ ನಿಶ್ಚತಾರ್ಥ ಮಾಡಿಕೊಂಡು ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಈ ಸುದ್ದಿಯನ್ನು ರಶ್ಮಿಕಾ ಮಂದಣ್ಣ ಅವರಾಗಲೀ, ವಿಜಯ್ ದೇವರಕೊಂಡರಾಗಲಿ ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ.

ಟ್ರಂಪ್‌ ಗುಣಗಾನ ಮಾಡಿದ ಪ್ರಧಾನಿ ಮೋದಿ

ನವದೆಹಲಿ, ಅ.4- ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯದಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿದೆ ಎಂಬ ಪರಿಸ್ಥಿತಿಯ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್‌ ಅವರ ಕಾರ್ಯವೈಖರಿಯ ಗುಣಗಾನ ಮಾಡಿರುವುದು ಅಚ್ಚರಿ ಮೂಡಿಸಿದೆ.

ಇಸ್ರೇಲ್‌‍-ಗಾಜಾ ಸಂಘರ್ಷ ಕೊನೆಗೊಳಿಸಿ ಶಾಂತಿ ಸ್ಥಾಪಿಸಲು ಟ್ರಂಪ್‌ ಮಾಡಿದ ಪ್ರಯತ್ನ, ವಿಶೇಷವಾಗಿ ಒತ್ತೆಯಾಳುಗಳ ಬಿಡುಗಡೆ ಒಪ್ಪಂದಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ವಿಚಾರದಲ್ಲಿ ಟ್ರಂಪ್‌ ನಾಯಕತ್ವವನ್ನು ಸ್ವಾಗತಿಸಿರುವ ಮೋದಿ, ಶಾಶ್ವತ ಶಾಂತಿಗಾಗಿ ಭಾರತದ ಬೆಂಬಲ ಮುಂದುವರಿಯಲಿದೆ ಎಂದಿದ್ದಾರೆ.

ಉಭಯ ರಾಷ್ಟ್ರಗಳ ನಡುವಿನ ತೆರಿಗೆ ಸಮರ ಹಾಗೂ ನಂತರದ ಬೆಳವಣಿಗೆಗಳಿಂದ ಭಾರತ-ಅಮೆರಿಕ ನಡುವಣ ಸಂಬಂಧ ಹದಗೆಡುತ್ತಲೇ ಹೋಗಿದ್ದು ಎಲ್ಲರಿಗೂ ತಿಳಿದಿದೆ. ಇದೀಗ, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಅವರನ್ನು ಶ್ಲಾಘಿಸಿದ್ದಾರೆ.

ಇಸ್ರೇಲ್‌‍-ಗಾಜಾ ನಡುವಣ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಟ್ರಂಪ್‌ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಈ ವಿಚಾರದಲ್ಲಿ ಟ್ರಂಪ್‌ ನಾಯಕತ್ವವನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ. ಅಲ್ಲದೆ, ಗಾಜಾದಲ್ಲಿ ಶಾಂತಿ ಸ್ಥಾಪನೆ ಕಾರ್ಯದಲ್ಲಿ ನಿರ್ಣಾಯಕ ಪ್ರಗತಿ ಸಾಧಿಸಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗಾಜಾದಲ್ಲಿ ಶಾಂತಿ ಸ್ಥಾಪನೆಯ ಪ್ರಯತ್ನಗಳಲ್ಲಿ ನಿರ್ಣಾಯಕ ಪ್ರಗತಿಯ ಮಧ್ಯೆ, ನಾವು ಅಧ್ಯಕ್ಷ ಟ್ರಂಪ್‌ ಅವರ ನಾಯಕತ್ವವನ್ನು ಸ್ವಾಗತಿಸುತ್ತೇವೆ. ಒತ್ತೆಯಾಳುಗಳ ಬಿಡುಗಡೆಯ ಸುಳಿವು ಒಂದು ಪ್ರಮುಖ ಹೆಜ್ಜೆಯಾಗಿದೆ. ಶಾಶ್ವತ ಮತ್ತು ನ್ಯಾಯಯುತ ಶಾಂತಿಗಾಗಿನ ಎಲ್ಲಾ ಪ್ರಯತ್ನಗಳನ್ನು ಬಲವಾಗಿ ಬೆಂಬಲಿಸುವುದನ್ನು ಭಾರತ ಮುಂದುವರಿಸುತ್ತದೆ ಎಂದು ಮೋದಿ ಎಕ್‌್ಸ ಮಾಡಿದ್ದಾರೆ.

ಗಾಜಾದಲ್ಲಿ ಕದನ ವಿರಾಮಕ್ಕಾಗಿ 20 ಅಂಶಗಳ ಶಾಂತಿ ಪ್ರಸ್ತಾವನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಸಿದ್ಧಪಡಿಸಿದ್ದರು. ಇದನ್ನು ಇಸ್ರೇಲ್‌ ಅಂಗೀಕರಿಸಿತ್ತು. ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಮತ್ತು ಗಾಜಾದ ಅಧಿಕಾರವನ್ನು ಇತರ ಪ್ಯಾಲೆಸ್ತೀನಿಯನ್ನರಿಗೆ ಹಸ್ತಾಂತರಿಸಲು ಸಹ ಹಮಾಸ್‌‍ ಒಪ್ಪಿಕೊಂಡಿದೆ ಎನ್ನಲಾಗಿದೆ. ಆದಾಗ್ಯೂ, ಶಾಂತಿ ಪ್ರಸ್ತಾವನೆಯ ಇತರ ಹಲವು ಅಂಶಗಳ ಬಗ್ಗೆ ಸಮಾಲೋಚನೆಯ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹಮಾಸ್‌‍ ಹೇಳಿದೆ.

ಶಾಂತಿ ಪ್ರಸ್ತಾವನೆಯ ಕುರಿತು ನಿರ್ಧಾರ ತೆಗೆದುಕೊಳ್ಳಲು ಟ್ರಂಪ್‌ ಭಾನುವಾರ ಸಂಜೆ 6 ಗಂಟೆಯವರೆಗೆ ಹಮಾಸ್‌‍ಗೆ ಗಡುವು ನೀಡಿದ್ದಾರೆ. ಶಾಂತಿ ಪ್ರಸ್ತಾವನೆಯನ್ನು ಹಮಾಸ್‌‍ ಒಪ್ಪದಿದ್ದರೆ ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಟ್ರಂಪ್‌ ಎಚ್ಚರಿಕೆಯನ್ನೂ ನೀಡಿದ್ದಾರೆ.

ಟ್ರಂಪ್‌ ಎಚ್ಚರಿಕೆ ನೀಡಿದ ನಂತರ, ಅಕ್ಟೋಬರ್‌ ರಂದು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್‌‍ ಒಪ್ಪಿಕೊಂಡಿದೆ. ಹಲವು ಅಂಶಗಳು ಇನ್ನೂ ನಿರ್ಧಾರವಾಗಬೇಕಿದ್ದರೂ, ಒತ್ತೆಯಾಳುಗಳ ಬಿಡುಗಡೆಯು ಗಾಜಾಗೆ ಶಾಂತಿ ತರುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಲಿದೆ. ಹಮಾಸ್‌‍ ಪ್ರಸ್ತುತ 48 ಇಸ್ರೇಲಿ ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿದೆ, ಅವರಲ್ಲಿ ಸರಿಸುಮಾರು 20 ಜನರು ಸಾವನ್ನಪ್ಪಿದ್ದಾರೆ.

ಒತ್ತೆಯಾಳುಗಳನ್ನು 72 ಗಂಟೆಗಳ ಒಳಗೆ ಬಿಡುಗಡೆ ಮಾಡಲಾಗುವುದು ಎಂದು ಹಮಾಸ್‌‍ ಹೇಳಿದೆ ಎಂದು ಮೂಲಗಳು ತಿಳಿಸಿವೆ. ಪ್ರತಿಯಾಗಿ, ಗಾಜಾ ಮೇಲಿನ ದಾಳಿಗಳನ್ನು ನಿಲ್ಲಿಸಲು ಇಸ್ರೇಲ್‌ ಒಪ್ಪಿಕೊಂಡಿದೆ. ಗಾಜಾದಿಂದ ಇಸ್ರೇಲಿ ಪಡೆಗಳನ್ನು ಹಂತಹಂತವಾಗಿ ಹಿಂತೆಗೆದುಕೊಳ್ಳುವುದು ಸಹ ಶಾಂತಿ ಒಪ್ಪಂದದಲ್ಲಿ ಸೇರಿದೆ ಎಂದು ಮೂಲಗಳು ತಿಳಿಸಿವೆ.

ವಾಯು ವಿಹಾರ ಮಾಡುತ್ತಿದ್ದವರ ಮೇಲೆ ಕಾರು ಹರಿದು ಮೂವರ ದುರ್ಮರಣ

ಗಾಜಿಯಾಬಾದ್‌, ಅ. 4 (ಪಿಟಿಐ) ಬೆಳಗಿನ ವಾಯು ವಿಹಾರ ಮಾಡುತ್ತಿದ್ದವರ ಮೇಲೆ ಕಾರು ಹರಿದ ಪರಿಣಾಮ ಮೂವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಗಾಜಿಯಬಾದ್‌ನಲ್ಲಿ ಇಂದು ಬೆಳಗಿನ ನಡಿಗೆಗೆ ಹೊರಟಿದ್ದವರ ಮೇಲೆ ಕಾರು ಹರಿದ ಪರಿಣಾಮ ಮೂವರು ಮಹಿಳೆಯರು ಸಾವನ್ನಪ್ಪಿದ್ದು, ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಟಿ ರಸ್ತೆಯ ರಾಕೇಶ್‌ ಮಾರ್ಗದ ಬಳಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಅತಿ ವೇಗದ ಕಾರು ಶತಮ್‌ ವಿಹಾರ್‌ ಕಾಲೋನಿಯ ವಿಪಿನ್‌ ಶರ್ಮಾ (47) ಮತ್ತು ಕೊಟ್ವಾಲಿ ಪ್ರದೇಶದ ನ್ಯೂ ಕೋಟ್‌ಗಾಂವ್‌‍ ನಿವಾಸಿಗಳಾದ ಮೀನು ಪ್ರಜಾಪತಿ (56), ಕಮಲೇಶ್‌ (55) ಮತ್ತು ಸಾವಿತ್ರಿ ದೇವಿ (60) ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

ನಾಲ್ವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಮೀನು ಮತ್ತು ಸಾವಿತ್ರಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು, ಆದರೆ ಕಮಲೇಶ್‌ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್‌‍ ಉಪ ಆಯುಕ್ತ (ಡಿಸಿಪಿ) (ನಗರ) ಧವಲ್‌ ಜೈಸ್ವಾಲ್‌ ತಿಳಿಸಿದ್ದಾರೆ.

ಘಟನೆಯ ನಂತರ ಕಾರು ಚಾಲಕ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ, ಅದನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿ ಚಾಲಕನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಡಿಸಿಪಿ ತಿಳಿಸಿದ್ದಾರೆ.

ಇಂಡೀಸ್‌‍ ವಿರುದ್ಧದ ಮೊದಲ ಟೆಸ್ಟ್‌ : 448 ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡ ಭಾರತ

ಅಹಮದಾಬಾದ್‌, ಅ. 4 (ಪಿಟಿಐ) ಭಾರತ ಕ್ರಿಕೆಟ್‌ ತಂಡ ವೆಸ್ಟ್‌ ಇಂಡೀಸ್‌‍ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 448 ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡಿದೆ. ಮೂರನೇ ದಿನದ ಆರಂಭದಲ್ಲಿ 286 ರನ್‌ಗಳ ಗಮನಾರ್ಹ ಮುನ್ನಡೆಯೊಂದಿಗೆ 5 ವಿಕೆಟ್‌ಗೆ 448 ರನ್‌ಗಳೊಂದಿಗೆ ಆಟ ಆರಂಭಿಸಬೇಕಿದ್ದ ಭಾರತ ಇಂದು ಬೆಳಿಗ್ಗೆ ಏಕಾಏಕಿ ಡಿಕ್ಲೇರ್‌ ಘೋಷಿಸಿಕೊಂಡಿದೆ.

ಮೊದಲ ಇನ್ನಿಂಗ್ಸ್ ನಲ್ಲಿ ಕನ್ನಡಿಗ ಕೆಎಲ್‌ ರಾಹುಲ್‌ (100), ಧ್ರುವ್‌ ಜುರೆಲ್‌ (125) ಮತ್ತು ರವೀಂದ್ರ ಜಡೇಜಾ (104 ಅಜೇಯ) ಅವರ ಶತಕಗಳು ಪ್ರಮುಖವಾಗಿದ್ದವು. ಜಡೇಜಾ ಇಂದು ಬೆಳಿಗ್ಗೆ ಆಟ ಆರಂಭಿಸಬೇಕಿತ್ತಾದರೂ ಇಂದು ಏಕಾಏಕಿ ಡಿಕ್ಲೇರ್‌ ಮಾಡಿಕೊಂಡು ವೆಸ್ಟ್‌ ಇಂಡೀಸ್‌‍ ಎರಡನೇ ಇನಿಂಗ್ಸ್ ಅವಕಾಶ ಕಲ್ಪಿಸಲಾಗಿದೆ. ಸಂಕ್ಷಿಪ್ತ ಸ್ಕೋರ್‌ಗಳು: ವೆಸ್ಟ್‌ ಇಂಡೀಸ್‌‍ ಮೊದಲ ಇನ್ನಿಂಗ್‌್ಸನಲ್ಲಿ 162 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಭಾರತ 448/5 ಡಿಕ್ಲೇರ್‌ ಮಾಡಿದೆ.

ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಆರು ಉಗ್ರರ ಸೆರೆ

ಇಂಫಾಲ, ಅ. 4 (ಪಿಟಿಐ) ಮಣಿಪುರದ ಚುರಾಚಂದ್‌ಪುರ ಜಿಲ್ಲೆಯ ಕಾಡಿನಲ್ಲಿ ನಿಷೇಧಿತ ಸಂಘಟನೆಯ ಹಿರಿಯ ಕಮಾಂಡರ್‌ ಮತ್ತು ಇತರ ಐದು ಉಗ್ರರನ್ನು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಬಂಧಿಸಿದ್ದಾರೆ ಎಂದು ಅರೆಸೈನಿಕ ಪಡೆ ತಿಳಿಸಿದೆ.

ಆಪರೇಷನ್‌ ಸಾಂಗ್‌ಕೋಟ್‌ ಎಂಬ ಸಂಕೇತನಾಮದ ಧೈರ್ಯಶಾಲಿ ಅರಣ್ಯ ಕಾರ್ಯಾಚರಣೆಯಲ್ಲಿ ಅಸ್ಸಾಂ ರೈಫಲ್ಸ್ ಯುನೈಟೆಡ್‌ ಕುಕಿ ರಾಷ್ಟ್ರೀಯ ಸೇನೆಯ ಹಿರಿಯ ಕಮಾಂಡರ್‌ ಎಸ್‌‍ಎಸ್‌‍ ಲೆಫ್ಟಿನೆಂಟ್‌ ಜಮ್‌ಖೋಗಿನ್‌‍ ಗೈಟ್‌ ಲುಫೊ ಅಲಿಯಾಸ್‌‍ ಪೆಪ್ಸಿಯನ್ನು ಬಂಧಿಸಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಕಾರ್ಯಾಚರಣೆಯ ಸಮಯದಲ್ಲಿ ಇತರ ಐವರನ್ನು ಸಹ ಬಂಧಿಸಲಾಗಿದೆ ಎಂದು ಅದು ಹೇಳಿದೆ.ಯಶಸ್ವಿ ಕಾರ್ಯಾಚರಣೆಯು ಚುರಾಚಂದ್‌ಪುರ ಮತ್ತು ಜಿರಿಬಾಮ್‌ನಲ್ಲಿರುವ ಯುಕೆಎನ್‌ಎ ಜಾಲಗಳಿಗೆ ದುರ್ಬಲ ಹಿನ್ನಡೆಯನ್ನುಂಟುಮಾಡಿದೆ, ಈ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗೆ ಅಸ್ಸಾಂ ರೈಫಲ್ಸ್ ನ ನಿರಂತರ ಬದ್ಧತೆಯನ್ನು ಪುನರುಚ್ಚರಿಸಿದೆ ಎಂದು ಹೇಳಿಕೆ ತಿಳಿಸಿದೆ.

2024 ರ ಜನವರಿಯಲ್ಲಿ ಬಿಷ್ಣುಪುರ ಜಿಲ್ಲೆಯಲ್ಲಿ ತಂದೆ ಮತ್ತು ಮಗ ಸೇರಿದಂತೆ ಮೈತೈ ಸಮುದಾಯದ ನಾಲ್ವರು ಸದಸ್ಯರ ಹತ್ಯೆಯಲ್ಲಿ ಯುಕೆಎನ್‌ಎ ಕಮಾಂಡರ್‌ ಭಾಗಿಯಾಗಿದ್ದಾರೆ ಎಂದು ಮಣಿಪುರದ ಅಧಿಕಾರಿಗಳು ತಿಳಿಸಿದ್ದಾರೆ.

ಮೇ 2023 ರಿಂದ ಇಂಫಾಲ್‌ ಕಣಿವೆಯ ಮೈತೈಗಳು ಮತ್ತು ಪಕ್ಕದ ಬೆಟ್ಟಗಳ ಮೂಲದ ಕುಕಿ-ಝೋ ಗುಂಪುಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 260 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.

ತಮಿಳುನಾಡಿನಲ್ಲಿ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಬರಲಿದೆ ದಿನಸಿ

ಚೆನ್ನೈ, ಅ. 4 (ಪಿಟಿಐ) ದೀಪಾವಳಿ ಹಬ್ಬಕ್ಕೆ ತಮಿಳುನಾಡಿನ ಹಿರಿಯ ನಾಗರಿಕರು ಮತ್ತು ವಿಕಲಚೇತನರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

ಅಕ್ಟೋಬರ್‌ 20 ರಂದು ಬರುವ ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ನಾಳೆಯಿಂದ ಎರಡು ದಿನಗಳ ಕಾಲ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿಯಲ್ಲಿ ಅಗತ್ಯ ವಸ್ತುಗಳನ್ನು ನೇರವಾಗಿ ಹಿರಿಯ ನಾಗರಿಕರು ಮತ್ತು ವಿಕಲಚೇತನರ ಕುಟುಂಬ ಕಾರ್ಡ್‌ದಾರರ ಮನೆಗಳಿಗೆ ತಲುಪಿಸುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ.

ಆಗಸ್ಟ್‌ನಲ್ಲಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‌ ಪ್ರಾರಂಭಿಸಿದ ತಾಯುಮನವರ್‌ ಯೋಜನೆಯಡಿಯಲ್ಲಿ ಈ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಲಾಗುವುದು.ರಾಜ್ಯಾದ್ಯಂತ ಏಕಕಾಲದಲ್ಲಿ ವಿತರಣೆಯನ್ನು ಕೈಗೊಳ್ಳಲಾಗುವುದು ಎಂದು ಇಲ್ಲಿ ಅಧಿಕೃತ ಪ್ರಕಟಣೆ ತಿಳಿಸಿದೆ.

70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಕಲಚೇತನ ಕುಟುಂಬ ಪಡಿತರ ಚೀಟಿದಾರರು ತಮ್ಮ ನೆರೆಹೊರೆಯಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ತಮ್ಮ ಮಾಸಿಕ ಪಡಿತರವನ್ನು ಪಡೆಯಲು ಸರತಿ ಸಾಲಿನಲ್ಲಿ ಕಾಯುವ ತೊಂದರೆಯಿಂದ ಮುಕ್ತರಾಗುತ್ತಾರೆ.

ಎಫ್‌ಪಿ ಅಂಗಡಿಗಳಿಂದ ವಾಹನಗಳು ಅಗತ್ಯ ವಸ್ತುಗಳನ್ನು ನೇರವಾಗಿ ಫಲಾನುಭವಿಗಳ ಮನೆ ಬಾಗಿಲಿಗೆ ತರುತ್ತವೆ ಮತ್ತು ಪಿಡಿಎಸ್‌‍ ಸಿಬ್ಬಂದಿ ನಿಖರ ಮತ್ತು ಪಾರದರ್ಶಕ ವಿತರಣೆಗಾಗಿ ಎಲೆಕ್ಟ್ರಾನಿಕ್‌ ತೂಕದ ಮಾಪಕಗಳು ಮತ್ತು ಇ-ಪಿಒಎಸ್‌‍ ಯಂತ್ರಗಳನ್ನು ಬಳಸುತ್ತಾರೆ ಎಂದು ಅದು ಹೇಳಿದೆ.

ತಮಿಳುನಾಡಿನಾದ್ಯಂತ ಒಟ್ಟು 21.7 ಲಕ್ಷ ಕಾರ್ಡ್‌ದಾರರು ಈ ಕಾರ್ಯದ ಮೂಲಕ ಪ್ರಯೋಜನ ಪಡೆಯುತ್ತಾರೆ.ಈ ಮಾಹಿತಿಯನ್ನು ತಮ್ಮ ಸೂಚನಾ ಫಲಕಗಳಲ್ಲಿ ಹಾಕಲು ಅಂಗಡಿಗಳಿಗೆ ನಿರ್ದೇಶನ ನೀಡಲಾಗಿದೆ. ವೃದ್ಧರು ಮತ್ತು ಅಂಗವಿಕಲ ಸದಸ್ಯರು ಈ ಮನೆ ಬಾಗಿಲಿಗೆ ತಲುಪಿಸುವ ಯೋಜನೆಯನ್ನು ಪಡೆದುಕೊಂಡು ಪ್ರಯೋಜನ ಪಡೆಯುವಂತೆ ಸರ್ಕಾರ ಮನವಿ ಮಾಡಿಕೊಂಡಿದೆ.

ಉರುಸ್‌‍ ಮೆರವಣಿಗೆ ಸಮಯದಲ್ಲಿ ಕಲ್ಲು ತೂರಾಟ, ಬೆಳಗಾವಿ ಬೂದಿ ಮುಚ್ಚಿದ ಕೆಂಡ

ಬೆಳಗಾವಿ,ಅ.4– ಖಡಕ್‌ ಗಲ್ಲಿಯ ಮೆಹಬೂಬ್‌ ಸುಭಾನಿ ದರ್ಗಾದ ಉರುಸ್‌‍ ಮೆರವಣಿಗೆಯ ಸಮಯದಲ್ಲಿ ಹಿಂದೂಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಅನುಮತಿ ನೀಡಿದ ದಾರಿ ಬಿಟ್ಟು ಬೇರೆ ಮಾರ್ಗದಲ್ಲಿ ಮೆರವಣಿಗೆ ನಡೆಸಿ ಐ ಲವ್‌ ಮುಹಮದ್‌ ಘೋಷಣೆ ಕೂಗಿದಾಗ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಇದರಿಂದ ಕೆರಳಿ ಕಲ್ಲು ತೂರಾಟ ನಡೆಸಲಾಗಿದೆ.

ಘಟನೆಯಿಂದ ಬೆಳಗಾವಿ ನಗರ ಉದ್ವಿಗ್ನಗೊಂಡಿದೆ.ಸ್ಥಳಕ್ಕೆ ಬಂದ ಪೊಲೀಈಸರು ಪರಿಸ್ಥಿತಿ ನಿಯಂತ್ರಿಸಿದ್ದರೆ.ಮೆರವಣಿಗೆಗೆ ಅವಕಾಶವಿಲ್ಲದ ಪ್ರದೇಶವಾದ ಖಡಕ್‌ ಗಲ್ಲಿಗೆ ಕೆಲವರು ನುಗ್ಗಿದ್ದರಿ ಇದಕ್ಕೆ ಅಲ್ಲಿನ ನಿವಾಸಿಗಳು ಮಾರ್ಗವನ್ನು ಏಕೆ ಬದಲಾಯಿಸಲಾಗಿದೆ ಎಂದು ಪ್ರಶ್ನಿಸಿದರು ಮತ್ತು ಘೋಷಣೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಇದರಿಂದ ಘರ್ಷಣೆ ಉಂಟಾಗಿ ಉದ್ವಿಘ್ನ ಸನ್ನಿವೇಶ ಸೃಷ್ಠಿಯಾಗಿಕೆಲವರು ಕಲ್ಲು ತೂರಾಟ ನಡೆಸಿದ್ದಾರೆ.ಪೊಲೀಸ್‌‍ ಸಿಬ್ಬಂದಿ ಕೂಡಲೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರೆ
ಗುಂಪುಗಳನ್ನು ಚದುರಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಕಾಪಾಡಲು ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗಾವಿಗೆ ಭೇಟಿ ನೀಡುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ.

ಏಕಾಏಕಿ ಮೆರವಣಿಗೆ ಮಾಡಿದವರು ಮತ್ತು ಕಲ್ಲು ತೂರಿದ್ದಾರೆ ಕೆಲವರು ತಲ್ಚಾರ್‌ ಕೂಡ ತೋರಿಸಿ ಬೆದರಿಕೆ ಹಾಕಿದ್ದು ಅವರ ವಿರುದ್ಧ ಕ್ರಮಕ್ಕೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ನಾರಾಯಣ ಭರಮನಿ, ಇಬ್ಬರು ಡಿಸಿಪಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಸ್ಥಳದಲ್ಲಿ ಬಿಗುವಿಣ ವಾತಾವರಣ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್‌‍ ಕಮಿಷನರ್‌ ಭೂಷಣ್‌ ಬೊರಸೆ ಭೇಟಿ ನೀಡಿ ಸ್ಥಳೀಯರು, ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಡಕ್‌ ಗಲ್ಲಿಯಲ್ಲಿ ಎರಡು ಕೋಮಿನ ಜನರ ನಡುವೆ ಘರ್ಷಣೆ ನಡೆದಿದೆ. ಒಂದು ಧಾರ್ಮಿಕ ಕಾರ್ಯಕ್ರಮ ಇತ್ತು. ಒಂದು ರೂಟ್‌ ಫಿಕ್‌್ಸಇದೆ, ಅದನ್ನ ಬಿಟ್ಟು ಬೇರೆ ರೂಟ್‌ನಲ್ಲಿ ಬಂದಿದ್ದಾರೆ.

ಸ್ಥಳೀಯರು ಕಲ್ಲು ತೂರಾಟ ಆಗಿದೆ ಅಂತಾ ದೂರು ಕೊಟ್ಟಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಕ್ರಮ ಆಗುತ್ತೆ. ಯಾರಿಗೂ ಗಾಯ ಆಗಿಲ್ಲ, ಎರಡು ಕೋಮಿನ ಹಿರಿಯರು ಪರಿಸ್ಥಿತಿ ಕೂಡಲೇ ಸರಿಪಡೆಸಿದ್ದಾರೆ ಎಂದು ಹೇಳಿದರು. ಘಟನೆ ಸಂಬಂಧ ಸದ್ಯ 11 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.ಕಡೇಬಜಾರ್‌ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-10-2025)

ನಿತ್ಯ ನೀತಿ : ಜೀವನಕ್ಕೆ ಒಂದು ಗುರಿ ಇರಬೇಕು. ಗುರಿ ಇಲ್ಲದ ಬಾಳು ವ್ಯರ್ಥ. ಜೀವನದ ನಿಜವಾದ ಗುರಿಯ ಗುಟ್ಟನ್ನು ಅರ್ಥಮಾಡಿಸುವವನೇ ನಿಜವಾದ ಗುರು.

ಪಂಚಾಂಗ ಶನಿವಾರ 04-10-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ /ಮಾಸ: ಆಶ್ವಯುಜ / ಪಕ್ಷ:ಶುಕ್ಲ / ತಿಥಿ: ದ್ವಾದಶಿ / ನಕ್ಷತ್ರ: ಧನಿಷ್ಕಾ / ಯೋಗ: ಶೂಲ /ಕರಣ: ಕೌಲವ

ಸೂರ್ಯೋದಯ : ಬೆ.06.09
ಸೂರ್ಯಾಸ್ತ : 06.08
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30

ರಾಶಿ ಭವಿಷ್ಯ
ಮೇಷ
: ಸಣ್ಣಪುಟ್ಟ ಕಾಯಿಲೆಗಳು ಕಾಡಬಹುದು. ಸಹೋದ್ಯೋಗಿಗಳಿಂದ ತೊಂದರೆಯಾಗಬಹುದು.
ವೃಷಭ: ವ್ಯಾಪಾರಿಗಳಿಗೆ ಲಾಭದಾಯಕ ದಿನ. ಪೂರ್ಣ ಪ್ರಮಾಣದಲ್ಲಿ ದೈವಾನುಗ್ರಹ ಪ್ರಾಪ್ತಿ ಯಾಗಲಿದೆ. ಮೇಲಕಾರಿಗಳ ಉತ್ತೇಜನ ಸಿಗಲಿದೆ.
ಮಿಥುನ: ಮನೆಯಲ್ಲಿ ಎಲ್ಲರ ಆರೋಗ್ಯ ತಕ್ಕಮಟ್ಟಿಗೆ ಉತ್ತಮವಾಗಿರುತ್ತದೆ. ಅನಿರೀಕ್ಷಿತ ಧನವ್ಯಯ.

ಕಟಕ: ಮಕ್ಕಳ ವೃತ್ತಿ ಜೀವನದಲ್ಲಿ ಒಳ್ಳೆಯ ಸುದ್ದಿ ಕೇಳು ವಿರಿ. ಗ್ರಾಹಕ ವರ್ಗಕ್ಕೆ ಹರ್ಷ.
ಸಿಂಹ: ಅಧಿಕ ಆತ್ಮವಿಶ್ವಾಸ ದಿಂದ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡುವಿರಿ.
ಕನ್ಯಾ: ಮಧ್ಯವರ್ತಿಗಳ ಸಹಾಯದಿಂದ ವಿವಾಹದ ವಿಷಯದಲ್ಲಿ ಅನುಕೂಲಕರವಾಗಲಿದೆ.

ತುಲಾ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ.
ವೃಶ್ಚಿಕ: ಅಧಿಕ ಆತ್ಮವಿಶ್ವಾಸ ದಿಂದ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡುವಿರಿ
ಧನುಸ್ಸು: ಆತ್ಮಸ್ಥೈರ್ಯದಿಂದ ಮಾಡಿದ ಕೆಲಸಗಳಿಗೆ ಉತ್ತಮ ಫಲಿತಾಂಶ ದೊರೆಯಲಿದೆ.

ಮಕರ: ಅಭಿವೃದ್ಧಿಯಲ್ಲಿ ಹಲವು ಅಡೆತಡೆಗಳು ಎದುರಾಗಲಿವೆ. ಆಯಾಸ ಹೆಚ್ಚಾಗಲಿದೆ.
ಕುಂಭ: ಸರ್ಕಾರದಿಂದ ಬರಬೇಕಿದ್ದ ಹಣ ಬರಲಿದೆ. ಸಮಸ್ಯೆಗಳು ದೂರವಾಗಲಿವೆ.
ಮೀನ: ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಕಡಿಮೆಯಾಗಲಿದೆ.

ಮೂವರು ಭಾರತೀಯ ಬ್ಯಾಟರ್​ಗಳ ಶತಕ : ವಿಂಡೀಸ್ ವಿರುದ್ಧ ಭಾರತ ಬೃಹತ್ ಮುನ್ನಡೆ

ಅಹಮದಾಬಾದ್‌, ಅ. 3 (ಪಿಟಿಐ) ವೆಸ್ಟ್‌ ಇಂಡೀಸ್‌‍ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್‌.ರಾಹುಲ್‌ ಶತಕ ಬಾರಿಸಿದ್ದಾರೆ. ರಾಹುಲ್​ 197 ಎಸೆತಗಳಲ್ಲಿ 12 ಬೌಂಡರಿ ಸಹಿತ 100 ರನ್​ಗಳಿಸಿದರು. ಇದು ಅವರ ವೃತ್ತಿ ಜೀವನದ 11ನೇ ಹಾಗೂ ಭಾರತದ ನೆಲದಲ್ಲಿ 2ನೇ ಶತಕವಾಗಿದೆ. ಎರಡನೇ ದಿನ 448ರನ್​ಗಳಿಸಿದೆ. ಇಡೀ ದಿನ ವೆಸ್ಟ್ ಇಂಡೀಸ್ ಬೌಲರ್​ಗಳು ಕೇವಲ 3 ವಿಕೆಟ್ ಮಾತ್ರ ಪಡೆಯಲು ಸಾಧ್ಯವಾಯಿತು. ಮೂವರು ಭಾರತೀಯ ಬ್ಯಾಟರ್​ಗಳು ಶತಕ ಸಿಡಿಸಿ ಮಿಂಚಿದರು.

ರಾಹುಲ್ ವಿಕೆಟ್ ನಂತರ ನಂತರ ಒಂದಾದ ಜುರೆಲ್-ಜಡೇಜಾ 5ನೇ ವಿಕೆಟ್ ಜೊತೆಯಾಟದಲ್ಲಿ 206 ರನ್​ಗಳ ಜೊತೆಯಾಟ ನಡೆಸಿದರು. ಈ ಇಬ್ಬರು ಬ್ಯಾಟರ್​ಗಳು 55.1 ಓವರ್​ಗಳ ಕಾಲ ವಿಂಡೀಸ್ ಬೌಲರ್​ಗಳನ್ನ ಹೈರಾಗೊಳಿಸಿದರು. ಜುರೆಲ್ 210 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್​ಗಳೊಂದಿಗೆ 125 ರನ್​ಗಳಿಸಿ ಔಟ್ ಆದರು. ಜುರೆಲ್ಗೆ ಇದು ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಚೊಚ್ಚಲ ಶತಕವಾಗಿದೆ. ಜುರೆಲ್ ಬೆನ್ನಲ್ಲೇ ಜಡೇಜಾ ಕೂಡ ಶತಕ ಪೂರ್ಣಗೊಳಿಸಿದರು. 168 ಎಸೆತಗಳಲ್ಲಿ ಶತಕ ಪೂರೈಸಿದ ಜಡೇಜಾ ವೃತ್ತಿ ಜೀವನದ 6ನೇ ಶತಕ ದಾಖಲಿಸಿದ್ದಾರೆ.

ಜಡೇಜಾ 176 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್​ಗಳ ಸಹಿತ ಅಜೇಯ 104 ರನ್​ಗಳಿಸಿದ್ದು 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ವಾಷಿಂಗ್ಟನ್ ಸುಂದರ್ ಅಜೇಯ 9 ರನ್​ಗಳಿಸಿದ್ದರು.
ರೋಸ್ಟನ್ ಚೇಸ್ 90ಕ್ಕೆ2, ಖಾರಿ ಪಿಯರ್ 91ಕ್ಕೆ1, ಜೊಮೆಲ್ ವಾರಿಕನ್ 102ಕ್ಕೆ1, ಜೇಡನ್ ಸೀಲ್ಸ್ 53ಕ್ಕೆ1 ವಿಕೆಟ್ ಪಡೆದರು.