Friday, November 7, 2025
Home Blog Page 76

ನ್ಯೂಜಿಲೆಂಡ್‌ ವಿರುದ್ದ ಸರಣಿಯಿಂದ ಗ್ಲೆನ್‌ ಮ್ಯಾಕ್ಸ್ ವೆಲ್‌‍ ಔಟ್‌

ಮೆಲ್ಬೋರ್ನ್‌,ಸೆ.30- ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಸ್ಟಾರ್‌ ಆಟಗಾರ ಗ್ಲೆನ್‌ ಮ್ಯಾಕ್ಸ್ ವೆಲ್‌‍ ಅವರು ಮೌಂಟ್‌ ಮೌಂಗನುಯಿಯಲ್ಲಿ ನೆಟ್ಸ್ ನಲ್ಲಿ ಬೌಲಿಂಗ್‌ ಮಾಡುವಾಗ ಮಣಿಕಟ್ಟಿನ ಮುರಿತ ಗಾಯವಾಗಿದೆ.ಇದರಿಂದ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿದ್ದು ಮುಂದಿನ ನ್ಯೂಜಿಲೆಂಡ್‌ ವಿರುದ್ಧದ ಮೂರು ಟಿ 20 ಪಂದ್ಯಗಳ ಸರಣಿಯಿಂದ ಹೊರಬಿದಿದ್ದಾರೆ.

ವಿಕೆಟ್‌ ಕೀಪರ್‌/ಬ್ಯಾಟರ್‌ ಜೋಶ್‌ ಫಿಲಿಪ್‌ ಅವರನ್ನು ಬುಧವಾರದಿಂದ ಮೌಂಟ್‌ ಮೌಂಗನುಯಿಯಲ್ಲಿರುವ ಬೇ ಓವಲ್‌ನಲ್ಲಿ ನಡೆಯಲಿರುವ ಸರಣಿಗೆ ಕರೆಸಲಾಗಿದೆ. ಸರಣಿಯ ಪೂರ್ವಭಾವಿ ಹಂತದಲ್ಲಿ ಜೋಶ್‌ ಇಂಗ್ಲಿಸ್‌‍ ಅವರ ಕಾಲಿನ ಗಾಯದಿಂದ ಹೊರಗುಳಿದಿರುವುದು ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದುಹಿನ್ನಡೆಯಾಗಿದೆ, ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿ ಗೆಲುವಿನಲ್ಲಿ ಅಜೇಯ ಅರ್ಧಶತಕ ಗಳಿಸಿದ 36 ವರ್ಷದ ಮ್ಯಾಕ್ಸ್ ವೆಲ್‌‍ ನೆಟ್ಸ್ ನಲ್ಲಿ ಬೌಲಿಂಗ್‌ ಮಾಡುವಾಗ ಬಲ ಮಣಿಕಟ್ಟಿಗೆ ಪೆಟ್ಟು ಬಿದ್ದಿದೆ.

ಮ್ಯಾಕ್ಸ್ ವೆಲ್‌‍ ಆಸ್ಟ್ರೇಲಿಯಾಕ್ಕೆ ಮರಳಲಿದ್ದಾರೆ ಮತ್ತು ತಜ್ಞರನ್ನು ಭೇಟಿಯಾಗಲಿದ್ದಾರೆ. ಅವರ ಬದಲಿ ಆಟಗಾರ ಫಿಲಿಪ್‌ ಇತ್ತೀಚಿನ ಭಾರತ ಪ್ರವಾಸದಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ.

ಮುಂಬರುವ ಆಶಸ್‌‍ ಸರಣಿಗೆ ಆದ್ಯತೆ ನೀಡಲಾಗುತ್ತಿದೆ.ಬೆನ್ನು ನೋವಿನಿಂದಾಗಿ ಪ್ರಮುಖ ವೇಗಿ ಹಾಗು ತಂಡದ ನಾಯಕ ಪ್ಯಾಟ್‌ ಕಮಿನ್ಸ್ ಕೂಡ ಪ್ರಸ್ತುತ ಆಸ್ಟ್ರೇಲಿಯಾ ತಂಡದ ಭಾಗವಾಗಿಲ್ಲ,ಜೊತೆಗೆ ನಾಥನ್‌ ಎಲಿಸ್‌‍ ತಮ ಮೊದಲ ಮಗುವಿನ ಜನನದ ನಿಮಿತ್ತ ನ್ಯೂಜಿಲೆಂಡ್‌ ಸರಣಿಯಿಂದ ಹೊರಗುಳಿದಿದ್ದಾರೆ.ಹಿಗಾಗಿ ಆಸ್ಸಿಸ್‌‍ ಯುವ ತಂಡಕ್ಕೆ ಸರಣಿ ಸವಾಲಾಗಿದೆ.

ಲೈಂಗಿಕ ಕಿರುಕುಳ ನೀಡಿದ ಆರೋಪಿ ಬಾಬಾ ಚೈತನ್ಯಾನಂದನ ಮಹಿಳಾ ಸಹಾಯಕಿಯರ ವಿಚಾರಣೆ

ನವದೆಹಲಿ, ಸೆ.30 (ಪಿಟಿಐ) ಖಾಸಗಿ ಸಂಸ್ಥೆಯೊಂದರಲ್ಲಿ 17 ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಚೈತನ್ಯಾನಂದ ಸರಸ್ವತಿ ಅವರನ್ನು ಹಾಗೂ ಅವರ ಇಬ್ಬರು ಮಹಿಳಾ ಸಹಾಯಕರು ವಿಚಾರಣೆಗೆ ಒಳಪಡಿಸಲಾಗಿದೆ.

ಸ್ವಾಮಿಜಿ ಮಹಿಳಾ ಸಹಾಯಕಿಯರು ಸಂತ್ರಸ್ತರಿಗೆ ಬೆದರಿಕೆ ಹಾಕಿ ತಮ್ಮ ಅಶ್ಲೀಲ ಸಂದೇಶಗಳನ್ನು ಅಳಿಸುವಂತೆ ಒತ್ತಾಯಿಸಿದ್ದರು ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

62 ವರ್ಷದ ಸರಸ್ವತಿ ಅವರ ಫೋನ್‌ನಲ್ಲಿ ಅನೇಕ ಮಹಿಳೆಯರೊಂದಿಗೆ ಚಾಟ್‌ ಮಾಡಿರುವುದನ್ನು ಪೊಲೀಸರು ಕಂಡುಕೊಂಡಿದ್ದಾರೆ, ಅವರು ಸುಳ್ಳು ಭರವಸೆಗಳ ಮೂಲಕ ಅವರನ್ನು ಆಕರ್ಷಿಸಲು ಪ್ರಯತ್ನಿಸಿದರು.ಅವರ ಫೋನ್‌ಗಳಲ್ಲಿ ಅವರು ಏರ್‌ ಹೋಸ್ಟೆಸ್‌‍ಗಳೊಂದಿಗೆ ಇರುವ ಬಹು ಛಾಯಾಚಿತ್ರಗಳು ಮತ್ತು ಮಹಿಳೆಯರ ಪ್ರದರ್ಶನ ಚಿತ್ರಗಳ (ಡಿಪಿ) ಸ್ಕ್ರೀನ್‌ಶಾಟ್‌ಗಳು ಸಹ ಇದ್ದವು ಎಂದು ಅಧಿಕಾರಿ ಹೇಳಿದರು.

ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರೀಯವಾಗಿ ಅನುಮೋದಿತ ಖಾಸಗಿ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡಾಗ ಸ್ವಯಂ ಘೋಷಿತ ದೇವಮಾನವ ತನ್ನ ಕ್ರಿಮಿನಲ್‌ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಸರಸ್ವತಿ ತನಿಖೆಗೆ ಸಹಕರಿಸುತ್ತಿಲ್ಲ ಮತ್ತು ವಿಚಾರಣಾಧಿಕಾರಿಗಳನ್ನು ದಾರಿ ತಪ್ಪಿಸುತ್ತಲೇ ಇದ್ದಾರೆ ಎಂದು ಅಧಿಕಾರಿ ಹೇಳಿದರು.ಅವರು ತಮ್ಮ ಕೃತ್ಯಗಳಿಗೆ ಯಾವುದೇ ಪಶ್ಚಾತ್ತಾಪವನ್ನು ತೋರಿಸಿಲ್ಲ ಮತ್ತು ತಪ್ಪಿಸಿಕೊಳ್ಳುವ ಉತ್ತರಗಳನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಅವರ ಇಬ್ಬರು ಮಹಿಳಾ ಸಹಚರರನ್ನು ವಿಚಾರಣೆ ನಡೆಸಲಾಗುತ್ತಿದೆ ಮತ್ತು ತನಿಖೆಯ ಭಾಗವಾಗಿ ಅವರನ್ನು ಎದುರಿಸಲಾಗುತ್ತಿದೆ ಎಂದು ಅವರು ಹೇಳಿದರು.

ವಿಚಾರಣೆಯ ಸಮಯದಲ್ಲಿ, ಸಾಕ್ಷ್ಯಾಧಾರಗಳನ್ನು ಎದುರಿಸಿದಾಗಲೂ, ಸರಸ್ವತಿ ಪದೇ ಪದೇ ಸುಳ್ಳು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಖಲೆಗಳು ಮತ್ತು ಡಿಜಿಟಲ್‌ ಪುರಾವೆಗಳನ್ನು ತೋರಿಸಿದಾಗ ಮಾತ್ರ ಅವನು ಇಷ್ಟವಿಲ್ಲದೆ ಪ್ರತಿಕ್ರಿಯಿಸುತ್ತಾನೆ ಎಂದು ಅವರು ಹೇಳಿದರು. ತನ್ನ ಬಲಿಪಶುಗಳಿಗೆ ಕರೆ ಮಾಡುತ್ತಿದ್ದ ಸ್ಥಳಗಳನ್ನು ತೋರಿಸಲು ಅವನನ್ನು ಸಂಸ್ಥೆಯ ಆವರಣಕ್ಕೆ ಕರೆದೊಯ್ಯಲಾಯಿತು.

“ಶೇ.80 ಕಮಿಷನ್‌ ಸರ್ಕಾರಕ್ಕೆ ಕಿಂಚಿತ್ತಾದರೂ ಘನತೆ ಉಳಿದಿದ್ದರೆ ಕೂಡಲೇ ರಾಜೀನಾಮೆ ನೀಡಬೇಕು”

ಬೆಂಗಳೂರು,ಸೆ.30– ಕರ್ನಾಟಕ ಗುತ್ತಿಗೆದಾರರು ಸಂಘವು ಕಾಂಗ್ರೆಸ್‌‍ ಭ್ರಷ್ಟಾಚಾರ ಬಯಲು ಮಾಡಿರುವ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿಂಚಿತ್ತಾದರೂ ಘನತೆ ಉಳಿದಿದ್ದರೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಸವಾಲು ಹಾಕಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಪ್ರತಿಪಕ್ಷದಲ್ಲಿದ್ದಾಗ ಸಿ.ಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರುಗಳು ಶೇ.40 ಪರ್ಸೆಂಟ್‌ ಕಮಿಷನ್‌ ಎಂದು ಆರೋಪಿಸಿದ್ದರು. ಇಂದು ಇವರ ಆಳ್ವಿಕೆಯಲ್ಲಿ ಗುತ್ತಿಗೆದಾರರೇ ದುಪ್ಪಟ್ಟಾಗಿರುವುದನ್ನು ಬಯಲಿಗೆಳೆದಿದ್ದಾರೆ- ಕರ್ನಾಟಕದಲ್ಲಿ ಶೇ.80 ಕಮಿಷನ್‌ ಸರ್ಕಾರವಾಗಿದೆ ಎಂದು ವಾಗ್ದಳಿ ನಡೆಸಿದ್ದಾರೆ.

ಕರ್ನಾಟಕ ಗುತ್ತಿಗೆದಾರರು ಸಂಘವು, ಪತ್ರದಲ್ಲಿ ಹೆಸರಿಸಿರುವ ಸಚಿವರು ಆರೋಪಗಳನ್ನು ನಿರಾಕರಿಸಲು ಏಕೆ ಮುಂದಾಗಿಲ್ಲ? ರಾಜ್ಯದ ಕೀರ್ತಿಯನ್ನು ಕೆಸರೆರಚಾಟದ ಮೂಲಕ ಎಳೆದು ತರುತ್ತಿರುವಾಗ ಸಿಎಂ ಮೌನವಾಗಿರುವುದೇಕೆ? ಎಂದು ತರಾಟೆಗೆತಗೆದುಕೊಂಡಿದ್ದಾರೆ.

ಬಿಡದಿ ಟೌನ್‌ಶಿಪ್‌ನಂತಹ ಯೋಜನೆಗಳನ್ನು ಅಕ್ರಮ ರಿಯಲ್‌ ಎಸ್ಟೇಟ್‌ ವ್ಯವಹಾರಗಳಿಗೆ ಮತ್ತು ಫಲವತ್ತಾದ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಏಕೆ ಬಳಸಲಾಗುತ್ತಿದೆ? ಇದು ದ್ರೋಹದ ಪರಮಾವಧಿ. ಪಾರದರ್ಶಕತೆ ಬದಲಿಗೆ ಕಾಂಗ್ರೆಸ್‌‍ ಕಿರುಕುಳ, ಲೂಟಿ ಮತ್ತು ಹಿಂಬಾಗಿಲ ಭ್ರಷ್ಟಾಚಾರವನ್ನು ನೀಡಿದೆ.ಕರ್ನಾಟಕವು ಈ ಭ್ರಷ್ಟ ಕಾಂಗ್ರೆಸ್‌‍ ಆಡಳಿತವನ್ನು ಇನ್ನು ಮುಂದೆ ಭರಿಸಲು ಸಾಧ್ಯವಿಲ್ಲ ಎಂದು ಅಶೋಕ್‌ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಕಲ್ಯಾಣ ಕರ್ನಾಟಕದ ಪ್ರವಾಹ ಪೀಡಿತ ಪ್ರತಿ ಕುಟುಂಬಕ್ಕೆ 50,000 ರೂ. ಗಳ ತುರ್ತು ಪರಿಹಾರ ನೀಡುವಂತೆ ಆರ್‌.ಅಶೋಕ್‌ ಆಗ್ರಹ

ಬೆಂಗಳೂರು,ಸೆ.30– ಕಲ್ಯಾಣ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ಥರಿಗೆ ರಾಜ್ಯ ಸರ್ಕಾರ ಕೂಡಲೇ ಪ್ರತಿ ಕುಟುಂಬಕ್ಕೆ 50,000 ರೂ. ಗಳ ತುರ್ತು ಪರಿಹಾರವನ್ನು ಇಂದೇ ಘೋಷಣೆ ಮಾಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ.

ಈ ಕುರಿತು ತಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅಶೋಕ್‌ ಅವರು, ನಿಮ ವಿಮಾನ ಟೇಕಾಫ್‌ ಆಗುವ ಮುನ್ನ, ಪರಿಹಾರ ಕಾರ್ಯ ಟೇಕಾಫ್‌ ಆಗಲಿ ಎನ್ನುವ ಉದ್ದೇಶದಿಂದ ನಿಮ ಸರ್ಕಾರಕ್ಕೆ ನನ್ನ ಆಗ್ರಹವಾಗಿದೆ. ಪ್ರತಿ ಕುಟುಂಬಕ್ಕೆ 50,000 ರೂ. ತುರ್ತು ಪರಿಹಾರ ಘೋಷಿಸಿ ಎಂದು ಆಗ್ರಹಿಸಿದ್ದಾರೆ.

ಕಳೆದ ವರ್ಷಗಳಂತೆ ಸಾಫ್‌್ಟವೇರ್‌ ಲೋಪ, ಸರ್ವರ್‌ ಡೌನ್‌, ಇನ್ನೊಂದು ಮತ್ತೊಂದು ಕುಂಟು ನೆಪ ಹೇಳುವುದನ್ನು ಬಿಟ್ಟು, ಕಾಳಜಿ ಕೇಂದ್ರಗಳಲ್ಲಿರುವ ಪ್ರತಿ ಸಂತ್ರಸ್ತ ಕುಟುಂಬಕ್ಕೆ ಈ ಕೂಡಲೇ 50,000 ರೂ. ತುರ್ತು ಪರಿಹಾರ ಹಣ ಬಿಡುಗಡೆ ಮಾಡಿ. ಪರಿಹಾರ ವಿಳಂಬ ಮಾಡಿ ನೆರೆ ಸಂತ್ರಸ್ತರು ದೀಪಾವಳಿಯನ್ನು ಕತ್ತಲೆಯಲ್ಲಿ ಕಳೆಯುವಂತೆ ಮಾಡಬೇಡಿ ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್‌ ನೀಡಬೇಕು. ಕಲ್ಯಾಣ ಕರ್ನಾಟಕದ ಜನ ಸಂಕಷ್ಟದಲ್ಲಿರುವ ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌‍ ಸರ್ಕಾರ ಈ ಭಾಗದ ಜನರ ನೋವಿಗೆ ಸ್ಪಂದಿಸಬೇಕು. ಕಲ್ಯಾಣ ಕರ್ನಾಟಕಕ್ಕೆ 10,000 ಕೋಟಿ ರೂಪಾಯಿ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡಬೇಕು. ಘೋಷಣೆ ಮಾಡುವುದು ಮಾತ್ರವಲ್ಲ ಅದನ್ನು ಬಿಡುಗಡೆ ಮಾಡಿ ಪುನರ್‌ನಿರ್ಮಾಣ, ಪುನರ್ವಸತಿ ಕೆಲಸಗಳಿಗೆ ಬಳಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ನಿಮ ವೈಮಾನಿಕ ಸಮೀಕ್ಷೆ ಮತ್ತೊಂದು ಕಾಟಾಚಾರದ ಸಮೀಕ್ಷೆ ಆಗದೆ, ವಿಮಾನ ಟೇಕಾಫ್‌ ಆಗುವ ಮುನ್ನ, ಪರಿಹಾರ ಕಾರ್ಯ ಟೇಕಾಫ್‌ ಆಗಲಿ. ಪ್ರಗಾಢ ನಿದ್ದೆಯಲ್ಲಿದ್ದ ನಿಮ ಸರ್ಕಾರಕ್ಕೆ, ಕಲ್ಯಾಣ ಕರ್ನಾಟಕದ ಪ್ರವಾಹ ಪರಿಸ್ಥಿತಿಯ ಬಗ್ಗೆ ಈಗಲಾದರೂ ನೆನಪಾಯಿತಲ್ಲ ಅದೇ ದೊಡ್ಡ ಪುಣ್ಯ. ಆದರೆ ಪ್ರವಾಹದಿಂದ ತತ್ತರಿಸಿರುವ ಕಲ್ಯಾಣ ಕರ್ನಾಟಕದ ಜನರಿಗೆ ಬೇಕಿರುವುದು ನಿಮ ವೈಮಾನಿಕ ಸಮೀಕ್ಷೆಯ ಫೋಟೋ ಶೂಟ್‌ ಅಲ್ಲ, ತುರ್ತು ಪರಿಹಾರ ಎನ್ನುವುದು ಅಲ್ಲಿನ ಜನರ ನಿರೀಕ್ಷೆ ಎಂದು ಹೇಳಿದ್ದಾರೆ.

ಸ್ಪಾಟ್‌ ಪರಿಶೀಲನೆ, ಸ್ಪಾಟ್‌ ಚೆಕ್‌ ವಿತರಣೆ ಆಗಲಿ.ನೆರೆ ಕಡಿಮೆಯಾದ ಕೂಡಲೇ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಅಧಿಕಾರಿಗಳ ತಂಡ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ, ಬೆಳೆ, ಆಸ್ತಿಪಾಸ್ತಿ, ಜಾನುವಾರು ನಷ್ಟದ ಸಮಗ್ರ ಸಮೀಕ್ಷೆ ನಡೆಸಬೇಕು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಾನು ಕಂದಾಯ ಸಚಿವನಾಗಿದ್ದಾಗ ಅಂದಿನ ಸಿಎಂ ಯಡಿಯೂರಪ್ಪನವರು ಸ್ಥಳದಲ್ಲೇ ಚೆಕ್‌ ವಿತರಣೆ ಮಾಡಿದ್ದರು.

ಕಾಂಗ್ರೆಸ್‌‍ ಸರ್ಕಾರವೂ ಅದೇ ರೀತಿ ಮಾಡಿ ಸ್ಥಳದಲ್ಲೇ ಚೆಕ್‌ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಸಾಂಕ್ರಾಮಿಕ ರೋಗ ಭೀತಿ, ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಪ್ರವಾಹ ಇಳಿದ ಮೇಲೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಾಗಿರುತ್ತದೆ. ಆದ್ದರಿಂದ ಆರೋಗ್ಯ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಕಾರ್ಯ ಪ್ರವೃತ್ತರಾಗಬೇಕು. ಮೊಬೈಲ್‌ ಆರೋಗ್ಯ ವ್ಯಾನ್‌ಗಳನ್ನು ಪ್ರತಿ ಗ್ರಾಮಕ್ಕೆ ಕಳುಹಿಸುವ ಮೂಲಕ ಅರಿವು ಮೂಡಿಸಬೇಕು, ಅಗತ್ಯ ಔಷಧಿಗಳ ಬೃಹತ್‌ ಶೇಖರಣೆ ಮಾಡಿಕೊಳ್ಳುವ ಜೊತೆಗೆ ಸಾಂಕ್ರಾಮಿಕ ರೋಗಗಳು ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಪರಿಹಾರ ವಿತರಣೆಯಲ್ಲಿ ಪಾರದರ್ಶಕತೆ ಇರಬೇಕು. ಕಳೆದ ಎರಡು ವರ್ಷಗಳಲ್ಲಿ ನೆರೆ, ಬರ ಪರಿಸ್ಥಿತಿಗಳು ಉಂಟಾದಾಗ ಪರಿಹಾರ ವಿತರಣೆಯಲ್ಲಿ ಹಲವಾರು ಸಂತ್ರಸ್ತರು ಬಿಟ್ಟುಹೋಗಿರುವ, ಸಂತ್ರಸ್ತರು ಪರಿಹಾರಕ್ಕಾಗಿ ವರ್ಷಗಟ್ಟಲೆ ಕಚೇರಿಗಳಿಗೆ ಅಲೆದಾಟ ನಡೆಸಿರುವ ಅನೇಕ ಉದಾಹರಣೆಗಳು ಇವೆ. ಈ ಬಾರಿಯಾದರೂ ಯಾರೂ ಪರಿಹಾರದಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು.

ಅರ್ಹ ಸಂತ್ರಸ್ತರಿಗೆ ಪರಿಹಾರ ತಲುಪಿದ ಬಗ್ಗೆ ಸಂಪೂರ್ಣ ಮಾಹಿತಿ ಸಾರ್ವಜನಿಕವಾಗಿ ಲಭ್ಯವಾಗಬೇಕು ಪರಿಹಾರ ಕಾರ್ಯಗಳಲ್ಲಿ ಯಾವುದೇ ರಾಜಕೀಯ ದುರುಪಯೋಗ, ಭ್ರಷ್ಟಾಚಾರ ಆಗದಂತೆ ಎಚ್ಚರವಹಿಸಬೇಕು. ಸಿಎಂ ಸಿದ್ದರಾಮಯ್ಯನವರೇ, ನಿಮ ವೈಮಾನಿಕ ಸಮೀಕ್ಷೆಯ ಫ್ಲೈಟ್‌ ಟೇಕ್‌ ಆಫ್‌ ಆಗುವ ಮುನ್ನ, ನಿಮ ಪರಿಹಾರ ಕಾರ್ಯ ಟೇಕ್‌ ಆಫ್‌ ಆಗಲಿ. ಇದೇ ಉತ್ತರ ಕರ್ನಾಟಕದ ಜನರ ಆಗ್ರಹವಾಗಿದೆ ಎಂದು ಅಶೋಕ್‌ ಹೇಳಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-09-2025)

ನಿತ್ಯ ನೀತಿ : ಖರ್ಚಾಗೋ ಹಣಕ್ಕೆ, ಕರಗಿ ಹೋಗೋ ಆಸ್ತಿಗೆ, ಮುಪ್ಪಾಗೋ ಸೌಂದರ್ಯಕ್ಕೆ ಇರುವ ಬೆಲೆ, ಮನುಷ್ಯನ ಒಳ್ಳೆಯತನಕ್ಕೆ,ನಂಬಿಕೆಗೆ ಹಾಗೂ ನಿಯತ್ತಿಗೆ ಇಲ್ಲ.

ಪಂಚಾಂಗ : ಮಂಗಳವಾರ, 30-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಶುಕ್ಲ / ತಿಥಿ: ಅಷ್ಟಮಿ / ನಕ್ಷತ್ರ: ಮೂಲಾ / ಯೋಗ: ಶೋಭನ / ಕರಣ: ಬಾಲವ ಪೂರ್ಣ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.10
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30

ರಾಶಿಭವಿಷ್ಯ :
ಮೇಷ: ದೂರ ಪ್ರಯಾಣದಿಂದ ತೊಂದರೆ. ಅನಗತ್ಯ ಸಮಸ್ಯೆಗಳು ಎದುರಾಗಬಹುದು.
ವೃಷಭ: ಚಾಡಿ ಮಾತುಗಳನ್ನು ಕೇಳದಿರಿ. ಉದ್ಯೋಗದ ಕಡೆ ಗಮನ ನೀಡುವುದು ಒಳಿತು.
ಮಿಥುನ: ಭೂಮಿ ವಿಚಾರದಲ್ಲಿ ನಷ್ಟ ಅನುಭವಿಸುವಿರಿ. ನಂಬಿಕಸ್ಥ ರಿಂದ ದ್ರೋಹವಾಗಲಿದೆ.

ಕಟಕ: ಆರೋಗ್ಯ ಕಾಪಾಡಿ ಕೊಳ್ಳಲು ವ್ಯಾಯಾಮ ಅಥವಾ ಯೋಗ ಮಾಡಿ. ಬಂಧುಗಳೊಂದಿಗೆ ಅನಗತ್ಯ ವಿವಾದ ಬೇಡ.
ಸಿಂಹ: ಸಹೋದರರೊಂದಿಗೆ ಮನಸ್ತಾಪವಾಗಲಿದೆ. ಮನಸ್ಸಿನಲ್ಲಿ ಗೊಂದಲ.
ಕನ್ಯಾ: ಹಳೆ ಸ್ನೇಹಿತರ ಜೊತೆ ಸಂವಾದ ನಡೆಸುವುದರಿಂದ ಮನಸ್ಸಿಗೆ ಸಂತೋಷವಾಗುತ್ತದೆ. ಕುಲದೇವರನ್ನು ಪ್ರಾರ್ಥಿಸಿ.

ತುಲಾ: ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ತೋರಿಸುವರು. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ವ್ಯವಹಾರದಲ್ಲಿ ಹೊಸ ಒಪ್ಪಂದಗಳಾಗಲಿವೆ.
ವೃಶ್ಚಿಕ: ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗಕ್ಕೆ ಅವಕಾಶಗಳು ಒದಗಿಬರಲಿವೆ.
ಧನುಸ್ಸು: ಆರ್ಥಿಕ ಸ್ಥಿತಿಯು ಮೊದಲಿಗಿಂತ ಉತ್ತಮ ವಾಗಿರುತ್ತದೆ. ತಲೆ ಅಥವಾ ಬೆನ್ನುನೋವು ಕಾಡಲಿದೆ.

ಮಕರ: ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ಎಚ್ಚರಿಕೆಯಿಂದಿರಬೇಕು.
ಕುಂಭ: ಸ್ವಸಾಮರ್ಥ್ಯದಿಂದ ಪ್ರಗತಿ ಸಾ ಸುವಿರಿ. ಧಾರ್ಮಿಕ ಆಚರಣೆಗಳಿಂದ ತೃಪ್ತಿ ಸಿಗಲಿದೆ.
ಮೀನ: ಯಾವುದೇ ಅಪಾಯಕಾರಿ ಸವಾಲುಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ.

ರಾಜ್ಯದಲ್ಲಿ ಸದ್ದಿಲ್ಲದೇ ಏರಿಕೆಯಾಗುತ್ತಿವೆ ಡೆಂಘೀ ಸೋಂಕಿನ ಪ್ರಕರಣಗಳು

ಬೆಂಗಳೂರು, ಸೆ.29- ವಾತವರಣದಲ್ಲಿ ಏರುಪೇರು ಆಗುತ್ತಿದ್ದಂತೆ ರಾಜ್ಯದಲ್ಲಿ ಸದ್ದಿಲ್ಲದೇ ಸಾಂಕ್ರಾಮಿಕ ಸೋಂಕುಗಳು ಏರಿಕೆಯಾಗ್ತಿವೆ. ಆದರಲ್ಲೂ ಮಾರಣಾಂತಿಕ ಡೆಂಘೀ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.ರಾಜ್ಯದಲ್ಲಿ ಇದುವರೆಗೂ ಡೆಂಘೀ ಸೋಂಕಿತರ ಸಂಖ್ಯೆ ಐದು ಸಾವಿರದ ಗಡಿ ದಾಟಿರುವುದು ವಿಶೇಷವಾಗಿದೆ.

ಇಡೀ ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಏರಿಕೆಯಾಗುತ್ತಿರುವುದರ ಜೊತೆಗೆ ಬೆಂಗಳೂರಿನಲ್ಲೂ ಸೋಂಕು ಉಲ್ಬಣಗೊಂಡಿರುವುದು ಕಂಡು ಬಂದಿದೆ. ಕಳೆದ ಒಂಬತ್ತು ತಿಂಗಳಿನಲ್ಲಿ ಇಡೀ ರಾಜ್ಯದಲ್ಲಿ 5093 ಕ್ಕೂ ಹೆಚ್ಚು ಡೆಂಘೀ ಪ್ರಕರಣಗಳು ಕಂಡು ಬಂದಿದ್ದರೆ, ರಾಜಧಾನಿ ಬೆಂಗಳೂರು ಒಂದರಲ್ಲೆ 2478 ಪ್ರಕರಣಗಳು ವರದಿಯಾಗಿರುವುದು ವಿಶೇಷವಾಗಿದೆ.

ಬೆಂಗಳೂರು ಹೊರತುಪಡಿಸಿ ರಾಜ್ಯಾದಾದ್ಯಂತ 2615 ಪ್ರಕರಣಗಳು ದೃಢಪಟ್ಟಿದ್ದು, ಈ ಸೋಂಕಿಗೆ ಈಡೀಸ್‌‍ ಈಜಿಪ್ಟೈ ಎಂಬ ಸೊಳ್ಳೆ ಕಡಿತವೇ ಕಾರಣವಾಗಿದೆ.ನಿಂತ ನೀರಲ್ಲಿ ಬೆಳೆಯುವ ಈ ಡೇಂಜರಸ್‌‍ ಸೊಳ್ಳೆ ಕಚ್ಚುವುದರಿಂದ ಡೆಂಘೀ ಗುಣಲಕ್ಷಣಗಳು ಕಂಡು ಬರುತ್ತಿವೆ. ವಿಪರೀತ ಜ್ವರ, ತಲೆನೋವು, ಮೈಕೈ ನೋವು,ಕೀಲುನೋವು, ವಾಂತಿ- ವಾಕರಿಕೆ,ಕಣ್ಣುಗಳ ಹಿಂಭಾಗದಲ್ಲಿ ನೋವು, ಊದಿಕೊಂಡ ಗ್ರಂಥಿಗಳು ಈ ಸೋಂಕಿನ ಲಕ್ಷಣಗಳಾಗಿರುತ್ತವೆ. ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ಸಮೀಪದ ಪಾಲಿಕೆ ಆಸ್ಪತ್ರೆಗಳಿಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ಆರೋಗ್ಯಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಗೊಂದಲದ ಗೂಡಾದ ಜಾತಿ ಸಮೀಕ್ಷೆ : ಲಿಂಗಾಯತ, ಒಕ್ಕಲಿಗರ ಸಂಘ ಆರೋಪ

ಬೆಂಗಳೂರು,ಸೆ.29- ರಾಜ್ಯ ಹಿಂದುಳಿದ ವರ್ಗಗಳ ಆಯೋಗ ತರಾತುರಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭಿಸಿದ್ದು, ಸಮೀಕ್ಷಾದಾರರಿಗೆ ಸರಿಯಾದ ತರಬೇತಿ ಇಲ್ಲ, ಹತ್ತು ಹಲವು ಗೊಂದಲಗಳಿಂದ ಕೂಡಿದೆ ಎಂದು ರಾಜ್ಯ ಒಕ್ಕಲಿಗರ ಸಂಘ, ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಆರೋಪಿಸಿವೆ. ಜಂಟಿ ಸುದ್ದಿಗೋಷ್ಠಿಯಲ್ಲಿಂದು ಈ ಆರೋಪ ಮಾಡಿದ್ದು, ತಾಂತ್ರಿಕ ಸಮಸ್ಯೆ ಪರಿಹರಿಸಿ ಸಮೀಕ್ಷೆಗೆ ಸಾಕಷ್ಟು ಕಾಲಾವಕಾಶ ನೀಡಬೇಕು. ಸಮೀಕ್ಷಾದಾರರಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಒತ್ತಾಯಿಸಲಾಯಿತು.

ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾದಾರರಿಗೆ ಸೂಕ್ತ ತರಬೇತಿ ಇಲ್ಲ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಗೊಂದಲ ಉಂಟಾಗುತ್ತಿದೆ. ಚಿಂತಾಮಣಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಸಮೀಕ್ಷೆ ಸಂದರ್ಭದಲ್ಲಿ ಒಕ್ಕಲಿಗ ಜಾತಿಯನ್ನು ನಮೂದಿಸಲು ಹೇಳಿದರೆ ಸಮೀಕ್ಷಕರು ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ ಮಾತ್ರ ಇದೆ. ಒಕ್ಕಲಿಗ ಎಂಬುದಿಲ್ಲ ಎಂದು ಹೇಳಿದ್ದಾರೆ. ನಾನು ಖುದ್ದಾಗಿ ದೂರವಾಣಿ ಮೂಲಕ ಒಕ್ಕಲಿಗ ಜಾತಿಯ ಕೋಡ್‌ 1541 ಹೇಳಿ ಸರಿಯಾಗಿ ನಮೂದಿಸುವಂತೆ ಮಾಡಬೇಕಾಯಿತು ಎಂದು ನಿದರ್ಶನವನ್ನು ನೀಡಿದರು.

ನಿತ್ಯ ಸಮೀಕ್ಷೆ ಬಗ್ಗೆ ಹತ್ತು ಹಲವು ದೂರುಗಳು ಬರುತ್ತಿವೆ. ರಾಜ್ಯ ಹೈಕೋರ್ಟ್‌ ಮಧ್ಯಂತರ ಆದೇಶದಲ್ಲಿ ಮಾಹಿತಿಗಾಗಿ ಆಯೋಗ ಯಾರ ಮೇಲೂ ಒತ್ತಡ ಹಾಕಬಾರದು. ಸಮೀಕ್ಷೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದೆ. ಆದರೂ ಸಮೀಕ್ಷಾದಾರರು ಇಷ್ಟ ಬಂದಂತೆ ನಮೂದಿಸುತ್ತಿದ್ದಾರೆ. ಅನಗತ್ಯ ಗೊಂದಲ ಮೂಡಿಸುವುದು ಬೇಡ ಎಂದು ಹೇಳಿದರು.
ಜನರಿಂದ ಸರಿಯಾಗಿ ಮಾಹಿತಿ ಸಂಗ್ರಹಿಸದಿದ್ದರೆ, ಅವರ ಒಪ್ಪಿಗೆ ಇಲ್ಲದಿದ್ದರೆ ತಪ್ಪಾಗುತ್ತದೆ. ಒಕ್ಕಲಿಗ ಸಮುದಾಯದವರಲ್ಲಿ ಮನವಿ ಮಾಡುವುದಿಷ್ಟೇ. ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಬೇಕು. ಜಾತಿ, ಉಪಜಾತಿ, ಸಮಾನಾಂತರ ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ಬರೆಸಿ. ತಪ್ಪದೇ ಎಲ್ಲರೂ ಸಮೀಕ್ಷೆಯಲ್ಲಿ ಪಾಲ್ಗೊಂಡು ನಿಖರ ಮಾಹಿತಿ ನೀಡಬೇಕು ಎಂದು ಕೋರಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಎಚ್‌.ಎಂ.ರೇಣುಕಾಪ್ರಸನ್ನ ಮಾತನಾಡಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವಧಿಯಲ್ಲಿ ಮಾಡಿದ ಸಮೀಕ್ಷೆಗಿಂತ ಈಗ ಮಾಡಿರುವ ಸಮೀಕ್ಷೆ ಕೆಳಮಟ್ಟದಲ್ಲಿದೆ. ಆಗ ಆಯೋಗ ಜನಸಾಮಾನ್ಯರ ಹಾಗೂ ಸಂಘ ಸಂಸ್ಥೆಗಳ ಮನವಿಗೆ ಸ್ಪಂದಿಸಿತ್ತು. ಈಗ ಸಮೀಕ್ಷಾದಾರರಿಗೆ ಸೂಕ್ತ ತರಬೇತಿ ಇಲ್ಲ. ಮೊಬೈಲ್‌ ಆ್ಯಪ್‌ನ ತಂತ್ರಾಂಶವೂ ಸರಿ ಇಲ್ಲದೆ ನಿತ್ಯ ತಾಂತ್ರಿಕ ಸಮಸ್ಯೆ ಉಂಟಾಗುತ್ತಿದೆ.

ಒಕ್ಕಲಿಗ ಮತ್ತು ವೀರಶೈವ ಸಮುದಾಯಗಳು ಸಮೀಕ್ಷೆಗೆ ವಿರೋಧಿಸುತ್ತಿಲ್ಲ. ಆದರೆ ವೈಜ್ಞಾನಿಕವಾಗಿ ಸಮೀಕ್ಷೆಯಾಗಬೇಕು ಎಂಬುದಷ್ಟೇ ನಮ ಆಗ್ರಹ ಎಂದರು. ಆಧಾರ್‌ ಸಂಖ್ಯೆ ನೀಡುವುದನ್ನು ಕಡ್ಡಾಯ ಮಾಡಿಲ್ಲ ಎಂದು ಆಯೋಗವು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದರೂ ಸಾರ್ವಜನಿಕರಿಗೆ ಮಾಹಿತಿ ನೀಡಿಲ್ಲ. ಇದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಈ ಸಮೀಕ್ಷೆಯನ್ನು ಆಯೋಗ ನಡೆಸುತ್ತಿದೆಯೋ ಅಥವಾ ಸರ್ಕಾರ ನಡೆಸುತ್ತಿದೆಯೋ ಎಂದು ಗೊತ್ತಿಲ್ಲ. ಈ ಬಗ್ಗೆ ಗೊಂದಲವಿದೆ. ಪ್ರತಿಯೊಂದಕ್ಕೂ ನೇರವಾಗಿ ಮುಖ್ಯಮಂತ್ರಿ ಸೂಚನೆ ನೀಡುತ್ತಾರೆ ಎಂದು ಹೇಳಿದರು.

ಸಂಗ್ರಹಿಸಲಾದ ದತ್ತಾಂಶದ ಗೌಪ್ಯತೆ ಕಾಪಾಡುವಂತೆ ನ್ಯಾಯಾಲಯ ಹೇಳಿದೆ. ಆದರೆ ಶಿಕ್ಷಕರ ಮೊಬೈಲ್‌ನಿಂದ ಡಾಟಾ ಸೋರಿಕೆಯಾಗುವುದಿಲ್ಲವೇ?, ಚುನಾವಣಾ ಆಯೋಗದ ಮೇಲೆ ಮತಗಳವು ಆರೋಪವನ್ನು ಇವರೇ ಮಾಡುತ್ತಿದ್ದಾರೆ. ಯಾವ ರೀತಿ ಗೌಪ್ಯತೆ ಕಾಪಾಡುತ್ತಾರೆ ಎಂಬ ಪ್ರಶ್ನೆ ಉಂಟಾಗಿದೆ ಎಂದರು.ಆಯೋಗವು ಪಾರದರ್ಶಕ ಮತ್ತು ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಿ. ಎಲ್ಲರೂ ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.

ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಎಂ.ನಾಗರಾಜ್‌ ಮಾತನಾಡಿ, ತೆಲಂಗಾಣ ರಾಜ್ಯದಲ್ಲಿ ಮೂರೂವರೆ ಕೋಟಿ ಜನಸಂಖ್ಯೆಯಿದ್ದರೂ 65 ದಿನಗಳ ಕಾಲ ಸಮೀಕ್ಷೆ ನಡೆಸಲಾಗಿದೆ. ನಮ ರಾಜ್ಯದಲ್ಲಿ 1 ಕೋಟಿಯಷ್ಟಿರುವ ಪರಿಶಿಷ್ಟ ಸಮುದಾಯದ ಒಳಮೀಸಲಾತಿಗೆ ಸಂಬಂಧಿಸಿದ ಸಮೀಕ್ಷೆಯನ್ನು 45 ದಿನ ಮಾಡಲಾಗಿದೆ. ಏಳೂವರೆ ಕೋಟಿ ಜನಸಂಖ್ಯೆಯುಳ್ಳ ರಾಜ್ಯದ ಗಣತಿ ಕೇವಲ 15 ದಿನದಲ್ಲಿ ಮಾಡಲು ಸಾಧ್ಯವೇ?, ನಿತ್ಯ 50 ಲಕ್ಷ ಜನರ ಸಮೀಕ್ಷೆ ಆಗಬೇಕಿತ್ತು. ಅದು ಸಾಧ್ಯವೇ?, ಕಳೆದ ಆರು ದಿನಗಳಲ್ಲಿ 3 ಕೋಟಿ ಜನರ ಮಾಹಿತಿ ಪಡೆಯಬೇಕಿತ್ತು. ಆದರೆ ಮಾಹಿತಿ ಪಡೆದಿರುವುದು 12 ಲಕ್ಷ ಜನರಿಂದ ಮಾತ್ರ ಎಂದರು.

ಇನ್ನುಳಿದ 9 ದಿನದಲ್ಲಿ ಈ ಸಮೀಕ್ಷೆ ಪೂರ್ಣಗೊಳಿಸಲು ಸಾಧ್ಯವೇ?, ಮನೆಗಳ ಜಿಯೋ ಟ್ಯಾಗ್‌ ಕೂಡ ಗೊಂದಲದಲ್ಲಿದೆ. 10-15 ಕಿ.ಮೀ. ದೂರದ ಮನೆಗಳನ್ನೂ ತೋರಿಸುತ್ತದೆ. ದಸರಾ ರಜೆ ಮುಗಿಯುವುದರೊಳಗೆ ಹೇಗೆ ಸಮೀಕ್ಷೆ ಪೂರ್ಣಗೊಳ್ಳುತ್ತದೆ? ಆನಂತರವೂ ಸಮೀಕ್ಷೆ ಮುಂದುವರೆಸಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಸಮೀಕ್ಷಾ ಆಯೋಗ ಪೂರ್ವ ಸಿದ್ದತೆಯಿಲ್ಲದೆ ತರಾತುರಿಯಲ್ಲಿ ಸಮೀಕ್ಷೆಗೆ ಮುಂದಾಗಿರುವುದು ಗೊಂದಲಕ್ಕೀಡು ಮಾಡಿಕೊಟ್ಟಿದೆ. ಸಾಕಷ್ಟು ಕಾಲಾವಕಾಶ ನೀಡಿ ಸಮೀಕ್ಷೆ ನಡೆಸಬೇಕು ಎಂಬುದು ನಮ ಆಗ್ರಹ ಎಂದರು.

ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ನಟರಾಜ್‌ ಮಾತನಾಡಿ, ರಾತ್ರಿ ವೇಳೆಯೂ ಸಮೀಕ್ಷೆ ನಡೆಸುವ ಮೂಲಕ ಸಮೀಕ್ಷೆದಾರರಿಗೆ ಮತ್ತು ಜನರಿಗೆ ತೊಂದರೆ ಉಂಟಾಗುತ್ತಿದೆ. ಎಲ್ಲರೂ ಸಮೀಕ್ಷೆಯಲ್ಲಿ ಭಾಗವಹಿಸದಿದ್ದರೆ ಸಾಮಾಜಿಕ ನ್ಯಾಯ ಹೇಗೆ ಸಿಗುತ್ತದೆ ? ಎಂದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಆಡಿಟರ್‌ ನಾಗರಾಜ ಯಲಚವಾಡಿ, ಉಪಾಧ್ಯಕ್ಷರಾದ ಶಿವರಾಂ, ಅಶೋಕ್‌, ಎಂ.ಮೋಹನ್‌, ವೀರಶೈವ ಮಹಾಸಭಾದ ಕಾರ್ಯದರ್ಶಿ ಮಹಂತೇಶ್‌, ವಿಜಯ್‌ ಮತ್ತಿತರರಿದ್ದರು.

ಶ್ರೀಲಂಕಾದಿಂದ ಬಂದು ಬೆಂಗಳೂರಲ್ಲಿ ಅನಧಿಕೃತವಾಗಿ ನೆಲೆಸಿದ್ದ ಮೂವರು ವಿದೇಶಿ ಪ್ರಜೆಗಳ ವಿರುದ್ಧ ಕ್ರಮ

ಬೆಂಗಳೂರು,ಸೆ.29-ಪಾಸ್‌‍ಪೋರ್ಟ್‌ ಮತ್ತು ವೀಸಾ ಇಲ್ಲದೇ ಹಡಗು ಮೂಲಕ ಅನಧಿಕೃತವಾಗಿ ಬಂದು ಅಪಾರ್ಟ್‌ಮೆಂಟ್‌ವೊಂದರಲ್ಲಿ ನೆಲೆಸಿದ್ದ ಮೂವರು ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸಿಸಿಬಿ ಕಾನೂನು ಕ್ರಮ ಕೈಗೊಂಡಿದೆ.ಕಳೆದ ವರ್ಷ ಮೂವರು ವಿದೇಶಿ ಪ್ರಜೆಗಳು ಯಾವುದೇ ಪಾಸ್‌‍ಪೋರ್ಟ್‌ ಮತ್ತು ವೀಸಾ ಇಲ್ಲದೇ ಶೀಲಂಕಾದ ಜಾಫ್ನಾದಿಂದ ಹಡಗು ಮೂಲಕ ತಮಿಳುನಾಡಿನ ರಾಮೇಶ್ವರಂ ಅಕ್ರಮವಾಗಿ ಬಂದಿದ್ದಾರೆ.

ನಂತರ ಈ ಮೂವರಿಗೆ ಮತ್ತೊಬ್ಬ ವಿದೇಶಿ ಪ್ರಜೆ ಸಹಾಯ ಮಾಡಿದ್ದು, ಆತನ ನೆರವಿನಿಂದ ದೇವನಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿದ್ದರು.
ಸಿಸಿಬಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಲಭಿಸಿದೆ. ಖಚಿತ ಮಾಹಿತಿಯನ್ನಾಧರಿಸಿ ಪ್ರಕರಣ ದಾಖಲಿಸಿಕೊಂಡು ನಂತರ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿ ಮೂವರು ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ, ಹಡಗು ಮೂಲಕ ಬಂದಿರುವುದಾಗಿ ತಿಳಿಸಿದ್ದಾರೆ.

ಈ ಮೂವರ ವಿರುದ್ಧ ಫಾರಿನರ್‌ರ‍ಸ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಇವರು ಯಾವ ಕಾರಣಕ್ಕಾಗಿ ಬಂದು ನಗರದಲ್ಲಿ ವಾಸವಾಗಿದ್ದರು ಎಂಬ ಬಗ್ಗೆ ತನಿಖೆ ಮುಂದುವರೆಸಿ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ತಿಳಿಸಿದ್ದಾರೆ.

ಡಿಜಿಟಲ್‌ ಅರೆಸ್ಟ್‌ ಎಂಬುದೇ ಇಲ್ಲ..! ಸೈಬರ್‌ ವಂಚಕರ ಗಾಳಕ್ಕೆ ಸಿಲುಕದಿರಿ

ವಿಶೇಷ ಲೇಖನ : ವಿ.ರಾಮಸ್ವಾಮಿ ಕಣ್ವ
ಅಪರಾಧಗಳಲ್ಲಿ ಇತ್ತೀಚೆಗೆ ಡಿಜಿಟಲ್‌ ಅರೆಸ್ಟ್‌, ಹೋಮ್‌ ಅರೆಸ್ಟ್‌ ಎಂಬ ಪ್ರಕರಣಗಳು ಅತಿ ಹೆಚ್ಚು ಬೆಳಕಿಗೆ ಬರುತ್ತಿವೆ. ಪೊಲೀಸರು ಚಾಪೆ ಕೆಳಗೆ ನುಗ್ಗಿದರೆ, ಸೈಬರ್‌ ವಂಚಕರು ರಂಗೋಲಿ ಕೆಳಗೆ ನುಸುಳಿ ಯಾರ ಕೈಗೂ ಸಿಗದಂತೆ ತಪ್ಪಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಪೊಲೀಸ್‌‍ ವ್ಯವಸ್ಥೆಗಳಲ್ಲಿ ಡಿಜಿಟಲ್‌ ಅರೆಸ್ಟ್‌ ಅಥವಾ ಹೋಮ್‌ ಅರೆಸ್ಟ್‌ ಎಂಬುವುದೇ ಇಲ್ಲ. ಈಗ ಸೈಬರ್‌ ಖದೀಮರು ಸೃಷ್ಟಿಸಿರುವ ಒಂದು ವಂಚನೆ ಅಷ್ಟೇ.ವ್ಯಕ್ತಿಯ ಜೀವನದ ಮಟ್ಟ ಸುಧಾರಿಸಿದಂತೆ ತಂತ್ರಜ್ಞಾನ ಬೆಳೆದಂತೆ ಆನ್‌ಲೈನ್‌ ವಂಚನೆಗಳು ಹೆಚ್ಚಾಗುತ್ತಿವೆ. ಈಗ ಶ್ರೀಸಾಮಾನ್ಯರ ಕೈಗಳಲ್ಲೂ ಮೊಬೈಲ್‌ಗಳಿವೆ.

ಬಹುತೇಕ ಮಂದಿ ಕುಳಿತಲ್ಲಿ, ನಿಂತಲ್ಲಿ ಸಾವಿರಾರೂ ರೂ.ಗಳ ಆನ್‌ಲೈನ್‌ ವ್ಯವಹಾರ ನಡೆಸುತ್ತಿದ್ದಾರೆ. ನಮಗೆ ಆನ್‌ಲೈನ್‌ ವ್ಯವಹಾರದಿಂದ ಎಷ್ಟು ಸುಲಭ ಆಗಿದೆಯೋ ಅಷ್ಟೇ ಸಲೀಸಾಗಿ ಸೈಬರ್‌ ವಂಚಕರಿಗೂ ಆಗಿದೆ. ಸಾವಿರಾರೂ ಕಿಲೋಮೀಟರ್‌ ದೂರದ ವಿದೇಶಗಳಲ್ಲಿ ಕುಳಿತು ನಿಮಗೆ ಯಾಮಾರಿಸಿ ಲಕ್ಷಾಂತರ ರೂ. ಹಣವನ್ನು ಲಪಟಾಯಿಸುತ್ತಾರೆ.
ಮಾನಸಿಕವಾಗಿ ಬೆದರಿಸುತ್ತಾರೆ..!

ಈ ಸೈಬರ್‌ ವಂಚಕರು ಪೊಲೀಸ್‌‍, ಸಿಬಿಐ, ಇಡಿ… ಮುಂತಾದ ಘಟಕಗಳ ಅಧಿಕಾರಿಗಳೆಂದು ನಿಮ ಮೊಬೈಲ್‌ ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸುತ್ತಾರೆ. ನೀವು ನಂಬುವಂತೆ ಸುಳ್ಳು ಹೇಳಿ ಮಾನಸಿಕ ಒತ್ತಡಕ್ಕೆ ಸಿಲುಕಿಸಿ ಬೆದರಿಸುತ್ತಾರೆ.

ಉದಾಹರಣೆಗೆ ನಿಮ ಮೊಬೈಲ್‌ಗೆ ಕರೆ ಮಾಡುವ ಅಪರಿಚಿತ ವ್ಯಕ್ತಿ ನಾನು ಸಿಬಿಐ, ಇಡಿ ಅಧಿಕಾರಿ ಎಂದು ಪರಿಚಯಿಸಿಕೊಂಡು ನಿಮ ಹೆಸರು ಮಾದಕ ವಸ್ತು ಸಾಗಾಣಿಕೆ ಅಥವಾ ಅಕ್ರಮ ಹಣ ವರ್ಗಾವಣೆ…. ಹೀಗೆ ಮುಂತಾದ ಪ್ರಕರಣ ಒಂದರಲ್ಲಿ ಕಂಡುಬಂದಿದೆ. ನೀವು ಇರುವ ಜಾಗದಲ್ಲೇ ನಿಮನ್ನು ಬಂಧಿಸುತ್ತೇವೆ ಎಂದು ಹೇಳುತ್ತಾನೆ. ನಂತರ ಒಂದು ಇಂಚು ಜಾಗ ಕದಲಬಾರದು, ಕರೆಯನ್ನು ಸ್ಥಗಿತಗೊಳಿಸಬಾರದು, ಯಾರ ಜೊತೆಯಲ್ಲೂ ಮಾತನಾಡಬಾರದು, ನಾನು ಹೇಳಿದ ರೀತಿ ಕೇಳಬೇಕು ಇಲ್ಲದಿದ್ದರೆ ನಿಮ ಮಾನ, ಮರ್ಯಾದೆ ಹರಾಜಾಗುತ್ತದೆ ಎಂದು ಗಡುಸು ಧ್ವನಿಯಲ್ಲಿ ಬೆದರಿಸುತ್ತಾನೆ.

ಆಗ ನೀವು ಆತನ ದರ್ಪದಿಂದ ದಿಕ್ಕುತೋ ದಂತಾಗಿ ಅಸಹಾಯಕರ ರೀತಿ ಈಗ ನಾನು ಬಿಡುಗಡೆಯಾಗಬೇಕಾದರೆ ಏನು ಮಾಡಬೇಕೆಂದು ಕೇಳಿದ ತಕ್ಷಣ ನೀಚ ಬಹಳ ಉಪಕಾರ ಮಾಡುವ ರೀತಿ ಈ ಪ್ರಕರಣದಿಂದ ನಿಮನ್ನು ಕೈಬಿಡುತ್ತೇವೆ, ನಾವು ಹೇಳಿದ ರೀತಿ ಕೇಳಬೇಕು ಎಂದು ತಾಕೀತು ಮಾಡುತ್ತಾನೆ.

ನಿಮ ಬ್ಯಾಂಕ್‌ ಖಾತೆಗಳ ವಿವರ ನೀಡಿ ಇಲ್ಲವೇ ನಾವು ಹೇಳಿದ ಬ್ಯಾಂಕ್‌ ಖಾತೆಗಳಿಗೆ ಇಂತಿಷ್ಟು ಹಣ ಹಾಕಿ ಎಂದು ಹೇಳಿ ತನ್ನ ನಕಲಿ ಖಾತೆಗಳಿಗೆ ಹಣ ಹಾಕಿಸಿಕೊಂಡು ಯಾರಿಗೂ ಈ ವಿಷಯ ತಿಳಿಸಬೇಡಿ. ಬೇರೆಯವರಿಗೆ ಇದು ಗೊತ್ತಾದರೆ ನಿಮಗೇ ತೊಂದರೆ ಎಂದು ಹೇಳಿ ವಂಚಕ ಕರೆ ಸ್ಥಗಿತಗೊಳಿಸು ತ್ತಾನೆ.

ವಂಚಕನ ಸಿಮ್‌ ಕಾರ್ಡ್‌ ಸ್ಥಗಿತ:
ಆಘಾತದಿಂದ ಹೊರಬಂದು ನೀವು ಕುಟುಂಬದವರಿಗೆ ವಿಷಯ ತಿಳಿಸಿ ವಂಚಕ ಮಾಡಿದ್ದ ಮೊಬೈಲ್‌ ನಂಬರಿಗೆ ಕರೆ ಮಾಡಿದಾಗಲೇ ನೀವು ಮೋಸಕ್ಕೆ ಒಳಗಾಗಿದ್ದೀರಿ ಎಂಬುದು ಗೊತ್ತಾಗುತ್ತದೆ. ಆ ವೇಳೆಗಾಗಲೇ ವಂಚಕ ಆತನ ಮೊಬೈಲ್‌ನಿಂದ ಸಿಮ್‌ ತೆಗೆದು ಬಿಸಾಕಿ ಜಾಗ ಖಾಲಿ ಮಾಡಿರುತ್ತಾನೆ. ಹೀಗೆ ಈ ಸೈಬರ್‌ ಖದೀಮರು ಇತ್ತೀಚೆಗೆ ಬೇರೆ ಬೇರೆ ವಿಷಯಗಳಲ್ಲಿ ವಿವಿಧ ರೀತಿಯಲ್ಲಿ ವಂಚನೆ ಮಾಡುತ್ತಾ ಲಕ್ಷಾಂತರ ರೂ. ಹಣವನ್ನು ದೋಚಿ ನಿಮ ಹಣದಲ್ಲಿ ಮೋಜು, ಮಸ್ತಿ ಮಾಡುತ್ತಾರೆ.

ಮೋಸಕ್ಕೆ ಒಳಗಾಗಬೇಡಿ:
ವಂಚಕರು ಹೇಳುವ ರೀತಿಯ ಪ್ರಕರಣಗಳಲ್ಲಿ ನೀವು ಭಾಗಿಯಾಗಿಲ್ಲದಿದ್ದರೆ ಏಕೆ ಅಂಜುತ್ತೀರಿ, ಭಯಪಟ್ಟಷ್ಟೂ ಆತ ನಿಮನ್ನು ಹೆದರಿಸಿ, ಯಾಮಾರಿಸಿ ಹಣ ಹಾಕಿಸಿಕೊಂಡು ಕಣರೆಯಾಗುತ್ತಾನೆ. ಆಗ ನೀವು ಮೋಸಕ್ಕೆ ಒಳಗಾಗಿ ಹಣ ಕಳೆದುಕೊಳ್ಳುತ್ತೀರಿ ಜೋಕೆ! ಯಾಮಾರಿ ಒಂದು ವೇಳೆ ವಂಚನೆಗೆ ಒಳಗಾದರೆ ಚಿಂತಿಸಬೇಡಿ. ಮೊದಲು ಸಹಾಯವಾಣಿ 1930ಗೆ ನೀವು ಕರೆ ಮಾಡಿ ದೂರು ದಾಖಲಿಸಿ ಅಥವಾ ನಿಮ ಸಮೀಪದ ಪೊಲೀಸ್‌‍ ಠಾಣೆಗೆ ತಕ್ಷಣ ತೆರಳಿ ದೂರು ನೀಡಿ. ಘಟನೆ ನಡೆದ 24 ಗಂಟೆ ಒಳಗಾಗಿ ದೂರು ನೀಡಿದರೆ ತುಂಬಾ ಒಳ್ಳೆಯದು. ಇಲ್ಲದಿದ್ದರೆ ನಿಮ ಹಣ ಖದೀಮನ ಜೇಬು ಸೇರುತ್ತದೆ. ಇದು ಎಐ ಯುಗ. ಏನು ಬೇಕಾದರೂ ಆಗಬಹುದು ಯಾವುದಕ್ಕೂ ಸದಾ ಜಾಗೃತರಾಗಿರಿ.

ಡಿಜಿಟಲ್‌ ಅರೆಸ್ಟ್‌ ಇಲ್ಲ:
ದೇಶದ ಯಾವುದೇ ಪೊಲೀಸ್‌‍ ಘಟಕಗಳ ಅಧಿಕಾರಿಗಳಾಗಲೀ ಅಥವಾ ಸ್ಥಳೀಯ ಠಾಣೆಯ ಪೊಲೀಸರಾಗಲಿ ನಿಮನ್ನು ಮೊಬೈಲ್‌ನಲ್ಲಿ ಸಂಪರ್ಕಿಸಿ ಡಿಜಿಟಲ್‌ ಅರೆಸ್ಟ್‌ ಅಥವಾ ಹೋಮ್‌ ಅರೆಸ್ಟ್‌ ಮಾಡುವುದಿಲ್ಲ. ಪ್ರತಿಯೊಬ್ಬ ನಾಗರಿಕರು ತಿಳಿಯಬೇಕಾದ ವಿಷಯ ಇದು. ನಿಮ ಮೇಲೆ ಪ್ರಕರಣ ದಾಖಲಾಗಿದ್ದರೆ ಮಾತ್ರ ನಿಮನ್ನು ಪೊಲೀಸರು ಮೊಬೈಲ್‌ನಲ್ಲಿ ಸಂಪರ್ಕಿಸಬಹುದು.

ಒಂದು ವೇಳೆ ಸಿಬಿಐ, ಇಡಿ ಮುಂತಾದ ಪೊಲೀಸ್‌‍ ಘಟಕಗಳ ಅಧಿಕಾರಿಗಳು ಎಂದು ಹೇಳಿಕೊಂಡು ವಿನಾಕಾರಣ ಕರೆ ಮಾಡಿದರೆ ತಕ್ಷಣ ಆ ಕರೆಯನ್ನು ಸ್ಥಗಿತಗೊಳಿಸಿ ಮತ್ತೆ ಮತ್ತೆ ಕರೆ ಮಾಡುತ್ತಿದ್ದರೆ ಮೊಬೈಲ್‌ ಸ್ವಿಚ್ಡ್ ಆಫ್‌ಮಾಡಿ ಇಲ್ಲವೇ ಕೂಡಲೇ ಸೈಬರ್‌ ಅಪರಾಧ ಸಹಾಯವಾಣಿ 1930ಗೆ ಕರೆ ಮಾಡಿ ಅಥವಾ ಪೊಲೀಸ್‌‍ ಕಂಟ್ರೋಲ್‌ ರೂಮ್‌ 112ಗೆ ತಿಳಿಸಿ.

ವಿದ್ಯಾವಂತರೇ ಇವರ ಟಾರ್ಗೆಟ್‌:
ವಿಜ್ಞಾನಿಗಳು, ವೈದ್ಯರು, ಸಾ್ಟ್‌ವೇರ್‌ ಎಂಜಿನಿಯರ್‌ಗಳು, ಸರ್ಕಾರಿ ಹಾಗೂ ನಿವೃತ್ತ ಅಽಕಾರಿಗಳೇ ಇತರರಿಗಿಂತ ಹೆಚ್ಚು ವಂಚನೆಗೆ ಒಳಗಾಗುತ್ತಿದ್ದಾರೆ. ತಿಳಿದವರೇ, ವಿದ್ಯಾವಂತರೇ, ಬುದ್ಧಿವಂತರೇ ಹೆಚ್ಚು ಹೆಚ್ಚು ಈ ಸೈಬರ್‌ ವಂಚಕರ ಜಾಲಕ್ಕೆ ಒಳಗಾಗುತ್ತಿರುವುದು ವಿಪರ್ಯಾಸ.

ಈ ವಂಚಕರು ಹೇಳುವ ರೀತಿಯ ಪ್ರಕರಣಗಳಲ್ಲಿ ನಿಮ್ಮ ಹೆಸರು ಇದ್ದರೆ ಅಥವಾ ಎ್‌‍ಐಆರ್‌ ದಾಖಲಾಗಿದ್ದರೆ, ಪರಿಶೀಲಿಸಿ ಸಿಬಿಐ, ಇಡಿ.. ಇನ್ನು ಮುಂತಾದ ಘಟಕಗಳ ಅಽಕಾರಿಗಳು ತಮ್ಮ ಕಚೇರಿಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಮೊದಲು ನಿಮಗೆ ನೋಟೀಸ್‌ ನೀಡುತ್ತಾರೆ. ನಂತರ ವಿಚಾರಣೆ ನಡೆಸಿ ಪ್ರಕರಣದಲ್ಲಿ ನೀವು ಭಾಗಿಯಾಗಿರುವುದು ಕಂಡುಬಂದರೆ ಮಾತ್ರ ಬಂಧಿಸುತ್ತಾರೆ.ಒಂದು ವೇಳೆ ನಿಮ್ಮ ಮನೆಗೆ ನಿಮ್ಮನ್ನು ಬಂಧಿಸಲು ಬರುವ ಯಾವುದೇ ಪೊಲೀಸ್‌ ಅಧಿಕಾರಿ ಜೊತೆಯಲ್ಲಿ ವಾರೆಂಟ್‌ ತಂದಿರುತ್ತಾರೆ. ಬಂಽಸಿದ ನಂತರ ವಿಷಯವನ್ನು ನಿಮ್ಮ ಕುಟುಂಬದ ಸದಸ್ಯರಿಗೆ ತಿಳಿಸುತ್ತಾರೆ.

ಚುನಾವಣೆಯ ಸಮಯದಲ್ಲಿ ನಕಲಿ ಗುರುತಿನ ಚೀಟಿ ಬಳಕೆ ಆರೋಪ : ಶಾಸಕನ ವಿರುದ್ಧ ತನಿಖೆ

ರಾಂಚಿ, ಸೆ.29- ಚುನಾವಣೆಯ ಸಮಯದಲ್ಲಿ ಜೆಎಂಎಂ ಶಾಸಕ ದಶರಥ್‌ ಗಗ್ರೈ ನಕಲಿ ಗುರುತಿನ ಚೀಟಿ ಬಳಸಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆಗೆ ಜಾರ್ಖಂಡ್‌ ಮುಖ್ಯ ಚುನಾವಣಾ ಅಧಿಕಾರಿ ಕೆ.ರವಿಕುಮಾರ್‌ ಆದೇಶಿಸಿದ್ದಾರೆ.ಖರ್ಸವಾನ್‌ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿರುವ ಗಗ್ರೈ ಅವರ ಗುರುತಿನ ಚೀಟಿ ಅಸಲಿಯತ್ತು ಪ್ರಶ್ನಿಸಿ ಲಾಲ್ಜಿ ರಾಮ್‌ ಟಿಯು ಎಂಬವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ಇದರಿಂದಾಗಿ ಪ್ರಕರಣ ಬಗ್ಗೆ ಸೆರೈಕೆಲಾ-ಖಾರ್ಸವಾನ್‌ ಪ್ರದೇಶದ ಉಪ ಆಯುಕ್ತರಿಗೆ ತನಿಖೆ ನಡೆಸಿ ವರದಿ ನೀಡಲು ಸಿಇಒ ಸೂಚಿಸಿದ್ದಾರೆ.ದೂರುದಾರರು ಧಿಕಾರದಲ್ಲಿರುವವರ ವಿರುದ್ಧ ಇಂತಹ ಆರೋಪಗಳನ್ನು ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ ಎಂದು ಶಾಸಕರು ಟೕಕಿ ಆರೋಪವನ್ನು ತಳ್ಳಿಹಾಕಿದರು. ದೂರುದಾರರ ಅಫಿಡವಿಟ್‌ ದೂರನ್ನು ನಾನು ಸೆರೈಕೆಲಾ-ಖಾರ್ಸವಾನ್‌ ಉಪ ಆಯುಕ್ತ ನಿತೀಶ್‌ ಕುಮಾರ್‌ ಸಿಂಗ್‌ ಅವರಿಗೆ ಪರಿಶೀಲಿಸಲು ಕಳುಹಿಸಿದ್ದೇನೆ ಎಂದು ಸಿಇಒ ಹೇಳಿದರು.

ಚುನಾವಣೆಗಳು ಮುಗಿದು ಫಲಿತಾಂಶಗಳು ಘೋಷಣೆಯಾದ ನಂತರ ಶಾಸಕರನ್ನು ಒಳಗೊಂಡ ವಿವಾದಗಳನ್ನು ಸಂಬಂಧಪಟ್ಟ ರಾಜ್ಯಪಾಲರು ಪರಿಹರಿಸಬೇಕಾಗುತ್ತದೆ, ಆದರೆ ಸಂಸದರನ್ನು ಒಳಗೊಂಡ ವಿವಾದಗಳನ್ನು ರಾಷ್ಟ್ರಪತಿಗಳು ನಿಭಾಯಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಮಾಜಿ ಸೈನಿಕ ಎಂದು ಹೇಳಿಕೊಳ್ಳುವ ಲಾಲ್ಜಿ ರಾಮ್‌ ಟಿಯು, ದಶರಥ್‌ ಗಗ್ರೈ ಹೆಸರಿನಲ್ಲಿ ಪ್ರಸ್ತುತ ಶಾಸಕರಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ, ವಾಸ್ತವವಾಗಿ, ನಿಜವಾದ ದಶರಥ್‌ ಗಗ್ರೈ ಅವರ ಹಿರಿಯ ಸಹೋದರ ರಾಮಕೃಷ್ಣ ಗಗ್ರೈ ಎಂದು ಆರೋಪಿಸಿದ್ದಾರೆ.