Friday, November 7, 2025
Home Blog Page 87

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದು ಹಾಕಲು ಚುನಾವಣಾ ಆಯೋಗ ಹೊಸ ವ್ಯವಸ್ಥೆ

ನವದೆಹಲಿ,ಸೆ.24- ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿರುವ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದು ಹಾಕುವ ಭಾರತೀಯ ಚುನಾವಣಾ ಆಯೋಗ ಹೊಸ ತಾಂತ್ರಿಕ ವ್ಯವಸ್ಥೆಯನ್ನು ಪರಿಚಯಿಸಿದೆ.

ಹೆಚ್ಚುತ್ತಿರುವ ದುರುಪಯೋಗವನ್ನು ತಡೆಗಟ್ಟಿ ಮತದಾರರಲ್ಲಿ ಅನುಮಾನವನ್ನು ನಿವಾರಿಸಿ ಹೆಚ್ಚು ಪಾರದರ್ಶಕತೆ ಉಂಟು ಮಾಡುವ ಸದುದ್ದೇಶದಿಂದ ಚುನಾವಣಾ ಆಯೋಗ ದುರುಪಯೋಗ ತಡೆಗಟ್ಟಲು ಇಸಿಐಎನ್‌ಇಟಿ ಪೋರ್ಟಲ್‌ ಮತ್ತು ಅರ್ಜಿಗಳಲ್ಲಿ ಇ-ಸೈನ್‌ ಎಂಬ ವಿನೂತನ ತಂತ್ರಜ್ಞಾನವನ್ನು ಪರಿಚಯಿಸಿದೆ.

ಇದರಿಂದಾಗಿ ಬರುವ ದಿನಗಳಲ್ಲಿ ಮತದಾರರ ಪಟ್ಟಿಯಿಂದ ಯಾರೊಬ್ಬರು ಅಷ್ಟು ಸುಲಭವಾಗಿ ತಮ ಹೆಸರುಗಳನ್ನು ತೆಗೆದು ಹಾಕುವುದಾಗಲಿ ಇಲ್ಲವೇ ಸೇರ್ಪಡೆ ಮಾಡಲು ಅವಕಾಶ ಇರುವುದಿಲ್ಲ.

ಹೊಸದಾಗಿ ಮತದಾರರಪಟ್ಟಿಗೆ ಸೇರ್ಪಡೆಯಾಗುವವರು ತಮ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ಅರ್ಜಿ ಸಲ್ಲಿಸುವವರು ತಮ ಆಧಾರ್‌ಲಿಂಕ್‌ ಮಾಡಲಾದ ಫೋನ್‌ ಸಂಖ್ಯೆಗಳನ್ನು ಬಳಸಿಕೊಂಡು ತಮ ಗುರುತನ್ನು ಬಳಸಬೇಕಾಗುತ್ತದೆ.
ಈ ಹಿಂದೆ ಅರ್ಜಿದಾರರು ಯಾವುದೇ ಪರಿಶೀಲನೆ ಇಲ್ಲದೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿತ್ತು. ಇದು ಮತದಾರರ ಗುರುತಿನಚೀಟಿಯ ದುರುಪಯೋಗವಾಗುವ ಸಾಧ್ಯತೆ ಇತ್ತು. ಇದನ್ನು ಮನಗಂಡೇ ಚುನಾವಣಾ ಆಯೋಗ ಇ-ಸೈನ್‌ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಸಾಮಾನ್ಯವಾಗಿ ಅರ್ಜಿದಾರರು ಚುನಾವಣಾ ಆಯೋಗದ ಅಪ್ಲಿಕೇಷನ್‌ಗಳು ಮತ್ತು ಪೋರ್ಟಲ್‌ನಲ್ಲಿ ಅಸ್ತಿತ್ವದಲ್ಲಿರುವ ಮತದಾರರ ಫೋಟೋ ಗುರುತಿನ ಚೀಟಿ(ಎಪಿಕ್‌) ಸಂಖ್ಯೆಯೊಂದಿಗೆ ಫೋನ್‌ ಸಂಖ್ಯೆಯನ್ನು ಲಿಂಕ್‌ ಮಾಡಿ ಅರ್ಜಿ ಹಾಕಿದ್ದರೆ ಸಾಕಿತ್ತು.
ಇದನ್ನು ತಡೆಗಟ್ಟುವ ಉದ್ದೇಶದಿಂದಲೇ ಚುನಾವಣಾ ಆಯೋಗ ವಿನೂತನವಾದ ವ್ಯವಸ್ಥೆಯನ್ನು ಜಾರಿ ಮಾಡಿದ್ದು, ದುರುಪಯೋಗವನ್ನು ತಡೆಗಟ್ಟಲು ಸಾಧ್ಯತೆ ಇದೆ ಎಂದು ಆಯೋಗ ಹೇಳಿಕೊಂಡಿದೆ.

ಇ-ಸೈನ್‌ ಹೇಗೆ ಕೆಲಸ ಮಾಡುತ್ತದೆ?:
ಅರ್ಜಿದಾರರು ಫಾರ್ಮ್‌ 6 (ಹೊಸ ಮತದಾರರ ನೋಂದಣಿಗಾಗಿ), ಅಥವಾ ಫಾರ್ಮ್‌ 7 (ಅಸ್ತಿತ್ವದಲ್ಲಿರುವ ಪಟ್ಟಿಗಳಲ್ಲಿ ಹೆಸರನ್ನು ಸೇರಿಸಲು/ಅಳಿಸುವುದಕ್ಕೆ ಆಕ್ಷೇಪಣೆ ಸಲ್ಲಿಸಲು) ಅಥವಾ ಫಾರ್ಮ್‌ 8 (ನಮೂದುಗಳ ತಿದ್ದುಪಡಿಗಾಗಿ) ಅನ್ನು ಭರ್ತಿ ಮಾಡುವ ಮೂಲಕ ಈಗ ಇ-ಸೈನ್‌ ಅಗತ್ಯವನ್ನು ತೆರವುಗೊಳಿಸಬೇಕಾಗುತ್ತದೆ.

ಇದರರ್ಥ ಅರ್ಜಿದಾರರು ತಮ ಅರ್ಜಿಗಾಗಿ ಬಳಸುತ್ತಿರುವ ಮತದಾರರ ಕಾರ್ಡ್‌ನಲ್ಲಿರುವ ಹೆಸರು ಅವರ ಆಧಾರ್‌ನಲ್ಲಿರುವ ಹೆಸರಿಗೆ ಸಮನಾಗಿದೆ ಮತ್ತು ಅವರು ಬಳಸುತ್ತಿರುವ ಮೊಬೈಲ್‌ ಸಂಖ್ಯೆಯು ಆಧಾರ್‌ಗೆ ಲಿಂಕ್‌ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳುವಂತೆ ಪೋರ್ಟಲ್‌ ಎಚ್ಚರಿಸುತ್ತದೆ.

ಇದು ಯಾರ ಹೆಸರನ್ನು ಅಳಿಸಲು ಅಥವಾ ಆಕ್ಷೇಪಿಸಲು ಬಯಸುತ್ತದೋ ಅವರ ಎಲ್ಲಾ ವಿವರಗಳನ್ನು ಹಂಚಿಕೊಳ್ಳುವ ಅಗತ್ಯವಿದೆ (ಕಾರಣಗಳು ಸಾವು, ಸ್ಥಳಾಂತರ, ಭಾರತೀಯ ನಾಗರಿಕನಲ್ಲದ ಕಾರಣ ಅನರ್ಹತೆ ಅಥವಾ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬಹುದು).

ಅರ್ಜಿದಾರರು ಫಾರ್ಮ್‌ ಅನ್ನು ಭರ್ತಿ ಮಾಡಿದ ನಂತರ, ಅವರನ್ನು ಕೇಂದ್ರ ಎಲೆಕ್ಟ್ರಾನಿಕ್‌್ಸ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸೆಂಟರ್‌ ಫಾರ್‌ ಡೆವಲಪೆಂಟ್‌ ಆಫ್‌ ಅಡ್ವಾನ್‌್ಸ್ಡ ಕಂಪ್ಯೂಟಿಂಗ್‌(ಸಿಎಡಿಸಿ) ಆಯೋಜಿಸಿರುವ ಬಾಹ್ಯ ಇ-ಸೈನ್‌ ಪೋರ್ಟಲ್‌ಗೆ ಕರೆದೊಯ್ಯಲಾಗುತ್ತದೆ. ಅಆಂಅ ಪೋರ್ಟಲ್ನಲ್ಲಿ, ಅರ್ಜಿದಾರರು ತಮ ಆಧಾರ್‌ ಸಂಖ್ಯೆಯನ್ನು ನಮೂದಿಸಬೇಕು ಮತ್ತು ನಂತರ ಆಧಾರ್‌ ಔಖಿ ಅನ್ನು ರಚಿಸಬೇಕು, ಅಲ್ಲಿ ಆ ಆಧಾರ್‌ ಸಂಖ್ಯೆಯೊಂದಿಗೆ ಲಿಂಕ್‌ ಮಾಡಲಾದ ಫೋನ್‌ ಸಂಖ್ಯೆಗೆ ಔಖಿ ಕಳುಹಿಸಲಾಗುತ್ತದೆ.

ನಂತರ ಅರ್ಜಿದಾರರು ಆಧಾರ್‌ ಆಧಾರಿತ ದೃಢೀಕರಣಕ್ಕೆ ಒಪ್ಪಿಗೆ ನೀಡಬೇಕು ಮತ್ತು ಪರಿಶೀಲನೆಯನ್ನು ಪೂರ್ಣಗೊಳಿಸಬೇಕು. ಅದು ಪೂರ್ಣಗೊಂಡ ನಂತರವೇ ಅರ್ಜಿದಾರರನ್ನು ಫಾರ್ಮ್‌ ಅನ್ನು ಸಲ್ಲಿಸಲು ಇಸಿಐಎನ್‌ಇಟಿ ಪೋರ್ಟಲ್‌ಗೆ ಮರುನಿರ್ದೇಶಿಸಲಾಗುತ್ತದೆ.

ಗ್ರೇಟರ್‌ ಬೆಂಗಳೂರು ವ್ಯಾಪ್ತಿಗೆ 450 ವಾರ್ಡ್‌ಗಳು..!

ಬೆಂಗಳೂರು,ಸೆ.24- ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ವಾರ್ಡ್‌ ಪುನರ್‌ವಿಂಗಡಣೆ ಕಾರ್ಯ ಪೂರ್ಣಗೊಂಡಿದೆ.198 ವಾರ್ಡ್‌ಗಳಿದ್ದ ಬಿಬಿಎಂಪಿಯನ್ನು ರದ್ದುಗೊಳಿಸಿದ ನಂತರ ರಚಿಸಲಾಗಿರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಲ್ಲಿ 400 ರಿಂದ 450 ವಾರ್ಡ್‌ಗಳು ರಚನೆಯಾಗುವ ಸಾಧ್ಯತೆಗಳಿವೆ.

ಜಿಬಿಎ ವಾರ್ಡ್‌ ವಿಂಗಡಣೆ ಪ್ರಕ್ರಿಯೆ ನಿಗದಿಯಂತೆ ಮುಕ್ತಾಯಗೊಂಡಿದ್ದು, ಇಂದು ಸಂಜೆ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ಸರ್ಕಾರಕ್ಕೆ ವಾರ್ಡ್‌ ವಿಂಗಡಣಾ ವರದಿ ಸಲ್ಲಿಸಲಿದ್ದಾರೆ.
ವಾರ್ಡ್‌ ವಿಂಗಡಣೆಯಲ್ಲಿ ಈ ಹಿಂದೆ ಆಗಿದ್ದ ಕೆಲ ಲೋಪ ದೋಷಗಳನ್ನು ಸರಿಪಡಿಸಲಾಗಿದೆ.

ಆಯಾ ವಿಧಾನಸಭಾ ಕ್ಷೇತ್ರಗಳ ವಾರ್ಡ್‌ಗಳನ್ನು ಅದೇ ಕ್ಷೇತ್ರದಲ್ಲಿ ಮುಂದುವರೆಸಲಾಗಿದೆ. ಆದರೆ, ಕೆಲವೊಂದು ವಾರ್ಡ್‌ಗಳು ಪಕ್ಕದ ವಿಧಾನಸಭಾ ಕ್ಷೇತ್ರಗಳಿಗೆ ಸೇರ್ಪಡೆಯಾಗಿದೆ ಎಂದು ಜಿಬಿಎ ಮೂಲಗಳು ಈ ಸಂಜೆಗೆ ತಿಳಿಸಿವೆ.

ಮೂಲಗಳ ಪ್ರಕಾರ ಪ್ರತಿ ನಗರ ಪಾಲಿಕೆಗೆ 75 ರಿಂದ 100 ವಾರ್ಡ್‌ಗಳನ್ನು ರಚಿಸಲಾಗಿದ್ದು, ಐದು ನಗರ ಪಾಲಿಕೆಗಳಿಂದ ಬರೊಬ್ಬರಿ 400 ರಿಂದ 450 ವಾರ್ಡ್‌ಗಳು ರಚನೆಯಾಗುವ ಸಾಧ್ಯತೆಗಳಿವೆಯಂತೆ.

ಮಹೇಶ್ವರ್‌ ರಾವ್‌ ಸಲ್ಲಿಸಿರುವ ವಾರ್ಡ್‌ ವಿಂಗಡಣಾ ವರದಿಯನ್ನು ಪರಿಶೀಲಿಸಿದ ನಂತರ ಸರ್ಕಾರ ಸಾರ್ವಜನಿಕ ಆಕ್ಷೇಪಣೆ ಆಹ್ವಾನಿಸಲಿದೆ. ಆಕ್ಷೇಪಣೆ ಸಲ್ಲಿಕೆ ಅವಧಿ ಪೂರ್ಣಗೊಂಡ ಕೂಡಲೇ ಅಂತಿಮ ವಾರ್ಡ್‌ಗಳ ಪಟ್ಟಿಯನ್ನು ಪ್ರಕಟಿಸಲಿದೆ ಎಂದು ತಿಳಿದುಬಂದಿದೆ. ಒಟ್ಟಾರೆ, ನ.30 ರೊಳಗೆ ವಾರ್ಡ್‌ ವಿಂಗಡಣೆ ಹಾಗೂ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸುವುದರ ಜೊತೆಗೆ ಮುಂದಿನ ಜನವರಿ ಇಲ್ಲವೇ ಫೆಬ್ರವರಿಯಲ್ಲಿ ಜಿಬಿಎಗೆ ಚುನಾವಣೆ ನಡೆಸುವುದು ಸರ್ಕಾರದ ಗುರಿಯಾಗಿದೆ.

ರಸ್ತೆ ಗುಂಡಿ ಮುಚ್ಚುವ ಮೂಲಕ ವಿನೂತನವಾಗಿ ಪ್ರತಿಭಟಿಸಿ ಕಾಂಗ್ರೆಸ್‌‍ ಸರ್ಕಾರಕ್ಕೆ ಬಿಸಿಮುಟ್ಟಿಸಿದ ಬಿಜೆಪಿ

ಬೆಂಗಳೂರು,ಸೆ.24-ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಹದಗೆಟ್ಟಿರುವ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಬಿಜೆಪಿ ವಿನೂತನವಾಗಿ ಪ್ರತಿಭಟನೆ ನಡೆಸಿ ಆಡಳಿತಾರೂಢ ಕಾಂಗ್ರೆಸ್‌‍ ಸರ್ಕಾರಕ್ಕೆ ಬಿಸಿಮುಟ್ಟಿಸಿದೆ. ಬೆಂಗಳೂರು-ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ದಾವಣಗೆರೆ, ಬೆಂಗಳೂರು ದಕ್ಷಿಣ, ಹಾಸನ, ಚಿಕ್ಕಮಗಳೂರು, ಧಾರವಾಡ, ಬೆಳಗಾವಿ, ಕಲಬುರಗಿ, ಬಳ್ಳಾರಿ, ರಾಯಚೂರು ಸೇರಿದಂತೆ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳು ಸೇರಿದಂತೆ 224 ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆಗುಂಡಿ ಮುಚ್ಚಿ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿತು.

ಪ್ರತಿಭಟನಾ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ,
ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಬೆಂಗಳೂರನ್ನು ಪ್ರತಿನಿಧಿಸುವ ಸಚಿವರ ಭಾವಚಿತ್ರಗಳನ್ನು ಹಿಡಿದು, ಮುಚ್ಚಿ ಮುಚ್ಚಿ ಗುಂಡಿ ಮುಚ್ಚಿ. ಉಳಿಸಿ ಉಳಿಸಿ ಜನರ ಪ್ರಾಣ ಉಳಿಸಿ ಎಂದು ವಿನೂತನವಾಗಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನಸೆಳೆದರು.

ಶಿವಮೊಗ್ಗದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಬೆಂಗಳೂರಿನಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಸಂಸದರು, ಶಾಸಕರು, ವಿಧಾನಪರಿಷತ್‌ ಸದಸ್ಯರು, ಜಿಲ್ಲಾಧ್ಯಕ್ಷರು ಸೇರಿದಂತೆ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಹಿಡಿಶಾಪ ಹಾಕಿದರು.

ಬೆಂಗಳೂರಿನ ಯಲಹಂಕದಲ್ಲಿ ಶಾಸಕ ಎಸ್‌‍.ಆರ್‌.ವಿಶ್ವನಾಥ್‌ ನೇತೃತ್ವದಲ್ಲಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಬೆಳಗ್ಗೆಯೇ ಭಾಗಿಯಾಗಿದ್ದ ಕಾರ್ಯಕರ್ತರು ರಸ್ತೆಗುಂಡಿಗಳನ್ನು ಮುಚ್ಚಿ ಸರ್ಕಾರ ಗುಂಡಿ ಮುಚ್ಚಲು ಸಾಧ್ಯವಾಗದೆ ದಿವಾಳಿ ಸ್ಥಿತಿಗೆ ಬಂದಿದೆ ಎಂದು ಕಿಡಿಕಾರಿದರು.

ಯಲಹಂಕಾದ ಹಳೆನಗರ ಕೆಂಪೇಗೌಡ ವಾರ್ಡ್‌ 1ರಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ದೊಡ್ಡಬಳ್ಳಾಪುರ ಭಾಗದಿಂದ ಬರುತ್ತಿದ್ದ ಬಸ್ಸುಗಳನ್ನು ಮಾರ್ಗಮಧ್ಯೆ ತಡೆದು ಗುಂಡಿಗಳನ್ನು ಮುಚ್ಚುವವರೆಗೂ ಪ್ರಯಾಣ ನಡೆಸದಂತೆ ಒತ್ತಾಯಿಸಿದರು. ರಾಜ್ಯ ಸರ್ಕಾರ ಕಾಟಾಚಾರಕ್ಕೆ ಅವೈಜ್ಞಾನಿಕವಾಗಿ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುತ್ತಿದೆ. ಕಳಪೆ ಡಾಂಬರೀಕರಣದಿಂದಾಗಿ ಎಲ್ಲೆಂದರಲ್ಲಿ ಗುಂಡಿಗಳಿವೆ. ಪ್ರಯಾಣಿಕರು ರಸ್ತೆಯಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ. ಇತ್ತೀಚೆಗೆ ಅನೇಕ ಸಾವುನೋವು ಸಂಭವಿಸಿರುವುದು ಇದಕ್ಕೆ ಸಾಕ್ಷಿ ಎಂದು ಶಾಸಕ ವಿಶ್ವನಾಥ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಮಹಾಲಕ್ಷ್ಮಿಲೇಔಟ್‌ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ ನೇತೃತ್ವದಲ್ಲಿ ಕಠೀರವ ಸ್ಟುಡಿಯೋ ಬಳಿ ರಸ್ತೆ ತಡೆದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಸ್ತೆ ಗುಂಡಿಗಳ ಮುಂದೆ ಕುಳಿಯು ಬಾಯಿ ಬಾಯಿ ಬಡಿದುಕೊಳ್ಳುತ್ತಿರುವ ಪ್ರತಿಭಟನಾಕಾರರು, ತಾವೇ ಗುಂಡಿ ಮುಚ್ಚಿದರು. ಮಾಜಿ ಶಾಸಕ ನೇಲ ನರೇಂದ್ರ ಬಾಬು, ಉಪ ಮೇಯರ್‌ ಹರೀಶ್‌ ಸಹ ಗುಂಡಿ ಮುಚ್ಚುವ ಕೆಲಸ ಮಾಡಿದರು.

ಕಂಠೀರವ ಸ್ಟುಡಿಯೋ ರಸ್ತೆ, ಸುಮನಹಳ್ಳಿ, ನಾಗರಭಾವಿ, ಕಾಮಾಕ್ಷಿಪಾಳ್ಯ, ಮಾಗಡಿ ರಸ್ತೆಗಳು ಗುಂಡಿಮಯವಾಗಿದ್ದರೂ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.ಗುಂಡಿ ಮುಚ್ಚಿ ಜನರ ಪ್ರಾಣ ಉಳಿಸಿ, ಗುಂಡಿಗಳ ಊರು ಮಾಡಿದ ಕಾಂಗ್ರೆಸ್‌‍ ಸರ್ಕಾರ ಅಂತ ಘೋಷಣೆ ಕೂಗುತ್ತಾ ಆಕ್ರೋಶ ಹೊರಹಾಕಿದರು.

ಈ ವೇಳೆ ಪ್ರತಿಭಟನೆ ಪಾಲ್ಗೊಂಡಿದ್ದ ನೂರಾರು ಕಾರ್ಯಕರ್ತರು ರಸ್ತೆತಡೆ ನಡೆಸಿ ಗುಂಡಿಗಳಿಗೆ ಡಾಂಬರೀಕರಣ ಮತ್ತು ಮಣ್ಣು ಹಾಕಿ ಮುಚ್ಚಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಸರ್ಕಾರದ ಬಳಿ ಗುಂಡಿಗಳನ್ನು ಮುಚ್ಚಲು ಹಣವಿಲ್ಲ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ವಾಹನಗಳು ಸಂಚರಿಸುವುದೆಂದರೆ ಯಮಲೋಕಕ್ಕೆ ಹೋದ ಅನುಭವವಾಗುತ್ತದೆ. ಸರ್ಕಾರದ ಬಳಿ ಗುಂಡಿ ಮುಚ್ಚಲು ಹಣವಿಲ್ಲ ಎಂದರೆ ಜನರ ಪಾಲಿಗೆ ಇದು ಸತ್ತು ಹೋಗಿದೆ ಎಂದು ಕಿಡಿಕಾರಿದರು.

ಬನಶಂಕರಿಯಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಚಿಕ್ಕಪೇಟೆಯಲ್ಲಿ ಸಂಸದ ಪಿ.ಸಿ.ಮೋಹನ್‌, ಶಾಸಕ ಉದಯ ಗರುಡಾಚಾರ್‌, ಗಾಂಧಿನಗರದಲ್ಲಿ ಸಪ್ತಗಿರಿ ಗೌಡ ಹೀಗೆ 28 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಪ್ರತಿಭಟನೆ ನಡೆಸಿದರು. ಬಸವನಗುಡಿ, ಗೋವಿಂದರಾಜನಗರ, ವಿಜಯನಗರ, ಬಿಟಿಎಂ ಲೇಔಟ್‌ ಕ್ಷೇತ್ರಗಳಲ್ಲಿ ರಸ್ತೆ ತಡೆ ನಡೆಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.

ಇಡೀ ಬೆಂಗಳೂರನ್ನು ಗುಂಡಿ ಮಾಡಿದ ಕಾಂಗ್ರೆಸ್‌‍ ಸರಕಾರಕ್ಕೆ ಧಿಕ್ಕಾರ, ವಾಹನ ಸವಾರರಿಗೆ ತೊಂದರೆ ಕೊಡುತ್ತಿರುವ ಕಾಂಗ್ರೆಸ್‌‍ ಸರಕಾರಕ್ಕೆ ಧಿಕ್ಕಾರ, ಬ್ರಾಂಡ್‌ ಬೆಂಗಳೂರು ಎಂದು ಹೇಳಿ ಬ್ಯಾಡ್‌ ಬೆಂಗಳೂರು ಮಾಡಿದ ಕಾಂಗ್ರೆಸ್‌‍ ಸರಕಾರಕ್ಕೆ ಧಿಕ್ಕಾರ ಹಾಕಿ ಮುಚ್ಚಿಸಿ ಮುಚ್ಚಿಸಿ ಗುಂಡಿ ಮುಚ್ಚಿಸಿ ಘೋಷಣೆ ಕೂಗಿದರು.

ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ ಐಜಿ ವೃತ್ತದಲ್ಲಿ ಬಿಜೆಪಿ ಶಾಸಕರು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದಾರೆ. ಹೀಗೆ ರಾಜ್ಯದ ಎಲ್ಲಾ ಕಡೆ ಪ್ರತಿದಿನ 1 ಗಂಟೆ ರಸ್ತೆತಡೆ ನಡೆಸಿ ಅಥವಾ ಗುಂಡಿ ಬಿದ್ದಿರುವ ಜಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಲು ಬಿಜೆಪಿ ನಾಯಕರು ನಿರ್ಧರಿಸಿದ್ದು, ಇದರೊಂದಿಗೆ ತಾವೇ ಗುಂಡಿ ಮುಚ್ಚುವ ಕೆಲಸವನ್ನೂ ಮಾಡಲಿದ್ದಾರೆ.

ಸರ್ಕಾರದ ಬಳಿ ಹಣ ಇಲ್ಲ ಗುಂಡಿ ನಾವೇ ಮುಚ್ಚೋಣ :
ಬೆಂಗಳೂರು,ಸೆ.24- ಪ್ರಧಾನಿ ನರೇಂದ್ರಮೋದಿ ಅವರ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಗುಂಡಿಗಳಿವೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಮೊದಲು ನಿಮ ಮನೆಯ ಬಾಗಿಲನ್ನು ಸರಿಪಡಿಸಿ ಕೊಳ್ಳಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಪಾಪರ್‌ ಆಗಿದೆ, ಅವರ ಬಳಿ ಹಣ ಇಲ್ಲ. ರಸ್ತೆ ಗುಂಡಿಗಳನ್ನು ನಾವೇ ಮುಚ್ಚೋಣ, ಜನ ಸಹಕಾರ ಮಾಡಿ. ಡಿ.ಕೆ.ಶಿವಕುಮಾರ್‌ ಅವರೇ ಬ್ಯಾಟರಿ ತೆಗೆದುಕೊಂಡು ಫ್ಲೈಟ್‌ ಹತ್ತಿ ಅಮೆರಿಕಾಕ್ಕೆ ಹೋಗಿ ಟ್ರಂಪ್‌ ಮನೆ ಮುಂದೆ ಗುಂಡಿ ಇದ್ಯಾ ನೋಡಿ. ಮೊದಲು ನಿಮ ಮನೆ ನೋಡರಿ. ಮೋದಿ, ಟ್ರಂಪ್‌ ಏನು ಮಾಡುತ್ತಿದ್ದಾರೆ ಎಂದು ನೋಡಲು ನಿಮನ್ನು ಅಧಿಕಾರದಲ್ಲಿ ಇಟ್ಟಿಲ್ಲ ಎಂದು ತಿರುಗೇಟು ನೀಡಿದರು.

ಬಿಜೆಪಿ ಸರ್ಕಾರ ಗುಂಡಿ ಮುಚ್ಚಿಲ್ಲ ಅಂತೀರಲ್ಲಾ. ಗುಂಡಿ ಮುಚ್ಚುವುದು ತಾತ್ಕಾಲಿಕ ಅಷ್ಟೇ, ಶಾಶ್ವತ ಅಲ್ಲ ಇಡೀ ಕಾಂಗ್ರೆಸ್‌‍ ಸರ್ಕಾರ ಗುಂಡಿಗಳಲ್ಲಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಗುಂಡಿಗಳು ಮರಣ ಕೂಪ ಆಗಿವೆ. ಬೆಂಗಳೂರು ಮಾತ್ರ ಅಲ್ಲ ಇಡೀ ರಾಜ್ಯದಲ್ಲಿ ಕೆಲಸ ಮಾಡಬೇಕಾಗಿದೆ. ನೀವು 5000 ಕೋಟಿ ಡಾಂಬರೀಕರಣ ಮಾಡಿದ್ದರೆ ಗುಂಡಿ ಯಾಕೆ ಬೀಳುತ್ತಿತ್ತು? ಎಂದು ಪ್ರಶ್ನೆ ಮಾಡಿದರು.

ನೀವು ಕಳಪೆ ಕಾಮಗಾರಿ ಮಾಡಿದ್ದೀರಿ ಅದಕ್ಕೆ ಗುಂಡಿ ಬಿದ್ದಿದೆ. ಬೆಂಗಳೂರಿನ ಎಲ್ಲಾ ರಸ್ತೆಗಳಿಗೆ ಇಂದಿನಿಂದಲೇ ಡಾಂಬರೀಕರಣ ಮಾಡಿ ಎಂದು ಆಗ್ರಹಿಸಿದರು. ಡಿಸಿಎಂ ಐಟಿ ಬಿಟಿ ಕಂಪನಿಗಳಿಗೆ ಮಾತ್ರ ಬೆಂಗಳೂರು ಬಿಟ್ಟು ಹೋಗಿ ಅಂದಿದ್ದಾರೆ. ಕಾರು, ಬೈಕ್‌ಗಳಲ್ಲಿ ಓಡಾಡುವವರನ್ನು ಯಾವಾಗ ಬಿಟ್ಟು ಹೋಗಿ ಅಂತೀರಾ? ನಾವು ರಜೆ ತೆಗೆದುಕೊಂಡು ಬೆಂಗಳೂರು ಬಿಟ್ಟು ಹೊರಗೆ ಹೋಗುತ್ತೇವೆ. ಆಗಲಾದರೂ ರಸ್ತೆ ರಿಪೇರಿ ಮಾಡುತ್ತೀರಾ? ಕಂಪನಿಗಳಿಗೆ ಆವಾಜ್‌ ಹಾಕಿದಂತೆ ಬೆಂಗಳೂರಿನ ಜನರಿಗೆ ಯಾವಾಗ ಆವಾಜ್‌ ಹಾಕುತ್ತೀರಾ? ಎಂದರು.

ಕಳೆದ ನಾಲ್ಕು ತಿಂಗಳಿನಿಂದ ಸಾವಿರ ಗುಂಡಿ ಮುಚ್ಚಿದ್ದೇವೆ ಎನ್ನುತ್ತಾರೆ. ಕಾಂಗ್ರೆಸ್‌‍ನವರಿಗೆ ಕೈ ಮುಗಿಯುತ್ತೇನೆ, ಪುಣ್ಯಕ್ಕೆ ಕೆಂಪೇಗೌಡರ ಕಾಲದಲ್ಲೇ ರಸ್ತೆ ಸರಿ ಮಾಡಿಲ್ಲ ಎಂದು ಹೇಳಲಿಲ್ವಲ್ಲಾ ಎಂದು ವ್ಯಂಗ್ಯವಾಡಿದರು.

ಇದು ಪಾಪರ್‌ ಸರ್ಕಾರ ಇಡೀ ರಿಂಗ್‌ ರೋಡ್‌ ಹದಗೆಟ್ಟು ಹೋಗಿದೆ. ಗುಂಡಿ ಮುಚ್ಚೋದಲ್ಲ, ರಸ್ತೆಗಳನ್ನೇ ಸಂಪೂರ್ಣವಾಗಿ ಸರಿಪಡಿಸಬೇಕಿದೆ. ಎರಡೂವರೆ ವರ್ಷ ಆಯ್ತು, ರಸ್ತೆಗುಂಡಿಮುಚ್ಚಲಿಲ್ಲ ಈ ಸರ್ಕಾರ. ಅದಕ್ಕೆ ನಾವೇ ರಸ್ತೆಗಿಳಿದು ಗುಂಡಿ ಮುಚ್ಚಲು ಮುಂದಾಗಿದ್ದೇವೆ ಎಂದು ಹೇಳಿದರು.

ರಸ್ತೆಗುಂಡಿಗಳು ಮರಣ ಕೂಪಗಳಾಗಿವೆ. ರಾಜ್ಯಾದ್ಯಂತ ಸಮರೋಪಾದಿಯಲ್ಲಿ ಸಚಿವರು ಪ್ರವಾಸ ಮಾಡಿ ರಸ್ತೆಗಳನ್ನು ಸರಿಪಡಿಸಬೇಕು. ಆದರೆ ಯಾವ ಸಚಿವರೂ ಜಿಲ್ಲೆಗಳಿಗೆ ಹೋಗುತ್ತಿಲ್ಲ. ಈ ಸರ್ಕಾರ 60% ಲಂಚ ಹೊಡೆದಿದೆ, ಅದಕ್ಕಾಗಿಯೇ ಗುಂಡಿ ಮುಚುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದು ಹತ್ತಿದ ಏಣಿ ಒದ್ದಂತೆ, ಕೆಲಸ ಆದಮೇಲೆ ಬೆಲೆ ಇಲ್ಲ ಎಂಬ ಧೋರಣೆ. ಸರ್ಕಾರದ ಬಳಿ ಹಣ ಇಲ್ಲ, ಪಾಪರ್‌ ಆಗಿದೆ. ಸರ್ಕಾರಕ್ಕೆ ನ್ಯಾ.ನಾಗಮೋಹನದಾಸ್‌‍ ಆಯೋಗಕ್ಕೆ ಕನಿಷ್ಟ ಸವಲತ್ತು ಕೊಡುವ ಯೋಗ್ಯತೆಯೂ ಇಲ್ಲ.ಆಯೋಗಕ್ಕೆ ತಿಂಗಳಿಗೆ ಕನಿಷ್ಟ 10 ಲಕ್ಷ ರೂ. ಕೊಡುವ ಯೋಗ್ಯತೆಯೂ ಇಲ್ಲದಷ್ಟು ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಅಶೋಕ್‌ ಟೀಕಿಸಿದರು.

ಇ-ಖಾತೆಗೂ ಬರುತ್ತಿದೆ ಮೊಬೈಲ್‌ ಆ್ಯಪ್‌

ಬೆಂಗಳೂರು, ಸೆ.24- ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆಯಾದ ನಂತರ ಜಿಬಿಎ ಅಧಿಕಾರಿಗಳಿಗೆ ಗ್ರೇಟರ್‌ ಐಡಿಯಾಗಳು ಬರತೊಡಗಿವೆ. ಸಾರ್ವಜನಿಕರು ನಗರದಲ್ಲಿ ಇ-ಖಾತಾ ಪಡೆಯಲು ಹೆಣಗಾಡುತ್ತಿರುವುದನ್ನು ತಪ್ಪಿಸುವ ಉದ್ದೇಶದಿಂದ ಖಾತಾ ನೀಡಲು ಗ್ರೇಟ್‌ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಲಾಗುತ್ತಿದೆ.

ಹೀಗಾಗಿ ಇನ್ನು ಮುಂದೆ ಸಾರ್ವಜನಿಕರು ತಮ ಮೊಬೈಲ್‌ಗಳಲ್ಲೇ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ತಮ ಇ-ಖಾತಾ ಪಡೆದುಕೊಳ್ಳಬಹುದಾಗಿದೆ.ಇದುವರೆಗೂ ಜನರು ತಮ ಆಸ್ತಿಗಳ ಇ-ಖಾತಾ ಪಡೆಯಲು ಪಾಲಿಕೆ ಕಚೇರಿಗಳು, ಸೈಬರ್‌ ಸೆಂಟರ್‌ಗಳು ಹಾಗೂ ಬೆಂಗಳೂರು ಒನ್‌ ಸೆಂಟರ್‌ಗಳಿಗೆ ಅಲೆಯುವಂತಾಗಿತ್ತು. ಹೀಗಾಗಿ ಜನಸ್ನೇಹಿ ಖಾತಾ ಆ್ಯಪ್‌ ರಚನೆ ಮಾಡಲಾಗಿದೆ.

ಇನ್ನು ಕೆಲವೇ ದಿನಗಳಲ್ಲಿ ಇ-ಖಾತಾ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಲಾಗುತ್ತಿದ್ದು, ಜನ ತಮ ಮೊಬೈಲ್‌ ಮೂಲಕವೇ ಇ-ಖಾತೆಗೆ ಅರ್ಜಿ ಸಲ್ಲಿಸಿ ಖಾತೆ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

BREAKING : ಪದ್ಮಭೂಷಣ ಪುರಸ್ಕೃತ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಇನ್ನಿಲ್ಲ

ಬೆಂಗಳೂರು,ಸೆ.24- ಕನ್ನಡ ಸಾರಸತ್ವ ಲೋಕದ ಸರಸ್ವತಿ ಪುತ್ರನೆಂದೇ ಓದುಗರ ವಲಯದಲ್ಲಿ ಗುರುತಿಸಿಕೊಂಡಿದ್ದ, ಪ್ರತಿಷ್ಠಿತ ಪದ ಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಎಸ್‌‍.ಎಲ್‌.ಭೈರಪ್ಪ ಅವರು ಇಂದು ವಿಧಿವಶರಾಗಿದ್ದಾರೆ. ಕಳೆದ ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ನಗರದ ರಾಜರಾಜೇಶ್ವರಿನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.ಮೂರು ತಿಂಗಳ ಹಿಂದೆ ಮೈಸೂರಿನಿಂದ ಬೆಂಗಳೂರಿಗೆ ಆಗಮಿಸಿದ್ದ ಅವರು ಸಂಪಾದಕರೊಬ್ಬರ ನಿವಾಸದಲ್ಲಿ ವಾಸವ್ಯವಿದ್ದರು. ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಾಳೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಭೈರಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಬಳಿಕ ಮೈಸೂರಿನಲ್ಲಿ ಗುರುವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ಸಂತೇಶಿವರದಲ್ಲಿ 1934ರ ಜುಲೈ 26ರಂದು ಜನಿಸಿದ್ದ ಅವರು, ರಾಷ್ಟ್ರಕವಿ ಕುವೆಂಪು ಅವರ ನಂತರ ಸಾಹಿತ್ಯ ವಲಯದಲ್ಲಿ ಬಹುದೊಡ್ಡ ಓದುಗರನ್ನು ಹೊಂದಿದ್ದ ಅಪರೂಪದ ಸಾಹಿತಿಯಾಗಿದ್ದರು.

ದೇಶದ 3ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಎನಿಸಿದ ಪದಭೂಷಣ ಪ್ರಶಸ್ತಿಗೂ ಭಾಜನರಾಗಿದ್ದ ಅವರಿಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಒಂದಿಲ್ಲೊಂದು ದಿನ ಸಿಕ್ಕೇ ಸಿಗುತ್ತದೆ ಎಂಬ ಓದುಗರ ನಿರೀಕ್ಷೆ ಕೊನೆಗೂ ಈಡೇರಲಿಲ್ಲ. ಅವರು ರಚಿಸಿದ್ದ ಅನೇಕ ಕೃತಿಗಳು ಇಂಗ್ಲಿಷ್‌ಗೆ ತರ್ಜುಮೆಗೊಂಡು ಪ್ರತಿಷ್ಠಿತ ಬೂಕರ್‌ ಪ್ರಶಸ್ತಿಯೂ ಅವರಿಗೆ ಸಿಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಅದು ಕೂಡ ಅವರ ಜೀವಿತಾವಧಿಯಲ್ಲಿ ಸಾಧ್ಯವಾಗಲೇ ಇಲ್ಲ.

ಸರಸ್ವತಿ ಸಮಾನ್‌ ಪ್ರಶಸ್ತಿಗೆ ಭಾಜರಾಗಿದ್ದ ಭೈರಪ್ಪ ಅವರು, ಭೀಮಕಾಯ, ಬೆಳಕು ಮೂಡಿತು, ಧರ್ಮಶ್ರೀ, ದೂರ ಸರಿದರು, ಮತದಾನ, ಜಲಪಾತ, ನೆಲೆ, ಸಾಕ್ಷಿ, ಅಂಚು, ತಂತು, ಆವರಣ, ಯಾನ, ನಾಯಿ ನೆರಳು, ಗ್ರಹಣ, ದಾಟು, ಪರ್ವ, ಗೃಹಭಂಗ, ಕವಲು, ವಂಶವೃಕ್ಷ, ನಿರಾಕರಣ, ಸಾರ್ಥ, ಅನ್ವೇಷಣ, ಉತ್ತರಕಾಂಡ ಮೊದಲಾದ ಕೃತಿಗಳ ಮೂಲಕ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದರು.

ಕಾದಂಬರಿಗಳ ಮೂಲಕ ಚಿರಪರಿಚಿತರಾಗಿದ್ದ ಅವರು ತಮ ಬರವಣಿಗೆಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ತಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದರು. ಕನಕಪುರದಲ್ಲಿ ನಡೆದಿದ್ದ ಅಖಿಲ ಭಾರತ ಸಾಹಿತ್ಯ ಸಮೇಳನದ ಅಧ್ಯಕ್ಷತೆಯ ಗೌರವ ಪಡೆದಿದ್ದರು. ಗಾಂಧೀಜಿಯವರ ಮೌಲ್ಯಗಳಿಂದ ಪ್ರೇರಿತರಾಗಿದ್ದ ಅವರು, ತಮ ಬರವಣಿಗೆಗಳ ಮೂಲಕ ಬಹು ದೊಡ್ಡ ಕೊಡುಗೆ ನೀಡಿದ್ದರು.

ಕನ್ನಡ ಭಾಷೆಯಲ್ಲಿರುವ ಬರೆದಿರುವ ಬೈರಪ್ಪ ಅವರ ಕೃತಿಗಳು ಇಂಗ್ಲಿಷ್‌ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತೀಯ ಸಾಹಿತ್ಯದಲ್ಲೂ ಜನಪ್ರಿಯರಾಗಿದ್ದರು.ಭಾರತ ಸರ್ಕಾರ 2023ರಲ್ಲಿ ಪದಭೂಷಣ ಪ್ರಶಸ್ತಿ ನೀಡಿ ಸನಾನಿಸಿತ್ತು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದ ಶ್ರೀಯುತರು ಮೈಸೂರಿನಲ್ಲಿ ಪ್ರೌಢ ಹಾಗೂ ಕಾಲೇಜು ಶಿಕ್ಷಣ ಪಡೆದಿದ್ದರು. ಸುವರ್ಣ ಪದಕದೊಂದಿಗೆ ಎಂ.ಎ ಪದವಿ ತೇರ್ಗಡೆಯಾಗಿದ್ದ ಭೈರಪ್ಪ ಅವರು ಬರೋಡಾದ ಸಯ್ಯಾಜಿರಾವ್‌ ವಿಶ್ವವಿದ್ಯಾಲಯದಿಂದ ಸತ್ಯ ಮತ್ತು ಸೌಂದರ್ಯ ಎಂಬ ಇಂಗ್ಲಿಷ್‌ನಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್‌ ಪದವಿ ಪಡೆದಿದ್ದರು.ಬೈರಪ್ಪನವರ ಗೃಹಭಂಗ, ವಂಶವೃಕ್ಷ, ನೆಲೆ, ಸಾಕ್ಷಿ, ನಾಯಿ ನೆರಳು, ತಬ್ಬಲಿ ನೀನಾದೆ ಮಗನೇ, ದಾಟು,ಧರ್ಮಶ್ರೀ, ಪರ್ವ, ಭಿತ್ತಿ ಮೊದಲಾದ ಕಾದಂಬರಿಗಳು ಹಿಂದಿ ಮತ್ತು ಮರಾಠಿ ಭಾಷೆಯಲ್ಲೂ ಜನಪ್ರಿಯವಾಗಿವೆ.

ಸಂತಾಪ:
ಭೈರಪ್ಪ ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌, ಪ್ರಧಾನಿ ನರೇಂದ್ರಮೋದಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೇಂದ್ರ ಸಚಿವರಾದ ಅಮಿತ್‌ ಷಾ, ರಾಜನಾಥ್‌ ಸಿಂಗ್‌, ಜೆ.ಪಿ.ನಡ್ಡಾ, ಎಚ್‌.ಡಿ.ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌, ಪ್ರಹ್ಲಾದ್‌ ಜೋಷಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಸಾಲ ತೀರಿಸಲು ಸ್ನೇಹಿತನ ಮನೆಗೇ ಕನ್ನ ಹಾಕಿದ್ದ ಪದವೀಧರ ಅರೆಸ್ಟ್

ಬೆಂಗಳೂರು,ಸೆ.24- ಸಾಲ ತೀರಿಸಲು ಸ್ನೇಹಿತನ ಮನೆಗೆ ಕನ್ನ ಹಾಕಿದ್ದ ಬಿಇ ಪದವೀಧರನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿ 5.80 ಲಕ್ಷ ರೂ. ಮೌಲ್ಯದ 58 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಮೂಲತಃ ಕಲ್ಬುರ್ಗಿ ನಿವಾಸಿ ಮಂಜುನಾಥ್‌ (38) ಬಂಧಿತ ಪದವೀಧರ. ಈತ ಕೆಆರ್‌ಪುರಂನ ಅಯ್ಯಪ್ಪನಗರದಲ್ಲಿ ವಾಸವಾಗಿದ್ದು, ಬಿಇ ಸಿವಿಲ್‌ ಎಂಜಿನಿಯರ್‌ ವ್ಯಾಸಂಗ ಮಾಡಿದ್ದು, ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ.

ಸಾಲ ಮಾಡಿಕೊಂಡಿದ್ದ ಮಂಜುನಾಥ್‌ ಅದನ್ನು ತೀರಿಸಲು ಕಳ್ಳತನದ ಹಾದಿ ಹಿಡಿದಿದ್ದಾನೆ.
ಕೊಡಿಗೆಹಳ್ಳಿ ಗ್ರಾಮದಲ್ಲಿ ಈತನ ಸ್ನೇಹಿತ ನವೀನ್‌ ವಾಸವಾಗಿದ್ದು, ಆ.29 ರಂದು ಸಂಜೆ ಗ್ರಾಮದಲ್ಲಿ ಕೂರಿಸ್ದಿ ಗಣೇಶನ ಮೂರ್ತಿಗೆ ಪೂಜೆ ಮಾಡಿಸಿಕೊಂಡು ಬರಲು ಅವರ ಪತ್ನಿ ಸುಷಾ ಮನೆಗೆ ಬೀಗಹಾಕಿಕೊಂಡು ಹೋಗಿದ್ದರು.

ಇದೇ ಸಮಯಕ್ಕಾಗಿ ಕಾದಿದ್ದ ಮಂಜುನಾಥ್‌ ಸ್ನೇಹಿತನ ಮನೆಯ ಮುಂಬಾಗಿಲನ್ನು ಒಡೆದು ಒಳನುಗ್ಗಿ ಕೊಠಡಿಯ ಕಬೋರ್ಡ್‌ನಲ್ಲಿಟ್ಟಿದ್ದ 50 ಗ್ರಾಂ ಚಿನ್ನದ ಮಾಂಗಲ್ಯ ಸರ, 20 ಗ್ರಾಂ 2 ಚಿನ್ನದ ಬಳೆ, 35 ಗ್ರಾಂ ಕಿವಿಯೋಲೆಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದನು.
ಸುಷಾ ಅವರು ಕೆಲ ಸಮಯದ ಬಳಿಕ ಮನೆಗೆ ಬಂದಾಗ ಕಳ್ಳತನವಾಗಿರುವುದು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಹಲವು ಮಾಹಿತಿಗಳನ್ನು ಕಲೆಹಾಕಿ ಆರೋಪಿ ಮಂಜುನಾಥ್‌ನನ್ನು ಆತನ ಮನೆಯಲ್ಲೇ ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಸ್ನೇಹಿತನ ಮನೆಯಲ್ಲಿ ಕಳ್ಳತನ ಮಾಡಿದ್ದಾಗಿ ಹೇಳಿದ್ದಾನೆ. ಆತನ ಮನೆಯಲ್ಲಿದ್ದ 58 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 5.80 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ರಾಜ್ಯದಲ್ಲಿ ಸರಾಸರಿ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆ

ಬೆಂಗಳೂರು, ಸೆ. 24-ನೈರುತ್ಯ ಮುಂಗಾರು ಮಳೆಯ ಅವಧಿ ಮುಗಿಯುವ ಹಂತ ತಲುಪಿದ್ದು, ರಾಜ್ಯದಲ್ಲಿ ಸರಾಸರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆದರೆ. ಸೆಪ್ಟೆಂಬರ್‌ನಲ್ಲಿ ಇದುವರೆಗೂ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ರಾಜ್ಯಾದ್ಯಂತ ವ್ಯಾಪಕ ಪ್ರಮಾಣದ ಮಳೆಯಾಗದೇ ಚದುರಿದಂತೆ ಮಳೆಯಾಗುತ್ತಿದೆ. ಇದರಿಂದ ಮುಂಗಾರು ಹಂಗಾಮಿನ ಬೆಳೆಗಳಿಗೆ ತೇವಾಂಶದ ಕೊರತೆ ಉಂಟಾಗುವ ಆತಂಕ ಎದುರಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜೂನ್‌ ಒಂದರಿಂದ ನಿನ್ನೆವರೆಗೆ ರಾಜ್ಯದಲ್ಲಿ 385. 3 ಮಿ.ಮೀ.ನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ.24ರಷ್ಟು ಮಳೆಯಾಗಿದೆ. ಈ ಅವಧಿಯ ವಾಡಿಕೆ ಮಳೆ ಪ್ರಮಾಣ 311.6 ಮಿ.ಮೀ. ಆಗಿದೆ. ಅದೇ ರೀತಿ ಜನವರಿ ಒಂದರಿಂದ ನಿನ್ನೆಯವರೆಗಿನ ಮಾಹಿತಿ ಪ್ರಕಾರ 1117 ಮಿ.ಮೀ.ನಷ್ಟು ಮಳೆಯಾಗಿದ್ದು. ವಾಡಿಕೆಗಿಂತ ಶೇ.20 ರಷ್ಟು ಹೆಚ್ಚು ಮಳೆ ಬಿದ್ದಿದೆ. ಈ ಅವಧಿಯ ವಾಡಿಕೆ ಮಳೆ ಪ್ರಮಾಣ 929 ಮಿ.ಮೀ. ಆಗಿದೆ. ಕರಾವಳಿ, ಮಲೆನಾಡು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲೂ ವಾಡಿಕೆಗಿಂತ ಹೆಚ್ಚಾಗಿರುವುದು ಅಂಕಿ-ಅಂಶಗಳಿಂದ ಸ್ಪಷ್ಟವಾಗಿದೆ.

ಸೆಪ್ಟೆಂಬರ್‌ ಒಂದರಿಂದ ನಿನ್ನೆಯವರೆಗೆ ರಾಜ್ಯದಲ್ಲಿ 830 ಮಿ.ಮೀ.ನಷ್ಟು ಮಳೆ ಬಿದ್ದಿದ್ದು, ಶೇ.3ರಷ್ಟು ವಾಡಿಕೆಗಿಂತ ಹೆಚ್ಚಾಗಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.2ರಷ್ಟು ಹಾಗೂ ಮಲೆನಾಡಿನಲ್ಲಿ ಶೇ.8ರಷ್ಟು ವಾಡಿಕೆಗಿಂತ ಮಳೆ ಕೊರತೆಯಾಗಿದೆ.

ಚಾಮರಾಜನಗರದಲ್ಲಿ ಶೇ.29,ಚಿತ್ರದುರ್ಗದಲ್ಲಿ ಶೇ.10, ಚಿಕ್ಕಮಗಳೂರು, ಬೆಂಗಳೂರು ದಕ್ಷಿಣದಲ್ಲಿ ಶೇ.13, ಶಿವಮೊಗ್ಗದಲ್ಲಿ ಶೇ,11, ಹಾವೇರಿಯಲ್ಲಿ ಶೇ.17 ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಶೇ.12ರಷ್ಟು ಮಳೆ ಕೊರತೆ ಕಂಡು ಬಂದಿದೆ.ನಿನ್ನೆ ರಾಜ್ಯದಲ್ಲಿ ಸಾಧಾರಣ ಮಳೆಯಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಉಳಿದೆಡೆ ಚದುರಿಂತೆ ಮಳೆಯಾಗಿದ್ದು, ಕುಮಟಾ ತಾಲ್ಲೂಕಿನ ಕಲಭಾಗ ಗ್ರಾಮ ಪಂಚಾಯಿತಿಯಲ್ಲಿ 68 ಮಿ.ಮೀ.ನಷ್ಟು ಅತಿಹೆಚ್ಚು ಮಳೆ ಬಿದ್ದಿದೆ.

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಸೇರಿದಂತೆ ರಾಜ್ಯದ ಪೂರ್ವ ಭಾಗದ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ. ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ.

2030ರ ಕಾಮನ್‌ವೆಲ್ತ್‌ ಕ್ರೀಡಾಕೂಟದ ಅತಿಥ್ಯಕ್ಕೆ ಮುಂದಾದ ಗುಜರಾತ್‌

ಅಹಮದಾಬಾದ್‌, ಸೆ. 24 (ಪಿಟಿಐ) ಮುಂಬರುವ 2030 ರ ಕಾಮನ್‌ವೆಲ್ತ್‌‍ ಕ್ರೀಡಾಕೂಟವನ್ನು ಅಹಮದಾಬಾದ್‌ನಲ್ಲಿ ಆಯೋಜಿಸುವ ಪ್ರಸ್ತಾವನೆಯನ್ನು ಗುಜರಾತ್‌ ಸರ್ಕಾರ ಕಾಮನ್‌ವೆಲ್ತ್‌‍ ಕ್ರೀಡಾ ಮೌಲ್ಯಮಾಪನ ಸಮಿತಿಗೆ ಔಪಚಾರಿಕವಾಗಿ ಮಂಡಿಸಿದೆ ಎಂದು ತಿಳಿದುಬಂದಿದೆ.

ಲಂಡನ್‌ ಪ್ರವಾಸದಲ್ಲಿರುವ ಭಾರತೀಯ ತಂಡವನ್ನು ಗುಜರಾತ್‌ನ ಕ್ರೀಡಾ ಸಚಿವ ಹರ್ಷ್‌ ಸಾಂಘವಿ ಮತ್ತು ಭಾರತೀಯ ಒಲಿಂಪಿಕ್‌ ಅಸೋಸಿಯೇಷನ್‌ (ಐಒಎ) ಅಧ್ಯಕ್ಷೆ ಪಿ ಟಿ ಉಷಾ ನೇತೃತ್ವ ವಹಿಸಿದ್ದು, ಈ ತಂಡ ಮೌಲ್ಯ ಮಾಪನ ಸಮಿತಿ ಮುಂದೆ ತಮ ನಿರ್ಧಾರ ತಿಳಿಸಿದೆ ಎಂದು ವರದಿಯಾಗಿದೆ.

2030 ರ ಆವೃತ್ತಿಯು ಐತಿಹಾಸಿಕ ಮಹತ್ವವನ್ನು ಹೊಂದಿದೆ, ಇದು ಕಾಮನ್‌ವೆಲ್ತ್‌‍ ಕ್ರೀಡಾ ಚಳವಳಿಯ 100 ವರ್ಷಗಳನ್ನು ಗುರುತಿಸುತ್ತದೆ ಮತ್ತು ಭಾರತದ ಬಿಡ್‌ನಲ್ಲಿ ಈ ಶತಮಾನೋತ್ಸವ ಆವೃತ್ತಿಗೆ ಅಹಮದಾಬಾದ್‌ ಅನ್ನು ಆತಿಥೇಯ ನಗರವಾಗಿ ಇರಿಸಲಾಗಿದೆ ಎಂದು ಗುಜರಾತ್‌ ಸರ್ಕಾರದ ಪ್ರಕಟಣೆ ತಿಳಿಸಿದೆ.

ಅಹಮದಾಬಾದ್‌ ಅಂತರರಾಷ್ಟ್ರೀಯ ಗುಣಮಟ್ಟದ ಸ್ಥಳಗಳು, ದೃಢವಾದ ಸಾರಿಗೆ ವ್ಯವಸ್ಥೆಗಳು ಮತ್ತು ಉತ್ತಮ ಗುಣಮಟ್ಟದ ವಸತಿ ಸೌಕರ್ಯಗಳನ್ನು ಕೇಂದ್ರೀಕರಿಸಿದ ಕಾಂಪ್ಯಾಕ್ಟ್‌ ಕ್ರೀಡಾ ಹೆಜ್ಜೆಗುರುತನ್ನು ನೀಡುತ್ತದೆ ಎಂದು ಅದು ಹೇಳಿದೆ.ಕ್ರೀಡಾಕೂಟಗಳ ಮರುಹೊಂದಿಸುವಿಕೆಯ ತತ್ವಗಳಿಗೆ ಅನುಗುಣವಾಗಿ, ಈ ಪ್ರಸ್ತಾವನೆಯು ಕೈಗೆಟುಕುವಿಕೆ, ಒಳಗೊಳ್ಳುವಿಕೆ, ನಮ್ಯತೆ ಮತ್ತು ಸುಸ್ಥಿರತೆಗೆ ಬಲವಾದ ಒತ್ತು ನೀಡುತ್ತದೆ. ಇದು ಪ್ಯಾರಾ-ಸ್ಪೋರ್ಟ್‌ನ ಏಕೀಕರಣ, ಮಾನವ ಹಕ್ಕುಗಳ ರಕ್ಷಣೆ, ಲಿಂಗ ಸಮಾನತೆಯ ಪ್ರಚಾರ ಮತ್ತು ಕ್ರೀಡಾಪಟುಗಳು, ಸಮುದಾಯಗಳು ಮತ್ತು ವಿಶಾಲ ಕಾಮನ್‌ವೆಲ್ತ್‌ಗೆ ಕ್ರೀಡಾಕೂಟವನ್ನು ಮೀರಿ ಪ್ರಯೋಜನಗಳನ್ನು ವಿಸ್ತರಿಸುವುದನ್ನು ಖಚಿತಪಡಿಸುವ ದೀರ್ಘಕಾಲೀನ ಪರಂಪರೆಯ ಚೌಕಟ್ಟನ್ನು ಅಳವಡಿಸಲು ಬದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶತಮಾನೋತ್ಸವ ಕಾಮನ್‌ವೆಲ್ತ್‌‍ ಕ್ರೀಡಾಕೂಟವನ್ನು ಅಹಮದಾಬಾದ್‌ನಲ್ಲಿ ಆಯೋಜಿಸುವುದು ಗುಜರಾತ್‌ಗೆ ಮಾತ್ರವಲ್ಲದೆ ಭಾರತಕ್ಕೆ ಹೆಮ್ಮೆಯ ಮೈಲಿಗಲ್ಲಾಗಲಿದೆ. ನಾವು ಈ ಕ್ರೀಡಾಕೂಟಗಳನ್ನು ವೇಗವರ್ಧಕವಾಗಿ ನೋಡುತ್ತೇವೆ – ನಮ್ಮ ಯುವಕರಿಗೆ ಸ್ಫೂರ್ತಿ ನೀಡಲು, ವಿಕಸಿತ್‌ ಭಾರತ್‌ 2047 ಕಡೆಗೆ ನಮ್ಮ ಪ್ರಯಾಣವನ್ನು ವೇಗಗೊಳಿಸಲು ಮತ್ತು ಮುಂದಿನ 100 ವರ್ಷಗಳ ಕಾಲ ಕಾಮನ್‌ವೆಲ್ತ್‌‍ ಚಳುವಳಿಯನ್ನು ಬಲಪಡಿಸಲು ಎಂದು ಸಚಿವ ಸಂಘವಿ ಹೇಳಿದರು.

ಭಾರತದ ಪ್ರಯತ್ನವು ಕೇವಲ ಸಾಮರ್ಥ್ಯದ ಬಗ್ಗೆ ಅಲ್ಲ, ಆದರೆ ಮೌಲ್ಯಗಳ ಬಗ್ಗೆ. ಅಹಮದಾಬಾದ್‌ 2026 ರ ಗ್ಲ್ಯಾಸ್ಗೋದಿಂದ ಲಾಠಿ ಎತ್ತಿಕೊಳ್ಳಲು ಮತ್ತು 2034 ರ ಕ್ರೀಡಾಕೂಟಕ್ಕೆ ಸ್ಪ್ರಿಂಗ್‌ಬೋರ್ಡ್‌ ಆಗಿ ಕಾರ್ಯನಿರ್ವಹಿಸಲು ಸಿದ್ಧವಾಗಿದೆ, ಶತಮಾನೋತ್ಸವ ಆವೃತ್ತಿಯು ಕಾಮನ್‌ವೆಲ್ತ್‌‍ ಕ್ರೀಡೆಯ ಭವಿಷ್ಯವನ್ನು ರೂಪಿಸುವಾಗ ಭೂತಕಾಲವನ್ನು ಗೌರವಿಸುತ್ತದೆ ಎಂದು ಖಚಿತಪಡಿಸುತ್ತದೆ ಎಂದು ಉಷಾ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಕೇಂದ್ರ ಮತ್ತು ಗುಜರಾತ್‌ ಸರ್ಕಾರ ಮತ್ತು ಭಾರತೀಯ ಕಾಮನ್‌ವೆಲ್ತ್‌‍ ಕ್ರೀಡಾಕೂಟದ ಬಲವಾದ ಮತ್ತು ಸಂಘಟಿತ ಬೆಂಬಲದೊಂದಿಗೆ, ಈ ಪ್ರಸ್ತಾವನೆಯು ಸಾಂದ್ರ, ಸುಸ್ಥಿರ, ಅಂತರ್ಗತ ಮತ್ತು ಜಾಗತಿಕವಾಗಿ ಪ್ರಭಾವಶಾಲಿ ಕ್ರೀಡಾಕೂಟಗಳನ್ನು ನೀಡುವ ಭಾರತದ ಮಹತ್ವಾಕಾಂಕ್ಷೆಯನ್ನು ಎತ್ತಿ ತೋರಿಸುತ್ತದೆ ಎಂದು ಅದು ಹೇಳಿದೆ.

ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ವಿಷಯ ಪ್ರಸ್ತಾಪಿಸಿದ ಟರ್ಕಿ ಅಧ್ಯಕ್ಷ ಎರ್ಡೊಗನ್‌

ವಿಶ್ವಸಂಸ್ಥೆ, ಸೆ. 24 (ಪಿಟಿಐ) ಟರ್ಕಿ ಅಧ್ಯಕ್ಷ ತಯ್ಯಿಪ್‌ ಎರ್ಡೊಗನ್‌ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಉಲ್ಲೇಖಿಸಿ, ಈ ವರ್ಷದ ಆರಂಭದಲ್ಲಿ ನಡೆದ ಸಂಘರ್ಷದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮದಿಂದ ತಮ್ಮ ರಾಷ್ಟ್ರವು ತೃಪ್ತಿಗೊಂಡಿದೆ ಎಂದು ಹೇಳಿದರು.

ಭಯೋತ್ಪಾದನೆ ನಿಗ್ರಹದ ಕುರಿತು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಹಕಾರವನ್ನು ನೋಡುವುದು ಮುಖ್ಯ ಎಂದು ಅವರು ಹೇಳಿದರು. ಕಾಶ್ಮೀರದ ನಮ್ಮ ಸಹೋದರ ಸಹೋದರಿಯರಿಗೆ ಉತ್ತಮವಾಗುವಂತೆ ವಿಶ್ವಸಂಸ್ಥೆಯ ನಿರ್ಣಯಗಳ ಆಧಾರದ ಮೇಲೆ ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸಬೇಕು, ಮಾತುಕತೆಯ ಮೂಲಕ ನಾವು ಆಶಿಸುತ್ತೇವೆ ಎಂದು ಅವರು ಹೇಳಿದರು.

ದಕ್ಷಿಣ ಏಷ್ಯಾದಲ್ಲಿ, ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವುದು ಅತ್ಯಂತ ಮುಖ್ಯವೆಂದು ನಾವು ಪರಿಗಣಿಸುತ್ತೇವೆ. ಕಳೆದ ಏಪ್ರಿಲ್‌ನಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವಿನ ಉದ್ವಿಗ್ನತೆಯ ನಂತರ ಸಾಧಿಸಲಾದ ಕದನ ವಿರಾಮದಿಂದ ನಾವು ಸಂತೋಷಪಟ್ಟಿದ್ದೇವೆ, ಈ ಉದ್ವಿಗ್ನತೆಯು ಸಂಘರ್ಷಕ್ಕೆ ಕಾರಣವಾಯಿತು ಎಂದು ಎರ್ಡೊಗನ್‌ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80 ನೇ ಅಧಿವೇಶನದಲ್ಲಿ ಸಾಮಾನ್ಯ ಚರ್ಚೆಯಲ್ಲಿ ತಮ್ಮ ಭಾಷಣದಲ್ಲಿ ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ, ಟರ್ಕಿಯ ನಾಯಕ ಉನ್ನತ ಮಟ್ಟದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ವಿಶ್ವ ನಾಯಕರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಕಾಶ್ಮೀರದ ವಿಷಯವನ್ನು ಉಲ್ಲೇಖಿಸಿದ್ದಾರೆ.26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ, ಭಾರತವು ಮೇ 7 ರಂದು ಪಾಕಿಸ್ತಾನ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಆಪರೇಷನ್‌ ಸಿಂಧೂರ್‌ ಅನ್ನು ಪ್ರಾರಂಭಿಸಿತು. ಈ ದಾಳಿಗಳು ನಾಲ್ಕು ದಿನಗಳ ತೀವ್ರ ಘರ್ಷಣೆಗಳಿಗೆ ಕಾರಣವಾಯಿತು, ಇದು ಮೇ 10 ರಂದು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ಬಗ್ಗೆ ಒಪ್ಪಂದದೊಂದಿಗೆ ಕೊನೆಗೊಂಡಿತು.

ಹಣಕಾಸು ಸಲಹೆ ಕುರಿತ ನಕಲಿ ವಿಡಿಯೋಗಳು ನನ್ನದಲ್ಲ : ರಫೇಲ್‌ ನಡಾಲ್‌

ಮ್ಯಾಡ್ರಿಡ್‌, ಸೆ.24- ನಾನು ಹಣಕಾಸು ಸಲಹೆ ನೀಡುತ್ತಿರುವಂತೆ ಹರಿದಾಡುತ್ತಿರುವ ಆನ್‌ಲೈನ್‌ ವಿಡಿಯೋಗಳು ನಕಲಿಯಾಗಿವೆ. ಇವು ಕೃತಕ ಬುದ್ಧಿಮತ್ತೆ (ಎಐ)ಯಿಂದ ಸೃಷ್ಟಿಗೊಂಡಂಥವೇ ಹೊರತು ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಟೆನ್ನಿಸ್‌‍ ದಿಗ್ಗಜ ರಫೇಲ್‌ ನಡಾಲ್‌ ಸ್ಪಷ್ಟಪಡಿಸಿದ್ದಾರೆ.

ನಾನು ಈ ರೀತಿಯ ಯಾವುದೇ ಆನ್‌ಲೈನ್‌ ಸಂದೇಶ ಕಳುಹಿಸಿಲ್ಲ ಎಂದು ನಿವೃತ್ತ ಟೆನ್ನಿಸ್‌‍ ದಂತಕಥೆ ನಡಾಲ್‌ ಹೇಳಿದ್ದಾರೆ.ನಾನು ಈ ಎಚ್ಚರಿಕೆಯ ಸಂದೇಶವನ್ನು ಹಂಚಿಕೊಳ್ಳಬೇಕಾಗಿದೆ. ಇದು ನನ್ನ ಸಾಮಾಜಿಕ ಜಾಲತಾಣಕ್ಕೆ ಅಸಹಜ. ಆದರೆ ಅತ್ಯವಶ್ಯಕವಾಗಿದೆ ಎಂದು ಅವರು ಲಿಂಕೆಡಿನ್‌ನಲ್ಲಿ ಬರೆದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಾನು ಮತ್ತು ನನ್ನ ತಂಡ ಕೆಲವು ಜಾಲತಾಣದ ವೇದಿಕೆಗಳಲ್ಲಿ ನಕಲಿ ವಿಡಿಯೋಗಳು ಪ್ರಸಾರವಾಗುತ್ತಿರುವುದನ್ನು ಪತ್ತೆ ಹಚ್ಚಿದ್ದೇವೆ. ಇವು ಎಐನ ಸೃಷ್ಟಿಯಾಗಿದೆ. ಈ ವಿಡಿಯೋಗಳಲ್ಲಿ ನಾನು ಹಣ ಹೂಡಿಕೆ ಮಾಡುವ ಪ್ರಸ್ತಾವನೆಗಳನ್ನು ಮತ್ತು ಸಲಹೆಗಳನ್ನು ನೀಡುತ್ತಿರುವುದಾಗಿ ತಪ್ಪಾಗಿ ತೋರಿಸಲಾಗಿದೆ. ಇವ್ಯಾವುವೂ ನನ್ನಿಂದ ಪ್ರಕಟಗೊಂಡಿಲ್ಲ ಎಂದು ನಡಾಲ್‌ ವಿವರಿಸಿದ್ದಾರೆ.

ಇವು ಹಾದಿ ತಪ್ಪಿಸುವ ಜಾಹಿರಾತುಗಳಾಗಿದ್ದು ಇದಕ್ಕೂ ನನಗೂ ಅರ್ಥಾರ್ಥಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ.ಆವಿಷ್ಕಾರವು ಜನತೆಗೆ ಸೇವೆ ಸಲ್ಲಿಸುವಾಗ ಯಾವಾಗಲೂ ಸಕಾರಾತಕವಾಗಿರುತ್ತದೆ. ಆದರೆ ತಂತ್ರಜ್ಞಾನದ ದುರ್ಬಳಕೆ ಬಗ್ಗೆ ನಾವು ಜಾಗ್ರತೆಯಿಂದಿರಬೇಕು.

ಕೃತಕ ಬುದ್ಧಿಮತ್ತೆಯು ಶಿಕ್ಷಣ, ವೈದ್ಯಕೀಯ, ಕ್ರೀಡೆಗಳು ಮತ್ತು ಸಂಪರ್ಕ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿ ತರುವ ಅಗಾಧ ಸಾಮರ್ಥ್ಯ ಹೊಂದಿದೆ. ಹೀಗಿದ್ದರೂ ಅದನ್ನು ತಪ್ಪು ವಿಚಾರಗಳಿಂದ ದುರ್ಬಳಕೆ ಸಹ ಮಾಡಬಹುದಾಗಿದೆ. ಈ ರೀತಿಯ ಸುಳ್ಳು ಪ್ರಚಾರಗಳು ಗೊಂದಲವನ್ನುಂಟು ಮಾಡಿ ಜನರನ್ನು ವಂಚಿಸುತ್ತವೆ ಎಂದು ನಡಾಲ್‌ ಎಚ್ಚರಿಸಿದ್ದಾರೆ.