Thursday, November 6, 2025
Home Blog Page 90

ಪತ್ನಿ ಕೊಲೆ ವಿಚಾರವನ್ನು ಫೇಸ್‌ಬುಕ್ ಲೈವ್‌ನಲ್ಲಿ ಬಹಿರಂಗಗೊಳಿಸಿದ ಪತಿ

ತಿರುವನಂತಪುರಂ, ಸೆ. 23: ಪತ್ನಿ ಸ್ನಾನ ಮಾಡುವಾಗ ಹಿಂದಿನಿಂದ ಬಂದ ಪತಿರಾಯ ಆಕೆಗೆ ಚೂರಿಯಲ್ಲಿ ಇರಿದು ಕೊಲೆ ಮಾಡಿ ನಂತರ ಫೇಸ್‌ಬುಕ್ ಲೈವ್‌ನಲ್ಲಿ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಪೊಲೀಸರಿಗೆ ಶರಣಾಗುವ ಮೊದಲು, ಫೇಸ್‌ಬುಕ್‌ನಲ್ಲಿ ಲೈವ್ ವಿಡಿಯೋ ಮಾಡಿ, ತಾನು ಕ್ರೂರವಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುವ ಘಟನೆ ವಳಕ್ಕುಡುವಿನ ಪ್ಲಾಚೇರಿಯಲ್ಲಿ ನಡೆದಿದೆ.

ಕೊಲೆಯಾದ ಮಹಿಳೆಯನ್ನು 39 ವರ್ಷದ ಶಾಲಿನಿ ಎಂದು ಗುರುತಿಸಲಾಗಿದೆ. ನಿನ್ನೆ ಬೆಳಗ್ಗೆ 6.30 ರ ಸುಮಾರಿಗೆ ಶಾಲಿನಿ ಸ್ನಾನ ಮಾಡುತ್ತಿದ್ದಾಗ, ಆಕೆಯ ಪತಿ ಹರಾತ್ತನೆ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಅವರ 19 ವರ್ಷದ ಮಗ ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ದಾನೆ.
ದೂರಿನ ಆಧಾರದ ಮೇಲೆ, ಆರೋಪಿ ಐಸಾಕ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 103(1) (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದಂಪತಿ ನಡುವೆ ಈ ಹಿಂದೆಯೂ ಜಗಳಗಳು ನಡೆದಿದ್ದವು. ಶಾಲಿನಿ ಸ್ನಾನ ಮಾಡಲು ಹೋದಾಗ, ಆರೋಪಿಯು ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಮಹಿಳೆಯ ಕುತ್ತಿಗೆ, ಎದೆ ಮತ್ತು ಬೆನ್ನಿಗೆ ಆಳವಾದ ಗಾಯಗಳಾಗಿವೆ ಎಂದು ಎಫ್‌ಐಆರ್‌ನಲ್ಲಿ ದಾಖಲಾಗಿದೆ.

ಹೆಂಡತಿಯನ್ನು ಕೊಂದ ಬಳಿಕ, ಐಸಾಕ್ ಫೇಸ್‌ಬುಕ್‌ನಲ್ಲಿ ಲೈವ್ ಬಂದು ತನ್ನ ಅಪರಾಧ ಒಪ್ಪಿಕೊಂಡಿದ್ದಾನೆ. ಈ ವೀಡಿಯೊ ಕಾಣಿಸಿಕೊಂಡ ತಕ್ಷಣ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ನಂತರ ಐಸಾಕ್ ಪೊಲೀಸ್ ಠಾಣೆಗೆ ಹೋಗಿ ತನ್ನ ಹೆಂಡತಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ.

ಪೊಲೀಸ್‌ ತಂಡವು ಶಾಲಿನಿ ಮನೆಯಲ್ಲಿ ಮೃತಪಟ್ಟಿರುವುದನ್ನು ಕಂಡುಕೊಂಡಿತ್ತು. ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ಪ್ರಕರಣದ ತನಿಖೆ ನಡೆಸುತ್ತಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತ ಮಹಿಳೆ ಮತ್ತು ಆರೋಪಿ ಇಬ್ಬರ ಮೊಬೈಲ್ ಫೋನ್ ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಸರಾ ಕುಸ್ತಿ ಪಂದ್ಯಾವಳಿ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರು,ಸೆ.23 ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2025ರ ಕುಸ್ತಿ ಪಂದ್ಯಾವಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಸ್ತಿಪಟುಗಳಿಗೆ ಬೆನ್ನು ತಟ್ಟುವ ಮೂಲಕ ಚಾಲನೆ ನೀಡಿದರು. ನಗರದ ಕರ್ನಾಟಕ ವಸ್ತು ಪ್ರದರ್ಶನದ ಪ್ರಾಧಿಕಾರ ಆವರಣ ಶ್ರೀ ದಿ.ದೇವರಾಜು ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ದಸರಾ ಕುಸ್ತಿ ಪಂದ್ಯಾವಳಿಯನ್ನು ಖುಷಿಯಿಂದ ವೀಕ್ಷಿಸಿ ಕುಸ್ತಿಪಟುಗಳಿಗೆ ಸಿಎಂ ಪ್ರೋತ್ಸಾಹಿಸಿದರು.

ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ.ವೆಂಕಟೇಶ್, ಸಂಸದ ಸುನೀಲ್ ಬೋಸ್, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ರವಿಶಂಕರ್ ಡಿ, ಶ್ರೀವತ್ಸ, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್‌ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಗ್ಯಾರೆಂಟಿ ಯೋಜನೆ ರಾಜ್ಯ ಉಪಾಧ್ಯಕ್ಷರಾದ ಡಾ.ಪುಷ್ಪಾವತಿ ಅಮರನಾಥ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಮತ್ತಿತರರು ಸಿಎಂ ಜೊತೆ ಪಂದ್ಯಾವಳಿ ವೀಕ್ಷಿಸಿದರು.

ಮೈಸೂರಿನ ಮಹದೇಪುರ ಪೈಲ್ವಾನ್ ವಿಕಾಸ್ ಹಾಗೂ ದಾವಣಗೆರೆ ಕ್ರೀಡಾ ನಿಲಯದ ಪೈಲ್ವಾನ್ ಕಿರಣ್ ನಡುವೆ ನಡೆದ 30 ನಿಮಿಷದ ಮೊದಲ ಕುಸ್ತಿಯು ಪೈಪೋಟಿಯಿಂದ ನಡೆಯಿತು. ಅಂತಿಮವಾಗಿ 22 ನಿಮಿಷದಲ್ಲಿ ಪೈಲ್ವಾನ್ ವಿಕಾಸ್ ಜಯಶೀಲರಾದರು.

ಮಹಿಳಾ ಕುಸ್ತಿಪಟುಗಳಾದ ಬೆಂಗಳೂರಿನ ಪುಷ್ಪ ಹಾಗೂ ಬೆಳಗಾವಿಯ ನಂದಿನಿ ನಡುವೆ ನಡೆದ ಕುಸ್ತಿಯಲ್ಲಿ 1 ನಿಮಿಷ 10 ಸೆಕೆಂಡ್‌ನಲ್ಲಿ ನಂದಿನಿ ಜಯಗಳಿಸಿದರು.ಅಥಣಿಯ ಪೈಲ್ವಾನ್ ಸುರೇಶ್ ಲಂಕೋಟಿ ಹಾಗೂ ದಾವಣಗೆರೆ ಕ್ರೀಡಾ ನಿಲಯದ ಪೈಲ್ವಾನ್ ಹನುಮಂಥ ವಿಠಲ ಬೇವಿನ ಮರ ನಡುವೆ ಕುಸ್ತಿ ರೋಚಕವಾಗಿತ್ತು.

ನೆರೆಮನೆಯ ಮಗುವಿಗೆ ವಿಷ ಹಾಕಿ ಕೊಲೆಗೆ ಯತ್ನಿಸಿದ ಯುವತಿ ಬಂಧನ

ರಾಂಚಿ,ಸೆ.23- ಯುವತಿಯೊಬ್ಬಳು ನೆರೆ ಮನೆಯ ಮಗುವಿಗೆ ವಿಷ ಬೆರೆಸಿದ ಆಹಾರ ನೀಡಿ ಕೊಲೆ ಮಾಡಲು ಯತ್ನಿಸಿರುವ ಘಟ ನಡೆದಿದೆ. ಇದೀಗ ಯುವತಿಯನ್ನು ಜೈಪುರದ ಧರ್ಮಶಾಲಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭೂಬನ್ ಗ್ರಾಮದ ಮಧುಸ್ಥಿತ ಮೊಹಾಂತಿ(21) ಕೊಲೆಗೆ ಯತ್ನಿಸಿರುವ ಯುವತಿ.
ಕಳೆದ ಸೆ.8ರಂದು ಮಧುಸ್ಮಿತ ಪಕ್ಕದ ಮನೆಯ ಎರಡು ವರ್ಷದ ಮಗುವನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ವಿಷ ಬೆರೆಸಿದ ಆಹಾರವನ್ನು ತಿನಿಸಿದ್ದಾಳೆ. ಆಹಾರ ಸೇವಿಸಿದ ನಂತರ ಮಗು ಅಸ್ವಸ್ಥಗೊಂಡಿದೆ.

ಮಂಕಾಗಿದ್ದ ಮಗನನ್ನು ತಂದೆತಾಯಿ ಮೊದಲಗೆ ಧರ್ಮಶಾಲಾದ ಕಮ್ಯುನಿಟಿ ಹೆಲ್ತ್ ಸೆಂಟರ್‌ನಲ್ಲಿ ಚಿಕಿತ್ಸೆ ಕೊಡಿಸಿ ನಂತರ ಕಟಕ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಪೋಸ್ಟ್ ಗ್ರಾಜುಯೇಟ್ ಇನ್ಸಿಟ್ಯೂಟ್ ಆಫ್ ಪೀಡಿಯಾಟ್ರಿಕ್ಸ್ (ಶಿಶು ಭವನ) ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಅಲ್ಲಿ ವೈದ್ಯರು ಪರೀಕ್ಷಿಸಿ ಮಗುವಿಗೆ ವಿಷಹಾರ ನೀಡಲಾಗಿದೆ ಮಾಡಿದ್ದಾರೆ. ಎಂದು ಖಚಿತಪಡಿಸಿದ್ದಾರೆ. ದೀರ್ಘ ಕಾಲದ ಶುಶ್ರುಸೆಯ ನಂತರ ಸೆ.20ರಂದು ಮಗುವನ್ನು ಡಿಸಾರ್ಚ್
ಬಳಿಕ ಅನುಮಾನಗೊಂಡ ಗಂಡು ಮಗುವಿನ ತಂದೆ ಧರ್ಮಶಾಲಾ ಠಾಣೆಗೆ ಹೋಗಿ ಮೊಹಾಂತಿ ವಿರುದ್ಧ ದೂರು ನೀಡಿದ್ದಾರೆ.

ದೂರಿನ ಮೇರೆಗೆ ಬಿಎನ್ಎಸ್ ಸೆಕ್ಷನ್ 109( ಕೊಲೆಯತ್ನ)ರಡಿ ಕೊಲೆ ಮಾಡಲು ಹಿಂದಿನ ಉದ್ದೇಶದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಧರ್ಮಶಾಲಾ ಪೊಲೀಸ್ ಠಾಣೆಯ ಐಐಸಿ ರಂಜನ್ ಮಜ್ಜಿ ತಿಳಿಸಿದ್ದಾರೆ. ಆರೋಪಿ ಮಧುಸ್ಥಿತ ಮೊಹಾಂತಿಯನ್ನು ಬಂಧಿಸಿ ಚಂಡಿಖೋಲ್‌ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗೆ ಬೇಲ್ ನಿರಾಕರಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.

ಮಾಜಿ ಸಚಿವ ಎಸ್.ಸುರೇಶ್‌ ಕುಮಾ‌ರ್ ಅವರಿಗೆ ಮಾತೃವಿಯೋಗ

ಬೆಂಗಳೂರು,ಸೆ.23-ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಚಿವ ಹಾಗೂ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಸುರೇಶ್‌ ಕುಮಾ‌ರ್
ಅವರ ತಾಯಿ ಸುಶೀಲಮ್ಮ ಇಂದು ನಿಧನರಾಗಿದ್ದಾರೆ.ಶಿಕ್ಷಕಿಯಾಗಿ ನಿವೃತ್ತಿಯಾಗಿದ್ದ ಸುಶೀಲಮ್ಮ ಅವರು, ಎಲ್ಲರ ಟೀಚರ್ ಎಂದೇ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದ್ದರು.

ಈ ಕುರಿತು ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಸುರೇಶ್‌ ಕುಮಾರ್, ನನ್ನನ್ನು ಹೊತ್ತು, ಹೆತ್ತು ಸಾಕಿ, ತಿದ್ದಿತೀಡಿ ಬೆಳೆಸಿದ ನನ್ನಮ್ಮ, ಎಲ್ಲರ ಸುಶೀಲಮ್ಮ ಟೀಚರ್ ಇನ್ನಿಲ್ಲ. ಇಂದು ಬೆಳಗಿನ ಜಾವ ನನ್ನನ್ನು ಬಿಟ್ಟು ಹೊರಟು ಬಿಟ್ಟರು ಎಂದು ಬರೆದುಕೊಂಡಿದ್ದಾರೆ. ಶಿಕ್ಷಕಿಯಾಗಿದ್ದ ಸುಶೀಲಮ್ಮ ಅವರು ನಿವೃತ್ತಿ ಬಳಿಕ ಬೆಂಗಳೂರಿನ ಲಕ್ಷ್ಮಿ ನಾರಾಯಣ ಕೋಆಪರೇಟಿವ್ ಬ್ಯಾಂಕ್‌ನ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಒಟ್ಟು 8 ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.

ಸಂತಾಪ: ಸುಶೀಲಮ್ಮನವರ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್ ಅಶೋಕ್, ಶಾಸಕರಾದ ಕೆ. ಗೋಪಾಲಯ್ಯ, ಡಾ.ಅಶ್ವತ್ಥನಾರಾಯಣ ಸೇರಿದಂತೆ ಅನೇಕರು ತಾಯಿಯನ್ನು ಕಳೆದುಕೊಂಡಿರುವ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಭಾರತವೂ ಅಮೆರಿಕಕ್ಕೆ ನಿರ್ಣಾಯಕ : ಮಾರ್ಕೊ ರೂಬಿಯೋ

ನ್ಯೂಯಾರ್ಕ್, ಸೆ. 23 (ಪಿಟಿಐ) ಭಾರತವು ಅಮೆರಿಕಕ್ಕೆ ನಿರ್ಣಾಯಕ ಪ್ರಾಮುಖ್ಯತೆಯ ಸಂಬಂಧವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ತಿಳಿಸಿದ್ದಾರೆ.ಇಬ್ಬರು ನಾಯಕರು ಭೇಟಿಯಾಗಿ ವ್ಯಾಪಾರ, ರಕ್ಷಣೆ ಮತ್ತು ಇಂಧನ ಸೇರಿದಂತೆ ದ್ವಿಪಕ್ಷೀಯ ವಿಷಯಗಳಲ್ಲಿ ನವದೆಹಲಿಯ ನಿರಂತರ ಸಂಪರ್ಕಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಉನ್ನತ ಮಟ್ಟದ ವಾರದ 80 ನೇ ಅಧಿವೇಶನದ ಸಂದರ್ಭದಲ್ಲಿ ನಿನ್ನೆ ಬೆಳಿಗ್ಗೆ ಅವರು ಜೈಶಂಕರ್ ಅವರನ್ನು ಇಲ್ಲಿ ಭೇಟಿಯಾದರು. ಭಾರತವು ಅಮೆರಿಕಕ್ಕೆ ನಿರ್ಣಾಯಕ ಪ್ರಾಮುಖ್ಯತೆಯ ನಂಬಂಧವಾಗಿದೆ ಎಂದು ರುಬಿಯೊ ಪುನರುಚ್ಚರಿಸಿದರು ಮತ್ತು ವ್ಯಾಪಾರ, ರಕ್ಷಣೆ, ಇಂಧನ, ಔಷಧಗಳು, ನಿರ್ಣಾಯಕ ಖನಿಜಗಳು ಮತ್ತು ದ್ವಿಪಕ್ಷೀಯ ಸಂಬಂಧಕ್ಕೆ ಸಂಬಂಧಿಸಿದ ಇತರ ವಸ್ತುಗಳು ಸೇರಿದಂತೆ ಹಲವಾರು ವಿಷಯಗಳಲ್ಲಿ ಭಾರತ ಸರ್ಕಾರದ ನಿರಂತರ ನಿಶ್ಚಿತಾರ್ಥಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ವಿದೇಶಾಂಗ ಇಲಾಖೆ ಒದಗಿಸಿದ ಸಭೆಯ ಓದುಗ ಹೇಳಿದರು.

ಕ್ವಾಡ್ ಮೂಲಕವೂ ಸೇರಿದಂತೆ ಮುಕ್ತ ಮತ್ತು ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶವನ್ನು ಉತ್ತೇಜಿಸಲು ಅಮೆರಿಕ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ ಎಂದು ರುಬಿಯೊ ಮತ್ತು ಜೈಶಂಕರ್ ಒಪ್ಪಿಕೊಂಡರು ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ಎಕ್ಸ್‌ನ ಪೋಸ್ಟ್‌ನಲ್ಲಿ, ಜೈಶಂಕರ್ ನ್ಯೂಯಾರ್ಕ್‌ನಲ್ಲಿ ರುಬಿಯೊ ಅವರನ್ನು ಭೇಟಿಯಾಗುವುದು ಒಳ್ಳೆಯದು ಎಂದು ಹೇಳಿದರು.

ನಮ್ಮ ಸಂಭಾಷಣೆಯು ಪ್ರಸ್ತುತ ಕಾಳಜಿಯ ಹಲವಾರು ದ್ವಿಪಕ್ಷೀಯ ಮತ್ತು ಅಂತರರಾಷ್ಟ್ರೀಯ ಸಮಸ್ಯೆಗಳನ್ನು ಒಳಗೊಂಡಿದೆ. ಆದ್ಯತೆಯ ಕ್ಷೇತ್ರಗಳಲ್ಲಿ ಪ್ರಗತಿಗೆ ನಿರಂತರ ನಿಶ್ಚಿತಾರ್ಥದ ಪ್ರಾಮುಖ್ಯತೆಯ ಬಗ್ಗೆ ಒಪ್ಪಿಕೊಂಡರು. ನಾವು ಸಂಪರ್ಕದಲ್ಲಿರುತ್ತೇವೆ ಎಂದು ಅವರು ಹೇಳಿದರು. ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಗೆ ಸಮೃದ್ಧಿಯನ್ನು ಸೃಷ್ಟಿಸಲು ವ್ಯಾಪಾರ.

ಇಂಧನ, ಔಷಧಗಳು ಮತ್ತು ನಿರ್ಣಾಯಕ ಖನಿಜಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ನಮ್ಮ ದ್ವಿಪಕ್ಷೀಯ ಸಂಬಂಧದ ಪ್ರಮುಖ ಕ್ಷೇತ್ರಗಳ ಬಗ್ಗೆ ಜೈಶಂಕರ್ ಅವರೊಂದಿಗೆ ಚರ್ಚಿಸಿರುವುದಾಗಿ ರೂಬಿಯೊ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.ಸುಮಾರು ಒಂದು ಗಂಟೆ ಕಾಲ ನಡೆದ ಈ ಸಭೆಯು, ವ್ಯಾಪಾರ, ಸುಂಕಗಳು ಮತ್ತು ನವದೆಹಲಿಯ ರಷ್ಯಾದ ಇಂಧನ ಖರೀದಿಗಳ ಕುರಿತು ಕಳೆದ ಕೆಲವು ತಿಂಗಳುಗಳಿಂದ ಉಭಯ ದೇಶಗಳ ನಡುವಿನ ಉದ್ವಿಗ್ನತೆಯ ನಡುವೆ ರೂಬಿಯೊ ಮತ್ತು ಜೈಶಂಕರ್ ನಡುವಿನ ಮೊದಲ ವೈಯಕ್ತಿಕ ಮಾತುಕತೆಯಾಗಿತ್ತು.

ಟ್ರಂಪ್ ಆಡಳಿತವು ರಷ್ಯಾದ ತೈಲ ಖರೀದಿಗೆ ದಂಡವಾಗಿ ನವದೆಹಲಿಯ ಮೇಲೆ ಹೆಚ್ಚುವರಿಯಾಗಿ 25 ಪ್ರತಿಶತ ಸುಂಕವನ್ನು ವಿಧಿಸಿತು. ಇದು ಅಮೆರಿಕ ಭಾರತದ ಮೇಲೆ ವಿಧಿಸಿದ ಒಟ್ಟು ಸುಂಕವನ್ನು ಶೇಕಡಾ 50 ಕ್ಕೆ ತಂದಿತು. ಇದು ವಿಶ್ವದಲ್ಲೇ ಅತಿ ಹೆಚ್ಚು.ಸಭೆಗೆ ಕೆಲವೇ ದಿನಗಳ ಮೊದಲು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ 1 ವೀಸಾಗಳ ಮೇಲೆ 100,000 ಶುಲ್ಕವನ್ನು ವಿಧಿಸುವ ಘೋಷಣೆಗೆ ಸಹಿ ಹಾಕಿದರು.

ಈ ಘೋಷಣೆಯು 1 ಕೌಶಲ್ಯಪೂರ್ಣ-ಕೆಲಸಗಾರ ಕಾರ್ಯಕ್ರಮದ ಅತಿದೊಡ್ಡ ಫಲಾನುಭವಿಗಳಾದ ಐಟಿ ಮತ್ತು ವೈದ್ಯಕೀಯ ಕ್ಷೇತ್ರಗಳವರು ಸೇರಿದಂತೆ ಭಾರತೀಯ ವೃತ್ತಿಪರರಲ್ಲಿ ವ್ಯಾಪಕ ಕಳವಳ ಮತ್ತು ಭೀತಿಯನ್ನು ಉಂಟುಮಾಡಿತು.ರೂಬಿಯೊ ಮತ್ತು ಜೈಶಂಕರ್ ಕೊನೆಯದಾಗಿ ಜುಲೈನಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ಕ್ವಾಡ್ ವಿದೇಶಾಂಗ ಮಂತ್ರಿಗಳ ಸಭೆಯ ಸಂದರ್ಭದಲ್ಲಿ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಲಾಯಿತು.

ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದದ ಆರಂಭಿಕ ತೀರ್ಮಾನವನ್ನು ಸಾಧಿಸುವ ಬಗ್ಗೆ ಚರ್ಚೆಗಳನ್ನು ನಡೆಸಿದ ದಿನವೇ ಯುಎನ್‌ಜಿಎ ಉನ್ನತ ಮಟ್ಟದ ವಾರದ ಅಂಚಿನಲ್ಲಿ ದ್ವಿಪಕ್ಷೀಯ ಸಭೆ ನಡೆಯಿತು.ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ನೇತೃತ್ವದ ನಿಯೋಗವು ಸೆಪ್ಟೆಂಬರ್ 22 ರಂದು ಅಮೆರಿಕದ ಕಡೆಯಿಂದ ಸಭೆ ನಡೆಸಲು ನ್ಯೂಯಾರ್ಕ್‌ನಲ್ಲಿದೆ. ಪರಸ್ಪರ ಪ್ರಯೋಜನಕಾರಿ ವ್ಯಾಪಾರ ಒಪ್ಪಂದದ ಆರಂಭಿಕ ತೀರ್ಮಾನವನ್ನು ಸಾಧಿಸುವ ಉದ್ದೇಶದಿಂದ ನಿಯೋಗವು ಚರ್ಚೆಗಳನ್ನು ಮುಂದುವರಿಸಲು ಯೋಜಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಕಾರು ಮತ್ತು ಕ್ಯಾಂಟರ್ ನಡುವೆ ಭೀಕರ ಅಪಘಾತ : ಮಗು, ಮಹಿಳೆ ಸೇರಿ ನಾಲ್ವರ ಸಜೀವ ದಹನ

ಅಲೆಗಢ ಸೆ. 23 (ಪಿಟಿಐ) ಕಾರು ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎರಡು ವಾಹನಗಳಿಗೆ ಬೆಂಕಿ ಹೊತ್ತುಕೊಂಡ ಪರಿಣಾಮ ಮಹಿಳೆ, ಮಗು ಸೇರಿದಂತೆ ನಾಲ್ವರು ಸುಟ್ಟು ಕರಕಲಾಗಿರುವ ಘಟನೆ ಅಲಿಘಡದಲ್ಲಿ ನಡೆದಿದೆ. ಇಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ-34 ರಲ್ಲಿ ಕಾರು ಮತ್ತು ಕ್ಯಾಂಟರ್ ಡಿಕ್ಕಿ ಹೊಡೆದು ಮಹಿಳೆ ಮತ್ತು ಮಗು ಸೇರಿದಂತೆ ನಾಲ್ವರು ಜೀವಂತ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋಪಿ ಸೇತುವೆ ಬಳಿ ಅಲಿಗಢ ಕಡೆಗೆ ಹೋಗುತ್ತಿದ್ದ ಕಾರು ಟೈರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ.ವಾಹನವು ರಸ್ತೆ ವಿಭಜಕವನ್ನು ಭೇದಿಸಿ ಮುಂದೆ ಬರುತ್ತಿದ್ದ ಕ್ಯಾಂಟರ್ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಅಮೃಕ್ ಜೈನ್ ವರದಿಗಾರರಿಗೆ ತಿಳಿಸಿದ್ದಾರೆ.

ಘರ್ಷಣೆಯ ನಂತರ ಎರಡೂ ವಾಹನಗಳು ಬೆಂಕಿಗೆ ಆಹುತಿಯಾಗಿ ನಾಲ್ವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಅವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಜೈನ್ ಹೇಳಿದರು. ವಾಹನದಲ್ಲಿ ನಿಲುಕಿದ್ದ ಒಬ್ಬ ವ್ಯಕ್ತಿಯನ್ನು ಬಾರಿಹೋಕರ ಸಹಾಯದಿಂದ ಹೊರತೆಗೆದು ಪೊಲೀಸರು ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರು. ಅವರ ಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದರು. ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಣಕ್ಕೆ ತಂದರು ಮತ್ತು ಬಲಿಪಶುಗಳನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-09-2025)

ನಿತ್ಯ ನೀತಿ : ಮಾನವನು ನಿಜವಾದ ಜ್ಞಾನದಿಂದ ವಂಚಿತನಾಗಿರುವುದು ಸಹಜ. ಏಕೆಂದರೆ, ಅವನನ್ನು ಅಜ್ಞಾನವು ಸದಾ ಕಾಲ ಸುತ್ತುವರಿದಿರುತ್ತದೆ.

ಪಂಚಾಂಗ : ಬುಧವಾರ, 24-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಶುಕ್ಲ / ತಿಥಿ: ತೃತೀಯಾ / ನಕ್ಷತ್ರ: ಚಿತ್ರಾ / ಯೋಗ: ಐಂದ್ರ / ಕರಣ: ತೈತಿಲ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.15
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ: ನೀವು ಮಾಡುವ ತಪ್ಪಿನಿಂದಾಗಿ ಜೀವನ ಪರ್ಯಂತ ನೆನಪಿಟ್ಟುಕೊಳ್ಳುವ ಪಾಠ ಕಲಿಯಬೇಕಾಗುತ್ತದೆ.
ವೃಷಭ: ಆರ್ಥಿಕವಾಗಿ ಹೆಚ್ಚು ಲಾಭ ಗಳಿಸಲು ಶ್ರಮ ಪಡಬೇಕಾದೀತು. ನಿಮ್ಮ ಲೆಕ್ಕಾಚಾರ ತಪ್ಪಾಗಬಹುದು.
ಮಿಥುನ:ಹಿತವಾದ ಮಾತುಗಳಿಂದ ಸಂಗಾತಿ ಅಥವಾ ಪ್ರೀತಿಪಾತ್ರರನ್ನು ಮೆಚ್ಚಿಸಲು ಪ್ರಯತ್ನಿಸುವಿರಿ.

ಕಟಕ: ಮಕ್ಕಳ ವಿದ್ಯಾಭ್ಯಾಸ ಅಥವಾ ವಿವಾಹದ ವಿಚಾರವಾಗಿ ಅನವಶ್ಯಕ ವಾದ ಮಾಡದಿರಿ.
ಸಿಂಹ: ನಿಮ್ಮ ಕೆಲಸಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಇಂದು ಸಾಧ್ಯವಾಗುತ್ತದೆ.
ಕನ್ಯಾ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳಲು ಹೆಚ್ಚಿನ ಪರಿಶ್ರಮ ವಹಿಸಬೇಕಾಗುತ್ತದೆ.

ತುಲಾ: ವ್ಯಾಪಾರ ಕ್ಷೇತ್ರದಲ್ಲಿ ಹೊಸ ಮಿತ್ರರು ಸಿಗುವರು.
ವೃಶ್ಚಿಕ: ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುವಿರಿ.
ಧನುಸ್ಸು: ಉದ್ಯಮಿಗಳು ತಮ್ಮ ಸಹೋದ್ಯೋಗಿ ಗಳೊಂದಿಗೆ ಭವಿಷ್ಯದ ಯೋಜನೆಗಳ ಬಗ್ಗೆ ಚಿಂತಿಸಿ.

ಮಕರ: ಸಹೋದ್ಯೋಗಿಗಳು ಗೌರವಾನ್ವಿತವಾಗಿ ವರ್ತಿಸುವುದರಿಮದ ಕೆಲಸ ಸರಾಗವಾಗಿ ಸಾಗಲಿದೆ.
ಕುಂಭ: ಅವಸರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ.
ಮೀನ: ಒಡಹುಟ್ಟಿದವ ರೊಂದಿಗಿನ ಸಂಬಂಧ ಸುಧಾ ರಿಸುತ್ತದೆ. ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-09-2025)

ನಿತ್ಯ ನೀತಿ : ಪ್ರಾಜ್ಞನಾದವನು ಸುಖ ಬಂದಾಗ ಬೀಗುವುದಿಲ್ಲ. ದುಃಖ ಬಂದಾಗ ಕುಗ್ಗು ವುದೂ ಇಲ್ಲ. ಎರಡನ್ನೂ ಸಮನಾಗಿ ಬರಮಾಡಿ ಕೊಳ್ಳುತ್ತಾನೆ. ಇದರಿಂದ ಆತ್ಮಶಕ್ತಿ ಜಾಗೃತವಾಗಿ ಸದಾ ಆನಂದ ಸ್ವರೂಪನಾಗಿಯೇ ಇರುತ್ತಾನೆ.

ಪಂಚಾಂಗ : ಮಂಗಳವಾರ, 23-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ /ಮಾಸ: ಆಶ್ವಯುಜ /ಪಕ್ಷ:ಶುಕ್ಲ / ತಿಥಿ: ದ್ವಿತೀಯ / ನಕ್ಷತ್ರ: ಹಸ್ತ /ಯೋಗ: ಬ್ರಹ್ಮಾ /ಕರಣ: ಬಾಲವ

ಸೂರ್ಯೋದಯ ; ಬೆ.06.09
ಸೂರ್ಯಾಸ್ತ : 06.15
ರಾಹುಕಾಲ : 3.00-4.30
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30

ರಾಶಿ ಭವಿಷ್ಯ
ಮೇಷ
: ಚರ ಮತ್ತು ಸ್ಥಿರ ಆಸ್ತಿಯಲ್ಲಿ ಹೆಚ್ಚಳ ಕಂಡು ಬರಲಿದೆ. ಆರೋಗ್ಯದ ಬಗ್ಗೆ ಗಮನ ಹರಿಸಿ.
ವೃಷಭ: ಮಾನಸಿಕ ಒತ್ತಡ ತೊಡೆದುಹಾಕಲು ಪ್ರಯತ್ನಿಸಿ. ಓದಿನ ಬಗ್ಗೆ ಕಾಳಜಿ ಇರಲಿ.
ಮಿಥುನ: ತಾಯಿ ಮತ್ತು ಹಿರಿಯರ ಪಾದಗಳನ್ನು ಸ್ಪರ್ಶಿಸಿ ಆಶಿರ್ವಾದ ಪಡೆಯಿರಿ.
ಕಟಕ: ವೈದ್ಯವೃತ್ತಿಯಲ್ಲಿರುವವರು ಅಧಿ ಕ ಶ್ರಮ ಪಡುವುದರಿಂದ ಆಯಾಸ ಉಂಟಾಗಲಿದೆ.
ಸಿಂಹ: ಎಲ್ಲ ವ್ಯವಹಾರಗಳು ನಿರೀಕ್ಷೆಯಂತೆ ನಡೆದು ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಕನ್ಯಾ: ವ್ಯವಹಾರ ಕ್ಷೇತ್ರದಲ್ಲಿ ಪೈಪೋಟಿ ಉಂಟಾಗಲಿದೆ.
ತುಲಾ: ಉದ್ಯೋಗ ಬದಲಾ ಯಿಸಲು ಯೋಚಿಸುವಿರಿ.
ವೃಶ್ಚಿಕ: ಲಾಭ ಗಳಿಸಲು ಮತ್ತು ಆರ್ಥಿಕ ಸ್ಥಿತಿ ಬಲಪಡಿಸಲು ಅನೇಕ ಅವಕಾಶಗಳು ಸಿಗಲಿವೆ.
ಧನುಸ್ಸು: ಯುವಕರು ಶಾಶ್ವತ ಕೆಲಸ ಹುಡುಕುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ.
ಮಕರ: ಸಮಾಜದಲ್ಲಿ ವಿಶೇಷವಾದ ಗೌರವ ಪ್ರಾಪ್ತಿಯಾಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ.
ಕುಂಭ: ವಿನಾಕಾರಣ ವಿವಾದಗಳಲ್ಲಿ ಸಿಲುಕುವ ಸಾಧ್ಯತೆಗಳಿವೆ. ಹಳೆ ಸ್ನೇಹಿತರ ಭೇಟಿ ಸಂತಸ ತರಲಿದೆ.
ಮೀನ: ಸ್ವಯಂ ಉದ್ಯೋಗಿಗಳಿಗೆ ಶುಭಕರವಾದ ದಿನ. ಆಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.

ಸೈಬರ್‌ ವಂಚನೆ : ಕ್ಷಿಪ್ರ ಕಾರ್ಯಾಚರಣೆ ನಡೆಸಿ 14 ಲಕ್ಷ ರೂ. ವಾಪಸ್‌‍

ಬೆಂಗಳೂರು,ಸೆ.22- ಡಿಜಿಟಲ್‌ ಅರೆಸ್ಟ್‌ ಹೆಸರಲ್ಲಿ ಸೈಬರ್‌ ವಂಚನೆಗೊಳಗಾಗಿ ಹಣ ಕಳೆದುಕೊಂಡಿದ್ದ ಮಹಿಳೆಗೆ 14 ಲಕ್ಷ ರೂ. ಹಣವನ್ನು ಕೇವಲ ಒಂದು ವಾರದೊಳಗೆ ವಾಪಸ್‌‍ ಕೊಡಿಸುವಲ್ಲಿ ಪಶ್ಚಿಮ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಸವೇಶ್ವರ ನಗರದ ಪ್ರೀತಿ (44) ಎಂಬುವವರಿಗೆ ಸೈಬರ್‌ ವಂಚಕರು ವಾಟ್‌್ಸಆಪ್‌ ಕರೆಮಾಡಿ ತಾವು ಮುಂಬೈ ಸೈಬರ್‌ ಕ್ರೈಂ ಎಂದು ಪರಿಚಯಿಸಿಕೊಂಡು ನಿಮ ಬ್ಯಾಂಕ್‌ ಖಾತೆಯಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ ಎಂದು ಹೆದರಿಸಿದ್ದಾರೆ.

ನಿಮ ಹಣವನ್ನು ಆರ್‌ಬಿಐಗೆ ವೆರಿಫಿಕೇಷನ್‌ಗೆ ಕಳುಹಿಸಿ ಪುನಃ 45 ನಿಮಿಷದಲ್ಲಿ ನಿಮ ಖಾತೆಗೆ ಹಣ ವರ್ಗಾವಣೆ ಮಾಡುತ್ತೇವೆ, ಒಂದು ವೇಳೆ ನಾವು ಹೇಳಿದ ಖಾತೆಗೆ ಹಣ ವರ್ಗಾವಣೆ ಮಾಡದಿದ್ದಲ್ಲಿ ನಿಮನ್ನು ಬಂಧಿಸಲಾಗುವುದೆಂದು ಬೆದರಿಸಿದ್ದಾರೆ. ತದ ನಂತರ ಎಚ್‌ಡಿಎಫ್‌ಸಿ ಬ್ಯಾಂಕ್‌ ಖಾತೆಯಿಂದ 14 ಲಕ್ಷ ರೂ. ಹಣವನ್ನು ಯೆಸ್‌‍ ಬ್ಯಾಂಕ್‌ ಖಾತೆಗೆ ಕರೆ ಮಾಡಿದ ವ್ಯಕ್ತಿ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಕೆಲ ಗಂಟೆಗಳಾದರೂ ತಮ ಖಾತೆಗೆ ವಾಪಸ್‌‍ ಹಣ ವರ್ಗಾವಣೆಯಾಗದಿದ್ದಾಗ ಮೋಸ ಹೋಗಿರುವುದನ್ನು ಅರಿತ ಪ್ರೀತಿಯವರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಸಿಇಎನ್‌ ಠಾಣೆ ಪೊಲೀಸರು, ಕೂಡಲೇ ಪ್ರೀತಿಯವರಿಂದಲೇ ರಾಷ್ಟ್ರೀಯ ಸೈಬರ್‌ ಸಹಾಯವಾಣಿ ನಂಬರ್‌1930ಗೆ ಕರೆ ಮಾಡಿಸಿ ದೂರು ದಾಖಲಿಸಿ, ಹಣ ವರ್ಗಾವಣೆಯಾದ ಆರೋಪಿತನ ಬ್ಯಾಂಕ್‌ ಖಾತೆಯಲ್ಲಿ ಹಣ ಫ್ರೀಜ್‌ ಮಾಡಿಸಲಾಗಿದೆ. ತನಿಖೆ ಮುಂದುವರೆಸಿದ ಪೊಲೀಸರು ಆರೋಪಿಯ ಬ್ಯಾಂಕ್‌ ಖಾತೆಯಲ್ಲಿ ಫ್ರೀಜ್‌ ಆಗಿದ್ದ ಹಣವನ್ನು ವಾಪಸ್‌‍ ದೂರುದಾರರಾದ ಪ್ರೀತಿಯವರ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಸುವ ಸಂಬಂಧ ಯೆಸ್‌‍ ಬ್ಯಾಂಕ್‌ನ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ 47 ನೇ ಎಸಿಜೆಎಂ ನ್ಯಾಯಾಲಯದಿಂದ ಆದೇಶವನ್ನು ಪಡೆದಿದ್ದಾರೆ.
ಅದರಂತೆ ಕೇವಲ ಒಂದು ವಾರದೊಳಗೆ ತ್ವರಿತಗತಿಯಲ್ಲಿ ಸಂಪೂರ್ಣ 14 ಲಕ್ಷ ರೂ. ಹಣವನ್ನು ದೂರುದಾರರಾದ ಪ್ರೀತಿ ಅವರಿಗೆ ವಾಪಸ್‌‍ ಕೊಡಿಸುವಲ್ಲಿ ಪಶ್ಚಿಮ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಉಪ ಪೊಲೀಸ್‌‍ ಆಯುಕ್ತ ಗಿರೀಶ್‌ ಅವರ ಮಾರ್ಗದರ್ಶನದಲ್ಲಿ , ಸಹಾಯಕ ಪೊಲೀಸ್‌‍ ಆಯುಕ್ತರಾದ ಉಮಾಮಣಿ ಅವರ ನೇತೃತ್ವದ ತನಿಖಾ ತಂಡವು ಯಶಸ್ವಿಯಾಗಿದೆ.

ಸಾರ್ವಜನಿಕರಿಗೆ ಸೂಚನೆ: ಸೈಬರ್‌ ವಂಚನೆಗೆ ಒಳಗಾಗಿ ಹಣವನ್ನು ಕಳೆದುಕೊಂಡವರು ಗಾಬರಿಗೊಳ್ಳದೆ ಸಮಯವನ್ನು ವ್ಯರ್ಥ ಮಾಡದೇ ಕೂಡಲೇ ರಾಷ್ಟ್ರೀಯ ಸೈಬರ್‌ ಸಹಾಯವಾಣಿ (1930) ಗೆ ದೂರು ದಾಖಲಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಕೂಡಲೇ ಸಮೀಪದ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಲ್ಲಿ ತ್ವರಿತವಾಗಿ ಕ್ರಮಕೈಗೊಂಡು ತಮಗಾಗುವ ನಷ್ಟವನ್ನು ತಪ್ಪಿಸಬಹುದಾಗಿದೆ ಎಂದು ಸೈಬರ್‌ ಕ್ರೈಂ ಪೊಲೀಸರು ಸಲಹೆ ಮಾಡಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ವೈಭವ

ಮೈಸೂರು,ಸೆ.22- ವಿಶ್ವವಿಖ್ಯಾತ ಮೈಸೂರು ದಸರಾಗೆ ಬೂಕರ್‌ ಪ್ರಶಸ್ತಿ ಪುರಸ್ಕೃತೆ, ಸಾಹಿತಿ ಬಾನು ಮುಷ್ತಾಕ್‌ ಅವರು ಅಧಿದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಂಪ್ರದಾಯಬದ್ಧವಾಗಿ ವಿದ್ಯುಕ್ತ ಚಾಲನೆ ನೀಡಿದರು. ಇಂದು ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ. ಮಹದೇವಪ್ಪ ಸೇರಿದಂತೆ ಮತ್ತಿತರ ಗಣ್ಯರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಾಲಯದ ಆವರಣದಲ್ಲಿರುವ ವಿಘ್ನ ನಿವಾರಕ ಗಣೇಶನಿಗೆ ನಮಿಸಿ ನಂತರ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.

ಇದಕ್ಕೂ ಮುನ್ನ ತಾಯಿ ಚಾಮುಂಡೇಶ್ವರಿಗೆ ಇಂದು ಬೆಳಿಗ್ಗಿನಿಂದಲೇ ದೇವೀ ಕೆರೆಯಿಂದ ಜಲವನ್ನು ತಂದು ಅಭಿಷೇಕವನ್ನು ಮಾಡಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನೆರವೇರಿಸಿದರು. ದೇವಾಲಯವನ್ನು ವಿವಿಧ ಹೂ ಹಾಗೂ ಕಬ್ಬಿನ ಜಲ್ಲೆಯಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಿಗೆ ಇಂದು ಬ್ರಾಹಿ ಅಲಂಕಾರ ಮಾಡಲಾಗಿದ್ದು, ಪ್ರಧಾನ ಅರ್ಚಕರಾದ ಶಶಿಶೇಖರ ದೀಕ್ಷಿತ್‌ರವರು ಸಂಕಲ್ಪವನ್ನು ಮಾಡಿ ಮಹಾಮಂಗಳಾರತಿ ನೆರವೇರಿಸಿದರು.

ಮಂಗಳಾರತಿ ಸ್ವೀಕರಿಸಿದ ವೇಳೆ ಬಾನು ಮುಷ್ತಾಕ್‌ರವರು ಭಾವುಕರಾದರು. ನಂತರ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಷ್ತಾಕ್‌ರವರು ಅರ್ಚಕರಿಂದ ಹೂವಿನ ಹಾರವನ್ನು ಸ್ವೀಕರಿಸಿದರು. ದೇವಿ ಪೂಜೆ ಹಾಗೂ ದಸರಾ ಉದ್ಘಾಟನೆಗೆ ಅರಿಶಿನ ಬಣ್ಣದ ಸೀರೆ ಹಾಗೂ ಹಸಿರು ಬಣ್ಣದ ರವಿಕೆ ತೊಟ್ಟು, ಹೂ ಮುಡಿದಿದ್ದು ವಿಶೇಷವಾಗಿತ್ತು. ನಂತರ ದೇವಾಲಯದ ಆವರಣದಲ್ಲಿ ನಿರ್ಮಾಣ ಮಾಡಲಾಗಿದ್ದ ಬೃಹತ್‌ ವೇದಿಕೆಯತ್ತ ಆಗಮಿಸಿದ ಬಾನು ಮುಷ್ತಾಕ್‌ರವರಿಗೆ ಮೈಸೂರು ಪೇಟ ಹಾಗೂ ಶಾಲು ಹೊದಿಸಿ ಹಾಗೂ ಮರದ ಅಂಬಾರಿಯ ಸರಣಿಕೆಯನ್ನು ನೀಡಿ ಸನಾನಿಸಲಾಯಿತು.

ಬೆಳಿಗ್ಗೆ 10.10 ರಿಂದ 10.40ರ ವೃಶ್ಚಿಕ ಲಗ್ನದಲ್ಲಿ ಬೆಳ್ಳಿರಥದಲ್ಲಿ ಅಲಂಕೃತಗೊಂಡಿದ್ದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಾಹಿತಿ ಬಾನು ಮುಷ್ತಾಕ್‌ ಅವರು ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ವಿದ್ಯುಕ್ತ ಚಾಲನೆ ನೀಡಿದರು.