Thursday, November 6, 2025
Home Blog Page 93

ಮಹಾಲಯ ಅಮಾವಾಸ್ಯೆ : ಶುಭಾಶಯ ಕೋರಿದ ಪ್ರಧಾನಿ ಮೋದಿ

ನವದೆಹಲಿ,ಸೆ.21- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಾಲಯ ಅಮಾವಾಸ್ಯೆಯಂದು ಜನರಿಗೆ ಶುಭಾಶಯ ಕೋರಿದ್ದು, ದುರ್ಗಾ ಪೂಜೆಯ ಪವಿತ್ರ ದಿನಗಳು ಹತ್ತಿರವಾಗುತ್ತಿದ್ದಂತೆ ಪ್ರತಿಯೊಬ್ಬರ ಜೀವನವು ಬೆಳಕು ಮತ್ತು ಉದ್ದೇಶದಿಂದ ತುಂಬಲಿ ಎಂದು ಹಾರೈಸಿದ್ದಾರೆ.

ದುರ್ಗಾ ದೇವಿಯು ಕೈಲಾಸ ಪರ್ವತದಲ್ಲಿರುವ ತನ್ನ ವಾಸಸ್ಥಾನದಿಂದ ಭೂಮಿಗೆ ಇಳಿಯುವುದನ್ನು ಈ ದಿನದಂದು ಪ್ರಾರಂಭಿಸುತ್ತಾಳೆ ಎಂದು ಭಕ್ತರು ನಂಬುತ್ತಾರೆ. ನಿಮ್ಮೆಲ್ಲರಿಗೂ ಶುಭೋ ಮಹಾಲಯದ ಶುಭಾಶಯಗಳು. ದುರ್ಗಾ ಪೂಜೆಯ ಪವಿತ್ರ ದಿನಗಳು ಹತ್ತಿರವಾಗುತ್ತಿದ್ದಂತೆ, ನಮ್ಮ ಜೀವನವು ಬೆಳಕು ಮತ್ತು ಉದ್ದೇಶದಿಂದ ತುಂಬಿರಲಿ ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಾ ದುರ್ಗೆಯ ದೈವಿಕ ಆಶೀರ್ವಾದವು ಅಚಲವಾದ ಶಕ್ತಿ, ಶಾಶ್ವತ ಸಂತೋಷ ಮತ್ತು ಅದ್ಭುತ ಆರೋಗ್ಯವನ್ನು ತರಲಿ ಎಂದು ಪ್ರಧಾನಿ ಶೋಭ ಕೋರಿದ್ದಾರೆ.

ಹೊಸ ಹೆಚ್-1ಬಿ ವೀಸಾ ಗಳಿಗೆ ಮಾತ್ರ 100,000 ಡಾಲರ್ ಶುಲ್ಕ ಅನ್ವಯ : ಶ್ವೇತಭವನ

ವಾಷಿಂಗ್ಟನ್,ಸೆ.21- ಹೆಚ್1- ಬಿ ವೀಸಾ ಶುಲ್ಕಗಳಿಗೆ ಸಂಬಂಧಿಸಿದಂತೆ ಪ್ರಮುಖ ನವೀಕರಣವೊಂದು ಹೊರಬಿದ್ದಿದೆ. ಈಗಾಗಲೇ ಹೆಚ್1ಬಿ ವೀಸಾಗಳನ್ನು ಹೊಂದಿರುವವರು ಮತ್ತು ಪ್ರಸ್ತುತ ದೇಶದ ಹೊರಗೆ ಇರುವವರಿಗೆ ಮರುಪ್ರವೇಶಿಸಲು 100,000 ಡಾಲರ್ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಎಕ್ಸ್ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಇದು ಹೊಸ ವೀಸಾಗಳಿಗೆ ಮಾತ್ರ ಅನ್ವಯಿಸುತ್ತದೆ, ನವೀಕರಣಗಳಿಗೆ ಅಲ್ಲ ಮತ್ತು ಪ್ರಸ್ತುತ ವೀಸಾ ಹೊಂದಿರುವವರಿಗೆ ಅಲ್ಲ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಶ್ವೇತಭವನವು ಹೊಸ ನಿಯಮವು ಯಾವುದೇ ಪ್ರಸ್ತುತ ವೀಸಾ ಹೊಂದಿರುವವರು ಅಮೆರಿಕಕ್ಕೆ/ಅಮೆರಿಕದಿಂದ ಪ್ರಯಾಣಿಸುವವರಿಗೆ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಲು ಪ್ರಯತ್ನಿಸಿದೆ.ಅದರಂತೆ, ಹೆಚ್1 – ಬಿ ವೀಸಾಗಳ ಮೇಲೆ ವಿಧಿಸಲಾದ ವಾರ್ಷಿಕ 100,000 ಅಥವಾ ಅಂದಾಜು 8.3 ಮಿಲಿಯನ್ ಶುಲ್ಕವು ಹೊಸ ಅರ್ಜಿಗಳಿಗೆ ಮಾತ್ರ ಅನ್ವಯಿಸುತ್ತದೆ, ಈಗಾಗಲೇ ವೀಸಾಗಳಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ಕಾರ್ಮಿಕರಿಗೆ ಅಲ್ಲ ಎಂದು ಅಮೆರಿಕ ಸರ್ಕಾರ ಸ್ಪಷ್ಟಪಡಿಸಿದೆ.

ಶ್ವೇತಭವನದ ಈ ಹೇಳಿಕೆಯು ಪ್ರಸ್ತುತ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಭಾರತೀಯ ಐಟಿ ವೃತ್ತಿಪರರಿಗೆ ನಿರಾಳತೆ ಹೊದಗಿಸಿದೆ. ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಪೊನಾರ್ಡ್ ಲುಟ್ಟಿಕ್ ಅವರೊಂದಿಗೆ ಅಧ್ಯಕ್ಷರು, ಹೆಚ್1-2 ವೀಸಾಗಳು ಎಂದು ಕರೆಯಲ್ಪಡುವ ತಂತ್ರಜ್ಞಾನ ಕಂಪನಿಗಳು ತುಂಬಲು ಕಷ್ಟಕರವೆಂದು ಭಾವಿಸುವ ಉನ್ನತ ಕೌಶಲ್ಯದ ಉದ್ಯೋಗಗಳಿಗೆ ಹೊಸ ಶುಲ್ಕವನ್ನು ವಿಧಿಸುವ ಘೋಷಣೆಗೆ ಸಹಿ ಹಾಕಿದ್ದರು.

ಘೋಷಣೆ ಸೆ.21 ರ EDT 12:01 ರಿಂದ ಜಾರಿಗೆ ಬರುತ್ತದೆ. ಆ ಕ್ಷಣದಿಂದ, ಪ್ರಾಯೋಜಕ ಉದ್ಯೋಗದಾತರು 100,000 ಶುಲ್ಕವನ್ನು ಪಾವತಿಸದ ಹೊರತು ಯಾವುದೇ ಹೆಚ್1ಬಿ ಉದ್ಯೋಗಿ ಅಮೆರಿಕಾ ಪ್ರವೇಶಿಸಲು ಸಾಧ್ಯವಿಲ್ಲ. ಉದ್ಯೋಗದಾತರು ಈ ಶುಲ್ಕದ ಪುರಾವೆಯನ್ನು ಒದಗಿಸಬೇಕು ಮತ್ತು ಅದನ್ನು ಒಳಗೊಂಡಿರದ ಯಾವುದೇ ಅರ್ಜಿಯನ್ನು ತಿರಸ್ಕರಿಸಲು ರಾಜ್ಯ ಮತ್ತು ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆಗಳಿಗೆ ನಿರ್ದೇಶಿಸಲಾಗಿದೆ. ನಿರ್ಬಂಧವು ವಿಸ್ತರಿಸದ ಹೊರತು12 ತಿಂಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಟ್ರಂಪ್ ತಿಳಿಸಿದ್ದರು.

ಜಾರಿಗೆ ಬಂದ ದಿನಾಂಕದ ನಂತರ ಅಮೆರಿಕ ಪ್ರವೇಶಿಸುವ ಅಥವಾ ಪ್ರವೇಶಿಸಲು ಪ್ರಯತ್ನಿಸುವವರಿಗೆ ಮಾತ್ರ ಇದು ಅನ್ವಯಿಸುತ್ತದೆ ಎಂದು ಆದೇಶವು ನಿರ್ದಿಷ್ಟಪಡಿಸುತ್ತದೆ. ಇದರರ್ಥ ಈ ನಿಯಮ ಪ್ರಾಥಮಿಕವಾಗಿ ವಿದೇಶದ ಹೊಸ
ಅರ್ಜಿದಾರರನ್ನು ಗುರಿಯಾಗಿಸುತ್ತದೆ, ಈಗಾಗಲೇ ಆಮೆರಿಕದಲ್ಲಿ ನಿಯಮಿತ ವಿಸ್ತರಣೆಗಳನ್ನು ಸಲ್ಲಿಸುತ್ತಿರುವ ಕಾರ್ಮಿಕರನ್ನು ಅಲ್ಲ, ಆದಾಗ್ಯೂ, ಅಸ್ತಿತ್ವದಲ್ಲಿರುವ ಹೆಚ್ 1 – ಬಿ ಹೊಂದಿರುವವರು ವಿದೇಶಕ್ಕೆ ಪ್ರಯಾಣಿಸಿದರೆ ಮತ್ತು ಹಿಂತಿರುಗಲು ವೀಸಾ ಸ್ಟ್ಯಾಂಪಿಂಗ್ ಅಗತ್ಯವಿದ್ದರೆ ಅವರೂ ಸಹ ಇದಕ್ಕೊಳಪಡುತ್ತಾರೆ. ಇಲ್ಲಿಯವರೆಗೆ, ಹೆಚ್ 1-ಬಿ ವೀಸಾಗಳು ಸುಮಾರು 1,500 ವರೆಗಿನ ವಿವಿಧ ಆಡಳಿತಾತ್ಮಕ ಶುಲ್ಕಗಳನ್ನು ಹೊಂದಿದ್ದವು ಎಂದು ಮಾಧ್ಯಮ ವರದಿ ತಿಳಿಸಿದೆ.

ಈ ಹೊಸ ವೆಚ್ಚವು ತೀವ್ರವಾದ ಏರಿಕೆಯನ್ನು ಸೂಚಿಸುತ್ತದೆ. ಪ್ರತಿ ಮರುಪ್ರವೇಶದಲ್ಲೂ ಜಾರಿಗೊಳಿಸಿದರೆ, ಉದಾಹರಣೆಗೆ ಉದ್ಯೋಗಿಯು ದೇಶ ತೊರೆದಾಗ ಮತ್ತು ಹೊಸ ವೀಸಾ ಮುದ್ರೆಯ ಅಗತ್ಯವಿರುವಾಗ, ಮೂರು ವರ್ಷಗಳ ಸಾಮಾನ್ಯ
ವಾಸ್ತವ್ಯದ ವೆಚ್ಚವು ಹಲವಾರು ಲಕ್ಷ ಡಾಲರ್‌ಗಳನ್ನು ತಲುಪಬಹುದು.

ಹೆಚ್ 1 – ಬಿ ವೀಸಾ ಪ್ರೋಗ್ರಾಮ್‌ನ ಹೆಚ್ಚಿನ ಪಾಲನ್ನು ಭಾರತೀಯರೇ ಹೊಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ವೀಸಾ ಅನುಮೋದನೆಗಳಲ್ಲಿ ಸರಿಸುಮಾರು ಶೇಕಡಾ 7173 ರಷ್ಟು ಭಾರತೀಯರ ಪಾಲಾಗಿದೆ. ಇನ್ನು ಚೀನಾಕ್ಕೆ ಹೋಲಿಸಿದಾಗ ಇದು ಶೇ 112 ಎಂದೆನಿಸಿದೆ.

2023 ರ ಹಣಕಾಸು ವರ್ಷದಲ್ಲಿ, ಭಾರತವು 191,000 ಹೆಚ್ 1 ಬಿ ವೀಸಾಗಳನ್ನು ಪಡೆದುಕೊಂಡಿದೆ: 2024 ರ ಹಣಕಾಸು ವರ್ಷದಲ್ಲಿ, ಅದು ಸುಮಾರು 207,000 ಕೈ ಬರಿತು. ಅಂದರೆ ಪ್ರಸ್ತುತ ಹೆಚ್ 1 – ಬಿಗಳಲ್ಲಿ 200,000 ಕ್ಕೂ ಹೆಚ್ಚು ಭಾರತೀಯ ವೃತ್ತಿಪರರ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ಆರ್ಥಿಕ ಅಪಾಯವು ದಿಗ್ಧಮಗೊಳಿಸುವಂತಿದೆ. ಸಾಮಾನ್ಯ 60,000 ಭಾರತೀಯರಿಗೆ ತಕ್ಷಣಕ್ಕೆ ಇದರಿಂದ ಬೀಳುವ ಹೊರೆ ವಾರ್ಷಿಕ ಹೊರೆ 6 ಬಿಲಿಯನ್ (ಸುಮಾರು ರೂ. 53,000 ಕೋಟಿ). ಪೂರ್ಣ ಪ್ರಮಾಣದಲ್ಲಿ ತೆರಿಗೆ ವಿಧಿಸುವುದರಿಂದ ಭಾರತದ ವಾರ್ಷಿಕ ಹೊರೆ 1.8 ಲಕ್ಷ ಕೋಟಿ ರೂ.ಗಳಿಗೆ ಬರಬಹುದು.

ನೂತನ ಶುಲ್ಕ ಯಾರಿಗೆ ಅನ್ವಯ? :
ನೂತನ ವೀಸಾ ಶುಲ್ಕವು ಇಂದಿನಿಂದ ಜಾರಿಗೆ ಬರುತ್ತದೆ. ಇದು ಒಂದು ವರ್ಷದ ನಂತರ ಮುಕ್ತಾಯಗೊಳ್ಳಲಿದೆ. ಆದರೆ ಸರ್ಕಾರವು ಅದನ್ನು ಮುಂದುವರಿಸಲು ನಿರ್ಧರಿಸಿದರೆ ಅದನ್ನು ವಿಸ್ತರಿಸಬಹುದು.

ಆದರೆ ಅಮೆರಿಕದ ವಲಸೆ ನೀತಿ ವಕೀಲರು ಶ್ವೇತಭವನದ ಈ ಕ್ರಮವು ಅನೇಕ ನುರಿತ ನೌಕರರ ಜೀವನವನ್ನು ಹಾಳುಮಾಡುವ ಬೆದರಿಕೆ ಹಾಕುತ್ತದೆ ಮತ್ತು ಅಮರಿಕದ ವ್ಯವಹಾರದ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಟೆಕ್ಸಾಸ್‌ನ ಎಲ್ ಪಾಸೆದಲ್ಲಿ ನೆಲೆಸಿರುವ ಡಿಕಿನ್ಸನ್ ರೈಟ್ ಅವರ ವಲಸೆ ವಕೀಲರಾದ ಕ್ಯಾಥೀನ್ ಕ್ಯಾಂಪ್ ಬೆಲ್ ವಾಕರ್, ಲಿಂಕ್ಸ್‌ಇನ್‌ನಲ್ಲಿ ಪೋಸ್ಟ್ ಮಾಡುವ ಮೂಲಕ, ಶ್ವೇತಭವನದ ಈ ಕ್ರಮವು ಒಂದು ದಿನದ ಸೂಚನೆಯೊಂದಿಗೆ ಅಸ್ತಿತ್ವದಲ್ಲಿರುವ ಹೆಚ್ 1 – ಬಿ.ಪ್ರಕ್ರಿಯೆಯಲ್ಲಿ ಸಂಪೂರ್ಣ ಅವ್ಯವಸ್ಥೆಯನ್ನು ಉಂಟುಮಾಡುತ್ತದೆ ಎಂದಿದ್ದಾರೆ. ಶುಲ್ಕವು ಕಂಪನಿಗಳಿಗೆ ವಾರ್ಷಿಕ ವೆಚ್ಚವಾಗಿರುತ್ತದೆ ಎಂದು ಲುಬ್ಲಿಕ್ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ಆದರೆ ಶ್ವೇತಭವನದ ಅಧಿಕಾರಿಯೊಬ್ಬರು ನಿನ್ನೆ ಮಾತನಾಡುತ್ತಾ ಇದು ಒಂದು ಬಾರಿ ಶುಲ್ಕ ಎಂದು ಹೇಳಿದರು. ಲುಬ್ಲಿಕ್ ಅವರ ಹೇಳಿಕೆಗಳು ಗೊಂದಲವನ್ನು ಬಿತ್ತುತ್ತವೆಯೇ ಎಂದು ಕೇಳಿದಾಗ, ಈ ವಿಷಯದ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಲು ಅಧಿಕಾರವಿಲ್ಲದ ಮತ್ತು ಅನಾಮಧೇಯತೆಯ ಸ್ಥಿತಿಯ ಕುರಿತು ಮಾತನಾಡಿದ ಅಧಿಕಾರಿ, ಹೊಸ ಶುಲ್ಕ ಪ್ರಸ್ತುತ ನವೀಕರಣಗಳಿಗೆ ಅನ್ವಯಿಸುವುದಿಲ್ಲ ಆದರೆ ಆ ನೀತಿ ಚರ್ಚೆಯಲ್ಲಿದೆ ಎಂದು ಹೇಳಿದರು.

ವ್ಯಕ್ತಿಗತವಾಗಿ, ಲೆಕ್ಕಾಚಾರ ಮಾಡಿದರೆ ಅಮೆರಿಕದಲ್ಲಿ ವಾರ್ಷಿಕವಾಗಿ 120,000 ಗಳಿಸುವ ಮಧ್ಯಮ ಮಟ್ಟದ ಭಾರತೀಯ ಎಂಜಿನಿಯರ್ ಭರಿಸುವ ವಾರ್ಷಿಕ 100,000 ವೀಸಾ ಶುಲ್ಕವು ಅವರ ವೇತನದ NO ಪ್ರತಿಶತಕ್ಕಿಂತ ಹೆಚ್ಚು ಹೊಡೆತವನ್ನುಂಟು ಮಾಡುತ್ತದೆ, ಇದು ಅತಿ ಹೆಚ್ಚು ಸಂಬಳ ಪಡೆಯುವವರನ್ನು ಹೊರತುಪಡಿಸಿ ಉಳಿದವರಿಗೆ ವಲಸೆಯನ್ನು ಅಸಾಧ್ಯವಾಗಿಸುತ್ತದೆ. ಹೆಚ್ 1 ಬಿ ವೀಸಾ ಹೊಂದಿರುವವರಲ್ಲಿ ಶೇ.70 ಕ್ಕಿಂತ ಹೆಚ್ಚು ಜನರು ಭಾರತದವರಾಗಿದ್ದಾರೆ.

ಪ್ರತಾಪ್‌ ಸಿಂಹಗೆ ಸಚಿವ ಮಹದೇವಪ್ಪ ಟಾಂಗ್

ಮೈಸೂರು,ಸೆ.21- ದಸರಾ ಉದ್ಘಾಟಕರ ವಿವಾದ ವಿಚಾರ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಸಚಿವ ಹೆಚ್.ಸಿ ಮಹದೇವಪ್ಪ, ಸಂವಿಧಾನ ಪೀಠಿಕೆ ಟೌನ್ ಹಾಲ್ ಮುಂದೆ ಹಾಕಿದ್ದೇವೆ. ಭಾರತದಲ್ಲಿ 130 ಕೋಟಿ ಜನ ಇದ್ದಾರೆ. ಅವರಿಗೆ ಮುಕ್ತ ಧಾರ್ಮಿಕ ಆಚರಣೆಗೆ ಅವಕಾಶ ಕೊಟ್ಟಿದ್ದೇವೆ. ಇದರ ಉದ್ದೇಶ ಬಹುತ್ವ ಕಾಪಾಡುವುದು. ಗೊಂದಲಕ್ಕೆ, ಅನುಮಾನಕ್ಕೆ, ಅಪಮಾನಕ್ಕೆ ದ್ವೇಷಕ್ಕೆ ಅವಕಾಶ ಇಲ್ಲ ಎಂದು ಸಂವಿಧಾನ ಹೇಳಿದೆ. ಇದನ್ನೇ ಸುಪ್ರೀಂ ಕೋರ್ಟ್ ಹೇಳಿದೆ. ವಿರೋಧಿಗಳಿಗೆ ಸಂವಿಧಾನ ಬೀಗ ಹಾಕಿದೆ.

ವಿರೋಧಿಗಳಿಗೆ ಇನ್ನು ಮುಂದೆ ಬುದ್ದಿ ಬರಬೇಕು. ಅತ್ಯಂತ ಪ್ರೀತಿಯಿಂದ ಎಲ್ಲರೂ ದಸರಾ ಆಚರಣೆ ಮಾಡಬೇಕು. ಎಲ್ಲರೂ ಭಾಗಿಯಾಗಿ ಅಂತ ನಾನು ಆಹ್ವಾನ ಕೊಡುತ್ತೇನೆ ಎಂದರು.
ರಾಜ್ಯದಲ್ಲಿ ಜಾತಿಗಣತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ.ಮಹದೇವಪ್ಪ, ಸ್ವಾತಂತ್ರ್ಯಕ್ಕಿಂತ ಮುಂಚೆಯ ವರ್ಣಾಶ್ರಮ ಮಾಡುತ್ತಿದ್ದಾರೆ. ಬಿಜೆಪಿಗೆ ಇದರಲ್ಲಿ ನಂಬಿಕೆ ಇದೆ. ನಾವು ಜಾತಿಗಣತಿ ಮಾಡುತ್ತಿರುವುದು ಪ್ರತಿಪ್ರಜೆಯ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಬದುಕು ಹೇಗಿದೆ ಅಂತ ತಿಳಿದುಕೊಳ್ಳೋದಕ್ಕೆ. ಇದರಲ್ಲಿ ಬಿಜೆಪಿ ವಿರೋಧ ಮಾಡೋದಕ್ಕೆ ಏನಿದೆ ಎಂದು ಪ್ರಶ್ನಿಸಿದರು.

ಇರುವ ಜಾತಿಗಳನ್ನು ಸಮೀಕ್ಷೆ ಮಾಡುತ್ತಿದ್ದೇವೆ. ನಾವು ಯಾವ ಜಾತಿಯನ್ನೂ ಹುಟ್ಟು ಹಾಕುತ್ತಿಲ್ಲ. ಹಿಂದೂಗಳನ್ನು ಯಾರೂ ಟಾರ್ಗೆಟ್ ಮಾಡುತ್ತಿಲ್ಲ. ಇದು ಬಿಜೆಪಿ ಹೇಳುವ ಅಪ್ಪಟ ಸುಳ್ಳು. ಹಿಂದೂ ಧರ್ಮ ಒಡೆಯುವ ಪ್ರಮೇಯ ನಮಗೆ ಇಲ್ಲ. ನಾನು ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ಸಾಯುವಾಗ ಹಿಂದೂವಾಗಿ ಸಾಯಲ್ಲ ಅಂತ ಅಂಬೇಡ್ಕರ್ ಹೇಳಿದ್ದರು. ಹಾಗಾದರೆ ಹಿಂದೂ ಧರ್ಮದಲ್ಲಿ ಏನಿದೆ?. ಬಲವಂತವಾಗಿ ಮತಾಂತರ ತಪ್ಪು. ಅದು ಅವರ ಹಕ್ಕು. ಸಚಿವ ಸಂಪುಟದಲ್ಲಿ ಯಾವ ಒಡಕೂ ಇರಲಿಲ್ಲ. ಒಮ್ಮತದ ತೀರ್ಮಾನದ ಮೇಲೆ ನೂತನ ಸಮೀಕ್ಷೆ ಮಾಡುತ್ತಿದ್ದೇವೆ. ಲಿಂಗಾಯತ ಒಕ್ಕಲಿಗ ಸಮುದಾಯದವರು ಅವರವರ ವಿಚಾರಕ್ಕೆ ಸಭೆ ಮಾಡುತ್ತಿದ್ದಾರೆ ಎಂದರು.

ಸಿಎಂ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ.ಮಹದೇವಪ್ಪ, ಇರೋದು ಒಂದೇ ಸಿಎಂ ಕುರ್ಚಿ, ಅದರಲ್ಲಿ ಸಿದ್ದರಾಮಯ್ಯ ಭದ್ರವಾಗಿ ಕುಳಿತಿದ್ದಾರೆ. 2028ರ ತನಕ ಅವರೇ ಕುಳಿತಿರುತ್ತಾರೆ. ಕಾರ್ಯಕರ್ತರಿಗೆ ಆಸೆ ಇದೆ ಕೂಗುತ್ತಾರೆ ಎಂದು ಹೇಳುವ ಮೂಲಕ 5 ವರ್ಷ ಸಿದ್ದರಾಮಯ್ಯ ಸಿಎಂ ಎಂದು ಪರೋಕ್ಷವಾಗಿ ಹೇಳಿದರು.

ಪಾವಗಡ : ಮಕ್ಕಳನ್ನು ಕೊಂದು ತಾಯಿ ನೇಣಿಗೆ ಶರಣು

ಪಾವಗಡ,ಸೆ.21– ತನ್ನೆರಡು ಮಕ್ಕಳನ್ನೂ ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾವಗಡ ತಾಲೂಕಿನ ಕಡಪಲಕೆರೆ ಗ್ರಾಮದಲ್ಲಿ ನಡೆದಿದೆ.ಸರಿತಾ(25) ತನ್ನ ಒಂದೂವರೆ ವರ್ಷದ ಮಗ ಪುಷ್ಪಕ್ ಹಾಗೂ ನಾಲ್ಕು ವರ್ಷದ ಯುಕ್ತಿಯ ಕತ್ತು ಕೊಯ್ದು ಕೊಂದು ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತಿ ಸಂತೋಷ್ ಲಗೇಜ್ ಆಟೋ ಚಾಲಕನಾಗಿದ್ದು, ಯಾವ ಕಾರಣಕ್ಕೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದುಬಂದಿಲ್ಲ.ಈ ಘಟನೆಯಿಂದ ಗ್ರಾಮ ಮತ್ತು ಇಡೀ ತಾಲ್ಲೂಕು ಬೆಚ್ಚಿಬಿದ್ದಿದ್ದು, ಸುದ್ದಿ ತಿಳಿದ ಕೂಡಲೇ ಮಧುಗಿರಿ ಡಿ.ವೈ.ಎಸ್ಪಿ. ಮಂಜುನಾಥ್ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ದೇಹಗಳನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಶವಪರೀಕ್ಷೆಯಾದ ನಂತರವೇ ಖಚಿತ ಮಾಹಿತಿ ದೊರೆಯಲಿದೆ.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ : ಅಭಿಮಾನಿಗಳಿಗೆ ಧನ್ಯವಾದ ಹೇಳಿದ ನಟ ಮೋಹನ್ ಲಾಲ್

ಕೊಚ್ಚಿ, ಸೆ.21-ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿರುವ ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಶಸ್ತಿ ಘೋಷಣೆಯ ನಂತರ ಮೊದಲ ಬಾರಿಗೆ ಕೇರಳಕ್ಕೆ ಆಗಮಿಸಿದ ಮೋಹನ್ ಲಾಲ್, ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮೊದಲಿಗೆ ಈ ಗೌರವವನ್ನು ಮಲಯಾಳಂ ಚಲನಚಿತ್ರೋದ್ಯಮಕ್ಕೆ ಅರ್ಪಿಸುವುದಾಗಿ ಹೇಳಿದರು.

ಚಿತ್ರೋದ್ಯಮಕ್ಕೆ ಇನ್ನಷ್ಟು ಒಳ್ಳೆಯದಾಗಲಿ ಎಂದು ನಾನು ಬಯಸುತ್ತೇನೆ ಮತ್ತು ಈ ಮನ್ನಣೆ ಹೊಸ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ನಗುತ್ತಾ ಹೇಳಿದರು.ಇದೇ ವೇಲೆ ಭಾವುಕರಾದ ಮೋಹನ್ ಲಾಲ್ ದೇವರು, ಪ್ರೇಕ್ಷಕರು, ಪೋಷಕರು ಮತ್ತು ದೇಶಕ್ಕೆ ಹೃತ್ತೂರ್ವಕ ಧನ್ಯವಾದಗಳನ್ನು ವ್ಯಕ್ತಪಡಿಸಿದರು.

ಇದು ಅಪಾರ ಸಂತೋಷದ ಕ್ಷಣ. ನನ್ನ ಪ್ರಯಾಣದ ಭಾಗವಾಗಿದ್ದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ ಎಂದರು.ನನ್ನ 48 ವರ್ಷಗಳ ಸುದೀರ್ಘ ವೃತ್ತಿ ಜೀವನವನ್ನು ನೆನಪಿಸಿಕೊಂಡ ಅವರು ನನ್ನೊಂದಿಗೆ ನಡೆದ ಪ್ರತಿಯೊಬ್ಬರನ್ನು ನಾನು ನೆನಪಿಸಿಕೊಳ್ಳುತ್ತೇನೆ ಮತ್ತು ಈ ಸಂದರ್ಭದಲ್ಲಿ ಅವರಿಗೆ ನನ್ನ ಪ್ರೀತಿ ಮತ್ತು ಪ್ರಾರ್ಥನೆಗಳನ್ನು ಕಳುಹಿಸುತ್ತೇನೆ ಎಂದು ಹೇಳಿದರು.

ತಮ್ಮನ್ನು ಇಂದು ಈ ಸ್ಥಿತಿಗೆ ತಂದಿದ್ದಕ್ಕಾಗಿ ಪ್ರೇಕ್ಷಕರು ಮತ್ತು ಮಲಯಾಳಂ ಚಲನಚಿತ್ರೋದ್ಯಮಕ್ಕೆ ಅವರು ಮನ್ನಣೆ ನೀಡಿದರು.ಮೋಹನ್ ಲಾಲ್ ಅವರು 2023 ಸಾಲಿಗೆ ಸಿನಿಮಾ ಕ್ಷೇತ್ರದಲ್ಲಿ ದೇಶದ ಅತ್ಯುನ್ನತ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರಕಟಿಸಿದೆ.

ಭಾರತೀಯ ಸಿನಿಮಾಕ್ಕೆ ನೀಡಿದ ಅಪ್ರತಿಮ ಕೊಡುಗೆ ಗಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ನಟ, ನಿರ್ದೇಶಕ ಮತ್ತು ನಿರ್ಮಾಪಕರನ್ನು ಗೌರವಿಸಲಾಗುತ್ತಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.

ದಸರಾ ರಜೆಗಳ ಪ್ರಯುಕ್ತ ಕೆಎಸ್‌ಆರ್‌ಟಿಸಿ ವಿಶೇಷ ಹೆಚ್ಚುವರಿ ಬಸ್ ವ್ಯವಸ್ಥೆ

ಬೆಂಗಳೂರು,ಸೆ.21- ಮೈಸೂರು ದಸರಾ ಉತ್ಸವದ ರಜೆಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 2300ಕ್ಕೂ ಹೆಚ್ಚು ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಿದೆ. ದಸರಾ ಮಹೋತ್ಸವದ ಅಂಗವಾಗಿ ರಾಜ್ಯ ಹಾಗೂ ದೇಶದ ವಿವಿಧ ಕಡೆಗಳಿಂದ ಮೈಸೂರು ನಗರಕ್ಕೆ ಬರುವ ಪ್ರವಾಸಿಗರ ಹಾಗೂ ರಜೆಗಳ ಹಿನ್ನಲೆಯ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುವುದನ್ನು ಮನಗಂಡು ಕೆಎಸ್‌ಆರ್‌ಟಿಸಿ ವಿಶೇಷ ಬಸ್ ವ್ಯವಸ್ಥೆ ಒದಗಿಸಿದೆ. ಪ್ರಸ್ತುತ ಕಾರ್ಯಾಚರಣೆ ಮಾಡಲಾಗುತ್ತಿರುವ ಕರ್ನಾಟಕ ಸಾರಿಗೆ ರಾಜಹಂಸ, ಸ್ವೀಪರ್, ಐರಾವತ, ಐರಾವತ ಕ್ಲಬ್‌ ಕ್ಲಾಸ್, ಅಂಬಾರಿ ಕ್ಲಬ್‌ ಕ್ಲಾಸ್, ಪಲ್ಲಕ್ಕಿ ಸ್ವೀಪರ್, ಅಶ್ವಮೇಧ ಸಾರಿಗೆ ಸೇವೆಗಳ ಜೊತೆಗೆ ಹೆಚ್ಚುವರಿ ಬಸ್‌ಗಳ ವಿಶೇಷ ಸಾರಿಗೆ ಸೇವೆಗಳ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

ದಿನಾಂಕ ಸೆ.26, 27 ಹಾಗೂ 30ರಂದು ಬೆಂಗಳೂರಿನಿಂದ ರಾಜ್ಯದ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಗೆ 2300ಕ್ಕೂ ಹೆಚ್ಚು ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ವಿಶೇಷ ಬಸ್‌ಗಳ ಆಚರಣೆ ಮಾಡಲಾಗುವುದು. ನಂತರ ರಾಜ್ಯದ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಅ.2 ಹಾಗೂ 5ರಂದು ವಿಶೇಷ ಬಸ್‌ಗಳ ಸೇವೆಯನ್ನು ಒದಗಿಸಲಾಗುವುದು ಎಂದು ಹೇಳಿದೆ.

ರಾಜ್ಯದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ನೆರೆ ರಾಜ್ಯಗಳಲ್ಲಿನ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪೂನಾ, ಏರ್ನಾಕುಲಂ, ಪಾಲ್ಗಾಟ್ ಹಾಗೂ ಇತರೆ ಸ್ಥಳಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದೆ.

ಮೈಸೂರು ದಸರಾಕ್ಕೆ 610 ವಿಶೇಷ ಬಸ್
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 260 ಹೆಚ್ಚುವರಿ ಬಸ್ ಗಳನ್ನು ಹಾಗೂ ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಾದ ಚಾಮುಂಡಿ ಬೆಟ್ಟ, ಕೆ.ಆರ್.ಎಸ್ ಅಣೆಕಟ್ಟು/ಬೃಂದಾವನ, ಶ್ರೀರಂಗಪಟ್ಟಣ, ನಂಜನಗೂಡು, ಮಡಿಕೇರಿ, ಮಂಡ್ಯ, ಮಳವಳ್ಳಿ, ಹೆಚ್.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್.ನಗರ, ಗುಂಡ್ಲುಪೇಟೆ ಇತ್ಯಾದಿ ಸ್ಥಳಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು 350 ಹೆಚ್ಚುವರಿ ಬಸ್‌ಗಳು ಸೇರಿದಂತೆ ಒಟ್ಟಾರೆ 610 ದಸರಾ ವಿಶೇಷ ಬಸ್‌ಗಳನ್ನು ಒದಗಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ಮಾನ ನಿಲ್ದಾಣದಿಂದ ಮೈಸೂರಿಗೆ ಪ್ರೈ ಬಸ್ ಮೂಲಕ ನೇರ ಸಾರಿಗೆ ಸೌಲಭ್ಯಕಲ್ಪಿಸಲಾಗಿರುತ್ತದೆ.

ಒಂದು ದಿನದ ವಿಶೇಷ ಪ್ರವಾಸ ಸಾರಿಗೆ
ಗಿರಿದರ್ಶಿನಿ : ಬಂಡೀಪುರ, ಗೋಪಾಲಸ್ವಾಂ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟ (ಪ್ರಯಾಣದರ ವಯಸ್ಕರಿಗೆ: 450 ರೂ. ಮಕ್ಕಳಿಗೆ 300 ರೂ.)
ಜಲದರ್ಶಿನಿ: ಗೋಲ್ಡನ್‌ಟೆಂಪಲ್ (ಬೈಲಕುಪ್ಪೆ),ದುಬಾರೆ ಅರಣ್ಯ ನಿಸರ್ಗಧಾಮ, ರಾಜಾಸೀಟ್, ಹಾರಂಗಿಜಲಾಶಯ ಮತ್ತು ಕೆ.ಆರ್.ಎಸ್. (ಪ್ರಯಾಣದರ ವಯಸ್ಕರಿಗೆ: 500 ರೂ. ಮತ್ತು ಮಕ್ಕಳಿಗೆ 350)
ದೇವದರ್ಶಿನಿ: ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ,
ಶ್ರೀರಂಗಪಟ್ಟಣ (ಪ್ರಯಾಣದರ ವಯಸ್ಕರಿಗೆ: 330 ರೂ. ಮತ್ತು ಮಕ್ಕಳಿಗೆ 225 ರೂ.)
ಈ ಪ್ಯಾಕೇಜ್‌ಗಳನ್ನು ಸೆ.27ರಿಂದ ಆ.7ರವರೆಗೆ ಕಲ್ಪಿಸಲಾಗಿದೆ.

BIG NEWS : ಇಂದು ಸಂಜೆ 5ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮೋದಿ ಭಾಷಣ

ನವದೆಹಲಿ,ಸೆ.21- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.ಆದಾಗ್ಯೂ, ಸಂಜೆ ಅವರು ಯಾವ ವಿಷಯದ ಬಗ್ಗೆ ಮಾತನಾಡಲಿದ್ದಾರೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಸಂಜೆ ಅವರ ಭಾಷಣದ ವಿಷಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದಂತೆ ನವದೆಹಲಿಯ ಮೇಲೆ ವಾಷಿಂಗ್ಟನ್ ಶೇ.25 ರಷ್ಟು ಹೆಚ್ಚುವರಿ ಲೆವಿ ಸೇರಿದಂತೆ ಶೇ.50 ರಷ್ಟು ಸುಂಕಗಳನ್ನು ವಿಧಿಸಿರುವುದರಿಂದ ಕಳೆದ ಕೆಲವು ತಿಂಗಳುಗಳಿಂದ ಅಮೆರಿಕದೊಂದಿಗಿನ ಭಾರತದ ಸಂಬಂಧಗಳು ಹಿಮಪಾತವಾಗಿರುವ ಸಮಯದಲ್ಲಿ ಪ್ರಧಾನ ಮಂತ್ರಿಯವರ ಭಾಷಣ ಬರಲಿದೆ. 2022 ರಲ್ಲಿ ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದಕ್ಕಾಗಿ ಅಮೆರಿಕ ಮತ್ತು ಇತರ ದೇಶಗಳು ರಷ್ಯಾ ಮೇಲೆ ನಿರ್ಬಂಧಗಳನ್ನು ವಿಧಿಸಿವೆ.

ಟ್ರಂಪ್ ಆಡಳಿತವು ಹೊಸ ಹೆಚ್-1ಬಿ ವೀಸಾ ಅರ್ಜಿಗಳ ವಾರ್ಷಿಕ ಶುಲ್ಕವನ್ನು 100,000 ಡಾಲರ್‌ಗಳಿಗೆ (ರೂ. 88 ಲಕ್ಷಕ್ಕೂ ಹೆಚ್ಚು) ಹೆಚ್ಚಿಸಿದ ನಂತರ ಮುಂಬರುವ ಭಾಷಣವು ಬರುತ್ತದೆ, ಇದು ಹೆಚ್-1ಬಿ ಹೊಂದಿರುವವರಲ್ಲಿ ಹೆಚ್ಚಿನವರನ್ನು ಒಳಗೊಂಡಿರುವ ಭಾರತೀಯರಲ್ಲಿ ಗೊಂದಲ ಮತ್ತು ಭೀತಿಯನ್ನು ಹುಟ್ಟುಹಾಕಿದೆ.

ಇದರ ನಂತರ, ಟ್ರಂಪ್ ಆಡಳಿತವು ಹೆಚ್-1ಬಿ ವೀಸಾಗಳಿಗೆ ಹೊಸ ಯುಎಸ್‌ಬಿ 100,000 ಶುಲ್ಕವು ಪ್ರಸ್ತುತ ವೀಸಾ ಹೊಂದಿರುವವರಿಗೆ ಅನ್ವಯಿಸುವುದಿಲ್ಲ ಮತ್ತು ಹೊಸ ಅರ್ಜಿಗಳಿಗೆ ಮಾತ್ರ ಒಂದು ಬಾರಿ ಪಾವತಿಯಾಗಿದೆ ಎಂದು ಸ್ಪಷ್ಟಪಡಿಸಿತು. ಪ್ರಸ್ತುತ ಹೊರಗೆ ಇರುವ ವೀಸಾ ಹೊಂದಿರುವವರು ದೇಶಕ್ಕೆ ಮರುಪ್ರವೇಶಿಸಲು ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಅದು ಹೇಳಿದೆ.

ಹೆಚ್-1ಬಿ ವೀಸಾ ಅರ್ಜಿಗಳ ಮೇಲೆ ಸುಂಕ ಮತ್ತು 100,000 ಡಾಲರ್‌ಗಳ ಕಡಿದಾದ ಶುಲ್ಕವನ್ನು ವಿಧಿಸುವ ಅಮೆರಿಕದ ನಿರ್ಧಾರವನ್ನು ಪರೋಕ್ಷವಾಗಿ ಉಲ್ಲೇಖಿಸಿದ ಪ್ರಧಾನಿ ಮೋದಿ, ಭಾರತದ ಅತಿದೊಡ್ಡ ಎದುರಾಳಿ ಇತರ ರಾಷ್ಟ್ರಗಳ ಮೇಲಿನ ಅವಲಂಬನೆ ಎಂದು ಹೇಳಿದರು. ಆದರೆ ಅರೆವಾಹಕಗಳಿಂದ ಹಡಗು ನಿರ್ಮಾಣದವರೆಗಿನ ಕ್ಷೇತ್ರಗಳಲ್ಲಿ ಸ್ವಾವಲಂಬನೆಗಾಗಿ ಒತ್ತಾಯಿಸಿದರು.

ವೈಭವದ ದಸರಾಗೆ ಸಿಂಗಾರಗೊಂಡ ಸಾಂಸ್ಕೃತಿಕ ನಗರಿ ಮೈಸೂರು

ಮೈಸೂರು, ಸೆ.21- ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಕಳೆಗಟ್ಟಿದೆ. ವಿಶ್ವವಿಖ್ಯಾತ ದಸರಾ ಆಚರಣೆ ಸಂಭ್ರಮಕ್ಕೆ ಮೈಸೂರು ನಗರ ನವ ವಧುವಿನಂತೆ ಶೃಂಗಾರಗೊಂಡಿದೆ. ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರ ಪೂಜೆಯೊಂದಿಗೆ ನಾಳೆ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ.

ಸಾಹಿತಿ ಹಾಗೂ ಅಂತಾರಾಷ್ಟ್ರೀಯ ಬೂಕ‌ರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ಕಾಕ್ ಅವರು ದಸರಾ ಉದ್ಘಾಟನೆ ನೆರವೇರಿಸಲಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಉಪಸ್ಥಿತರಿರುವ ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಶಿವರಾಜ್ ತಂಗಡಗಿ, ಎಚ್.ಕೆ. ಪಾಟೀಲ್, ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಬಿ.ಎಸ್. ಸುರೇಶ್, ಈಶ್ವ‌ರ್ ಖಂಡ್ರೆ, ಮಾಜಿ ಸಚಿವ ಜಿ.ಟಿ.ದೇವೇಗೌಡ ಪಾಲ್ಗೊಳ್ಳಲಿದ್ದಾರೆ.ಅದ್ದೂರಿ ದಸರಾ ಆಚರಣೆಗೆ ಸಕಲ ಸಿದ್ದತೆಗಳು ನಡೆದಿವೆ.

ನಾಳೆಯಿಂದ ನವರಾತ್ರಿ ಉತ್ಸವ ಆರಂಭವಾಗಲಿದೆ. ಅರಮನೆಯಲ್ಲಿ ಪಾರಂಪರಿಕ ಆಚರಣೆಗೆ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಮೈಸೂರು ನಗರ ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದೆ. ದಸರಾದ ಆಕರ್ಷಣೆಯ ಕೇಂದ್ರಬಿಂದುವಾದ ಜಂಬೂಸವಾರಿಯ ತಾಲೀಮು ನಡೆಯುತ್ತಿದೆ.

ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಕಾರ್ಯಕ್ರಮ, ವಿಜಯ ದಶಮಿ ಮೆರವಣಿಗೆ ಉತ್ಸವ, ಪಂಜಿನ ಕವಾಯತು ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ.ನಾಳೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂದು ಸಂಜೆ ಮೈಸೂರಿಗೆ ತೆರಳಲಿದ್ದಾರೆ. ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರಿಗೆ ಜಿಲ್ಲಾಡಳಿತ ಈಗಾಗಲೇ ವಿವಿಧ ಹಂತದ ಪಾಸ್‌ಗಳನ್ನು ವಿತರಿಸುತ್ತದೆ.

ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಹಿಸಿದೆ. ನಾಳೆ ದಸರಾ ಉದ್ಘಾಟನೆ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ನಗರದ ಎಲ್‌ಐಸಿ ವೃತ್ತ, ರಾಮಸ್ವಾಮಿ ವೃತ್ತ, ಕೆ.ಆರ್.ವೃತ್ತ, ಚಾಮರಾಜನಗರ ಒಡೆಯರ್ ವೃತ್ತ, ದೊಡ್ಡಕೆರೆ ಮೈದಾನ, ಚಾಮರಾಜ ವೃತ್ತ, ಗನ್‌ಹೌಸ್ ಸೇರಿದಂತೆ ವಿವಿಧೆಡೆ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ.

ಈ ಬಾರಿ 146 ಕಿ.ಮೀ. ಉದ್ದದ ದೀಪಲಂಕಾರ, 116 ವೃತ್ತಗಳಲ್ಲಿ ಕಣ್ಣನ ಸೆಳೆಯುವ ಮೂಮೆಂಟ್ ದೀಪಗಳನ್ನು ಅಳವಡಿಸಲಾಗಿದೆ. ದಸರಾ ಫಲಪುಷ್ಪ ಪ್ರದರ್ಶನ ಕುಪ್ಪಣ್ಣ ಪಾರ್ಕ್‌ನಲ್ಲಿ ನಡೆಯಲಿದ್ದು, 1 ಲಕ್ಷಕ್ಕೂ ಹೆಚ್ಚು ಹೂವಿನ ಕುಂಡಗಳಲ್ಲಿ ಬಗೆಬಗೆಯ ಹೂ ಗಿಡಗಳನ್ನು ಬೆಳೆಸಲಾಗಿದೆ. 35 ರಿಂದ 40ಕ್ಕೂ ಹೆಚ್ಚು ತಳಿಯ ವಿವಿಧ ಬಣ್ಣಗಳ ಹೂವಿನ ಹಾಗೂ ಅಲಂಕಾರಿಕ ಗಿಡಗಳು ನೋಡುಗರ ಮನಸೂರೆಗೊಳ್ಳಲಿದೆ. ಕುಸ್ತಿಪಂದ್ಯಾವಳಿಯಲ್ಲಿ ಸೆಣೆಸಲು ಪೈಲ್ವಾನರು ತಯಾರಿ ಮಾಡಿಕೊಂಡಿದ್ದಾರೆ. ಯುವ ದಸರಾ ಸಂಭ್ರಮ, ರಸಸಂಜೆ ಕಾರ್ಯಕ್ರಮದ ಸಡಗರಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗಿದೆ.

948.65 ಲಕ್ಷ ರೂ. ವೆಚ್ಚದಲ್ಲಿ ಮೈಸೂರು ದಸರಾ ನಿಮಿತ್ತ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಜಂಬೂ ಸವಾರಿ ಸಾಗುವ ಮಾರ್ಗ ಅರಮನೆ ಸುತ್ತಲೂ ಹಾಗೂ ಇತರ ಕಡೆಗಳಲ್ಲಿ 114.66 ಲಕ್ಷ ರೂ. ವೆಚ್ಚದಲ್ಲಿ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿ, 588.7 ಲಕ್ಷ ರೂ. ವೆಚ್ಚದಲ್ಲಿ ದಸರಾ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಪಾದಚಾರಿ ಮಾರ್ಗದ ದುರಸ್ತಿ, ನಗರದ ಪ್ರಮುಖ ರಸ್ತೆಗಳಲ್ಲಿ ಲೇನ್‌ಕರ್ಬ್ ಪೈಂಟಿಂಗ್ ಕಾಮಗಾರಿ, ರಸ್ತೆ ದುರಸ್ತಿ ಕಾಮಗಾರಿ, ಒಡೆಯರ್, ಅಂಬೇಡ್ಕರ್ ಪ್ರತಿಮೆಗಳಿಗೆ ಪೈಂಟಿಂಗ್, ಸ್ವಚ್ಚತಾ ಕಾಮಗಾರಿ, ಉದ್ಯಾನವನಗಳಲ್ಲಿ ದೀಪಲಂಕಾರ, ಕಲಾಕೃತಿಗಳ ನಿರ್ಮಾಣ ಸೇರಿದಂತೆ ವಿವಿಧ ಸಿದ್ದತೆಗಳು ನಡೆಯುತ್ತಿವೆ.

ಆನ್‌ಲೈನ್‌ನಲ್ಲಿ ಗೋಲ್ಡ್ ಟಿಕೆಟ್‌ಗಳ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಾರಿ ವೈಮಾನಿಕ ಪ್ರದರ್ಶನ ಆಯೋಜನೆ ಮಾಡಿರುವುದರಿಂದ ದಸರಾಕ್ಕೆ ಮತ್ತಷ್ಟು ರಂಗು ಬಂದಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ತಿಳಿಸಿದ್ದಾರೆ.ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ನವರಾತ್ರಿ ವೇಳೆ ಸ್ವಚ್ಛತಾ ಕಾರ್ಯಕ್ಕೆ ಹೆಚ್ಚುವರಿ ಪೌರ ಕಾರ್ಮಿಕರು ಸ್ವಯಂ ಪ್ರೇರಕರನ್ನು ನಿಯೋಜಿಸಲಾಗಿದೆ ಎಂದು ನಗರ ಪಾಲಿಕೆ ಆಯುಕ್ತರಾದ ಶೇಖ್ ತನ್ನೀ‌ರ್ ಆಸಿಫ್ ತಿಳಿಸಿದ್ದಾರೆ.

ಪರೋಕ್ಷ ಯುದ್ಧಗಳು ಭಾರತವನ್ನು ಕಾಡುತ್ತಿವೆ : ಎನ್‌ಐಎ ಮುಖ್ಯಸ್ಥ ಎಚ್ಚರಿಕೆ

ಪುಣೆ, ಸೆ.21-ಪರೋಕ್ಷ ಯುದ್ಧಗಳು ಮತ್ತು ಐಸಿಸ್ ಭಾರತಕ್ಕೆ ಪ್ರಮುಖ ಸವಾಲುಗಳನ್ನು ಒಡ್ಡುತ್ತವೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೊಸ ಅಡೆತಡೆಗಳನ್ನು ಎದುರಿಸಲು ರಾಷ್ಟ್ರೀಯ ಭದ್ರತೆಗೆ ಜವಾಬ್ದಾರರಾಗಿರುವ ಸಂಸ್ಥೆಗಳೊಳಗಿನ ಭ್ರಷ್ಟಾಚಾರ ಕೊನೆಗೊಳ್ಳಬೇಕು ಎಂದು ಅವರು ಇತ್ತಿ ಹೇಳಿದ್ದಾರೆ.

ಪುಣೆಯಲ್ಲಿ ನಡೆದ ಭಾರತದ ಆಂತರಿಕ ಭದ್ರತೆ ಮತ್ತು ಅದರ ಸವಾಲುಗಳು ಕುರಿತು ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅವರು ಮಾತನಾಡಿದರು.ನಕ್ಸಲಿಸಂ, ಖಲಿಸ್ತಾನಿ ಅಂಶಗಳು ಮತ್ತು ಪ್ರತ್ಯೇಕತಾವಾದವು ಆಂತರಿಕ ಸವಾಲುಗಳಾಗಿಯೇ ಉಳಿದಿದ್ದರೂ, ಪರೋಕ್ಷ ಯುದ್ಧಗಳು ಮತ್ತು ಭಯೋತ್ಪಾದಕ ಗುಂಪು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಎಸಿಸ್) ನಮಗೆ ಪ್ರಮುಖ ಬೆದರಿಕೆಯನ್ನು ಒಡ್ಡುತ್ತವೆ ಎಂದು ದೇಶದ ಪ್ರಮುಖ ಭಯೋತ್ಪಾದನಾ ವಿರೋಧಿ ತನಿಖಾ ಸಂಸ್ಥೆಯ ಮುಖ್ಯಸ್ಥರು ಹೇಳಿದರು.

ಮೊದಲನೆಯದಾಗಿ, ಕೆಲವು ದೇಶಗಳು ಪ್ರಾಕ್ಸಿಯುದ್ಧಗಳ ಮೂಲಕ ನಮ್ಮ ಪ್ರಗತಿಯನ್ನು ಅಡ್ಡಿಪಡಿಸಲು ಪ್ರಯತ್ನಿಸುತ್ತಿವೆ, ಮತ್ತು ಎರಡನೆಯದು ಐಸಿಸ್ ಎಂದರು.ನಾವು ಹೊಸ ಸವಾಲುಗಳನ್ನು ಎದುರಿಸಲು ಬಯಸಿದರೆ, ನಾವು ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು. ಸವಾಲುಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಬಯಸಿದರೆ, ರಾಷ್ಟ್ರೀಯ ಭದ್ರತೆಗೆ ಜವಾಬ್ದಾರರಾಗಿರುವ ಸಂಸ್ಥೆಗಳೊಳಗಿನ ಭ್ರಷ್ಟಾಚಾರವೂ ಕೊನೆಗೊಳ್ಳಬೇಕು ಎಂದು ಹೇಳಿದರು.

ಇದಲ್ಲದೆ ಕಾಶ್ಮೀರದಲ್ಲಿ ಪ್ರತ್ಯೇಕತಾವಾದ ಮತ್ತು ಈಶಾನ್ಯದಲ್ಲಿ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಿಂದ ಒಳನುಸುಳುವಿಕೆ ಸೇರಿದಂತೆ ಭಾರತವು ಅನೇಕ ಆಂತರಿಕ ಬೆದರಿಕೆಗಳನ್ನು ಎದುರಿಸುತ್ತಿದೆ ಎಂದರು. ಇಲ್ಲಿಯವರೆಗೆ, ನಾವು ಈ ಹಲವು ಸಮಸ್ಯೆಗಳನ್ನು ಯಶಸ್ವಿಯಾಗಿ ಜಯಿಸಿದ್ದೇವೆ. ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವು ಸ್ವತಂತ್ರ ನ್ಯಾಯಾಂಗದ ಜೊತೆಗೆ ನಮ್ಮ ಶ್ರೇಷ್ಠ ಸಾಧನೆಗಳಾಗಿವೆ, ಏಕೆಂದರೆ ಅದು ನಮಗೆ ಯಶಸ್ವಿಯಾಗಲು ಅನುವು ಮಾಡಿಕೊಟ್ಟಿದೆ ಎಂದು ಅವರು ಹೇಳಿದರು.

ಫೋರ್ಸ್ ಒನ್ ನ ಮೌಲ್ಯಗಳನ್ನು ನಾವು ನಮ್ಮ ಸಿಬ್ಬಂದಿಯಿಂದ ನೇರವಾಗಿ ಅರ್ಥಮಾಡಿಕೊಂಡಿದ್ದೇವೆ. ಇಲ್ಲಿ, ಕರ್ತವ್ಯವು ಜೀವನಕ್ಕಿಂತ ದೊಡ್ಡದು ಎಂದು ನಾವು ಅರಿತುಕೊಂಡೆವು. ನಾವು ಮೌಲ್ಯಾಧಾರಿತ ಸಂಘಟನೆಯನ್ನು ನಿರ್ಮಿಸಿದ್ದೇವೆ. ಕೆಲಸದ ಗುಣಮಟ್ಟವು ನಿಮ್ಮ ಸ್ಥಾನಕ್ಕಿಂತ ಮುಖ್ಯವಾಗಿದೆ. ಪ್ರತಿಭೆಯು ಶ್ರೇಣಿಗಿಂತ ಮುಖ್ಯವಾಗಿದೆ ಎಂಬ ನಂಬಿಕೆಯನ್ನು ನಾವು ಸ್ಥಾಪಿಸಿದ್ದೇವೆ ಎಂದು ಡೇಟ್ ಹೇಳಿದರು.

ದಾಲ್ ಸರೋವರದಲ್ಲಿ ಸ್ಪೋಟಗೊಂಡ ಶೆಲ್

ಶ್ರೀನಗರ, ಸೆ.21-ಕಳೆದ ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂದೂರ್ ಸಮಯದಲ್ಲಿ ದಾಲ್ ಸರೋವರದಲ್ಲಿ ಸ್ಪೋಟಗೊಂಡ ಶೆಲ್ ಅವಶೇಷಗಳು ನೀರಿನ ದೇಹದಲ್ಲಿ ಶುಚಿಗೊಳಿಸುವ ಅಭಿಯಾನದ ಸಮಯದಲ್ಲಿ ಕಂಡುಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರೋವರ ಸಂರಕ್ಷಣೆ ಮತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಶೆಲ್ ಅವಶೇಷಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಅವಶೇಷಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ಸಾಗಿಸಲಾಗಿದೆ. ಅಲ್ಲಿ ಅವುಗಳನ್ನು ಹೆಚ್ಚಿನ ಪರೀಕ್ಷೆ ಮತ್ತು ಅಗತ್ಯ ಕ್ರಮಕ್ಕಾಗಿ ಇರಿಸಲಾಗಿದೆ ಎಂದು ಅವರು ಹೇಳಿದರು.

ಮೇ 10 ರ ಬೆಳಿಗ್ಗೆ ಶ್ರೀನಗರದ ಪ್ರಮುಖ ಪ್ರವಾಸಿ ಆಕರ್ಷಣೆಯಾದ ದಾಲ್ ಸರೋವರಕ್ಕೆ ಕ್ಷಿಪಣಿಯಂತಹ ವಸ್ತುವೊಂದು ಬಿದ್ದಿತ್ತು.ಅದೇ ದಿನ. ನಗರದ ಹೊರವಲಯದಲ್ಲಿರುವ ಲಾಸ್ಟನ್‌ನಿಂದ ಮತ್ತೊಂದು ಶಂಕಿತ ವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು.