ಲಾಹೋರ್,ಮೇ 9– ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧದ ಪರಿಸ್ಥಿತಿ ಉಲ್ಬಣಗೊಂಡಿರುವಂತೆಯೇ ಭಾರತದ ಡ್ರೋನ್ ದಾಳಿಯಲ್ಲಿ ತನ್ನ ನಾಲ್ವರು ಸೈನಿಕರು ಗಾಯಗೊಂಡಿರುವುದಾಗಿ ಪಾಕಿಸ್ತಾನ ಸೇನೆ ಹೇಳಿದೆ.
25 ಭಾರತೀಯ ಡ್ರೋನ್‌ಗಳನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕ್ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.ಕಳೆದ ರಾತ್ರಿ ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಹಲವು ಕಡೆ ದಾಳಿ ನಡೆಸುವ ಪಾಕ್ ಸೇನೆಯ ಪ್ರಯತ್ನಗಳನ್ನು ಭಾರತೀಯ ಶಸಾ್ತ್ರಸ್ತ್ರ ಪಡೆಗಳು ವಿಫಲಗೊಳಿಸಿದ್ದು, ಲಾಹೋರ್‌ನಲ್ಲಿ ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಲಾಗಿದೆ ಎಂದು ನವದೆಹಲಿಯಲ್ಲಿ ಭಾರತೀಯ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.
ಅತ್ತ ಇಸ್ಲಾಮಾಬಾದ್‌ನಲ್ಲಿ ಮಾತನಾಡಿದ ಪಾಕಿಸ್ತಾನ ಸೇನೆಯ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹದ್ ಷರೀಫ್ ಚೌಧರಿ, ಲಾಹೋರ್ ಬಳಿ ಒಂದು ಡ್ರೋನ್ ಪತನಗೊಂಡಿದ್ದು, ದಾಳಿಯ ಪರಿಣಾಮವಾಗಿ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ.
ಲಾಹೋರ್, ಗುಜ್ರನ್ವಾಲಾ, ಚಕ್ವಾಲ್, ಬಹವಾಲ್ಪುರ್, ಮಿಯಾನೋ, ಕರಾಚಿ, ರಾವಲ್ಪಿಂಡಿ, ಚೋರ್, ಅತ್ವಾಲಾಕ್‌ನಲ್ಲಿ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ 25 ಇಸ್ರೇಲಿ ನಿರ್ಮಿತ ಹೀರೋಪ್ ಡ್ರೋನ್‌ಗಳನ್ನು ಪಾಕಿಸ್ತಾನಿ ಸೇನೆಯ ಸ್ಟ್‌ಾ ಕಿಲ್ (ತಾಂತ್ರಿಕ) ಮತ್ತು ಹಾರ್ಡ್ ಕಿಲ್ ಆಯುಧಗಳಿಂದ ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.