ನವದೆಹಲಿ, ಮೇ.3- ಪಾಕಿಸ್ತಾನದ ಮೇಲೆ ಭಾರತ 36 ಗಂಟೆಯೋಳಗೆ ದಾಳಿ ಮಾಡುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದ ಪಾಕ್ ಸಚಿವರ ಎಕ್ಸ್ ಖಾತೆಯನ್ನು ಬಂದ್ ಮಾಡಲಾಗಿದೆ.ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಅತಾವುಲ್ಲಾ ತರಾರ್ ಅವರ ಎಕ್ಸ್ ಖಾತೆಯನ್ನು ತಡೆಹಿಡಿಯಲಾಗಿದೆ.
ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಗಡಿಯಾಚೆಗಿನ ಉದ್ವಿಗ್ನತೆ ಹೆಚ್ಚುತ್ತಲೇ ಇದೆ, ಪಾಕಿಸ್ತಾನ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿ ದಾಳಿಯನ್ನು ನಡೆಸಿದೆ. ಈ ಬಗ್ಗೆ ಭಾರತ ಕೂಡ ಪ್ರತಿಯಾಗಿ ದಾಳಿ ಮಾಡಿದೆ.
ಈ ಕದನ ವಿರಾಮವನ್ನು ಉಲ್ಲಂಘನೆ ಮಾಡಿದ ನಂತರ ಈ ಹೇಳಿಕೆಯನ್ನು ಸಚಿವ ಅತಾವುಲ್ಲಾ ತರಾರ್ ನೀಡಿದ್ದಾರೆ.ಭಾರತದ ಒಂದು ವೇಳೆ ಪಾಕ್ ಮೇಲೆ ದಾಳಿ ನಡೆಸಿದರೆ. ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಪಾಕ್ ಎಲ್ಲದಕ್ಕೂ ಸಿದ್ಧತೆಯನ್ನು ನಡೆಸಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಭಾರತ ಪಾಕಿಸ್ತಾನದ ಮೇಲೆ ಯುದ್ಧ ಹೇರಲು ಪ್ರಯತ್ನಿಸಿದರೆ ಭಾರತ ವಿನಾಶ ಆಗುತ್ತದೆ ಎಂಬ ಡೈಲಾಗ್‌ಗಳನ್ನು ಹೇಳಿದರು. ಇದರ ಜತೆಗೆ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಕೂಡ ಭಾರತದ ಜೊತೆ ಯುದ್ಧ ನಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದರು. ಏನಾದರೂ ಆಗಬೇಕಾದರೆ, ಅದು ಎರಡು ಅಥವಾ ಮೂರು ದಿನಗಳಲ್ಲಿ ಸಂಭವಿಸುತ್ತದೆ ಎಂದು ಸ್ಥಳೀಯ ಮಾಧ್ಯಮಕ್ಕೆ ಹೇಳಿದರು.
ಭಾರತ ಪಾಕ್‌ಗೆ ಒದೊಂದು ರಾಜತಾಂತ್ರಿಕ ಪೆಟ್ಟು ನೀಡಿದೆ. ಭಾರತದ ಪಾಕ್ ವಿರುದ್ಧ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತ್ತು. ಪ್ರಧಾನಿ ಮೋದಿ ಕೂಡ, ಭಾರತದ ನಾಗರಿಕರ ಸಾವಿನ ನ್ಯಾಯ ನೀಡುತ್ತೇವೆ ಎಂದು ಭರವಸೆ ಕೂಡ ನೀಡಿದ್ದಾರೆ.
ಇತ್ತೀಚೆಗೆ ಹನಿಯಾ ಅಮೀರ್, ಮಹಿರಾ ಖಾನ್ ಮತ್ತು ಅಲಿ ಜಾಫರ್ ಸೇರಿದಂತೆ ಪಾಕಿಸ್ತಾನಿ ನಟರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ನಿರ್ಬಂಧಿಸಲಾಗಿದೆ.ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಯೂಟ್ಯೂಬ್ ಚಾನೆಲ್‌ಗಳು ಮತ್ತು ಡಾನ್ ನ್ಯೂಸ್, ಇರ್ಷಾದ್ ಭಟ್ಟಿ, ಟಿವಿ, ನ್ಯೂಸ್ ಮತ್ತು ಜಿಯೋ ನ್ಯೂಸ್ ಸೇರಿದಂತೆ ದೇಶದ ಸುದ್ದಿವಾಹಿನಿಗಳನ್ನು ಸಹ ನಿರ್ಬಂಧಿಸಲಾಗಿದೆ.