ಜಮ್ಮು, ಮೇ.10– ಮುಂಜಾನೆ ರಾಚೌಲ, ಪೂಂಚ್ ಮತ್ತು ಜಮ್ಮು ಜಿಲ್ಲೆಗಳಲ್ಲಿ ಪಾಕಿಸ್ತಾನ ನಡೆಸಿದ ಭಾರೀ ಶೆಲ್ ದಾಳಿಯಲ್ಲಿ ನಾಲ್ವರು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ರಾಚೌರಿ ಪಟ್ಟಣದ ಕೈಗಾರಿಕಾ ಪ್ರದೇಶದ ಬಳಿ ಪಾಕಿಸ್ತಾನಿ ಶೆಲ್ ದಾಳಿಯಲ್ಲಿ ಎರಡು ವರ್ಷದ ಆಯಿಷಾ ನೂರ್ ಮತ್ತು ಮೊಹಮ್ಮದ್ ಶೋಹಿಬ್ (35) ಎಂಬ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇತರ ಮೂವರು ಗಾಯಗೊಂಡಿದ್ದಾರೆ.
ಇದಲ್ಲದೆ ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನ ಕಾಂಫ್ರಾ-ಗಲ್ಲುಟ್ಟಾ ಗ್ರಾಮದಲ್ಲಿ ರಶೀದಾ ಬಿ ಎಂಬ 55 ವರ್ಷದ ಮಹಿಳೆಯ ಮನೆಗೆ ಮಾರ್ಟರ್ ಶೆಲ್ ಬಡಿದು ಪ್ರಾಣ ಕಳೆದುಕೊಂಡಿದ್ದಾರೆ.
ಬಿದಿಪುರ ಜಟ್ಟಾ ಗ್ರಾಮದ ನಿವಾಸಿ ಆಶೋಕ್ ಕುಮಾರ್ ಅಲಿಯಾಸ್ ಶೋಕಿ, ಜಮ್ಮು ಜಿಲ್ಲೆಯ ಆರ್ ಎಸ್ ಪುರ ಸೆಕ್ಟರ್ನ ಅಂತರರಾಷ್ಟ್ರೀಯ ಗಡಿಯಲ್ಲಿ ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೂಂಚ್‌ನಲ್ಲಿ ನಡೆದ ತೀವ್ರ ಶೆಲ್ ದಾಳಿಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು. ರೆಹರಿ ಮತ್ತು ರೂಪನಗರ ಸೇರಿದಂತೆ ವಸತಿ ಪ್ರದೇಶಗಳ ಮೇಲೆ ಫಿರಂಗಿ ಶೆಲ್‌ಗಳು ಮತ್ತು ಶಂಕಿತ ಡೋನ್‌ಗಳು ದಾಳಿ ನಡೆಸಿದಾಗ ಜಮ್ಮು ನಗರದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.