ಇಸ್ಲಾಮಾಬಾದ್, ಮೇ 11- ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ನಮ ಪಾತ್ರವಿತ್ತು ಎಂದು ಪಾಕ್ ಒಪ್ಪಿಕೊಂಡಿದೆ. ಪುಲ್ವಾಮಾ ಘಟನೆಯಲ್ಲಿ ನಮ ಪಾತ್ರವಿಲ್ಲ ಎಂದು ವರ್ಷಗಳ ಕಾಲ ನಿರಾಕರಿಸಿಕೊಂಡೇ ಬರುತ್ತಿದ್ದ ಪಾಕ್‌ನ ಉನ್ನತ ವಾಯುಪಡೆಯ ಅಧಿಕಾರಿಯೇ ತಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನ ವಾಯುಪಡೆಯ ವಾಯು ವೈಸ್ ಮಾರ್ಷಲ್ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶಕ (ಡಿಜಿಪಿಆರ್) ಔರಂಗಜೇಬ್ ಅಹ್ಮದ್ ಪತ್ರಿಕಾಗೋಷ್ಠಿಯಲ್ಲಿ, ಪುಲ್ವಾಮಾ ದಾಳಿಯನ್ನು ಯುದ್ಧತಂತ್ರದ ಪ್ರತಿಭೆಗೆ ಒಂದು ಉದಾಹರಣೆ ಎಂದು ಹೇಳಿದ್ದಾರೆ.
ಈ ಹೇಳಿಕೆಯು ಪುಲ್ವಾಮಾ ದಾಳಿಯಲ್ಲಿ ಮಾತ್ರವಲ್ಲದೆ ಇತ್ತೀಚಿನ ಪಹಲ್ಗಾಮ್ ದಾಳಿಯಲ್ಲೂ ಪಾಕಿಸ್ತಾನದ ಪಾತ್ರದ ಬಗ್ಗೆ ಅನುಮಾನಗಳನ್ನು ದೃಢಪಡಿಸುತ್ತಿದೆ. ಔರಂಗಜೇಬ್ ಅಹ್ಮದ್ ಅವರ ಈ ಹೇಳಿಕೆಯು ಪಾಕಿಸ್ತಾನದ ವರ್ಷಗಳ ಹಳೆಯ ಕಥೆಯನ್ನು ತಲೆಕೆಳಗೆ ಮಾಡಿದಂತಾಗಿದೆ.
ಪುಲ್ವಾಮಾ ಭಯೋತ್ಪಾದಕ ದಾಳಿಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಏರ್ ವೈಸ್ ಮಾರ್ಷಲ್ ಔರಂಗಜೇಬ್ ಅಹದ್, ನಮ್ಮ ಯುದ್ಧತಂತ್ರದ ಪ್ರತಿಭೆಯ ಮೂಲಕ ನಾವು ಇದನ್ನು ಭಾರತಕ್ಕೆ ಹೇಳಲು ಪ್ರಯತ್ನಿಸಿದ್ದೇವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿನ ಪಾಕ್‌ನ ಈ ಹೇಳಿಕೆಯು ಪಾಕಿಸ್ತಾನದ ವರ್ಚಸ್ಸಿಗೆ ದೊಡ್ಡ ಕಳಂಕವಾಗಿದ್ದು, ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಭಯೋತ್ಪಾದನೆಯನ್ನು ಬೆಂಬಲಿಸುವ ಪಾಕಿಸ್ತಾನದ ನೀತಿಯನ್ನು ಮುನ್ನೆಲೆಗೆ ತಂದಿದೆ.
ಪಾಕಿಸ್ತಾನ ವಾಯುಪಡೆಯ ಹಿರಿಯ ಅಧಿಕಾರಿಯ ಈ ತಪ್ಪೊಪ್ಪಿಗೆಯು ಪುಲ್ವಾಮಾದಲ್ಲಿ ಮಾತ್ರವಲ್ಲದೆ ಪಹಲ್ಗಾಮ್ ದಾಳಿಯಲ್ಲೂ ಅದರ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏರ್ ವೈಸ್ ಮಾರ್ಷಲ್ ಔರಂಗಜೇಬ್ ಅಹ್ಮದ್ ಅವರೊಂದಿಗೆ ಹಾಜರಿರುವ ಡಿಜಿ ಐಎಸ್ಪಿಆರ್ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಸಾಮಾನ್ಯ ವ್ಯಕ್ತಿಯಲ್ಲ. ಅವರು ಪರಮಾಣು ವಿಜ್ಞಾನಿ ಸುಲ್ತಾನ್ ಬಶೀರುದ್ದೀನ್ ಮಹಮೂದ್ ಅವರ ಪುತ್ರರಾಗಿದ್ದು, ಅವರು ಒಸಾಮಾ ಬಿನ್ ಲಾಡೆನ್‌ರನ್ನು ಭೇಟಿಯಾಗಿದ್ದ ಮತ್ತು ಅಲ್-ಖೈದಾಗೆ ಪರಮಾಣು ತಂತ್ರಜ್ಞಾನವನ್ನು ಒದಗಿಸುವ ಪ್ರಯತ್ನಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.
ಅವರನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಲ್-ಖೈದಾ ನಿರ್ಬಂಧ ಸಮಿತಿಯು ಗುರುತಿಸಿದೆ.ಫೆಬ್ರವರಿ 14, 2019 ರಂದು ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ಹೊಣೆಯನ್ನು ಜೈಶ್-ಎ-ಮೊಹಮ್ಮದ್ (ಜೆಇಎಂ) ಹೊತ್ತುಕೊಂಡಿತ್ತು.
ಭಾರತವು ಪಾಕಿಸ್ತಾನವನ್ನು ದೂಷಿಸಿತ್ತು ಮತ್ತು ಹಲವಾರು ಬಾರಿ ದೃಢವಾದ ಪುರಾವೆಗಳನ್ನು ಸಹ ಒದಗಿಸಿತ್ತು.ಪಾಕಿಸ್ತಾನ ಯಾವಾಗಲೂ ಅದನ್ನು ನಿರಾಕರಿಸುತ್ತಿತ್ತು, ಆದರೆ ಈಗ ಅದರ ಸ್ವಂತ ಮಿಲಿಟರಿ ಅಧಿಕಾರಿ ಪುಲ್ವಾಮಾ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ತನ್ನ ಸೇನೆ ಎಂದು ಒಪ್ಪಿಕೊಂಡಿದ್ದಾರೆ.