ನವೆದೆಹಲಿ, ಜ.19- ತವರಿನ ಅಂಗಳದ ಲಾಭ ಪಡೆದಿರುವ ಪಾಕಿಸ್ತಾನವು ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಸಾಧ್ಯತೆಗಳನ್ನು ಹೆಚ್ಚಾಗಿ ಹೊಂದಿದೆ ಎಂದು ಲಿಟ್ಲ್ ಮಾಸ್ಟರ್ ಸುನೀಲ್ ಗವಾಸ್ಕರ್ ಅವರು ಭವಿಷ್ಯ ನುಡಿದಿದ್ದಾರೆ.
2017ರಲ್ಲಿ ಸಂಪ್ರದಾಯಿಕ ವೈರಿ ಟೀಮ್ ಇಂಡಿಯಾವನ್ನು ಫೈನಲ್ ಪಂದ್ಯದಲ್ಲಿ ಮಣಿಸಿದ್ದ ಪಾಕಿಸ್ತಾನ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಪ್ರಸಕ್ತ ಚಾಂಪಿಯನ್‌್ಸ ಟ್ರೋಫಿಯು ಫೆಬ್ರವರಿ 19 ರಿಂದ ಪಾಕಿಸ್ತಾನ ಹಾಗೂ ಯುಎಇಯಲ್ಲಿ ಆಯೋಜನೆಗೊಂಡಿದ್ದು, ರೋಹಿತ್ ಶರ್ಮಾ ಪಡೆಯು ತಮೆಲ್ಲ ಪಂದ್ಯಗಳನ್ನು ಯುಎಇನಲ್ಲೇ ಆಡಲಿದೆ.
ಪಾಕ್ ಗೆ ಹೆಚ್ಚಿನ ಅವಕಾಶ:
ಸ್ಟಾರ್ ಸ್ಪೋರ್ಟ್ಸ್ ನೊಂದಿಗೆ ಸಂವಾದ ನಡೆಸಿರುವ ಖ್ಯಾತ ಕ್ರಿಕೆಟ್ ವಿಶ್ಲೇಷಕ, `ತವರಿನ ಅಂಗಳದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿರುವುದರಿಂದ ಪಾಕಿಸ್ತಾನವು ಟ್ರೋಫಿ ಗೆಲ್ಲುವ ಹಾಟ್ ಫೇವರೆಟ್ ತಂಡವಾಗಿದೆ. ಏಕೆಂದರೆ ತವರಿನ ತಂಡಗಳನ್ನು ಮಣಿಸುವುದು ಸಾಮಾನ್ಯದ ಸಂಗತಿ ಅಲ್ಲ’ ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ಹೇಳಿದ್ದಾರೆ.
ತವರಿನ ತಂಡಗಳು ಬಲಿಷ್ಠ:
2023ರ ಏಕದಿನ ವಿಶ್ವಕಪ್ ಟೂರ್ನಿಯನ್ನೇ ಗಮನಿಸಿ ತವರಿನ ಅಂಗಳದ ಲಾಭ ಪಡೆದಿದ್ದ ರೋಹಿತ್ ಶರ್ಮಾ ಪಡೆಯು ಸತತ 10 ಪಂದ್ಯಗಳನ್ನು ಜಯಿಸಿ ಫೈನಲ್ ಗೇರಿತ್ತು. ಆದರೆ ಟ್ರೋಫಿ ಗೆಲ್ಲುವಲ್ಲ ಎಡವಿತ್ತು. ಭಾರತ ತಂಡವು ಪಾಕಿಸ್ತಾನಕ್ಕಿಂತ ಅತ್ಯಂತ ಬಲಿಷ್ಠ ತಂಡವಾಗಿದೆ. ಆದರೆ ರೋಹಿತ್ ಶರ್ಮಾ ಪಡೆ ಪಾಕಿಸ್ತಾನದಲ್ಲಿ ಆಡದಿರುವುದು ಆ ತಂಡಕ್ಕೆ ಸಿಕ್ಕ ಲಾಭವಾಗಿದೆ ಎಂದು 74 ವರ್ಷದ ಕ್ರಿಕೆಟಿಗ ತಮ ಅನಿಸಿಕೆ ಹಂಚಿಕೊಂಡಿದ್ದಾರೆ.
ರೌಂಡ್ ರಾಬಿನ್ ರೀತಿ:
2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು ರೌಂಡ್ ರಾಬಿನ್ ರೀತಿಯಲ್ಲಿ ಪಂದ್ಯಗಳು ನಡೆಯಲಿದ್ದು, ಪಾಕಿಸ್ತಾನ ಹೊರತುಪಡಿಸಿ ಉಳಿದ ಎಲ್ಲಾ 7 ತಂಡಗಳು ಈಗಾಗಲೇ ತಮ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು ಟ್ರೋಫಿ ಗೆಲ್ಲುವತ್ತ ಗಮನ ಹರಿಸಿದೆ.
ಗುಂಪುಗಳು:
ಎ:ಭಾರತ, ಪಾಕಿಸ್ತಾನ, ಬಾಂಗ್ಲಾ ದೇಶ ಮತ್ತು ನ್ಯೂಜಿಲೆಂಡ್.
ಬಿ: ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ.
ಭಾರತದ ಪಂದ್ಯಗಳು:
ಫೆ.20- ಬಾಂಗ್ಲಾದೇಶ
ಫೆ.23- ಪಾಕಿಸ್ತಾನ
ಮಾರ್ಚ್ 2- ನ್ಯೂಜಿಲೆಂಡ್.