ಶ್ರೀನಗರ,ಏ.27- ಜಮು ಮತ್ತು ಕಾಶೀರದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಪಡೆಗಳು ಅಪ್ರಚೋದಿತ ಗುಂಡಿನ ದಾಳಿಯನ್ನು ಸತತ ಮೂರನೇ ದಿನವೂ ಮುಂದುವರೆಸಿವೆ. ಭಾರತೀಯ ಸೇನೆ ಇದ್ದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏಪ್ರಿಲ್ 26 ಮಧ್ಯರಾತ್ರಿಯಿಂದ ಪಾಕಿಸ್ತಾನಿ ಸೇನಾ ನೆಲೆಗಳು ತುತರಿ ಗಾಲಿ ಮತ್ತು ರಾಂಪುರ ವಲಯಗಳಲ್ಲಿ ಎಲ್‌ಒಸಿಯಾದ್ಯಂತ ಅಪ್ರಚೋದಿತ ಗುಂಡಿನ ದಾಳಿಯನ್ನು ಪ್ರಾರಂಭಿಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಸೈನಿಕರು ಹೈ ಆಲರ್ಟ್‌ನಲ್ಲಿದ್ದಾರೆ,ಪಾಕ್ ದುಸ್ಸಾಹಸಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದರು.