Monday, November 25, 2024
Homeಅಂತಾರಾಷ್ಟ್ರೀಯ | Internationalಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ 10ವರ್ಷ ಜೈಲು ಶಿಕ್ಷೆ

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ 10ವರ್ಷ ಜೈಲು ಶಿಕ್ಷೆ

ಇಸ್ಲಾಮಾಬಾದ್,ಜ.30-ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಮಾಜಿ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರಿಗೆ ಸೈಫರ್ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪಾಕಿಸ್ತಾನದ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದು, ಪಿಟಿಐ ರಾಜಕೀಯ ಪಕ್ಷದ ಸಂಸ್ಥಾಪಕರೂ ಆಗಿರುವ ಇಮ್ರಾನ್ ಖಾನ್ ಮತ್ತು ಖುರೇಷಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅಮೆರಿಕದ ರಾಯಭಾರಿ ಕಚೇರಿಯ ಗೌಪ್ಯ ರಾಜತಾಂತ್ರಿಕ ಕೇಬಲ್ ವಿಷಯ ಬಹಿರಂಗಡಿಸಿರುವುದಕ್ಕೆ ಇಮ್ರಾನ್ ಖಾನ್ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆಯಡಿ ಸೈಫರ್ ಪ್ರಕರಣ ದಾಖಲಿಸಿ ತೀರ್ಪು ನೀಡಲಾಗಿದೆ. 70 ವರ್ಷದ ಇಮ್ರಾನ್ ಖಾನ್ ಅವರು ಈಗಾಗಲೇ ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದು, ಸದ್ಯ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

5 ಟ್ರಿಲಿಯನ್ ಡಾಲರ್ ಆರ್ಥಿಕತೆ ಅನ್ನೊದು ಜುಮ್ಲಾ : ಪ್ರಿಯಾಂಕಾ

ಪಾಕಿಸ್ತಾನ್ ತೆಹ್ರಿಕ್-ಎ-ಇನ್‍ಸಾಫ್ ರಾಜಕೀಯ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿರುವ ಖಾನ್ ವಿರುದ್ಧ ಸೈಫರ್ ಪ್ರಕರಣದಲ್ಲಿ ಅಧಿಕೃತ ರಹಸ್ಯ ಕಾಯ್ದೆ 1923ರ ಸೆಕ್ಷನ್ 5ರಡಿ ಎಫ್‍ಐಆರ್ ದಾಖಲಾಗಿತ್ತು. ಅವರ ವಿರುದ್ದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ತನಿಖೆ ನಡೆಸಿತ್ತು. ಸೈಫರ್(ವರ್ಗೀಕೃತ ರಾಜತಾಂತ್ರಿಕ ದಾಖಲೆ) ದುರುಪಯೋಗದಲ್ಲಿ ಇಮ್ರಾನ್ ಖಾನ್ ಅವರು ಉದ್ದಶಪೂರ್ವಕವಾಗಿ ಭಾಗಿಯಾಗಿರುವುದು ತನಿಖೆಯಲ್ಲಿ ಕಂಡುಬಂದ ನಂತರ ಎಫ್‍ಐಎಯ ಭಯೋತ್ಪಾದನಾ ನಿಗ್ರಹ ವಿಭಾಗವು ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿತ್ತು.

RELATED ARTICLES

Latest News