ಕರಾಚಿ,ಫೆ.8- ಭಾರತ ಮತ್ತು ಅದರ ಗುಪ್ತಚರ ಸಂಸ್ಥೆ ಪಾಕಿಸ್ತಾನದಲ್ಲಿ ಕಳೆದ ಕೆಲವು ವರ್ಷಗಳಿಂದ ಹಲವಾರು ಪಾಕಿಸ್ತಾನಿ ಭಯೋತ್ಪಾದಕರನ್ನು ಕೊಂದಿದೆ ಎಂದು ಜಮಾತ್ ಇ ಇಸ್ಲಾಮಿ ಪಾಕಿಸ್ತಾನ್ ಮುಖ್ಯಸ್ಥ ಹಫೀಜ್ ನಯೀಮ್ ಉರ್ ರೆಹಮಾನ್ ಹೇಳಿದ್ದಾರೆ.
ಲಾಹೋರ್ನಲ್ಲಿ ನಡೆದ ಕಾರ್ಯ ಕ್ರಮವೊಂದರಲ್ಲಿ ಮಾತನಾಡಿದ ಅವರು, ಕಾಶೀರ ಸ್ವಾತಂತ್ರ್ಯ ಚಳವಳಿಯು ಪಾಕಿಸ್ತಾನವನ್ನು ಪೂರ್ಣಗೊಳಿಸುವುದರ ಭಾಗವಾಗಿದೆ ಎಂದು ಹೇಳಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಯ ಹಲವು ನಾಯಕರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆಗಳು ವರದಿಯಾಗಿದ್ದವು.
ಅಪರಿಚಿತರ ಗುಂಡಿಗೆ ಹಲವು ಉಗ್ರಗಾಮಿ ಸಂಘಟನೆಗಳ ನಾಯಕರು ಬಲಿಯಾಗಿದ್ದು ಇದಕ್ಕೆ ಭಾರತವೇ ಕಾರಣ ಎನ್ನುವ ಮಾತು ಕೇಳಿಬಂದಿತ್ತು. ಹಫೀಜ್ ನಯೀಮ್ ಲಾಹೋರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತ ಮತ್ತು ಅದರ ಗುಪ್ತಚರ ಸಂಸ್ಥೆ ಪಾಕಿಸ್ತಾನದಲ್ಲಿ ಕೆಲವು ವರ್ಷಗಳಿಂದ ಹಲವಾರು ಪಾಕಿಸ್ತಾನಿ ಭಯೋತ್ಪಾದಕರನ್ನು ಕೊಂದಿರುವುದು ಪಾಕಿಸ್ತಾನಕ್ಕೆ ನಾಚಿಕೆಗೇಡು ಮತ್ತು ಮುಜುಗರದ ಸಂಗತಿಯಾಗಿದೆ. ಆದರೆ ಈ ಘಟನೆಗೆ ಪಾಕ್ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥರು ಭಾರತದೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದರು ಎಂದೂ ನಯೀಮ್ ಹೇಳಿಕೊಂಡಿದ್ದಾರೆ.
ಕಾಶೀರ ಸ್ವಾತಂತ್ರ್ಯ ಚಳವಳಿಯು ಪಾಕಿಸ್ತಾನವನ್ನು ಪೂರ್ಣಗೊಳಿಸುವುದರ ಭಾಗವಾಗಿದೆ ಎಂದು ಹಫೀಜ್ ನಯೀಮ್ ಉರ್ ರೆಹಮಾನ್ ಹೇಳಿದ್ದಾರೆ. ಆದರೆ, ಕಾಶೀರವು ಪಾಕಿಸ್ತಾನದ ರಕ್ತನಾಳವಾಗಿದ್ದು, ನಾವು ಅದನ್ನು ಸಾಮ್ರಾಜ್ಯಶಾಹಿ ಹಿಂದೂಗಳ ಕೈಯಲ್ಲಿ ಇಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಫೀಜ್ ನಯೀಮ್ ಉರ್ ರೆಹಮಾನ್ ನೇತೃತ್ವದಲ್ಲಿ ಕಾಶೀರಿಗಳೊಂದಿಗೆ ಒಗ್ಗಟ್ಟು
ಎಂದು ಲಾಹೋರ್ನಲ್ಲಿ ಒಂದು ರ್ಯಾಲಿಯನ್ನು ನಡೆಸಲಾಯಿತು. ಈ ರ್ಯಾಲಿಯಲ್ಲಿ ಕಾಶೀರದ ಸ್ವಾತಂತ್ರ್ಯ ಹೋರಾಟಕ್ಕಾಗಿ ಕಾಶೀರಿಗಳು ತ್ಯಾಗ ಮಾಡುತ್ತಿದ್ದಾರೆ ಎಂದು ಹೇಳಿದರು.ವಿಶ್ವಸಂಸ್ಥೆ ವಿರುದ್ಧ ಕಿಡಿ: ಪರಿ ಸ್ಥಿತಿ ಏನೇ ಇರಲಿ, ಪಾಕಿಸ್ತಾನ ರಾಷ್ಟ್ರವು ಕಾಶೀರದ ಜನರೊಂದಿಗೆ ನಿಲ್ಲುತ್ತದೆ ಎಂದು ನಯೀಮ್ ಹೇಳಿದರು. ಅಲ್ಲದೆ ಕಾಶೀರದ ಬಗ್ಗೆ ವಿಶ್ವಸಂಸ್ಥೆಯು ತನ್ನ ನಿರ್ಣಯವನ್ನು ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ.
ಕಾಶೀರ ವಿವಾದದ ಪರಿಹಾರಕ್ಕೆ ಪಾಕಿಸ್ತಾನ ಸರ್ಕಾರ ಪ್ರಭಾವಶಾಲಿ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದರು. ಕಾಶೀರದ ಆಲ್ ಪಾರ್ಟಿಸ್ ಹುರಿಯತ್ ಕಾನ್ಫರೆನ್‌್ಸ ನಾಯಕರಿಗೆ ಗೌರವ ಸಲ್ಲಿಸಿದ ನಯೀಮ್ ನಾಯಕರು ಭಾರತದ ಮುಂದೆ ಹೇಳಲಾಗದಷ್ಟು ನಿರುತ್ತರರಾಗಿದ್ದಾರೆ ಎಂದು ಹೇಳಿದ್ದಾರೆ.
ದೀರ್ಘಕಾಲದ ಕಾಶೀರ ಪರಿಸ್ಥಿತಿಯನ್ನು ಪರಿಹರಿಸಲು ಅರ್ಥಪೂರ್ಣ ಮಾತುಕತೆಯನ್ನು ಪ್ರಾರಂಭಿಸಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕರೆ ನೀಡಿದ ನಂತರವೂ ಈ ಬೆಳವಣಿಗೆಗಳು ಸಂಭವಿಸಿವೆ. ಈ ನಡುವೆ, ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಬುಧವಾರ ಪಿಒಕೆಗೆ ಭೇಟಿ ನೀಡಿ ಕಾಶೀರವು ಒಂದು ದಿನ ಬೇರೆ ದೇಶದ ಭಾಗವಾಗಲಿದೆ ಎಂದು ಭರವಸೆ ನೀಡಿದ್ದರು.