ಇಸ್ಲಾಮಾಬಾದ್,ಜೂ.21- ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಸಂಘರ್ಷದ ಸಮಯದಲ್ಲಿ ನಿರ್ಣಾಯಕ ರಾಜತಾಂತ್ರಿಕ ಹಸ್ತಕ್ಷೇಪ ಮತ್ತು ಪ್ರಮುಖ ನಾಯಕತ್ವ ವನ್ನು ಉಲ್ಲೇಖಿಸಿ, ಪಾಕಿಸ್ತಾನ ಸರ್ಕಾರವು 2026 ರ ನೊಬೆಲ್ ಶಾಂತಿ ಪ್ರಶಸ್ತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಔಪಚಾರಿಕವಾಗಿ ನಾಮನಿರ್ದೇಶನ ಮಾಡಿದೆ.
ಭಾರತ- ಪಾಕ್ ಸಂಘರ್ಷದ ಬಳಿಕ ಅಮೆರಿಕ ಭೇಟಿ ನೀಡಿದ ಪಾಕಿಸ್ತಾನ ಸೇನೆಯ ಮುಖ್ಯಸ್ಥ ಅಸೀಮ್ ಮುನೀರ್ ಅವರಿಗೆ ಟ್ರಂಪ್ ಶ್ವೇತಭವನದಲ್ಲಿ ವಿಶೇಷ ಔತಣಕೂಟ ಆಯೋಜಿಸಿದ ಮರುದಿನವೇ ಈ ಅಚ್ಚರಿಯ ಹೇಳಿಕೆ ಹೊರಬಿದ್ದಿದೆ.
ಇತ್ತೀಚಿನ ಭಾರತ-ಪಾಕಿಸ್ತಾನ ಬಿಕ್ಕಟ್ಟಿನ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಅವರ ನಿರ್ಣಾಯಕ ರಾಜತಾಂತ್ರಿಕ ಹಸ್ತಕ್ಷೇಪ ಮತ್ತು ಪ್ರಮುಖ ನಾಯಕತ್ವವನ್ನು ಗುರುತಿಸಿ 2026 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಸಾಮಾಜಿಕ ಜಾಲ ತಾಣ ಎ್ಸ್ ನಲ್ಲಿ ಪ್ಟೋ್ ಮಾಡಿದೆ.
ಎರಡು ಪರಮಾಣು ಶಕ್ತಿಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ತಾನು ಸಹಾಯ ಮಾಡಿದ್ದೇನೆ ಎಂದು ಟ್ರಂಪ್ ಬಹಳ ಹಿಂದಿನಿಂದಲೂ ಹೇಳಿಕೊಂಡಿದ್ದಾರೆ, ಆದರೆ ಭಾರತ ಸರ್ಕಾರ ಈ ಹೇಳಿಕೆಯನ್ನು ಹಲವಾರು ಬಾರಿ ತಳ್ಳಿಹಾಕಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ಸಂದರ್ಭದಲ್ಲಿ ರಾಜತಾಂತ್ರಿಕ ಮಧ್ಯಪ್ರವೇಶ ಜಮು ಕಾಶೀರದ ಪಹಲ್ಗಾಮ್ ನಲ್ಲಿ 26 ಮಂದಿ ಪ್ರವಾಸಿಗರನ್ನು ಉಗ್ರರು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿ ಹಲವು ದಿನಗಳ ಕಾಲ ಗಡಿಯಾಚೆಗೆ ಶೆಲ್ ದಾಳಿ ನಿರಂತರವಾಗಿ ನಡೆಯುತ್ತಿತ್ತು. ಈ ಹಂತದಲ್ಲಿ ಎರಡೂ ದೇಶಗಳು ದಿಢೀರನೇ ಶಾಂತಿ ಒಪ್ಪಂದಕ್ಕೆ ಬಂದಿದ್ದವು.
ಪಾಕಿಸ್ತಾನ ಸರ್ಕಾರ 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಜೆ.ಟ್ರಂಪ್ ಅವರ ಹೆಸರನ್ನು ಶಿಾರಸ್ಸು ಮಾಡುತ್ತಿದೆ. ಭಾರತ-ಪಾಕ್ ಸಂಘರ್ಷದ ಸಂದರ್ಭದಲ್ಲಿ ಟ್ರಂಪ್ ವಹಿಸಿದ ಪ್ರಮುಖ ರಾಜತಾಂತ್ರಿಕ ಹಸ್ತಕ್ಷೇಪ ಮತ್ತು ಪರಿವರ್ತನಾಶೀಲ ನಾಯಕತ್ವ ಪ್ರದರ್ಶಿಸಿದ್ದನ್ನು ಗುರುತಿಸಿ ಪಾಕಿಸ್ತಾನ ಸರ್ಕಾರವು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಜೆ.ಟ್ರಂಪ್ ಅವರ ಹೆಸರನ್ನು ಅಧಿಕೃತವಾಗಿ ಶಿಾರಸ್ಸು ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದೆ.
ಟ್ರಂಪ್ ಮತ್ತು ಮುನೀರ್ ನಡುವೆ ಔತಣಕೂಟದ ಸಂದರ್ಭದಲ್ಲಿ ಯಾವ ನಿರ್ದಿಷ್ಟ ಮಾತುಕತೆಗಳು ನಡೆದಿವೆ ಎನ್ನುವುದನ್ನು ಬಹಿರಂಗಪಡಿಸಿಲ್ಲ ಎಂದು ಜಿಯೊನ್ಯೂಸ್ ವರದಿ ಮಾಡಿದೆ.ಎರಡು ದೇಶಗಳ ನಡುವೆ ನಡೆಯಬಹುದಾಗಿದ್ದ ಅಣ್ವಸ ಸಮರವನ್ನು ತಪ್ಪಿಸಿದ ಕೀರ್ತಿ ಟ್ರಂಪ್ ಅವರಿಗೆ ಸಲ್ಲುತ್ತದೆ.
ಆದ್ದರಿಂದ ಅವರ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಶಿಫಾರಸ್ಸು ಮಾಡುವಂತೆ ಫೀಲ್ಡ್ ಮಾರ್ಷಲ್ ಮುನೀರ್ ಕರೆ ನೀಡಿದ್ದರು. ಇತ್ತೀಚೆಗೆ ಶ್ವೇತ ಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಮುನೀರ್ ಅವರಿಗೆ ಔತಣಕೂಟ ನೀಡಿದ್ದರು. ಇದನ್ನು ಪಾಕಿಸ್ತಾನವು ರಾಜ ತಾಂತ್ರಿಕವಾಗಿ ದೊಡ್ಡಮಟ್ಟಿನ ಯಶಸ್ಸು ಎಂದು ಬಣ್ಣಿಸಿದೆ.
ನೊಬೆಲ್ ಶಾಂತಿ ಪ್ರಶಸ್ತಿಯನ್ನು ವಾರ್ಷಿಕವಾಗಿ ನಾರ್ವೇಜಿಯನ್ ನೊಬೆಲ್ ಸಮಿತಿಯು ನೀಡುತ್ತದೆ, ಇದು ಶಾಂತಿಯನ್ನು ಉತ್ತೇಜಿಸಲು ಮತ್ತು ಸಂಘರ್ಷಗಳನ್ನು ಪರಿಹರಿಸಲು ಅವರ ಪ್ರಯತ್ನಗಳ ಆಧಾರದ ಮೇಲೆ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡುತ್ತದೆ. ಟ್ರಂಪ್ ಅವರ ಉಮೇದುವಾರಿಕೆಯ ಬಗ್ಗೆ ಸಮಿತಿಯು ಎಂದಿಗೂ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ.
- 2ನೇ WFFYS ಕರ್ನಾಟಕ ಯೋಗಾಸನ ಕ್ರೀಡಾ ಚಾಂಪಿಯನ್ಶಿಪ್ 2025 ಅದ್ಧೂರಿ ಯಶಸ್ಸು
- ನನಗೆ ಯಾವ ಅಧಿಕಾರವೂ ಬೇಡ, ಐಶ್ವರ್ಯವೂ ಬೇಡ, ಜನರ ಪ್ರೀತಿ ಸಾಕು : ಕೆ.ಎನ್. ರಾಜಣ್ಣ
- ಅಕ್ರಮ ಗಣಿಗಾರಿಕೆ : ಸಿಎಂಗೆ ಸಚಿವ ಎಚ್.ಕೆ.ಪಾಟೀಲ್ ಪತ್ರ
- ಜು.1 ರಿಂದ ಅವಧಿ ಮೀರಿದ ವಾಹನಗಳಿಗೆ ದೆಹಲಿಯಲ್ಲಿ ಸಿಗಲ್ಲ ಇಂಧನ
- ಮದ್ಯ ಮಾರಾಟದ ಲೈಸೆನ್ಸ್ ನವೀಕರಣ ಶುಲ್ಕ ಹೆಚ್ಚಳ ವಾಪಸ್ಸಿಗೆ ಆಗ್ರಹ