Monday, May 5, 2025
Homeಅಂತಾರಾಷ್ಟ್ರೀಯ | Internationalಭಾರತ ದಾಳಿ ಮಾಡಿದರೆ ಪ್ರತಿದಾಳಿ ಮಾಡುವಂತೆ ಪಾಕ್ ಸೇನೆಗೆ ರಾಜಕೀಯ ಪಕ್ಷಗಳ ಬೆಂಬಲ

ಭಾರತ ದಾಳಿ ಮಾಡಿದರೆ ಪ್ರತಿದಾಳಿ ಮಾಡುವಂತೆ ಪಾಕ್ ಸೇನೆಗೆ ರಾಜಕೀಯ ಪಕ್ಷಗಳ ಬೆಂಬಲ

Pakistan political parties to stand by armed forces amid India, Pak tensions

ಇಸ್ಲಾಮಾಬಾದ್, ಮೇ 5- ಪಹಲ್ಲಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತದೊಂದಿಗಿನ ಉದ್ವಿಗ್ನತೆಯ ಬಗ್ಗೆ ಪಾಕಿಸ್ತಾನದ ನಾಗರಿಕ ಮತ್ತು ಮಿಲಿಟರಿ ನಾಯಕತ್ವವು ದೇಶದ ರಾಜಕೀಯ ಪಕ್ಷಗಳಿಗೆ ವಿವರಿಸಿದೆ.

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಕ್-ಇ-ಇನ್ಸಾ ಫ್ ಪಕ್ಷವನ್ನು ಹೊರತುಪಡಿಸಿ ಎಲ್ಲಾ ರಾಜಕೀಯ ಪಕ್ಷಗಳು ನಿನ್ನೆ ನಡೆದ ಇನ್-ಕ್ಯಾಮೆರಾ ಬೀಫಿಂಗ್ನಲ್ಲಿ ಭಾಗವಹಿಸಿದ್ದವು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಭಾರತವು ಯಾವುದೇ ದುಷ್ಕೃತ್ಯಕ್ಕೆ ಮುಂದಾದರೆ ದೃಢವಾದ ಪ್ರತಿಕ್ರಿಯೆ ನೀಡುವುದಾಗಿ ರಾಜಕೀಯ ನಾಯಕರು ಪ್ರತಿಜ್ಞೆ ಮಾಡಿದ್ದಾರೆ ಎಂದು ಬ್ರಿಫಿಂಗ್‌ಗೆ ಸಂಬಂಧಿಸಿದ ಮೂಲವನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಎಸ್‌ಪಿಆರ್) ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌಧರಿ ಮತ್ತು ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್ ಈ ಮಾಹಿತಿ ನೀಡಿದ್ದಾರೆ.

ಪ್ರಾದೇಶಿಕ ಶಾಂತಿಯನ್ನು ಹಾಳುಮಾಡುವ ಭಾರತದ ಯಾವುದೇ ಪ್ರಯತ್ನವನ್ನು ವಿಫಲಗೊಳಿಸಲು ಸಶಸ್ತ್ರ ಪಡೆಗಳೊಂದಿಗೆ ನಿಂತಿದ್ದೇವೆ ಎಂದು ರಾಜಕೀಯ ಪಕ್ಷಗಳು ಅಭಿಪ್ರಾಯಪಟ್ಟಿವೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ನಾಯಕರಾದ ರಾಜಾ ಪರ್ವೇಜ್ ಅಶ್ರಫ್, ಖಮರ್ ಜಮಾನ್ ಕೈರಾ ಮತ್ತು ಶಾಜಿಯಾ ಮರಿ : ಪಿಎಂಎಲ್-ಎನ್ನ ಬ್ಯಾರಿಸ್ಟರ್ ಅಕೀಲ್ ಮತ್ತು ತಾರಿಕ್ ಫಜಲ್ ಚೌಧರಿ, ತಲ್ಲಾಲ್ ಚೌಧರಿ, ಪ್ರಧಾನಿ ಸಹಾಯಕ ಪರ್ವೇಜ್ ಖಟ್ಟಕ್, ಎಂಕ್ಯೂಎಂ-ಪಿಯ ಫಾರೂಕ್ ಸತ್ತಾರ್ ಮತ್ತು ಕಾಶ್ಮೀರಿ ನಾಯಕ ಶಾ ಗುಲಾಮ್ ಖಾದಿರ್ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು. |

RELATED ARTICLES

Latest News