Saturday, May 24, 2025
Homeರಾಷ್ಟ್ರೀಯ | National'ಆಪರೇಷನ್ ಸಿಂಧೂರ್' ದಾಳಿಯಲ್ಲಿ ಪಾಕಿಸ್ತಾನದ 3.5 ಬಿಲಿಯನ್ ಡಾಲರ್‌ ಉಡೀಸ್

‘ಆಪರೇಷನ್ ಸಿಂಧೂರ್’ ದಾಳಿಯಲ್ಲಿ ಪಾಕಿಸ್ತಾನದ 3.5 ಬಿಲಿಯನ್ ಡಾಲರ್‌ ಉಡೀಸ್

Pakistan suffered losses of 1.12 billion dollars due to destruction of F-16, HQ-9, C-130

ಬೆಂಗಳೂರು, ಮೇ24- ಭಾರತದ ಜೊತೆ ತಂಟೆ ಮಾಡಿದ ಪಾಪಿ ಪಾಕಿಸ್ತಾನ ತನ್ನ ವಾಯುನೆಲೆ ಹಾಗೂ ಯುದ್ಧೋಪಕರಣಗಳನ್ನು ಕಳೆದುಕೊಂಡು ಭಾರೀ ಪ್ರಮಾಣದ ನಷ್ಟ ಅನುಭವಿಸಿದೆ. ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಆಗಿದ್ದ ಸತ್ಯಂ ಕುಶ್ವಾಹ ಅವರು ಬಿಡುಗಡೆ ಮಾಡಿರುವ ಸ್ಥಳೀಯ ಗುಪ್ತಚರ ಮಾಹಿತಿ, ವಿಶ್ವಾಸನೀಯ ಮೂಲಗಳು ಹಾಗೂ ಸೇನೆ ಬಿಡುಗಡೆ ಮಾಡಿರುವ ಸಾಕ್ಷ್ಯಗಳ ಆಧಾರದ ಮೇಲೆ ಪಾಕಿಸ್ತಾನ ಕಳೆದುಕೊಂಡ ಒಟ್ಟು ಮೊತ್ತ 3.5 ಬಿಲಿಯನ್ ಡಾಲರ್‌ಗೂ ಹೆಚ್ಚು ಎಂದು ವರದಿ ಮಾಡಿದ್ದಾರೆ.

ಆಪರೇಷನ್ ಸಿಂಧೂರ ಮೂಲಕ ಭಾರತೀಯ ಮೂರು ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ 3,35,732 ಬಿಲಿಯನ್ ಡಾಲರ್ ಕಳೆದುಕೊಂಡಿದೆ ಎಂದು ಅಂಕಿಅಂಶಗಳ ಮೂಲಕ ವಿಶ್ಲೇಷಿಸಿದ್ದಾರೆ.

ಮೊದಲನೆಯದಾಗಿ ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದ ಪಂಜಾಬ್ ವಲಯದ ಉಗ್ರರ ನೆಲೆಗಳು ಹಾಗೂ ಕಾರ್ಯಸ್ಥಾನಗಳ ಮೇಲೆ 33 ನಿಮಿಷಗಳ ಮಿಂಚಿನ ದಾಳಿ ನಡೆಸಿದ ಭಾರತೀಯ ಸೇನೆ ನೂರಾರು ಭಯೋತ್ಪಾದಕರನ್ನು ಹೊಡೆದುರುಳಿಸುವುದರ ಜೊತೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವವನ್ನೇ ಬೆರಗುಗೊಳಿಸಿದೆ.

ಎಲೆಕ್ಟ್ರಾನಿಕ್ ಗುಪ್ತಚರ ಉಪಗ್ರಹ ಚಿತ್ರಣ, ಐಎಸ್‌ಆರ್ ದತ್ತಾಂಶ ಮೂಲಕ ಪರಿಶೀಲಿಸಿ ಪಾಕಿಸ್ತಾನದ ವಾಯುಪಡೆ ಅನುಭವಿಸಿದ ನಷ್ಟವನ್ನು ಎತ್ತಿ ತೋರಿಸಿದ್ದಾರೆ.
1.ನಾಲ್ಕು ಎಫ್ 16 ಬ್ಲಾಕ್ 52ಡಿ ಫೈಟರ್ ಜೆಟ್‌ಗಳು, ಅಂದಾಜು ಮೊತ್ತ ಪ್ರತಿ ಸಮರ ವಿಮಾನಕ್ಕೂ 87.38 ಮಿಲಿಯನ್ ಡಾಲರ್
2.ಸ್ಯಾಬ್2000 ಎಂಐ ಎಇಡಬ್ಲ್ಯು ಮತ್ತು ಸಿ-1 ಯಂತ್ರೋಪಕರಣ 93 ಮಿಲಿಯನ್ ಡಾಲರ್
3.ಇಂಧನ ತುಂಬುವ ಟ್ಯಾಂಕರ್- 35 ಮಿಲಿಯನ್ ಡಾಲರ್
4.ಎರಡು ಸಿಎಂ-400ಎಕೆಜಿ ಕ್ಷಿಪಣಿಗಳು- ಒಟ್ಟು 3.2 ಮಿಲಿಯನ್ ಡಾಲ‌ರ್
5.ಎರಡು ಶಾಹಿನ್ ಕ್ಷಿಪಣಿ- 8 ಮಿಲಿಯನ್ ಡಾಲರ್
6.ಆರು ಬೇರಕ್ತಾರ್ ಟಿಬಿ2 ಕ್ಷಿಪಣಿ- 36 ಮಿಲಿಯನ್ ಡಾಲರ್
ಒಟ್ಟಾರೆ ಪಾಕ್ ವಾಯುಸೇನೆಯು ಸುಮಾರು 5.24 ಮಿಲಿಯನ್ ಡಾಲ‌ರ್ ನಷ್ಟದ ಹೊಡೆತ ಅನುಭವಿಸಿದೆ.
ಇದಲ್ಲದೆ ಸುಮಾರು 13ಕ್ಕೂ ಹೆಚ್ಚು ವಾಯುನೆಲೆಗಳು ಹಾನಿಗೊಂಡಿದ್ದು, ಅಲ್ಲಿ ಭಾರೀ ಪ್ರಮಾಣದ ಮೂಲಸೌಕರ್ಯ ನಾಶಗೊಂಡಿದೆ. ಇದಲ್ಲದೆ ಬಹುತೇಕ ಗಡಿ ಭಾಗದಲ್ಲಿ ಭಾರತದ ಹಲವು
-ನಗರಗಳನ್ನು ಟಾರ್ಗೆಟ್ ಮಾಡಿ ಇರಿಸಿದ್ದಂತಹ ಯುದ್ಧೋಪಕರಣಗಳು ಭಾರೀ ಪ್ರಮಾಣದಲ್ಲಿ ಹಾನಿಗೊಂಡಿದೆ.
ಇದಲ್ಲದೆ ಟರ್ಕಿ ಸೇರಿದಂತೆ ಚೀನಾ ನಿರ್ಮಿತ ಡೋಣ್‌ ಗಳು ಮತ್ತು ಶೆಲ್‌ ಗಳು ಭಾರೀ ಪ್ರಮಾಣದಲ್ಲಿ ಬಳಸಲಾಗಿದ್ದು, ಇದು ಬಹುಕೋಟಿ ನಷ್ಟ ಎಂದು ಹೇಳಿದೆ.
ಭಾರತ ತನ್ನ ವಾಯು ಸಾಮರ್ಥ್ಯವನ್ನು ಪ್ರದರ್ಶಿಸುವ ವೇಳೆ ಬ್ರಹ್ಮಸ್, ಆಕಾಶ್ ಸೇರಿದಂತೆ ಹಲವು ಕ್ಷಿಪಣಿಗಳನ್ನು ಬಳಸಿದ್ದು, ಇದಲ್ಲದೆ ವಾಯು ಸುರಕ್ಷಾ ಸಾಧನಗಳನ್ನು ಬಳಸಿಕೊಂಡು ಪಾಕ್‌ನ ಆಕ್ರಮಣವನ್ನು ಬಗ್ಗು ಬಡಿಯಲಾಗಿದೆ.
ಒಟ್ಟಾರೆಯಾಗಿ ಸಮರ ವಿಮಾನಗಳು, ವಾಯು ಸುರಕ್ಷಾ ಸಾಧನಗಳು, ಹಲವು ಶಸ್ತ್ರಾಸ್ತ್ರಗಳು ಸೇರಿದಂತೆ ಸೇನಾ ಪಡೆಯ ಹಲವಾರು ಮೂಲ ಸೌಕರ್ಯಗಳು ನಾಶಗೊಂಡಿದ್ದು, ಒಟ್ಟಾರೆ ಪಾಕಿಸ್ತಾನ 3.35 -ಬಿಲಿಯನ್ ಡಾಲರ್‌ಗೂ ಹೆಚ್ಚು ನಷ್ಟ ಅನುಭವಿಸಿ ಯುದ್ಧ ಸಾಮಗ್ರಿಗಳನ್ನು ಕಳೆದುಕೊಂಡಿದೆ.
ಪಾಕಿಸ್ತಾನದ ಚೇತರಿಕೆಗೆ ಇನ್ನು ಹಲವು ತಿಂಗಳುಗಳೇ ಹಿಡಿಯಬಹುದಾಗಿದ್ದು, ಭಾರತ ಸೇನಾ ಸಾಮರ್ಥ್ಯವನ್ನು ಕೆಣಕಿ ಭಾರೀ ಹೊಡೆತ ತಿಂದಿದೆ.

RELATED ARTICLES

Latest News