ಜಮ್ಮು, ನ. 22 (ಪಿಟಿಐ)- ದೇಶದ ಗಡಿ ಭಾಗದಲ್ಲಿ ಮತ್ತೆ ಪಾಕ್ ನಿರ್ಮಿತ ಡ್ರೋನ್ ಹಾರಾಟ ಕಂಡುಬಂದಿದೆ. ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರ ರಾಷ್ಟ್ರೀಯ ಗಡಿಯ ಲ್ಲಿರುವ ಒಂದು ಹಳ್ಳಿಯ ಮೇಲೆ ಪಾಕಿಸ್ತಾನದ ಡ್ರೋನ್ ಕಾಣಿಸಿಕೊಂಡಿದೆ ಎಂದು ಅಧಿ ಕಾರಿಗಳು ತಿಳಿಸಿದ್ದಾರೆ.
ತಡರಾತ್ರಿ ಪಾಕಿಸ್ತಾನದ ಚಕ್ ಭುರಾ ಪೋಸ್ಟ್‌ನಿಂದ ಬರುತ್ತಿದ್ದ ಡ್ರೋನ್ ಘಗ್ವಾಲ್ ಪ್ರದೇಶದ ರೀಗಲ್ ಗ್ರಾಮದ ಮೇಲೆ ಕೆಲವು ನಿಮಿಷಗಳ ಕಾಲ ಸುಳಿದಾಡಿದ ನಂತರ ಗಡಿಯ ಇನ್ನೊಂದು ಬದಿಗೆ ಮರಳಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾದಕ ವಸ್ತುಗಳು ಅಥವಾ ಶಸ್ತ್ರಾಸ್ತ್ರಗಳಂತಹ ಯಾವುದೇ ಪೇಲೋಡ್ ಅನ್ನು ವಾಯುದಾಳಿಯಿಂದ ಬೀಳಿಸಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಭದ್ರತಾ ಪಡೆಗಳು ಆ ಪ್ರದೇಶದಲ್ಲಿ ಶೋಧ ನಡೆಸಿವೆ ಎಂದು ಅವರು ಹೇಳಿದರು.
