Saturday, October 19, 2024
Homeರಾಷ್ಟ್ರೀಯ | Nationalಗಡಿಯಲ್ಲಿ ಪಾಕ್ ನುಸುಳುಕೋರನ ಬಂಧನ

ಗಡಿಯಲ್ಲಿ ಪಾಕ್ ನುಸುಳುಕೋರನ ಬಂಧನ

Pakistani intruder arrested by Indian Army at Line of Control

ಜಮ್ಮು, ಅ. 9 (ಪಿಟಿಐ) ಇಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿ 31 ವರ್ಷದ ಪಾಕಿಸ್ತಾನಿ ಒಳನುಸುಳು ಕೋರನನ್ನು ಗಡಿ ಭದ್ರತಾ ಪಡೆ (ಬಿ ಎಸ್‌ ಎಫ್ ) ಬಂಧಿಸಿವೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ಪಂಜಾಬ್‌ನ ಸರ್ಗೋಧಾ ನಿವಾಸಿ ಶಾಹಿದ್ ಇಮ್ರಾನ್ ನಿನ್ನೆ ಸಂಜೆ ಗಡಿಯಾಚೆಯಿಂದ ಈ ಭಾಗಕ್ಕೆ ನುಸುಳಿದ ನಂತರ ಮಕ್ವಾಲ್‌ನಿಂದ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಮ್ರಾನ್ ಬಳಿಯಿಂದ ಎರಡು ಚಾಕುಗಳು, ಒಂದು ಸ್ಮಾರ್ಟ್ ವಾಚ್, ಸಿಗರೇಟ್ ಪ್ಯಾಕೆಟ್ , ಖಾಲಿ ಸಿಮ್ ಕಾರ್ಡ್ ಮತ್ತು ಪಾಕಿಸ್ತಾನದ ಕರೆನ್ಸಿಯ 5 ರೂಪಾಯಿ ನಾಣ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ವಿಚಾರಣೆ ವೇಳೆ ಒಳನುಗ್ಗಿದ ವ್ಯಕ್ತಿ ತಾನು ಅಚಾತುರ್ಯದಿಂದ ಗಡಿ ದಾಟಿರುವುದಾಗಿ ಹೇಳಿಕೊಂಡಿದ್ದಾನೆ.

ಪ್ರಾಥಮಿಕ ವಿಚಾರಣೆಯ ನಂತರ ಮುಂದಿನ ಅಗತ್ಯ ಕ್ರಮಕ್ಕಾಗಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News