Sunday, June 1, 2025
Homeರಾಷ್ಟ್ರೀಯ | Nationalರಾಹುಲ್‌ ಗಾಂಧಿ , ರೇವಂತ್‌ ರೆಡ್ಡಿ ಪಾಕಿಸ್ತಾನದ ನಿರೂಪಣೆಯ ಗಿಳಿಗಳಿದ್ದಂತೆ : ಬಿಜೆಪಿ

ರಾಹುಲ್‌ ಗಾಂಧಿ , ರೇವಂತ್‌ ರೆಡ್ಡಿ ಪಾಕಿಸ್ತಾನದ ನಿರೂಪಣೆಯ ಗಿಳಿಗಳಿದ್ದಂತೆ : ಬಿಜೆಪಿ

Pak's Babbar, Hindustan's Gabbar: BJP slams Revanth Reddy over Rafale remark

ನವದೆಹಲಿ, ಮೇ 30- ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಹಾಗೂ ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಅವರು ಪಾಕಿಸ್ತಾನ ನಿರೂಪಣೆಯ ಗಿಳಿಗಳಿದ್ದಂತೆ ಎಂದು ಬಿಜೆಪಿ ಲೇವಡಿ ಮಾಡಿದೆ. ರಫೇಲ್‌ ಯುದ್ಧ ವಿಮಾನಗಳ ಕುರಿತಾದ ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ ಅವರ ಹೇಳಿಕೆಗಳನ್ನು ಬಿಜೆಪಿ ನಾಯಕರಾದ ಅಮಿತ್‌ ಮಾಳವೀಯ ಮತ್ತು ಸಂಬಿತ್‌ ಪಾತ್ರ ಅವರು ಖಂಡಿಸಿದ್ದಾರೆ.

ಅವರಿಬ್ಬರು ಪಾಕಿಸ್ತಾನದ ನಿರೂಪಣೆಯನ್ನು ಗಿಣಿಯಂತೆ ಹೇಳುತ್ತಿದ್ದಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳನ್ನು ಪ್ರಶ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್‌‍ ದೇಶದೊಂದಿಗೆ ಮಾತ್ರ ನಿಲ್ಲುವುದಾಗಿ ಹೇಳಿಕೊಳ್ಳುತ್ತದೆ, ಆದರೆ ಅದರ ನಾಯಕರು ನಿರಂತರವಾಗಿ ಮಿಲಿಟರಿಯ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌‍ ಪಕ್ಷದಲ್ಲಿ ಸಬೂತ್‌ ಗ್ಯಾಂಗ್‌ ಇದೆ ಎಂದು ಭಾರತದ ಮಿಲಿಟರಿ ಕ್ರಮದ ಪುರಾವೆಗಾಗಿ ಕಾಂಗ್ರೆಸ್‌‍ ನಾಯಕರಿಂದ ಪದೇ ಪದೇ ಬೇಡಿಕೆಗಳನ್ನು ಉಲ್ಲೇಖಿಸಿ ಅವರು ಈ ಮಾತು ಹೇಳಿದರು.

ಎಷ್ಟು ಪಾಕಿಸ್ತಾನಿ ವಾಯುನೆಲೆಗಳನ್ನು ನಾಶಪಡಿಸಲಾಗಿದೆ ಅಥವಾ ಎಷ್ಟು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಕೇಳುವ ಬದಲು, ಎಷ್ಟು ಭಾರತೀಯ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿದುಕೊಳ್ಳುವುದರಲ್ಲಿ ರಾಹುಲ್‌ ಗಾಂಧಿ ಆಸಕ್ತಿ ಹೊಂದಿದ್ದಾರೆ ಎಂದು ಅವರು ಹೇಳಿದರು.

ಯೇ ಜೋ ಪಾಕಿಸ್ತಾನ್‌ ಕೆ ಬಬ್ಬರ್‌ ಹೈ, ವೋ ಹಿಂದೂಸ್ತಾನ್‌ ಕೆ ಗಬ್ಬರ್‌ ಹೈ ಎಂದು ಹೇಳಿದ ಅವರು ಸೋನಿಯಾ ಗಾಂಧಿ ಹತ್ಯೆಗೀಡಾದ ಭಯೋತ್ಪಾದಕರಿಗಾಗಿ ಅಳುತ್ತಿದ್ದರು. 26/11 ರ ನಂತರ ರಾಹುಲ್‌ ಗಾಂಧಿ ಸಂಭ್ರಮಿಸಿದರು. ಈಗ, ರೇವಂತ್‌ ರೆಡ್ಡಿ, ರಾಹುಲ್‌ ಗಾಂಧಿ ಮತ್ತು ಜೈರಾಮ್‌ ರಮೇಶ್‌ ಅವರು ಎಷ್ಟು ಭಾರತೀಯ ವಿಮಾನಗಳು ಕಳೆದುಹೋಗಿವೆ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಭಾರತವು 9 ಭಯೋತ್ಪಾದಕ ಶಿಬಿರಗಳು ಮತ್ತು 11 ಪಾಕಿಸ್ತಾನಿ ವಾಯುನೆಲೆಗಳನ್ನು ನಾಶಪಡಿಸಿದೆ ಎಂದು ಪಾತ್ರಾ ಪ್ರತಿಪಾದಿಸಿದರು, ಇದಕ್ಕೆ ಸ್ಪಷ್ಟವಾದ
ಉಪಗ್ರಹ ಚಿತ್ರಗಳನ್ನು ಪುರಾವೆಯಾಗಿ ಪ್ರಸ್ತುತಪಡಿಸಲಾಗಿದೆ. ರಫೇಲ್‌ ಅಪಘಾತಕ್ಕೀಡಾಗಿದ್ದರೆ, ಅವಶೇಷಗಳು ಮತ್ತು ಪುರಾವೆಗಳು ಇರುತ್ತಿದ್ದವು. ಯಾವುದೂ ಇಲ್ಲ ಎಂದು ಅವರು ಅನುಮಾನವನ್ನು ಹರಡಿದ್ದಕ್ಕಾಗಿ ಕಾಂಗ್ರೆಸ್‌‍ಅನ್ನು ತರಾಟೆಗೆ ತೆಗೆದುಕೊಂಡರು.

RELATED ARTICLES

Latest News