Friday, November 22, 2024
Homeರಾಜಕೀಯ | Politicsಪರಮೇಶ್ವರ್ ಅವರೇ ಪಿಎಸ್‌‍ಐ ಸಾವಿನ ಬಗ್ಗೆ ಉತ್ತರ ಕೊಡಿ : ಕೇಂದ್ರ ಸಚಿವ ಕುಮಾರಸ್ವಾಮಿ ಆಗ್ರಹ

ಪರಮೇಶ್ವರ್ ಅವರೇ ಪಿಎಸ್‌‍ಐ ಸಾವಿನ ಬಗ್ಗೆ ಉತ್ತರ ಕೊಡಿ : ಕೇಂದ್ರ ಸಚಿವ ಕುಮಾರಸ್ವಾಮಿ ಆಗ್ರಹ

ಬೆಂಗಳೂರು, ಆ.3- ಯಾದಗಿರಿಯಲ್ಲಿ ನಿಮ ಇಲಾಖೆಯ ಪಿಎಸ್‌‍ಐ ಒಬ್ಬರು ಆತಹತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಉತ್ತರ ಕೊಡಿ ಎಂದು ಜೆಡಿಎಸ್‌‍ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರು ಗೃಹ ಸಚಿವ ಪರಮೇಶ್ವರ್‌ ಅವರನ್ನು ಒತ್ತಾಯಿಸಿದರು.

ಕಾಂಗ್ರೆಸ್‌‍ ಸರ್ಕಾರದ ಹಗರಣಗಳ ವಿರುದ್ಧ ಬಿಜೆಪಿ-ಜೆಡಿಎಸ್‌‍ ಹಮಿಕೊಂಡಿರುವ ಬೆಂಗಳೂರಿನಿಂದ ಮೈಸೂರಿನವರೆಗಿನ ಪಾದಯಾತ್ರೆಗೆ ಕೆಂಗೇರಿ ಬಳಿ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ ಸಮಾಜದ ಅಧಿಕಾರಿಯೊಬ್ಬ ಆತಹತ್ಯೆ ಮಾಡಿಕೊಂಡಿದ್ದಾರೆ. 25 ಲಕ್ಷ ರೂ. ಲಂಚಕೊಟ್ಟಿಲ್ಲ ಎಂದು ಹೇಳಿ ಆತಹತ್ಯೆ ಮಾಡಿಕೊಂಡಿರುವುದಾಗಿ ಅವರ ಪತ್ನಿ ಹೇಳುತ್ತಾರೆ.

ನೀವು ಬಾಬಾಸಾಹೇಬ್‌ ಅಂಬೇಡ್ಕರ್‌ ಅವರಿಗೆ ಕೊಡುವ ಗೌರವ ಇದೇನಾ? ನಿಮದೇ ಸಮಾಜದ ಪೊಲೀಸ್‌‍ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅದನ್ನು ತಡೆಯುವ ಶಕ್ತಿ ನಿಮಗಿಲ್ಲವೇ? ಎಂದು ವಾಗ್ದಾಳಿ ನಡೆಸಿದರು.

ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್‌ ಅವರು ಆತ್ಮಹತ್ಯೆಗೆ ಏಕೆ ಶರಣಾದರು? ಪೊಲೀಸ್‌‍ ಅಧಿಕಾರಿಗಳಿಗೆ ರಕ್ಷಣೆ ಕೊಡದ ಸರ್ಕಾರದಿಂದ ಹಿಂದುಳಿದ ವರ್ಗಗಳಿಗೆ ರಕ್ಷಣೆ ಕೊಡಲು ಸಾಧ್ಯವೇ? ಈಗಲಾದರೂ ಹಿಂದುಳಿದ ವರ್ಗಗಳ ಮುಖಂಡರು ತಿಳಿದುಕೊಳ್ಳಬೇಕು ಎಂದು ಟೀಕಿಸಿದರು.

ಜೈಲಿಗೆ ಹೋಗಲು ಸಿದ್ಧ ಎಂದು (ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌) ಅವರೇ ನಿನ್ನೆ ಹೇಳಿದ್ದಾರೆ. ರಾಜಕಾರಣಕ್ಕೆ ಬರುವ ಮುಂಚೆ ಅವರ ಆಸ್ತಿ ಏನಿತ್ತು ಎಂಬುದನ್ನು ಅವರ ಗುರುಗಳು ಸೋಷಿಯಲ್‌ ಮೀಡಿಯಾದಲ್ಲಿ ಹೇಳಿದ್ದಾರೆ.

ಬ್ಲಾಕ್‌ ಅಂಡ್‌ ವೈಟ್‌ ಟಿವಿ ಮತ್ತು ಡಿವಿಡಿ ಇಟ್ಟುಕೊಂಡು ದೊಡ್ಡಾಲಹಳ್ಳಿ ಮತ್ತು ಕೋಡಿಹಳ್ಳಿಯಲ್ಲಿ ಏನು ಪ್ರದರ್ಶನ ಮಾಡುತ್ತಿದ್ದರು, ಅದರಿಂದ ಹೇಗೆ ಹಣ ಸಂಪಾದನೆ ಮಾಡುತ್ತಿದ್ದರು ಎಂಬುದಾಗಿ ಹೇಳಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್‌‍ ಸರ್ಕಾರದ ರಾಜ್ಯದ ಆಳ್ವಿಕೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು, ಭ್ರಷ್ಟಾಚಾರ ಹಿಂದೆಂದೂ ಕಂಡಿರದಂತಹ ಸರ್ಕಾರ ಕಾಣುತ್ತಿದ್ದೇವೆ.

ಈ ಕೆಟ್ಟ ಕಾಂಗ್ರೆಸ್‌‍ ಜನವಿರೋಧಿ ಸರ್ಕಾರ ವಿರುದ್ಧ ತಾಯಿ ಕೆಂಪಮ ದೇವಿಗೆ ಪೂಜೆ ಸಲ್ಲಿಸಿದ್ದೇವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌‍. ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಮೈಸೂರಿಗೆ ಪಾದಯಾತ್ರೆ ಮಾಡುತ್ತಿದ್ದೇವೆ ಎಂದರು.

ದಾಖಲೆ ಬಿಡುಗಡೆ: ನಾಡಿನ ಜನತೆಯ ಅಭಿಪ್ರಾಯ ಪರವಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ನಮ್ಮ ಕಾರ್ಯಕ್ರಮ ತಡೆಯಲು ಕಾಂಗ್ರೆಸ್‌‍ ನಾಯಕರು ಬಿಡದಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ನನ್ನ ಪ್ರಶ್ನೆಗೆ ಬಿಡದಿ ರಾಮನಗರದಲ್ಲಿ ಉತ್ತರ ಕೊಡುತ್ತೇನೆ.

ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು ರಾಮನಗರಕ್ಕೆ ಬಂದ ನಂತರ ಎಷ್ಟು ಆಸ್ತಿ ಮಾಡಿದ್ದಾರೆ ಎಂದು ಕೇಳಿದ್ದಾರೆ. ಅದಕ್ಕೆ ನಾವು ಉತ್ತರ ಕೊಡುತ್ತೇವೆ. ನಾವು ಅವರದ್ದು ಎಷ್ಟಿದೆ ಅನ್ನೋದನ್ನು ಕೂಡಾ ಬಿಡುಗಡೆ ಮಾಡುತ್ತೇವೆ ಎಂದು ಅವರು ಹೇಳಿದರು. ನಾನು ಡಿಕೆಶಿ ಹಾಗೂ ಸಿಎಂ ಅವರ ದಾಖಲೆ ಪತ್ರಗಳನ್ನು ಕೇಂದ್ರಸರ್ಕಾರಕ್ಕೆ ಕೊಟ್ಟಿದ್ದೇನೆ. ನಮನ್ನು ಬಂಧನ ಮಾಡಲು ಬರುತ್ತಾರೆ ನಾವು ಬಂಧನಕ್ಕೂ ಸಿದ್ದವಿದ್ದೇವೆ ಎಂದು ಅವರೇ ಹೇಳಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

RELATED ARTICLES

Latest News