Tuesday, July 2, 2024
Homeರಾಷ್ಟ್ರೀಯಲೋಕಸಭೆ ಸ್ಪೀಕರ್ ಆಯ್ಕೆಗೆ ಮೂಡದ ಒಮ್ಮತ, ಇತಿಹಾಸದಲ್ಲೇ ಮೊದಲ ಬಾರಿಗೆ ನಾಳೆ ಚುನಾವಣೆ

ಲೋಕಸಭೆ ಸ್ಪೀಕರ್ ಆಯ್ಕೆಗೆ ಮೂಡದ ಒಮ್ಮತ, ಇತಿಹಾಸದಲ್ಲೇ ಮೊದಲ ಬಾರಿಗೆ ನಾಳೆ ಚುನಾವಣೆ

ನವದೆಹಲಿ, ಜೂ.25- ಇತಿಹಾಸದಲ್ಲೇ ಮೊದಲ ಬಾರಿಗೆ ಲೋಕಸಭೆಯ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯಲಿದೆ. ಸಾಮಾನ್ಯವಾಗಿ ಕಳೆದ 17 ಲೋಕಸಭಾ ಚುನಾವಣೆಯಲ್ಲಿ ಸ್ಪೀಕರ್ ಹುದ್ದೆಗೆ ಅವಿರೋಧವಾಗಿ ಆಯ್ಕೆ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿತ್ತು. ಆದರೆ ಇದೇ ಮೊದಲ ಬಾರಿಗೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತುಕತೆ ವಿಫಲವಾಗಿದ್ದರಿಂದ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ.

ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿ ಯಾಗಿ ಓಂಬಿರ್ಲಾ, ಕಾಂಗ್ರೆಸ್ ನೇತೃ ತ್ವದ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿ ಹಿರಿಯ ಸದಸ್ಯ ಕೆ.ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.ಬುಧವಾರ ಬೆಳಿಗ್ಗೆ 11 ಗಂಟೆಗೆ ಮತದಾನ ನಡೆಯಲಿದ್ದು, ಎನ್ಡಿಎ ಹಾಗೂ ಇಂಡಿಯಾ ಮೈತ್ರಿಕೂಟಕ್ಕೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ.

ಲೋಕಸಭೆಯ ಒಟ್ಟು 542 ಸದಸ್ಯಬಲದ ಪೈಕಿ ಎನ್ಡಿಎಗೆ 293 ಹಾಗೂ 12 ಪಕ್ಷೇತರ ಸದಸ್ಯರು ಬೆಂಬಲ ಸೂಚಿಸಿದ್ದು, ಒಟ್ಟು 305 ಸದಸ್ಯರನ್ನು ಹೊಂದಿದೆ. ಸ್ಪೀಕರ್ ಹುದ್ದೆಗೆ ಗೆಲ್ಲಲು 272 ಮತಗಳನ್ನು ಪಡೆಯಬೇಕು. ಈಗಿನ ಬಲಾಬಲದಲ್ಲಿ ಎನ್ಡಿಎ ಅಭ್ಯರ್ಥಿ ಗೆಲ್ಲುವ ಸಾಧ್ಯತೆಗಳು ನಿಚ್ಚಳವಾಗಿದೆ.

ಆದರೆ ರಾಜಕೀಯ ಚದುರಂಗದಾಟದಲ್ಲಿ ಅಸಾಧ್ಯವಾದುದು ಸಾಧ್ಯವಾಗುತ್ತದೆ ಎಂಬ ಮಾತು ಚಾಲ್ತಿಯಲ್ಲಿರುವುದರಿಂದ ಫಲಿತಾಂಶ ಬರುವವರೆಗೂ ಯಾರ ಚಿತ್ತ ಯಾರ ಕಡೆ ಎಂಬುದು ಹೇಳಲು ಸಾಧ್ಯವಿಲ್ಲ.

ಕಾಂಗ್ರೆಸ್ ಅಭ್ಯರ್ಥಿ ಕೆ.ಸುರೇಶ್ಗೆ ಇಂಡಿಯಾ ಮೈತ್ರಿಕೂಟ ಬೆಂಬಲ ಸೂಚಿಸಿದ್ದು, ಸದ್ಯ 237 ಸದಸ್ಯ ಬೆಂಬಲವನ್ನು ಹೊಂದಿದೆ. ಕೊನೆ ಕ್ಷಣದಲ್ಲಿ ಕಾಂಗ್ರೆಸ್ ನಿಲುವಿನಿಂದ ಬೇಸರಗೊಂಡಿರುವ ಟಿಎಂಸಿ ಚುನಾವಣೆಯಲ್ಲಿ ನಾವು ಕೈ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ. ಒಂದು ವೇಳೆ ಇದು ನಿಜವಾದಲ್ಲಿ ಎನ್ಡಿಎ ಅಭ್ಯರ್ಥಿಯ ಗೆಲುವಿನ ದಾರಿ ಇನ್ನಷ್ಟು ಸುಗಮವಾಗಲಿದೆ.

ಇದಕ್ಕೂ ಮುನ್ನ ಇಂಡಿಯಾ ಮೈತ್ರಿಕೂಟದ ಪ್ರಮುಖ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ್ ಯಾದವ್, ಟಿ.ಆರ್.ಬಾಲು ಸೇರಿದಂತೆ ಹಲವರ ಜೊತೆ ನಡೆಸಿದ ಮಾತುಕತೆ ವಿಫಲವಾಯಿತು.

ಸ್ಪೀಕರ್ ಅಭ್ಯರ್ಥಿಗೆ ನಾವು ಬೆಂಬಲ ನೀಡುತ್ತೇವೆ. ಅದೇ ರೀತಿ ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ನಮಗೆ ಬಿಟ್ಟುಕೊಡಿ ಎಂದು ಇಂಡಿಯಾ ಮೈತ್ರಿಕೂಟವು ಬೇಡಿಕೆ ಇಟ್ಟಿತು. ಸರ್ಕಾರದ ಪ್ರತಿಯೊಂದು ನೀತಿ ನಿಯಮಗಳು, ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ಹುದ್ದೆಯನ್ನು ಬಿಟ್ಟುಕೊಡಲು ಸುತಾರಾಂ ಒಪ್ಪಲಿಲ್ಲ.

ಇದರಿಂದ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜುಜು ನಡೆಸಿದ ಸಂಧಾನ ವಿಫಲವಾಯಿತು. ಯಾವಾಗ ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ಬಿಟ್ಟುಕೊಡಲು ಎನ್ಡಿಎ ನಿರಾಕರಿಸಿತು.ಕಾಂಗ್ರೆಸ್ ನಾಯಕ ರಾಹುಲ್ಗಾಂಧಿಯವರ ಸೂಚನೆಯಂತೆ ಕೆ.ಸುರೇಶ್ ಅವರನ್ನು ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಲು ಸೂಚನೆ ನೀಡಲಾಯಿತು.

ಈವರೆಗೂ ಜರುಗಿರುವ 17 ಲೋಕಸಭಾ ಚುನಾವಣೆ ಇತಿಹಾಸದಲ್ಲೇ ಸ್ಪೀಕರ್ ಹುದ್ದಗೆ ಚುನಾವಣೆ ನಡೆದಿರುವ ನಿದರ್ಶನಗಳಿಲ್ಲ. ಸಾಮಾನ್ಯವಾಗಿ ಈ ಹುದ್ದೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಆಡಳಿತ ಪಕ್ಷಕ್ಕೆ ಬೆಂಬಲ ಸೂಚಿಸುವುದು ಈವರೆಗೂ ನಡೆದುಕೊಂಡು ಬಂದ ಸಂಪ್ರದಾಯವಾಗಿತ್ತು. ಆದರೆ ಆಡಳಿತ ಪಕ್ಷವು ಯಾವುದರಲ್ಲೂ ಮೇಲುಗೈ ಸಾಧಿಸಬಾರದು ಎಂದು ಹಠಕ್ಕೆ ಬಿದ್ದಿರುವ ಎನ್ಡಿಎ ಬಲಾಬಲ ಪರೀಕ್ಷೆಗೆ ಮುಂದಾಗಿದೆ.

RELATED ARTICLES

Latest News