ಆರ್ಲಿಂಗ್ಟನ್ (ಅಮೆರಿಕ ), ಜ.30- ವಾಷಿಂಗ್ಟನ್ ಬಳಿಯ ರೊನಾಲ್ಡ್ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ 60 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದ ಜೆಟ್‌ವಿಮಾನಕ್ಕೆ ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದ್ದು ಹಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ತುರ್ತು ಪಡೆ ಹಾಗು ರಕ್ಷಣಾ ಸಿಬ್ಬಂದಿ ಪೊಟೊಮ್ಯಾಕ್ ನದಿಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದು,ಸಾವುನೋವುಗಳು ಅಥವಾ ಘರ್ಷಣೆಯ ಕಾರಣದ ಬಗ್ಗೆ ತಕ್ಷಣದ ಮಾಹಿತಿ ಲಭ್ಯವಾಗಲಿಲ್ಲ, ಘಟನೆ ನಂತರ ವಾಷಿಂಗ್ಟನ್ ಬಳಿಯ ವಿಮಾನ ನಿಲ್ದಾಣದಿಂದ ಎಲ್ಲಾ ವಿಮಾನಗಳ ಟೇಕ್‌ಆಫ್ ಮತ್ತು ಲ್ಯಾಂಡಿಂಗ್‌ಗಳನ್ನು ನಿಲ್ಲಿಸಲಾಗಿದ್ದು ಪ್ರದೇಶದಾದ್ಯಂತ ಬದುಕುಳಿದವರಿಗಾಗಿ ಹುಡುಕಾಟ ನಡೆದಿದೆ.
ವಿಮಾನ ನಿಲ್ದಾಣದ ಉತ್ತರದಲ್ಲಿರುವ ಜಾರ್ಜ್ ವಾಷಿಂಗ್ಟನ್ ಪಾರ್ಕ್‌ವೇ ಉದ್ದಕ್ಕೂ ಪೊಟೊಮ್ಯಾಕ್ ನದಿಯಲ್ಲಿ ರಕ್ಷಣಾ ದೋಣಿಗಳು ಬಿರುಸಿನ ಕಾರ್ಯಾಚರಣೆ ಕೈಗೊಂಡಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಭೀಕರ ಅಪಘಾತದ ಬಗ್ಗೆ ಆಘಾತ ವ್ಯಕ್ತಪಡಿಸಿ ದೇವರು ಅಗಲಿದವರ ಆತ್ಮಗಳನ್ನು ಆಶೀರ್ವದಿಸಲಿ ಎಂದು ಹೇಳಿದ್ದಾರೆ.ಫೆಡರಲ್ ಏವಿಯೇಷನ್ ಅಡಿನಿಸ್ಟ್ರೇಷನ್ ವಿಮಾನ ರಾತ್ರಿ 9 ಗಂಟೆಯ ಸುಮಾರಿಗೆ ಕನ್ಸಾಸ್‌ನ ವಿಚಿಟಾದಿಂದ ಹೊರಟು ರೊನಾಲ್ಡ್ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಸಮೀಪಿಸುತ್ತಿದ್ದಾಗ ಅಮೆರಿಕ ಸೇನೆಯ ಬ್ಲ್ಯಾಕ್‌ಹಾಕ್ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದೆ.
ವಿಶ್ವದ ಅತ್ಯಂತ ಬಿಗಿಯಾಗಿ ನಿಯಂತ್ರಿಸಲ್ಪಟ್ಟ ಮತ್ತು ಮೇಲ್ವಿಚಾರಣೆ ಮಾಡಲಾದ ವಾಯುಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ, ಇದು ಶ್ವೇತಭವನದಿಂದ ದಕ್ಷಿಣಕ್ಕೆ ಕೇವಲ ಮೂರು ಮೈಲಿ ದೂರದಲ್ಲಿದೆ.ಅಮೆರಿಕನ್ ಏರ್‌ಲೈನ್ಸ್ ವಿಮಾನ 5342 ಸುಮಾರು 400 ಅಡಿ ಎತ್ತರದಲ್ಲಿ ಮತ್ತು ಗಂಟೆಗೆ ಸುಮಾರು 140 ಮೈಲುಗಳ ವೇಗದಲ್ಲಿಬರುತ್ತಿತ್ತು, ಅದರ ರೇಡಿಯೋ
ಟ್ರಾನ್‌್ಸಪಾಂಡರ್‌ನ ಮಾಹಿತಿಯ ಪ್ರಕಾರ, ಅದು ಪೊಟೊಮ್ಯಾಕ್ ನದಿಯ ಮೇಲೆ ಅಘಾತಗೊಂಡಿದೆ.
ಕೆನಡಾದ ನಿರ್ಮಿತ ಬೊಂಬಾರ್ಡಿಯರ್ -701 ಅವಳಿ-ಎಂಜಿನ್ ಜೆಟ್ ಅನ್ನು 2004 ರಲ್ಲಿ ತಯಾರಿಸಲಾಯಿತು ಮತ್ತು 70 ಜನ ಪ್ರಯಾಣಿಸಬಹುದಾಗಿದೆ.ಇಳಿಯುವ ಕೆಲವು ನಿಮಿಷಗಳ ಮೊದಲು ಅನುಮತಿ ಪಡೆದು ರನ್‌ವೇ 33ರಲ್ಲಿ ಇಳಿಯುತ್ತಿತ್ತು. ಅಪಘಾತಕ್ಕೆ 30 ಸೆಕೆಂಡುಗಳಿಗಿಂತ ಕಡಿಮೆ ಸಮಯ ಮೊದಲು, ವಾಯು ಸಂಚಾರ ನಿಯಂತ್ರಕರು ಹೆಲಿಕಾಪ್ಟರ್ ಕಾಣುತ್ತಿದೆಯೇ ಎಂದು ಕೇಳುತ್ತಾರೆ.ಆದರೆ ಕೆಲವೇ ಸೆಕೆಂಡ್ ನಲ್ಲಿ ಎರಡು ಡಿಕ್ಕಿ ಹೊಡೆದವು.
ವಿಮಾನದ ರೇಡಿಯೋ ಟ್ರಾನ್ಸ್ ಪಾಂಡರ್ ರನ್‌ವೇಯಿಂದ ಸುಮಾರು 2,400 ಅಡಿ ದೂರದಲ್ಲಿ, ಸರಿಸುಮಾರು ನದಿಯ ಮಧ್ಯಭಾಗದಲ್ಲಿ ಪ್ರಸಾರ ಮಾಡುವುದನ್ನು ನಿಲ್ಲಿಸಿತು. ತಕ್ಷಣವೇ ರೇಗನ್‌ನಿಂದ ಇತರ ವಿಮಾನಗಳನ್ನು ಬೇರೆಡೆಗೆ ತಿರುಗಿಸಲು ಪ್ರಾರಂಭಿಸಿತು.