Thursday, April 3, 2025
Homeರಾಷ್ಟ್ರೀಯ | Nationalಬಿಹಾರ ಸಿಎಂ ನಿವಾಸ ಸ್ಫೋಟಿಸುವುದಾಗಿ ಬೆದರಿಕೆ

ಬಿಹಾರ ಸಿಎಂ ನಿವಾಸ ಸ್ಫೋಟಿಸುವುದಾಗಿ ಬೆದರಿಕೆ

ಪಾಟ್ನಾ,ಆ.4- ನಾನು ಆಲ್‌ಖೈದಾ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದೇನೆ ಅದಷ್ಟು ಬೇಗ ಬಿಹಾರ ಮುಖ್ಯಮಂತ್ರಿ ಅವರ ಕಚೇರಿಯನ್ನುಬಾಂಬ್‌ ಇಟ್ಟು ಉಡಾಯಿಸುತ್ತೇನೆ ಎಂದು ವ್ಯಕ್ತಿಯೊಬ್ಬ ಇ ಮೇಲ್‌ ಬೆದರಿಕೆ ಹಾಕಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪಾಟ್ನಾದಲ್ಲಿರುವ ಮುಖ್ಯಮಂತ್ರಿ ಕಚೇರಿ (ಸಿಎಂಒ) ಸ್ಫೋಟಿಸುವುದಾಗಿ ಇಮೇಲ್‌ ಬೆದರಿಕೆ ಹಾಕಿದ್ದಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಚಿವಾಲಯ ಪೊಲೀಸ್‌‍ ಠಾಣೆಯ ಎಸ್‌‍ಎಚ್‌ಒ ಸಂಜೀವ್‌ ಕುಮಾರ್‌ ಅವರ ಹೇಳಿಕೆಯ ಆಧಾರದ ಮೇಲೆ ದಾಖಲಿಸಲಾದ ಎಫ್‌ಐಆರ್‌ ಪ್ರಕಾರ, ಜುಲೈ 16 ರಂದು ಸಿಎಂಒಗೆ ಇಮೇಲ್‌ ಕಳುಹಿಸಲಾಗಿದೆ.

ಇಮೇಲ್‌ ಕಳುಹಿಸಿದವನು ತಾನು ಅಲ್‌‍-ಖೈದಾದೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿದ್ದಾನೆ ಮತ್ತು ಸಿಎಂಒ ಆವರಣದ ಮೇಲೆ ಬಾಂಬ್‌ ಹಾಕುವುದಾಗಿ ಬೆದರಿಕೆ ಹಾಕಿದ್ದನು ಎನ್ನಲಾಗಿದೆ.

ಇದು ಹಳೆಯ ಪ್ರಕರಣ… ವಿಚಾರಣೆಯ ನಂತರ ನಾವು ಈಗ ಎಫ್‌ಐಆರ್‌ ದಾಖಲಿಸಿದ್ದೇವೆ ಎಂದು ಪಾಟ್ನಾ ಹಿರಿಯ ಪೊಲೀಸ್‌‍ ವರಿಷ್ಠಾಧಿಕಾರಿ ರಾಜೀವ್‌ ಮಿಶ್ರಾ ಪಿಟಿಐಗೆ ತಿಳಿಸಿದ್ದಾರೆ.

ಬಿಹಾರ ಪೊಲೀಸ್‌‍ನ ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ (ಎಸ್‌‍ಸಿಆರ್‌ಬಿ) ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಎಫ್‌ಐಆರ್‌ ಪ್ರಕಾರ, ಭಾರತೀಯ ನ್ಯಾಯ ಸಂಹಿತಾ ಮತ್ತು ಐಟಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Latest News