ಧರ್ಮಶಾಲಾ, ಅ.18- ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ 2023ನೇ ಸಾಲಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೆಲವು ಅಚ್ಚರಿ ಸಂಗತಿಗಳಿಗೆ ಸಾಕ್ಷಿಯಾಗಿದ್ದು, ನೆದರ್‍ಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 38 ರನ್ ಗಳ ಸೋಲು ಕಂಡಿದೆ. ತೆಂಬಾ ಬವೂಮ ತಂಡದ ಸೋಲಿ ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನೆದರ್‍ಲ್ಯಾಂಡ್‍ನ ವೇಗಿ ಪಾಲ್ ವ್ಯಾನ್ ಮೀಕೆರೆನ್(2 ವಿಕೆಟ್) ಅವರು ತಮ್ಮ ಈ ಪ್ರದರ್ಶನದಿಂದಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
ನಾನು ಕ್ರಿಕೆಟ್ ಜೀವನ ಆರಂಭಿಸುವುದಕ್ಕೂ ಮುನ್ನ ಸಾಕಷ್ಟು ಕಷ್ಟದ ಜೀವನವನ್ನು ಅನುಭವಿಸಿದ್ದೆ. ಸರಿಯಾದ ಮನೆಯ ವ್ಯವಸ್ಥೆಯೂ ಇಲ್ಲದೆ ಚಳಿಗಾಲದಲ್ಲಿ ಸಾಕಷ್ಟು ಚಳಿಗೆ ಪತರಗುಟ್ಟಿದ ದಿನಗಳು ಈಗಲೂ ನನ್ನ ಕಣ್ಣ ಮುಂದೆಯೇ ಇದೆ. ಆದರೆ ಇಂದು ನನ್ನನ್ನು ಇಡೀ ವಿಶ್ವವೇ ಗುರುತಿಸುವಂತಾಗಿದೆ ಎಂದು ಪಾಲ್ ವ್ಯಾನ್ ಮೀಕೆರೆನ್ ಅವರು ಹೇಳಿದ್ದಾರೆ.
ಸಿಬಿಐ ತನಿಖೆ ಅಗತ್ಯತೆ ಕುರಿತು ಐಟಿ ಅಧಿಕಾರಿಗಳೇ ನಿರ್ಧರಿಸುತ್ತಾರೆ : ಪರಮೇಶ್ವರ್
2020ರ ಟಿ 20 ವಿಶ್ವಕಪ್ ಟೂರ್ನಿಯು ಆಸ್ಟ್ರೇಲಿಯಾದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಸಂಕ್ರಾಮಿಕ ಕೋವಿಡ್-19 ಕ್ರಿಕೆಟ್ ಪಂದ್ಯಾವಳಿಯನ್ನು ಎರಡು ವರ್ಷಗಳ ಕಾಲ ಮುಂದೂಡಿತು. ಆ ಸಂದರ್ಭದಲ್ಲಿ ಮೀಕೆರೆನ್ ಅವರು ಆಸ್ಟ್ರೇಲಿಯಾ ನೆಲದಲ್ಲಿ ನಡೆಯುವ ಟಿ20 ವಿಶ್ವಕಪ್‍ನಿಂದ ಆರ್ಥಿಕ ಸಮಸ್ಯೆ ನೀಗಿಸಿಕೊಳ್ಳಲು ಬಯಸಿದ್ದೆ. ಆದರೆ ಜೀವನಕ್ಕಾಗಿ ಉಬರ್ ಈಟ್ಸ್‍ನಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಬೇಕಾಗಿತ್ತು ಎಂದು ಹೇಳಿದ್ದಾರೆ.
ಆಗ ನನ್ನ ಕ್ರಿಕೆಟ್ ಜೀವನ ಮುಗಿದೇ ಹೋಯಿತು ಎಂದು ಅಂದುಕೊಂಡಿದ್ದೆ ಆದರೆ ನನ್ನ ನಡೆದ ಬೆಳವಣಿಗೆಯಿಂದ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದೇನೆ ಎಂದು ಹೇಳಿದ್ದಾರೆ. 2020ರ ನವೆಂಬರ್ 15ರಂದು ಟ್ವಿಟ್ಟರ್‍ನಲ್ಲಿ ಪಾಲ್ ವ್ಯಾನ್ ಮೀಕೆರೆನ್ `ಇಂದು ಕ್ರಿಕೆಟ್ ವಿಶ್ವಕಪ್ ಆಡಬೇಕಿತ್ತು. ಈಗ ನಾನು ಚಳಿಗಾಲದ ತಿಂಗಳುಗಳನ್ನು ಕಳೆಯಲು ಉಬರ್ ಈಟ್ಸ್ ಅನ್ನು ವಿತರಿಸುತ್ತಿದ್ದೇನೆ.
ಜೀವನದ ತಮಾಷೆಯ ವಿಷಯಗಳು ಹೇಗೆ ಬದಲಾಗುತ್ತವೆ, ಜನರನ್ನು ನಗಿಸುತ್ತಲೇ ಇರುತ್ತವೆ’ ಎಂದು ಪಾಲ್ ವ್ಯಾನ್ ಮೀಕೆರೆನ್ ಅಂದಿನ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಶೆಟ್ಟರ್ – ಸಾಹುಕಾರ್ ಭೇಟಿ ಬಗ್ಗೆ ಡಿಕೆಶಿ ಹೇಳಿದ್ದೇನು..?
ಧರ್ಮಶಾಲಾದ ಎಂಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 9 ಓವರ್‍ಗಳಲ್ಲಿ 40 ರನ್ ನೀಡಿ ಅಪಾಯಕಾರಿ ಬ್ಯಾಟ್ಸ್‍ಮನ್‍ಗಳಾದ ಐಡಿನ್ ಮಾಕ್ರ್ರಮ್ ಹಾಗೂ ಮಾರ್ಕೊ ಜೆಸೆನ್ ಅವರ ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾದ 38 ರನ್‍ಗಳ ಸೋಲಿಗೆ ಕಾರಣರಾಗಿದ್ದರು. ನೆದರ್‍ಲ್ಯಾಂಡ್ಸ್ ತನ್ನ ಮುಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡದ ಸವಾಲನ್ನು ಎದುರಿಸಲಿದೆ.