Sunday, June 30, 2024
Homeರಾಜ್ಯBREAKING : ಪವಿತ್ರಗೌಡ ಜೈಲುಪಾಲು, ದರ್ಶನ್ ಪೊಲೀಸ್ ಕಸ್ಟಡಿಗೆ

BREAKING : ಪವಿತ್ರಗೌಡ ಜೈಲುಪಾಲು, ದರ್ಶನ್ ಪೊಲೀಸ್ ಕಸ್ಟಡಿಗೆ

ಬೆಂಗಳೂರು,ಜೂ.20 -ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣಕ್ಕೆ ಸಂಭಂದಿಸಿದಂತೆ ಆರೋಪಿಗಳಾದ ಎ.1 ಪವಿತ್ರಗೌಡ,ಎ.3 ಪವನ್‌,ಎ.4 ರಾಘವೇಂದ್ರ ಎ.5 ನಂದೀಶ್‌,ಎ.6.ಜಗದೀಶ್‌,ಎ.7 ಅನುಕುಮಾರ್‌ ಹಾಗು ಎ.8 ರವಿ ಶಂಕರ್‌, ನಾಗರಾಜ್‌ ಹಾಗು ಲಕ್ಷ್ಮಣ್‌ ಗೆ ನ್ಯಾಯಾಲಯ ನ್ಯಾಯಾಂಗ ಬಂಧನ ಆದೇಶಿಸಿದರು.

10 ದಿನದ ಪೊಲೀಸ್‌‍ ಕಸ್ಟಡಿ ಅವದಿ ಮುಗಿದ ಹಿನ್ನಲೆಯಲಿ ಪ್ರಕರಣದ ವಿಚಾರಣೆಗಾಗಿ ಇಂದು ಸಂಜೆ 24 ನೇ ಎಸಿಎಂಎಂ ನ್ಯಾಯಾಲಯಕ್ಕೆ ಕರೆ ತಂದ ವಿಜಯನಗರ ಉಪವಿಭಾಗದ ಪೊಲೀಸರು ದರ್ಶನ್‌ ಸೇರಿದಂತೆ 13 ಆರೋಪಿಗಳನ್ನು ನ್ಯಾಯಾದೀಶರ ಮುಂದೆ ಹಾಜರುಪಡಿಸಿದರು.

ಪೊಲೀಸರ ಪರವಾಗಿ ಸರ್ಕಾರಿ ವಿಶೇಷ ಅಭಿಯೋಜಕರು ಇನ್ನು ಸಾಕ್ಷ್ಯಗಳನ್ನು ಸಂಗ್ರಹಿಸಬೇಕಾಗಿದೆ.ಹೆಚ್ಚಿನ ವಿಚಾರಣೆ ಅಗತ್ಯವಿದೆ ಅದಕ್ಕಾಗಿ ಆರೋಪಿಗಳನ್ನು ಪೊಲೀಸರ ಕಸ್ಟಡಿಗೆ ವಹಿಸಬೇಕೆಂದು ವಾದ ಮಂಡಿಸಿದರು.ಇದಕ್ಕೆ ದರ್ಶನ್‌ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

ವಾದ ಆಲಿಸಿದ ನ್ಯಾಯಾದೀಶರು ಪವಿತ್ರಗೌಡ ಸೇರಿ 7ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು ಮೂಲಕ ಇವರೆಲ್ಲ ಪರಪ್ಪನ ಅಗ್ರಹಾರ ಜೈಲು ಸೇರಿದಂತಾಗಿದೆ. ಆರೋಪಿಗಳಾದ ನಟ ದರ್ಶನ್‌,ವಿನಯ್‌ ,ಧನರಾಜ್‌,ಪ್ರದೋಶ್‌,ಅವರನ್ನು ಮತ್ತೆ ಎರಡು ದಿನ ಪೊಲೀಸ್‌‍ ಕಸ್ಟಡಿ ನೀಡಲಾಗಿದೆ.

RELATED ARTICLES

Latest News