ಬೆಂಗಳೂರು, ಮೇ 3- ಜಗತ್ತು ಎಷ್ಟೇ ಬದಲಾದರೂ ದುಡ್ಡು ಕೊಟ್ಟು ತಮ ಸಮಾವೇಶ ಹಾಗೂ ಪ್ರತಿಭಟನೆಗೆ ಜನರನ್ನು ಸೇರಿಸುವುದು ಭ್ರಷ್ಟ ಹಾಗೂ ಭಂಡ ರಾಜ್ಯ ಕಾಂಗ್ರೆಸ್‌ಗೆ ಮಾತ್ರ ತಪ್ಪಿಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಹುಬ್ಬಳ್ಳಿಯಲ್ಲಿ ನಿನ್ನೆ ನಡೆದ ಕಾಂಗ್ರೆಸ್‌ನ ಬೆಲೆ ಏರಿಕೆ ವಿರುದ್ಧದ ಪ್ರತಿಭಟನಾ ಸಮಾವೇಶಕ್ಕೆ ಮಹಿಳೆಯರನ್ನು ಕರೆತರಲು ಅತಿ ಹೆಚ್ಚು ಬೆಲೆ ತೆತ್ತಿರುವುದು ಕಣ್ಣಿಗೆ ರಾಚುತ್ತಿದೆ ಎಂದು ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಹೇಳಿದೆ.
ಗೃಹಲಕ್ಷ್ಮೀ ಹಾಗೂ ಶಕ್ತಿ ಗ್ಯಾರಂಟಿಗಳು ಮಹಿಳೆಯರನ್ನು ತಲುಪಿವೆ ಎಂದು ಬೊಗಳೆ ಬಿಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ಗ್ಯಾರಂಟಿಗಳು ತಲುಪಿವೆ ಎಂದ ಮೇಲೆ ಮಹಿಳೆಯರನ್ನು ದುಡ್ಡು ಕೊಟ್ಟು ಕರೆತರುವ ಪರಿಸ್ಥಿತಿ ಏಕೆ ಉದ್ಭವವಾಗಿದೆ? ಎಂದು ಬಿಜೆಪಿ ಪ್ರಶ್ನಿಸಿದೆ.