ಬೆಂಗಳೂರು, ಮೇ 13. ಇ-ಖಾತಾ ವಿತರಿಸಲು ಲಂಚ ಕೇಳಿದ್ದ ಮಧುಗಿರಿ ತಾಲೂಕಿನ ಕೊಡ್ಲಾಪುರ ಗ್ರಾಮ ಪಂಚಾಯಿತಿಯ ಪಿಡಿಒ ಮತ್ತು ಬಿಲ್ ಕಲೆಕ್ಟರ್ ಲೋಕಾಯುಕ್ತ ಬೆಲೆಗೆ ಬಿದ್ದಿದ್ದಾರೆ. ಇಂದು ಮಧ್ಯಾಹ್ನ ನಡೆದ ಲೋಕಾಯುಕ್ತ ಕಾರ್ಯಾಚರಣೆಯಲ್ಲಿ ಈ ಇಬ್ಬರು ಅಧಿಕಾರಿಗಳು ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಅವರನ್ನು ಬಂಧಿಸಲಾಗಿದೆ.
ಪಿಡಿಓ ಪುಂಡಪ್ಪ ಹಾಗೂ ಬಿಲ್ ಕಲೆಕ್ಟರ್ ಹನುಮಂತ ರಾಯಪ್ಪ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ. ಮಧುಗಿರಿ ತಾಲೂಕಿನ ವೀರ ನಾಗೇನಹಳ್ಳಿಯ ನಿವಾಸಿಗೊಬ್ಬರು ತಮ್ಮ ಮನೆಯ ಈ ಕಾತ ಮಾಡಿಸಲು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದಾಗ ಇಬ್ಬರು ಅಧಿಕಾರಿಗಳು 6,500 ಲಂಚ ಕೇಳಿದ್ದರು.
ಈ ಬಗ್ಗೆ ದೂರುದಾರರು ಲೋಕಾಯುಕ್ತಕ್ಕೆ ಮಾಹಿತಿ ನೀಡಿದ್ದರು. ಮಧ್ಯಾಹ್ನ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಇಬ್ಬರು ಅಧಿಕಾರಿಗಳು ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ