ನವದೆಹಲಿ,ಡಿ.4- ನಿನ್ನೆಯ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಜನರು ನಕಾರಾತ್ಮಕತೆಯನ್ನು ತಿರಸ್ಕರಿಸಿದ್ದಾರೆ ಎಂದು ತೋರಿಸುತ್ತಿದೆ ಎಂದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಸಂಸತ್ತಿನ ಒಳಗೆ ಸೋಲಿನ ಹತಾಶೆಯನ್ನು ಹೊರಹಾಕಬೇಡಿ ಎಂದು ಪ್ರತಿಪಕ್ಷಗಳನ್ನು ಒತ್ತಾಯಿಸಿದರು.
ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದ ಅವರು, ಸಂಸದರು ಪೂರ್ವಸಿದ್ಧತೆಯೊಂದಿಗೆ ಸಂಸತ್ತಿಗೆ ಬರಬೇಕೆಂದು ನಾನು ವಿನಂತಿಸುತ್ತೇನೆ. ಚುನಾವಣಾ ಫಲಿತಾಂಶಗಳ ಹಿನ್ನೆಲೆಯಲ್ಲಿ, ನಾನು ಪ್ರತಿಪಕ್ಷಗಳಿಗೆ ಇದೊಂದು ಸುವರ್ಣಾವಕಾಶ ಎಂದು ಹೇಳುತ್ತೇನೆ, ಅವರು ಒಂಬತ್ತು ವರ್ಷಗಳಿಂದ ಹೊತ್ತಿರುವ ನಕಾರಾತ್ಮಕತೆಯನ್ನು ತೊಡೆದುಹಾಕಬೇಕು ಮತ್ತು ಸಕಾರಾತ್ಮಕತೆಯಿಂದ ಮುಂದುವರಿಯಬೇಕು. ದಯವಿಟ್ಟು ಸಂಸತ್ತಿನಲ್ಲಿ ಸೋಲಿನ ಹತಾಶೆಯನ್ನು ಹೊರಹಾಕಬೇಡಿ ಎಂದು ಮನವಿ ಮಾಡಿಕೊಂಡರು.
ಮೂರು ರಾಜ್ಯಗಳ ಗೆಲುವಿಗೆ ನಡ್ಡಾ ಪರಿಶ್ರಮ ಕಾರಣ : ಮೋದಿ
ಇದಕ್ಕಾಗಿ ಪ್ರತಿಪಕ್ಷಗಳು ಪ್ರತಿಭಟನೆ ಮಾಡಬೇಡಿ ಎಂದು ಒತ್ತಾಯಿಸಿದ ಅವರು, ಇದು ನಿಮ್ಮ ಲಾಭಕ್ಕಾಗಿ, ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳು ಮಹತ್ವದ ಪಾತ್ರವನ್ನು ಹೊಂದಿವೆ, ದಯವಿಟ್ಟು ಇದನ್ನು ಅರ್ಥಮಾಡಿಕೊಳ್ಳಿ, ದೇಶವು ಅಭಿವೃದ್ಧಿಯ ಹಾದಿಯಲ್ಲಿ ನಿಲ್ಲಲು ಸಹಕರಿಸಿ ಎಂದು ಪ್ರಧಾನಿ ಹೇಳಿದರು.